Connect with us

ದಿನದ ಸುದ್ದಿ

ಬ್ರಹ್ಮಾವರ | ಹಾವಂಜೆಯಲ್ಲಿ ‘ಭೀಮ್ ಜಯಂತೋತ್ಸವ’

Published

on

ಉಡುಪಿ – (ಬ್ರಹ್ಮಾವರ) : ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ‘ ಭೀಮ್ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು‌.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ನಾವು ಇಂದು ಸ್ಮರಣೆ ಮಾಡುವ ಅಗತ್ಯವೇ ಇರಲಿಲ್ಲ. ಹಾಗೆಯೇ ಇವರು ಸಾರ್ವತ್ರಿಕ ನೆಲೆಯಲ್ಲಿ ಭಾರತೀಯರ ಸ್ಮರಣೆಯಲ್ಲಿಯೂ ಉಳಿಯುತ್ತಿರಲಿಲ್ಲ. ಆದರೆ ಭಾರತದ ಪ್ರತಿಯೊಬ್ಬ ಪ್ರಜೆಯು ಇಂದು ಬಾಬಾಸಾಹೇಬರನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅನಿವಾರ್ಯದೆ ಇದೆ ಎಂದಾದರೆ ಅದಕ್ಕೆ ಕಾರಣ ಈ ನಿಸ್ವಾರ್ಥ ವ್ಯಕ್ತಿತ್ವದ ಹಿರಿಮೆಯ ಪ್ರತೀಕವೇ ಸರಿ ಎಂದರು.

ಡಾ.ಕೆ.ಎ.ಓಬಳೇಶ್

ಭಾರತೀಯರಾದ ನಾವು ಎಪ್ಪತ್ತು-ಎಂಬತ್ತು ವರ್ಷಗಳ ಹಿಂದಿನ ಭಾರತವನ್ನು ಒಂದು ಕ್ಷಣ ಕಣ್ಣು ಮುಚಿ ಸ್ಮರಿಸಿಕೊಂಡರೆ ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ಭೀಮಶಕ್ತಿಯ ಸಾಹಸಮಯ ಹೋರಾಟದ ಬದುಕು ಅರ್ಥವಾಗುತ್ತದೆ.

ಇಂದು ಹಿಂದುತ್ವದ ಹೆಸರಿನಲ್ಲಿ ಕೋಮುವಾದಿಗಳ ಕೈಗೊಂಬೆಯಾಗಿ ಕುಣಿಯುತ್ತ, ಈ ನೆಲದ ಸಾಮರಸ್ಯವನ್ನು ತಮ್ಮ ಕೈಯಾರೆ ಕೆಡಿಸುತ್ತಿರುವ ಶೂದ್ರ ಸಮುದಾಯದ ಯುವ ಸಮುದಾಯವು ಒಂದು ಕ್ಷಣ ಎಂಬತ್ತು ವರ್ಷಗಳ ಹಿಂದಿನ ತಮ್ಮ ಪೂರ್ವಜರ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಂಡರೆ ಬ್ರಾಹ್ಮಣ್ಯದ ತಾಳಕ್ಕೆ ಕುಣಿಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಒಬ್ಬ ಮುಂದುವರೆದ ಜಾತಿಯ ಶೂದ್ರನನ್ನು ಅಂಬೇಡ್ಕರ್ ಯಾರು ಎಂದು ಕೇಳಿದರೆ ಅವನ ಬಾಯಿಯಿಂದ ಸಹಜವಾಗಿಯೇ ಹೊರಹೊಮ್ಮುವ ಮಾತು ಅವರೊಬ್ಬ ‘ಹೊಲೆಯ ಮಾದಿಗ’ ಸಮುದಾಯದ ನಾಯಕ ಎಂಬುದೇ ಆಗಿರುತ್ತದೆ. ಆದರೆ ಈ ಭೀಮ ಶಕ್ತಿ ನನಗೆಷ್ಟು ಸ್ವಾಭಿಮಾನ, ಸ್ವಾವಲಂಬನೆಯನ್ನು ಕಲ್ಪಿಸಿಕೊಟ್ಟಿದೆ ಎಂಬ ಅರಿವು ಶೂದ್ರರಿಗೆ ಇಲ್ಲವಾಗಿದೆ. ಇದು ಆ ವ್ಯಕ್ತಿ ಅಥವಾ ಸಮುದಾಯದ ತಪ್ಪಲ್ಲ ಎಂದು ಹೇಳಿದರು.

ಅವರ ತಲೆಯೊಳಗೆ ಅಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಮೂಲಭೂತವಾದಿಗಳು ತುಂಬಿರುವ ಹುಸಿ ಹುನ್ನಾರಗಳಿವು. ಅಂಬೇಡ್ಕರ್ ಎಂಬ ಈ ವ್ಯಕ್ತಿತ್ವ ಭಾರತದ ನೆಲದಲ್ಲಿ ಜನ್ಮತಳೆಯದೆ ಹೋಗಿದ್ದರೆ ನಾವೆಲ್ಲ ಶಿಕ್ಷಣ, ರಾಜಕೀಯ, ಅಧಿಕಾರದಿಂದ ಹೊರಗುಳಿದು ಜೀತ ಮಾಡಬೇಕಾದ ಪರಿಸ್ಥಿತಿ ಇನ್ನೂ ಜೀವಂತವಾಗಿರುತ್ತಿತ್ತು ಎಂಬುದು ಶೂದ್ರ ಸಮುದಾಯಗಳಿಗೆ ಅರ್ಥವಾಗಿಯೇ ಇಲ್ಲ ಎಂದು ನುಡಿದರು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ನೂರ್ ಜುಮ್ಮಾ ಮಸ್ಜಿದ್ ಕುಂಜಾಲು, ಮೊಹಮ್ಮದ್ ಶಫೀಕ್ ನಿಜಾಮಿ ಖತೀಜರು ಮತ್ತು ಧರ್ಮ ಗುರುಗಳು ಸೇಕ್ರೇಟ್ ಹಾರ್ಟ್ ಚರ್ಚ್ ಕೊಳಲಗಿರಿ, ಅನಿಲ್ ಪ್ರಕಾಶ್ ಕ್ಯಾಸ್ತೋಲಿನ್ ಹಾಗೂ ಆಡಳಿತ ಮುಕ್ತೇಸರು, ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ , ಸುರೇಶ್ ಬಿ ಶೆಟ್ಟಿ ಇರ್ಮಾಡಿ ಇದ್ದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ರಾಜ್ಯಖಜಾಂಜಿ ಕದಸಂಸ ಭೀಮವಾದ ಕರ್ನಾಟಕ, ಎಸ್ ಡಿ ರಾಯಮಾನೆ ವಹಿಸಿದ್ದರು.
ರಾಜ್ಯ ಸಂಘಟನಾ ಸಂಚಾಲಕರು ಕದಸಂಸ ಭೀಮವಾದ ಉಡುಪಿ, ಶೇಖರ್ ಹಾವಂಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಗೋವರ್ಧನ ಗಿರಿಶ್ಯಾಮ್. ಎನ್. ಆರ್. ಸಂಪಾದಕರು, ಸುದ್ದಿ ದಿನ ದಿನಪತ್ರಿಕೆ,ದಾವಣಗೆರೆ,ರಮೇಶ್ ಹರಿಖಂಡಿಗ, ಜಿಲ್ಲಾ ಸಂಚಾಲಕರು ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ,ಗೋಪಾಲ್ ಇಸರ್ ಮಾರ್, ಜಿಲ್ಲಾಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಅಜಿತ್ ಪೂಜಾರಿ ಗೋಳಿಕಟ್ಟೆ ಅಧ್ಯಕ್ಷರು ಗ್ರಾಮಪಂಚಾಯತ್ ಸಮಿತಿ , ಸತೀಶ್ ಶೆಟ್ಟಿ ಮುಂಗನ್ ಬೆಟ್ಟು, ಉದ್ಯಮಿಗಳು ಮಾಜಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸಮಿತಿ ಹಾವಂಜೆ, ವಿ ಮಂಜುನಾಥ್ ವಕೀಲರು ಉಡುಪಿ, ಉದಯ ಕುಮಾರ್ ಮಣೂರು, ಹಿರಿಯ ವಕೀಲರು ಉಡುಪಿ, ಸತೀಶ್ ಪೂಜಾರಿ ಬಾರ್ಕೂರು, ಅಧ್ಯಕ್ಷರು ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಉಡುಪಿ ಜಿಲ್ಲೆ, ಸದಾಶಿವ ಶೆಟ್ಟಿ ಹೇರೂರು, ಅಧ್ಯಕ್ತರು ಉಡುಪಿ ಜಿಲ್ಲಾ ಆರ್ ಟಿ ಐ ಮತ್ತು ಸಾಮಾಜಿಕ ಹೋರಾಟ ಸಮಿತಿ, ಹಬೀಬ್ ಉಡುಪಿ ಸಾಮಾಜಿಕ ಕಾರ್ಯಕರ್ತರು, ಅಬ್ಬಾಸ್ ಸಾಹೇಬ್ ಗೋಳಿಕಟ್ಟೆ ಹಿರಿಯರು ಮುಗೇರಿ ಹಾವಂಜೆ, ಉದಯ ಕೋಟ್ಯಾನ್, ಸದಸ್ಯರು ಹಾವಂಜೆ ಗ್ರಾಮ ಪಂಚಾಯತ್ ,ಅನ್ಸಾರ್ ಅಹ್ಮದ್, ಜಿಲ್ಲಾಧ್ಯಕ್ಷರು ಕರವೇ ಉಡುಪಿ ಜಿಲ್ಲೆ ಎನ್ ರಮೇಶ್ ಶೆಟ್ಟಿ ಅಧ್ಯಕ್ಷರು ಉಳ್ಳೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಹಾವಂಜೆ ಗ್ರಾಮ ಪಂಚಾಯತ್ ಸದಸ್ಯ, ಮಹೇಶ್ ಕೋಟ್ಯಾನ್, ಸದಸ್ಯರು ಉಪೂರು ಗ್ರಾಮ ಪಂಚಾಯತ್, ರತ್ನಾಕರ ಮೊಗವೀರ, ಮೊಗವೀರ ಸಂಘಟನೆ ಉಡುಪಿ ಅಶ್ವಿನ್ ರೋಚ್ ಕೊಳಲಗಿರಿ, ಸದಸ್ಯರು ಉಳ್ಳೂರು ಗ್ರಾಮ ಪಂಚಾಯತ್ , ಸುಜಯ್ ಪೂಜಾರಿ, ಜಿಲ್ಲಾಧ್ಯಕ್ಷರು ಕರವೇ ಉಡುಪಿ ಜಿಲ್ಲೆ : ಫ್ರಾಂಕಿ ಡಿಸೋಜಾ ಕೊಳಲಗಿರಿ, ಅಧ್ಯಕ್ಷರು ಕರವೇ ಬ್ರಹ್ಮಾವರ ತಾಲೂಕು, ನಾಗರಾಜ್ ಹೆಗ್ಡೆ ಗೋಳಿಕಟ್ಟೆ ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕತ : ರವೀಂದ್ರ ಪೂಜಾರಿ ಉಜಂಗಾರು, ಉದ್ಯಮಿಗಳು ಉಡುಪಿ, ಶ್ರೀಮತಿ ಸುಜಾತ ಯು ಶೆಟ್ಟಿ ಹಾವಂಜೆ ಉಪಾಧ್ಯಕ್ಷರು ಗ್ರಾಮ ಪಂಚಾಯತ್ , ಇಬ್ರಾಹಿಂ ಕೋಟ, ಅಧ್ಯಕ್ಷರು ಅಖಿಲಭಾರತ ಜರ್ನಲಿಸ್ಟ್ ಫೆಡರೇಷನ್ ಉಡುಪಿ, ಮಿಥುನ್ ಶೆಟ್ಟಿ ಹೆಬ್ರಿ, ಉದ್ಯಮಿಗಳು, ಸಖಾರಮ್ ಗೋಳಿಕಟ್ಟೆ ಮುಖ್ಯೋಪಾಧ್ಯಾಯರು, ಬಿ ವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೀಳಿಂಜೆ : ಭಾಸ್ಕರ್ ಪೂಜಾರಿ, ಬೆಲ್ಲವ ಸೇವಾ ಸಂಘ (ರಿ) ಹಾವಂಜೆ, ಶಿವರಾಜ್ ಎಂ. ಲೆಕ್ಕ ಸಹಾಯಕರು ಉದ್ಯಾವರ ಗ್ರಾಮ ಪಂಚಾಯತ್,ಚಂದ್ರ ನಾಯ್ಕ,ಗ್ರಾಮಕರಣಿಕರು ಹಾವಂಜೆ ಗ್ರಾಮ ಪಂಚಾಯತ್ : ಶ್ರೀಮತಿ ಮೋಹಿನಿ ಸದಸ್ಯರು ಗ್ರಾಮ ಪಂಚಾಯತ್ ಹಾವಂಜೆ
ಇವರು ಉಪಸ್ಥಿತರಿದ್ದರು.

ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಯಿಂದ ಬುದ್ದವಂದನೆ ಕಾರ್ಯಕ್ರಮ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending