Connect with us

ದಿನದ ಸುದ್ದಿ

ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ಮಾಡಲು ಕಾಣದ ಕೈಗಳು ಕೆಲಸ ಮಾಡಿವೆ : ಸಿ.ಎಂ ಇಬ್ರಾಹಿಂ

Published

on

ಸುದ್ದಿದಿನ,ಚನ್ನಗಿರಿ : ದೇಶದಲ್ಲಿ ಪೌರತ್ವ ಕಾಯಿದೆ ಜಾರಿಯಾಗಲು ಪ್ರಧಾನಿ ಮೋದಿ, ಹಾಗೂ ಅಮಿತ್ ಷಾ ಕಾರಣರಲ್ಲಾ ಬದಲಾಗಿ ಅವರ ಹಿಂದೆ ಕಾಣದ ಕೈಗಳು ಕೆಲಸ ಮಾಡಿಸಿದ್ದಾವೆ ಎಂದು ವಿಧಾನ ಪರಿಷತ್ ಸದಸ್ಯ ಸಿ,ಎಂ ಇಬ್ರಾಹಿಂ ಅಭಿಪ್ರಾಯ ಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯಿದೆ ತಿದ್ದುಪಡಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಸಂವಿಧಾನ ತೆಗೆದುಹಾಕುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ ಆನಂತ್ ಕುಮಾರ್ ಹೆಗಡೆ ಮತ್ತು ತೇಜಸ್ವಿಸೂರ್ಯ ಅವರು ನಾವು ಬಂದಿರೊದೇ ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದಾರೆ.

ಸಂವಿಧಾನ ತೆಗೆದುಹಾಕಿ ನಮ್ಮದೇ ಸಂವಿಧಾನ ಅಂದರೆ ಚರ್ತುವರ್ಣ ಪಧ್ದತಿಯನ್ನು ಈ ರಾಷ್ಟ್ರದಲ್ಲಿ ಜಾರಿಗೆ ತರಬೇಕೆಂಬುದು ಇವರ ಗುರಿಯಾಗಿದ್ದು, ಇದರ ವಿರುಧ್ದ ರಾಷ್ಟ್ರದಲ್ಲೇ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿದ್ದು, ಅಂತರ್ ರಾಷ್ಟ್ರೀಯ ಸಂಸ್ಥೆಯಾದ ಸಿ.ಎಸ್.ಡಿ.ಎ ಸುಮಾರು 300 ಲೋಕಸಭಾ ಕ್ಷೇತ್ರಗಳಲ್ಲಿ ಸರ್ವೇ ಮಾಡಿದ್ದು, ಈ ದೇಶ ಹಿಂದೂ ದೇಶ ಆಗಬೇಕು ಅನ್ನುವವರ ಸಂಖ್ಯೆ 17% ಇದ್ದು, ಇನ್ನುಳಿದ ಜನತೆ ಇಲ್ಲ ಇದು ಜ್ಯಾತ್ಯಾತೀತ ರಾಷ್ಟ್ರವಾಗಬೇಕು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು, ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತ ನಮ್ಮ ದೇಶದ ತತ್ವ ಸಿಧ್ಧಾಂತದ ಆದಾರದ ಮೇಲೆ ನಿಂತಿರುವಂತಹವರು ಎಂದಿದ್ದಾರೆ, ಇದೀಗಾ ದೆಹಲಿಯ ಚುನಾವಣೆಯಲ್ಲಿ ಇದೇ ವಿಚಾರವನ್ನು ಮಂಡಿಸಿದ್ದು ಫಲಿತಾಂಶದ ಬಳಿಕ ಸಂಘಪರಿವಾರಗಳು ಮೋದಿಯವರನ್ನು ಇಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.

ಬಿ.ಎಸ್.ವೈ ಅವರ ಪರಿಸ್ಥಿಯೂ ಅದೇ ಗತಿಯಾಗಿದೆ, ಪಾಪ ಅವರಿಗೆ ಮದುವೆ ಮಾಡಿದ್ದಾರೆ ಆದರೆ ಹೆಣ್ಣು ಗಂಡನ್ನು ಕೂಡಲು ಬಿಡುತ್ತಿಲ್ಲ, ಅವರ ಸಚಿವ ಸಂಪುಟ ರಚನೆ ಮಾಡಲು ಇವತ್ತು, ನಾಳೆ, ನಾಡಿದ್ದು ಎನ್ನುತಿದ್ದು, ಅವರ ಸಮಸ್ಯೆಯಲ್ಲಿ ಅವರಿದ್ದಾರೆ.

ಅದ್ದರಿಂದ ರಾಜ್ಯದಲ್ಲಿ ಈ ಅಂದೋಲನ ರಾಜಕೀಯ ಪಕ್ಷ ಜಾತಿ ಭಾಷೆ ಬಿಟ್ಟು ಹೊಂದಾಗಿ ಹೋರಾಟ ಮಾಡುತ್ತಿದ್ದಾರೆ, ಸಿರಿಗೆರೆಯ ಸಾಣಿಹಳ್ಳಿ ಸ್ವಾಮೀಜಿ ಅವರ ಮಾತುಗಳನ್ನು ನೆನೆದು ಹಿಂದೂ ಧರ್ಮ ಸಮಾಜವನ್ನು ಕೂಡಿಸುವುದೇ ಹೊರತು ಹೊಡೆಯುವುದಲ್ಲ ಎಂದಿದ್ದಾರೆ, ಕರುಣಾ ಮೂರ್ತಿಯಾದ ಶ್ರೀರಾಮ ಎಂದರೆ ಎಲ್ಲರ ಮನಸಲ್ಲಿ ಪ್ರೀತಿ ಮೂಡಬೇಕು ಆದರೆ ಜೈ ಶ್ರೀರಾಮ್ ಎಂದರೆ ಎಲ್ಲರಲ್ಲೂ ಭಯ ಶುರುವಾಗುವಂತಾಗಿದೆ, ಇಂದು ರಾಮಾಯಣ ಬೇಕು ವಾಲ್ಮೀಕಿ ಬೇಡವಾಗಿದೆ.

ಚಾಣುಕ್ಯನ ಮಾತಿನಂತೆ ಯಾವ ದೇಶದ ರಾಜ ವ್ಯಾಪಾರಿಯಾಗುತ್ತಾನೋ ಅ ದೇಶದ ಜನ ಬಿಕಾರಿಯಾಗುತ್ತಾರೆ ಎಂಬುವಂತೆ ಅದು ನಮ್ಮ ದೇಶದಲ್ಲಿ ಆಗಿದ್ದಾಗದೆ. ಎನೇ ಆಗಲಿ ಹಿಂಸೆಗೆ ಅವಕಾಶ ಕೊಡದೇ ಗಾಂಧಿ, ಅಂಬೇಡ್ಕರ್ ಅವರಂತೆ ರಾಷ್ಟ್ರ ಧ್ವಜ ಹಿಡಿದು ಹೋರಾಟ ಮಾಡಬೇಕು ಎಂದು ಸರ್ವ ಸಮಾಜದ ಜನತೆಗೆ ಕರೆ ಕೊಡಲಾಗಿದೆ ಒಟ್ಟಾರೆ ರಾಜ್ಯ. ದೇಶದ ಅಭಿವೃಧ್ದಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಈ ವೇಳೆ ಮುಸ್ಲಿಂ ಸಮಾಜದ ಮುಖಂಡರಾದ ಅಸಾದುಲ್ಲಾ, ಸಯ್ಯದ್ ಸರ್ದಾರ್, ಖದೀರ್‌ ಮತ್ತು ಜೋಳದಾಳ್‍ಕುಮಾರ್, ರುದ್ರಪ್ಪ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದಲ್ಲಿ ನಿಷೇಧ ; ತೆರವುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪತ್ರ

Published

on

ಸುದ್ದಿದಿನಡೆಸ್ಕ್:ಕರ್ನಾಟಕದ ತೋತಾಪುರಿ ಮಾವಿನ ಹಣ್ಣುಗಳಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಧಿಕಾರಿ ವಿಧಿಸಿರುವ ನಿಷೇಧ ಆದೇಶ ರದ್ದು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಮೂಲಕ ಮನವಿ ಮಾಡಿದ್ದಾರೆ.

ಇದು ಮುಂದಿನ ದಿನಗಳಲ್ಲಿ ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಾಣೆಗೆ ಅಡ್ಡಿ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧವು ಸಾವಿರಾರು ರೈತರ ಜೀವನ ಉಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಐಎಎಸ್ – ಐಪಿಎಸ್ ಅಧಿಕಾರಿಗಳ ವರ್ಗಾವಣೆ ; ಆದೇಶ

Published

on

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರ ಇಂದು ಕೆಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್‌ಪೋರ್ಸ್ ಎಡಿಜಿಪಿ ಯಾಗಿ ವರ್ಗಾವಣೆ ಮಾಡಿದೆ.

ಕೆಎಸ್‌ಆರ್‌ಟಿಸಿ ಮಹಾನಿರ್ದೆಶಕರನ್ನಾಗಿ ಅಕ್ರಂ ಪಾಶಾ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕಾರ್ಯಪಡೆಯ ಎಡಿಜಿಪಿಯಾಗಿ ನೇಮಕಗೊಂಡಿರುವ ಐಪಿಎಸ್‌ ಅಧಿಕಾರಿ ರೂಪಾ ಡಿ. ಅವರು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ ; ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮನವಿ

Published

on

ಸುದ್ದಿದಿನಡೆಸ್ಕ್:ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಂತ್ರಸ್ಥರು ಮತ್ತು ಅವರ ಕುಟುಂಬಗಳಿಗೆ ಪಾರದರ್ಶಕತೆ ನ್ಯಾಯ ದೊರಕುವಂತಾಗಲು ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ಥರಿಗೆ ನ್ಯಾಯ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಮಸ್ಯೆಗೆ ಒಳಗಾದ ಮಕ್ಕಳ ವಿವರವನ್ನು ಕೋರಿ ಸಿಐಡಿಗೆ ಮಕ್ಕಳ ಹಕ್ಕು ಆಯೋಗ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕ ದೂರು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ ಈ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ನೀಡುವಂತೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending