ದಿನದ ಸುದ್ದಿ
ಶಿವಮೊಗ್ಗದ ‘ಸೆಂಟ್ರಲ್ ಜೈಲ್’ ಬಗ್ಗೆ ನಿಮಗಿಷ್ಟು ತಿಳಿದಿರಲಿ..!
- ಸಂಧ್ಯಾ ಸಿಹಿಮೊಗೆ
ಒಂದೂವರೆ ಶತಮಾನಗಳ ಕಾಲ ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ರೈತರನ್ನು ಕೊಡಿಟ್ಟು ಗೆಲ್ಲಿಗೇರಿಸಿದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದು ಶಿವಮೊಗ್ಗ ನಗರ ಜಿಲ್ಲಾ ಕೇಂದ್ರ ಕಾರಾಗೃಹವು ಈಗ ಶಾಶ್ವತವಾಗಿ ಇತಿಹಾಸ ಪುಟ ಸೇರಿದೆ.
ಜಿಲ್ಲಾ ಕೇಂದ್ರ ಕಾರಾಗೃಹ ಕಟ್ಟಡವು ಈಗಾಗಲೇ ನೂತನ ಕಟ್ಟಡಕ್ಕೆ ಸ್ಥಳಾಂತರಕೊಂಡಿದೆ. ಜಿಲ್ಲಾ ಕಾರಾಗೃಹವು ಕೇಂದ್ರ ಕಾರಾಗೃಹವಾಗಿ ಮೇಲ್ದರ್ಜೆಗೇರಿದ್ದು ರಾಜ್ಯದಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ಒಳಗೊಂಡ ಕಾರಾಗೃಹ ಎನಿಸಿಕೊಂಡಿದೆ.
ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಹಿಂಬದಿಯಲ್ಲಿ ಓತಿಘಟ್ಟದ ಬಳಿ 62.02 ಎಕರೆ ಪ್ರದೇಶದಲ್ಲಿ 83 ಕೋಟಿ ರೂ ವೆಚ್ಚದಲ್ಲಿ ದಕ್ಷಿಣ ಕೊರಿಯಾ ಮಾದರಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಕಾರಾಗೃಹವನ್ನು ನಿರ್ಮಿಸಲಾಗಿದೆ. ಕಾರಾಗೃಹದಲ್ಲಿ ಸುಮಾರು 460 ಕೈದಿಗಳಿದ್ದಾರೆ.
ಕಣ್ಗಾವಲಿಗೆ ಎಂದೇ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳ ಅಳವಡಿಕೆ ಜೊತೆಗೆ ಬಂಧಿಖಾನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಆಟೋಮ್ಯಾಟಿಕ್ ಸೈರನ್ ಹೊಡೆಯಲು ಆರಂಭಿಸುತ್ತದೆ.
ಕಾರಾಗೃಹದಲ್ಲಿ ಇರುವಂತಹ ಕೈದಿಗಳಿಗೆ ಗ್ರಂಥಾಲಯ ವ್ಯವಸ್ಥೆ ಹಾಗೂ ಊದುಬತ್ತಿ ತಯಾರಿಸುವ ಉದ್ಯೋಗ ಕಲ್ಪಿಸುವುದರ ಜೊತೆಗೆ ಅವರು ಮಾಡಿದ ಕೆಲಸಕ್ಕೆ ಇಂತಿಷ್ಟು ವೇತನವೆಂದು ನಿಗಧಿಪಡಿಸಿದೆ. ಬಂಧಿಖಾನೆಯಲ್ಲಿ ಇರುವ ಕೈದಿಗಳಿಗೆ ದಿನಕ್ಕೆ ಮೂರು ಹೊತ್ತು ಊಟದ ಜೊತೆಗೆ ವಾರದಲ್ಲಿ ಒಂದು ದಿನ ಮಾಂಸದೂಟವೂ ನೀಡಲಾಗುತ್ತದೆ. ಹಾಗೂ ಕೈದಿಗಳು 2,000 ರೂ. ನೀಡಿದರೆ ಟಿವಿ ಮತ್ತು 500 ರೂ. ನೀಡಿದರೆ ಕೇರಂ ಬೋರ್ಡ್ ಸೇರಿದಂತೆ ಅವರಿಗೆ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಒದಗಿಸಲಾಗುವುದು.
ಸಮಾಜದ ನಡುವೆ ಇರುವ ಕಂದಕ ಕಡಿಮೆ ಮಾಡುವ ಉದ್ದೇಶದಿಂದ ಇವರಿಗೆ ಶಿಕ್ಷೆ ನೀಡುವ ಬದಲು ಮನಃಪರಿವರ್ತನೆಗೆ ಹೆಚ್ಚು ಒತ್ತು ನೀಡಲಾಗಿದೆ. ಹೀಗಾಗಿ ಪ್ರತಿವಾರವೂ ಒಂದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿರುವ ಸಜಾಬಂದಿಗಳಲ್ಲಿ ಸಾಕಷ್ಟು ಜನ ಪ್ರತಿಭಾವಂತರಿದ್ದಾರೆ. ಎಸ್‍ಎಸ್‍ಎಲ್‍ಸಿಯಿಂದ ಪದವಿ ಓದಿದವರೂ ಇದ್ದಾರೆ. ಅವರಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ನಾಟಕ, ಹಾಡುಗಾರಿಕೆ ಸೇರಿದಂತೆ ಶಿಕ್ಷಣ, ಕಲೆ, ಸಾಂಸ್ಕøತಿಕ ಕಾರ್ಯಕ್ರಗಳನ್ನು ನಡೆಸಲಾಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ನಟ ಪುನೀತ್ ರಾಜ್‍ಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಮಾದರಿಯೆಲ್ಲೇ ಕಾರಾಗೃಹದ ಸಜಾಬಂದಿಗಳಿಗೆ “ಸಾವಿರ ರೂಪಾಯಿ ಸರದಾರ” ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಾರಾಗೃಹದ ಗ್ರಂಥಾಲಯಕ್ಕೆ ಭೇಟಿ ನೀಡುವ ಸಜಾಬಂದಿಗಳ ಸಂಖ್ಯೆ ಹೆಚ್ಚಾಗಿದೆ. ವಾರದಲ್ಲಿ ಸುಮಾರು ನಾಲಕೈದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಜೈಲು ಎಂದರೆ ಸಜಾಬಂದಿಗಳು ಪಾಲಿನ ಸೆರಮನೆ. ಹೀಗಾಗಿ ತಪ್ಪು ಮಾಡಿ ಜೈಲು ಸೇರಿದವರಿಗೆ ಅಲ್ಲಿ ಶಿಕ್ಷೆ ತಪ್ಪಿದಲ್ಲ ಅನ್ನೋ ಮಾತುಗಳಿವೆ. ಆದರಿಂದ ಶಿವಮೊಗ್ಗದ ವಾರ್ತಾ ಮತ್ತು ಸಾವರ್ಜನಿಕ ಸಂಪರ್ಕ ಇಲಾಖೆಯು ಸಜಾಬಂದಿಗಳ ಮನಃಪರಿರ್ವತನೆ ಮಾಡುವ ನಿಟ್ಟಿನಲ್ಲಿ ಕಾರ್ಯಗಳನ್ನು ನಡೆಸುತ್ತಿದೆ.
ಶಿವಮೊಗ್ಗದ “ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ”ಯು ಕೇಂದ್ರ ಕಾರಾಗೃಹದ ಜೈಲು ನಿವಾಸಿಗಳಲ್ಲಿ ಜಾಗೃತಿಗಳ ಅರಿವು ಮೂಡಿಸುವ ನಿಟ್ಟಿನಲ್ಲಿ “ಬದಲಾದ ಬದುಕು”ಎಂಬ ಶೀರ್ಷಿಕೆಯಡಿಯಲ್ಲಿ ಬೀದಿನಾಟಕ ಹಾಗೂ ಜನಪದ ಗೀತೆಗಳ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅವರಲ್ಲಿ ಇರುವ ದ್ಷೇಷದ ಮನೋಭಾವನೆಯು ದೂರವಾಗುವಂತೆ ಮಾಡುವ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಹೆಮ್ಮೆಯ ವಿಷಯವಾಗಿದೆ. ಈ ರೀತಿ ಕೈದಿಗಳ ಮನಃಪರಿವರ್ತನೆ ಮಾಡುವ ಕಾರ್ಯ ನಡೆಯಬೇಕಿದೆ.
ಹೀಗೆ ಪ್ರತಿಯೊಬ್ಬರ ಜೀವನದಲ್ಲಿಯೂ ಇಂತಹದೊಂದು ಅನುಭವದ ಪಾಠ ಎಲ್ಲರಿಗೂ ಆಗಿರುತ್ತದೆ. ಆ ಅನುಭವದಿಂದ ಕಲಿತ ಪಾಠ ಬಹಳಷ್ಟು ಇರುತ್ತದೆ. “ಅಪರಾಧಗಳ ವೈಭವೀಕರಣ ಬೇಡ, ಕಾನೂನಿನ ದುರುಪಯೋಗಕ್ಕೆ ಅವರಣ ಕೂಡದೇ ಕಾನೂನನ್ನು ಗೌರವಿಸುವ ಕೆಲಸ ಮಾಡಬೇಕು. ಇದೆಲ್ಲಕ್ಕೂ ಸಾರ್ವಜನಿಕ ಜಾಗ್ರತಿಯೂ ಬೇಕು. ಮಾನವ ಹಕ್ಕು ತಿಳಿಯಿರಿ, ಕರ್ತವ್ಯವನ್ನು ಪಾಲಿಸಿರಿ”. ಆಗ ಮಾತ್ರ ಸಮಾಜದಲ್ಲಿ ಒಬ್ಬ ಉತ್ತಮ ಮಾನುಷ್ಯನಾಗಿ ಬದುಕುವುದಕ್ಕೆ ಸ್ಯಾಧ್ಯವಾಗುವುದು.
ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡಿಯೇ ಇರುತ್ತಾನೆ. ಅವನು ಹುಟ್ಟುತ್ತ ಎಷ್ಟೇ ಒಳ್ಳೆಯವನಾದರೂ ಬೆಳೆಯುತ್ತಾ ಹೋದಂತೆ ಸುತ್ತ ಮುತ್ತಲ ಪರಿಸರ, ಸ್ನೇಹಿತರ ಬಳಗ ಬೀರುವ ಪರಿಣಾಮ ತಪ್ಪು ಮಾಡುವಂತೆ ಪ್ರೇರೆಪಿಸುತ್ತದೆ. ಆತ/ಆಕೆ ತನ್ನ ನಿಯಂತ್ರಣಕ್ಕೂ ಮೀರಿದ ಮನಸ್ಥಿತಿ ಹೊಂದುತ್ತಾರೆ. ಅದು ಒಳ್ಳೆಯದೋ ಅಥವಾ ಕೆಟ್ಟದೋ ಅರಿಯದಷ್ಟೂ ಕೆಲವೂಮ್ಮೆ ಮುಂದುವರೆಯುತ್ತಾರೆ. ಒಮ್ಮೆ ಅದು ತಪ್ಪೆಂದು ತಿಳಿದರೆ ತಿದ್ದಿಕೊಳ್ಳುವ ಜಾಣರು ಹಲವರಾದರೆ ಆ ತಪ್ಪು ದಾರಿಯೇ ಒಳ್ಳೆಯದೆಂದು ಆರಿಸಿಕೊಳ್ಳುವವರು ಕೆಲವರು ಆದರಿಂದಲೇ ಬುದ್ಧಿ ಕಲಿಯುವವರು ಹಲವರು.
ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡುವ ಕೆಲಸ ಬೇಡ…! ಯುವಕರು ಸಮಾಜದಲ್ಲಿ ತೆಲೆ ಎತ್ತಿ ನಡೆಯುವ ಸತ್ಕಾರ್ಯಗಳ ಮೂಲಕ ಮಾರ್ಗದರ್ಶಿ ಜೀವನ ವಿಧಾನಗಳನ್ನು ಅಳವಡಿಸಿಕೊಂಡು ಬದುಕುವ ಮಾರ್ಗವನ್ನು ರೂಪಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಒಳ್ಳೆ ಹೆಸರು ಪಡೆದುಕೊಳ್ಳುವುಕ್ಕೆ ಹಾಗೂ ಬದುಕನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಾಜ ನಮ್ಮನ್ನು ನೋಡುವ ದೃಷ್ಠಿಕೋನವೇ ಬದಲಾಗುತ್ತದೆ.
ಅಪರಾಧಿಗಳ ಮನಪರಿವರ್ತನೆ: ದ್ವೇಷ-ಉದ್ರೇಕ ಭಾವನೆಗಳನ್ನು ನಾಶಪಡಿಸಿ ಅಪರಾಧಿಗಳ ಮನಪರಿವರ್ತನೆ ಮಾಡುವುದರ ಮೂಲಕ ಸಮಾಜದಲ್ಲಿ ಮೊದಲಿನ ಸ್ಥಿತಿಯನ್ನು ಏರ್ಪಡಿಸುವುದಕೋಸ್ಕರ ಕ್ಷಮಾದಾನವನ್ನು ನೀಡುವ ಸಂಪ್ರದಾಯ ಎಲ್ಲಾ ಕಡೆಗಳಲ್ಲೂ ಆಚರಣೆಯಲ್ಲಿವೆ.
ಕೃಪೆ : ಶಿವಮೊಗ್ಗ ವಾರ್ತಾಭವನ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ
ಸುದ್ದಿದಿನಡೆಸ್ಕ್:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನವಾದ ಇಂದು ಸಾಂಪ್ರದಾಯಿಕವಾಗಿ ಆಯುಧಪೂಜೆ ನೆರವೇರಿತು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಪೂಜೆ ನೆರವೇರಿಸಿದರು.
ಅರಮನೆ ಮುಂಭಾಗದಲ್ಲಿ ಪಟ್ಟದ ಹಸು, ಆನೆ, ಕುದುರೆ, ಒಂಟೆಗಳಿಗೆ, ಪಲ್ಲಕ್ಕಿ ಹಾಗೂ ರಾಜರ ಕಾರುಗಳಿಗೆ ಪೂಜೆ ಸಲ್ಲಿಸಿದರು. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೂ ಪೂಜೆ ನೆರವೇರಿಸಲಾಯಿತು. ದಸರಾ ವೈಭವ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದಾರೆ.
ರಾಜ್ಯಾದ್ಯಂತ ನವರಾತ್ರಿಯ 9ನೇ ದಿನವಾದ ಇಂದು ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಆಯುಧಪೂಜೆ ಮತ್ತು ದಸರಾ ಮಹೋತ್ಸವದ ಸಂಭ್ರಮ ಇಮ್ಮಡಿಗೊಂಡಿದೆ. ಆಯುಧ ಪೂಜೆಯ ಭಾಗವಾಗಿ ಬೆಳಿಗ್ಗೆಯಿಂದ ಜನರು ವಾಹನಗಳನ್ನು ತೊಳೆದು ಹೂವು, ಬಾಳೆಕಂದುಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಆಯುಧಪೂಜೆಯನ್ನು ಶ್ರಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ತಮ್ಮ ವಾಹನಗಳಿಗೆ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಕೋಲಾರ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ದಸರಾ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಯುಧ ಪೂಜೆ ಹಿನ್ನಲೆ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಆಯುಧಪೂಜೆ ಸಂಭ್ರಮ ಇಮ್ಮಡಿಗೊಂಡಿದ್ದು, ಕಾಫಿ ತೋಟಗಳಲ್ಲಿ ಮಾಲೀಕರು ತೋಟದ ಯಂತ್ರೋಪಕರಣಗಳನ್ನು ಶೃಂಗರಿಸಿ ಪೂಜೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಾವೇರಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಉದ್ಯಮಿ ರತನ್ ಟಾಟಾ ನಿಧನ; ಗಣ್ಯರಿಂದ ಸಂತಾಪ
ಸುದ್ದಿದಿನಡೆಸ್ಕ್:ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮತ್ತು ಉದ್ಯಮಿಗಳು ಸಂತಾಪ ಸೂಚಿಸಿದ್ದಾರೆ.
ಟಾಟಾ ಸಮೂಹ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದ ಅವರು, ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಬೆಳಗ್ಗೆ ಅವರ ಆರೋಗ್ಯಸ್ಥಿತಿಯಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಕಾರಣ, ಅವರನ್ನು ಮುಂಬೈಗೆ ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರು ನಿಧನರಾದರು.
ರತನ್ ಟಾಟಾ ಅವರ ನಿಧನದಿಂದ, ಭಾರತವು ಸಾಂಸ್ಥಿಕ ಬೆಳವಣಿಗೆಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಮತ್ತು ಶ್ರೇಷ್ಠತೆಯನ್ನು ನೀತಿಯೊಂದಿಗೆ ಸಂಯೋಜಿಸಿದ ವ್ಯಕ್ತಿಯನ್ನು ಕಳೆದುಕೊಂಡಿದೆ. ರತನ್ ಟಾಟಾ ಅವರು ಶ್ರೇಷ್ಠ ಟಾಟಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಹೆಚ್ಚು ಪ್ರಭಾವಶಾಲಿ ಜಾಗತಿಕ ಉಪಸ್ಥಿತಿಯನ್ನು ನೀಡಿದರು. ಅನುಭವಿ ವೃತ್ತಿಪರರು ಹಾಗೂ ಯುವ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ರತನ್ ಟಾಟಾ ಅವರ ನಿಧನದಿಂದಾಗಿ ತೀವ್ರ ದುಃಖವಾಗಿದೆ. ಅವರು ದೊಡ್ಡ ಕನಸು ಕಾಣುವ ಮತ್ತು ಸಮಾಜಕ್ಕೆ ಮರಳಿ ನೀಡುವ ಉತ್ಸಾಹವನ್ನು ಹೊಂದಿದ್ದರು. ದೇಶದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಟಾಟಾ ಸಮೂಹ ಮುಂಚೂಣಿಯಲ್ಲಿದೆ. ರತನ್ ಟಾಟಾ ಅವರು ಅಸಾಧಾರಣ ಮತ್ತು ದೂರದೃಷ್ಟಿಯ ಉದ್ಯಮಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಅ.12ರಂದು ಮದ್ಯ ಮಾರಾಟ ನಿಷೇಧ
ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಅಕ್ಟೋಬರ್ 11 ಮತ್ತು 12 ರಂದು ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬ ಆಚರಿಸಲಿದ್ದು. ಈ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 12 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಗುರುಕುಲ ಶಾಲೆಯ ಮಕ್ಕಳೊಂದಿಗೆ ಬೆರೆತ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ5 days ago
ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಅ.9 ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ5 days ago
ವಸತಿ ಯೋಜನೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದಾವಣಗೆರೆ | ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಕಾರ್ಯಾರಂಭ ಸಮಾರಂಭ ; ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಗ್ರಾಮ ಸಭೆ ಕಡ್ಡಾಯ : ಸಚಿವ ಪ್ರಿಯಾಂಕ ಖರ್ಗೆ