Connect with us

ಲೈಫ್ ಸ್ಟೈಲ್

ಪವಿತ್ರ ರಂಜಾನ್ ತಿಂಗಳಲ್ಲಿ..!

Published

on

ಹಿಂದು ಮುಸ್ಲಿಂ ಇಬ್ಬರೂ ಭಾಯಿ-ಭಾಯಿ ಎನ್ನುವ ಸಂಪ್ರದಾಯ ನಮ್ಮ ಭಾರತ ದೇಶದಲ್ಲಿ ಇದೆ. ಭಾರತದಲ್ಲಿ ಹಿಂದು ಮುಸ್ಲಿಂ ಎನ್ನುವ ಭೇಧವಿಲ್ಲ. ಹಿಂದುಗಳು ಸಹ ಈ ಹಬ್ಬವನ್ನು ಆಚರಿಸುತ್ತಾರೆ. ಹಿಂದುಗಳಿಗೆ ಹಿಂದು ಪಂಚಾಂಗದ ಪ್ರಕಾರ ಬರುವ ವರ್ಷದ ನಾಲ್ಕನೇ ತಿಂಗಳಾದ ಶ್ರಾವಣ ಮಾಸದ ಅತ್ಯಂತ ಪ್ರಮುಖವಾಗಿದೆ.

ಈ ಮಾಸದಲ್ಲಿ ಎಲ್ಲರೂ ದೇವರಿಗೆ ಉಪವಾಸ, ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಹೋಮ ಹವನಗಳನ್ನು ಮಾಡುವುದು, ವ್ರತಗಳ ಆಚರಣೆ ಮಾಡುತ್ತಾರೆ. ಹೀಗೆ ಶ್ರಾವಣ ಮಾಸ ಮಹತ್ವ ಪಡೆದುಕೊಂಡರೆ, ಇನ್ನು ಮುಸ್ಲಿಂ ಧರ್ಮದಲ್ಲಿ ರಂಜಾನ್ ತಿಂಗಳಗೆ ವಿಶೇಷವಾದ ಮಹತ್ವವನ್ನು ನೀಡುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಬಾಂಧವರ ಮನೆ ಮನದಲ್ಲಿ ಕುರಾನ್ ಪಠಣ ಮಾಡುತ್ತಾರೆ.

ರಂಜಾನ್ ಮಾಸ ಆರಂಭವಾಗಿ ಈಗಾಗಲೇ 25 ದಿನ ಕಳೆದಿದೆ. ಉಪವಾಸ, ಪ್ರಾರ್ಥನೆ, ದುಡಿಮೆಯಲ್ಲಿ ಅಲ್ಲಾಹುನನ್ನು ಕಾಣುತ್ತಿರುವ ಮುಸ್ಲಿಮರು ಕೆಲವೇ ದಿನಗಳಲ್ಲಿ ಮತ್ತೆ ಮೂಡುವ ಚಂದ್ರನಿಗಾಗಿ ಕಾಯುತ್ತಿದ್ದಾರೆ.

ರಂಜಾನ್ ಹಬ್ಬದ ಮಹತ್ವ

ಮಸೀದಿಗಳ ಮಿನಾರುಗಳಿಂದ ಹೊರಡುವ ಪ್ರಾರ್ಥನೆಯ ಕರೆಗೆ ಈಗ ದಿವ್ಯಶಕ್ತಿ ಇದೆ. ಕರೆ ಕೇಳಿದ ಕೂಡಲೇ ವ್ರತನಿಷ್ಠ ಮುಸ್ಲಿಮರು ಕೆಲಸ ನಿಲ್ಲಿಸಿ, ಮಸೀದಿಗಳತ್ತ ಹೆಜ್ಜೆ ಹಾಕುತ್ತಾರೆ. ಇವರೊಂದಿಗೆ ಪುಟ್ಟ ಮಕ್ಕಳೂ ಅವರೊಡನೆ ಸಜ್ಜಾಗುತ್ತಾರೆ.

ದೊಡ್ಡವರಿಗೆ ಪ್ರಾರ್ಥನೆಯು ನಿಷ್ಠೆಯ ವಿಷಯ. ಪುರುಷರು ಮಸೀದಿಗಳ ಕಡೆಗೆ ಹೆಜ್ಜೆ ಹಾಕುವ ವೇಳೆಯಲ್ಲೇ ಮಹಿಳೆಯರು, ಬಾಲಕಿಯರು ಮನೆಯನ್ನೇ ಮಸೀದಿ ಎಂದು ಭಾವಿಸಿ ಪ್ರಾರ್ಥನೆಗೆ ಸಜ್ಜಾಗುತ್ತಾರೆ. ಹೀಗೆ ಮುಸ್ಲಿಮರ ಮನೆ ಮತ್ತು ಮಸೀದಿಗಳು ಪ್ರಾರ್ಥನೆಯ ಮೌನದಲ್ಲಿ ಅಲ್ಲಾನನ್ನು ನೆನೆಯುತ್ತಾರೆ.

ರಂಜಾನ್ ಮಾಸವೆಂದರೆ ಬಹುಪಾಲು ಮುಸ್ಲಿಂ ಮಹಿಳೆಯರಿಗೆ ಉಪವಾಸ, ಪ್ರಾರ್ಥನೆ ಅಷ್ಟೇ ಅಲ್ಲ. ನಿತ್ಯ ಕುರಾನ್ ಪಠಣ, ವಿಶ್ರಾಂತಿ ಇಲ್ಲದ ದುಡಿಮೆ. ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ. ಪತಿ, ಮನೆಯ ಹಿರಿಯರು, ಮಕ್ಕಳಿಗಾಗಿ ಇಡೀ ದಿನ ಮೀಸಲು.

ಉಪವಾಸದ ಜತೆಗೆ ಸತತ ಕೆಲಸ. ಆದರೂ ಭಕ್ತಿ ಕುಂದಿಲ್ಲ. ಕುರಾನ್ ಕೈ ಬಿಡುವುದಿಲ್ಲ, ನಮಾಜು ತಪ್ಪುವುದಿಲ್ಲ ಎಂದು ಕುರಾನ ಸಂದೇಶ ಸಾರುತ್ತದೆ. ರಂಜಾನ್ ಮಾಸದಲ್ಲಿ ದಿನಕ್ಕೆ 5 ಬಾರಿ ಪ್ರಾರ್ಥನೆ (ನಮಾಜ್) ಮಾಡುವುದು ಕಡ್ಡಾಯ. ಮಕ್ಕಳು- ಗಂಡಸರು ಐದು ಬಾರಿ ಪ್ರಾರ್ಥಿಸಿ ಸುಮ್ಮನಾದರೆ, ಮಹಿಳೆಯರು ಪ್ರಾರ್ಥನೆ ಜತೆ ಕುರಾನ್ ಓದುತ್ತಾರೆ. ಕೆಲವರು ಇಡೀ ಮಾಸದಲ್ಲಿ ಒಂದು ಬಾರಿ ಕುರಾನ್ ಓದಿದರೆ, ಮತ್ತೆ ಕೆಲವರು ಮೂರ್ನಾಲ್ಕು ಬಾರಿ ಕುರಾನ್ ಓದುತ್ತಾರೆ. ಮನೆಯಲ್ಲಿ ಕುರಾನ್ ಸಂದೇಶ ಪ್ರತಿಧ್ವನಿಸುತ್ತದೆ.

ರಂಜಾನ್‍ದ ತತ್ವಗಳು

ಕಲ್ಮಾ (ಮನಸ್ಸಿನಲ್ಲಿ ದೇವರ ಸ್ಮರಣೆ), ನಮಾಜ್ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್ (ದಾನ) ಹಾಗೂ ಹಜ್ (ಮೆಕ್ಕಾ ಯಾತ್ರೆ) ಇವು ಇಸ್ಲಾಂ ಧರ್ಮದ ಪಂಚ ತತ್ವಗಳು. ಪ್ರತಿಯೊಬ್ಬರು ನಿತ್ಯ ಕಲ್ಮಾ ಆಚರಿಸಬೇಕು. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸಬೇಕು. ರಂಜಾನ್ ಮಾಸದಲ್ಲಿ ಉಪವಾಸ ಆಚರಿಸಬೇಕು, ತಮ್ಮ ಆದಾಯದಲ್ಲಿ ಶೇಕಡಾ 2.5ರಷ್ಟು?ಭಾಗವನ್ನು ಬಡವರಿಗೆ ದಾನ ಮಾಡಬೇಕು, ಪವಿತ್ರ ಮೆಕ್ಕಾಗೆ ಯಾತ್ರೆ ಹೋಗಬೇಕು ಎಂಬುದೇ ಈ ತತ್ವಗಳ ಸಾರಾಂಶ.

ವಿಜಯಪುರ ಜಿಲ್ಲೆ ಅಂದರೆ ತಟ್ಟನೆ ನೆನಪಾಗುವುದೆ ಇಲ್ಲಿನ ಐತಿಹಾಸಿಕ ಗುಮ್ಮಟ, ಇಬ್ರಾಹಿಂ ರೋಜಾ, ಹೀಗೆ ಹಲವು ಕಟ್ಟಡಗಳು. ಇವುಗಳ ಜೊತೆಗೆ ಇಲ್ಲಿನ ಸಂಸ್ಕøತಿಯು ಸಹ ಒಂದಾಗಿದೆ. ಜಿಲ್ಲೆಯಲ್ಲಿ ರಂಜಾನ್ ಹಬ್ಬ ಕಳೆಕಟ್ಟಿದೆ. ಇಲ್ಲಿನ ಗುಂಬಜಗಳು, ಮಿನಾರುಗಳು ಆಕರ್ಷಕವಾಗಿ ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ನಗರದ ಮಾರುಕಟ್ಟೆಗಳಲ್ಲಿ ರಂಗು ರಂಗಿನ ಹೊಸ ಬಟ್ಟೆ, ಸರ, ಒಲೆಗಳು, ವಿವಿದ ಬಗೆಯ ಚಿತ್ತಾರದಲ್ಲಿ ಮೆಹಂದಿ ಡಿಸೈನ್‍ಗಳು, ವಿಭಿನ್ನ ವಿನ್ಯಾಸದ ಚಪ್ಪಲಿಗಳು ಲಗ್ಗೆ ಇಟ್ಟಿವೆ. ಇವುಗಳ ಜೊತೆಗೆ ರಂಜಾನ್ ಹಬ್ಬದಲ್ಲಿ ಮಾಡುವ ವಿಶೇಷವಾಗಿ ಮಾಡುವ ಸುರಕುಂಬದ ಬೇಕಾದ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಪ್ರತಿವರ್ಷಕ್ಕಿಂತ ಈ ವರ್ಷವು ದುಪ್ಪಟಾಗಿದೆ.

ಹಬ್ಬಕ್ಕೆ ವಿಶೇಷವಾಗಿ ಸುರಕುಂಬ ಎನ್ನುವ ಸಿಹಿ ಮಾಡುತ್ತಾರೆ, ಇದರ ಜೊತೆಗೆ ಮಾಸದ ಬಾಡೂಟವನ್ನು ಮಾಡುತ್ತಾರೆ. ಸುರಕುಂಬ ಮಾಡಿ ಎಲ್ಲರಿಗೂ ಹಂಚಿ ಆನಂದ ಪಡುತ್ತಾರೆ. ಆದರೆ ಈ ಸುರಕುಂಬ ಹಾಗೂ ಬಾಡೂಟ ತಯಾರಿಕೆಗೆ ಬೇಕಾದ ಡ್ರೈ ಪ್ರೂಟ್ಸ್, ಮಸಾಲೆ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರೀವೆ. ಪ್ರತಿ ವರ್ಷಕ್ಕಿಂತಲೂ ಈ ವರ್ಷವೂ ಎಲ್ಲಾ ಪದಾರ್ಥಗಳು 200 ರಿಂದ 300 ರೂ.ಗಳ ವರೆಗೆ ಏರೀಕೆಯಾಗಿವೆ. ಈ ಖಾದ್ಯಗಳ ತಯಾರಿಕೆಗೆ ಬೇಕಾದ ಕಾಜು, ಬದಾಮಿ, ಚಾರುಳ್ಳಿ, ಅಕ್ರೋಟ್, ಫಿಸ್ತಾ, ಕೇರಬೀಜ, ಒಣದ್ರಾಕ್ಷಿ, ಕಾರೀಕ, ಗಸಗಸೆ, ಜಾಜಿಕಾಯಿ, ಯಾಲಕ್ಕಿ, ಕಲ್ಲಗಡಿ ಬೀಜಹೀಗೆ ಅನೇಕ ವಸ್ತುಗಳು ದರದಲ್ಲಿ ವ್ಯತ್ಯಾಸವಾಗಿವೆ. ಆದರೆ ಚಕ್ಕೆ, ಲವಂಗ, ಮಸಾಲೆ ಎಲೆ, ಇವುಗಳ ದರದಲ್ಲಿ ವ್ಯತ್ಯಾಸವಿಲ್ಲ.

ಸಾಮಗ್ರಿಗಳ ಬೆಲೆ ಕೆ.ಜಿಗಳಲ್ಲಿ

ಕಾಜು-700ರೂ, ಬದಾಮಿ-700, ಚಾರುಳ್ಳಿ-870 ರಿಂದ 900ರೂ, ಅಕ್ರೋಟ್-800ರೂ, ಫಿಸ್ತಾ-1700ರೂ, ಕೇರಬೀಜ-500ರೂ, ಒಣದ್ರಾಕ್ಷಿ-200ರೂ, ಕಾರೀಕ-200ರೂ, ಗಸಗಸೆ-800ರೂ, ಜಾಜಿಕಾಯಿ-700ರೂ, ಯಾಲಕ್ಕಿ-2500 ರಿಂದ 3000ರೂ, ಕಲ್ಲಂಗಡಿ ಬೀಜ-200ರೂ. ಇದೆಲ್ಲವು ಪ್ರಸ್ತುತ ದಿನದ ಪದಾರ್ಥಗಳ ಬೆಲೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 200ರಿಂದ 300ರೂ ವರೆಗೆ ದರ ಹೆಚ್ಚಳವಾಗಿದೆ. ಎಲಕ್ಕಿ ಮಾತ್ರ ಕಳೆದ ವರ್ಷದಲ್ಲಿ 800 ರಿಂದ 1000ರೂ.ಗಳ ವರೆಗೆ ಇದ್ದ ಬೆಲೆ ಒಮ್ಮೆಲೆ 2500ರಿಂದ 3000ರೂ.ಗೆ ಏರಿಕೆಯಾಗಿದೆ. ಈ ವರ್ಷ ಎಲಕ್ಕಿ ಬೆಳೆಗಾರರು ಬಂಪರ್ ಜಾಕ್‍ಪಾಟ್ ಹೊಡೆಯಲ್ಲಿದ್ದಾರೆ.

ಗಾಂಧಿ ಬಜಾರದಲ್ಲಿ ಹಲವು ವರ್ಷಗಳಿಂದ ಕೇವಲ 10ದಿನ ಅಥವಾ ವಾರದ ಮಟ್ಟಿಗೆ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ಮಾತನಾಡಿಸಿದಾಗ ಅವರ ಪ್ರಕಾರ ಈ ವರ್ಷವು ಪ್ರತಿ ವರ್ಷಗಿಂತಲೂ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ದ್ವೀಗುಣಗೊಂಡಿದೆ. ಆದರೂ ಸಹ ವ್ಯಾಪಾರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಗಳು ಇಲ್ಲ. ಗ್ರಾಹಕರು ಉತ್ಸಾಹದಿಂದಲೆ ಖರೀದಿಸುತ್ತಿದ್ದಾರೆ.

ಪ್ರತಿವರ್ಷವು ಅಂಗಡಿಗಳನ್ನು ಹಾಕಲು 15ದಿನಗಳ ಮುಂಚಿತವಾಗಿಯೇ ಅನುಮತಿ ನೀಡುತ್ತಿದ್ದರು, ಆದರೆ ಈ ವರ್ಷ 10ರಿಂದ 8ದಿನಗಳವರೆಗೆ ಮಾತ್ರ ಅನುಮತಿ ನೀಡಿದ್ದಾರೆ. ಸುಮಾರು 2.50 ಲಕ್ಷದವರೆಗೆ ಬಂಡವಾಳ ಹಾಕಿ ಎಲ್ಲಾ ಪದಾರ್ಥಗಳನ್ನು ಬಾಂಬೆ ಹಾಗೂ ವಿಜಯಪುರದಿಂದ ಖರೀದಿಸಿದ್ದಾರೆ. ಇದರಿಂದ ಸುಮಾರು 50 ರಿಂದ 60ಸಾವಿರ ರೂ.ಗಳ ಲಾಭ ಪಡೆಯುವ ನೀರಿಯಲ್ಲಿ ವ್ಯಾಪಾರಿಗಳು ಇದ್ದಾರೆ.

ಅಭಿಪ್ರಾಯ

  • ನಾನು ಸಿಂದಗಿ ತಾಲ್ಲೂಕಿನ ಜಾಳವಾದ ಗ್ರಾಮದವರು. ನಾನು ಸುಮಾರು 30ವರ್ಷಗಳಿಂದ ನಗರದ ಗಾಂಧಿ ಬಜಾರದಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ನಮಗೆ ಗ್ರಾಹಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ನನಗೆ ಸುಮಾರು ಜನರು ತುಂಬಾ ಆತ್ಮೀಯರು ಹಾಗೂ ಕಾಯಂ ಗ್ರಾಹಕರು ಆಗಿದ್ದಾರೆ. ಈ ವರ್ಷ 2ಲಕ್ಷ ಬಂಡವಾಳ ಹಾಕಿದ್ದೇನೆ. ಈವರ್ಷ ತಡವಾಗಿ ವ್ಯಾಪಾರ ಪ್ರಾರಂಭವಾಗಿದೆ. ಹಾಗಾಗಿ ಲಾಭದ ನಿರೀಕ್ಷೆವು ಕಡಿಮೆ ಪ್ರಮಾಣದಲ್ಲಿದೆ ಹಾಗಾಗಿ ವ್ಯಾಪಾರ ಯಾವ ರೀತಿಯಲ್ಲಿ ಆಗುವುದು ಅಂತ ಕಾದು ನೋಡಬೇಕಾಗಿದೆ. | ಸುರೇಶ. ಮಲ್ಲಪ್ಪ. ದೊಡ್ಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.

54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

Published

on

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.

ಬೆಂಗಳೂರಿನ #NativeCooks ಫುಡ್‌ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್‌ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್‌ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.

ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್‌ ಕುಕ್ಸ್‌ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್‌ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್.‌ ವೆಜ್‌ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್‌ ಊಟವನ್ನು 135 ರೂಪಾಯಿಗೆ ಹಾಗೂ ಎಕ್‌ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ23 hours ago

ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೇಲೋಶಿಪ್ ಅಥವಾ ವಿದ್ಯಾರ್ಥಿವೇತನಕ್ಕೆ ಅನ್‍ಲೈನ್ ಮೂಲಕ ಅರ್ಜಿ...

ದಿನದ ಸುದ್ದಿ23 hours ago

ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

ಸುದ್ದಿದಿನ,ದಾವಣಗೆರೆ:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 12 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್...

ದಿನದ ಸುದ್ದಿ23 hours ago

ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ...

ದಿನದ ಸುದ್ದಿ4 days ago

ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ

ಸುದ್ದಿದಿನ,ಬಳ್ಳಾರಿ:ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಹಿಳಾ ಆಯವ್ಯಯ ಹಾಗೂ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಸ್ನಾತಕೋತ್ತರ ಪದವೀಧರರಿಗೆ...

ದಿನದ ಸುದ್ದಿ7 days ago

ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಯುವ ಚೈತನ್ಯ ಕಾರ್ಯಕ್ರಮದಡಿ ಕ್ರೀಡಾ ಕಿಟ್‍ಗಳನ್ನು ಸರಬರಾಜು ಮಾಡಲು ಯುವಕ, ಯುವತಿಯರ ಸಂಘಗಳಿಂದ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್...

ದಿನದ ಸುದ್ದಿ1 week ago

ಎಂಪೈರ್ ಟ್ರೇಡಿಂಗ್ ಕಂಪನಿಯಲ್ಲಿ ಹಣವನ್ನು ತೊಡಗಿಸಿ ಮೋಸ : ದೂರು ದಾಖಲು

ಸುದ್ದಿದಿನ,ದಾವಣಗೆರೆ:ದಾವಣಗೆರೆ ನಗರದ ಡಿಸಿಎಂ ಲೇಔಟಿನ ಎಂಎಸ್‍ಎಂ ಪ್ಲಾಜಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನ್‍ಲೈನ್ ರಿಂಗ್ ವ್ಯವಹಾರ ನಡೆಸಲು ತೆರೆದಿರುವ ಎಂಪೈರ್ ಟ್ರೇಡಿಂಗ್ ಕಂಪನಿ ತೆರೆದುಕೊಂಡು ಸಾರ್ವಜನಿಕರಿಂದ ಹಣವನ್ನು ಆರೋಪಿತರಾದ...

ದಿನದ ಸುದ್ದಿ2 weeks ago

ಡ್ರಗ್ಸ್ ಕತ್ತಲೆ ಪ್ರಪಂಚ, ಈಗಿನ ಯುವ ಸಮೂಹ ಅರಿತು ದೂರವಿರಬೇಕು : ಐಜಿ ಡಾ: ರವಿಕಾಂತೇಗೌಡ

ಸುದ್ದಿದಿನ,ದಾವಣಗೆರೆ:ಡಗ್ಸ್ ಕತ್ತಲ ಪ್ರಪಂಚ, ಈ ಜಾಲದ ಬಗ್ಗೆ ಅರಿತು ಯುವ ಸಮೂಹ ದೂರವಿರಬೇಕೆಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ.ಬಿ.ಆರ್ ರವಿಕಾಂತೇಗೌಡ ವಿದ್ಯಾರ್ಥಿಗಳಿಗೆ ತಿಳಿಸಿದರು. ಗುರುವಾರ(ಜೂನ್.26) ರಂದು...

ದಿನದ ಸುದ್ದಿ2 weeks ago

ಮಾದಕ ವಸ್ತುಗಳ ಸಾಗಣೆ ತಡೆಗೆ ಸ್ಕ್ಯಾನರ್ ಅಳವಡಿಕೆಗೆ ಚಿಂತನೆ : ನ್ಯಾಯಾಧೀಶೆ ವೇಲಾ ಡಿ.ಕೆ

ಸುದ್ದಿದಿನ,ದಾವಣಗೆರೆ:ಜಾಗತಿಕವಾಗಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದಾಗಿದ್ದು ಯುವ ಸಂಪತ್ತನ್ನು ಕಾಪಾಡಿಕೊಳ್ಳಲು ಮಾದಕ ವಸ್ತುಗಳಿಂದ ದೂರವಿರಲು ಇದರ ಸಾಗಾಟ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ...

ದಿನದ ಸುದ್ದಿ2 weeks ago

ಪೋನ್ – ಇನ್ ಕಾರ್ಯಕ್ರಮದಲ್ಲಿ‌ ಎಸ್ ಪಿ ಉಮಾ‌ ಪ್ರಶಾಂತ್ ; ನೇರ ಸಂವಾದಲ್ಲಿ ನೀವೂ ಪಾಲ್ಗೊಳ್ಳಿ

ಸುದ್ದಿದಿನ,ದಾವಣಗೆರೆ:ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅವರು ನಾಳೆ ಪೋನ್ –ಇನ್ ಕಾರ್ಯಕ್ರಮದ ಮೂಲಕ ನೇರಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆಯನ್ನು...

ದಿನದ ಸುದ್ದಿ2 weeks ago

ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ

ಸುದ್ದಿದಿನ,ದಾವಣಗೆರೆ:ದಾವಣಗೆರೆಯ ಕೆ.ಆರ್. ರಸ್ತೆಯಲ್ಲಿರುವ ಎಸ್.ಎಸ್. ಜನರಲ್ ಆಸ್ಪತ್ರೆ, ದಾವಣಗೆರೆ ದಕ್ಷಿಣದ ಜನರಿಗೆ, ವಿಶೇಷವಾಗಿ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಕೈಗೆಟುಕುವ, ಸುಲಭವಾಗಿ ಸಿಗುವ ಆರೋಗ್ಯ ಸೇವೆಯನ್ನು ಒದಗಿಸಲು...

Trending