ಸಿನಿ ಸುದ್ದಿ
“ಯಬಸ್” ಹಂಗಂದ್ರೆ ಏನಪ್ಪಾ..? ಭಟ್ರೇ ಕೊಡ್ಬೇಕು ಉತ್ರ ಅಂತಿದಾನೆ ಪ್ರೇಕ್ಷಕ ಪ್ರಭು..!

ಸುದ್ದಿದಿನ ಡೆಸ್ಕ್ : ನಿರ್ದೇಶಕ ಯೋಗರಾಜ್ ಭಟ್ಟರ ‘ಪಂಚತಂತ್ರ’ ಸಿನೆಮಾ ಹಾಡುಗಳ ಮೂಲಕವೇ ಭಾರೀ ಸೌಂಡು ಮಾಡ್ತಿದೆ. ಈ ಸಿನೆಮಾದ ರೊಮ್ಯಾಂಟಿಕ್ ಹಾಡು “ಶೃಂಗಾರದ ಹೊಂಗೆ ಮರ” ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದೇ ಆಗಿದ್ದು ಎಲ್ಲರ ಬಾಯಲ್ಲೂ ಅದೇ ಹಾಡಿನ ಗುನುಗು. ಅಷ್ಟರಮಟ್ಟಿಗೆ ಭಟ್ಟರ ಸಾಹಿತ್ಯ, ವಿ.ಹರಿಕೃಷ್ಣ ಅವರ ಸಂಗೀತ ಹುಚ್ಚು ಹಿಡಿಸಿ ಬಿಟ್ಟಿದೆ.
ಹಾಗೆಯೇ ಈ ಸಿನೆಮಾದ ಮತ್ತೊಂದು ಹಾಡನ್ನು ಮೊನ್ನೆಯಷ್ಟೇ ಬಿಡುಗಡೆಮಾಡಿರುವ ಚಿತ್ರತಂಡಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾನೆ, ತಲೆಯೊಳಗೆ ಹುಳನೂ ಬಿಟ್ಕೊಂಡಿದಾನೆ. “ಈ ವಯಸಲ್ಲೇನ್ ಮಾಡೋದು ಗೊತ್ತಾಗೋದಿಲ್ಲ” ಅನ್ನೋ ಹಾಡಲ್ಲಿ ಬರೋ ‘ಯಬಸ್’ ಎಂಬ ಪದಕ್ಕೆ ಅರ್ಥ ಹುಡುಕಿ ಹುಡುಕೀ ಕಂಗಾಲಾಗಿದ್ದಾನೆ ಪ್ರೇಕ್ಷಕ. ಈ ಪದಕ್ಕೆ ಭಟ್ರೆ ಉತ್ರ ಕೊಟ್ರೆ ಒಳ್ಳೇದು ಅಂತಾನೆ ಪ್ರೇಕ್ಷಕ.ಹಾಗೇ ಈ ಸಿನೆಮಾದ ಎರಡೂ ಹಾಡುಗಳ ಟಿಕ್ ಟಾಕ್ ಕೂಡಾ ಭಾರೀ ಜೋರಿದೆ.
ಅಂದಹಾಗೆ ಪ್ರೇಕ್ಷಕ ಅಷ್ಟೊಂದ್ ಯಾಕೆ ತಲೆ ಕೆಡುಸ್ಕೊಂಡಿದಾನೆ ಅಂತ ನೀವೂ ನೋಡಿ ಮಜಾ ಇದೆ.
ಎಲ್ಲೆಲ್ಲೂ ಕೇಳಿಬರುತ್ತಿರುವುದು ಒಂದೇ ಮಾತು! #YebassAndreYenu 🤔#Sandalwood #Panchatantra #YogarajBhat
Posted by Yograj Cinemas – ಯೋಗರಾಜ್ ಸಿನಿಮಾಸ್ on Wednesday, 9 January 2019
ಲೋ ಎಲ್ಲಿಂದ ಹುಡುಕ್ತಿರೋ ಇವೆಲ್ಲಾ 😂😂ಸೃಷ್ಟಿಸಿದ ಪುಣ್ಯಾತ್ಮನಿಗೆ ದೀರ್ಘದಂಡ ನಮನ 🙏🙏🙏ಯಬಸ್: https://youtu.be/euZT4i-7WKE
Posted by Yogaraj Bhat on Monday, 7 January 2019
ಯಾರಿಗ್ ಹೇಳೋಣ ಇವ್ರ ಪ್ರೊಬ್ಲೆಮ್ಮು? :(ಯಬಸ್ ಅರ್ಥದ ಹುಡುಕಾಟದಲ್ಲಿ ಕೊರಗಿ, ಸೊರಗಿ, ಬೆಂಡಾಗಿರುವ Benaka Sagar Dimpu, Nandu Kumar &…
Posted by Yograj Cinemas – ಯೋಗರಾಜ್ ಸಿನಿಮಾಸ್ on Wednesday, 9 January 2019
ಪ್ರಾಣಿ, ಪಕ್ಷಿ, ರೋಡ್ ರನ್ನರ್, ಗಿಡ, ಮರ, ಬಳ್ಳಿ, ಹಕ್ಕಿ, ಹಾವು, ಕಪ್ಪೆ – ಎಲ್ಲಾ ತಲೆ ಕೆಡಿಸಿಕೊಂಡಿದ್ದಾರೆ – #YebassAndreYenu 🤔#Sandalwood #Panchatantra #YogarajBhat
Posted by Yograj Cinemas – ಯೋಗರಾಜ್ ಸಿನಿಮಾಸ್ on Wednesday, 9 January 2019
https://www.facebook.com/133083670806619/posts/350350292413288/
ಈ ಪದ ಕೇಳಿದ್ರೆ, ಕಂಬಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ! ❤️❤️❤️ #ಯಬಸ್ (Click on the photo to get the complete picture)ನೀವೂ ಕೂಡ…
Posted by Yograj Cinemas – ಯೋಗರಾಜ್ ಸಿನಿಮಾಸ್ on Wednesday, 9 January 2019
"ಈ ವಯಸಲ್ ಏನ್ ಮಾಡೋದು" ಅಂತ ಈ ಮಗುವಿಗೆ ಗೊತ್ತಾಗಿದೆ. ನಮಗೇ ಇನ್ನೂ ಗೊತ್ತಾಗಿಲ್ಲ. 🤦https://youtu.be/euZT4i-7WKE#Sandalwood #Panchatantra #YogarajBhat
Posted by Yograj Cinemas – ಯೋಗರಾಜ್ ಸಿನಿಮಾಸ್ on Wednesday, 9 January 2019
https://www.facebook.com/133083670806619/posts/350655122382805/
https://www.facebook.com/133083670806619/posts/350693519045632/
https://www.facebook.com/133083670806619/posts/350718159043168/
Any Game of Thrones fans out here? The Khaleesi knows what #Yebass means! Watch this video and you'll know the meaning too!#Sandalwood #Panchatantra #YogarajBhat #Daenerys #GameOfThrones #YebassAndreYenu 🤔
Posted by Yograj Cinemas – ಯೋಗರಾಜ್ ಸಿನಿಮಾಸ್ on Thursday, 10 January 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
777 ಚಾರ್ಲಿ ಚಿತ್ರಕ್ಕೆ ‘ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ’

ಸುದ್ದಿದಿನ ಡೆಸ್ಕ್ : 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2021 ಪ್ರಕಟವಾಗಿದ್ದು, ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.
ನಟ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಜೇಕಬ್ ವರ್ಗೀಸ್ ನಿರ್ದೇಶನದ ಸಾಕ್ಷ್ಯಚಿತ್ರ ಆಯುಷ್ಮಾನ್ಗೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ ಲಭಿಸಿದೆ.
ಅನಿರುಧ್ ಜತ್ಕರ್ ನಿರ್ದೇಶನದ ಬಾಳ ಬಂಗಾರ ಸಾಕ್ಷ್ಯಚಿತ್ರ ತೀರ್ಪುಗಾರರ ವಿಶೇಷ ಉಲ್ಲೇಖ ಪಡೆದಿದೆ. ಸಿನಿಮಾ ವಿಮರ್ಶೆ ವಿಭಾಗದಲ್ಲಿ ಹಿರಿಯ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ತೀರ್ಪುಗಾರರ ವಿಶೇಷ ಉಲ್ಲೇಖಕ್ಕೆ ಭಾಜನರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶ್ರೀಲಂಕಾದಲ್ಲಿ ಕನ್ನಡ ಚಲನಚಿತ್ರೋತ್ಸವ

ಸುದ್ದಿದಿನ, ಕೊಲೊಂಬೋ : ಶ್ರೀಲಂಕಾದ ರಾಜಧಾನಿ ಕೊಲೊಂಬೋದಲ್ಲಿನ ತರಂಗಿಣಿ ಸಿನಿಮಾ ಹಾಲ್ನಲ್ಲಿ ಏರ್ಪಡಿಸಿದ್ದ ಕನ್ನಡ ಚಲನಚಿತ್ರೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಗೋಪಾಲ್ ಬಾಗ್ಳೆ, ಶ್ರೀಲಂಕಾದ ಬಹು ಮಾಧ್ಯಮ ಖಾತೆ ಸಚಿವ ಡಾ. ಬಂದೂಲ ಗುಣವರ್ಧನೆ ಹಾಗೂ ಸಂಸ್ಕೃತಿ ಖಾತೆ ಸಚೆವ ವಿಧುರವಿಕ್ರಮ ನಾಯಕ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ, ಕನ್ನಡ ಚಲನಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರ ಮಾತನಾಡಿದ ಸಚಿವ ಡಾ.ಗುಣವರ್ಧನೆ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಚಲನಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮನರಂಜನಾ ಮಾಧ್ಯಮವು ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಪ್ರಾದೇಶಿಕ ಚಲಚಿನಚಿತ್ರಗಳು, ಅದರಲ್ಲಿಯೂ ಭಾರತದ ಚಲನಚಿತ್ರ ಸಂಸ್ಕೃತಿಯ ಜೊತೆಗೆ ದೇಶದ ಪರಂಪರೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುತ್ತಿದೆ. ಸಾಮಾಜಿಕ ವಲಯದಲ್ಲಿ ಪ್ರಾದೇಶಿಕ ಬಾಷೆಯಲ್ಲಿ ಬರುವ ಚಿತ್ರಗಳು, ಚಿತ್ರ ಪ್ರೇಮಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿಗಳಿಗೆ, ಪಠ್ಯಕ್ರಮದ ಭಾಗವಾಗಿ ಹಲವು ಪ್ರದೇಶಗಳಲ್ಲಿ ಅಧ್ಯಯನಕ್ಕೂ ಅನುಕೂಲವಾಗಿದೆ. ಇತ್ತೀಚೆಗೆ ಶ್ರಿಲಂಕಾದ ವಿದ್ಯಾರ್ಥಿಗಳು ಇದರ ಅನುಭವವನ್ನು ಪಡೆದುಕೊಳ್ಳಲು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾರ್ಗದರ್ಶನ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀಲಂಕಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ರಿಂದ 300 ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಕಳೆದ ವರ್ಷ ನಾಲ್ಕನೇ ಬಹುದೊಡ್ಡ ಕಾರ್ಯಗಾರ ಆಯೋಜಿಸಲಾಗಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶ್ರೀಲಂಕಾ ವಿದ್ಯಾರ್ಥಿಗಳಿಗೆ, ಚಲನಚಿತ್ರರಂಗದ, ತರಬೇತಿ, ವೀಕ್ಷಣೆ ಹಾಗೂ ನಿರ್ಮಾಣದ ಬಗ್ಗೆ ಹಲವು ರೀತಿ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ವರ್ಷ ಅಮೆರಿಕ-ಅಮೆರಿಕ, ಇಷ್ಠಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಏನಿದು ವಿಚಿತ್ರ | ನಟಿಯ ಡೈವೋರ್ಸ್ ಫೋಟೋಶೂಟ್..!

ಸುದ್ದಿದಿನ ಡೆಸ್ಕ್ : ನಟಿ ಶಾಲಿನಿ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಜನಮನಗೆದ್ದಿದ್ದಾರೆ. ಮೊದಲ ಮದುವೆಯ ವಿಚ್ಛೇದನದ ನಂತರ ಆಕೆ ಮೊಹಮ್ಮದ್ ಎಂಬುವವರನ್ನು ಮದುವೆಯಾಗಿದ್ದರು. ಆ ದಾಂಪತ್ಯದಲ್ಲಿ ಹಲವು ಸಮಸ್ಯೆಗಳಿಂದ ವಿಚ್ಛೇದನ ಪಡೆದರು. ಅದನ್ನು ಸಂಭ್ರಮಿಸಲು ಫೋಟೋಶೂಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.
ಮದುವೆಗೂ ಮುನ್ನ ತೆಗೆದಿರುವ ಫೋಟೋಶೂಟ್ಗಳು ಬಹಳಷ್ಟು ಬಂದಿವೆ. ಆದರೆ ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ನಟಿ ಶಾಲಿನಿಫೋಟೋಗಳು ವೈರಲ್ ಆಗಿವೆ. ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್ ಈಗ ಹಲವರ ಗಮನ ಸೆಳೆದಿದೆ.
ಜೀ ತಮಿಳು ಶೋ ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಶಾಲಿನಿ ಭಾಗವಹಿಸಿದ್ದರು. ಖುಷ್ಬು ಅಭಿನಯದ ಮೀರಾ ತಮಿಳು ಧಾರಾವಾಹಿಯಲ್ಲಿ ಕೂಡ ಆಕೆ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ಖುಷ್ಪು ಹಲವು ವರ್ಷಗಳ ನಂತರ ಕಿರುತೆರೆಯಲ್ಲಿ ನಟಿಸಿದ್ದಾರೆ.
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಶಾಲಿನಿ ಇನ್ಸ್ಟಾ ಅಕೌಂಟ್ ಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://instagram.com/shalu2626?igshid=YmMyMTA2M2Y=
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ1 day ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ