ದಿನದ ಸುದ್ದಿ
ಅಮೇರಿಕಾದ ಅಧ್ಯಕ್ಷರಾಗಿ ಬಿಡೆನ್ ಪ್ರಮಾಣವಚನ ಸ್ವೀಕರಿಸುತ್ತಾರೋ..? ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ..?
- ಅಲ್ಮೆಡಾ ಗ್ಲಾಡ್ಸನ್
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಕೊನೆಗೂ ಓರ್ವ ಖಚಿತ ವಿನ್ನರ್ ಅನ್ನು ಕೊಡುವ ಮಟ್ಟಕ್ಕೆ ಬಂದು ನಿಂತಿದೆ. ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ವಿಶ್ವದ ಅತೀ ಪುರಾತನ ಪ್ರಜಾಪ್ರಭುತ್ವದ 46 ನೇ ಅಧ್ಯಕ್ಷರಾಗುವುದು ಖಚಿತವಾದಂತಿದೆ.
ಬೈಡನ್ ಅವರನ್ನು ಅಧಿಕೃತವಾಗಿ ವಿನ್ನರ್ ಎಂದು ಘೋಷಿಸಿದರೂ, ಪ್ರಸಕ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಲಭದಲ್ಲಿ ಸೋಲನ್ನುಪ್ಪುತ್ತಾರೆಂದು ನನಗನಿಸುವುದಿಲ್ಲ. ಹೇಗೂ ಅಮೇರಿಕಾದ ಪದ್ಧತಿಯಂತೆ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಜನವರಿ ಎರಡನೆಯ ವಾರದಲ್ಲಿ. ಅಷ್ಟರವರೆಗೆ ಟ್ರಂಪಾತಿಗಳು ಏನೆಲ್ಲಾ ಡ್ರಾಮಾ ಮಾಡುತ್ತಾರೋ ಎಂದು ಕಾದುನೋಡಬೇಕು.
ಮೂರ್ನಾಲ್ಕು ರಾಜ್ಯಗಳಲ್ಲಿ ಅವರು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ, ಅವರಿಗೆ ಒಮ್ಮೆ ಲೀಡ್ ಸಿಕ್ಕ ನಂತರ ಉಳಿದ ಮತಗಳ ಎಣಿಕೆ ಆಗಬಾರದಿತ್ತೆಂದು ಹೇಳಿ. ಇದೆಂಥಾ ಹುಚ್ಚುತನ ಎಂದು ಹುಬ್ಬೇರಿಸಬೇಡಿ. ಟ್ರಂಪ್ ಇದಕ್ಕಿಂತ ನೀಚ ಮಟ್ಟಕ್ಕಿಳಿಯಬಲ್ಲರೆಂದು ನಾಲ್ಕು ವರುಷಗಳಲ್ಲಿ ನೋಡಿಯಾಗಿದೆ.
ಅಷ್ಟಕ್ಕೂ ಆತನಿಗೆ ಮುಳುವಾಗಿರುವುದು ಕೊರೋನಾ ಹಾಗೂ ಈ ಕೊರೋನಾದ ಕಾರಣದಿಂದ ಆಗಿರುವ ಅಂಚೆ ಮತದಾನ. ಟ್ರಂಪು ಹಾಗು ಆತನ ಬೆಂಬಲಿಗರು ಕೊರೋನಾ-ಗಿರೋನಾ ಏನೂ ಇಲ್ಲ, ಎಲ್ಲಾ ಸುಳ್ಳು (ನಮ್ಮಲ್ಲೂ ಅನಂತ್ಮಾಣಿ ಹಾಗೆಯೇ ಹೇಳಿ ಕೊನೆಗೆ ಕ್ವಾರಂಟೀನ್ ಆಗಿದ್ದು) ಎಂದು ಹೇಳುತ್ತಲೇ ಬಂದಿದ್ದರು. ಹಾಗಾಗಿ ಟ್ರಂಪ್ ಬೆಂಬಲಿಗರಲ್ಲಿ ಹೆಚ್ಚಿನವರು ಮತಗಟ್ಟೆಗೆ ಹೋಗಿ ತಮ್ಮ ಮತ ಹಾಕಿ ಬಂದಿದ್ದರು.
ಆದರೆ ಬೈಡನ್ ಹಾಗೂ ಡೆಮೋಕ್ರಾಟಿಕ್ ಪಕ್ಷ ಕೊರೋನಾದ ಬಗ್ಗೆ ಜಾಗ್ರತೆ ವಹಿಸಬೇಕು, ಕೊರೋನಾದಿಂದ ಅಮೇರಿಕಾಕ್ಕೆ ಬಲುದೊಡ್ಡ ಹೊಡೆತ ಬೀಳಲಿದೆ ಎಂದು ಹೇಳುತ್ತಾ ಬಂದವರು. ಹಾಗಾಗಿ ಲಾಕ್‍ಡೌನ್ ಇಲ್ಲದಿದ್ದರೂ ಡೆಮೋಕ್ರಾಟಿಕ್ ಪಕ್ಷದ ಹೆಚ್ಚಿನ ಬೆಂಬಲಿಗರು ಅಂಚೆ ಮತದಾನಕ್ಕೆ ಮೊರೆಹೋಗಿದ್ದರು. ಪೆನ್ಸಿಲೇನ್ವಿಯಾ ಒಂದರಲ್ಲೇ ಟ್ರಂಪ್‍ಗೆ ಆರು ಲಕ್ಷ ಮತಗಳ ಲೀಡ್ ಇರುವಾಗ, ಸುಮಾರು 15 ಲಕ್ಷ ಮತಗಳ ಎಣಿಕೆ ಬಾಕಿಯಿದ್ದು, ಇದರಲ್ಲಿ ಹೆಚ್ಚಿನವು ಬೈಡನ್ ಬೆಂಬಲಿಗರ ಮತಗಳೆಂದು ಹೇಳಲಾಗುತಿತ್ತು.
ಇವತ್ತು ಮತ ಎಣಿಕೆ ಮುಗಿದಾಗ ಬೈಡನ್ ತನ್ನ ಸ್ವಂತ ರಾಜ್ಯವಾದ ಪೆನ್ಸಿಲೇನ್ವಿಯಾದಲ್ಲಿ ಟ್ರಂಪ್‍ಗಿಂತ ಮೂವತ್ತು ಸಾವಿರಕ್ಕಿಂತ ಹೆಚ್ಚು ಮತ ಪಡೆದು ಅಲ್ಲಿನ ಇಪ್ಪತ್ತೂ ಎಲೆಕ್ಟೋರಲ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಜಾರ್ಜಿಯಾ, ಅರಿಝೋನಾ, ನೆವಾಡಾ, ಮಿಚಿಗನ್, ವಿಸ್ಕೋನ್ಸಿನ್ ಮುಂತಾದೆಡೆಯೂ ಇದೇ ಕಥೆ. ಹಾಗಾಗಿಯೇ ಟ್ರಂಪ್ ಒಮ್ಮೆ ಸ್ವಲ್ಪ ಅಂತರದ ಲೀಡ್ ಪಡೆಯುತ್ತಿದ್ದಂತೆ ಮತ ಎಣಿಕೆಯನ್ನು ನಿಲ್ಲಿಸಬೇಕೆಂದು ಕೇಳಿಕೊಂಡು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು.
ಅಮೇರಿಕಾದ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯದಲ್ಲಿ ಮತ ಎಣಿಕೆಯ ಕೊನೆಗೆ 51% ಅಥವಾ ತನ್ನ ಎದುರಾಳಿಗಿಂತ ಹೆಚ್ಚು ಮತ ಪಡೆದ ವ್ಯಕ್ತಿ/ಪಕ್ಷ ಆ ರಾಜ್ಯದಲ್ಲಿರುವ ಎಲ್ಲಾ ಸೀಟುಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ ಪೆನ್ಸಿಲೇನ್ವಿಯಾದಲ್ಲಿ 20 ಸೀಟುಗಳಿವೆ. ಬೈಡನ್ ಅಲ್ಲಿ 3,345,906 ಮತ ಪಡೆದರೆ, ಟ್ರಂಪ್ 3,311,448 ಮತ ಪಡೆದಿದ್ದರೆ.
ಕೇವಲ .4% ವ್ಯತ್ಯಾಸ. ಹಾಗಾಗಿ ನಿಮ್ಮ ಪ್ರಕಾರ ಟ್ರಂಪ್ ಒಂಬತ್ತು ಸೀಟು ಗೆದ್ದು ಬೈಡನ್ ಹನ್ನೊಂದು ಗೆದ್ದಿದ್ದಾರೆಂದರೆ, ಅದು ತಪ್ಪು. ಬೈಡನ್‍ಗೆ ಜಾಸ್ತಿ ಮತ ಬಂದಿರುವುದರಿಂದ ಅಲ್ಲಿನ 20 ಸೀಟುಗಳೂ ಬೈಡನ್ ಪಾಲಾಗಿವೆ. ಹಾಗಾಗಿಯೇ ಎರಡು ದಿನಗಳಿಂದ ಬೈಡನ್ 264 ಸೀಟುಗಳಿಂದ ಮುನ್ನಡೆಯಲ್ಲಿದ್ದಾರೆಂದು ತೋರಿಸುತ್ತಿದ್ದ ಫಲಿತಾಂಶ, ಇವತ್ತು ಪೆನ್ಸಿಲೇನ್ವಿಯಾದ ಮತ ಎಣಿಕೆ ಕೊನೆಗೊಳ್ಳುತ್ತಿದ್ದಂತೆ ಬೈಡನ್-284 ಎಂದು ತೋರಿಸುತ್ತಿದೆ, ಅಂದರೆ ಪೆನ್ಸಿಲೇನ್ವಿಯಾದ ಎಲ್ಲಾ ಇಪ್ಪತ್ತು ಸೀಟುಗಳು ಡೆಮೋಕ್ರಟಿಕ್ ಪಕ್ಷದ ಪಾಲಾಗಿವೆ.
ಆದರೆ ಈಗಲೇ ಹೇಳಿದಂತೆ ಟ್ರಂಪ್ ಬಹಳ ಸುಲಭದಲ್ಲಿ ಸೋಲುಪ್ಪುವ ಮನುಷ್ಯ ಅಲ್ಲ. ಕೋರ್ಟ್ ನಲ್ಲಿ ಏನಾಗುತ್ತೋ ನೋಡೋಣ. 2000 ನೇ ಇಸವಿಯಲ್ಲಿ ಜಾರ್ಜ್ ಬುಶ್ ಜೂನಿಯರ್ ಅಲ್ ಗೋರ್ ಎದುರು ಜಯಗಳಿಸಿದ್ದು ಹೀಗೆಯೇ. ಜಿದ್ದಾಜಿದ್ದಿನ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದ ಅಲ್ ಗೋರ್ ಹಾಗೂ ರಿಪಬ್ಲಿಕ್ ಜಾರ್ಜ್ ಬುಶ್ ನಡುವೆ ಬಿರುಸಿನ ಪೈಪೋಟಿ ಇದ್ದರೂ, ಮೊದಲನೆಯ ದಿನದ ಎಣಿಕೆ ಕೊನೆಗೊಂಡಾಗ ಅಲ್ ಗೋರ್ ಬಳಿ 255 ಎಲೆಕ್ಟೋರಲ್ ಸೀಟಿದ್ದು, ಬುಶ್ ಬಳಿ 246 ಸೀಟಿತ್ತು. 5 ಸೀಟಿದ್ದ ನ್ಯೂ ಮೆಕ್ಸಿಕೋ, 7 ಸೀಟಿದ್ದ ಓರೆಗಾನ್ ಹಾಗೂ 29 ಸೀಟುಗಳ ಫ್ಲೊರೀಡಾದ ಫಲಿತಾಂಶ ಬಾಕಿಯಿತ್ತು. ಮರುದಿನ ಬಂದ ಫಲಿತಾಂಶದಲ್ಲಿ ಅಲ್ ಗೋರ್ ನ್ಯೂ ಮೆಕ್ಸಿಕೋ ಹಾಗೂ ಓರೆಗಾನ್ ಎರಡನ್ನೂ ಗೆದ್ದು 267 ಸೀಟುಗಳನ್ನು ಪಡೆದು, ಬಹುಮತಕ್ಕೆ ಕೇವಲ ಮೂರು ಸೀಟುಗಳಷ್ಟೇ ದೂರದಲ್ಲಿದ್ದರು.
ಹಾಗಾಗಿ 29 ಸೀಟುಗಳಿದ್ದ ಫ್ಲೊರೀಡಾದ ಫಲಿತಾಂಶವೇ ಹೊಸ ಅಧ್ಯಕ್ಷ ಯಾರೆಂದು ನಿರ್ಧರಿಸಲಿದೆಯೆಂದು ಖಚಿತವಾಗಿತ್ತು. ಎರಡನೆಯ ದಿನದ ಎಣಿಕೆ ಮುಗಿದಾಗ ಬುಶ್ ಒಂದು ಸಾವಿರ ಚಿಲ್ಲರೆ ಮತಗಳಿಂದ ಮುನ್ನಡೆಯಲ್ಲಿದ್ದರು. ಆ ಹೊತ್ತಿಗೆ ಜಾರ್ಜ್ ಬುಶ್‍ನ ಸಹೋದರ ಜೆಬ್ ಫ್ಲೊರೀಡಾದ ರಾಜ್ಯಪಾಲ. ಐವತ್ತು ಲಕ್ಷಕ್ಕಿಂತ ಹೆಚ್ಚಿನ ಮತ ಚಲಾವಣೆಯಾದ ರಾಜ್ಯದಲ್ಲಿ ಮುನ್ನಡೆ ಕೇವಲ ಒಂದು ಸಾವಿರ ಚಿಲ್ಲರೆಯಾಗಿದ್ದರಿಂದ ಮರು ಎಣಿಕೆಗೆ ಆದೇಶ ಬಂತು.
ಇದನ್ನು ಪ್ರಶ್ನಿಸಿ ಬುಶ್ ಕೋರ್ಟ್ ಮೆಟ್ಟಲೇರಿದರು. ಗೋರ್ ಕೂಡಾ ಕೋರ್ಟ್ ಕದ ತಟ್ಟಿದರು. ಸುಮಾರು ಒಂದು ತಿಂಗಳು ನಡೆದ ಕಾನೂನು ಪ್ರಕ್ರಿಯೆ, ಮರು ಎಣಿಕೆಯಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ಬುಶ್ ಅವರನ್ನು 537 ಮತಗಳಿಂದ ವಿಜಯಿ ಎಂದು ಘೋಷಿಸಿ, ಫ್ಲೊರೀಡಾದ ಇಪ್ಪತ್ತೊಂಬತ್ತು ಸೀಟುಗಳನ್ನು ಅವರ ಪಕ್ಷಕ್ಕೆ ಕೊಟ್ಟಿತು. ಹೀಗೆ ಬುಶ್ ಅಧ್ಯಕ್ಷರಾದರು.
ಅಂದು ಮರು ಎಣಿಕೆಯಲ್ಲಿ, ಮತ ಎಣಿಕೆಯಲ್ಲಿ ತೀವ್ರವಾದ ಹಸ್ತಕ್ಷೇಪ ಹಾಗೂ ಮೋಸ ನಡೆದಿದೆಯೆಂದು ಜನರ ಆರೋಪವಾಗಿತ್ತು. ಅಲ್ಲಿನ ರಾಜ್ಯಪಾಲರಾಗಿದ್ದ ಬುಶ್ ಸಹೋದರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿದ್ದ ರಿಪಬ್ಲಿಕನ್ ಪಕ್ಷದ ನ್ಯಾಯಮೂರ್ತಿಗಳು ಕಳ್ಳ ಮಾರ್ಗದಿಂದ ಬುಶ್‍ರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂದು ಇವತ್ತಿಗೂ ಅಮೇರಿಕಾ ಹೇಳುತ್ತಿದೆ.
ಈವಾಗ ಟ್ರಂಪ್ ಅಂಥಹದ್ದೇ ದುಸ್ಸಾಹಕ್ಕೆ ಕೈಹಾಕಿದ್ದಾರೆ. ಏನಾಗುತ್ತೋ ನೋಡಬೇಕು. ಸದ್ಯ ಅಮೇರಿಕದ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳ ಬಲಾಬಲ 6-3 ರಿಂದ ರಿಪಬ್ಲಿಕ ಪಕ್ಷದ ಪರವಾಗಿದೆಯೆಂದು ಹೇಳುತ್ತಿದ್ದಾರೆ. ಹಾಗಾಗಿ ಇವತ್ತು ವಿಜಯಿಯೆಂದು ಘೋಷಿಸಲ್ಪಟ್ಟಿರುವ ಜೋ ಬೈಡನ್ ಜನವರಿ ಎರಡನೆಯ ವಾರದಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೋ ಇಲ್ಲ ಅದರ ಮೊದಲು ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ, ಕಾದು ನೋಡಬೇಕು.
I WON THIS ELECTION, BY A LOT!
— Donald J. Trump (@realDonaldTrump) November 7, 2020
America, I’m honored that you have chosen me to lead our great country.
The work ahead of us will be hard, but I promise you this: I will be a President for all Americans — whether you voted for me or not.
I will keep the faith that you have placed in me. pic.twitter.com/moA9qhmjn8
— Joe Biden (@JoeBiden) November 7, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.
ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


