Connect with us

ದಿನದ ಸುದ್ದಿ

ಗಾಜಿನ ಮನೆ ಸುತ್ತ ವಿವಾದ ಹುತ್ತ ; ಹೆಸರಿಡುವ ವಿವಾದ ಎಂದು ಅಂತ್ಯ..?

Published

on

ದಾವಣಗೆರೆ ಗಾಜಿನ ಮನೆ

ಸುದ್ದಿದಿನ,ದಾವಣಗೆರೆ : ಕುಂದವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನ ಮನೆಗೆ ಹೆಸರಿಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚಾಗ್ರಾಸವಾಗಿದ್ದು, ರಾಜಕಾರಣಿಗಳ ಹೆಸರಿನ ಬದಲು ‘ದಾವಣಗೆರೆ ಗಾಜಿನ ಮನೆ’ ಎಂದು ಹೆಸರಿಡುವಂತೆ ಸಲಹೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈಚೆಗೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಗಾಜಿನ ಮನೆ ನಾಮಕರಣ ವಿವಾದ ಭಾರಿ ಚರ್ಚೆಗೆ ಕಾರಣವಾಯಿತು. ಬಿಜೆಪಿಯವರು ಮಾಜಿ ಸಂಸದ ದಿ. ಮಲ್ಲಿಕಾರ್ಜುನಪ್ಪ, ಕುಂದವಾಡ ಹಾಗೂ ಕಾಂಗ್ರೆಸ್‌ನವರು ಶಾಮನೂರು ಮತ್ತೆ ಕೆಲವರು ಜಿಲ್ಲೆಯ ನಿರ್ಮಾತೃ ದಿ. ಜೆ.ಎಚ್. ಪಟೇಲರ ಹೆಸರಿಡುವಂತೆ ಆಗ್ರಹಿಸಿದರು.

ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಹೆಸರಿಡುವುದಕ್ಕೆ ಕಾಂಗ್ರೆಸ್‌ನವರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಶಾಮನೂರು ಹೆಸರು ಯಾಕೆ ಬೇಕೆಂದು ಪ್ರಶ್ನಿಸಿದರು. ಗಾಜಿನ ಮನೆ ಹೆಸರಿಡುವ ವಿವಾದ ತೀವ್ರವಾಗಿದ್ದು, ಇದರಿಂದ ನಾಗರಿಕರು ಈ ಎರಡು ಹೆಸರು ಬೇಡ. ದಾವಣಗೆರೆ ಗಾಜಿನ ಮನೆ ಹೆಸರಿಡುವಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಾಗ್ರಾಸವಾಗುತ್ತಿದೆ.

ಗಾಜಿನ ಮನೆಗೆ ವಿವಿಧ ಹೆಸರುಗಳು ಸಲಹೆ

ಕುಂದವಾಡ ಕೆರೆ ಬಳಿ ತೋಟಗಾರಿಕೆ ಇಲಾಖೆ ನಿರ್ಮಿಸಿರುವ ಗಾಜಿನ ಮನೆಗೆ ವಿವಿಧ ಹೆಸರುಗಳು ಶಿಫಾರಸು ಆಗಿದ್ದು, ವಿವಾದಕ್ಕೆ ತಿರುಗಿದೆ. ಮಾಜಿ ಸಂಸದ ದಿ. ಜಿ. ಮಲ್ಲಿಕಾರ್ಜುನಪ್ಪ, ಶಾಮನೂರು, ಶಾಮನೂರು ಶಿವಶಂಕರಪ್ಪ, ಕುಂದುವಾಡ, ಜಿಲ್ಲೆಯ ನಿರ್ಮಾತೃ ದಿ. ಜೆ.ಎಚ್. ಪಟೇಲರ ಹೆಸರಿಡಲು ಸಲಹೆಗಳು ಬಂದಿವೆ. ಆದರೆ, ಈ ಹೆಸರುಗಳನ್ನು ಇಡಲು ಸರ್ವಸಮ್ಮತ ಒಪ್ಪಿಗೆ ಸಿಗುವುದು ಕಷ್ಟಕರವಾಗಿದೆ.

ದೇಶದ ಅತಿ ದೊಡ್ಡ ಗಾಜಿನ ಮನೆ

ದಾವಣಗೆರೆಯಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆಗೆ ದೇಶದಲ್ಲಿ ದೊಡ್ಡದು ಎಂಬ ಖ್ಯಾತಿ ಇದೆ. ಕುಂದವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಮನೆ ನಿರ್ಮಾಣವಾಗಿದೆ. ಇದು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಗಿಂತ ದೊಡ್ಡದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿಯು ದಾವಣಗೆರೆ ಜಿಲ್ಲೆಯ ರೈತಿಗೆ ಮಾತ್ರ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

Published

on

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ ಭೂಮಿಯನ್ನು ಖರೀದಿ ಮಾಡಿದ್ದ ಅವರು ಅದನ್ನು ತಮ್ಮ ಸಹೋದರಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಇದಕ್ಕೆ ಪತ್ನಿ ಪಲ್ಲವಿಯವರ ಆಕ್ಷೇಪ ಇತ್ತು ಎನ್ನಲಾಗುತ್ತಿದೆ.

ಆದರೆ ಆಸ್ತಿ ವಿವಾದವೇ ಎಲ್ಲದಕ್ಕೂ ಕಾರಣವಾಯ್ತಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಓಂ ಪ್ರಕಾಶ್ ಅವರು 2017 ರಲ್ಲಿ ನಿವೃತ್ತಿಗೊಂಡಿದ್ದರು. ನಿವೃತ್ತಿಗೂ ಮೊದಲು ಹಾಗೂ ನಂತರದಲ್ಲಿ ಅವರು ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಸ್ತಿ ಖರೀದಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!

Published

on

  • ಗಿರೀಶ್ ಕುಮಾರ್ ಗೌಡ,ಬಳ್ಳಾರಿ

ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ ಸಾಗಾಟ ಮಾಡುತ್ತಿರುವ ಅಂಶಗಳು ಬೆಳಕಿಗೆ ಬಂದಿವೆ.
ಅದರಲ್ಲಿ 10 ಲಕ್ಷ ಮೌಲ್ಯದ ಅನುಮಾನ ಪಡಿತರ ಅಕ್ಕಿ ಲಾರಿ, ಮದ್ಯ ರಾತ್ರಿಯಿಂದ ಬೆಳಿಗ್ಗೆ 9ಗಂಟೆವರೆಗೆ ಇದ್ದ ಲಾರಿ ನಂತರ ಇಲ್ಲದೆ ಇರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಳ್ಳಾರಿ ನಗರದಲ್ಲಿ ಕೆಲ ದಿನಗಳ ಹಿಂದೆ ( ರಾತ್ರಿ 2.30 ಗಂಟೆ) ಸಮಯದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ವಾಹನವನ್ನು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಪೊಲೀಸ ಅಧಿಕಾರಿಗಳು ತಪಾಸಣೆ ಮಾಡಿ ಠಾಣೆಗೆ ತಂದು ನಿಲ್ಲಿಸಿಕೊಂಡಿದ್ದರು.

ರಾಯಚೂರುನಿಂದ ಛತ್ತೀಸ್ಗಢದ ವರೆಗೆ ಪಡಿತರ ಅಕ್ಕಿ ಸಾಗಾಟ

ರಾಯಚೂರದಿಂದ ಛತ್ತೀಸ್ಗಢಕ್ಕೆ ಸಾಗಣೆಯ ಮಾಡುತ್ತಿದ್ದ ವಾಹನವಾಗಿತ್ತು ವಾಹನಕ್ಕೆ ಆರ್.ಕೆ ಎಂಟರ್ಪ್ರೈಸಸ್ ರಾಯಚೂರು,ಬಳ್ಳಾರಿ ಎಂದು ಬಿಲ್ ಹಾಕಿ ರಾಯಚೂರುದಿಂದ ಛತ್ತೀಸ್ ಗಡಿಗೆ ಅಕ್ಕಿ ಸರಬರಾಜು ಮಾಡುತ್ತಿದ್ದ ಮತ್ತೊಂದು ಬಿಲ್ ಹಾಕಿ ಕಳಿಸಲಾಗಿತ್ತು. ಈ ವಾಹನಕ್ಕೆ ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಕಳಸಾಗಣಿಕೆ ಪಡಿತರ ಅಕ್ಕಿಯನ್ನು ತುಂಬಿದ್ದಾರೆ. ಇದಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿಗಳು ಮಾತ್ರ ಇದೆ ಎನ್ನುವ ಆರೋಪ ಇದೆ.

ಮಧ್ಯರಾತ್ರಿದಿಂದ ಬೆಳಿಗ್ಗೆ 9 ಗಂಟೆಗೆ ಠಾಣೆಯಲ್ಲಿ ಲಾರಿ ವಾಹನವನ್ನು ಇಟ್ಟುಕೊಂಡು ಎಲ್ಲವೂ ಸರಿ ಇದ್ದಾವೆ ಎಂದು ಗಾಡಿಯನ್ನು ಬಿಟ್ಟು ಕಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಸಾರ್ವಜನಿಕ‌ ಪ್ರಶ್ನೆ.

ಈ ಠಾಣೆಗೆ ನೂತನವಾಗಿ ಬಂದಿರುವ ಪೊಲೀಸ್ ಅಧಿಕಾರಿ ತೋರಣಗಲ್ಲು, ಸಂಡೂರು, ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸಿ ಬಳ್ಳಾರಿ ಎಪಿಎಂಸಿ ಠಾಣಿಗೆ ವರ್ಗಾವಣೆ ಆಗಿರುವ ರಫೀಕ್ ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.

ಈಗಾಗಲೇ ಪಡಿತರ ಕಳಸಾಗಾಣಿಕೆ ದಂದೆ ನಡೆಯುತ್ತಿದ್ದು ಕಣ್ಣಿಗೆ ಕಂಡು ಕಾಣದಂತೆ ನಡೆಯುತ್ತದೆ ಇಂತಹ ಸಂದರ್ಭದಲ್ಲಿ ರಾಯಚೂರಿನಿಂದ ಛತ್ತೀಸ್ಗಢ ಗೆ ಬಿಲ್, ಬಳ್ಳಾರಿಯಲ್ಲಿ ಅಕ್ಕಿ, ಪೊಲೀಸ್ ಠಾಣೆಯಲ್ಲಿ ಗಾಡಿ,ಯಾವುದೇ ಪ್ರಕರಣ ಇಲ್ಲದೆ ಬಿಟ್ಟು ಕಳಿಸಿರುವುದು ಆಶ್ಚರ್ಯವಾಗಿದೆ. ಇನ್ನು ಈ ವಿಚಾರವಾಗಿ ಅಧಿಕಾರಿಗಳಿಗೆ ಕೇಳಿದರೆ ಇಲ್ಲ ನಮಗೆ ಗೊತ್ತಿಲ್ಲ ಎನ್ನುವ ಬೇಜವಾಬ್ದಾರಿ ಮಾತನಾಡುತ್ತಾರೆ.

ಲಾರಿ ಬಿಲ್ ಚೆಕ್ ಮಾಡಿದ್ದು ಯಾರು ?

ಗಣಿನಾಡು ಬಳ್ಳಾರಿ ನಗರದಲ್ಲಿ ಪೊಲೀಸರು ಲಾರಿ ಬಿಲ್ ಗಳು ಮದ್ಯರಾತ್ರಿ ಚೆಕ್ ಮಾಡಿದ್ದು ಯಾರು, ಸಾಧಾರಣ ಟೈಮ್ ನಲ್ಲಿ ಬಂದು ನೋಡಲು ಬರದೇ ಇರುವ ಅಧಿಕಾರಿಗಳು ಮದ್ಯ ರಾತ್ರಿ ಬಂದು ನೋಡಿರಬಹುದಾ. ಈಗಲೇ ರಫೀಕ್ ಅವರ ಮೇಲೆ ಕೆಲ ಸಿಬ್ಬಂದಿ ಮೇಲೆ ಆರೋಪ ಇವೆ. ಅಕ್ರಮ ಚಟವಟೆಕೆಗಳಿಗೆ ನಿರ್ದೇಶಕ ಕೀರ್ತಿ ಇದೇ ಲೋಕಾಯುಕ್ತ ಸಮಯದಲ್ಲಿ ಬಹುತೇಕ ಬಹಳ ಸಮಸ್ಯೆಗಳನ್ನು ಮಾಡಿದ್ದನ್ನು ನೊಂದವರು ತಿಳಿಸಿದ್ದಾರೆ.

“ಸಚಿವ ಸಂತೋಷ ಲಾಡ್ ಹೆಸರು ಹೇಳುವ ರಫೀಕ್”
ಠಾಣೆಯ ಅಧಿಕಾರಿ ರಫೀಕ್ ಪದೇ ಪದೇ ಸಚಿವ ಸಂತೋಷ್ ಲಾಡ್ ಹೆಸರು ಹೇಳಿಕೊಂಡು ಬಂದಿದ್ದಾನೆ ಎನ್ನುವ ಆರೋಪ ಸಹ ಇದೆ. ಈ ಅಕ್ರಮ ಅಕ್ಕಿ ಪಡಿತರದಲ್ಲಿ ಪೊಲೀಸ್ ಠಾಣೆಗೆ ಮಾಮೂಲು ಸಹ ಇದೆ ಎನ್ನುವ ಮಾಹಿತಿ ಸಹ ಇದೆ.

ಎಸ್ಪಿ ಅವರ ಕ್ರಮ ಯಾವಾಗ ?

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೋಭಾರಾಣಿ ಅವರು ಯಾವ ? ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ. ಜಿಲ್ಲೆಗೆ ಬಳ್ಳಾರಿ ಪೊಲೀಸ್ ವರಿಷ್ಟಾಧಿಕಾರಿ ಅಧಿಕಾರ ಸ್ವೀಕರಿದ ನಂತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆವೇ ಎನ್ನುವ ಅನುಮಾನ ಸಹ ಇದೆ ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಬಡವರಿಗೆ ನೀಡುವ ಪಡಿತರ ಅಕ್ಕಿ ಕಳ್ಳರ ಪಾಲಾಗುತ್ತಿದೆ, ಇನ್ನು ಪಡಿತರ ಅಕ್ಕಿಯ ವಿತರಕರು 1 ಕಿಲೋಗ್ರಾಂ ಗೆ 10 ರಿಂದ 12 ರೂಪಾಯಿ ಕೊಂಡುಕೊಳ್ಳುತ್ತಾರೆ ಎನ್ನುವ ಮಾಹಿತಿ ಸಹ ಇದೆ. ಇವರ ವಿರುದ್ಧ ಹಾಗೂ ಪಡಿತರ ಅಕ್ಕಿ ಮಾರಾಟ ಮಾಡುವ ಸಾರ್ವಜನಿಕರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ‌.

ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯ ವಿವಿಧ ಠಾಣೆ ವ್ಯಾಪ್ತಿ ಅಧಿಕಾರಿಗಳಿಗೆ ಎಸ್ಪಿ ಅವರು ಯಾವ ರೀತಿ ಕ್ರಮ ತೆಗೆದುಕೊಳ್ಳುವರು ಕಾದು ನೋಡೊಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 24 ಮತ್ತು 25 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು ಆಧಾರ್...

ದಿನದ ಸುದ್ದಿ2 days ago

ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?

ಸುದ್ದಿದಿನಡೆಸ್ಕ್:ಭಾನುವಾರ ಹತ್ಯೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಆಸ್ತಿ ಕಲಹವಿರಬಹುದು ಎಂಬ ಆರೋಪಗಳು ಕೇಳಿ ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಟ್ಯಂತರ ಮೌಲ್ಯದ...

ಅಂಕಣ3 days ago

ಕವಿತೆ | ಅವಳೀಗ ಕಾಯುವುದಿಲ್ಲ

ಶಮೀಮ ಕುತ್ತಾರ್, ಮಂಗಳೂರು ಬೆಳಕು ಬರಲೆಂದು ಕಿಟಕಿಯನ್ನೊಂಚೂರು ಸರಿಸಹೊರಟಿದ್ದಳು… ಒಳಗಿನಿಂದಲೇ ಸರಪಳಿಗಳು ಕೈಗಳ ಬಿಗಿದಾಗ ಬೆಳಕಿಗಿಂತ ಬಿಡುಗಡೆಯೇ ಸಾಕೆನಿಸಿತ್ತು. ಬಯಕೆಗಳು ಶಾಪವಾದಾಗ ಇರವನ್ನೂ ಮರೆಯಬೇಕವಳು ಓದಿ ಮುಗಿಸಲಾಗದ...

ದಿನದ ಸುದ್ದಿ4 days ago

ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!

ಗಿರೀಶ್ ಕುಮಾರ್ ಗೌಡ,ಬಳ್ಳಾರಿ ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ...

ದಿನದ ಸುದ್ದಿ4 days ago

ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ

ಸುದ್ದಿದಿನಡೆಸ್ಕ್:ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ ಮಾಡಿ ಇಂದಿಗೆ 50 ವರ್ಷಗಳು ಸಂದಿವೆ. 1975ರಲ್ಲಿ ಈ ದಿನದಂದು ಉಡಾವಣೆ ಮಾಡಲಾದ ಈ ಉಪಗ್ರಹಕ್ಕೆ ಪ್ರಾಚೀನ ಭಾರತೀಯ ಗಣಿತಜ್ಞ...

ದಿನದ ಸುದ್ದಿ4 days ago

ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಸುದ್ದಿದಿನಡೆಸ್ಕ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ – ಜೆಇಇ ಮುಖ್ಯ ಫಲಿತಾಂಶ -2 ಅನ್ನು ಪ್ರಕಟಿಸಿದೆ. ಈ ಭಾರಿ...

ದಿನದ ಸುದ್ದಿ4 days ago

ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ‌‌ ಕಾರ್ಯನಿರ್ವಹಣಾ ಸಮಿತಿ ರಚನೆ

ಸುದ್ದಿದಿನಡೆಸ್ಕ್:ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 12 ಜನ ಅಧಿಕಾರಿಗಳನ್ನು ಒಳಗೊಂಡ, ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು, ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಇದನ್ನೂ...

ದಿನದ ಸುದ್ದಿ5 days ago

‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಬೆಂಗಳೂರಿನ ಕೆಂಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಲಿದೇವ ಸಮುದಾಯ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆಗೊಳಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು...

ದಿನದ ಸುದ್ದಿ5 days ago

ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ

ಸುದ್ದಿದಿನ,ಚನ್ನಗಿರಿ:ಇತ್ತೀಚಿಗೆ ತಾವರೆಕೆರೆಯಲ್ಲಿ ನಡೆದ ಘಟನೆ ಕಾನೂನು ಬಾಹಿರವಾಗಿದ್ದು, ಮುಖಂಡರುಗಳು ತಮ್ಮ ಗ್ರಾಮ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಿದ್ದರೆ ಕಾನೂನಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ...

ದಿನದ ಸುದ್ದಿ5 days ago

ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ...

Trending