ದಿನದ ಸುದ್ದಿ
ಯಾರು ಈ ಬಿ ಎಂ ಬಶೀರ್ ? ಏನಿದು ವಾರ್ತಾಭಾರತಿ ? ನಾಡು ನುಡಿಗೆ ಇವರ ಕೊಡುಗೆ ಏನು ?

- ರವಿರಾಜ್ ಗೌಡ
ಹಿರಿಯ ಪತ್ರಕರ್ತ ಬಿ ಎಂ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ ಬರೆದ ಎರಡೇ ಸಾಲಿನ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ. ಫೇಸ್ ಬುಕ್ ನಲ್ಲಿ ಯಾರು ಬಶೀರಾ ? ಬಶೀರನ ಸಾಧನೆಗಳು ಏನು ? ನಾವು ಮಾಡಿದ್ದಷ್ಟು ಹೋರಾಟಗಳನ್ನು ಬಶೀರ ಮಾಡಿದ್ದಾನಾ ? ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.
ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಜನಿಸಿದ ಬಿ ಎಂ ಬಶೀರರು ಪತ್ರಿಕೋದ್ಯಮ ಚಳುವಳಿ ಕಾರಣಕ್ಕಾಗಿಯೇ ಸಹೋದರ ಬಿ ಎಂ ರಶೀದರನ್ನು ಕಳೆದುಕೊಂಡರು. ಲಂಕೇಶ್ ನಲ್ಲಿ ಕೆಲಸ ಮಾಡುತ್ತಿದ್ದ ಬಿ ಎಂ ರಶೀದರ ಅನುಮಾಸ್ಪದ ಸಾವು ಬಿ ಎಂ ಬಶೀರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿಲ್ಲ. ಅಷ್ಟೊಂದು ಸೈದ್ದಾಂತಿಕ ಬದ್ದತೆ, ದೈರ್ಯವಂತಿಕೆ ಬಿ ಎಂ ಬಶೀರ್ ಗೆ ಇತ್ತು. ಪತ್ರಿಕೋಧ್ಯಮದಲ್ಲಿ ಜನಪರ ಚಳುವಳಿಗಳ ಜೊತೆ ನಿಂತ ಬಿ ಎಂ ಬಶೀರರು ನಾಡಿನ ಚಳುವಳಿಗಳ ಪ್ರಮುಖ ಭಾಗವೇ ಆಗಿದ್ದರು.
ಮುಂಬಯಿನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ 5 ವರ್ಷಗಳ ಕಾಲ ದುಡಿದ ನಂತರ ಜನವಾಹಿನಿ ಪತ್ರಿಕೆಯಲ್ಲಿ ಹಿರಿಯ ಸಂಪಾದಕರಾಗಿ 5 ವರ್ಷ ಕೆಲಸ ಮಾಡಿದ್ದಾರೆ. ಪ್ರಸ್ತುತ “ವಾರ್ತಾ ಭಾರತಿ” ಕನ್ನಡ ದೈನಿಕದಲ್ಲಿ ಸುದ್ದಿ ಸಂಪಾದಕನಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್, ವಾಟ್ಸಪ್ ಗಳಂತಹ ಸಾಮಾಜಿಕ ಜಾಲತಾಣ ಇಲ್ಲದೇ ಇದ್ದ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆ ಕನ್ನಡಿಗರು, ರೈತರ ಜೊತೆ ಗಟ್ಟಿಯಾಗಿ ನಿಂತಿತ್ತು.
ವಿಶೇಷ ಅರ್ಥಿಕ ವಲಯಕ್ಕೆ ಒಎನ್ ಜಿಸಿ ಕಂಪನಿಯು 3000 ಎಕರೆ ರೈತರ ಭೂಮಿ ಸ್ವಾಧೀನ ಮಾಡಿದಾಗ ರೈತರ ಜೊತೆ ನಿಂತ ಮೂರು ಪತ್ರಿಕೆಗಳಲ್ಲಿ ವಾರ್ತಾಭಾರತಿಯೂ ಒಂದು. ಅದಕ್ಕಾಗಿ ಅದು ನಷ್ಟ ಮಾಡಿಕೊಂಡಿದ್ದು ಕೋಟಿ ಕೋಟಿ ರೂಪಾಯಿಗಳ ಜಾಹೀರಾತು. ಎಲ್ಲಾ ಪತ್ರಿಕೆಗಳು ಮುಖಪುಟ ಜಾಹೀರಾತು ಹಾಕಿ ಕಂಪನಿ ಪರ ಇದ್ರೆ ವಾರ್ತಾಭಾರತಿ ಮಾತ್ರ ಅಭಿಯಾನದ ರೀತಿಯಲ್ಲಿ ರೈತರ ಪರ ನಿಂತಿತ್ತು.
ಕನ್ನಡ ಸಾಹಿತ್ಯ ಲೋಕಕ್ಕೆ ಬಿ ಎಂ ಬಶೀರರ ಕೊಡುಗೆಯೂ ಮಹತ್ವದ್ದು. ಕನ್ನಡದಲ್ಲಿ ಹನಿಗತೆ ಪ್ರಾಕಾರವನ್ನು ಸಮರ್ಥವಾಗಿ ಬಳಸುತ್ತಿರುವರಲ್ಲಿ ಬಶೀರರು ಪ್ರಮುಖರು. ಜೊತೆಗೆ ಉತ್ತಮ ಕವಿಯೂ ಹೌದು. ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ, ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದಿದ್ದ ಬಿ ಎಂ ಬಶೀರರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಪ್ರವಾದಿಯ ಕನಸು (ಕವನ ಸಂಕಲನ), ಬಾಳೆಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲಿ ಆಕಾಶ (ಹನಿಗತೆಗಳ ಸಂಕಲನ), ಬಾಡೂಟದ ಜೊತೆಗೆ ಗಾಂಧೀ ಜಯಂತಿ (ಲೇಖನಗಳ ಸಂಗ್ರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ-ಸೂಫಿ ಕಣ್ಣಲ್ಲಿ ಹನಿಗಳು(ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ(ಕವನ ಸಂಕಲನ) ಅವರ ಪ್ರಮುಖ ಪ್ರಕಟಿತ ಪುಸ್ತಕಗಳು. ಈ ರೀತಿಯ ಸಾಹಿತ್ಯ ಸೇವೆಗಾಗಿ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರು ಚದುರಂಗ ಪ್ರತಿಷ್ಥಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.
ಕರಾವಳಿಯ ಮುಸ್ಲಿಂ ಕೋಮುವಾದ ಮತ್ತು ಹಿಂದೂ ಕೋಮುವಾದವನ್ನು ಸಮಾನಾಗಿ ನೋಡುವ ಬಿ ಎಂ ಬಶೀರರು ಎರಡೂ ವರ್ಗಗಳಿಂದ ದಾಳಿಗೆ ಒಳಗಾದವರು. ಎರಡೂ ವಾದಿಗಳ ನೈತಿಕ ಪೊಲೀಸ್ ಗಿರಿ, ಹಿಡನ್ ಅಜೆಂಡಾಗಳನ್ನು ಪತ್ರಿಕೆಯ ಮೂಲಕ ಬಯಲುಗೊಳಿಸಿದವರು. ಎಲ್ಲಾ ಕನ್ನಡ ಪತ್ರಿಕೆಗಳು ಹಿಂದಿ ಗುಲಾಮಗಿರಿ, ಹಿಂದುತ್ವವಾದ, ಶ್ರೀಮಂತರ ಪರ ಇರೋ ಸಂಧರ್ಭದಲ್ಲಿ ಅದರ ಪ್ರವಾಹಕ್ಕೆ ಎದುರಾಗಿ ವಾರ್ತಾಭಾರತಿ ಹಾಗೋ ಹೀಗೋ ಈಜಾಡುತ್ತಾ ಜನರಿಗಾಗಿ ಹೋರಾಡುತ್ತಿದೆ. 25 ವರ್ಷದ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬದುಕಿನಲ್ಲಿ ಬಿ ಎಂ ಬಶೀರರು ಸಮಾಜಕ್ಕಾಗಿ ತನ್ನ ಕುಟುಂಬದವರನ್ನು, ಹಣವನ್ನು ಕಳೆದುಕೊಂಡರೇ ಹೊರತು ಬಂಗಲೆಗಳನ್ನು ಕಟ್ಟಲಿಲ್ಲ, ಆದಾಯದ ಮೂಲಕ್ಕಾಗಿ ಉದ್ಯಮಗಳನ್ನು ಸ್ಥಾಪಿಸಲಿಲ್ಲ. ಆದ್ದರಿಂದಲೇ ರಾಜಿರಹಿತ ಬದುಕು ಸಾದ್ಯವಾಯಿತು.
ಬಿ ಎಂ ಬಶೀರ್ ಮತ್ತು ಅವರ ಕುಟುಂಬದ ತ್ಯಾಗ, ಬಲಿದಾನದ ಇತಿಹಾಸ, ರಾಜಿರಹಿತ ಪತ್ರಿಕೋದ್ಯಮದ ಹಿನ್ನಲೆಯೇ ಒಂದು ದೊಡ್ಡ ಹೋರಾಟದ ಇತಿಹಾಸ. ಇಂತವರನ್ನು ಯಾವುದೋ ಆಶಯದ ಪ್ರತಿಕ್ರಿಯೆಯನ್ನು ತಿರುಚಿ ಗುರಿಯಾಗಿಸೋದು ಕನ್ನಡದ ಜನ ಚಳುವಳಿಗೆ ಮಾಡುವ ದ್ರೋಹವಲ್ಲದೆ ಇನ್ನೇನೂ ಅಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:2024ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.
ಶಾಸಕ ನಿವಾಸದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಶಾಸಕರು, ಇದೇ ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಇಸಿಒ ಗೋವಿಂದರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ

ಸುದ್ದಿದಿನ,ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಆಯೋಜಿಸಿದ್ದ ಹೋಳಿ ಹಬ್ಬದ ಅಂಗವಾಗಿ ವಿಭಾಗದ ಮುಂಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಲರ್ ಹಚ್ಚುವ ಮೂಲಕ ಹೋಳಿ ಸಂಭ್ರಮ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಬಿ ಶೈಲಶ್ರೀರವರು, ಸಂಶೋಧನಾ, ಸ್ನಾತಕೋತ್ತರ ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ4 days ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ4 days ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ6 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ5 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ4 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ4 days ago
ವಾಣಿಜ್ಯ ಮಳಿಗೆಗಳ ಹರಾಜು ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ4 days ago
ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ