Connect with us

ದಿನದ ಸುದ್ದಿ

ದಿವ್ಯ ಜ್ಯೋತಿ ಬಸವಣ್ಣ..!

Published

on

  • ನೇತ್ರಾವತಿ ಸಿ ಎಂ .ನೆಲ್ಲಿಕಟ್ಟೆ

ನಾ ಕಂಡಂತೆ ನನ್ನ ದೃಷ್ಠಿ ಕೋನದಲ್ಲಿ ಆಗಿನ 12 ನೇ ಶತಮಾನದಲ್ಲಿ ಆಲದ ಮರವಂತೆ ಆಳವಾಗಿ ಬೇರೂರಿದ್ದ ಜಾತಿಯನ್ನು ತೊಲಗಿಸಲು ಪ್ರಕಾಶಮಾನವಾಗಿ
ಬಂದವರು ಬಸವಣ್ಣ. ಅವರು ಮಾಡಿದ ಕಾಯಕಗಳು ಇಂದಿಗೂ ಜೀವಂತವಾಗಿವೆ.

ಬ – ಬಲವಾಗಿ
ಸ- ಸಮಾನತೆ
ವ- ವರ್ಣಾತೀತ
ಣ್ಣ- ನಾಯಕನಾಗಿ

ಹೆಸರಿನಲ್ಲಿ ಸೂಚಿಸಿದಂತೆ ನಿಜವಾದ ಜಾತಿ ನಿರ್ಮೂಲನ ನಾಯಕನಾಗಿ ಹೊರ ಹೊಮ್ಮಿದವರು ನಮ್ಮ ಬಸವಣ್ಣನವರು. ಜಾತಿ ಎನ್ನುವ ಪದ 12ನೇ ಶತಮಾನದಲ್ಲಿ ಮೈಗಂಟಿದ ಚರ್ಮದಂತಿತ್ತು,ಅಂತಹ ಕೆಟ್ಟ ಜಾತಿಯ ಚರ್ಮವನ್ನು ಹೊಡೆದೋಡಿಸಲು ಬಲವಾಗಿ ಎಲ್ಲಾರ ಸಮಾನತೆಗಾಗಿ, ವರ್ಣಾತೀತ ನಿರ್ಮೂಲನೆಗಾಗಿ ನಮ್ಮೆಲ್ಲರ ಗಟ್ಟಿ ನಾಯಕರಾಗಿ ಬಂದವರೆ ನಮ್ಮ ಬಸವಣ್ಣನವರು.

ಅಂದಿನ ಕಾಲದಲ್ಲಿ ಶಿಕ್ಷಣವು ಮೇಲು ವರ್ಗದವರಿಗೆ ಮಾತ್ರ ಮೀಸಲಾಗಿತ್ತು. ಅದಲ್ಲದೆ ಕೆಳ ಜಾತಿಯವರು ಕೇವಲ ಶಿಕ್ಷಣ ಮಾತ್ರವಲ್ಲದೆ ಆರ್ಥಿಕ, ಸಾಮಾಜಿಕ, ರಾಜಕೀಯ, ಸಮಾಜದ ಎಲ್ಲಾ ಸೌಲಭ್ಯಗಳಿಂದ ವಂಚಿತರಾದ ಸಮಾಜದ ಧ್ವನಿಯಾಗಿ
ಬಂದವರೆ ನಮ್ಮ ಬಸವಣ್ಣ.

” ಶರಣರ ಕೂಡ ಸರಸವ ಹಾಡುತ್ತ
ನಡೆದಾನೆ ಬಸವಣ್ಣ ,
ದಾಸೋಹ ಇಟ್ಟು ಊಟ ಮಾಡಿಸಿ
ಕೊಡುತ್ತಿದ್ದ ದಕ್ಷಿಣೆ ”

ಇಂತಹ ತತ್ವ ಪದಗಳ ಮೂಲಕ ದಲಿತರಿಗೆ.”ಕಾಯಕವೇ_ ಕೈಲಾಸ ” ಎಂಬ ತತ್ವದಡಿಯಲ್ಲಿ ಬೋಧಿಸಿ ಗುಡಿ ಗುಂಡಾರಗಳಿಗೆ ಹೋಗುವ ಬದಲು ತನ್ನ ಕಾಯಕದಲ್ಲಿ ನಿಷ್ಠೆಯ ಮೂಲಕ ಕೆಲಸ ಮಾಡಿದರೆ ಅದರಲ್ಲಿ ದೇವರ ಕಾಣಬೇಕು ಎಂದು ಬಸವಣ್ಣ ಹೇಳುವುದರ ಮೂಲಕ ನಿರಾಕಾರ ದೇವರುಗಳನ್ನು ಆರಾಧಿಸಿ ಆದರೆ ಅವನು ಸೃಷ್ಠಿಸಿದ ಸೃಷ್ಠಿಗಳನ್ನು ಆರಾಧಿಸಬೇಡಿ.

“ಎನ್ನ ಕಾಲೆ ಕಂಬ ಎನ್ನದೇಹವೇ ದೇಗುಲ
ಎನ್ನ ಶಿರವೇ ಹೊನ್ನ ಕಲಶವಯ್ಯ! ಕೂಡಲಸಂಗಮದೇವ.”

ಎಂಬ ವಚನಗಳ ಮೂಲಕ ಮೂರ್ತಿ ಪೂಜೆಯನ್ನು ಖಂಡಿಸುತ್ತಾರೆ.ತಾವು ಮಾಡುವ ಕೆಲಸದಲ್ಲಿ ದೇವನನ್ನು ಕಾಣಿರಿ ಎಂದು ಹೇಳುತ್ತ ಅಂತರ್ಜಾತೀಯ
ಮೇಲ್ಜಾತಿಯ ವಿವಾಹಕ್ಕೆ ಪ್ರೋತ್ಸಾಹಿಸುತ್ತಾ , ಅಂತಹ ಕಠಿಣ ಶಿಕ್ಷೆಗಳಿದ್ದರೂ ಎದೆಗುಂದದೆ ಧೈರ್ಯವಾಗಿ ಸಮರ್ಥವಾಗಿ ಜಾತಿಯನ್ನು ಖಂಡಿಸಿದ ಮಹಾನ್ ಚೇತನ ಭಕ್ತಿ ಭಂಡಾರಿ ಬಸವಣ್ಣವರು ಅನುಭವ ಮಂಟಪದ ಮೂಲಕ ಸರ್ವರಿಗೂ ತಮ್ಮ ವಚನಗಳ ಮೂಲಕ ಎಲ್ಲಾ ಶರಣರಲ್ಲಿಯು ಸಮಾನತೆ ಉರಿದುಂಬಿಸುವಂತೆ ತಮ್ಮ ವಚನಗಳ ಮೂಲಕ ಜಾತಿಯ ಕೊಳೆಯನ್ನು ತೊಲಗಿಸಲು ಶ್ರಮಿಸಿದರು.

ಇದನ್ನೂ ಓದಿ | ಕೊರೋನ ರೋಗವನ್ನೆದುರಿಸಲು ಆಹಾರ ನಿಯಂತ್ರಣ

ಮೇಲ್ಜಾತಿಯ ಮಹಿಳೆಯನ್ನು ಕೆಳ ಜಾತಿಯ ಪುರುಷನೊಂದಿಗೆ ವಿವಾಹ ಮಾಡುವುದರ ಮೂಲಕ ಜಾತಿ ಎಂಬ ವಿಷ ಬೀಜದ ಕಳಂಕಕ್ಕೆ ಅಂತರ್ಜಾತೀಯ ವಿವಾಹ ಮಾಡುವುದರ ಮೂಲಕ ನಾವೆಲ್ಲರೂ ಒಂದೇ ಸಮಾನತೆಯ ತತ್ವವನ್ನು ಎತ್ತಿ ಹಿಡಿದ ಮಹನೀಯ, ಎಳೆ ಎಳೆಯಾಗಿ ಬಸವಣ್ಣನವರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಬಸವಣ್ಣನವರ ವಚನಗಳಲ್ಲಿ ವಿಶ್ವ ಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೂ ಸೇರಿದೆ.

ಬಸವಣ್ಣನವರು ಪ್ರಜಾಪ್ರಭುತ್ವ,ಮೌಲ್ಯವನ್ನು ಎತ್ತಿ ಹಿಡಿದುಕೊಳ್ಳುವ ಮೂಲಕ ಬದುಕಿನುದ್ದಕ್ಕೂ ಸಮಾನತೆಯನ್ನು ಕಾಪಾಡಿಕೊಂಡಿದ್ದಾರೆ. ಜಾತಿ ಎಂಬ ಸಂಕೋಲೆಗಳಿಂದ ಬಿಡಿಸಿಕೊಳ್ಳಲು ಹಲವಾರು ವಚನಗಳ ಮೂಲಕ ನಾವೆಲ್ಲರೂ ಸಮಾನರು ಎಂದು ಹೇಳುತ್ತ ಬಂದಿದ್ದಾರೆ. ಇದನ್ನು ಪ್ರಸ್ತುತ ನಾವೆಲ್ಲರೂ ಪ್ರತಿಯೊಬ್ಬರು ಬಸವಣ್ಣನವರ ನಿಯಮಗಳಿಗೆ ಬದ್ಧರಾಗಿ ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending