Connect with us

ದಿನದ ಸುದ್ದಿ

ಅಮೇರಿಕಾದ ಅಧ್ಯಕ್ಷರಾಗಿ ಬಿಡೆನ್ ಪ್ರಮಾಣವಚನ ಸ್ವೀಕರಿಸುತ್ತಾರೋ..? ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ..?

Published

on

  • ಅಲ್ಮೆಡಾ ಗ್ಲಾಡ್ಸನ್

ಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಕೊನೆಗೂ ಓರ್ವ ಖಚಿತ ವಿನ್ನರ್ ಅನ್ನು ಕೊಡುವ ಮಟ್ಟಕ್ಕೆ ಬಂದು ನಿಂತಿದೆ. ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ವಿಶ್ವದ ಅತೀ ಪುರಾತನ ಪ್ರಜಾಪ್ರಭುತ್ವದ 46 ನೇ ಅಧ್ಯಕ್ಷರಾಗುವುದು ಖಚಿತವಾದಂತಿದೆ.

ಬೈಡನ್ ಅವರನ್ನು ಅಧಿಕೃತವಾಗಿ ವಿನ್ನರ್ ಎಂದು ಘೋಷಿಸಿದರೂ, ಪ್ರಸಕ್ತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಲಭದಲ್ಲಿ ಸೋಲನ್ನುಪ್ಪುತ್ತಾರೆಂದು ನನಗನಿಸುವುದಿಲ್ಲ. ಹೇಗೂ ಅಮೇರಿಕಾದ ಪದ್ಧತಿಯಂತೆ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಜನವರಿ ಎರಡನೆಯ ವಾರದಲ್ಲಿ. ಅಷ್ಟರವರೆಗೆ ಟ್ರಂಪಾತಿಗಳು ಏನೆಲ್ಲಾ ಡ್ರಾಮಾ ಮಾಡುತ್ತಾರೋ ಎಂದು ಕಾದುನೋಡಬೇಕು.

ಮೂರ್ನಾಲ್ಕು ರಾಜ್ಯಗಳಲ್ಲಿ ಅವರು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ, ಅವರಿಗೆ ಒಮ್ಮೆ ಲೀಡ್ ಸಿಕ್ಕ ನಂತರ ಉಳಿದ ಮತಗಳ ಎಣಿಕೆ ಆಗಬಾರದಿತ್ತೆಂದು ಹೇಳಿ. ಇದೆಂಥಾ ಹುಚ್ಚುತನ ಎಂದು ಹುಬ್ಬೇರಿಸಬೇಡಿ. ಟ್ರಂಪ್‍ ಇದಕ್ಕಿಂತ ನೀಚ ಮಟ್ಟಕ್ಕಿಳಿಯಬಲ್ಲರೆಂದು ನಾಲ್ಕು ವರುಷಗಳಲ್ಲಿ ನೋಡಿಯಾಗಿದೆ.

ಅಷ್ಟಕ್ಕೂ ಆತನಿಗೆ ಮುಳುವಾಗಿರುವುದು ಕೊರೋನಾ ಹಾಗೂ ಈ ಕೊರೋನಾದ ಕಾರಣದಿಂದ ಆಗಿರುವ ಅಂಚೆ ಮತದಾನ. ಟ್ರಂಪು ಹಾಗು ಆತನ ಬೆಂಬಲಿಗರು ಕೊರೋನಾ-ಗಿರೋನಾ ಏನೂ ಇಲ್ಲ, ಎಲ್ಲಾ ಸುಳ್ಳು (ನಮ್ಮಲ್ಲೂ ಅನಂತ್ಮಾಣಿ ಹಾಗೆಯೇ ಹೇಳಿ ಕೊನೆಗೆ ಕ್ವಾರಂಟೀನ್ ಆಗಿದ್ದು) ಎಂದು ಹೇಳುತ್ತಲೇ ಬಂದಿದ್ದರು. ಹಾಗಾಗಿ ಟ್ರಂಪ್ ಬೆಂಬಲಿಗರಲ್ಲಿ ಹೆಚ್ಚಿನವರು ಮತಗಟ್ಟೆಗೆ ಹೋಗಿ ತಮ್ಮ ಮತ ಹಾಕಿ ಬಂದಿದ್ದರು.

ಆದರೆ ಬೈಡನ್ ಹಾಗೂ ಡೆಮೋಕ್ರಾಟಿಕ್ ಪಕ್ಷ ಕೊರೋನಾದ ಬಗ್ಗೆ ಜಾಗ್ರತೆ ವಹಿಸಬೇಕು, ಕೊರೋನಾದಿಂದ ಅಮೇರಿಕಾಕ್ಕೆ ಬಲುದೊಡ್ಡ ಹೊಡೆತ ಬೀಳಲಿದೆ ಎಂದು ಹೇಳುತ್ತಾ ಬಂದವರು. ಹಾಗಾಗಿ ಲಾಕ್‍ಡೌನ್ ಇಲ್ಲದಿದ್ದರೂ ಡೆಮೋಕ್ರಾಟಿಕ್ ಪಕ್ಷದ ಹೆಚ್ಚಿನ ಬೆಂಬಲಿಗರು ಅಂಚೆ ಮತದಾನಕ್ಕೆ ಮೊರೆಹೋಗಿದ್ದರು. ಪೆನ್ಸಿಲೇನ್ವಿಯಾ ಒಂದರಲ್ಲೇ ಟ್ರಂಪ್‍ಗೆ ಆರು ಲಕ್ಷ ಮತಗಳ ಲೀಡ್ ಇರುವಾಗ, ಸುಮಾರು 15 ಲಕ್ಷ ಮತಗಳ ಎಣಿಕೆ ಬಾಕಿಯಿದ್ದು, ಇದರಲ್ಲಿ ಹೆಚ್ಚಿನವು ಬೈಡನ್ ಬೆಂಬಲಿಗರ ಮತಗಳೆಂದು ಹೇಳಲಾಗುತಿತ್ತು.

ಇವತ್ತು ಮತ ಎಣಿಕೆ ಮುಗಿದಾಗ ಬೈಡನ್ ತನ್ನ ಸ್ವಂತ ರಾಜ್ಯವಾದ ಪೆನ್ಸಿಲೇನ್ವಿಯಾದಲ್ಲಿ ಟ್ರಂಪ್‍ಗಿಂತ ಮೂವತ್ತು ಸಾವಿರಕ್ಕಿಂತ ಹೆಚ್ಚು ಮತ ಪಡೆದು ಅಲ್ಲಿನ ಇಪ್ಪತ್ತೂ ಎಲೆಕ್ಟೋರಲ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಜಾರ್ಜಿಯಾ, ಅರಿಝೋನಾ, ನೆವಾಡಾ, ಮಿಚಿಗನ್, ವಿಸ್ಕೋನ್ಸಿನ್ ಮುಂತಾದೆಡೆಯೂ ಇದೇ ಕಥೆ. ಹಾಗಾಗಿಯೇ ಟ್ರಂಪ್ ಒಮ್ಮೆ ಸ್ವಲ್ಪ ಅಂತರದ ಲೀಡ್ ಪಡೆಯುತ್ತಿದ್ದಂತೆ ಮತ ಎಣಿಕೆಯನ್ನು ನಿಲ್ಲಿಸಬೇಕೆಂದು ಕೇಳಿಕೊಂಡು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು.

ಅಮೇರಿಕಾದ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರಾಜ್ಯದಲ್ಲಿ ಮತ ಎಣಿಕೆಯ ಕೊನೆಗೆ 51% ಅಥವಾ ತನ್ನ ಎದುರಾಳಿಗಿಂತ ಹೆಚ್ಚು ಮತ ಪಡೆದ ವ್ಯಕ್ತಿ/ಪಕ್ಷ ಆ ರಾಜ್ಯದಲ್ಲಿರುವ ಎಲ್ಲಾ ಸೀಟುಗಳನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ ಪೆನ್ಸಿಲೇನ್ವಿಯಾದಲ್ಲಿ 20 ಸೀಟುಗಳಿವೆ. ಬೈಡನ್ ಅಲ್ಲಿ 3,345,906 ಮತ ಪಡೆದರೆ, ಟ್ರಂಪ್ 3,311,448 ಮತ ಪಡೆದಿದ್ದರೆ.

ಕೇವಲ .4% ವ್ಯತ್ಯಾಸ. ಹಾಗಾಗಿ ನಿಮ್ಮ ಪ್ರಕಾರ ಟ್ರಂಪ್ ಒಂಬತ್ತು ಸೀಟು ಗೆದ್ದು ಬೈಡನ್ ಹನ್ನೊಂದು ಗೆದ್ದಿದ್ದಾರೆಂದರೆ, ಅದು ತಪ್ಪು. ಬೈಡನ್‍ಗೆ ಜಾಸ್ತಿ ಮತ ಬಂದಿರುವುದರಿಂದ ಅಲ್ಲಿನ 20 ಸೀಟುಗಳೂ ಬೈಡನ್ ಪಾಲಾಗಿವೆ. ಹಾಗಾಗಿಯೇ ಎರಡು ದಿನಗಳಿಂದ ಬೈಡನ್ 264 ಸೀಟುಗಳಿಂದ ಮುನ್ನಡೆಯಲ್ಲಿದ್ದಾರೆಂದು ತೋರಿಸುತ್ತಿದ್ದ ಫಲಿತಾಂಶ, ಇವತ್ತು ಪೆನ್ಸಿಲೇನ್ವಿಯಾದ ಮತ ಎಣಿಕೆ ಕೊನೆಗೊಳ್ಳುತ್ತಿದ್ದಂತೆ ಬೈಡನ್-284 ಎಂದು ತೋರಿಸುತ್ತಿದೆ, ಅಂದರೆ ಪೆನ್ಸಿಲೇನ್ವಿಯಾದ ಎಲ್ಲಾ ಇಪ್ಪತ್ತು ಸೀಟುಗಳು ಡೆಮೋಕ್ರಟಿಕ್ ಪಕ್ಷದ ಪಾಲಾಗಿವೆ.

ಆದರೆ ಈಗಲೇ ಹೇಳಿದಂತೆ ಟ್ರಂಪ್ ಬಹಳ ಸುಲಭದಲ್ಲಿ ಸೋಲುಪ್ಪುವ ಮನುಷ್ಯ ಅಲ್ಲ. ಕೋರ್ಟ್ ನಲ್ಲಿ ಏನಾಗುತ್ತೋ ನೋಡೋಣ. 2000 ನೇ ಇಸವಿಯಲ್ಲಿ ಜಾರ್ಜ್ ಬುಶ್ ಜೂನಿಯರ್ ಅಲ್ ಗೋರ್ ಎದುರು ಜಯಗಳಿಸಿದ್ದು ಹೀಗೆಯೇ. ಜಿದ್ದಾಜಿದ್ದಿನ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಪಕ್ಷದ ಅಲ್ ಗೋರ್ ಹಾಗೂ ರಿಪಬ್ಲಿಕ್ ಜಾರ್ಜ್ ಬುಶ್ ನಡುವೆ ಬಿರುಸಿನ ಪೈಪೋಟಿ ಇದ್ದರೂ, ಮೊದಲನೆಯ ದಿನದ ಎಣಿಕೆ ಕೊನೆಗೊಂಡಾಗ ಅಲ್ ಗೋರ್ ಬಳಿ 255 ಎಲೆಕ್ಟೋರಲ್ ಸೀಟಿದ್ದು, ಬುಶ್ ಬಳಿ 246 ಸೀಟಿತ್ತು. 5 ಸೀಟಿದ್ದ ನ್ಯೂ ಮೆಕ್ಸಿಕೋ, 7 ಸೀಟಿದ್ದ ಓರೆಗಾನ್ ಹಾಗೂ 29 ಸೀಟುಗಳ ಫ್ಲೊರೀಡಾದ ಫಲಿತಾಂಶ ಬಾಕಿಯಿತ್ತು. ಮರುದಿನ ಬಂದ ಫಲಿತಾಂಶದಲ್ಲಿ ಅಲ್‍ ಗೋರ್ ನ್ಯೂ ಮೆಕ್ಸಿಕೋ ಹಾಗೂ ಓರೆಗಾನ್ ಎರಡನ್ನೂ ಗೆದ್ದು 267 ಸೀಟುಗಳನ್ನು ಪಡೆದು, ಬಹುಮತಕ್ಕೆ ಕೇವಲ ಮೂರು ಸೀಟುಗಳಷ್ಟೇ ದೂರದಲ್ಲಿದ್ದರು.

ಹಾಗಾಗಿ 29 ಸೀಟುಗಳಿದ್ದ ಫ್ಲೊರೀಡಾದ ಫಲಿತಾಂಶವೇ ಹೊಸ ಅಧ್ಯಕ್ಷ ಯಾರೆಂದು ನಿರ್ಧರಿಸಲಿದೆಯೆಂದು ಖಚಿತವಾಗಿತ್ತು. ಎರಡನೆಯ ದಿನದ ಎಣಿಕೆ ಮುಗಿದಾಗ ಬುಶ್ ಒಂದು ಸಾವಿರ ಚಿಲ್ಲರೆ ಮತಗಳಿಂದ ಮುನ್ನಡೆಯಲ್ಲಿದ್ದರು. ಆ ಹೊತ್ತಿಗೆ ಜಾರ್ಜ್ ಬುಶ್‍ನ ಸಹೋದರ ಜೆಬ್ ಫ್ಲೊರೀಡಾದ ರಾಜ್ಯಪಾಲ. ಐವತ್ತು ಲಕ್ಷಕ್ಕಿಂತ ಹೆಚ್ಚಿನ ಮತ ಚಲಾವಣೆಯಾದ ರಾಜ್ಯದಲ್ಲಿ ಮುನ್ನಡೆ ಕೇವಲ ಒಂದು ಸಾವಿರ ಚಿಲ್ಲರೆಯಾಗಿದ್ದರಿಂದ ಮರು ಎಣಿಕೆಗೆ ಆದೇಶ ಬಂತು.

ಇದನ್ನು ಪ್ರಶ್ನಿಸಿ ಬುಶ್ ಕೋರ್ಟ್ ಮೆಟ್ಟಲೇರಿದರು. ಗೋರ್ ಕೂಡಾ ಕೋರ್ಟ್ ಕದ ತಟ್ಟಿದರು. ಸುಮಾರು ಒಂದು ತಿಂಗಳು ನಡೆದ ಕಾನೂನು ಪ್ರಕ್ರಿಯೆ, ಮರು ಎಣಿಕೆಯಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ಬುಶ್ ಅವರನ್ನು 537 ಮತಗಳಿಂದ ವಿಜಯಿ ಎಂದು ಘೋಷಿಸಿ, ಫ್ಲೊರೀಡಾದ ಇಪ್ಪತ್ತೊಂಬತ್ತು ಸೀಟುಗಳನ್ನು ಅವರ ಪಕ್ಷಕ್ಕೆ ಕೊಟ್ಟಿತು. ಹೀಗೆ ಬುಶ್ ಅಧ್ಯಕ್ಷರಾದರು.

ಅಂದು ಮರು ಎಣಿಕೆಯಲ್ಲಿ, ಮತ ಎಣಿಕೆಯಲ್ಲಿ ತೀವ್ರವಾದ ಹಸ್ತಕ್ಷೇಪ ಹಾಗೂ ಮೋಸ ನಡೆದಿದೆಯೆಂದು ಜನರ ಆರೋಪವಾಗಿತ್ತು. ಅಲ್ಲಿನ ರಾಜ್ಯಪಾಲರಾಗಿದ್ದ ಬುಶ್ ಸಹೋದರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿದ್ದ ರಿಪಬ್ಲಿಕನ್ ಪಕ್ಷದ ನ್ಯಾಯಮೂರ್ತಿಗಳು ಕಳ್ಳ ಮಾರ್ಗದಿಂದ ಬುಶ್‍ರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂದು ಇವತ್ತಿಗೂ ಅಮೇರಿಕಾ ಹೇಳುತ್ತಿದೆ.

ಈವಾಗ ಟ್ರಂಪ್ ಅಂಥಹದ್ದೇ ದುಸ್ಸಾಹಕ್ಕೆ ಕೈಹಾಕಿದ್ದಾರೆ. ಏನಾಗುತ್ತೋ ನೋಡಬೇಕು. ಸದ್ಯ ಅಮೇರಿಕದ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಮೂರ್ತಿಗಳ ಬಲಾಬಲ 6-3 ರಿಂದ ರಿಪಬ್ಲಿಕ ಪಕ್ಷದ ಪರವಾಗಿದೆಯೆಂದು ಹೇಳುತ್ತಿದ್ದಾರೆ. ಹಾಗಾಗಿ ಇವತ್ತು ವಿಜಯಿಯೆಂದು ಘೋಷಿಸಲ್ಪಟ್ಟಿರುವ ಜೋ ಬೈಡನ್ ಜನವರಿ ಎರಡನೆಯ ವಾರದಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೋ ಇಲ್ಲ ಅದರ ಮೊದಲು ಟ್ರಂಪ್ ಇನ್ನೊಂದು ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುತ್ತಾರೋ, ಕಾದು ನೋಡಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಇಂದು ಕರೆಂಟ್ ಇರಲ್ಲ

Published

on

ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್‌ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್‌ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿದಿನದ ಹಾಜರಾತಿಯನ್ನು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ನಿರ್ವಹಿಸಲು ದಿನಾಂಕ: 12-07-2022 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರು ಸುತ್ತೋಲೆ ಹೊರಡಿಸಿದ್ದಾರೆ.

ಸದರಿ ಸುತ್ತೋಲೆಯಲ್ಲಿ ‘ಎಲ್ಲಾ ನಿಲಯಪಾಲಕರು/ ಮೇಲ್ವಿಚಾರಕರು ಬೆಲಗ್ಗೆ ತಿಂಡಿ ಸಮಯದಲ್ಲಿ ಹಾಗೂ ರಾತ್ರಿ ಊಟದ ಸಮಯದಲ್ಲಿ ವಸತಿ ಶಾಲೆ/ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಡೆಯತಕ್ಕದ್ದು’ ಎಂಬುದಾಗಿ ಸೂಚಿಸಲಾಗಿದೆ.

‘ಬಯೋಮೆಟ್ರಿಕ್ ಹಾಜರಾತಿ ಪಡೆಯದೆ ಆಹಾರ ವೆಚ್ಚ ಭರಿಸಿದ್ದಲ್ಲಿ ಸಂಬAಧಪಟ್ಟ ನಿಲಯಪಾಲಕರು, ಅಲ್ಪಸಂಖ್ಯಾತರ ತಾಲ್ಲೂಕು ವಿಸ್ತರಣಾಧಿಕಾರಿಗಳು/ ಪ್ರಾಂಶುಪಾಲರು, ಜಿಲ್ಲಾ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು’ ಎಂಬುದಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿರುತ್ತದೆ.

ಆದರೆ ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವ ಮಾಹಿತಿ ಆಧಾರದಲ್ಲಿ ದಿನಾಂಕ: 28-11-2025 ರಂದು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 28-11-2025 ರಂದು ದೂರು ನೀಡಿ ‘ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನು ತನಿಖೆಗೆ ಒಳಪಡಿಸುವಂತೆ’ ಕೋರಲಾಗಿತ್ತು.

ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಇವರು ನೀಡಿದ ಹಿಂಬರಹದಲ್ಲಿ ‘ಈ ಸಂಬAಧ ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಮತ್ತೆ ಕೆಲವು ವಸತಿ ಶಾಲೆ ಮತ್ತು ವಸತಿ ನಿಲಯಗಳಿಗೆ ಹೊಸ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡುವಂತೆ ಪ್ರಾಂಶುಪಾಲರುಗಳು ಮತ್ತು ತಾಲ್ಲೂಕು ವಿಸ್ತರಣಾಧಿಕಾರಿಗಳು ಕೋರಿರುವ ಪತ್ರವನ್ನು ಲಗತ್ತಿಸಿ’ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶಕರು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ ಎಂಬುದಾಗಿ ತಿಳಿಸಿರುತ್ತಾರೆ.

ಆದ ಕಾರಣ ದಿನಾಂಕ: 17-02-2026 ರಂದು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಇವರಿಗೆ ದೂರು ನೀಡಿ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಲಾಖೆಯ ನಿಯಮಾನುಸಾರ ಬಯೋಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಒಂದು ತಿಂಗಳ ಒಳಗಾಗಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಕೋರಲಾಗಿತ್ತು. ಆದರೆ ದೂರು ನೀಡಿ 3 ತಿಂಗಳು ಕಳೆದರೂ ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕರಾದ ಜಿಲಾನಿ ಎಚ್. ಮೊಕಾಶಿ ಇವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?

Published

on

ಗಿರೀಶ್ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ನಗರದ ಗಾಂಧಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಕೊಂಡಯ್ಯ ಫ್ಯಾಕ್ಟರಿಯ ಹುಸೇನ್ ನಗರದ ಜಾಲಿ ಬೇಲಿಯ ಒಳಭಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದಾರೆ ಜೊತೆಗೆ ಆ ಪ್ರದೇಶಕ್ಕೆ ಹೋಗುವ ಈ ಜೂಜಾಟ ಆಡುವವರು ಬೈಕ್ ಗಳ ಶಬ್ದ ಮಾಡಿಕೊಂಡು, ಮನೆಗಳಲ್ಲಿ ಇರುವ ಮಹಿಳೆಯರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬಂದಿದೆ.

ಇನ್ನು ಈ ಇಸ್ಪೀಟ್ ಜೂಜಾಟ ಆಡಿಸುತ್ತಿರುವ ವ್ಯಕ್ತಿಗಳು ದುಬ್ಬ ರಾಜು, ದಾದು ಮತ್ತು ಜಾನಿ, ರಘು ಎಂದು ತಿಳಿದು ಬಂದಿದೆ. ಇನ್ನು ಗಾಂಧಿನಗರ ಠಾಣೆಯ ಸಿಪಿಐ ಮತ್ತು ಪಿ.ಎಸ್.ಐ ಮತ್ತು ಕ್ರೈಂ ಸಿಬ್ಬಂದಿಗಳಿಗೆ ಮಾಹಿತಿ ಇದ್ದರು ಅವರಿಂದ ಹಣ ಪಡೆದುಕೊಂಡು ಈ ಜೂಜಾಟ ಆಡಿಸುತ್ತಿರುವ ಮಾಹಿತಿ ಸಹ ಲಭ್ಯವಾಗಿದೆ.

ಸಾಧಿಕ್ ಪೊಲೀಸರಿಗೆ ಸಾಥ್

ಇನ್ನು ಸಾಧಿಕ್ ಎನ್ನುವ ವ್ಯಕ್ತಿ ಗಾಂಧಿನಗರ ಠಾಣೆಯ ಅನೇಕ ಪೊಲೀಸರಿಗೆ ಪರಿಚಯ ಇದ್ದಾನೆ ಅಂತ ಹೇಳಿ ಜನ ಸಾಮಾನ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ಅವರ ವಿರುದ್ಧ ಠಾಣೆಯಲ್ಲಿ ಕೇಸ್ ಹಾಕಿಸುತ್ತೇನೆ ಎಂದು ಹಣ ವಸೂಲಿ ಸಹ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ನ ಪನ್ನಿಕರ್ ಪೊಲೀಸ್ ಠಾಣೆಯ ಸಿಪಿಐ ಮತ್ತು ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಿಲಿಲ್ಲ.

“ಇನ್ನು ಗಾಂಧಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದಾಗ ನಮ್ಮ ಗಮನಕ್ಕೆ ಇಲ್ಲ, ಗೋತ್ತಾದ್ರೆ ರೈಡ್ ಮಾಡುತ್ತೇವೆ ಎಂದರು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending