ದಿನದ ಸುದ್ದಿ
ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ..!?
2011-12 ಹಾಗೂ 2017-18 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು ಉದ್ಯೋಗದ ಪ್ರಮಾಣ ಕುಗ್ಗಿರುವ ಬಗ್ಗೆ ಇತ್ತೀಚೆಗೆ ದೆಹಲಿಯ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಸಸ್ಟೆನೇಬಲ್ ಎಂಪ್ಲಾಯಿಮೆಂಟ್’ ಪ್ರಕಟಿಸಿರುವ ಹಾಗೂ ಸಂತೋಷ ಮೆಹ್ರೋತ್ರಾ ಮತ್ತು ಜಜಾತಿ ಕೆ. ಪರಿದಾ ಬರೆದಿರುವ ಪ್ರಬಂಧದಲ್ಲಿ ಅಭಿಪ್ರಾಯಪಡಲಾಗಿದೆ.
ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗ ವಲಯ ಇಷ್ಟೊಂದು ಕುಸಿತ ಕಂಡಿದೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಹಿಮಾಂಶು ಸೇರಿದಂತೆ ಈ ಪ್ರಬಂಧದ ಲೇಖಕರು ಹಾಗೂ ಇತರೆ ಪರಿಣಿತರು ಸಹ ಈ ರೀತಿಯ ಉದ್ಯೋಗ ಕುಸಿತದ ಪ್ರಮಾಣವನ್ನು ಕಂಡುಕೊಂಡಿದ್ದಾರೆ.
ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, “2011-12 ಹಾಗೂ 2017-18ರ ಅವಧಿಯಲ್ಲಿ 9 ದಶಲಕ್ಷ ಗಳಷ್ಟು (90 ಲಕ್ಷ) ಉದ್ಯೋಗದ ಪ್ರಮಾಣ ಕುಗ್ಗಿದೆ. ಇದು ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ’ ಎಂದಿದ್ದಾರೆ.
ಮೆಹ್ರೋತ್ರಾ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಪರಿದಾ ಅವರು ಪಂಜಾಬ್ನ ಕೆಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರು.
ಈ ಅಧ್ಯಯನದ ಫಲಿತಾಂಶವು, ಪ್ರಧಾನಿ ಅವರ ಅರ್ಥಶಾಸ್ತ್ರ ಸಲಹಾ ಸಮಿತಿಯಿಂದ ಲಾವೀಸ್ ಭಂಡಾರಿ ಹಾಗೂ ಅಮರೇಶ ದುಬೈ ನಡೆಸಿದ ಅಧ್ಯಯನಕ್ಕಿಂತ ಭಿನ್ನವಾಗಿದೆ. ಅವರ ಅಧ್ಯಯನದಂತೆ 2011-12 ಅವಧಿಯಲ್ಲಿ 43.3 ಕೋಟಿ ಇದ್ದ ಉದ್ಯೋಗಗಳು 2017-18ರ ಅವಧಿಯಲ್ಲಿ ಅದು 45.7 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, 2011-12ರ ಅವಧಿಯಲ್ಲಿ 47.4 ಕೋಟಿ ಉದ್ಯೋಗಗಳಿದ್ದು 2017-18ರ ಅವಧಿಯಲ್ಲಿ ಅದು 46.5 ಕೋಟಿಗಿಳಿದಿವೆ. ಅಂದರೆ ಜನಸಂಖ್ಯೆ ಏರುತ್ತಲೇ ಇದ್ದರೆ ಮೊದಲ ಬಾರಿಗೆ ಉದ್ಯೋಗಗಳಲ್ಲಿ ಇಳಿಕೆ ಕಂಡುಬಂದಿದೆ.
ಆಗಸ್ಟ್ 1ರ ಮಿಂಟ್ ಪತ್ರಿಕೆಯಲ್ಲಿ ಹಿಮಾಂಶು ಅಭಿಪ್ರಾಯಪಟ್ಟಿರುವಂತೆ “2011-12ರ ಅವಧಿಯಲ್ಲಿ 472.5 ದಶಲಕ್ಷ ದಷ್ಟು ಉದ್ಯೋಗ ಕುಸಿತ ಕಂಡು ಬಂದಿದೆ. ನಂತರದ 6 ವರ್ಷಗಳ ಅವಧಿಯಲ್ಲಿ 15 ದಶಲಕ್ಷ ಉದ್ಯೋಗಗಳು ಕುಂಠಿತಗೊಂಡಿವೆ. ಅಂದರೆ, 2011-12 ಹಾಗೂ 2017-18ರ ಅವಧಿಯ ಪ್ರತಿ ವರ್ಷದಲ್ಲೂ 26 ಲಕ್ಷದಷ್ಟು ಉದ್ಯೋಗಗಳು ನಷ್ಟ ಹೊಂದುತ್ತಾ ಬಂದಿವೆ.
ಈ ಎರಡೂ ಅಧ್ಯಯನಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. 2004-05, 2011-12 ಹಾಗೂ ಪಿ.ಎಲ್.ಎಫ್.ಎಸ್-2017-18ರ ಅನ್ವಯ ಉದ್ಯೋಗ ಹಾಗೂ ನಿರುದ್ಯೋಗ ಸಮೀಕ್ಷೆಗಾಗಿ “ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗಾನೈಸೆಷನ್’ ನೀಡಿದ ಅಂಕಿ-ಅಂಶಗಳು ಈ ಎರಡೂ ಅಧ್ಯಯನಗಳಿಗೆ ಆಧಾರವಾಗಿವೆ. ಭಂಡಾರಿ ಹಾಗೂ ದುಬೈ ಪ್ರಕಾರ 40 ದಶಲಕ್ಷ ಉದ್ಯೋಗಗಳ ವ್ಯತ್ಯಾಸವಿದೆ. ಆದರೆ, ಮೆಹ್ರೋತ್ರಾ ಹಾಗೂ ಪರಿದಾ ಮತ್ತು ಹಿಮಾಂಶು ನಡೆಸಿದ ಅಧ್ಯಯನಗಳ ಫಲಿತಾಂಶಗಳು ಭಿನ್ನವಾಗಿವೆ. ಏಕೆ ಹೀಗೆ ಎಂಬುದಕ್ಕೆ ಬಹುಶಃ ಎರಡು ಕಾರಣಗಳಿರಬಹುದು.
ಇಡೀ ದೇಶದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿ ಒಟ್ಟು ಉದ್ಯೋಗಗಳ ಸಂಖ್ಯೆಯನ್ನು ಅಂದಾಜಿಸಿರಬಹುದು. ಅತಿ ಹೆಚ್ಚಿನ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ನೀಡುತ್ತದೆ. ಭಂಡಾರಿ ಹಾಗೂ ದುಬೈ ಆವರು 2017-18ರಲ್ಲಿ ಭಾರತದ ಜನಸಂಖ್ಯೆಯನ್ನು 1.36 ಶತಕೋಟಿ ಎಂದು ಪರಿಗಣಿಸಿದ್ದಾರೆ. ಮೆಹ್ರೋತ್ರಾ ಹಾಗೂ ಪರಿದಾ ಅವರು 1.35 ಶತಕೋಟಿ ಎಂದು ಪರಿಗಣಿಸಿದ್ದಾರೆ. 2017-18ರಲ್ಲಿ ವಿಶ್ವಬ್ಯಾಂಕ್ 1.33 ಶತಕೋಟಿ ಎಂದಿದ್ದರೆ, ಹಿಮಾಂಶು-ಸರಕಾರಿ ಅಧಿಕಾರಿಗಳ ಜಿಡಿಪಿ ಅನ್ವಯ-1.31 ಶತಕೋಟಿ ಜನಸಂಖ್ಯೆ ಇದೆ ಎಂದು ಪರಿಗಣಿಸಿದೆ.
ಭಾರತದ ಜನಸಂಖ್ಯೆ ಬಗ್ಗೆ ಇಷ್ಟೊಂದು ಗೊಂದಲಗಳಿವೆ. ಏಕೆಂದರೆ, 2011ರ ಜನಗಣತಿ ಅನ್ವಯ ಇಂದಿಗೂ ಜನಸಂಖ್ಯೆ ಕುರಿತು ನಿಖರ ಮಾಹಿತಿ ನೀಡಿಲ್ಲ. ನಿಯಮದಂತೆ, ಸರ್ಕಾರವು 2016ರಲ್ಲಿಯೇ ಬಿಡುಗಡೆ ಮಾಡಬೇಕಿತ್ತು.
ಭಂಡಾರಿ ಹಾಗೂ ದುಬೈ ಅಧ್ಯಯನದಲ್ಲಿ, ಉದ್ಯೋಗಗಳ ಸಾಧ್ಯತೆಯ ಪ್ರಧಾನ ಮೂಲಾಂಶಗಳನ್ನು ಪರಿಗಣಿಸಿ, ನಂತರದ ಪೂರಕ ಸಾಧ್ಯತೆಗಳ ಮೂಲಗಳನ್ನು ಕಡೆಗಣಿಸಿರುವುದು ಈ ವ್ಯತ್ಯಾಸಗಳಿಗೆ ಕಾರಣ ಇರಬಹುದು. ಅದಲ್ಲದೇ ಅವರಿಬ್ಬರೂ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವುದರಿಂದ ಅಲ್ಲಿನ ಅಂಕಿ ಸಂಖ್ಯೆಗಳು ಉತ್ರೇಕ್ಷೆಯೂ ಇರಬಹುದೆಂಬ ಆರೋಪ ಸಹ ಕೇಳಿಬಂದಿದೆ.
ಈ ಸರ್ವೇಗಳಲ್ಲಿ ಒಬ್ಬ ವ್ಯಕ್ತಿಯು ವರ್ಷದ 365 ದಿನಗಳಲ್ಲಿ 182 ದಿನ ಕೆಲಸ ಮಾಡಿದರೆ ಆತನನ್ನು ಉದ್ಯೋಗಿ ಎಂದು ಪರಿಗಣಿಸುತ್ತದೆ. ಅಂದರೆ ಆರು ತಿಂಗಳು ಕೆಲಸ ಮಾಡಿ ಇನ್ನು ಆರು ತಿಂಗಳು ಕೆಲಸವಿಲ್ಲದಿದ್ದರೂ ಸಹ ಅವರು ಉದ್ಯೋಗಿಗಳ ಪಟ್ಟಿಗೆ ಸೇರುತ್ತಾರೆ. ಹಾಗಾಗಿ ಮೇಲಿನ ಅರ್ಥಶಾಸ್ತ್ರಜ್ಞರು ಊಹೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಉದ್ಯೋಗ ಕಡಿತವಾಗಿದೆ ಎಂದು ಹಲವಾರು ಜನ ಅಭಿಪ್ರಾಯಪಡುತ್ತಿದ್ದಾರೆ.
ಕೃಪೆ :(ದಿ ಇಂಡಿಯನ್ ಎಕ್ಸ್ಪ್ರೆಸ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
ಸುದ್ದಿದಿನ,ದಾವಣಗೆರೆ:ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ.
ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ5 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ6 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ4 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ5 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು
-
ದಿನದ ಸುದ್ದಿ5 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ