Connect with us

ದಿನದ ಸುದ್ದಿ

ಶಾಮನೂರರಿಗೆ ಕೇವಲ 92, ಉತ್ಸಾಹ ಕುಂದಿಲ್ಲ : ಜೆ.ಆರ್.ಷಣ್ಮುಖಪ್ಪ

Published

on

ಸುದ್ದಿದಿನ, ಕುಕ್ಕುವಾಡ : ಶಾಸಕ ಶಾಮನೂರು ಶಿವಶಂಕರಪ್ಪಗೆ ವಯಸ್ಸು 92 ಆಗಿರಬಹುದು ಆದರೆ ಉತ್ಸಾಹ ಕುಂದಿಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ಹೇಳಿದರು.

ಕುಕ್ಕುವಾಡದ ಸಕ್ಕರೆ ಕಾರ್ಖಾನೆಯಲ್ಲಿ ಸ್ವಸಹಾಯ ಸಂಘಗಳ ಬಹಿರಂಗ ಸಭೆಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಿ ನಂತರ ಮಾತನಾಡಿ, ಎಲ್ಲರೂ ಶಾಮನೂರು ಶಿವಶಂಕರಪ್ಪಗೆ ವಯಸ್ಸಾಗಿದೆ ಎನ್ನುತ್ತಾರೆ. ಆದರೆ ಅವರು ಈಗಲೂ ಬೆಳಗ್ಗೆ ಎದ್ದು ಮತ ಪ್ರಚಾರಕ್ಕೆ ಹೋಗುತ್ತಾರೆ. ಈಗಾಗಲೇ 25 ವರ್ಷ ಆಡಳಿತ ನಡೆಸಿದ್ದಾರೆ. ಇದು ಅವರಿಗೆ 6 ನೇ ಚುನಾವಣೆಯಾಗಿದ್ದು, ಜನರ ಬಳಿ ಹೋಗುತ್ತಾರೆ. ಅವರನ್ನು ಗೆಲ್ಲಿಸಲು ಇಡೀ ಕುಟುಂಬ ಓಡಾಟ ನಡೆಸಿದೆ. ಬಿಜೆಪಿ ಸರಕಾರ ಇದ್ದಾಗ ದಾವಣಗೆರೆ ಜನರಿಗೆ ವ್ಯಾಕ್ಸಿನ್ ನೀಡಲಿಲ್ಲ. ಈ ಸಂದರ್ಭದಲ್ಲಿ 6 ಕೋಟಿ ವೌಲ್ಯದ ವ್ಯಾಕ್ಸಿನ್ ನನ್ನು ಜನರಿಗೆ ಉಚಿತವಾಗಿ ನೀಡಿ ಜನರ ಜೀವ ಉಳಿಸಿದರು ಎಂದರು.

ಈಗಾಗಲೇ ಬಿಜೆಪಿ ಸರಕಾರ ನಮ್ಮ ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡಲು ಹೊರಟಿದೆ. ನಮ್ಮ ರೈತರ ಶ್ರಮ ನಂದಿನಿ ಹಾಲಿನಲ್ಲಿದೆ. ಈಗಾಗಲೇ ಬ್ಯಾಂಕ್‌ನ್ನು ವಿಲೀನಗೊಳಿಸಿದ್ದ ಕಾರಣ ಸಾಕಷ್ಟು ಜನರು ನಿರುದ್ಯೋಗಿಗಳು ಆಗಿದ್ದಾರೆ. ಬರೋಡ ಬ್ಯಾಂಕ್‌ನ್ನು ರಾಜ್ಯಕ್ಕೆ ತರುವ ಮೂಲಕ ಮೊದಲ ಭಾಗವಾಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ದರಿಂದ ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿದರು.

ಕುಕ್ಕುವಾಡದ ಎಂಡಿ ಎಸ್.ಎಸ್.ಗಣೇಶ್, ಪ್ರಣಾಳಿಕೆಯನ್ನು ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದುಘಿ, ಕಾಂಗ್ರೆಸ್ 10 ರೂ.ನೀಡಿದ್ರೆಘಿ, ಬಿಜೆಪಿ ಎಂಟಾಣಿ ನೀಡಿದೆ. ಮೂಲ ಸೌಕರ್ಯಗಳನ್ನು ಬಗೆಹರಿಸಲಾಗುವುದು. ಇನ್ನು ಸ್ವಸಹಾಯ ಸಂಘಗಳು ಸಾಲ ಪಡೆದು ಆರ್ಥಿಕವಾಗಿ ಸಭಲಗೊಳ್ಳಿಘಿ. ಆದರೆ ಬಡ್ಡಿಗೆ ಬಿಡಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಿಮ್ಮ ಸಮಸ್ಯೆಗಳಿಗೆ ಬ್ರೇಕ್ ಬೀಳಲಿದೆ ಎಂದರು.

ಶಾಮನೂರು ಸೊಸೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಾನು ನಮ್ಮ ಮಾವನರಿಗೆ 92 ವರ್ಷ ಆದರೆ ಅವರ ಅರ್ಧದಷ್ಟು ವಯಸ್ಸು ನನಾಗಿಲ್ಲಘಿ. ಅವರಿಗೆ ಅನುಭವ ಹೆಚ್ಚುಘಿ, ಮನೆಗೆ ಬಂದವರ ಸಂಕಷ್ಟವನ್ನು ಈಗಲೂ ಕೇಳುತ್ತಾರೆ. ಕಷ್ಟ ಬಂದಾಗ ಅವರ ಸಮಸ್ಯೆ ಬಗೆಹರಿಸುತ್ತಾರೆ. ಹೆರಿಗೆ, ಡಯಾಲಿಸಿಸ್, ಕಣ್ಣಿನಪೊರೆ ತೆಗೆಸಿಕೊಳ್ಳುವ ಬಡವರಿಗೆ ಉಚಿತ ಚಿಕಿತ್ಸೆಯನ್ನು ಶಾಮನೂರು ಶಿವಶಂಕರಪ್ಪ ಮಾಡಿದ್ದಾರೆ ಎಂದರು.

ಎಸ್‌ಎಸ್ ಗಣೇಶ್ ಸೊಸೆ ಸ್ವಾತಿ ಮಾತನಾಡಿ, ನಾನು ಈ ಮನೆಗೆ ಬಂದು ಐದು ವರ್ಷವಾಯಿತು..ಶಾಮನೂರು ಶಿವಶಂಕರಪ್ಪ ಜಿಲ್ಲೆಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿದೆ. ಕ್ಷೇತ್ರ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾಗಿದೆ. ಅವರಿಗೆ ವಯಸ್ಸಾಗಿಲ್ಲ, ಈಗಲೂ ಚಿರ ಯುವಕನಂತೆ ಓಡಾಡುತ್ತಾರೆ. ಆದ್ದರಿಂದ ಉತ್ತರದಲ್ಲಿ ಎಸ್‌ಎಸ್ ಮಲ್ಲಿಕಾರ್ಜುನ್, ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೇಖಾ ಗಣೇಶ್, ಅಭಿಜಿತ್, ಹದಡಿ ನಿಂಗಪ್ಪ, ಕುಕ್ಕುವಾಡ ಮಲ್ಲೇಶ್, ಬೇತೂರು ರಾಜಣ್ಣ ಇದ್ದರು. ಸುಮಾರು ಎಂಟನೂರುಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳೆಯರು ಇದ್ದರು. ಕಾಂಗ್ರೆಸ್‌ನಾಯಕಿ ಪ್ರಭಾ ಮಲ್ಲಿಕಾರ್ಜುನ್ ಮಹಿಳೆಯರ ಜತೆ ಕೆಲ ಕಾಲ ಸಂವಾದ ನಡೆಸಿದರು.

ಬಾರ್ ಕ್ಲೋಸ್ ಮಾಡಿ

  • ಹಳ್ಳಿಗಳಲ್ಲಿ ಬಾರ್‌ಗಳು ಇದ್ದು, ದುಡಿಮೆ ಮಾಡಿದ ಹಣವನ್ನು ಎಣ್ಣೆ ಅಂಗಡಿಗೆ ಹಾಕುತ್ತಿದ್ದಾರೆ, ಆದ್ದರಿಂದ ಬಾರ್ ಕ್ಲೋಸ್ ಮಾಡ್ಸಿ, ಮನೆ, ನಿವೇಶನ ಕೊಡಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಮಹಿಳೆಯರು ಹೇಳಿಕೊಂಡರು. ಈ ಬಗ್ಗೆ ಗಮನಹರಿಸುವುದಾಗಿ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಮೂವರು ಸೊಸೆಯರಿಂದ ಮತ ಪ್ರಚಾರ

ಯಶಸ್ವಿ ಪುರಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದಕ್ಕೆ ಶಾಮನೂರು ಕುಟುಂಬದ ಮಹಿಳೆಯರು ಸಾಕ್ಷಿಯಾದರು. ಮಾವನನ್ನು ಗೆಲ್ಲಿಸಲು ಇಡೀ ಊರು ಸುತ್ತುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಹಿಡಿದು ಮತಪ್ರಚಾರ ಮಾಡುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ. ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ಯಾವ ನೈತಿಕತೆಯು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಹೆಚ್ಚಿಸಿರುವ ಹಾಲಿನ ದರದಿಂದ ರೈತರಿಗೆ ಲಾಭ ಹೋಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಯಾಗುತ್ತದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಒಂದು ಬ್ಯಾರಲ್ ಕಚ್ಚಾತೈಲಕ್ಕೆ 120 ಡಾಲರ್ ಇತ್ತು, ಈಗ 65 ಡಾಲರ್ ಗೆ ಇಳಿದಿದೆ. ಅಂದು ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಇಂದು 800 ರೂ. ಮೀರಿದೆ. ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿರುವ ಬಗ್ಗೆ ಜನರು ಪ್ರಶ್ನೆ ಕೇಳಬೇಕಿದೆ.

ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಬಿಜೆಪಿಯವರ ಆರೋಪ ಅವರಿಗೇ ನಾಚಿಕೆಗೇಡಿನದು. ಬಿಜೆಪಿಯವರ ಕಾಲದಲ್ಲಿ ಅನುದಾನವಿಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಈಗ ನಮಗೆ ಪಾಠ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಮ್ಮ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ. ಇದು ಸರ್ಕಾರವೊಂದರ ಆರ್ಥಿಕ ದಿವಾಳಿತನವೇ? ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 53,11,000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೂ ಹೆಚ್ಚಾಗಿದೆ. ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಅಲ್ವಾ?

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರುದ್ಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಸರ್ಕಾರವಾಗಿ ಅವಶ್ಯಕ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆದಿಲ್ಲ, ಹಲವು ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ ಅನಿವಾರ್ಯತೆಯಿತ್ತು.

ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂಬ ಬಿಜೆಪಿ ಆರೋಪ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಕೂಡಿದೆ. ಸಮೀಕ್ಷೆಯನ್ನು ಶೇ. 95 ರಷ್ಟು ನಿಖರವಾಗಿ ನಡೆಸಲಾಗಿದೆ. ಶೇ. 98 ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ.96 ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಸುಮಾರು 1,36,000 ಜನ ಶಿಕ್ಷಕರಿದ್ದರು. ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ.

ಒಳಮೀಸಲಾತಿ ಜಾರಿಗೆ ತರಲು ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ, ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್.ಸಿ ಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ.

ನಮ್ಮ ಸರ್ಕಾರ ನವದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಬೆಳಗಾವಿಯಲ್ಲಿ ಭವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಮಹಾರಾಷ್ಟ್ರದವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

Published

on

ಸುದ್ದಿದಿನಡೆಸ್ಕ್:ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ. ಇಂದು ಧಾರವಾಡ, ತುಮಕೂರಿನಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಇದೇ 16ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ನೀಲಾನಹಳ್ಳಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ದಿನದ ಎನ್.ಎಸ್.ಎಸ್.ಶಿಬಿರದ ಕಾರ್ಯಕ್ರಮ ಗುರುವಾರ (ಏ.10)ರಂದು ಜರುಗಿತು.

2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಪ್ರೊ. ಮಂಜುನಾಥ ಜಿ. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಪದವಿ ಕಾಲೇಜ್ ಹರಿಹರ, ಇವರು
“ಸಂವಹನ ಕೌಶಲ್ಯ ಹಾಗೂ ಎನ್. ಎಸ್. ಎಸ್. ಮತ್ತು ಯುವಜನತೆ” ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಧುಶ್ರೀನಿವಾಸ ಟಿ., ಕೆ.ಸಿ.ಎಸ್. ಸಹಕಾರ ಸಂಘಗಳ ಉಪ ನಿಬಂಧಕರು, ದಾವಣಗೆರೆ ಜಿಲ್ಲೆ, ಸಹಕಾರ ಸಂಘಗಳ ಮಹತ್ವ ಬಗ್ಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳ ತಿಳಿಸಿದರು.

ಪ್ರೊ. ಮಾರುತಿ ಶಾಲೆಮನೆ, ಕಿರುಚಿತ್ರ ನಿರ್ದೇಶಕರು ಮತ್ತು ಕನ್ನಡ ಉಪನ್ಯಾಸಕರ ವಿಷಯ : ‘ಮಾನವೀಯತೆಯ ಮಹಾವೀರ’ ಕುರಿತು ಮಾತನಾಡಿದರು.

ನಂತರ ಉಪನ್ಯಾಸದ ಕಾರ್ಯಕ್ರಮವನ್ನು ಪ್ರೊ. ಸೌಮ್ಯ ಬಿ., ಎನ್.ಎಸ್.ಎಸ್ ಅಧಿಕಾರಿಗಳು, ಉಪನ್ಯಾಸಕರು, ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ದಾವಣಗೆರೆ. ಇವರು
ವಿಷಯ : ‘ಮಹಿಳೆ ಮತ್ತು ಸ್ವಾವಲಂಬನೆ’ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇಖಾ ಹೆಚ್.ಜಿ., ವಿಭಾಗದ ಮುಖ್ಯಸ್ಥರು ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ವಿಭಾಗ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಡಿ.ಆರ್.ವಿಶ್ವನಾಥ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಹೊನ್ನಾಳಿ.
ನೀಲಾನಹಳ್ಳಿ ಗ್ರಾಮದ ಮುಖಂಡರಾದ ಸುಭಾಷ್ ಜೆ, ವಿರುಪಾಕ್ಷಪ್ಪ. ಕೆ. ಎನ್. ಡಿ.ರಾಜಪ್ಪ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ವನ್ನು ಶಿಬಿರಾರ್ಥಿಗಳಾದ ಶ್ರೇಯಾ ಪ್ರಾರ್ಥಿಸಿದರು, ನಿರೂಪಣೆಯನ್ನು ನೇಹ, ಸ್ವಾಗತವನ್ನು ಸುಚಿತ್ರ ಹಾಗೂ ವಂದನಾರ್ಪಣೆಯನ್ನು ಆಕಾಶ್ ಮಾಡಿದರು.

ಎನ್.ಎಸ್ ಎಸ್. ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊಫೆಸರ್ ಅಣ್ಣೇಶ್. ಪಿ ಮತ್ತು ಶ್ರೀಮತಿ ಅನುಷಾ. ಎಸ್. ಹೆಚ್. ಕಾರ್ಯಕ್ರಮವನ್ನು ನಿರ್ವಹಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಅಂಕಣ21 hours ago

ಕವಿತೆ | ಇಷ್ಟಂತೂ ಹೇಳಬಲ್ಲೆ..!

ರಂಗಮ್ಮ ಹೊದೇಕಲ್, ತುಮಕೂರು ನಾವು ಗುಡಿಸಲಿನಲ್ಲಿ ಹುಟ್ಟಿ ಅವ್ವನೆದೆಯ ಹಾಲು ಕುಡಿದು ಗೋಣಿತಾಟಿನ ಮೇಲೆ ಮಲಗಿ ನಕ್ಷತ್ರ ಎಣಿಸಿದವರು! ಚೀಕಲು ರಾಗಿಯ ಅಂಬಲಿ ಕುಡಿದು ತಂಗಳು ಹಿಟ್ಟಿಗೆ...

ದಿನದ ಸುದ್ದಿ1 day ago

ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಏರಲು ಕಾರಣ ಕೇಂದ್ರ ಸರ್ಕಾರ. ಕೇಂದ್ರದ ಬಿಜೆಪಿಯ ತಪ್ಪು ನೀತಿಗಳಿಂದಾಗಿ ಇಡೀ ದೇಶದಲ್ಲಿ ಬೆಲೆ ಏರಿಕೆಯಾಗಿದೆ....

ದಿನದ ಸುದ್ದಿ1 day ago

ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ಸುದ್ದಿದಿನಡೆಸ್ಕ್:ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ. ಇಂದು...

ದಿನದ ಸುದ್ದಿ2 days ago

ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

ಸುದ್ದಿದಿನ,ದಾವಣಗೆರೆ:ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಮತ್ತು ನೀಲಾನಹಳ್ಳಿ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ದಿನದ ಎನ್.ಎಸ್.ಎಸ್.ಶಿಬಿರದ ಕಾರ್ಯಕ್ರಮ ಗುರುವಾರ (ಏ.10)ರಂದು ಜರುಗಿತು. 2024-25ನೇ ಸಾಲಿನ ರಾಷ್ಟ್ರೀಯ...

ದಿನದ ಸುದ್ದಿ2 days ago

ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕತೆ ಅಡಗಿದೆ : ಪ್ರೊ. ಮೋನಿಕಾ ರಂಜನ್

ಸುದ್ದಿದಿನ,ಬಳ್ಳಾರಿ:ಜಾನಪದ ಆಚರಣೆಯಲ್ಲಿ ವೈಜ್ಞಾನಿಕ ಅಂಶಗಳು ಅಡಗಿದ್ದು, ಜನಪದ ಕಲೆಗಳು ಮನಸಿಗೆ ಮುದ ನೀಡುತ್ತವೆ ಎಂದು ಪ್ರಾಂಶುಪಾಲರಾದ ಪ್ರೊ.‌ಮೋನಿಕಾ ರಂಜನ್ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್...

ದಿನದ ಸುದ್ದಿ2 days ago

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚಿಸಿದ ಅಬಕಾರಿ ಸುಂಕವನ್ನು ರದ್ದುಗೊಳಿಸಿ : ಯುವ ಕಾಂಗ್ರೆಸ್ ಅಗ್ರಹ

ಸುದ್ದಿದಿನ,ಬಳ್ಳಾರಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೇಕಾಬಿಟ್ಟಿಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಾ ಬರುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಸಾಮಾನ್ಯವಾಗಿ ಹೆಚ್ಚಳವಾಗುತ್ತಿದ್ದು,...

ದಿನದ ಸುದ್ದಿ2 days ago

ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್‍ ಸಮುದಾಯ ಭವನ ಶಂಕುಸ್ಥಾಪನೆ

ಸುದ್ದಿದಿನ,ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 14 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಸಕ್ರ್ಯೂಟ್ ಹೌಸ್ ಪಕ್ಕ...

ದಿನದ ಸುದ್ದಿ2 days ago

ದಾವಣಗೆರೆ | ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು

ಸುದ್ದಿದಿನ,ದಾವಣಗೆರೆ:ಸಿಇಟಿ-2025 ರ ಪರೀಕ್ಷೆಯು ಏಪ್ರಿಲ್ 16 ಮತ್ತು 17 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆಯಲ್ಲಿ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ...

ದಿನದ ಸುದ್ದಿ2 days ago

ಕೊಂಕಣ ರೈಲ್ವೆ, ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ ಮತ್ತು ಭಾರತೀಯ ರೈಲ್ವೆ ವಿಲೀನ ಪ್ರಯತ್ನ ಪ್ರಗತಿಯಲ್ಲಿ

ಸುದ್ದಿದಿನಡೆಸ್ಕ್:ಕೊಂಕಣ ರೈಲ್ವೆ ಹಾಗೂ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ – HMRDCL ಅನ್ನು ಭಾರತೀಯ ರೈಲ್ವೆ ಜೊತೆ ವಿಲೀನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಈಗಾಗಲೇ ಮಾತುಕತೆ...

ದಿನದ ಸುದ್ದಿ2 days ago

ಗುತ್ತಿಗೆದಾರರಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತರಿಗೆ ದೂರು ನೀಡಿ : ಡಿಸಿಎಂ ಡಿ.ಕೆ. ಶಿವಕುಮಾರ್

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಕಮಿಷನ್ ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

Trending