ರಾಜಕೀಯ
ಹೆಚ್.ಬಿ. ಮಂಜಪ್ಪ ಮತ್ತು ಲೋಕಸಭಾ ಚುನಾವಣೆ
ಮಾನ್ಯರೆ,
2019 ರ ಲೋಕಸಭಾ ಚುನಾವಣೆ ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಡೆಯುವ ಈ ಚುನಾವಣೆ ಭಾರತದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ತರವಾದ ಚುನಾವಣೆ ಅನ್ನುವಂತದ್ದು.
ಈ ಚುನಾವಣೆಯಲ್ಲಿ ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರೆ,ಲಿಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವತ್ತು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು ಬೇರ ಬೇರೆ ಕ್ಷೇತ್ತಗಳಲ್ಲಿ ಲಿಂಗಾಯತರಿಗೆ,ನಾಯಕರಿಗೆ,
ದಲಿತರಿಗೆ ಬೇರೆ ಬೇರೆ ಸಮುದಾಯದವರಿಗೆ ಅವಕಾಶ ಸಿಕ್ಕಿರುವಂತದ್ದು ನಮಗೆಲ್ಲಾ ತಿಳಿದಿರುವಂತದ್ದು..
ಜಾತಿ ವ್ಯವಸ್ಥೆ ಅದೊಂದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ
- ಹೆಚ್ ಬಿ ಮಂಜಪ್ಟ ನಮ್ಮ ಪಕ್ಷದ ಅಭ್ಯರ್ಥಿಯೇನು ಕುರುಬರಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರೇನಲ್ಲ, ಜಾತಿ ವ್ಯವಸ್ಥೆ ಇದೆ ಅನಿವಾರ್ಯವಾಗಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ.
- ಹೆಚ್ ಬಿ ಮಂಜಪ್ಪ ಒಳ್ಳೆಯ ಮಾತುಗಾರ,ಪ್ರಗತಿ ಪರವಾಗಿ ಚಿಂತನೆ ಮಾಡುವಂತ ನಾಯಕ ದೇಶದ ರೈತರ ಉಳಿವಿಗಾಗಿ,ಅಭಿವೃದ್ಧಿಗಾಗಿ ಇಂತವರ ಆಯ್ಕೆ ಸೂಕ್ತವಾಗಿರುವಂತದ್ದು.ಬಿಜೆಪಿ ಅಭ್ಯರ್ಥಿ ಮಾನ್ಯ ಸಿದ್ದೇಶ್ ರವರ ಚಿಂತನೆ,ವೈಫಲ್ಯಗಳನ್ನ ನಾವು ಜನರಿಗೆ ತಿಳಿಸಬೇಕಾಗುತ್ತದೆ.
- ಬಿಜೆಪಿ ಹೇಳಿ ಕೇಳಿ ವೈದಿಕರ ಪಕ್ಷ, ಸಂವಿಧಾನವನ್ನ ನಾಶ ಮಾಡ್ಲಿಕ್ಕಾಗೀನೆ ಹುಟ್ಟಿದಂತ ಪಕ್ಷ, ಇವತ್ತು ಸಂವಿಧಾನದ ನಾಶ ಅಂದರೆ ಭಾರತದ ಪರಂಪರೆಯ ನಾಶ, ಭಾರತದ ಸಂಸ್ಕೃತಿಯ ನಾಶ,ಲಿಂಗಾಯತರೂ ಸೇರಿದಂತೆ ಎಲ್ಲಾ ಹಿಂದುಳಿದ ದಲಿತ ಅಲ್ಪಸಂಖ್ಯಾತರ ನಾಶ, ಭಾರತದ ದ್ರಾವಿಡ ಸಂಸ್ಕೃತಿಯ ನಾಶ ಅನ್ನುವಂತದ್ದು.
- ಬಿಜೆಪಿಯಲ್ಲಿ ಯಾವ ಲಿಂಗಾಯತರಿಗೂ ಗೌರವ ಇಲ್ಲ,ಕರ್ನಾಟಕದಲ್ಲಿ ಬಿಜೆಪಿಯ ಬಲ ಅಂದರೇ ಲಿಂಗಾಯತರು,ಆರು ಜನ ಸಂಸದರಿದ್ದರೂ ಕೂಡ ಒಬ್ಬರಿಗೂ ಮಂತ್ರಿ ಸ್ಥಾನ ಇಲ್ಲ, ಸ್ವತಃ ಮಾನ್ಯ ಸಿದ್ದೇಶ್ ರವರಿಗೇ ಮಂತ್ರಿ ಸ್ಥಾನ ಕೊಟ್ಟು ಸಡನ್ ಆಗಿ ಕಸಿದ್ಕೊಂಡಂತವರು ಕಾರಣ ಮಾನ್ಯ ಸಿದ್ದೇಶ್ ವೈದಿಕ ಅಲ್ಲ, ಒಬ್ಬ ಶೂದ್ರ ಆ ಕಾರಣಕ್ಕೆ ಅವರಿಗೆ ಬಿಜೆಪಿ ಅವಮಾನಿಸಿದ್ದು.
- ಸ್ವತಃ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೇ ಗೌರವ ಇಲ್ಲ, ಯಡಿಯೂರಪ್ಪ ಲಿಂಗಾಯತ ನಾಯಕನಾಗಿದ್ದಕ್ಕೇ ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಕೆಳಗಿಳಿಸಿದ್ದು,ಮತ್ತೆ ಮುಖ್ಯಮಂತ್ರಿಯಾಗದಂತೆ ತಂತ್ರಗಳನ್ನ ರೂಪಿಸಿದ್ದು. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಾರೆ ಅನ್ನಬಹುದು, ಅದಕ್ಕಿಂತ ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ ಇದ್ದಾರೆ ಅನ್ನುವಂತದ್ದು.
- ನಮಗೆ ಸಿದ್ದೇಶ್ ಅಭ್ಯರ್ಥಿ ಇರಬಹುದು, ನಮ್ಮ ಮತ ಸಿದ್ದೇಶ್ ವಿರುದ್ಧ ಅಲ್ಲ ಮಾನ್ಯ ನರೇಂದ್ರ ಮೋದಿಯ ವಿರುದ್ಧ,ಬಿಜೆಪಿಯ ವಿರುದ್ಧ ಸಂವಿಧಾನ ನಾಶ ಮಾಡುವವರ ವಿರುದ್ಧ,ಭಾರತೀಯರ ಸಾಂಸ್ಕೃತಿಕ ಬದುಕನ್ನ ನಾಶ ಮಾಡುವವರ ವಿರುದ್ಧ.
- ಸಿದ್ಧರಾಮಯ್ಯ ಕುರುಬ ಸಮುದಾಯದಲ್ಲಿ ಹುಟ್ಟಿದಂತವರು ಇವತ್ತು ಕೇವಲ ಕುರುಬರಿಗೆ ರೈತರ ಸಾಲ ಮನ್ನಾ ಮಾಡ್ಲಿಲ್ಲ,ಕೇವಲ ಕುರುಬರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡ್ಲಿಲ್ಲ,ಕೇವಲ ಕುರುಬರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೊಡ್ಲಿಲ್ಲ,ಹಾಲು ಮೊಟ್ಟೆ,ಬಟ್ಟೆ ಪುಸ್ತಕ ಕೊಡ್ಲಿಲ್ಲ. ಮಾನ್ಯ ಸಿದ್ಧರಾಮಯ್ಯ ಬಸವ ಜಯಂತಿಯಂದು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಸವಣ್ಣ ಕಂಡ ಸಮ ಸಮಾಜದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಿದಂತವರು, ನಾಡಿನದಲಿತರ,ಹಿಂದುಳಿದವರ(ಲಿಂಗಾಯತರೂ ಹಿಂದುಳಿದವರೆ,3rd B ) ಅಲ್ಪಸಂಖ್ಯಾತರ ರೈತರ ಪರವಾಗಿ ಕಾರ್ಯಕ್ರಮ ರುಪಿಸಿದಂತವರು,ರೈತರ ಪರವಾಗಿ,ಮಹಿಳೆಯರ ಪರವಾಗಿ,ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ಕೊಟ್ಟಂಥವರು.
- ಮಾನ್ಯ ಸಿದ್ಧರಾಮಯ್ಯನಂತಹ ರಾಜಕಾರಣಿ ಕರ್ನಾಟಕದ,ಭಾರತದ ರಾಜಕಾರಣದಲ್ಲಿ ಹುಟ್ಟಿರೋದ್ರಿಂದ್ಲೆ ಇವತ್ತು ಮೋದಿಯಂತವರು,ಬಿಜೆಪಿ ಸಂವಿಧಾನವನ್ನ ಮುಟ್ಲಿಕ್ಕೂ ಕೂಡ ಹೆದರುತ್ತೆ. ಮಾನ್ಯ ಸಿದ್ಧರಾಮಯ್ಯ,ಮಾನ್ಯ ಮಲ್ಲಿಕಾರ್ಜುನ ಖರ್ಗೆ,ಮಾನ್ಯ ಸತೀಶ್ ಜಾರಕಿಹೊಳಿ,ಮಾನ್ಯ ಇಬ್ರಾಹಿಂ ರಂತವರು ಇವತ್ತು ಇರೋದ್ರಿಂದ್ಲೇ ಸಂವಿಧಾನ,ಪ್ರಜಾಪ್ರಭುತ್ವ ಉಳಿದಿರೋದು.
- ಮಾನ್ಯ ಮನ್ ಮೋಹನ್ ಸಿಂಗ್ ಭಾರತ ದೇಶದಲ್ಲಿ ಒಂದು ಕ್ರಾಂತಿಕಾರಿ ಸರ್ಕಾರವನ್ನು ಕೊಟ್ಟಂತವರು, ಭಾರತ ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಒಬ್ಬ ರೈತ ಪ್ರಧಾನಿಯಾದಂತವರು, ಆದರೆ ಮೋದಿ ಅದಾನಿ,ಅಂಬಾನಿಗಳ ಸಾಲ ಮನ್ನಾ ಮಾಡಿ ಶ್ರೀಮಂತರ,ಕಾರ್ಪೋರೇಟ್ ಕಂಪನಿಗಳ ಪರವಾದ ಪ್ರಧಾನಿಯಾದಂತವರು.
ಜಿ ಎಸ್ ಟಿ
- ಹಿಂದೆ ಬಿಜೆಪಿ, ಮನ್ ಮೋಹನ್ ಸರ್ಕಾರ ಇದ್ದಾಗ ಜಿಎಸ್ಟಿ ಬಡವರ ವಿರುದ್ಧ,ರೈತರ ವಿರುದ್ಧ ಅನ್ನೋ ಕಾರಣಕ್ಕೆ ವಿರೋಧಿಸಿತ್ತು, ಆದರೆ ಮೋದಿ,ಬಿಜೆಪಿ ತನ್ನ ಆಡಳಿತದಲ್ಲಿ ಜಿಎಸ್ಟಿ ಜಾರಿಗೆ ತಂದು ಸಂಪೂರ್ಣವಾಗಿ ಬಡವರ ವಿರುದ್ಧವಾಗಿದೆ, ತಿನ್ನುವ ಅನ್ನಕ್ಕೆ 18 ಪರ್ಸೆಂಟ್ ತೆರಿಗ, ಶ್ರೀಮಂತರು ಉಪಯೋಗಿಸುವ ಬಂಗಾರಕ್ಕೆ 5 ಪರ್ಸೆಂಟ್ ತೆರಿಗೆ.
- ನಮ್ಮ ರಾಹುಲ್ ಗಾಂಧಿ ಈಗಾಗ್ಲೆ ಜನರಿಗೆ ಭರವಸೆ ಕೊಟ್ಟಿದಾರೆ, ನನ್ನ ಸರ್ಕಾರ ಅಧಿಕಾರಕ್ಕೆ ಜಿಎಸ್ ಟಿ ಪರಾಮರ್ಶೆ ಮಾಡ್ತೇನೆ,ಬಡವರ ಪರವಾಗಿ ಜಿಎಸ್ ಟಿ ರೂಪಿಸ್ತೇನೆ ಅನ್ನುವಂತ ಮಾತು, ರೈತರಿಗೆ ಪ್ರತ್ಯೇಕ ಬಜೆಟ್,ಕಡು ಬಡವರ ಖಾತೆಗೆ ವರ್ಷಕ್ಕೆ 72000 ರೂ ಇದು ಕಾಂಗ್ರೆಸ್ ಬದ್ಧತೆ.
- 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅನ್ನುವ ಮೋದಿಯವರೆ, ನಿಮ್ಮವ್ವನ್ನ ಹೋಗಿ ಕೇಳಿ ಕಾಂಗ್ರೆಸ್ ಏನು ಮಾಡಿದೆ ಅಂತ ಆಗ ಅವರು ಹೇಳ್ತಾರೆ. ಹಸಿರು ಕ್ರಾಂತಿ,ಕ್ಷೀರ ಕ್ರಾಂತಿ,ಬ್ಯಾಂಕ್ ರಾಷ್ಟ್ರೀಕರಣ,ಗರೀಬಿ ಹಠಾವೋ, ವೈಜ್ಞಾನಿಕ ಕ್ರಾಂತಿ ಇವೆಲ್ಲಾ ನೀವು ಮಾಡಿದ್ದಾ.
- ನೀವು ಎಷ್ಟು ಡ್ಯಾಂ ಕಟ್ಸಿದೀರಿ,ಎಷ್ಟು ಶಾಲೆ ಕಟ್ಸಿದೀರಿ, ಎಷ್ಟು ಊರಿಗೆ ಕರೆಂಟು ಕೊಟ್ಟದೀರಿ, ಎಷ್ಟು ಬ್ಯಾಂಕ್,ಆಸ್ಪತ್ರೆ,ರೋಡು,ರೈಲು, ವಿಮಾನ ಸೆಟಲೈಟ್ ಬಿಟ್ಟಿದೀರಿ, ಯಾಕೆ ಬೊಗಳೆ ಬಿಡ್ತಾ ಇದೀರಾ, ಜನರೇನೂ ಮೂರ್ಖರಲ್ಲ, ನಿಮ್ಮ ಪ್ರತಿ ಸುಳ್ಳು,ಮೋಸವನ್ನ ಗಮನಿಸ್ತಾ ಇದ್ದಾರೆ.
- ಮಾತೆತ್ತಿದರೆ ನಾನು ಚೌಕೀದಾರ್ ಅಂತಿರ್ತೀರಾ, ಮಾನೊಯ ಮೋದಿಯವರೆ, ರಫೇಲ್ ಫೈಲ್ ಕಳ್ಳತನವಾದಾಗ, ನೀರವ್ ಮೋದಿ ದೇಶ ಬಿಟ್ಟು ಹೋಗುವಾಗ ನೀವೇನ್ ಮಾಡ್ತಿದ್ರಿ, ನಿದ್ದೆ ಮಾಡ್ತಿದ್ರಾ, ಅಥವ ಲಾಲಿಪಾಪ್ ತಿನ್ತಿದ್ರಾ.
- ಪುಲ್ವಾಮ ಧಾಳಿಗೆ, ಸೈನಿಕರ ಸಾವಿಗೆ ನೇರವಾಗಿ ನೀವೇ ಕಾರಣ,18 ಚೆಕ್ ಪೋಸ್ಟ್ ದಾಟಿ ಹೇಗೆ ಉಗ್ರಗಾಮಿಗಳು ನಿಮ್ಮಂತ ದಕ್ಷ,ನಿಷ್ಟಾವಂತ ಚೌಕೀದಾರ ಇದ್ದಾಗ ನುಗ್ತಾರೆ. ಗೋವಾದಿಂದ ಒಂದು ಬಿಯರ್ ಬಾಟಲ್ ತರ್ಲಿಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದಾದ್ರೆ, ಅದು ಹೇಗೆ ಉಗ್ರಗಾಮಿಗಳು,ಅದು ಹೈಲೀ ಸೆಕ್ಯೂರಿಟಿ ಇರೋ ಏರಿಯಾಕ್ಕೆ ಬರ್ತಾರೆ. ನಾನ್ ಹೇಳ್ತೇನೆ ಕೇಳಿ ಮೋದಿಯವರೆ,ನೀವು ಐದು ವರ್ಷಗಳ ಕಾಲ ಜನರಿಗೆ ಏನೂ ಮಾಡ್ಲಿಲ್ಲ ಆದರೆ ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ವೈಫಲ್ಯ ಮುಚ್ಕೋ ಬೇಕು, ಆ ಮೂಲಕ ಜನರ ಮನಸ್ಸಲ್ಲಿ ಕೋಮುವಾದವನ್ನ ಬಿತ್ತಿ ಮತ್ತೆ ಅಧಿಕಾರಕ್ಕೆ ಬರ್ಬೇಕು ಅನ್ನೋ ಮೋಸದ ಅಜೆಂಡಾ,ಕೋಮುವಾದಿ ಅಜೆಂಡಾ, ಹಿಡನ್ ಅಜೆಂಡಾ ನಿಮ್ದಲ್ವಾ ಮೋದಿ ಸಾಹೇಬ್ರಾ.
- ಅನೇಕ ವಿಷಯಗಳ ಬಗ್ಗೆ ಮಾತ್ನಾಡಬಹುದಾದರೂ ಇಲ್ಲಿ ಎಲ್ಲವನ್ನೂ ಹೇಳೋದಕ್ಕೆ ಸಾಧ್ಯ ಆಗಲಾರದು,ಕೊನೆಗೆ ಒಂದು ಮಾತು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಮುಖ್ಯ ಅಲ್ಲ ಪಕ್ಷ ಮುಖ್ಯ,ಜಾತಿ ಮುಖ್ಯ ಅಲ್ಲ ರಾಷ್ಟ್ರ ಮುಖ್ಯ, ಬಡವರು ರೈತರು ಮುಖ್ಯ ಆ ಕಾರಣಕ್ಕೆ ತಾವು ಭತದಾನ ಮಾಡಿ ಕಾಂಗ್ರೆಸ್ ಗೆ ವೋಟ್ ಕೊಡಿ ಅನ್ನೋ ವಿನಮ್ರ ಮನವಿ ನನ್ನದು.
ವಂದನೆಗಳೊಂದಿಗೆ
–ಉದಯಶಂಕರ ಮಾಗಾನಹಳ್ಳಿ
ಅಧ್ಯಕ್ಷರು
ರವಿ ಯುವಶಕ್ತಿ ಪಡೆ
ಹರಪನಹಳ್ಳಿ
9448649486
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ಉದ್ಘಾಟನೆಗಳು
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ
ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ ಕೇಶವಮೂರ್ತಿ ಬಡಾವಣೆ ಹಾಗೂ ನಾಗನೂರು ಗ್ರಾಮಗಳ ಕೂಡು ರಸ್ತೆಗಳ ಅಂದಾಜು 500 ಲಕ್ಷ ಮೊತ್ತದ ಕಳಪೆ ಕಾಮಗಾರಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ಕರ್ತವ್ಯ ಲೋಪ ಎಸಗಿದ ಶ್ರೀ ಶಿವಮೂರ್ತಿ, ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ದಾವಣಗೆರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
2022-23ನೇ ಸಾಲಿನ 5054 ವಿಶೇಷ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದಾವಣಗೆರೆ ತಾಲ್ಲೂಕು ಶಾಮನೂರು-ದೇವರಬೆಳಕೆರೆ ರಸ್ತೆಯಿಂದ ದುರ್ಗಾಂಬಿಕ ಕ್ಯಾಂಪ್, ನಾಗಮ್ಮ ಕೇಶವಮೂರ್ತಿ ಬಡಾವಣೆ ಹಾಗೂ ನಾಗನೂರು ಗ್ರಾಮಗಳ ಕೂಡು ರಸ್ತೆಗಳ ಕಾಮಗಾರಿಯನ್ನು ಅಂದಾಜು 500 ಲಕ್ಷ ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಸದರಿ ಕಾಮಗಾರಿ ನಡೆದು ಒಂದು ವರ್ಷದ ಒಳಗಾಗಿ ರಸ್ತೆಯು ಹಾಳಾಗಿರುತ್ತದೆ. ಹೀಗಾಗಿ ಸದರಿ ಕಾಮಗಾರಿಗೆ ಸಂಬAಧಿಸಿದ ದಾಖಲೆಗಳನ್ನು ಮಾಹಿತಿಹಕ್ಕು ಅಡಿಯಲ್ಲಿ ಪಡೆದು ಪರಿಶೀಲನೆ ಮಾಡಿದಾಗ, ಅಂತಿಮ ಬಿಲ್ಲನ್ನು ಮಂಜೂರು ಮಾಡುವ ಪೂರ್ವದಲ್ಲಿಯೇ ಸದರಿ ಕಾಮಗಾರಿಯು ಹದಗೆಟ್ಟಿರುವ ಮಾಹಿತಿ ಪಡೆದು, ಮಾಹಿತಿಹಕ್ಕು ಅಡಿಯಲ್ಲಿ ಸಂಬಂಧಿಸಿದ ಕಡತಗಳನ್ನು ಪಡೆದು ಪರಿಶೀಲನೆ ಮಾಡಿದಾಗ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದ ಕಾರಣ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರಿಗೆ ದೂರು ನೀಡಲಾಗಿತ್ತು.
ಈ ದೂರು ಅರ್ಜಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರು ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ, ದಾವಣಗೆರೆ ಇವರಿಗೆ ನಮ್ಮ ದೂರು ಅರ್ಜಿಯನ್ನು ವರ್ಗಾಹಿಸಿ, ‘ಸದರಿ ವಿಷಯದ ಕುರಿತು ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಮನವಿದಾರರಿಗೆ ಹಿಂಬರಹ ನೀಡುವಂತೆ’ ತಿಳಿಸಿರುತ್ತಾರೆ. ಆದರೆ 3 ತಿಂಗಳು ಕಳೆದರೂ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶಿವಮೂರ್ತಿ ಇವರು ಯಾವುದೇ ತನಿಖೆ ನಡೆಸದೆ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


