Connect with us

ದಿನದ ಸುದ್ದಿ

ದಲಿತರು ಮತ್ತು ಮತಾಂತರ : ಪ್ರೊ. ಬಿ.ಕೃಷ್ಣಪ್ಪ ಅವರ ಲೇಖನ

Published

on

  • ಪ್ರೊ. ಬಿ.ಕೃಷ್ಣಪ್ಪ

ತಮಿಳು ನಾಡಿನ ಮೀನಾಕ್ಷಿಪುರಂ ದಲಿತರು ಮುಸ್ಲಿಮರಾಗುವುದರ ಮೂಲಕ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ, ಅರಬ್ಬಿ ಸಮುದ್ರದಿಂದ ಹಿಡಿದು ಬಂಗಾಳ ಕೊಲ್ಲಿಯವರೆಗೆ ಹಬ್ಬಿರುವ ಈ ನೆಲದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ. ಇಡೀ ಹಿಂದು ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಹಿಂದೂ ರಾಷ್ಟ್ರ ತಮ್ಮದು ಎಂದು ಬೊಗಳೆ ಹೊಡೆಯುವ ಹಿಂದುಗಳ ಬಾಯಿಗೆ ಬಲವಾದ ಗುಂಡು ಜಡಿದಿದ್ದಾರೆ. ನಿಂತ ಕಾಲ ಮೇಲೆ ಹಿಂದೂಗಳಿಗೆ ನೆಲ ಕುಸಿದಂತಾಗಿದೆ. ದಲಿತರು ಮನಸ್ಸು ಮಾಡಿದರೆ ಬಿರುಗಾಳಿಯಲ್ಲಿ ವಿಷಗಾಳಿಯಾಗಬಲ್ಲರು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಅಂಬೇಡ್ಕರ್ ಹೇಳಿದಂತೆ, ದಲಿತರು ಬೌದ್ಧರಾಗುತ್ತಿದ್ದರೆ, ಇಲ್ಲವೆ ಕ್ರಿಶ್ಚಿ ಯನ್ನರಾಗುತ್ತಿದ್ದರೆ, ಹಿಂದೂಗಳಿಗೆ ಈಗಿನಂತೆ ಷಾಕ್, ಚುರುಕು ತಟ್ಟುತ್ತಿರಲಿಲ್ಲ. ಏಕೆಂದರೆ ಈಗ ಹಾಲಿ ಇಂಡಿಯಾದಲ್ಲಿರುವ ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳು ಹಿಂದೂ ಧರ್ಮದ ಕಕ್ಷೆ ಒಳಗೆ ಅದೆಷ್ಟು ರೂಪ ಪಡೆದುಕೊಳ್ಳುತ್ತಿವೆ. ಇತಿಹಾಸದಲ್ಲಿ ಎಂದೂ ಬೌದ್ಧ ಮತ್ತು ಕ್ರೈಸ್ತರು ಹಿಂದೂ ದ್ವೇಷಿಗಳಾಗಿ ವರ್ತಿಸಿಲ್ಲ. ಆದರೆ ಮುಸ್ಲಿ೦ ಮತ್ತು ಹಿಂದೂ ಧರ್ಮಗಳು ಶತಮಾನಗಳಿಂದ ಹಾವು ಮುಂಗುಸಿಗಳಂತೆ ಕಚ್ಚಾಡುತ್ತ,

ದ್ವೇಷದ ಕಿಡಿ ಕಾರುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ, ಇತ್ತೀಚೆಗಂತೂ ಆರ್. ಎಸ್. ಎಸ್. ನವರು ಹಳೆಯ ಗಾಯಕ್ಕೆ ಉಪ್ಪು ಸುರಿಯುತ್ತಿದ್ದಾರೆ.

ದೇಶದ 30 ಕೋಟಿ ದಲಿತರು ಮುಸ್ಲಿಮರಾದರೆ ಗತಿ ಏನು? ಜುಟ್ಟು ಜನಿವಾರಗಳು ಕಿತ್ತು ಹೋಗುತ್ತವೆ. ಮಠಮಾನ್ಯಗಳು ಮಸೀದಿಗಳಾಗುತ್ತವೆ. ರಾಜಕೀಯ ಅಧಿಕಾರ ಮುಸ್ಲಿಮರ ಕೈಗೆ ಹೋಗುತ್ತದೆ. ತ್ರಿವರ್ಣಧ್ವಜ ಹೋಗಿ ಚಂದ್ರ ಚುಕ್ಕೆ ಬಾವುಟ ಹಾರಾಡುತ್ತದೆ. ಕಾಶಿಗೆ ಬದಲಾಗಿ ಮೆಕ್ಕ ಮದೀನಗಳು ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗುತ್ತವೆ.

ಇದನ್ನು ಊಹಿಸಿಕೊಂಡ ಹಿಂದೂ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಭೇದಿ ಕಿತ್ತುಕೊಂಡಿದೆ. ಮಲಗಿದ್ದ ಮುದ್ರೆ ನಾಮ, ವಿಭೂತಿಗಳು ಎದ್ದು ಕೂತಿವೆ. ಹಿಂದೂ ರಾಜಕಾರಣಿಗಳು ಪುರುಸೊತ್ತಿಲ್ಲದೆ ಓಡಾಡತೊಡಗಿದ್ದಾರೆ. ಪುರೋಹಿತಶಾಹಿ ಪತ್ರಿಕೆಗಳು ದಿನ ನಿತ್ಯ ಮತಾಂತರದ ಬಗ್ಗೆ ಬರೆಯತೊಡಗಿವೆ. ಎಂದಿನಂತೆ ಹಿಂದೂ ಮೆದುಳು ವಾಸ್ತವ ಸ್ಥಿತಿಯ ಸುತ್ತ ಇಲ್ಲ ಸಲ್ಲದ ಕತೆ ಕಟ್ಟತೊಡಗಿದೆ.

ದಲಿತರು ಮುಸ್ಲಿಮರಾಗಲು ಕಾರಣವೇನು? ಇದಕ್ಕೆ ಹೊಣೆ ಯಾರು? ಇಂಥ ಪ್ರಶ್ನೆಗಳಿಗೆ ಉತ್ತರ ಹೇಳ ಬೇಕಾದವರು ಅಸ್ಪೃಶ್ಯರಲ್ಲ. ದಲಿತರು ಹಿಂದೂ ಧರ್ಮ ಬಿಡುತ್ತಿದ್ದರೆ, ಅದಕ್ಕೆ ಹೊಣೆ ಸವರ್ಣೀಯರೆ ಹೊರತು ಅಸ್ಪೃಶ್ಯರಲ್ಲ.

ತಮ್ಮನ್ನು ಊರಿಂದ ಹೊರಗೆ ಇಟ್ಟಿದ್ದರೂ, ತಮ್ಮ ನೋಟ ಅಪವಿತ್ರ ಎಂದು ಭಾವಿಸಿದ್ದರೂ, ದೇವಸ್ಥಾನ, ಭಾವಿ, ಕೆರೆಗಳಲ್ಲಿ ನೀರು ಎತ್ತುವ ಅವಕಾಶ ಕೊಡದಿದ್ದರೂ, ತಮ್ಮ ಹುಟ್ಟು ಹೀನಾಯವೆಂದು ಹೀಗಳೆದರೂ, 5 ಸಾವಿರ ವರ್ಷಗಳಿಂದ ದಲಿತರು ತಮ್ಮನ್ನು ಹಿಂದೂಗಳು ಎಂದೇ ಭಾವಿಸಲಿಲ್ಲವೆ?

ಹಿಂದೂ ದೇವರು, ಪುರಾಣ, ಶಾಸ್ತ್ರಗಳನ್ನು ಪರಮಪೂಜ್ಯವೆಂದು ಆರಾಧಿಸಲಿಲ್ಲವೆ? ಒದ್ದ ಕಾಲುಗಳಿಗೆ ಚಪ್ಪಲಿ ಹೊಲಿದುಕೊಡಲಿಲ್ಲವೆ? ಬೆವರು ಸುರಿಸಿ ಮೂಕ ಪ್ರಾಣಿಗಳಂತೆ ಜೀತ ಮಾಡಲಿಲ್ಲವೆ? ಇಷ್ಟಾದರೂ ಹಿಂದೂಗಳು ಅವರನ್ನು ಮನುಷ್ಯರೆಂದು ಭಾವಿಸಿದರೇನು? ತಮ್ಮ ಸಹ ಸೋದರರೆಂದು ಅತ್ತುಗರೆದರೇನು? ಶತಮಾನಗಳು ಉರುಳಿದರೂ ಅವರ ಮನಸ್ಸು ಬದಲಾಗಿಲ್ಲ.

ಪಪಾ ಬೆಳ್ಳಿ ಕಿಲ್ಬಮನೆ, ನಾರಾಯಣಪುರ, ಇತ್ಯಾದಿ ಘಟನೆಗಳು ಇನ್ನೂ ಮುಂದುವರಿಯುತ್ತಲೇ ಇವೆ. ಅಡ್ಡಬಿದ್ದವರನ್ನೆ ಮತ್ತಷ್ಟು ತುಳಿಯುವ ಈ ಲಫಂಗ ಹಿಂದೂ ಧರ್ಮದಲ್ಲಿ ತಾವಾದರೂ ಏಕೆ ಇರಬೇಕು? ಎಂದು ಅಸ್ಪೃಶ್ಯರು ಭಾವಿಸಿದ್ದರೆ. ಅದಕ್ಕೆ ಹೊಣೆ ಯಾರು? ಜವಾಬ್ದಾರರು ಯಾರು?

ಮೀನಾಕ್ಷಿಪುರಂಗೆ ಧಾವಿಸಿದ ಭಾ.ಜ.ಪ. ನಾಯಕ ವಾಜಪೇಯಿ ಸುಬ್ರಮಣ್ಯಸ್ವಾಮಿ ನಾಮ ಮುದ್ರೆ, ವಿಭೂತಿ ಜುಟ್ಟಿನ ಖದೀಮ ಮಠಾಧಿಪತಿಗಳು, ಆರ್ ಎಸ್. ಎಸ್. ಚಡ್ಡಿಗಳು ಮೇಲು ಜಾತಿ ಗೃಹಮಂತ್ರಿ ಜೈಲ್‌ಸಿಂಗ್‌ ಅಸ್ಪೃಶ್ಯರು ಮತಾಂತರ ಹೊಂದಲು ವಿದೇಶಿ ಹಣ, ರೊಕ್ಕದ ಆಸೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಮೀನಾಕ್ಷಿಪುರಂ ಅಸ್ಪಶ್ಯರು ಸ್ಟೇಟ್ ಗೃಹ ಸಚಿವ ಅಸ್ಪೃಶ್ಯ ಮಂತ್ರಿ ಯೋಗೀಂದ್ರ ಮಕ್ಕಾನ ‘ಮತಾಂತರಕ್ಕೆ ಸಾಮಾಜಿಕ ಅವಹೇಳನ” ಕಾರಣ ಎಂದಿದ್ದಾರೆ. ಪೇಜಾವರ ಮಠಾಧಿಪತಿ ‘ಮತಾಂತರಕ್ಕೆ ಸಾಮಾಜಿಕ ಅಸಮಾನತೆ ಕಾರಣ’ ಎಂದಿರುವುದು ಗಮನಾರ್ಹ. ಇದರಲ್ಲಿ ಯಾವುದು ಮೂಲಭೂತ? ಯಾವುದು ನಿಜ? ಯಾವುದು ಸುಳ್ಳು?

5 ಸಾವಿರ ವರ್ಷಗಳಿಂದ ಅಸ್ಪಶ್ಯತೆಗೆ ಸಿಕ್ಕು ನರಳುತ್ತಿರುವ ಅಸ್ಪಶ್ಯರಾಗಿ ಹುಟ್ಟಿದ ಕಾರಣಕ್ಕಾಗಿಯೆ? ಅಮಾನುಷ ಹಿಂಸೆಗೆ ಬಲಿಯಾಗುತ್ತಿರುವ, ಈ ಜನರ ಮನಸ್ಸಿನ ಬೇಗುದಿ, ತಳಮಳ ಮೇಲ್ಮಾತಿಯ ನೋವಿಲ್ಲದ ಜನಕ್ಕೆ ಹೇಗೆ ಅರ್ಥವಾಗಬಲ್ಲದು? ಹಣಕ್ಕಾಗಿಯೇ ಅಸ್ಪೃಶ್ಯರು ಮತಾಂತರಗೊಳ್ಳುವುದಾಗಿದ್ದರೆ, ಇಂಡಿಯಾ ದೇಶ ಈಗಿರುವ ಸ್ಥಿತಿಯಲ್ಲಿ ಅದು ಹಿಂದೂ ದೇಶವಾಗಿ ಉಳಿಯುತ್ತಿರಲಿಲ್ಲ. ಎಂದೋ ಅದು ಕ್ರಿಶ್ಚಿಯನ್ ಅಥವಾ ಮುಸ್ಲಿಂ ರಾಷ್ಟ್ರವಾಗುತ್ತಿತ್ತು.

ಇಷ್ಟಾದರೂ ದಲಿತರು ಹಿಂದೂ ಧರ್ಮದಲ್ಲಿ ಉಳಿದಿರಲು ಕಾರಣ ಅವರಲ್ಲಿ ಮೌಢ ಅಜ್ಞಾನ ನಿರಕ್ಷರತೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದೂ ಪರಿಸರ ಕಾರಣವಾಗಿದೆ. ಯಾವ ವಿದ್ಯಾವಂತ ದಲಿತನೇ ಆಗಲಿ, ಯಾವೊಬ್ಬ ಮಾನವತಾವಾದಿಯೇ ಆಗಲಿ ತನ್ನನ್ನು ಕೀಳಾಗಿ ಕಾಣುವ ಯಾವ ಧರ್ಮವನ್ನೂ ಗೌರವಿಸಲಾರ. ಗೌರವಿಸುವುದಿಲ್ಲ. ದಲಿತರು ವಿದ್ಯಾವಂತರಾಗುತ್ತಿರುವುದರಿಂದಲೆ ಮತಾಂತರ ಹೆಚ್ಚುತ್ತಿರುವುದು. ಆದ್ದರಿಂದಲೇ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಜಾತಿವಾದಿಗಳು ಮತಾಂತರ ನಿಷೇಧ ಮಸೂದ ಯನ್ನು ತರಲು ಶತ ಪ್ರಯತ್ನ ನಡೆಸಿದ್ದಾರೆ.

ಮತಾಂತರ ನಿಷೇಧ ಮಸೂದೆ ಎಂದರೆ ಅಸ್ಪೃಶ್ಯರು ಈ ದೇಶದಲ್ಲಿ ಅಸ್ಪೃಶ್ಯರಾಗಿಯೆ ಉಳಿಯಬೇಕು. ಸಮಾನತೆಯನ್ನು ಬಯಸಬಾರದು” ಎಂಬುದೇ ಆಗಿದೆ. ಮತಾಂತರದ ಗಾಳಿ ಹಿಂದೂ ರಾಜಕಾರಣಿಗಳಿಗೂ ಬಿಸಿ ತಟ್ಟಿಸಿದೆ. ಹಿಂದೂ ಸರ್ಕಾರ ಉರುಳಿ ಖೊಮನಿ ಸರ್ಕಾರ ಬಂದರೆ ತಮ್ಮನ್ನೆಲ್ಲ ರಾತ್ರೋ ರಾತ್ರಿ “ಬಿಸ್ಮಿಲ್ಲ” ಮಾಡಬಹುದೆಂಬ ಬೆದರಿಕೆಯಿಂದ ಅವರ ತೊಡೆ ನಡುಗತೊಡಗಿವೆ.

ಸ್ವಾತಂತ್ರ ಬಂದ 33 ವರ್ಷಗಳಲ್ಲಿ ರಾಜಕಾರಣಿಗಳು, ಆಳುವ ಪಕ್ಷಗಳು ಅಸ್ಪೃಶ್ಯರ ಬಗ್ಗೆ 3 ಅಂಶ 5 ಅಂಶ ಇತ್ಯಾದಿ ಕಾರಕ್ರಮಗಳನ್ನು ಹೇಳಿ ಅವು ಕಿಂಚಿತ್ತೂ ಕಾರರೂಪಕ್ಕೆ ಬರದೆ ಮತಾಂತರಕ್ಕೆ ಅದೂ ಕಾರಣವಾಗಿದೆ.

ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ನಡೆಸಿ ದಲಿತರ ಮಾರಣ ಹೋಮ ಮಾಡಿದ ಮರಾಠವಾಡ, ವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್‌ ಹೆಸರನ್ನು ಇಡಬೇಕೆಂಬ ಬೇಡಿಕೆಯ ವಿರುದ್ಧ ಮಹಾರಾಷ್ಟ್ರದ ಅಸ್ಪೃಶ್ಯರನ್ನು ಅಮಾನುಷವಾಗಿ ಕೊಂದ, ಅಂಬೇಡ್ಕರ್‌ ಮೆರವಣಿಗೆ ಸವರ್ಣೀಯರ ಕೇರಿಯಲ್ಲಿ ಹೋಗಕೂಡದೆಂಬ ಕಾರಣಕ್ಕಾಗಿ ಇಡೀ ಬೀದರ್ ಜಿಲ್ಲೆ ಅಸ್ಪೃಶ್ಯರ ಮೇಲಿನ ಕಿಡಿಯಾಗಿ ಸಿಡಿದು ಅಸಂಖ್ಯ ದಲಿತರ ಸಾವು ನೋವಿಗೆ ಕಾರಣವಾದ ಹಿಂದೂಗಳು, ದಲಿತರ ಮೇಲೆ ತಮಗಿರುವ ದ್ವೇಷವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗವಾಗಿ ತೋರ್ಪಡಿಸಿದ್ದಾರೆ.

ಅಷ್ಟೆ ಅಲ್ಲ ದಲಿತರ ಉದ್ಧಾರಕಿ ಎಂದು ಬೊಗಳೆ ಹೊಡೆಯುವ ಇಂದಿರಾ ಗಾಂಧಿಯಿಂದ ಹಿಡಿದು, ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ, ಮೊರಾರ್ಜಿ ದೇಸಾಯಿ ಮುಂತಾದ ಹಿಂದೂ ನಾಯಕರು ಜಗಜೀವನ ರಾಂನಂಥ ಅಸ್ಪೃಶ್ಯನೊಬ್ಬ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಿದರಲ್ಲಾ, ದಲಿತರು ಇವನ್ನು ಸುಲಭವಾಗಿ ಮರೆಯುತ್ತಾರೇನು? ಘಾಸಿಗೊಂಡ ಅವರ ಮನಸ್ಸು ಸೇಡಿನ ಕಿಡಿಯಾಗಿ ಉರಿಯುತ್ತದೆ.

ಈಗ ಹಾಲಿ ನಡೆಯುತ್ತಿರುವ ಮತಾಂತರವನ್ನು ತಡೆಗಟ್ಟಲು 3 ಮಾರ್ಗಗಳಿವೆ.

1. ಮತಾಂತರ ನಿಷೇಧ ಮಸೂದೆಯನ್ನು ತಂದು ಬಲವಂತವಾಗಿ ಮತಾಂತರವನ್ನು ತಡೆಗಟ್ಟುವುದು. ಅಸ್ಸಾಂ ಗುಡ್ಡಗಾಡು ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಿರುವಾಗ ಹಿಂದೂ ಜಾತಿವಾದಿಗಳು ಜನತಾ ಪಕ್ಷದ ಆಡಳಿತ ಕಾಲದಲ್ಲಿ “ಮತಾಂತರ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ತರುವ ಯತ್ನ ಮಾಡಿದರು. ಭಾರತದ ಉದ್ದಗಲಕ್ಕೂ ಇರುವ ಕ್ರಿಶ್ಚಿಯನ್ನರು ಸಭೆ, ಮೆರವಣಿಗೆಗಳ ಮೂಲಕ ಮಸೂದೆಯನ್ನು ಪ್ರತಿಭಟಿಸಿದರು. ಅದು ರಾಜ್ಯಾಂಗದ 25(1) ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತಿದೆಯಾಗಿ ಆ ಮಸೂದೆ ತರುವುದು ಕಷ್ಟವಾಯಿತು ಮತ್ತು ಆ ರೀತಿಯ ಮಸೂದೆ ಈಗಿರುವ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ.

2. ಮತಾಂತರಕ್ಕೆ ಮೂಲಕಾರಣ ಸಾಮಾಜಿಕ ಅಸಮಾನತೆ – ಅವಮಾನ, ಸಾಮಾಜಿಕ ಅವಮಾನ ಜಾತೀಯತೆಯಿಂದ ಬಂದದ್ದು. ಆದ್ದರಿಂದ ಜಾತಿ ನಿರ್ಮೂಲನ ಮತಾಂತರಕ್ಕೆ
ಇರುವ ಏಕೈಕ ಮತ್ತು ಸಮರ್ಥ ಪರಿಹಾರ, ಪೇಜಾವರ, ಕಂಚಿ ಕಾಮಕೋಠಿ ಮಠಾಧಿಪತಿಗಳು ಆರ್.ಎಸ್.ಎಸ್. ಹಿಂದೂ ಮಹಾಸಭೆ, ಆತ್ಮ ಸಮಾಜ, ಈಗ ಮಾತನಾಡುತ್ತಿರುವ ರೀತಿಯಲ್ಲಿ ಜಾತಿನಾಶ ಮಾಡಲು ಸಾಧ್ಯವೆ ಇಲ್ಲ.

ಪೇಜಾವರ ಸ್ವಾಮಿಗಳು ಅಸ್ಪೃಶ್ಯರ ಕಾಲೋನಿಗೆ ಹೋದ ಮಾತ್ರಕ್ಕೆ ಬ್ರಾಹ್ಮಣ ಅಸ್ಪಶ್ಯರ ಮನೆಯಲ್ಲಿ ಭೋಜನ ಮಾಡಿದ ಮಾತ್ರಕ್ಕೆ ಜಾತೀಯತೆ ಹೋಗಲಾರದು. ಜಾತಿಬೇರುಗಳು ಇರುವುದು ಹಿಂದೂ ಧರ್ಮದಲ್ಲಿ, ಜನನ. ವೈವಾಹಿಕ, ಮತ್ತು ಮರಣ ಕಾಲಗಳಲ್ಲಿ ನಡೆಸುವ ಕ್ರಿಯೆಗಳಲ್ಲಿ. ಮನು ಧರ್ಮಶಾಸ್ತ್ರ, ಗೃಹ್ಯ ಸೂತ್ರ ಪುರಾಣಗಳಲ್ಲಿ ಇವುಗಳನ್ನು ಅಮೂಲಾಗ್ರವಾಗಿ ನಾಶಮಾಡುವುದಾದರೆ ಜಾತಿ ಹೋಗಲು ಸಾಧ್ಯ.

ಒಂದು ಕಡೆ ಮನು ಧರ್ಮಶಾಸ್ತ್ರದಲ್ಲಿ ಆಳವಾಗಿ ಕಾಲಿಟ್ಟುಕೊಂಡು ಮತ್ತೊಂದು ಕಡೆ ಜಾತಿ ನಾಶಮಾಡುತ್ತೇವೆ ಎನ್ನುವ ಬೂಸ ಸುಧಾರಣಾವಾದಿಗಳ ಬಗ್ಗೆ ದಲಿತರು ಮೈತುಂಬ ಕಣ್ಣಿಟ್ಟು ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮ ನಾಶವ ಜಾತಿ ನಾಶವಾಗಿರುವಾಗ, ಹಿಂದೂ ಧರ್ಮ ಉಳಿಸಿಕೊಂಡು ಜಾತಿಯನ್ನು ಪ್ರತ್ಯೇಕವಾಗಿ ನಾಶಮಾಡುವುದು ಹೇಗೆ? ಹಿಂದೂ ಧರ್ಮ ಸಮಗ್ರ ಘಟಕವಾಗಿರುತ್ತಿದ್ದರೆ ಜಾತಿ ನಾಶ ಸುಲಭವಾಗಬಹುದಿತ್ತು.

ಬ್ರಾಹ್ಮಣ ಜಾತಿ ಬಿಡುತ್ತೇನೆ ಎಂದರೆ ಲಿಂಗಾಯಿತರು? ಗೌಡರು? ಕನಿಷ್ಠ ಅಗಸ? ಕುಂಬಾರ? ಇಂಥ ಭಿನ್ನ ಘಟಕಗಳು ಒಂದೊಂದೂ ಜಾತಿ ಕಲ್ಪನೆಯಿಂದ ಹೊರಬರಬೇಕಾದರೆ ಶತಮಾನಗಳೇ ಹಿಡಿದೀತು. ದಲಿತರಿಗೆ ಬೇಕಾಗಿರುವುದು ಜಾತಿ, ನೋವು ತುಳಿತಗಳಿಂದ ತಕ್ಷಣದ ಪರಿಹಾರ, ಅವರ ಬೇಡಿಕೆಯನ್ನು ಹಿಂದು ಧರ್ಮ ಪೂರೈಸಲಾರದು. ಅದು ಸಾಧ್ಯವು ಇಲ್ಲ. ಸಾಧ್ಯ ಎನ್ನುವುದಾದರೆ ಅದು ಅಷ್ಟೇ ವಿಳಂಬ.

ಆದ್ದರಿಂದ ಜೀತ, ಅವಮಾನ, ಹಿಂಸೆಗಳಿಂದ ಬಿಡುಗಡೆ ಹೊಂದಲು ದಲಿತರಿಗೆ ಉಳಿದ ಮಾರ್ಗ, ಮತಾಂತರವೊಂದೆ, ಆದರೆ ಯಾವ ಮತ? ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ದಲಿತರು ಚರ್ಚಿಸಬೇಕಾಗಿದೆ. ಸಮಗ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ಮಧ್ಯೆ ಯಾವುದೇ ಪೂರ್ವ ಚಿಂತನೆ ಇಲ್ಲದೆ ಹಸಿ ಹಸಿಯಾಗಿ ಮತಾಂತರಗೊಳ್ಳು ದಲಿತರ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಬಹುದು.

(ಪ್ರೊ. ಬಿ. ಕೃಷ್ಣಪ್ಪ : ಚಿಂತನೆಗಳು – ಬರಹಗಳು ಪುಸ್ತಕದಿಂದ ಈ ಲೇಖನ ಆಯ್ದು ಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending