Connect with us

ದಿನದ ಸುದ್ದಿ

ದಾವಣಗೆರೆ | ಗರ್ಭಿಣಿಗೆ ಕೊರೋನಾ : ಮದುವೆಗೆ ಹೋದವರ ಎದೆಯಲ್ಲೀಗ ಡವ ಡವ..!

Published

on

ಸುದ್ದಿದಿನ,ದಾವಣಗೆರೆ:ಬೆಣ್ಣೆ ನಗರಿಯಲ್ಲಿ ಕೊರೋನಾ ಆರ್ಭಟ‌ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಇಷ್ಟು ದಿನ ನರ್ಸ್ ಹಾಗೂ ಮೃತ ವೃದ್ದನ ಕಂಟಕವಿದ್ದು.ಅದಾದ ನಂತರ ಕಂಟೈನ್ಮೆಂಟ್ ವಲಯಗಳೇ‌ ದೊಡ್ಡ ಕಂಟಕವಾಗಿತ್ತು. ಯಾರ ಸಂಪರ್ಕದಿಂದ ‌ಬಂದಿದೆ‌ ಎಂದು ಗೊತ್ತಾಗದೆ ನೂರಾರು ಪಾಸಿಟಿವ್ ‌ಪ್ರಕಣಗಳು ಬರುತ್ತಿತ್ತು.ಈಗ ಮತ್ತೊಂದು‌ ಕಂಟಕ ಎದುರಾಗುತ್ತಿದೆ.

ಈ ಕಂಟಕದಿಂದ‌‌ ಪಾರಾಗಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದ್ದಾರೆ.. ಹಾಗಾದ್ರೆ ಯಾವುದು ಆ ಕಂಟಕದ ಅಂತೀರಾ ಈ ಸ್ಟೋರಿ ನೋಡಿ…

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ‌ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ‌ ಇದೆ… ಪೇಷಂಟ್ ನಂಬರ್ 533 ಸೋಂಕಿತ ಸ್ಟಾಪ್ ನರ್ಸ್ ಹಾಗೂ ಪೇಷಂಟ್ ನಂಬರ್ 556 ಮೃತ ವೃದ್ದನಿಂದ‌ ಸಾಕಷ್ಟು ‌ಜನರಿಗೆ‌ ಸೋಂಕು ಕಾಣಿಸಿಕೊಂಡಿದ್ದು, ಇನ್ನೇನು ಕರೋನಾ ಕಂಟಕ ಬೆಣ್ಣೆ ನಗರಿಗೆ ಕಡಿಮೆಯಾಗುತ್ತದೆ ಎಂದುಕೊಂಡು‌ನಿಟ್ಟುಸಿರು ಬಿಟ್ಟರೆ, ಈಗ ಗರ್ಭಿಣಿಯರಿಗೆ ಕೊರೋ‌ನಾ ಕಂಟಕ ಶುರುವಾಗಿದೆ.

ಇದುವರೆಗೂ ಆರು ಜನ ಗರ್ಭಿಣಿಯರಿಗೆ ‌ಸೋಂಕು‌ ಕಾಣಿಸಿಕೊಂಡಿದ್ದು, ಅದರಲ್ಲಿ ಮೂರು‌ಜನ ಗರ್ಭಿಣಿಯರಿಗೆ ಹೆರಿಗೆ ಕೂಡ ಆಗಿದೆ… ಅದರೆ ಹರಿಹರದ ರಾಜನಹಳ್ಳಿಯ 18 ವರ್ಷದ ಪೇಷಂಟ್ ನಂಬರ್ 8065 ಸೋಂಕಿತ ಗರ್ಭಿಣಿ‌ ಈಗ ಜಿಲ್ಲಾಡಳಿತಕ್ಕೆ ‌ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರದಿಂದ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಅದೇಶದ ಹಿನ್ನಲೆ ಜಿಲ್ಲೆಯಲ್ಲಿ ಇರುವ ಗರ್ಭಿಣಿಯರನ್ನು ತಪಾಸಣೆಗೆ ಓಳಪಡಿಸಿದ್ದು, ಆಗ ಆರು ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ, ಇದರಲ್ಲಿ ರಾಜನಹಳ್ಳಿ ಗ್ರಾಮದ 18 ವರ್ಷದ ಗರ್ಭಿಣಿ‌ ಕೂಡ ಒಬ್ಬಳಾಗಿದ್ದಾಳೆ.

ಪ್ರಮುಖಖಾಂಶ

  • 18 ವರ್ಷದ ಗರ್ಭಿಣೆಗೆ‌ ಸೋಂಕು
  • ಆಕೆಯಿಂದ‌ ಒಂದೇ ಕುಟುಂಭದ 9 ಜನರಿಗೆ ಸೋಂಕು
  • 15 ರಂದು ಮದುವೆಗೆ ಹೋಗಿದ್ದಳು, 18 ರಂದು ಸೋಂಕು‌
  • ಮದುವೆಗೆ ಹೋದವರ ಎದೆಯಲ್ಲಿ ಈಗ ಡವ ಡವ

ಜಿಲ್ಲಾಡಳಿತಕ್ಕೆ 6 ಜನ ಗರ್ಭಿಣಿಯರ ಪೈಕಿ ಪೇಷಂಟ್ ನಂಬರ್ 8065, 18 ವರ್ಷದ ಗರ್ಭಿಣಿಯ ಕೇಸ್ ತಲೆನೋವಾಗಿ ಪರಿಣಮಿಸಿದೆ… ಹರಿಹರದ ಗಂಡನ‌ ಮನೆಯಿಂದ ತನ್ನ ತವರೂರಾದ‌ ರಾಜನಹಳ್ಳಿ ಗೆ ಹೋಗಿದ್ದಳು, ಗ್ರಾಮದಲ್ಲಿ‌ ನಡೆದ ಸಂಬಂಧಿಕರ ಮದುವೆಗೆ ಈ ಗರ್ಭಿಣಿ ಪಾಲ್ಗೊಂಡಿದ್ದಳು.

15 ರಂದು‌ ಮದುವೆಗೆ ಹೋಗಿ ಬಂದಿದ್ದು 18 ರಂದು ಈಕೆಗೆ ಕೊರೋನಾ‌ ಸೋಂಕು ಪತ್ತೆಯಾಗಿದ್ದು, ಈಗ ಈಕೆಯ ಸಂಪರ್ಕದಲ್ಲಿ ಇದ್ದು ನಾಲ್ಕು ಜನ ಬಾಲಕಿಯರನ್ನು ಸೇರಿ ಒಟ್ಟು 9 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.ಅಲ್ಲದೆ‌ ಈಕೆಯ ಸಂಪರ್ಕದಲ್ಲಿ ಇದ್ದ 25 ಜನರನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದಾರೆ. ಆದರೆ ಈಕೆ ಮದುವೆಗೆ ಹೋಗಿ ಬಂದ ಹಿನ್ನಲೆ ಮದುವೆಗೆ ಯಾರ್ ಯಾರ್ ಹೋಗಿದ್ದಾರೋ ಅವರ ಎದೆಯಲ್ಲಿ ಮಾತ್ರ ಡವ ಡವ ಶುರುವಾಗಿದೆ.

ಯಾಕಂದ್ರೆ ನೂರಾರು ಜನರು‌ ಸೇರಿದ ಮದುವೆಯಲ್ಲಿ‌‌ ಈಕೆಯ ಸಂಪರ್ಕ ಎಷ್ಟು ಜನ ಇದ್ದರು ಎನ್ನುವುದೇ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.ಅಲ್ದೆ‌ ತಹಶಿಲ್ದಾರರ ಗೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದ್ದು, ಮದುವೆಗೆ ಹೋದವರು ಸ್ವಯಂ ಪ್ರೇರಣೆಯಿಂದ ಬಂದು ತಪಾಸಣೆ ಮಾಡಿಸಿಕೊಳ್ಳಿ ಎಂದು ಅದೇಶವನ್ನು ಹೊರಡಿಸಲಾಗುತ್ತಿದೆ.


  • ಒಟ್ಟಾರೆಯಾಗಿ 18 ವರ್ಷದ ಗರ್ಭಿಣಿ ಗೆ ಸೋಂಕು ತಗುಲಿದ್ದು ಗ್ರಾಮದ ಹಾಗೂ ಮದುವಗೆ ಹೋಗಿ ಬಂದವರ ನೆಮ್ಮದಿ ಹಾಳು ಮಾಡಿರುವುದಂತು ಸತ್ಯ.. ಈಗಲೇ ಆಕೆಯ ಸಂಪರ್ಕದಲ್ಲಿ ಇದ್ದ ಗಂಡನ ಮನೆ ಹಾಗೂ ತವರು ಮನೆಯ 9 ಜನರಿಗೆ ಸೋಂಕು ತಗುಲಿದ್ದು, ಮುಂದೆ‌ ಇನ್ನೇಷ್ಟು ಜನ ಸೋಂಕಿತರು ಹೆಚ್ಚಾಗುತ್ತಾರೋ ಎನ್ನುವುದು ಕಾದು ನೋಡಬೇಕಿದೆ.

|ರಾಘವನ್, ಸರ್ವೇಕ್ಷಣಾ ಅಧಿಕಾರಿ


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದುರ್ಗಾಂಬಿಕಾದೇವಿ ಜಾತ್ರೆ ; ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ

Published

on

ಸುದ್ದಿದಿನ,ದಾವಣಗೆರೆ:ಫೆಬ್ರವರಿ 23 ರಿಂದ 27 ರವರೆಗೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆ ಪ್ರಯಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದೊಡ್ಡಪೇಟೆಯ ನಾಮದೇವ ಸಿಂಪಿ ಕಲ್ಯಾಣ ಮಂಟಪ, ವಿರಕ್ತಮಠ ಮತ್ತು ನಗರ ಕುಟುಂಬ ಕಲ್ಯಾಣ ಕೇಂದ್ರ-1, ಎಸ್.ಕೆ.ಪಿ ರಸ್ತೆಯ ಎಸ್.ವಿ.ಎಸ್.ಶಾಲೆ ಮತ್ತು ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘ, ಮಾರ್ಕಂಡೇಶ್ವರ ಕಲ್ಯಾಣ ಮಂಟಪ, ಈ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ : ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ -2025ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳಿಗೆ ಆಕ್ಷೇಪಣೆ, ತಕರಾರು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ತಿರಸ್ಕೃತಗೊಂಡ ಅರ್ಜಿಗಳ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ, ಮಾರ್ಚ್ 13 ರೊಳಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಪೂರಕ ದಾಖಲಾತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗಂಗಾರ‍್ವಾಮಿ.ಜಿ.ಎಂ.ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

Published

on

ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.

ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)

AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.

ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.

ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.

ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.

ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending