ದಿನದ ಸುದ್ದಿ
ಕೊಡಗು ಪ್ರವಾಹ : ಅತಿವೃಷ್ಟಿ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ತಂಡ ಭೇಟಿ

ಸುದ್ದಿದಿನ,ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ತಲುಪಿಸುವ ಸಲುವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರನ್ನು ಒಳಗೊಂಡ ತಂಡ ನೆರೆ ಸಂತ್ರಸ್ತ ಸ್ಥಳಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವುದು, ಚಿಕಿತ್ಸೆ ನೀಡುವುದು ಮತ್ತು ಆರೋಗ್ಯ ಶಿಕ್ಷಣ ನೀಡುವ ಸಲುವಾಗಿ 9 ಸಂಚಾರಿ ಆರೋಗ್ಯ ತಂಡ ರಚನೆಯಾಗಿದೆ. ಈ ಸಂಚಾರಿ ಆರೋಗ್ಯ ತಂಡಗಳು ವೇಳಾಪಟ್ಟಿಯಂತೆ ಮಳೆಯಿಂದ ಹಾನಿಗೊಂಡ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದೆ.
ಮಡಿಕೇರಿ ತಾಲ್ಲೂಕು
ಪ್ರತಿ ಸೋಮವಾರ ಮತ್ತು ಗುರುವಾರದಂದು ಬಲಮುರಿ, ಕೊಣ್ಣಂಜಗೇರಿ, ಕಿರುಂದಾಡು, ಕೈಕಾಡು, ಬಾವಲಿ, ಮದೆನಾಡು, ಜೋಡುಪಾಲ, ಅರೆಚಾಲು, ಬೆಳಕುಮಾನಿ, ಕಾಟಕೇರಿ, ಎರಡನೇ ಮೊಣ್ಣಂಗೇರಿ, ಅರೆಕಾಡು, ಹೊಸ್ಕೇರಿ, ಕೊಳಗದಾಲು, ಬಿ.ಬಾಡಗ, ಬೆಂಗೂರು, ಕಡಗದಾಳು, ಇಬ್ನಿವಳವಾಡಿ, ಕೋರಂಗಾಲ, ಚೇರಂಗಾಲ, ತಾವೂರು.
ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಕೊಟ್ಟಮುಡಿ, ಕಣ್ಣಬಲಮುರಿ, ಚೆರಿಯಪರಂಬು, ಐಕೊಳ, ಮೇಕೇರಿ, ಯವಕಪಾಡಿ, ಮರಂದೋಡ, ಅರಪಟ್ಟು, ಕರಡ, ಕೊಕೇರಿ, ಚೇಲಾವರ, ನರಿಯಂದಡ, ಮಕ್ಕಂದೂರು, ಎಮ್ಮೆತ್ತಾಳು, ಮೇಘತ್ತಾಳು, ಉದಯಗಿರಿ, ಮುಕ್ಕೋಡ್ಲು, ಹಮ್ಮಿಯಾಳ, ಮುಟ್ಲು, ಕಾಲೂರು, ದೇವಸ್ತೂರು, ಹೆಬ್ಬೆಟ್ಟಗೇರಿ, ಗಾಳಿಬೀಡು, ಒಂದನೇ ಮೊಣ್ಣಂಗೇರಿ, ವಣಚಾಲು.
ಸೋಮವಾರಪೇಟೆ ತಾಲ್ಲೂಕು
ಪ್ರತಿ ಸೋಮವಾರ ಮತ್ತು ಗುರುವಾರದಂದು ಹಾನಗಲ್ಲು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು, ಶೆಟ್ಟಳ್ಳಿ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಚೌಡ್ಲು, ಗೌಡಳ್ಳಿ, ದೊಡ್ಡಮಲ್ತೆ, ಐಗೂರು, ಬೇಳೂರು, ಆಲೂರು ಸಿದ್ದಾಪುರ, ನೀರಗಳಲೆ.
ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಏಳನೇ ಹೊಸಕೋಟೆ, ಸುಂಟಿಕೊಪ್ಪ, ಕೆದಕಲ್, ಕೊಡಗರಹಳ್ಳಿ, ಕಂಬಿಬಾಣೆ, ಶನಿವಾರಸಂತೆ, ನಿಡ್ತ, ಹಂಡ್ಲಿ, ದುಂಡಳ್ಳಿ, ಕೊಡ್ಲಿಪೇಟೆ, ಬೆಸೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ.
ಪ್ರತಿ ಬುಧವಾರ ಮತ್ತು ಶನಿವಾರದಂದು ಮಾದಾಪುರ, ಗರ್ವಾಲೆ, ಕಿರಗಂದೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಡ್ಲಿಪೇಟೆ, ಕಟ್ಟೆಪುರ.
ವಿರಾಜಪೇಟೆ ತಾಲ್ಲೂಕು
ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಕರಡಿಗೋಡು, ಗುಯ್ಯ, ಬಿಟ್ಟಂಗಾಲ, ಬೇತ್ರಿ ಮತ್ತು ಕೊಂಡಂಗೇರಿ. ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಕುಟ್ಟ, ಕೆ.ಬಾಡಗ, ಹೊಸೂರು, ಅಮ್ಮತ್ತಿ ಮತ್ತು ಚೆನ್ನಯ್ಯನಕೋಟೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

ದಿನದ ಸುದ್ದಿ
ದಾವಣಗೆರೆ ನೇತ್ರಾಲಯದ ಜೊತೆ ವಿಲೀನಗೊಂಡ ಡಾ. ಅಗರವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್

ಸುದ್ದಿದಿನ,ದಾವಣಗೆರೆ : ಡಾ. ಸುನೀಲ್ ಜಿ ಸ್ಥಾಪಿಸಿದ ಕಣ್ಣಿನ ಆಸ್ಪತ್ರೆ ದಾವಣಗೆರೆ ನೇತ್ರಾಲಯವು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಜೊತೆ ವಿಲೀನವಾಗಿದ್ದು, ರಾಜ್ಯದ 18ನೇ ಕೇಂದ್ರವಾಗಿದೆ. 4200 ಚದರಡಿಯಲ್ಲಿ ವ್ಯಾಪಿಸಿರುವ ಆಸ್ಪತ್ರೆಯು ಪರಿಣಿತ ನೇತ್ರ ತಜ್ಞರು ಮತ್ತು ಇತ್ತೀಚಿನ ತಂತ್ರಜ್ಞಾನ ಹೊಂದಿದ್ದು, ಉತ್ತಮ ಕಣ್ಣಿನ ಆರೈಕೆಯನ್ನು ನೀಡುತ್ತದೆ. ರೆಟಿನಾ ರೋಗಿಗಳಿಗೆ ಇದೇ ಮೊದಲ ಬಾರಿಗೆ ಡಯಾಗ್ನಾಸ್ಟಿಕ್ ಪರಿಕರವಾಗಿರುವ ಅತ್ಯಾಧುನಿಕ ಒಸಿಟಿ ಆಂಜಿಯೋಗ್ರಫಿಯನ್ನು ಈ ಆಸ್ಪತ್ರೆ ಹೊಂದಿದೆ.
ಸಮುದಾಯಕ್ಕೆ ಸೇವೆಯ ಜೊತೆಗೆ ಹಿರಿಯ ನಾಗರಿಕರಿಗೆ ಉಚಿತ ಸಲಹೆ ಜೂನ್ 30 ರ ವರೆಗೆ ನೀಡಲಿದೆ.
ಮುಂದಿನ 18-24 ತಿಂಗಳುಗಳಲ್ಲಿ ರಾಜ್ಯದಾದ್ಯಂತ 10 ಕಣ್ಣಿನ ಚಿಕಿತ್ಸೆ ಸೌಲಭ್ಯಗಳನ್ನು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಸ್ಥಾಪಿಸಲಿದೆ. ಆಸ್ಪತ್ರೆ ಜಾಲವು 135 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಭಾರತ ಮತ್ತು ಆಫ್ರಿಕಾದಲ್ಲಿ ಹೊಂದಿರಲಿದೆ.10ದೇಶಗಳು ಮತ್ತು ಭಾರತದಲ್ಲಿನ 12 ರಾಜ್ಯಗಳಲ್ಲಿ ಇದು ವ್ಯಾಪಿಸಿದೆ. ಈಗಾಗಲೇ 11 ಕೇಂದ್ರಗಳು ಬೆಂಗಳೂರಿನಲ್ಲಿ ಮತ್ತು 7ಕೇಂದ್ರಗಳು ಬೆಂಗಳೂರಿನ ಹೊರಗಿವೆ.
ಆಪ್ಥಾಲ್ಮಾಲಜಿಸ್ಟ್ ಡಾ. ಸುನೀಲ್ ಮಾತನಾಡಿ, ಕಣ್ಣಿನ ಆರೈಕೆಯಲ್ಲಿ ನವೀನ ಶಸ್ತ್ರಚಿಕಿತ್ಸೀಯ ಕ್ರಮಗಳು ಮತ್ತು ಅದ್ಭುತ ಸುಧಾರಣೆಗೆ ಹೆಸರಾಗಿರುವ ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಜೊತೆಗೆ ಅಧಿಕೃತ ಪಾಲುದಾರಿಕೆಯನ್ನು ನಾವು ಉತ್ಸಾಹದಿಂದ ಘೋಷಿಸುತ್ತಿದ್ದೇವೆ. ಈ ಸಹಭಾಗಿತ್ವದಿಂದಾಗಿ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಡಾ. ಅಗರವಾಲ್ಸ್ ಐ ಹಾಸ್ಪಿಟಲ್ನಿಂದಾಗಿ ಕಣ್ಣಿನ ಆರೋಗ್ಯ ಸೇವೆಯು ಜಾಗತಿಕ ಮಟ್ಟಕ್ಕೆ ತಲುಪಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಣಮಟ್ಟದ ಆರೋಗ್ಯಸೇವೆಯನ್ನು ಒದಗಿಸಲು ಡಾ. ಅಗರವಾಲ್ಸ್ ಐ ಹಾಸ್ಪಿಟಲ್ಸ್ ಬದ್ಧವಾಗಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಇನ್ನೊಂದು 10 ಕೇಂದ್ರಗಳನ್ನು ತೆರೆಯಲು ಗುರಿಯಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 1600 ಕ್ಕೂ ಅಧಿಕ ಕಿರಿಯ ಗುಮಾಸ್ತ, ಕಿರಿಯ ಸಹಾಯಕ ಕಾರ್ಯದರ್ಶಿ ಮತ್ತು ದತ್ತಾಂಶ ನಮೂದಕ ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಕಂಬೈನ್ಡ್ ಹೈಯರ್ ಸೆಕೆಂಡರಿ (10+2) ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷಗಳಾಗಿದ್ದು ನಿಯಮಾನುಸಾರ ಸಡಿಲಿಕೆ ಇರುತ್ತದೆ ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://ssc.nic.in ಅಥವಾ www.sskkr.kar.nic.in ಮೂಲಕ ಆನ್ಲೈನ್ನಲ್ಲಿ ಜೂನ್ 8 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ: 080-25502520/ 9483862020 ಗೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂ ಸಂ: 08192-259446, 7406323294 ಸಂಪರ್ಕಿಸಲು ಕೋರಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಿದ್ದು , ಡಿಕೆ ಪ್ರಮಾಣ ವಚನ ; ಗಣ್ಯಾತಿಗಣ್ಯರ ಉಪಸ್ಥಿತಿ

ಸುದ್ದಿದಿನ, ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಇಂದು ಅಸ್ತಿತ್ವಕ್ಕೆ ಬರಲಿದೆ. ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಸಿದ್ದರಾಮಯ್ಯ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇವರೊಂದಿಗೆ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಿದ್ಧವಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12:30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಈ ನಡುವೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಾಪಕ ಸಿದ್ಧತೆಗಳು ಭರದಿಂದ ಸಾಗಿವೆ. ಸಮಾರಂಭಕ್ಕೆ ರಾಜ್ಯದ ಮೂಲೆ – ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಆಗಮಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಭದ್ರತಾ ಕಾರ್ಯಕ್ಕಾಗಿ ಒಂದು ಸಾವಿರದ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪಶ್ಚಿಮ ಬಂಗಾಳದ ಟಿಎಂಸಿ ಉಪನಾಯಕ ಡಾ.ಕಕೋಲಿ ಘೋಷ್ ದಸ್ತಿದಾರ್, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್, ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಅಧ್ಯಕ್ಷ ಫಾರುಕ್ ಅಬ್ದುಲ್ಲಾ, ಸಿಪಿಐಎಂ ಮುಖಂಡ ಸೀತಾರಾಮ್ ಯಚೂರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದಾರೆ.
ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವೀರ್ ಸಿಂಗ್ ಸುಖು ಅವರನ್ನೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
ಈ ನಡುವೆ, ನೂತನ ಸಚಿವ ಸಂಪುಟ ಸೇರ್ಪಡೆಗೆ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಸಂಭಾವ್ಯ ಸಚಿವರ ಪಟ್ಟಿಗೆ ಕಾಂಗ್ರೆಸ್ ವರಿಷ್ಠರಿಂದ ಅನುಮೋದನೆ ಪಡೆಯಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
