ಲೈಫ್ ಸ್ಟೈಲ್
ಆರೋಗ್ಯದ ಗಣಿ ‘ಬಾಳೆ ಹಣ್ಣಿ’ನ ಮಹತ್ವ ತಿಳಿದರೆ ಅಚ್ಚರಿ ಪಡ್ತಿರಾ..!
ಸುದ್ದಿದಿನ ಡೆಸ್ಕ್ : ಬಾಳೆಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುವ ಹಣ್ಣು. ಅದರ ಉಪಯೋಗಗಳು ಸಹ ಗೊತ್ತು. ಅದರ ಉಪಯೋಗದ ಜೊತೆಗೆ ಅದರ ಎಲ್ಲಾ ಭಾಗಗಳ ಉಪಯೋಗ ತಿಳಿದರೆ ಇನ್ನೂ ನಾವು ಅದನ್ನು ಹೆಚ್ಚಾಗಿ ಬಳಸಬಹುದು. ಬಾಳೆಹಣ್ಣಿನ ಜೊತೆಗೆ ಅದರ ಹೂವು, ಕಾಯಿ, ದಿಂಡು, ಸಿಪ್ಪೆ, ಎಲೆ ಎಲ್ಲಾದರಿಂದ ಉಪಯೋಗ ಇದೇ. ಪ್ರತಿನಿತ್ಯ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇದು ದೇಹಕ್ಕೆ ಬೇಕಾದ ಶೇ. 25ರಷ್ಟು ಸಕ್ಕರೆಯನ್ನು ಒದಗಿಸುತ್ತದೆ. ಬಾಳೆಹಣ್ಣು ಸೇವಿಸುವುದರಿಂದ ಜೀರ್ಣಶಕ್ತಿ ಅಧಿಕವಾಗುವುದು, ದೇಹದ ತೂಕವೂ ಸಹ ಹೆಚ್ಚಾಗುವುದು.
ಉಪಯೋಗಗಳು
- ಬಾಳೆ ಕಾಯಿಯ ತಿರುಳನ್ನು ಹಾಲಿನಲ್ಲಿ ಬೇಯಿಸಿ ತಿಂದರೆ ಹೊಟ್ಟೆ ಹುಣ್ಣು, ಮೂಲವ್ಯಾಧಿಯ ನೋವು ನಿವಾರಣೆಯಾಗುತ್ತದೆ.
- ನೇಂದ್ರ ಬಾಳೆಯ ತಿರುಳನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಶುಂಠಿಯ ಪುಡಿ ಮತ್ತು ಜೀರಿಗೆ ಪುಡಿಯನ್ನು ಹಾಗೂ ಬೆಲ್ಲವನ್ನು ಸೇರಿಸಿ ಸೇವಿಸುತ್ತಿದ್ದರೆ ಅಲ್ಸ್ಟರ್ ಇಲ್ಲವಾಗಿವಿದು.
- ಬಾಳೆಹಣ್ಣನ್ನು ಮೊಸರು ಅನ್ನದಲ್ಲಿ ಕಿವುಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವುದರ ಜೊತೆಗೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಹಾಲು ಮತ್ತು ಜೇನುತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.
- ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಟೈಫಾಯಿಡ್ ರೋಗಿಗಳಿಗೆ ಕೊಡುವುದರಿಂದ ಶೀಘ್ರವಾಗಿ ಗುಣವಾಗುತ್ತದೆ.
- ಬಸರಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಹೆರಿಗೆ ಬಹು ಸುಲಭವಾಗಿ ಆಗುತ್ತದೆ.
- ಬಾಳೆಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಸತ್ವವಿರುವುದರಿಂದ ಬಲವರ್ಧಕವೂ, ವೀರ್ಯವರ್ಧಕವೂ ಆಗುತ್ತದೆ.
- ಬಾಳೆಹಣ್ಣನ್ನು ಕ್ರಮವಾಗಿ ಬಳಸುವುದರಿಂದ ಮೈಯಲ್ಲಿನ ಮಾಂಸ ವೃದ್ಧಿಯಾಗುವುದು, ಮಲಬದ್ಧತೆಯು ನಿವಾರಣೆಯಾಗುವುದು.
- ಮೂತ್ರ ವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಬಾಳೆಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಸೇವಿಸಿದರೆ ಶೀಘ್ರವಾಗಿ ಗುಣ ಕಂಡುಬರುವುದು.
- ಕರಳಿನಲ್ಲಿರುವ ವಿಷ ಕ್ರಿಮಿಗಳನ್ನು ನಾಶಪಡಿಸಲು ಬಾಳೆದಿಂಡಿನ ಪಲ್ಯವನ್ನು ಅಪರೂಪವಾಗಿ ತಿನ್ನಬೇಕು.
- ಬಾಳೆ ಎಲೆಯ ಭಸ್ಮವನ್ನು ಜೇನುತುಪ್ಪದೊಡನೆ ಸೇವಿಸಿದರೆ ಬಿಕ್ಕಳಿಕೆ ದೂರವಾಗುವುದು.
- ಗಾಂಜಾ, ಅಫೀಮು ಸೇವಿಸಿ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಬಳಸಬೇಕು.
- ಮೈನೆರೆದ ಹುಡುಗಿಯರಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಬಾಳೆ ಹೂವಿನ ರಸವನ್ನು ಮೊಸರಿನಲ್ಲಿ ಕೊಡುವುದರಿಂದ ಬಹುಬೇಗ ಗುಣವಾಗುವುದು.
- ಬಾಳೆಕಾಯಿಯನ್ನು ಬಿಸಿ ಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣವೇ ನಿಲ್ಲುವುದು.
- ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಅರೆದು ಅದಕ್ಕೆ ಬಾಳೆಹೂವಿನ ರಸವನ್ನು ಕೂಡಿಸಿ 50 ದಿನಗಳು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ಸ್ಥೂಲಕಾಯರು ತೆಳ್ಳಗೆ ಆಗುತ್ತಾರೆ.
- ನರಗಳ ದುರ್ಬಲತೆಯಿಂದ ಉಂಟಾಗುವ ಉನ್ಮಾದ ಅಪಸ್ಮಾರ ರೋಗಗಳಿಗೆ ಬಾಳೆಮರದ ಕಾಂಡದಿಂದ ರಸ ಹಿಂಡಿ ಎಳನೀರಿನೊಂದಿಗೆ ಕುಡಿಸಿದರೆ ಉತ್ತಮವಾಗುತ್ತದೆ.
- ಬಾಳೆದಿಂಡಿನ ಪಲ್ಯ ಸೇವಿಸುವುದರಿಂದ ರಕ್ತಾತಿಸಾರದಲ್ಲಿ ಗುಣ ಕಂಡು ಬರುತ್ತದೆ. ಕರುಳಿನಲ್ಲಿ ಇರಬಹುದಾದ ವಿಷಕ್ರಮಿಗಳನ್ನು ನಾಶಪಡಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.
- ನಮ್ಮೆಲ್ಲರ ಕಾಡುವ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳಿಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು.
- ಬಾಳೆದಿಂಡಿನ ಪಲ್ಯ ತಿನ್ನುವುದರಿಂದ ಮೂತ್ರಕೋಶದಲ್ಲಿನ ಕಲ್ಲು ಕರಗುತ್ತದೆ.
- ಹಾಲಿನ ಜೊತೆಗೆ ಬಾಳೆಹಣ್ಣು ಸೇರಿಸಿ ಮಕ್ಕಳಿಗೆ ಕೊಡುವುದರಿಂದ ರುಚಿಯ ಜೊತೆಗೆ ದಿನದ ಪೌಷ್ಟಿಕಾಂಶ ಸಿಗುತ್ತದೆ.
- ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲು ಬಿಳುಪಾಗುತ್ತದೆ.
- ಬಾಳೆಹಣ್ಣಿನ ಸಿಪ್ಪೆ ಯಿಂದ ಮೊಡವೆ ಉಜ್ಜದರೆ ಮೊಡವೆ ಕಡಿಮೆಯಾಗುತ್ತದೆ.
- ಸೊಳ್ಳೆ ಕಚ್ಚಿದ ಜಾಗವನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಉಜ್ಜಿದಾಗ ಕಡಿತ ಕಡಿಮೆಯಾಗುತ್ತದೆ.
- ಬಾಳೆಹಣ್ಣನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಅಂಶಗಳು
ಬಾಳೆಹಣ್ಣಿನಲ್ಲಿ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6, 1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ.8ರಷ್ಟು ಮ್ಯಾಂಗನೀಸ್ ಇದೆ. ಅದರಿಂದ ಎಲ್ಲಾ ವಯೋಮಾನದವರು ಸೇವಿಸಬಹುದು.ಜೊತೆಗೆ ಇದು ಎಲ್ಲಾ ಕಾಲದಲ್ಲೂ ಸಿಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


