Connect with us

ದಿನದ ಸುದ್ದಿ

ಮೂಡುಬಿದಿರೆಯಲ್ಲಿ ತಯಾರಾಗುವ “ಪೊಳಲಿ ಚೆಂಡು”ಧಾರ್ಮಿಕ ಚೆಂಡುಗಳಿಗೂ ಇಲ್ಲಿದೆ ಚೆಂಡಿಗೂ 18ರ ನಂಟು..!

Published

on

  • ಗಣೇಶ್ ಕಾಮತ್ ಮೂಡುಬಿದಿರೆ

ಸುದ್ದಿದಿನ,ಮೂಡುಬಿದಿರೆ : ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ ಮೂರ್ತಿ ಮಾತೆ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ಎಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಠವೂ ಹೌದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ ‘ ಪುರಲ್ದ ಚೆಂಡ್’ ಕೂಡಾ ಪ್ರಧಾನ ಆಕರ್ಷಣೆ.

ಎಲ್ಲೆಡೆಯಿಂದ ಭಜಕರು ಹರಿದು ಬರುವ ಈ ಜಾತ್ರೆಯ ಚೆಂಡಿನಾಟದ ,( ಈ ಬಾರಿ ಎ6ರಿಂದ 10) ಅದರ ಆಚರಣೆ ಎಲ್ಲವೂ ಗಮನಾರ್ಹವೇ. ಪೊಳಲಿ ಜಾತ್ರೆಗೆ ದಿನ ನಿಗದಿಪಡಿಸುವಲ್ಲಿ ಮೂಡುಬಿದಿರೆಯ ಪುತ್ತಿಗೆಯ ಕ್ಷೇತ್ರದ ಪಾತ್ರ ಮುಖ್ಯವಾಗಿದೆ. ಅದೇ ರೀತಿ ಪ್ರಸಿದ್ಧ ಪೊಳಲಿ ಚೆಂಡಿಗೂ ಮೂಡುಬಿದಿರೆಗೂ ಗಮನ ಸೆಳೆಯುವ ಸಂಬಂಧವೆಂದರೆ ಈ ಚೆಂಡು ತಯಾರಾಗುವೂದೂ ಮೂಡುಬಿದಿರೆಯಲ್ಲೇ!

ಕಳೆದ 15 ವರ್ಷಗಳಿಂದ ಪೊಳಲಿ ಚೆಂಡಿನ ಸಿದ್ಧತೆಯನ್ನು ಶ್ರದ್ಧಾ ಭಕ್ತಿಯಿಂದ ನಿರ್ಮಿಸುವಲ್ಲಿ ಸಂತಸವನ್ನು ಕಂಡವರು ಇಲ್ಲಿನ ಗಾಂಧಿನಗರದ ಎಂ.ಪದ್ಮನಾಭ ಸಮಗಾರ. ತಂದೆ ಕೃಷ್ಣ ಸಮಗಾರರರಿಂದ ಬಳುವಳಿಯಾಗಿ ಬಂದ ವೃತ್ತಿ ಕೌಶಲದ ಜತೆಗೆ ಚೆಂಡು ತಯಾರಿಕೆಯನ್ನೂ ಪದ್ಮನಾಭ ಮುಂದುವರಿಸಿಕೊಂಡು ಬಂದಿದ್ದಾರೆ.

ಬೆಂಗಳೂರಿನಿಂದ ಗಾಡಿ ಎತ್ತಿನ ದಪ್ಪ ಚರ್ಮವನ್ನು ಬೆಂಗಳೂರಿನಲ್ಲಿ ಶೋಧಿಸಿ, ಮನೆಗೆ ತಂದು ತಮಗೆ ಬೇಕಾದ ರೀತಿಯಲ್ಲಿ ಹದ ಮಾಡಿ ತೆಂಗಿನ ನಾರನ್ನು ಚೆಂಡಿನೊಳಗೆ ನಿವರ್ಾತವಿಲ್ಲದಂತೆ ತುಂಬಿ ಹೊಲಿಯುವ ಚಾಕಚಕ್ಯತೆಗೆ ಅಷ್ಟೇ ಶ್ರಮವಿದೆ.

ಮೊದಲು ವೃತ್ತಕಾರದ ಚರ್ಮವನ್ನು ಕತ್ತರಿಸಿ ಅರ್ಧ ಗೋಲಾಕಾರವಾಗಿ ರೂಪಿಸುವ ಹಂತದಲ್ಲಿ ಪುಟ್ಟ ಒನಕೆಯಿಂದ ಚರ್ಮವನ್ನು ಗುದ್ದಿ ಹದ ಮಾಡಬೇಕಾಗುತ್ತದೆ. ಹೀಗೆ ಎರಡು ಅರ್ಧ ಗೋಲಾಕಾರದ ಬಟ್ಟಲುಗಳು ತಯಾರಾದ ಬಳಿಕ ಎರಡನ್ನೂ ಚರ್ಮದ ದಾರದಿಂದಲೇ ಆರ್ದಾಂಶ ಹೋಲಿಯಲಾಗುತ್ತದೆ.

ನಂತರ ತೆಂಗಿನ ನಾರನ್ನು ನೀರು ಹನಿಸಿ ಒದ್ದೆ ಮಾಡಿ ಈ ಗೋಲದೊಳಗೆ ತುರುಕಿ ಮತ್ತೆ ಒತ್ತಡ ಹಾಕಿ ಗುದ್ದಬೇಕು. ಹೀಗೆ ಗುದ್ದಿ ಗಟ್ಟಿಗೊಳಿಸುವಾಗ ಎಲ್ಲಿಯೂ ಗೋಲದೊಳಗೆ ಖಾಲಿ (ನಿವರ್ಾತ) ಜಾಗ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಹೀಗೆ ಸ್ವಲ್ಪ ಚಪ್ಪಟ್ಟೆಯಾದ ಚೆಂಡು ತಯಾರಾಗುತ್ತದೆ. ಇದನ್ನು ಸಂಬಂಧಪಟ್ಟವರು ಒಯ್ದ ನಂತರ ಎಣ್ಣೆ ಕೊಡುತ್ತಾರೆ. ಆಗ ಪೂರ್ತಿಯಾಗಿ ಚೆಂಡಿನಾಕಾರಕ್ಕೆ ಬರುತ್ತದೆ. ಹೀಗೆ ಜಿಲ್ಲೆಯ ಹತ್ತು ಹಲವು ಧಾರ್ಮಿಕ ಕ್ಷೇತ್ರಗಳಿಗೆ ಚೆಂಡು ತಯಾರಿಸಿಕೊಡುವ ಅವಕಾಶ ಪಡೆದಿರುವ ಪದ್ಮನಾಭ ಅಪರೂಪದ ಸಾಧಕರೂ ಹೌದು.

ಮೂಡುಬಿದರೆಯ ಹಳೆ ಠಾಣೆ ಬಳಿ ಕಲ್ಸಂಕದಲ್ಲಿ ಚರ್ಮದ ಚಪ್ಪಲಿ, ಶೂ ಬ್ಯಾಗ್ ತಯಾರಿ ಹೀಗೆ ಕರಕುಶಲಿಗರಾಗಿರುವ ಪದ್ಮನಾಭ ಹದಿನೈದು ವರ್ಷಗಳಿಂದ ಇಲ್ಲಿನ ಸೊಸೈಟಿ ಬ್ಯಾಂಕಿನ ನಿರ್ದೇಶಕರಾಗಿ ಓರ್ವ ಜನಾನುರಾಗಿ ಸಹಕಾರಿಯೂ ಹೌದು. ಪರಂಪರೆಯ ಬೆಸುಗೆ ಇರುವ ಚೆಂಡುಗಳನ್ನು ತಯಾರಿಸುವ ಅವಕಾಶ ಪಡೆದಿರುವುದು ನನ್ನ ಭಾಗ್ಯ ಎನ್ನುವ ಪದ್ಮನಾಭರ( ಮೊ. 8970535339) ಈ ಕೆಲಸದ ಹಿಂದೆ ಪತ್ನಿ ಕಮಲ, ಪುತ್ರರಾದ ರಾಜೇಶ್, ರಾಕೇಶ್ ಪುತ್ರಿಯರಾದ ಜಯಶ್ರೀ, ಉಷಾ ಅವರ ಸಹಕಾರವೂ ಇದೆ.

ಮೂಡುಬಿದಿರೆ :ಚೆಂಡಿಗೂ ’18’ರ ನಂಟು..!

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಎಂದರೆ ಇಲ್ಲಿ 18ರ ನಂಟಿದೆ. 18 ಬಸದಿಗಳು, ಕೆರೆಗಳು, ದೇವಾಲಯಗಳು, ಆಳ್ವಾಸ್ನಂತಹ ಹೆಸರಾಂತ ಶಿಕ್ಷಣ ಪ್ರತಿಷ್ಠಾನದ ಖ್ಯಾತಿವೆತ್ತ ಒಂದೇ ದೊಡ್ಡ ಆವರಣದಲ್ಲಿ 18 ಶಿಕ್ಷಣ ಸಂಸ್ಥೆಗಳು, ಅಲ್ಲಿ 18 ಸಾವಿರ ವಿದ್ಯಾರ್ಥಿಗಳು ಹೀಗೆ .. 18ರ ನಂಟು ಬೆಳೆಯುತ್ತದೆ. ವಿಶೇಷವೆಂದರೆ ಪದ್ಮನಾಭರೂ ಪ್ರಸಿದ್ಧ ಪೊಳಲಿ ಸೇರಿದಂತೆ ಜಿಲ್ಲೆಯ ಸುಮಾರು 18 ಕ್ಷೇತ್ರಗಳಿಗೆ ಅಲ್ಲಿನ ವಾರ್ಷಿಕ ಜಾತ್ರೆಗಳಿಗೆ ಚರ್ಮದ ಚೆಂಡು ಒದಗಿಸುತ್ತಾ ಬಂದಿರುವುದು! ಅದರಲ್ಲಿ ಪೊಳಲಿ ಚೆಂಡು ದೊಡ್ಡ ಗಾತ್ರದ್ದು.

ವಾಮಂಜೂರಿನ ಅಮೃತೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ, ಬೆಳುವಾಯಿ ನಡ್ಯೋಡಿಗೆ ಮತ್ತು ಸಾಣೂರು. ಕೋಟೆಬಾಗಿಲು, ಮೂಡುಬಿದರೆಯ ಆದಿಶಕ್ತಿ ಮಹಾದೇವಿ ಮತ್ತು ಮಹಾಕಾಳಿ ದೇವಸ್ಥಾನಗಳು, ಮಲ್ಲೂರು, ಅಮ್ಟಾಡಿ, ಇರುವೈಲು, ಮುಚ್ಚೂರು, ಮಾರ್ನಾಡು, ಅಳಿಯೂರು, ಅಶ್ವತ್ಥಪುರ, ಪಾಲಡ್ಕ ಹೀಗೆ ವಿವಿಧೆಡೆ ಹಲವು ಗಾತ್ರದ ಚೆಂಡುಗಳನ್ನು ಒದಗಿಸುವ ಪದ್ಮನಾಭರಿಗೆ ಜನವರಿಯಿಂದ ಮೇವರೆಗೆ ಚೆಂಡಿನ ಸೀಸನ್. ಅದೊಂದು ವ್ಯಾಪಾರ ಎನ್ನುವುದಕ್ಕಿಂತ ಧಾರ್ಮಿಕ ಪರಂಪರೆಯ ಸೇವೆಯ ಅವಕಾಶ ಎನ್ನುತ್ತಾರೆ ಪದ್ಮನಾಭ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | 197 ಹೊಸ ಕೊರೋನಾ ಪ್ರಕರಣಗಳು ಪತ್ತೆ, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಎಷ್ಟಿವೆ ಗೊತ್ತಾ..?

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿಂದು 197 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂರು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ದಾವಣಗೆರೆ ನಗರ ಸೇರಿದಂತೆ ತಾಲೂಕುಗಳಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ ಹೀಗಿದೆ. ದಾವಣಗೆರೆ 142, ಹರಿಹರ 20, ಜಗಳೂರು 2, ಚನ್ನಗಿರಿ 13, ಹೊನ್ನಾಳಿ 11, ಹೊರ ಜಿಲ್ಲೆಯಿಂದ 09 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 29,905ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ದಾವಣಗೆರೆ : ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಅವಧಿ ವಿಸ್ತರಣೆ

ಸೋಮವಾರ 301 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವೆಗೆ ಒಟ್ಟು 26,495 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 304 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 3,106 ಸಕ್ರಿಯ ಕೇಸ್ ಗಳಿವೆ. 68 ವರ್ಷದ ಗೋಪನಾಳ ವೃದ್ಧ, ಹರಿಹರದ 25 ವರ್ಷದ ಯುವಕ, ದಾವಣಗೆರೆಯ 28 ವರ್ಷದ ಯುವಕ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ : ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ : ಆಸ್ತಿ ತೆರಿಗೆ ಮೇಲೆ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು 2021 ರ ಏ.30 ರವರೆಗೆ ನೀಡಲಾಗಿತ್ತು. ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವ ಪ್ರಯುಕ್ತ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು ಸರ್ಕಾರದ ಸುತ್ತೋಲೆಯನ್ವಯ ಪ್ರಸಕ್ತ ಸಾಲಿನ ಜೂನ್ 30 ರವರೆಗೆ ವಿಸ್ತರಿಸಲಾಗಿದ್ದು ನಿಗದಿತ ದಿನಾಂಕದೊಳಗಾಗಿ ಆಸ್ತಿ ತೆರಿಗೆಯನ್ನು ಪಾವತಿಸಿ ಈ ಸೌಲಭ್ಯವನ್ನು ಆಸ್ತಿ ಮಾಲೀಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹರಿಹರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಕೋವಿಡ್ 19 ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ 19 ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಳ್ಳಲು ಮನವಿ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ 19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಎಸ್‍ಆರ್ ಪಾರ್ಟನರ್ಸ್ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತ ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳನ್ನು ಗುರುತಿಸಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಮಾಡಿಸಲು ನಿರ್ದೇಶನ ನೀಡಿದ್ದು, ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತರು ಲಕ್ಷಣಗಳಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಲಸಿಕೆ ಹಾಕಿಸಿಕೊಂಡು ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending