Connect with us

ದಿನದ ಸುದ್ದಿ

ಡಿಯರ್ ಮೀಡಿಯಾ ದ ‘ಹಸ್ತಮೈಥುನ’

Published

on

  • ರಾಜಾರಾಮ್ ತಲ್ಲೂರ್

ವತ್ತು ಎರಡು-ಮೂರು ಕನ್ನಡ ಪತ್ರಿಕೆಗಳು ತಮ್ಮ ಸಾಹಸವನ್ನು ತಾವೇ ವರ್ಣಿಸಿಕೊಂಡು, ತಮಗೆ ತಾವೇ ಥ್ಯಾಂಕ್ಸ್ ಕೊಟ್ಟುಕೊಂಡು ಮುಖಪುಟದಲ್ಲಿ ಪ್ರಕಟಿಸಿಕೊಂಡಿವೆ.

ನಿನ್ನೆ “ಸೋಷಿಯಲ್ ಡಿಸ್ಟೆನ್ಸಿಂಗ್” ಬೇಕು ಅಂತ ಸರ್ಕಾರದ ಕರೆಗೆ ಪ್ರತಿಕ್ರಿಯೆ ಆಗಿ ಬೆಳಗ್ಗೆ 7.00ರಿಂದ ರಾತ್ರಿ9.00 ತನಕ “ಜನತಾ ಕರ್ಫ್ಯೂ” ನಡೆದಿತ್ತು. ಯಾವತ್ತಿನಂತೆ ಬೆಳಗಿನ ಜಾವ ಪತ್ರಿಕೆಗಳು ಮನೆಗೆ ಬಂದಿವೆ. ಅದರಲ್ಲೇನು ಹೊಸದೂ ಇಲ್ಲ; ವಿಶೇಷ ಸಾಹಸವೂ ಇಲ್ಲ.

ಆದರೆ ನಮ್ಮ ಕೆಲವು ಪತ್ರಿಕೆಗಳಿಗೆ ಇದು ಮಹಾ ಸಾಹಸವಾಗಿ ಕಂಡಿದೆ. ಏಜಂಟರ ಫೋಟೋ ಗಳು ಪ್ರಕಟವಾಗಿವೆ. ಆ ಏಜಂಟರೇ ಪೇಪರ್ ಹಾಕುವ ಹುಡುಗರೋ ಎಂಬುದು ಇನ್ನೊಂದು ಪ್ರಶ್ನೆ.

ಇನ್ನೂ ಕೊರೋನಾ ವಿರುದ್ಧ ಯುದ್ಧ ಆರಂಭ ಆಗುತ್ತಿದೆಯಷ್ಟೇ. ಇವರು ಈಗಲೇ ಕಾಲಡಿ ಹುಲಿಯ ಹೆಣ ಇರಿಸಿಕೊಂಡು ಗನ್ ಹೆಗಲಿಗೇರಿಸಿ ಫೋಟೋ ಪೋಸ್ ಕೊಡುವ ಕೆಲಸಕ್ಕೆ ಹೊರಟಿದ್ದಾರೆ. ಇಂತಹ ಉನ್ಮಾದಗಳದೇ “ಟ್ರೇಲರ್” ನಿನ್ನೆ ಸಂಜೆ ಕಂಡುಬಂದದ್ದು. ಹೆಚ್ಚಿನ ಪತ್ರಿಕೆಗಳು ಜನ ಗುಂಪುಗುಂಪಾಗಿ, ಸೋಷಿಯಲ್ ಡಿಸ್ಟೆನ್ಸಿಂಗ್ ಆದೇಶ ಉಲ್ಲಂಘಿಸುತ್ತಿರುವ ಚಿತ್ರಗಳನ್ನು ಹಾಕಿ ಅದನ್ನೂ ಸಂಭ್ರಮಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿಯ ಕೆಲಸ ಇದು.

ಮಾಡುವ ಕೆಲಸಕ್ಕೂ – ಉದ್ದೇಶಕ್ಕೂ ಸಂಬಂಧಗಳನ್ನೇ ಕಡಿದುಹಾಕುವ ಇಂತಹ ಜನಗಳು ಸುದ್ದಿಮನೆಗಳಲ್ಲಿ ತುಂಬಿಕೊಂಡಿದ್ದಾರೆ ಎಂಬುದೇ ಭಯ ಹುಟ್ಟಿಸುತದೆ. ನಾಳೆ ದುರದೃಷ್ಟವಶಾತ್ ಪರಿಸ್ಥಿತಿ ಹದಗೆಟ್ಟರೆ ಇಂತಹ ಮಹಾನುಭಾವರಿಂದ ಏನು ನಿರೀಕ್ಷಿಸುತ್ತೀರಿ?

ನಮ್ಮ ಊರಬಾಗಿಲಿಗೆ ಬಂದು ನಿಂತಿರುವ ಮಹಾಮಾರಿ ಎಷ್ಟು ದೊಡ್ಡದು ಮತ್ತು ನಮ್ಮ ತಯಾರಿ ಎಷ್ಟಿದೆ ಎಂಬುದನ್ನು ಅಂದಾಜಿಸಿಕೊಳ್ಳುವುದಕ್ಕೆ, ಈ 30ನಿಮಿಷಗಳ ಚೀನಾದ ವುಹಾನ್ ನಗರದ ಡಾಕ್ಯುಮೆಂಟರಿಯನ್ನು ದಯವಿಟ್ಟು ನೋಡಿ. ಎಲ್ಲಿ ತಯಾರಿಗಳು ಆಗಬೇಕಿವೆಯೋ ಅಲ್ಲಿ ಸರಕಾರವನ್ನು, ಜನರನ್ನು ಎಚ್ಚರಿಸುವ ಕೆಲಸ ಶುರುಹಚ್ಚಿಕೊಳ್ಳಿ. ನಿಮಗೆ ಒಳ್ಳೆಯ ಬುದ್ಧಿ ಶೀಘ್ರ ಬರಲೆಂದು ಪ್ರಾರ್ಥಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಂಚೆ ಪಾಲಕ-ಸೇವಕರ ನೇಮಕಾತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‍ಸೈಟ್ www.indiapostgdsonline.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆಗಸ್ಟ್ 5 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಎಲ್ಲ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ತೇರ್ಗಡೆ ಅಂಕ ಹೊಂದಿರಬೇಕು. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

ಅಭ್ಯರ್ಥಿಯ ವಯೋಮಿತಿ 18 ರಿಂದ 40 ವರ್ಷ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಶಿವಮೊಗ್ಗ ಅಂಚೆ ವಿಭಾಗದಲ್ಲಿ 89 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ ಅಂಚೆ ವಿಭಾಗದ ಸಂಪರ್ಕ ಸಂಖ್ಯೆ : 08182-222516 ಹಾಗೂ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಯುಜಿ 2024 | ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

Published

on

ಸುದ್ದಿದಿನಡೆಸ್ಕ್:ನೀಟ್ ಯುಜಿ 2024ರ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೇ 20ರ ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ತಮ್ಮ ಜಾಲತಾಣದಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್‌ಟಿಎ ಗೆ ನಿರ್ದೇಶನ ನೀಡಿದೆ.

ನೀಟ್ ಯುಜಿ ಪರೀಕ್ಷೆ ವಿಚಾರವಾಗಿ ಪ್ರಶ್ನೆಪತ್ರಿಕೆ ಸೋರಿಕೆ, ದುರ್ಬಳಕೆ, ವಿವಾದಾತ್ಮಕ ಕೃಪಾಂಕ ನೀಡಿಕೆ ಸೇರಿದಂತೆ ಹಲವು ರೀತಿಯ ಪರೀಕ್ಷಾ ಅಕ್ರಮಗಳ ಆರೋಪಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಅಭ್ಯರ್ಥಿಗಳ ಗುರುತನ್ನು ಮರೆಮಾಚಬೇಕು ಹಾಗೂ ನಗರವಾರು ಮತ್ತು ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸುವಂತೆ ಎನ್‌ಟಿಎ ಗೆ ಸೂಚಿಸಿದೆ.

ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಿಬಿಐ ತನ್ನ ಎರಡನೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು, ಪರೀಕ್ಷೆಯ ಪಾವಿತ್ರ‍್ಯತೆಗೆ ಧಕ್ಕೆಯಾಗಿದೆ ಎಂಬ ಅಂಶವನ್ನು ಒತ್ತಿಹೇಳಿತು. ಆದಾಗ್ಯೂ, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿರ್ಧಾರವು 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಇದು ಕೊನೆಯ ಉಪಾಯವಾಗಿದೆ ಎಂದು ಹೇಳಿದೆ.

ಇನ್ನೊಂದೆಡೆ, ನೀಟ್ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಪಾಟ್ನಾದ ಏಮ್ಸ್ ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದೆ. ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ನ ಎರಡನೇ ಮತ್ತು ಮೂರನೇ ವರ್ಷದಲ್ಲಿದ್ದಾರೆ ಎಂದು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಕೆ.ಪಾಲ್ ತಿಳಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳನ್ನು ಸಂಸ್ಥೆ ವಶಪಡಿಸಿಕೊಂಡಿದೆ ಮತ್ತು ಅವರ ಕೊಠಡಿಗಳನ್ನು ಸೀಲ್ ಮಾಡಿದೆ. ಸಿಬಿಐ ಈ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆಯಿಂದ ವೀಸಾ ಮುಕ್ತ ನೀತಿ

Published

on

ಸುದ್ದಿದಿನಡೆಸ್ಕ್:35 ಯುರೋಪಿಯನ್ ರಾಷ್ಟ್ರಗಳಿಗೆ ವೀಸಾ ಮುಕ್ತ ನೀತಿ ಪರಿಚಯಿಸುವುದಾಗಿ ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ನೀತಿಯು ನಾಳೆಯಿಂದ ಜಾರಿಗೆ ಬರಲಿದ್ದು, ಈ ವರ್ಷದ ಡಿಸೆಂಬರ್ 31 ರವರೆಗೆ ಇರುತ್ತದೆ.

ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸದಸ್ಯರು ಸೇರಿದಂತೆ 35 ದೇಶಗಳ ನಾಗರಿಕರು ವೀಸಾ ಇಲ್ಲದೆ ಒಮ್ಮೆಗೆ 30 ದಿನಗಳವರೆಗೆ ಬೆಲಾರಸ್‌ನಲ್ಲಿ ಉಳಿಯಬಹುದು. ಶಾಂತಿ ಮತ್ತು ಉತ್ತಮ ಬಾಂಧವ್ಯದ ಬೆಲಾರಸ್‌ನ ಬದ್ಧತೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಸಿಬ್ಬಂದಿ ವಿನಿಮಯವನ್ನು ಸರಳಗೊಳಿಸುವ ಸಲುವಾಗಿ, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಈ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending