ದಿನದ ಸುದ್ದಿ
ಅಕ್ರಮವಾಗಿ ಸ್ಪೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ

ಸುದ್ದಿದಿನ,ಹಾವೇರಿ : ಹಿರೋ ಹೊಂಡಾ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸ್ಪೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ ಮೂಲದ 24 ವರ್ಷದ ಅಜಯಕುಮಾರ ಯಾದವ ಎಂಬಾತನನ್ನು ದಸ್ತಗಿರಮಾಡಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ಬ್ಯಾಡಗಿ ಠಾಣಾ ವ್ಯಾಪ್ತಿಯ ಛತ್ರದಿಂದ ಆಲಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಆರೋಪಿಯು ಒಂದು ರಟ್ಟಿನ ಬಾಕ್ಸ್ನಲ್ಲಿ 180 Explosive (CLASS-2) Tubes & 45 ED (Explosive Device) ಕಾನೂನುಬಾಹೀರವಾಗಿ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಂಶಯಗೊಂಡು ಸದರಿ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಚಾರಿಸಲಾಗಿ ಜಾರ್ಖಂಡ ರಾಜ್ಯದ ಕೊಡೆರ್ಮಾ ತಾಲೂಕಿನ ಚೋಪ್ನಾದಿ ವಾಸಿಯಾಗಿದ್ದು, ವೆಂಕಟಾಪುರ ಗುತ್ತಿದಾರ ಕುಮಾರ ಕೆ.ಕಬ್ಬೂರ ಅವರ ಕ್ರಷರ್ ಉಸ್ತುವಾರಿ ನೋಡಿಕೊಳ್ಳುವ ರಾಣೇಬೆನ್ನೂರಿನ ಮಾಲತೇಶ ಎಂಬುವವರಿಂದ ಪಡೆದುಕೊಂಡಿದ್ದು, ಕ್ವಾರಿಗಳಲ್ಲಿ ಸ್ಪೋಟಕಗಳನ್ನು ಬಳಸಲು ತೆಗೆದುಕೊಂಡು ಹೋಗುತ್ತಿದ್ದಾಗಿ ತಿಳಿಸಿದ್ದಾನೆ.
ಸ್ಥಳದಲ್ಲಿ ದೊರೆತ ಸ್ಪೋಟಕ ಸಾಮಗ್ರಿಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಪೊಲೀಸ್ ನಿರೀಕ್ಷಕರಾದ ಈರಯ್ಯಾ ಎಂ.ಮಠಪತಿ, ಸಿಬ್ಬಂದಿಗಳಾದ ಅನಿಲ್ಕುಮಾರ ಬಿಜಾಪುರ, ಎಂ.ಎಚ್.ಗುಡಗೂರ, ಸುನಿಲ್ ಹುಚ್ಚಣ್ಣವರ, ಶಿವಮೂರ್ತಿ ಕುರಿ, ದುರ್ಗಪ್ಪ ಕೊಡ್ಲೇರ ಭಾಗವಹಿಸಿದ್ದರು. ಹಿರಿಯ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಆಂತರಿಕ ಭದ್ರತಾ ವಿಭಾಗದ ಉತ್ತರವಲಯದ ಉಸ್ತುವಾರಿ ಅಧಿಕಾರಿ ಡಿ.ವೈ.ಎಸ್.ಪಿ.ಅನಿಲ್ಕುಮಾರ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ

ಸುದ್ದಿದಿನ,ದಾವಣಗೆರೆ : ಮಾ.10 ರಂದು ಬೆಳಿಗ್ಗೆ 10.30 ಕ್ಕೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಲಿಟಿ, ಜಿಲ್ಲಾ ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮ #1027, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಎಸ್.ಬಿ.ಎಂ ಬ್ಯಾಂಕ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ ಇಲ್ಲಿ ಅಂಗವಿಕಲರಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ (ssc) ವತಿಯಿಂದ ನಾನ್-ಟೆಕ್ನಿಕಲ್(ತಾಂತ್ರಿಕೇತರ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ 27 ವರ್ಷ. ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಮಾ.21 ಕೊನೆಯ ದಿನಾಂಕವಾಗಿದ್ದು, ಈ ವೆಬ್ಸೈಟ್
https://ssc.nic.in or www.ssckkr.kar.nic.in
ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ | ದಾವಣಗೆರೆ | ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು : ನ್ಯಾ.ಗೀತಾ.ಕೆ.ಬಿ
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ನಂ: 08025502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್.ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಗರದಲ್ಲಿಂದು ವಿದ್ಯುತ್ ವ್ಯತ್ಯಯ

ಸುದ್ದಿದಿನ,ದಾವಣಗೆರೆ : 220/66 ಕೆ.ವಿ. ಕೇಂದ್ರದಿಂದ ಎಸ್.ಆರ್.ಎಸ್.ನಿಂದ ಸರಬರಾಜಾಗುವ 66 ಕೆ.ವಿ. ದಾವಣಗೆರೆ ಹಾಗೂ ಯರಗುಂಟ ವಿತರಣಾ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.09 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 4 ಗಂಟೆಯವರೆಗೆ 66/11 ಕೆ.ವಿ. ದಾವಣಗೆರೆ, 220/66 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಮತ್ತು 66/11ಕೆ.ವಿ. ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇದನ್ನೂ ಓದಿ | ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?
ದಾವಣಗೆರೆ ತಾಲೂಕಿನ ದಾವಣಗೆರೆ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಬೆಳವನೂರು, ಶಿರಮಗೊಂಡನಹಳ್ಳಿ, ಶಾಮನೂರು, ಕುಂದವಾಡ, ಬಾತಿ ಅಮೃತನಗರ, ನೀಲನಹಳ್ಳಿ, ಬೂದಿಹಾಳ್, ಕಕ್ಕರಗೊಳ್ಳ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ5 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ6 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ದಿನದ ಸುದ್ದಿ5 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ದಿನದ ಸುದ್ದಿ5 days ago
ಅಡಿಕೆಯಲ್ಲಿ ಅರಳು ಉದುರುವ, ಹಿಂಗಾರು ಒಣಗುವ ಮತ್ತು ಹಿಂಗಾರ ತಿನ್ನುವ ಸಮಸ್ಯೆ : ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು
-
ಬಹಿರಂಗ4 days ago
ಸುಳ್ಳಿನ ಸುಳಿಯಲ್ಲಿ ಸುಲ್ತಾನ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ದಿನದ ಸುದ್ದಿ5 days ago
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ
-
ದಿನದ ಸುದ್ದಿ5 days ago
ವಿದ್ಯಾರ್ಥಿ ವೇತನ | ಆನ್ಲೈನ್ ಅರ್ಜಿ ಅವಧಿ ವಿಸ್ತರಣೆ