ಲೈಫ್ ಸ್ಟೈಲ್
ಸ್ತನ್ಯಪಾನದ ಬಗ್ಗೆ ನಿಮಗಿಷ್ಟು ತಿಳಿದಿರಲಿ : ಮಿಸ್ ಮಾಡ್ದೆ ಓದಿ..!
- ಸುಮಧುರ. ಎಂ ಪಿ,ತಿಪಟೂರು
ಹೆಣ್ಣಿಗೆ ತಾಯ್ತನ ಎನ್ನುವುದು ವರ. ತಾನು ತಾಯಿ ಆಗುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳನ್ನು ದಾಟಿ ಬಂದಿರುತ್ತಾಳೆ. ಗರ್ಭಿಣಿಯಾಗಿ ಒಂಭತ್ತು ತಿಂಗಳು ಅನುಭವಿಸುವ ಸಂತಸ, ನೋವು , ಭಾರ ದೇಹದಲ್ಲಾಗುವ ಬದಲಾವಣೆಗಳು , ತನ್ನ ಮತ್ತು ಮಗುವಿನ ಆರೋಗ್ಯದ ಕಾಳಜಿ ಮಾಡುತ್ತಿರುತ್ತಾಳೆ. ಮಗು ಜನಿಸಿದ ನಂತರ ಅದಕ್ಕೆ ಮುಖ್ಯ ಆಹಾರವಾಗಿ ಎದೆಹಾಲು ಕುಡಿಸುವುದು ಕಷ್ಟವೆನಿಸಿದರೂ ತಾಯಿ ಅಥವಾ ದಾದಿಯರ ಸಹಾಯದಿಂದ ಸರಿಯಾದ ಕ್ರಮ ಮತ್ತು ಭಂಗಿಯಲ್ಲಿ ಕುಳಿತು ಸ್ತನ್ಯಪಾನ ಮಾಡಿಸಲು ಕಲಿಯುತ್ತಾಳೆ.
ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಶಿಶುಗಳಿಗೆ ಸ್ತನ್ಯಪಾನ ಮಾಡಿಸುವುದು ಮಗುವಿನ ಆರೋಗ್ಯಕ್ಕೆ ಸಿಗಬೇಕಾದ ಅಗತ್ಯ ಪೌಷ್ಟಿಕಾಂಶ ಮತ್ತು ಮಗುವಿನ ಬೆಳವಣಿಗೆಗೆ ತಾಯಿ ಹಾಲು ಮೂಲ ಆಹಾರ ಎಂದು ಶಿಫಾರಸ್ಸು ಮಾಡುತ್ತದೆ . ಮಗುವಿಗೆ ಆರು ತಿಂಗಳು ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸುವುದು ಒಳ್ಳೆಯದು ಎಂದು ಎಲ್ಲಾ ವೈದ್ಯರು ಸೂಚಿಸುತ್ತಾರೆ.
ನಂತರ 24 ತಿಂಗಳವರೆಗೆ ನೀಡಬಹುದು. ಕೆಲವು ತಾಯಂದಿರು 5 ತಿಂಗಳ ನಂತರ ಘನ ಆಹಾರ ಅಥವಾ ಫಾರ್ಮುಲ ಹಾಲು ನೀಡಲು ಮುಂದಾಗುತ್ತಾರೆ. ಸ್ತನ್ಯಪಾನ ಮಾಡಿಸಲು ಹಲವು ತೊಂದರೆಗಳನ್ನು ಅನುಭವಿಸುವರು ಸ್ತನ್ಯಪಾನ ನಿಲ್ಲಿಸಲು ನಿರ್ಧರಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ತುಂಬಾ ಮುಖ್ಯವಾಗಿರುತ್ತದೆ.
ಕಾರಣಾಂತರದಿಂದ ಸ್ತನ್ಯಪಾನ ನಿಲ್ಲಿಸುವುದರಿಂದ ತಾಯಿ ಮತ್ತು ಮಗುವಿಗೆ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಜೊತೆಗೆ ತಾಯಂದಿರು ಕೆಲವು ಅಸ್ವಸ್ಥತೆಗಳನ್ನು ಅನುಭವಿಸುತ್ತಾರೆ. ಪ್ರೊಲ್ಯಾಕ್ಟೆನ್ ಮತ್ತು ಆಕ್ಸಿಟೋಸಿನ್ ಮಟ್ಟವು ಕಡಿಮೆಯಾದಾಗ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಇದು ದಣಿವಿಗೆ ಕಾರಣವಾಗಬಹುದು ಎಂದು ಡಾ|| ರೀಮಾ ಸೋನ್ವಾಲ್ ಹೇಳುತ್ತಾರೆ . ಸ್ತನ್ಯಪಾನ ತ್ಯಜಿಸುವುದರಿಂದ ಉಂಟಾಗುವ ಕೆಲವು ಪರಿಣಾಮಗಳನ್ನು ಈ ಕೆಳಗೆ ನೋಡಬಹುದು.
ಸ್ತನ್ಯಪಾನ ನಿಲ್ಲಿಸುವುದರಿಂದ ಹಾಲಿನ ನಾಳಗಳು ಕಟ್ಟಿಕೊಂಡು ಸ್ತನಗಳಲ್ಲಿ ತೀವ್ರ ಮೃದುತ್ವವನ್ನು ಉಂಟುಮಾಡುತ್ತದೆ. ಯಾವುದೇ ಚಿಕಿತ್ಸೆಯನ್ನು ಪಡೆಯದಿದ್ದರೆ ಸ್ತನ ಸೋಂಕಿಗೆ ಕಾರಣವಾಗಬಹುದು ಇದು ಅತಿಯಾದ ನೋವು, ಜ್ವರ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತದೆ.ಸ್ತನಗಳನ್ನು ಮುಟ್ಟಿದಾಗ ಬೆಚ್ಚಗೆ ಮತ್ತು ಮೃದುವಾಗಿರುತ್ತದೆ. ಕಟ್ಟಿದ ಸ್ತನಗಳನ್ನು ಮ್ಯಾಸ್ಟೈಟಿಸ್ ಎಂದು ಕರೆಯುತ್ತಾರೆ . ಇದಕ್ಕೆ ವಾರ್ಮಿಂಗ್ ಪ್ಯಾಡ್ ಬಳಸಿ, ಹಾಲನ್ನು ತೆಗೆಯಬೇಕು ಮತ್ತು ನೋವಿಗೆ ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಬಹುದು .
2. ಸ್ತನಗಳ ಪೂರ್ಣತೆ : ಸ್ತನ್ಯಪಾನ ನಿಲ್ಲಿಸುವುದರಿಂದ ಸ್ತನಗಳಲ್ಲಿ ಹಾಲು ಸಂಗ್ರಹವಾಗಿ ನೋವು ಮತ್ತು ಭಾರವಾಗುತ್ತದೆ. ಹಾಲನ್ನು ವ್ಯಕ್ತಪಡಿಸುವುದರಿಂದ ಪೂರ್ಣತೆಯ ಭಾವನೆಯನ್ನು ಕಡಿಮೆ ಮಾಡಬಹುದು.
3. ಸ್ತನಗಳ ಆಕಾರ : ಹಾಲುಣಿಸುವಿಕೆಯಿಂದ ಸ್ತನಗಳ ಆಕಾರ ಬದಲಾಗುತ್ತದೆ. ತುಂಬಿದ ಸ್ತನಗಳು ಕ್ರಮೇಣ ಖಾಲಿಯಾದಂತೆ ಆಗುತ್ತದೆ. ಜೋತು ಬೀಳುತ್ತದೆ. ಇದರಿಂದ ಭಯಪಡುವ ಅಗತ್ಯವಿಲ್ಲ . ಕೆಲವು ತಿಂಗಳೊಳಗೆ ಮೊದಲಿನ ಸ್ಥಿತಿಗೆ ಬರುತ್ತದೆ , ಆದರೆ ಸ್ವಲ್ಪ ಅಕಾರದಲ್ಲಿ ವ್ಯತ್ಯಾಸವಾಗಬಹುದು.
4. ದೈಹಿಕ ಖಾಯಿಲೆ : ಹಾಲುಣಿಸುವಿಕೆಯಿಂದ ಬರುವ ಕೆಲವು ಸಮಸ್ಯೆಗಳೆಂದರೆ ತಲೆ ನೋವು, ವಾಕರಿಕೆ , ಮತ್ತು ಚಿತ್ತಸ್ಥಿತಿಯ ಬದಲಾವಣೆಗಳಾಗಿವೆ. ಇದೆಲ್ಲಾ ಹಾರ್ಮೋನುಗಳ ವ್ಯತ್ಯಾಸದಿಂದ ಆಗುವ ಪರಿಣಾಮಗಳಾಗಿವೆ. ಕೆಲವೊಮ್ಮೆ ಈ ಸಮಸ್ಯೆಗಳು ಗರ್ಭಧಾರಣೆಯ ಆರಂಭಿಕ ಲಕ್ಷಣಗಳಾಗಿ ಅನುಕರಿಸುತ್ತವೆ.
5. ಫಲವತ್ತತೆಯ ಹೆಚ್ಚಳ :ಸ್ತನ್ಯಪಾನ ಸಮಯದಲ್ಲಿ ತಾಯಿಯ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಅಂಡೋತ್ಪತ್ತಿಯ ಸಾಧ್ಯತೆಯನ್ನು ಕಡಿಮೆ ಮಾಡಿರುತ್ತದೆ. ತಾಯಿ ಸ್ತನ್ಯಪಾನ ನಿಲ್ಲಿಸಿದಾಗ ಈ ಹಾರ್ಮೋನುಗಳು ಬದಲಾಗುತ್ತದೆ. ಸ್ತನ್ಯಪಾನ ನಿಲ್ಲಿಸಿದ ಆರು ವಾರಗಳಲ್ಲಿ ತಾಯಿಯು ತನ್ನ ಋತು ಚಕ್ರವನ್ನು ಹೊಂದುತ್ತಾಳೆ. ನಂತರ ಅಂಡೋತ್ಪತ್ತಿ ಮತ್ತೊಮ್ಮೆ ಪ್ರಾರಂಭವಾಗುತ್ತದೆ.
6. ಭಿನ್ನತೆ : ಕೆಲವು ತಾಯಂದಿರು ಹಾಲುಣಿಸುವುದನ್ನು ನಿಲ್ಲಿಸುವುದರಿಂದ ತೀವ್ರ ಖಿನ್ನತೆಗೊಳಗಾಗುತ್ತಾರೆ . ಶಿಶು ಹಾಲು ಹೀರುವುದನ್ನು ನಿಲ್ಲಿಸಿದಾಗ ಅಥವಾ ಹಾಲನ್ನು ವ್ಯಕ್ತಪಡಿಸದೆ ಇದ್ದಾಗ ತಾಯಿಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಖಿನ್ನತೆಗೆ ಕಾರಣಳಾಗುತ್ತಾಳೆ. ಸ್ತನ್ಯಪಾನ ಮಾಡಿಸುವಾಗ ಪ್ರೊಲ್ಯಕ್ಟಿನ್ ಹಾರ್ಮೋನ್ ತಾಯಿಗೆ ಶಾಂತತೆ ಮತ್ತು ಸಂತೋಷವನ್ನು. ಉಂಟುಮಾಡುತ್ತದೆ.
ಹಾಲು ಕೊಡುವುದನ್ನು ನಿಲ್ಲಿಸುವುದರಿಂದ ಪ್ರೊಲ್ಯಾಕ್ಟಿನ್ ಹಾರ್ಮೋನ್ ಇಳಿಮುಖವಾಗುವುದಕ್ಕೆ ಆಕೆ ದುಃಖವನ್ನು ಅನುಭವಿಸುತ್ತಾಳೆ. ಅವಳ ಮತ್ತು ಮಗುವಿನ ಬಂಧದಲ್ಲಿ ಗೊಂದಲ ಉಂಟಾಗುತ್ತದೆ. ಪ್ರತಿ ತಾಯಿಯು ಖಿನ್ನತೆಯನ್ನು ಅನುಭವಿಸುವುದಿಲ್ಲ , ಆದಾಗ್ಯೂ ಖಿನ್ನತೆಗೆ ಒಳಗಾಗಿದ್ದರೆ ವೈದ್ಯರ ಸಹಾಯ ಮತ್ತು ಸಲಹೆ ಪಡೆಯುವುದು ಉತ್ತಮ .
7. ತೀವ್ರ ಆಯಾಸ ಮತ್ತು ದಣಿವು : ತಾಯಿಯ ದೇಹದಲ್ಲಿನ ಪ್ರೊಜೆಸ್ಟರನ್ ಮತ್ತು ಮಟ್ಟವು ಹಾಲುಣಿಸುವಿಕೆಯ ನಂತರ ಮರು ಸಮತೋಲನಗೊಳ್ಳಲು ಪ್ರಯತ್ನಿಸುವ ಕಾರಣದಿಂದ ದಣಿವು ಮತ್ತು ಆಯಾಸ ಎನಿಸುತ್ತದೆ. ಸ್ತನ್ಯಪಾನ ನಿಲ್ಲಿಸುವುದರಿಂದ ಸಾಮಾನ್ಯ ನಿದ್ರೆಯ ಮಾದರಿಗಳು ಹಿಮ್ಮುಖಗೊಳ್ಳದಿರಬಹುದು. ಇದರಿಂದ ತಾಯಂದಿರು ಮತ್ತಷ್ಟು ಆಯಾಸಕ್ಕೊಳಗಾಗಬಹುದು.
8. ಆಹಾರ ಸೇವಿಸುವುದರಲ್ಲಿ ಹಿಂಜರಿಕೆ : ಮಗುವಿನ ಶುಶ್ರೂಷೆ , ಸ್ತನ್ಯಪಾನ ಮಾಡಿಸಲು ತಾಯಂದಿರಿಗೆ ಸಾಕಷ್ಟು ಕ್ಯಾಲೋರಿಗಳು ಸೇವಿಸಲು ವೈದ್ಯರು ಸೂಚಿಸುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಎದೆ ಹಾಲು ಕೊಡುವಾಗ ಹೆಚ್ಚು ಆಹಾರ ಸೇವಿಸುತ್ತಾರೆ. ಆದರೆ ತೂಕ ಹೆಚ್ಚುವುದಿಲ್ಲ. ಸ್ತನ್ಯಪಾನ ನಿಲ್ಲಿಸುವುದರಿಂದ ಆಹಾರ ಸೇವನೆಯ ಅಭ್ಯಾಸವನ್ನು ಕಡಿತಗೊಳಿಸುವುದು ಸವಾಲಿನ ಸಂಗತಿಯಾಗುತ್ತದೆ. ಕೆಲವರಿಗೆ ಹೆಚ್ಚಿಗೆ ಆಹಾರ ಸೇವಿಸುವುದು ನಾಚಿಕೆ ಎನಿಸಬಹುದು. ಹಾರ್ಮೋನುಗಳ ಬದಲಾವಣೆಯಿಂದ ಖಿನ್ನತೆಯು ಹೆಚ್ಚಾಗಬಹುದು .
9. ಶಿಶುವಿನೊಂದಿಗೆ ಬಾಂಧವ್ಯದ ಸಮಸ್ಯೆಗಳು : ಕೆಲವು ತಾಯಂದಿರಲ್ಲಿ ಆಕ್ಸಿಟೋಸಿನ್ ಮಟ್ಟವು ಕಡಿಮೆ ಯಾಗುವುದರಿಂದ ಮಗುವಿನ ಜೊತೆಗಿನ ಬಾಂಧವ್ಯ ಸ್ವಲ್ಪ ಕಡಿಮೆಯಾಗುತ್ತದೆ. ಸ್ತನ್ಯಪಾನ ಮಾಡದೆ ಮಗುವನ್ನು ಹಿತಗೊಳಿಸುವಲ್ಲಿ ತಾಯಿ ಸೋಲಬಹುದು. ಆದರಿಂದ ಮಗುವಿನ ಜೊತೆ ಆಟವಾಡುವುದು , ನಿದ್ರೆಯ ಸಮಯದಲ್ಲಿ ಮುದ್ದಾಡುವುದು, ಮಗುವಿಗೆ ಹತ್ತಿರವಾಗಲು ಇತರೆ ಮಾರ್ಗಗಳನ್ನು ಕಂಡುಕೊಳ್ಳುವುದು ತಾಯಿ ಮತ್ತು ಮಗುವಿನ ಬಂಧವನ್ನು ಉತ್ತಮಗೊಳಿಸುವಲ್ಲಿ ಸಹಕರಿಸುತ್ತದೆ .
10. ಆಂತಕ ಮತ್ತು ಎದೆ ಬಡಿತ ಹೆಚ್ಚಾಗುವುದು : ಆಂತಕವು ಸಾಕಷ್ಟು ರೀತಿಯಲ್ಲಿ ಹೊರಹೊಮ್ಮುವುದು ಉದಾಹರಣೆಗೆ ; ತಾಯಿ ತುಂಬಾ ಸಿಡುಕುವುದು , ಚಿಂತಿಸುವುದು , ಭೀತಿಗೊಳಗಾಗುವುದು. ಈ ತರಹದ ಆತಂಕವು ಎದೆ ಬಡಿತವನ್ನು ಹೆಚ್ಚುಮಾಡುತ್ತದೆ .
11. ನಿದ್ರಾಹೀನತೆ : ಕೆಲವು ತಾಯಂದಿರಿಗೆ ಸ್ತನ್ಯಪಾನ ಮಾಡಿಸುವ ಅಗತ್ಯವಿಲ್ಲದಿದ್ದರೂ ನಿದ್ರೆ ಮಾಡಲು ಕಷ್ಟವಾಗುತ್ತದೆ.
12. ಚರ್ಮದ ಬದಲಾವಣೆಗಳು : ಸ್ತನ್ಯಪಾನ ಮಾಡಿಸುವಾಗ ಹಾರ್ಮೋನುಗಳ ಉಲ್ಬಣದಿಂದ ತಾಯಿಯ ಚರ್ಮದಲ್ಲಿ ಬದಲಾವಣೆ ತರಬಹುದು . ಸ್ತನ್ಯಪಾನ ನಿಲ್ಲಿಸಿದಾಗ ಚರ್ಮದಲ್ಲಿ ಶುಷ್ಕತೆ, ಮೊಡವೆ, ಕಲೆಗಳು ಮತ್ತು ಬೇರೆ ಚರ್ಮಕ್ಕೆ ಸಂಬಂಧ ಪಟ್ಟ ಬಾಧೆಗಳು ಕಾಡಬಹುದು .
13. ತಾಯಿಯಲ್ಲಿ ಒತ್ತಡ : ಮಗುವನ್ನು ಸಂತೈಸಲು ಆಗದೆ ಇರುವಾಗ ,ಸ್ತನಗಳ ನೋವು ಮತ್ತು ತಲೆನೋವು ಕೆಲವು ತಾಯಂದಿರಲ್ಲಿ ಒತ್ತಡ ಮಟ್ಟವನ್ನು ಹೆಚ್ಚಿಸಬಹುದು.
ಮಗುವಿನ ಮೇಲೆ ಆಗುವಂತಹ ಪರಿಣಾಮಗಳು
ಸ್ತನ್ಯಪಾನ ನಿಲ್ಲಿಸಿದಾಗ ಶಿಶುಗಳು ಸಹ ಹಲವು ಸಮಸ್ಯೆಗಳನ್ನು ಎದುರಿಸಬಹುದು.
ಎದೆಹಾಲಿನಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಪ್ರತಿಕಾಯಗಳು ಇರುವುದರಿಂದ ಹಾಲು ಕೊಡುವುದು ನಿಲ್ಲಿಸಿದಾಗ ಸೋಂಕಿನ ಅಪಾಯ ಹೆಚ್ಚಾಗಬಹುದು. ಮತ್ತು ಪ್ರತಿಕಾಯಗಳು ಮಗುವಿನಲ್ಲಿ ಸೇರುವುದಿಲ್ಲ .
ಎದೆ ಹಾಲಿನ ಪೌಷ್ಟಿಕಾಂಶ ಪ್ರಯೋಜನವಿಲ್ಲದಂತಾಗುತ್ತದೆ. ಮತ್ತು ಬಾಹ್ಯ ಪೋಷಣೆಯ ಮೇಲೆ ಅವಲಂಬಿಸಬೇಕಾಗುತ್ತದೆ. ಮಗು ಫಾರ್ಮುಲ ಹಾಲು ಅಥವಾ ಹಸುವಿನ ಹಾಲು , ಘನ ಆಹಾರ ಸುಲಭವಾಗಿ ತೆಗೆದುಕೊಳ್ಳದಿದ್ದರೆ ಸಮಸ್ಯೆಯಾಗಬಹುದು.
ಸ್ತನ್ಯಪಾನ ನಿಲ್ಲಿಸುವ ಸಲಹೆಗಳು
ತಾಯಂದಿರು ಸ್ತನ್ಯಪಾನವನ್ನು ನಿಲ್ಲಿಸುವ ಮೊದಲು ಕೆಲವು ವಾರಗಳಲ್ಲಿ ಮಗುವಿಗೆ ಎದೆಹಾಲು ಕೊಡುವ ಪ್ರಮಾಣ ಮತ್ತು ಸಮಯವನ್ನು ಕಡಿಮೆ ಮಾಡಿಕೊಂಡು ಬರಬೇಕಾಗುತ್ತದೆ. ಉದಾಹರಣೆಗೆ
- ಪ್ರತಿಸಲ ಮಗುವಿಗೆ ಹದಿನೈದು ನಿಮಿಷ ಹಾಲು ಕುಡಿಸುತ್ತಿದ್ದರೆ ಹತ್ತು ನಿಮಿಷಕ್ಕೆ ಇಳಿಸಲು ಪ್ರಯತ್ನಿಸುವುದು
- ಪ್ರತಿದಿನ 8 ಬಾರಿ ಸ್ತನ್ಯಪಾನ ಮಾಡಿಸುತ್ತಿದ್ದರೆ ಒಂದೊಂದೆ ಕಾಲಕ್ರಮೇಣ ಕಡಿಮೆ ಮಾಡಿಕೊಳ್ಳುವುದು.
- ತಾಯಿಯರು ಎದೆಹಾಲಿನ ಜೊತೆಗೆ ಫಾರ್ಮುಲಾ ಹಾಲನ್ನು ಒಂದು ಹೊತ್ತಿಗೆ ಯಾವುದಾದರು ಒಂದು ಸಮಯದಲ್ಲಿ ಕೊಡುವ ಅಭ್ಯಾಸ ಮಾಡುವುದು.
ಶಿಶುವಿಗೆ ಸ್ತನ್ಯಪಾನ ಬಿಡಿಸುವ ಮೊದಲು ವೈದ್ಯರ ಬಳಿ ಮಾತನಾಡಿ ಪರಿಣಾಮಗಳ ವಿರುಧ್ಧ ಹೋರಾಡಲು ಸಲಹೆಗಳನ್ನು ಪಡೆಯಬೇಕು ಐಸ್ ಪ್ಯಾಕ್, ವಾರ್ಮಿಂಗ್ ಪ್ಯಾಡ್ಗಳು ಮತ್ತು ಉತ್ತಮ ಸ್ತನಬಂಧವು ಎಂಗಾರ್ಜ್‌ಮೆಂಟ್ ಆಗುವುದನ್ನು ತಡೆಗಟ್ಟಲು ಬಳಸುವ ಮನೆ ಮದ್ದಾಗಿದೆ. ಸ್ತನ್ಯಪಾನ ನಿಲ್ಲಿಸುವುದಕ್ಕೆ ಕಾರಣ ಏನೇ ಇದ್ದರು ವೈದ್ಯರ ಬಳಿ ಮಾತನಾಡಿ. ನಿಮ್ಮ ದೇಹದ ಬಗ್ಗೆ ನಿಮಗಿಂತ ಹೆಚ್ಚು ಯಾರಿಗೂ ತಿಳಿಯುವುದಿಲ್ಲ. ಆದರಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ನಿಮಗಾಗಿ ಮತ್ತು ನಿಮ್ಮ ಮಗುವಿನ ಅರೋಗ್ಯಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಂತವರಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ3 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ5 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ3 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ3 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ



