Connect with us

ರಾಜಕೀಯ

ಲೋಕಸಭಾ ಚುನಾವಣೆ : ಇಂದು ಸಂಜೆ ಚುನಾವಣಾ ಆಯೋಗ ‘ಚುನಾವಣಾ ದಿನಾಂಕ’ ಹೊರಡಿಸುವ ಸಾಧ್ಯತೆ

Published

on

ಸುದ್ದಿದಿನ,ದೆಹಲಿ: ಲೋಕಸಭಾ ಚುನಾವಣಾ-2019ರ ದಿನಾಂಕದ ಅಧಿಸೂಚನೆಯನ್ನು ಚುನಾವಣಾ ಆಯೋಗ ಭಾನುವಾರ ಸಂಜೆ 5ಕ್ಕೆ ಹೊರಡಿಸುವ ಸಾಧ್ಯತೆ ಇದ್ದು, ಈ ಕುರಿತು ಶನಿವಾರ ಪೂರ್ವ ಸಿದ್ಧತೆ ನಡೆದಿದೆ ಎಂದು ಎನ್ನಲಾಗುತ್ತಿದೆ.

ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮತದಾನದ ದಿನಾಂಕವನ್ನು ಅಂತಿಮಗೊಳಿಸಿದ್ದು, ಈ ಸಂಬಂಧ ಶನಿವಾರ ಸಭೆ ನಡೆಸಿದೆ. ಚುನಾವಣೆ ಮತದಾನವು ಏಪ್ರಿಲ್, ಮೇ ನಲ್ಲಿ 7 ಅಥವಾ 8 ಹಂತಗಳಲ್ಲಿ ನಡೆಯಲಿದೆ ಎನ್ನಲಾಗಿದೆ.

ಚುನಾವಣಾ ದಿನಾಂಕ ಘೊಷಣೆ ವಿಳಂಬವನ್ನು ಪ್ರತಿ ಪಕ್ಷಗಳು ಪ್ರಶ್ನಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ವಿಳಂಬದ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದು, ಪ್ರಧಾನಿ ಅವರ ಅಧಿಕೃತ ಪ್ರವಾಸ ಕಾರ್ಯಕ್ರಮ ಮುಗಿಯುವ ತನಕ ಕಾಯಲಾಗುತ್ತಿದೆಯೇ ಪ್ರಶ್ನಿಸಿದ್ದಾರೆ.

ಪ್ರಥಮ, ದ್ವಿತೀಯ ಹಂತದ ಚುನಾವಣೆ ನಡೆಯುವ ಕುರಿತು ಮುಂದಿನ ವಾರ ಚುನಾವಣಾ ವೀಕ್ಷಕರ ಸಭೆ ನಡೆಯುವ ಸಾಧ್ಯತೆ ಇದೆ. ಆದರೆ, 2009ರಲ್ಲಿ ಮೇ 2ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ಅಧಿಸೂಚನೆ ಹೊರಡಿಸಿತ್ತು. ಐದು ಹಂತದ ಚುನಾವಣೆಯು ಏಪ್ರಿಲ್ 16ರಂದು ಆರಂಭವಾಗಿ ಮೇ 13 ರಂದು ಮುಕ್ತಾಯಗೊಂಡಿತ್ತು.

2014ರಲ್ಲಿ ಇದೇ ಚುನಾವಣೆ ಒಂಭತ್ತು ಹಂತದಲ್ಲಿ ನಡೆಸಲು ಮಾರ್ಚ್ 5ರಂದು ಘೋಷಣೆಯಾಗಿತ್ತು. ಏಪ್ರಿಲ್, ಮೇ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದಿತ್ತು. ಏಪ್ರಿಲ್ 7ರಂದು ಮೊದಲ ಹಂತ ಮತ್ತು ಮೇ 12ರಂದು ದ್ವಿತೀಯ ಹಂತದ ಚುನಾವಣೆ ನಡೆದಿತ್ತು. ಆದರೆ, ಈ ಬಾರಿಯ ಚುನಾವಣೆಯು ಜೂನ್ 3ಕ್ಕೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರಿಂದ ಚಾಲನೆ

Published

on

ಸುದ್ದಿದಿನ,ಬಳ್ಳಾರಿ : ಜಿಂದಾಲ್ ಎದುರುಗಡೆ ನಿರ್ಮಿಸಲಾಗಿರುವ 1ಸಾವಿರ ಆಕ್ಸಿಜನ್ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸೋಮವಾರ ಚಾಲನೆ ನೀಡಿದರು.

1ಸಾವಿರ ಆಕ್ಸಿಜನ್ ಬೆಡ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳ ಬಳಿಯ ಯಂತ್ರಗಳಿಗೆ ಸಚಿವ ಆನಂದಸಿಂಗ್ ಅವರು ಪೂಜೆ ಸಲ್ಲಿಸಿ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಮ್ಸ್ ನಿವೃತ್ತ ನಿರ್ದೇಶಕ ಡಾ.ದೇವಾನಂದ್, ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಂದಾಲ್ ಸಿಬ್ಬಂದಿ ಇದ್ದರು.

ಇದನ್ನೂ ಓದಿ | ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ; ಸಮರ್ಪಕ ವಿತರಣೆಗೆ ಕ್ರಮ ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ನಿಧನ

Published

on

ಸುದ್ದಿದಿನ, ಬೆಂಗಳೂರು : ನಾರಾಯಣ ಹೃದಯಾಲಯದಲ್ಲಿ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ (65) ಕೊರೋನಾದಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮಹದೇವ ಪ್ರಕಾಶ್, ಈ ಭಾನುವಾರ ಪತ್ರಿಕೆಯ ಸಂಪಾದಕರಾಗಿದ್ದರು. ಒಂದು ವಾರದಿಂದ ನಾರಾಯಣ ಹೃದಯಾಲಯದಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ರಾಜಕೀಯ ವಿಶ್ಲೇಷಕರಾಗಿ ಮಹದೇವ ಪ್ರಕಾಶ್ ಹೆಸರು ಮಾಡಿದ್ದರು.

ಇದನ್ನೂ ಓದಿ | ದಾವಣಗೆರೆ | ಇಂದಿನಿಂದ 2ನೇ ಡೋಸ್ ಲಸಿಕೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದ ಎಲ್ಲಾ ಸಚಿವರ ವರ್ಷದ ವೇತನವನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಸರ್ಕಾರ ಆದೇಶ

Published

on

ಸುದ್ದಿದಿನ,ಬೆಂಗಳೂರು : ರಾಜ್ಯದ ಎಲ್ಲಾ ಸಚಿವರ ಒಂದು ವರ್ಷದ ವೇತನವನ್ನು ಕೋವಿಡ್​ -19 ಪರಿಹಾರ ನಿಧಿಗೆ ನೀಡುವಂತೆ ಕರ್ನಾಟಕ ಸರ್ಕಾರ‌ ಗುರುವಾರ ಸೂಚಿಸಿ ಆಧಿಕೃತ ಆದೇಶ ಹೊರಡಿಸಿದೆ.

ವ್ಯಾಪಕವಾಗಿ ಹರಡಿರು ಕೊರೋನಾವನ್ನು ತಡೆಯಲು ಅನುಕೂಲವಾಗುವಂತೆ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರ ಒಂದು ವರ್ಷದ ವೇತನ (ದಿನಾಂಕ:01-05-21 ರಿಂದ ಅನ್ವಯವಾಗುವಂತೆ) ಪರಿಹಾರ ನಿಧಿಗೆ ದೇಣಿಗೆ ಪಾವತಿಸಲು ಆದೇಶ ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending