ದಿನದ ಸುದ್ದಿ
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ, ಹರಿಹರ, ಜಗಳೂರು, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 27 ಅಂಗನವಾಡಿ ಕಾರ್ಯಕರ್ತೆ, 4 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 214 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಇಲಾಖೆಯ https://dwcd.karnataka.gov.in ರಲ್ಲಿ ಆನ್‍ಲೈನ್ ಸೇವೆಗಳ ಟ್ಯಾಬ್‍ನಲ್ಲಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿಯ ಸಬ್‍ಟ್ಯಾಬ್‍ನಲ್ಲಿ ಕ್ಲಿಕ್ ಮಾಡುವ ಮೂಲಕ ಆನ್‍ಲೈನ್ ವೆಬ್‍ಸೈಟ್ ವಿಳಾಸ https://karnemakaone.kar.nic.in/abcd/ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿರುತ್ತದೆ.
ಹರಿಹರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 04 ಅಂಗನವಾಡಿ ಕಾರ್ಯಕರ್ತೆ ಮತ್ತು 20 ಅಂಗನವಾಡಿ ಸಹಾಯಕಿಯರನ್ನು ನೇಮಕಾತಿ ಮಾಡಲು ಈ ಹಿಂದೆ ಭೌತಿಕವಾಗಿ ಅರ್ಜಿ ಆಹ್ವಾನಿಸಲಾಗಿದ್ದು ಇದನ್ನು ಪರಿಗಣಿಸಲಾಗುವುದಿಲ್ಲ, ಈ ಅಭ್ಯರ್ಥಿಗಳು ಸಹ ಹೊಸದಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಆನ್‍ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ತುಂಬುವುದು, ಭಾವಚಿತ್ರ, ಅಗತ್ಯ ದಾಖಲೆ, ಆಧಾರ್ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ ಅರ್ಜಿ ಪೂರ್ಣಗೊಳಿಸಬೇಕಾಗಿರುತ್ತದೆ. ನಾಲ್ಕು ವಿವಿಧ ಹಂತದಲ್ಲಿ ಅರ್ಜಿಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.
ವೆಬ್‍ಸೈಟ್‍ನಲ್ಲಿ ತಿಳಿಸಿರುವ ಅಂಶಗಳ ಜೊತೆಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಇತರೆ ಅವಶ್ಯಕ ದಾಖಲಾತಿಗಳ ಜೊತೆಗೆ, ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಅಥವಾ ವಿಧವಾ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ಮುಂದುವರೆದು ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸುವಾಗ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಿರುವ ವಿಧವೆಗೆ ಸಂಬಂಧಿಸಿದ ದಾಖಲಾತಿಗಳನ್ನು ಡೌನ್‍ಲೋಡ್ ಮಾಡಿಕೊಂಡು ಭೌತಿಕವಾಗಿ ಪರಿಶೀಲಿಸಿ ಆಯ್ಕೆ ಪಟ್ಟಿ ತಯಾರಿಸಲಾಗುವುದು. ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಮೊದಲ ಆದ್ಯತೆ, ಇಲಾಖೆಯ ಸಂಸ್ಥೆಗಳ ನಿವಾಸಿಗಳಿಗೆ ಎರಡನೇ ಆದ್ಯತೆ, ವಿಧವೆಯರಿಗೆ ಮೂರನೇ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ದಾವಣಗೆರೆ ದೂ.ಸಂ:08192-263219, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಹರಿಹರ ದೂ.ಸಂ:08192-241431, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಜಗಳೂರು ದೂ.ಸಂ: 08196-227132, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಹೊನ್ನಾಳಿ ಮತ್ತು ನ್ಯಾಮತಿ ದೂ.ಸಂ: 08196-227132ನ್ನು ಸಂಪರ್ಕಿಸಲು ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್

ಸುದ್ದಿದಿನ,ಚನ್ನಗಿರಿ:ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನ ಮೀರಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ (ಏ.14ರಂದು) ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ಈಗಲೂ ಜಾರಿಯಲ್ಲಿರುವ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ದೇಶದಲ್ಲಿ ಅನುಸೂಚಿತ ಜಾತಿಗಳು, ಬುಡಕಟ್ಟುಗಳು, ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿರುವಿಕೆಯ ಬಗ್ಗೆ ಚರ್ಚೆ ಆಗಬೇಕಾಗಿದೆ ಎಂದರು.
ಭಾರತ ದೇಶ ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಗ್ರಾಮೀಣ ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ಇಂದಿಗೂ ಕೂಡ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಆಗದೇ ಇರುವುದು ಒಂದು ವಿಪರ್ಯಾಸವೇ ಸರಿ. ಈ ಕಾರಣದಿಂದಲೇ ಇಂದಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿನ ಎಲ್ಲಾ ಸರ್ಕಾರಗಳು ಈ ನಿಟ್ಟಿನಲ್ಲಿ ತಾವು ರೂಪಿಸುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಳಿಸಿದಾಗ ಮಾತ್ರ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದಂತಾಗುತ್ತದೆ ಹಾಗೂ ಪ್ರಗತಿಪರ ದೇಶವಾಗುತ್ತದೆ ಎಂದು ನುಡಿದರು.
ಪ್ರಾಂಶುಪಾಲರಾದ ಅಮೃತೇಶ್ವರ್ ಬಿಜಿ ಅವರು
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಪ್ರಸನ್ನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ದೇವರಾಜು ಸ್ವಾಗತಿಸಿದರು. ವಿದ್ಯಾರ್ಥಿ ಸಂಜಯ್ ಟಿಪಿ ಆಶಯ ಗೀತೆ ಹಾಡಿದರು. ಪವನ್ ಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಜಾಮಿಯಾ ಮಸೀದಿಯ ಹೊರಗೆ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರನ್ನು ಮೊಹಮ್ಮದ್ ನಯಾಜ್ (32), ಮೊಹಮ್ಮದ್ ಗೌಸ್ ಪೀರ್ (45), ಚಾಂದ್ ಬಾಷಾ (35), ಇನಾಯತ್ ಉಲ್ಲಾ (51), ದಸ್ತಗೀರ್ (24), ಮತ್ತು ರಸೂಲ್ ಟಿಆರ್ (42) ಎಂದು ಗುರುತಿಸಲಾಗಿದೆ. ಅವರು ತಾವರೆಕೆರೆ ಗ್ರಾಮದಲ್ಲಿ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದರು.
ಈ ಜನರು ಜಮೀಲ್ ಅಹ್ಮದ್ ಅವರ ಪತ್ನಿ ಶಬೀನಾ ಬಾನು ಅವರ ಮೇಲೆ ವಿವಾಹೇತರ ಸಂಬಂಧದ ಆರೋಪದ ಮೇಲೆ ಹಲ್ಲೆ ನಡೆಸಿದರು. ಏಪ್ರಿಲ್ 7 ರಂದು ಶಬೀನಾ ಬಾನು (38) ತನ್ನ ಮಕ್ಕಳು ಮತ್ತು ಸ್ನೇಹಿತೆ ನಸ್ರೀನ್ ಜೊತೆ ಒಂದು ಸಣ್ಣ ಬೆಟ್ಟಕ್ಕೆ ಹೋಗಿ ಅದೇ ದಿನ ಮನೆಗೆ ಮರಳಿದ್ದರು ಎಂದು ಹೇಳಲಾಗುತ್ತದೆ. ವೈದ್ಯರ ನಿರ್ದೇಶನದಂತೆ ಮಾತ್ರೆ ತೆಗೆದುಕೊಂಡು ಮಲಗಿದ್ದರು.
ಈ ಮಧ್ಯೆ, ಆಕೆಯ ಸ್ನೇಹಿತೆ ನಸ್ರೀನ್, ತಾನು ಮನೆಗೆ ಹೋಗುವುದಾಗಿ ಹೇಳಿದ್ದರೂ, ಯಾವುದೋ ಕಾರಣಕ್ಕೆ ಅಲ್ಲಿಯೇ ಉಳಿದಳು. ನಂತರ, ನಸ್ರೀನ್ ಸಂಬಂಧಿ ಫ್ಜಯಾಜ್ ಎಂಬ ವ್ಯಕ್ತಿ ಶಬೀನಾ ಬಾನು ನಿವಾಸಕ್ಕೆ ಬಂದ. ಜಮೀಲ್ ತನ್ನ ಮನೆಗೆ ಬಂದು ನಸ್ರೀನ್ ಮತ್ತು ಫಯಾಜ್ ರನ್ನು ನೋಡಿದಾಗ, ತನ್ನ ಹೆಂಡತಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸಿದನು. ನಂತರ, ಅವರು ಮಸೀದಿಯಲ್ಲಿ ಧಾರ್ಮಿಕ ಮುಖಂಡರಿಗೆ ದೂರು ನೀಡಿದರು. ಶಬೀನಾ ಬಾನು ಮತ್ತು ಅವರ ಸ್ನೇಹಿತೆ ನಸ್ರೀನ್ ಮತ್ತು ಅವರ ಸಂಬಂಧಿ ಫಯಾಜ್ ಅವರನ್ನು ಏಪ್ರಿಲ್ 9 ರಂದು ತಾವರೆಕೆರೆ ಮಸೀದಿಯೊಳಗೆ ಕರೆದೊಯ್ಯಲಾಯಿತು. ಅಂದು ಮಹಿಳೆಯ ಮೇಲೆ ಹಲ್ಲೆ ನಡೆಸಲಾಯಿತು. ಎ.11 ರಂದು ಠಾಣೆಗೆ ಬಂದು ಮಹಿಳೆ ದೂರು ನೀಡಿದ್ದರು. ಈ ಸಂಬಂಧ ವಿಡಿಯೋ ಭಾರೀ ವೈರಲ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ

- ಗಿರೀಶ್ ಕುಮಾರ್ ಗೌಡ,ಬಳ್ಳಾರಿ
ಸುದ್ದಿದಿನಡೆಸ್ಕ್:ಗೇಟ್ ಗೆ ಡಿಕ್ಕಿ ಹೊಡೆದು ಟನ್ ಗಟ್ಟಲೇ ಹೆಚ್ಚಿನ ಕಬ್ಬಿಣ ಬಿಸಾಕಿ ಓಡಿ ಹೋಗಿದ್ದಾರೆ ಪ್ರಭಾವಿ ರಾಜಕೀಯ ನಾಯಕನ ಹಿಂಬಾಲಕರು ಎನ್ನುವ ಮಾಹಿತಿ ಲಭ್ಯವಾಗಿದೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಡಿಸಿ ನಗರದ ಹತ್ತಿರ ತುಂಗಭದ್ರಾ ಬೋರ್ಡ್ ಗೆ ಸಂಭಂದಿಸಿದ ಸೇತುವೆ ನಿರ್ಮಾಣ ಮಾಡಲು ಕಬ್ಬಿಣ ಹಾಕಿದ್ದರೆ ಅದನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ದುರ್ಘಟನ ನಡೆದಿತ್ತು. ಆದರೆ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಠಾಣೆಯ ಮುಂದೆ ಅಧಿಕಾರಿಗಳು ಕೇಸ್ ಮಾಡಲು ಸಿದ್ದರಾಗಿದ್ದರು, ಆದರೆ ಈ ಕಬ್ಬಿಣವನ್ನು ಪ್ರಭಾವಿ ರಾಜಕೀಯ ಹಿಂಬಾಲಕರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ವಿಚಾರ ಸುದ್ದಿಯಾಗುತ್ತೇ ರಾತ್ರೋರಾತ್ರಿ ಕಳ್ಳತನ ಮಾಡಿದ ವ್ಯಕ್ತಿ ವಾಟರ್ ಹೌಸ್ ನಲ್ಲಿ ಹಾಕಿ ಓಡಿ
ಹೋಗಿದ್ದಾರೆ.
ಮಹಾದೇವತತಾನ ಮಠದ ಎದುರುಗಡೆ ಇರುವ ವಾಟರ್ ಹೌಸ್ ನಲ್ಲಿ ರಾತ್ರಿ 1 ಗಂಟೆ 22 ನಿಮಿಷಕ್ಕೆ ಒಂದು ಲಾರಿ ಮತ್ತು ಕ್ರೇನ್ ಉಪಯೋಗಿ ಕೊಂಡು 10 ರಿಂದ 15 ನಿಮಿಷದ ಒಳಗೆ ಉಳಿಸಿ ಪರಾಯಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಸ್ಥಳೀಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಇನ್ನು ಈ ಕಬ್ಬಿಣ ಹಾಕಲು ಬಂದವರಲ್ಲಿ ಈ ವ್ಯಕ್ತಿಗಳು ಮೈಮೇಲೆ ದಪ್ಪ ದಪ್ಪ ಬಂಗಾರದ ಆಭರಣಗಳನ್ನು ಹಾಕಿಕೊಂಡು ಕಾರುಗಳಲ್ಲಿ ಬಂದಿದ್ದಾರೆ. ಅಧಿಕಾರಿಗಳು ಹೇಳಿದ್ದಾರೆ ಯಾವ ಅಧಿಕಾರಿ ? ಎನ್ನುವ ಮಾಹಿತಿಯನ್ನು ಇಲ್ಲಿಯ ಸಿಬ್ಬಂದಿಗೆ ನೀಡದೇ ಕಾಲು ಕಿತ್ತಿದ್ದಾರೆ. ಈ ಲಾರಿ ಹಾಗೂ ಕ್ರೇನ್ ಬಂದಿರುವುದು ಮಹಾದೇವ ತಾತನ ಮಠದ ಹೊರಗಡೆ ಇರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಅದರಲ್ಲಿ ತುಂಗಭದ್ರಾ ಬೋರ್ಡ್ ನಲ್ಲಿ ಕಳ್ಳತನ ಮಾಡಿದ ಕಬ್ಬಿಣವನ್ನು ಭಯದ ವಾತಾವರಣದಲ್ಲಿ ವಾಟರ್ ಬೋಸ್ಟ್ ನಲ್ಲಿ ಹಾಕು ಓಡಿಹೋಗಿದ್ದಾರೆ.
ವಾಟರ್ ಬೂಸ್ಟ್ ನ ಗೇಟ್ ಗೆ ಡಿಕ್ಕಿ ಹೊಡೆದು ಗೇಟ್ ಮುರಿದು ಮೂರು ತಾಸುಗಳಲ್ಲಿ ಇಳಿಸಬೇಕಾದ ಕಬ್ಬಿಣ ಬರಿ 10 ರಿಂದ 15 ನಿಮಿಷದಲ್ಲಿ ಬಿಸಾಕಿ ಓಡಿಹೋಗಿದ್ದಾರೆ. ಇನ್ನು ತುಂಗಭದ್ರಾ ಬೋರ್ಡ್ ಸಿಬ್ಬಂದಿಗೆ ಕೇಳಿದ್ರೇ ಇಲ್ಲ ನನಗೆ ಏನು ? ಗೊತ್ತಿಲ್ಲ ನಮ್ಮ ಅಧಿಕಾರಿ ಕೆಂಚಪ್ಪ ಕಬ್ಬಿಣ ಕಳ್ಳತನ ಅವರಿಗೆ ಗೊತ್ತಿದೆ ಎನ್ನುವ ಮಾಹಿತಿ ನೀಡಿದರು. ಆದರೆ ಕಬ್ಬಿಣಕ್ಕೆ ತುಂಗಭದ್ರಾ ಬೋರ್ಡ್ ಎನ್ನುವ ಬರಹವನ್ನು ಹಳದಿ ಬಣ್ಣದಿಂದ ಬರದ ವ್ಯಕ್ತಿ ನಾನು ಎಂದರು.
ಭರತ್ ರೆಡ್ಡಿ ಆಪ್ತ ಸಿಂಧನೂರಿನ ಶಶಿ
ಕಾಂಗ್ರೇಸ್ ಮುಖಂಡ ಶಶಿ ಎನ್ನುವ ವ್ಯಕ್ತಿ ಕಾಂಗ್ರೆಸ್ ಪಕ್ಷದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಎನ್ನುವ ಅಂಶ ದೊರೆತಿದೆ. ಇನ್ನು ಈ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸರ್ಕಾರ ನೀಡುವ ಅನ್ನ ಭಾಗ್ಯದ ಸಾರ್ವಜನಿಕರಿಗೆ ಉಚಿತವಾಗಿ ನೀಡಿದರೇ, ಶಶಿ ಎನ್ನುವ ಕಾಂಗ್ರೇಸ್ ಮುಖಂಡ ಶಶಿ ಅಕ್ಕಿ ದಂದೆಯಲ್ಲಿ ನಿಂತು ಶಾಸಕ ಹೆಸರು ಹೇಳಿಕೊಂಡು ಹಗಲು ದರೋಡೆ ಮಾಡುತ್ತಿದ್ದಾನೆ.
ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಏಕೆ ? ಮೌನರಾಗಿದ್ದಾರೆ ಅವರಿಗೆ ಶಾಸಕರ ಒತ್ತಡ ಇದೆಯೇ ?
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸಹಾಯಕ ‘ಲಕ್ಷ್ಮೀ ನಾರಾಯಣ ಶಾಸ್ತ್ರಿ’ ಸಹ ಈ ಕಬ್ಬಿಣ ಕಳ್ಳತನ ವ್ಯವಹಾರದಲ್ಲಿ ಭಾಗಿಯಾಗಿ ಶಶಿ ಎನ್ನುವ ಮುಖಂಡನಿಗೆ ಸಹಕಾರ ನೀಡುತ್ತಿದ್ದಾನೆ. ರಾತ್ರೋರಾತ್ರಿ ಕಬ್ಬಿಣವನ್ನು ಬಿಸಾಡಲು ಸಹ ಸಹಕಾರ ನೀಡಿದ್ದಾನೆ. ಇನ್ನು ಈ ವಿಚಾರವಾಗಿ ‘ಸುದ್ದಿದಿನ’ ವೆಬ್ ನಲ್ಲಿ ವಿಶೇಷ ವರದಿಗಾರರು ದೂರವಾಣಿ ಮೂಲಕ ಕರೆ ಮಾಡಿದ್ರೇ ಅವರು ಸ್ವೀಕರಿಸಲಿಲ್ಲ.
ಇನ್ನು ಗ್ಯಾಸ್ ವೆಲ್ಡರ್ ಬಶೀರ್ ನನ್ನು ನಾರಾ ಭರತ್ ರೆಡ್ಡಿ ಆಪ್ತ ಕಾಂಗ್ರೇಸ್ ಯುವ ಮುಖಂಡ ಕೊಳಗಲ್ಲು ಧರ್ಮರೆಡ್ಡಿ ಗ್ರಾಮೀಣ ಠಾಣೆಗೆ ಬಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ ಅವರನ್ನು ಬಿಟ್ಟು ಕಳಿಸಿ ಎನ್ನುವ ಮಾಹಿತಿಯ ಪೊಲೀಸ್ ಠಾಣೆಯ ಎಸ್.ಬಿ ( spacial Branch) ಅವರ ಮೂಲಕ ಹೋಗಿದ್ದಾರೆ. ಇನ್ನು ಪೋಲೀಸರು ಧರ್ಮರೆಡ್ಡಿ ಮತ್ತು ಬಶೀರ್ ಇಬ್ಬರು ನಿಲ್ಲಿಸಿ ಪೋಟೊ ತೆಗೆಸಿ ಪತ್ರ ಬರೆಸಿಕೊಂಡು,ಸಹಿ ಮಾಡಿಸಿ ಕಳಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರ ಅವರು ತುಂಗಭದ್ರಾ ಬೋರ್ಡ್ ಅಧಿಕಾರಿ ಕೆಂಚಪ್ಪ ಹಾಗೂ ಸರ್ಕಾರಿ ಪಿಎ ಲಕ್ಷ್ಮೀ ನಾರಾಯಣಶಾಸ್ತ್ರಿ ವಿರುದ್ಧ ಯಾವ ? ರೀತಿಯ ಕ್ರಮ ತೆಗದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಒಟ್ಟಾರೆಯಾಗಿ “ಸುದ್ದಿದಿನ” ವೆಬ್ ಪ್ರಕಟಿಸಿ ವರದಿಗೆ ಫಲಶೃತಿ ದೊರೆತಿದೆ. ಇನ್ನು ಈ ರಾಜಕೀಯ ವ್ಯಕ್ತಿಯ ಬೆಂಬಲಿಗರು ಯಾರು ? ಅವರ ವಿರುದ್ಧ ಕೇಸ್ ಮಾಡುತ್ತಾರೋ ಇಲ್ಲವೋ ಎನ್ನುವ ಅಂಶ ಪೊಲೀಸ್ ಇಲಾಖೆ ಉತ್ತರಿಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ7 days ago
ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ
-
ದಿನದ ಸುದ್ದಿ7 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ6 days ago
ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ
-
ದಿನದ ಸುದ್ದಿ7 days ago
ದಾವಣಗೆರೆ | ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ
-
ದಿನದ ಸುದ್ದಿ6 days ago
ಜಾನಪದ ಆಚರಣೆಗಳಲ್ಲಿ ವೈಜ್ಞಾನಿಕತೆ ಅಡಗಿದೆ : ಪ್ರೊ. ಮೋನಿಕಾ ರಂಜನ್
-
ಅಂಕಣ5 days ago
ಕವಿತೆ | ಇಷ್ಟಂತೂ ಹೇಳಬಲ್ಲೆ..!