ದಿನದ ಸುದ್ದಿ
ಬುದ್ಧ ಹುಟ್ಟಿದ ನಾಡು ಭಾರತ ಅರ್ಥಾತ್ ಜಂಬೂ ದ್ವೀಪ
- ಶಿವಸ್ವಾಮಿ ಬೌದ್ಧ ಉಪಾಸಕರು
“India is the Land of Buddha ” “Buddhism is Future religion in the world” ಬೌದ್ಧ ಧಮ್ಮವು ವಿಶ್ವದ ಮುಂದಿನ ಭವಿಷ್ಯದ ಧರ್ಮವಾಗಲಿದೆ ಎಂಬ ಡಾ.ಬಾಬಾಸಾಹೇಬರ ಆಶಯ ಸತ್ಯವಾಗುತ್ತಿದೆ. ಬುದ್ಧ ಹುಟ್ಟಿದ ನಾಡು ಭಾರತದ 97% ಜನರು ಮೂಲದಲ್ಲಿ ಬೌದ್ಧ ಧಮ್ಮದವರಾಗಿದ್ದರೆಂಬುದು ಪ್ರಕೃತಿಯಷ್ಟೇ ಸತ್ಯ.
ಬುದ್ಧ ಭಾರತವೆಂಬ ಜಂಬೂ ದ್ವೀಪದಲ್ಲಿ ಜನಿಸಿದರು, ಜಂಬೂ ದ್ವೀಪವೆಂದರೆ ಈಗಿನ ಆಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಭೂತನ್, ಬಾ0ಗ್ಲಾದೇಶ, ಶ್ರೀಲಂಕಾ, ಬರ್ಮಾಕ್ಕೆ ಹೊಂದಿಕೊಂಡಿರುವ ಏಷ್ಯಾಖಂಡದ ಬಹುಭಾಗವೇ ಆಗಿದೆ. ಇಂದೂ ಜಗತ್ತಿನ 38 ರಾಷ್ತ್ರಗಳಲ್ಲಿ ಬೌದ್ಧ ಧಮ್ಮ ಪ್ರತಿಯೊಬ್ಬರ ಮನ ಮನೆಗಳನ್ನು ಪ್ರವೇಶಿಸಿ, ಪ್ರಜ್ವಲಿಸಿ ಬೆಳಕಾಗಿ ನಿಂತಿದೆ. ಒಂದು ಜ್ಞಾನದ ಜ್ಯೋತಿಯಿಂದ ಮತ್ತೊಂದು ಜ್ಞಾನದ ಜ್ಯೋತಿಯನ್ನು ಬೆಳಗಲು ಸಾಧ್ಯವೇ ಹೊರತು, ಅಜ್ಞಾನದಿಂದ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅರಿತ ಬುದ್ಧ ಅಂಧಕಾರದಲ್ಲಿ ಮುಳುಗಿದ್ದ ಈ ಜಗತ್ತಿಗೆ ಸುಜ್ಞಾನದ ಬೆಳಕನ್ನು ನೀಡಿದ.
ಭಾರತದಲ್ಲೇ ಹುಟ್ಟಿದ ಬೌದ್ಧಧಮ್ಮ ಮನೋವ್ಯಾಧಿಯ ವೈದಿಕತ್ವದ ಅಟ್ಟಹಾಸಕ್ಕೆ ಸಿಕ್ಕಿ ನಲುಗಿ, ಭಾರತದಾಚೆಯ ರಾಷ್ಟ್ರಗಲ್ಲಿ ನೆಲೆಯಾಗಿ ಬುದ್ಧ ಮತ್ತು ಆತನ ಧಮ್ಮವನ್ನು ಅಲ್ಲಿನ ಜನ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವಿಶ್ವಮಾನ್ಯತೆ ಪಡೆದು ಬೆಳೆಯುತ್ತಾ, ಬೆಳೆಗುತ್ತಾ ಬರುತಿದೆ.
ಕ್ರಿ ಪೊ 6 ನೇ ಶತಮಾನದಲ್ಲಿ ಜನಿಸಿದ ಗೌತಮರು ಬೋಧಿಯನ್ನು ಪಡೆದು ಬುದ್ಧರಾದಾಗ ಇಲ್ಲಿನ ಶ್ರೇಣೀಕೃತ ಜಾತಿವ್ಯವಸ್ಥೆಯಡಿ ಸಿಕ್ಕಿ ಶೂದ್ರಾತಿಶೂದ್ರರು ಪ್ರಾಣಿ ಪಕ್ಷಿಗಳಿಗಿಂತಲೂ ಕಡೆಯಾಗಿ ಜೀವನ ನಡೆಸುತಿದ್ದರು ಇದಕ್ಕೆಲ್ಲ ಅಜ್ಞಾನದ ಜಾತಿವ್ಯವಸ್ಥೆಯೇ ಕಾರಣವೆಂದು ಅರಿತ ಬುದ್ಧರು ಇದಕ್ಕೆ ಪರಿಹಾರವಾಗಿ ಸರ್ವರಿಗೂ ಒಳಿತನ್ನು ಮಾಡುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವೆಂಬ ಮಧ್ಯಮ ಆದಿಯ ಮೂಲಕ ಅಂದಿನ ಜನಸಾಮಾನ್ಯರ ಆಡುಭಾಷೆ ಪಾಳಿಯಲ್ಲಿ ತಿಳಿಸುತ್ತಾ, ಮೌಡ್ಯದಿಂದ ಜನರನ್ನು ಮುಕ್ತಗೊಳಿಸುತ್ತಾ ಸುಮಾರು 40 ವರುಷಗಳ ಕಾಲ ಕಾಲುನಡಿಗೆಯಲ್ಲಿಯೇ ಭಾರತವನ್ನು ಸುತ್ತಾಡಿ ತಮ್ಮ ಅಪಾರ ಶಿಸ್ಯವೃಂದದ ಭಿಕ್ಖುಗಳ ಮೂಲಕ ಜನರಿಗೆ ಬೋಧಿಸಿದ ಪರಿಣಾಮವಾಗಿ ಇಲ್ಲಿನ ಮೂಲನಿವಾಸಿ ನಾಗಜನರು ಜಾಗೃತರಾಗಿ ಅಟ್ಟಹಾಸವನ್ನು ಮೆಟ್ಟಿನಿಂತು ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರು.
ಚಂದ್ರಗುಪ್ತ ಮೌರ್ಯನಿಂದಿಡಿದು ಅಶೋಕ ಚಕ್ರವರ್ತಿ, ಕೊನೆಯ ದೊರೆ ಬೃಹದ್ರತ ಮೌರ್ಯನತನಕ ಸುಮಾರು 150 ವರ್ಷಗಳ ಕಾಲ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಿಗೆ ಭದ್ರಬುನಾದಿ ಹಾಕಿ ಆಳ್ವಿಕೆ ಮಾಡಿದರು.
ಸಾಮ್ರಾಟ್ ಅಶೋಕ ಚಕ್ರವರ್ತಿ ಶೋಕವಿಲ್ಲದ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದ ಜಗತ್ತಿನ ಮೊದಲ ದೊರೆ, ಕಾಳಿಂಗ ಯುದ್ಧದಲ್ಲಿ ಗೆದ್ದರೂ ಅಶೋಕನು ಅಲ್ಲಿನ ಅಪಾರ ಸಾವು ನೋವುಗಳನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿ ಖಡ್ಗವನ್ನು ತ್ಯಜಿಸಿ ಬೌದ್ಧ ಭಿಕ್ಖು ಉಪಗುಪ್ತನ ಉಪದೇಶಕ್ಕೆ ಮಾರುಹೋಗಿ ಬುದ್ಧ ಧಮ್ಮವೊಂದೇ ಬಹುಜನರನ್ನು ಕಾಪಾಡುವ ಸತ್ಯದ ಮಾರ್ಗವಾಗಿದೆ ಎಂದೂ ಬೌದ್ಧ ಧಮ್ಮ ಸ್ವೀಕಾರ ಮಾಡಿ, ಬೌದ್ಧ ಧಮ್ಮವನ್ನೇ ತನ್ನ ಧಮ್ಮವಾಗಿ ಘೋಷಿಸಿದ.
‘ದಿಗ್ವಿಜಯಕ್ಕಿಂತಲೂ ಧಮ್ಮವಿಜಯವೇ’ ಮೇಲೆಂದು ಇಡೀ ಜಗತ್ತಿಗೆ ಸಾರಿ, ಖಡ್ಗವನ್ನು ತ್ಯೆಜಿಸಿದ ದಿನವೇ ಬುದ್ಧ ಧಮ್ಮವನ್ನು ಸ್ವೀಕರಿಸಿ, ಧಮ್ಮದ ಮೇಲೆ ವಿಜಯ ಸಾದಿಸಿದ ನೆನಪಿಗಾಗಿ ವಿಜಯ ದಶಮಿ ಎಂದೂ ಘೋಷಣೆ ಮಾಡಿ ಧಮ್ಮಅಶೋಕನಾದ ಅಶೋಕನು ತನ್ನಿಬ್ಬರೂ ಮಕ್ಕಳನ್ನು ಧಮ್ಮ ಪ್ರಸಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದ, ಧಮ್ಮ ಪ್ರಚಾರಕ್ಕಾಗಿ ಧಮ್ಮ ದೂತರೆಂಬ ಹೊಸ ಶಾಖೆಯನ್ನು ತೆರೆದು ಧಮ್ಮದೂತರನ್ನು ಇತರೆ ದೇಶಗಳಿಗೆ ಕಳುಹಿಸಿ, ಸುಮಾರು 84000 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ಕಟ್ಟಿಸಿ ಬೌದ್ಧ ಸಾಮ್ರಾಟನಾಗಿ ವಿಜೃಂಭಿಸಿದ.
ಭಾರತದಲ್ಲಿ ಹುಟ್ಟಿದ ಬೌದ್ಧ ಧಮ್ಮವನ್ನು ಭಾರತದಿಂದಲೇ ಓಡಿಸಿದ ಮನುವಾದಿಗಳಿಗೆ ಮರ್ಮಘಾತ ನೀಡಿದ ಬಾಬಾಸಾಹೇಬರು ಕಣ್ಮರೆಯಾಗಿದ್ದ ಭಾರತೀಯರ ಮೂಲ ಧಮ್ಮವನ್ನು ಮತ್ತೆ!ಅದೇ ವಿಜಯ ದಶಮಿಯದಿನದಂದೆ ನಾಗಪುರದ ದೀಕ್ಷಾಭೂಮಿಯಲ್ಲಿ ದಿನಾಂಕ 14-10-1956 ರಂದು ಸುಮಾರು 10 ಲಕ್ಷ ಅನುಯಾಯಿಗಳೊಂದಿಗೆ “ಬುದ್ಧ ನಡೆಗೆ ಮರಳಿ ಮನೆಗೆ”ಹೋಗುವುದರ ಮೂಲಕ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ನೀಡುವುದರ ಮೂಲಕ ಮತ್ತೊಮ್ಮೆ ಭಾರತದಲ್ಲಿ ಬೌದ್ಧ ಧಮ್ಮವನ್ನು ಮರು ಸ್ಥಾಪನೆ ಮಾಡಿದರು.
ಜೈನ ಧರ್ಮದ ಅತಿಯಾದ ಅಹಿಂಸಾ ಪಾಲನೆಯಿಂದ ಬೇಸತ್ತು ರೈತರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಹುಳ ಹುಪ್ಪಟಗಳಿಂದ ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡಿಸುತ್ತಿರಲಿಲ್ಲ ಅದಕ್ಕೆ ರೈತಾಪಿ ವರ್ಗವು ಭಗವಾನ್ ಬುದ್ಧರ ಸರಳವಾದ ಮಧ್ಯಮ ಮಾರ್ಗವೇ ಲೇಸೆಂದು ಇಡೀ ರೈತ ಸಮುದಾಯವೇ ಬೌದ್ಧರಾದರು ಎಂದೂ ಖ್ಯಾತ ಸಂಶೋಧಕರಾದ ಕೆ ಎಸ್ ಭಗವಾನ್ ರವರು “ಭಾರತದ ರೈತರೆಲ್ಲರೂ ಬೌದ್ಧರೇ”ಆಗಿದ್ದರು ಎಂದೂ ಒಂದು ಪುಸ್ತಕವನ್ನೇ ಬರೆದು ಭಾರತ ಬೌದ್ಧಮಯವಾಗಿತ್ತು ಎಂಬುದಕ್ಕೆ ಪುಷ್ಟಿ ನೀಡಿದ್ದಾರೆ.
ಮೊನ್ನೆ ಅಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬುದ್ಧನ ನಾಡಾಗಿತ್ತು ಎಂಬುದನ್ನು ಖಚಿತಪಡಿಸುತ್ತಿವೆ, ಅಯೋಧ್ಯಯ ಮೂಲ ಹೆಸರು ಸಾಕೇತ್ ನಗರವಾಗಿ ಕ್ರಿಸ್ತ ಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು, ಕ್ರಿಸ್ತ ಶಕ 1 ನೇ ಶತಮಾನದಲ್ಲಿ ಶುಂಗರ ಆಡಳಿತ ಕಾಲದಲ್ಲಿ ಸಾಕೇತನಗರದ ಹೆಸರನ್ನು ಬದಲಾವಣೆ ಮಾಡಿ ಅಯೋಧ್ಯ ವೆಂದು ಮರು ನಾಮಕರಣ ಮಾಡಲಾಯಿತು ಎನ್ನುತ್ತಾರೆ ಇತಿಹಾಸಕಾರರು.
ಲಿಪಿಯೇ ಇರದಿದ್ದ ಮೌಖಿಕ ಭಾಷೆಯಾಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಆಳವಡಿಸ್ಸಿದ್ದು, ಹಾಗೆಯೇ ಸಂಸ್ಕೃತದಲ್ಲಿ ರಾಮಾಯಣ ಮಹಾಭಾರತ ಬರೆದದ್ದು ಶುಂಗ ವಂಶದ ಕಾಲದಲ್ಲೇ ಅದಕ್ಕೆ ಮುಂಚೆಯೇ ಚಂದ್ರ ಗುಪ್ತ ಮೌರ್ಯ, ಅಶೋಕ ಚಕ್ರವರ್ತಿ ಹಲವು ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತನಗರದ ಹೆಸರು ಮತ್ತು ಬ್ರಾಹ್ಮ್ಮಿ ಲಿಪಿಯಲ್ಲಿದ್ದ ಪಾಳಿ ಮತ್ತು ಪ್ರಾಕೃತಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ಹೊರತು ಸಂಸ್ಕೃತ ಮತ್ತು ಅಯೋಧ್ಯಯ ಬಗ್ಗೆ ಎಲ್ಲಿಯೂ ಧಾಖಲಿಸಿಲ್ಲ, ಕ್ರಿಸ್ತ ಪೂರ್ವ 2 ನೇ ಶತಮಾನದಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಸಾಕೇತ ಎಂಬ ಬೌದ್ಧ ಶಿಕ್ಷಣ ಕೇಂದ್ರವಿತ್ತೆಂದು ಹೇಳಿದ್ಧಾನೆ ಆದ್ದರಿಂದ ಆಯೋಧ್ಯಯಲ್ಲಿ ದೊರೆತ ಬೌದ್ಧರ ಕಾಲದ ಸಾಕಷ್ಟು ಅವಶೇಷಗಳು ಭಾರತ ಬೌದ್ಧ ರಾಷ್ಟ್ರವಾಗಿತ್ತೆಂದು ಸಾರಿ ಸಾರಿ ಹೇಳುತ್ತಿವೆ.
ಇತ್ತೀಚಿನ ದಿನಮಾನಗಳಲ್ಲಿ ಹಲವು ರಾಷ್ಟ್ರಗಳು ಭಗವಾನ್ ಬುದ್ಧರ ಮಾನವಿಯಾ ಗುಣಗಳ ಸದ್ಧಮ್ಮದೆಡೆಗೆ ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಬೌದ್ಧ ಧಮ್ಮವು ವಿಶ್ವದ ಭವಿಷ್ಯದ ಧಮ್ಮವಾಗಲಿದೆ, “Buddhism is Future religion in tha world” ಎಂಬ ಬಾಬಾಸಾಹೇಬರ ಸತ್ಯವಾಗುತ್ತಿದೆ, ಮೊನ್ನೆ ಮೊನ್ನೆ ಇಂಗ್ಲೆಂಡ್ ನಲ್ಲಿ 148 ವರ್ಷದ ಕ್ರೈಸ್ತಧರ್ಮದ ಹಳೆಯ ಚೆರ್ಚನ್ನೇ ಬುದ್ಧನ ವಿಹಾರವಾಗಿ ಅಲ್ಲಿನ ಬುದ್ಧರ ಅನುಯಾಯಿಗಳು ಪರಿವರ್ತಿಸಿದ್ದಾರೆ, ಹಲವು ರಾಷ್ಟ್ರಗಳು ಭವಿಷ್ಯದಲ್ಲಿ ಬುದ್ಧರ ವೈಜ್ಞಾನಿಕ ತತ್ವಗಳಿಗೆ ಮಾರುಹೋಗಿ ಬುದ್ಧ ಧಮ್ಮವನ್ನೇ ಒಪ್ಪಿ ಅಪ್ಪಿಕೊಳ್ಳುವುದರೊಂದಿಗೆ ಅದನ್ನನುಸರಿಸುವ ಒಂದು ಜಾಗತಿಕ ದೊಡ್ಡ ಜನರ ಧಮ್ಮವಾಗುವುದರಲ್ಲಿ ಅನುಮಾನವೇ ಇಲ್ಲಾ! ಮಹಾಕಾರುಣಿಕ ಬುದ್ಧರು ಜನಿಸಿ 2564 ವರ್ಷಗಳಾದರೂ ಬುದ್ಧರ ಕರುಣೆ ಪ್ರೀತಿ ವಿಶ್ವಮೈತ್ರಿ ಯ ಬುದ್ಧಭಾರತವೆಂಬ ಮಾರ್ಗವು ಇಡೀ ವಿಶ್ವಕ್ಕೆ ದಾರಿ ದೀಪವಾಗಿ ವಿಶ್ವದ ಗುರುವಾಗುವುದರಲ್ಲಿ ಸಂಶಯವಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ್ವಾಮಿ.ಜಿ.ಎಂ.ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ6 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ4 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
-
ದಿನದ ಸುದ್ದಿ22 hours agoಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ21 hours agoದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

