Connect with us

ದಿನದ ಸುದ್ದಿ

ಕಲಬುರಗಿಯ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣ‌ ಪತ್ರ ಅವಾಂತರ

Published

on

 

  • ಸುಮಾರು 50 ವರ್ಷಗಳಿಂದ ಕಸಾಪದ ಆಜೀವ ಸದಸ್ಯರಾಗಿರುವ ಎಲ್.ಎಸ್.ಶಾಸ್ತ್ರಿಯವರು ಕನ್ನಡದ‌ ಹಿರಿಯ ಸಾಹಿತಿಗಳು. ವಾಸ ಬೆಳಗಾವಿ. ಇವರಿಗೆ ಕಲಬುರಗಿಯಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನ ನೀಡದಿರುವ ಕುರಿತು ಕಸಾಪ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಪತ್ರವೊಂದನ್ನು ಬರೆದಿದ್ದಾರೆ. ಈ ಕೆಳಗಿನಂತೆ ಆ ಪತ್ರವಿದೆ.

ಲಬುರ್ಗಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ವಾಟ್ಸಪ್ ನಲ್ಲಿ ನೋಡಿದೆ. ನಮ್ಮಂಥವರಿಗೆ ಅವರು ಆಮಂತ್ರಣ ಕಳಿಸುವದಿಲ್ಲ. ನಾನು 50 ವರ್ಷಗಳಿಂದ ಕಸಾಪ ಆಜೀವ ಸದಸ್ಯ. ಮೂರುಸಲ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದವ.

ಆ ವಿಷಯ ಹಾಗಿರಲಿ. ಸಮ್ಮೇಳನದ ಆಮಂತ್ರಣ ಪತ್ರಿಕೆ ನೋಡಿದಾಗ ಒಂದೆರಡು ಅಂಶಗಳು ‌ಗಮನ ಸೆಳೆದವು. ಅದರ ಬಗ್ಗೆ ಹೇಳುತ್ತಿದ್ದೇನೆ.

ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ ಶ್ರೀ ಮೋಹನ ಹಬ್ಬು ಅವರನ್ನು ಕವಿ ಗೋಷ್ಠಿಯಲ್ಲಿ ಕವನ ಓದುವವರ ನಡುವೆ ಸೇರಿಸಿದ್ದಾರೆ. ಇದು ಸರಿಯಲ್ಲ ಎಂದು ನನ್ನ ಭಾವನೆ. ಅವರು ಒಂದು ಗೋಷ್ಠಿ ಯ ಅಧ್ಯಕ್ಷ ಸ್ಥಾನ
ವಹಿಸಬೇಕಾದಂಥವರು. ವಯಸ್ಸು ಮತ್ತು ಸಾಧನೆ ಎರಡೂ ದೃಷ್ಟಿಯಿಂದ. ಹತ್ತರ ಕೂಡ ಹನ್ನೊಂದು ಎಂಬಂತೆ ಒಟ್ಟು ಎಲ್ಲೋ ಒಂದು ಕಡೆ ಸೇರಿಸುವದು ಅವರ ಅರ್ಹತೆಗೆ ತಕ್ಕದ್ದಲ್ಲ. ಜಿಲ್ಲಾಧ್ಯಕ್ಷರಿಗೆ ಇದು ತಿಳಿದಿರಬೇಕಿತ್ತು.

ನಾನು ಸಾಮಾನ್ಯವಾಗಿ ಗಮನಿಸಿದಂತೆ ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳನ್ನು ಕಸಾಪ ಯಾವ ಲೆಕ್ಕಕ್ಕೂ ಹಿಡಿದಿಲ್ಲ. ಬೆಳಗಾವಿಯಲ್ಲೂ ಒಬ್ಬರನ್ನು ಒಂದು ಗೋಷ್ಠಿಯ ಭಾಷಣಕ್ಕೆ ಹಾಕಿದ್ದು ಬಿಟ್ಟರೆ ಅಧ್ಯಕ್ಷ ಸ್ಥಾನಕ್ಕೆ ಯಾರೂ ಇಲ್ಲಿ ಅರ್ಹರೇ ಇಲ್ಲ ಎಂದು ಕಸಾಪ ಅಧ್ಯಕ್ಷರು ಭಾವಿಸಿಕೊಂಡಂತಿದೆ. ಮೂರು ನಾಲ್ಕು ಜನರನ್ನು ಕವಿಗೋಷ್ಠಿಗಳಲ್ಲಿ ಸೇರಿಸಿ ಸಮಾಧಾನ ಪಡಿಸಲಾಗಿದೆ. ಒಂದಿಬ್ಬರು ಸನ್ಮಾನಿತರ ಯಾದಿಯಲ್ಲಿದ್ದಾರೆ. ಉತ್ತರ ಕನ್ನಡದ ಹಣೆಬರೆಹವೂ ಅಷ್ಟೇ. ಕೇಳುವವರ್ಯಾರು? ಹೇಳಿ ನಾವೆ ಕೆಟ್ಟವರಾಗಬೇಕು ಅಷ್ಟೇ.

ಈಗಿನ ಕಸಾಪದಿಂದ ನಾನು ಅಂತಹ ಯಾವ ಉನ್ನತ ಮಟ್ಟದ ವ್ಯವಹಾರವನ್ನೂ ನಿರೀಕ್ಷಿಸುತ್ತಿಲ್ಲ. ಅಲ್ಲಿರುವವರ ಯೋಗ್ಯತೆ ಎಲ್ಲರಿಗೂ ಗೊತ್ತಿರುವಂತಹದೆ. ಅವರಿಂದ ನನಗೇನೂ ಆಗಬೇಕಾದ್ದೂ ಇಲ್ಲ. ಹಿಂದೆ ಒಮ್ಮೆ ನನ್ನನ್ನೂ ಸನ್ಮಾನಕ್ಕೆ ಕರೆದಿದ್ದರು. ಅದು ಸನ್ಮಾನವೋ ಅವಮಾನವೋ ಒಂದೂ ಗೊತ್ತಾಗಲಿಲ್ಲ. ಅಷ್ಟು ಕೆಟ್ಟದ್ದಾಗಿ ನಡೆಸಿಕೊಂಡರು. ಅವ್ಯವಸ್ಥೆಗೆ ಕುಪ್ರಸಿದ್ಧವಾದದ್ದು ಈಗಿನ ಕಸಾಪ. ಕೋಟಿಗಟ್ಟಲೆ ಹಣದ ವ್ಯವಹಾರ ಅವರಿಗೆ ಮಹತ್ವದ್ದು. ಅಬ್ಬರ, ಆಡಂಬರ, ದುಂದು ವೆಚ್ಚ , ಒಂದಿಷ್ಟು ಸ್ವಾಹಾ ….ಅದೇ ಸಮ್ಮೇಳನ! ಸಾಹಿತ್ಯಕ್ಕೆ ಎರಡನೇ ಸ್ಥಾನ.

ಎಲ್.ಎಸ್.ಶಾಸ್ತ್ರಿ
94822 51696

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ

Published

on

ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.

Continue Reading

Trending