Connect with us

ದಿನದ ಸುದ್ದಿ

ಟಿ.ನರಸೀಪುರ | ಮನೀಷಾ ವಾಲ್ಮೀಕಿ ಯುವತಿ ಮೇಲೆ ಅತ್ಯಾಚಾರ – ಹತ್ಯೆ : ಜಯ ಕರ್ನಾಟಕ ಮಹಿಳಾ ವಿಭಾಗ ಪ್ರತಿಭಟನೆ

Published

on

ಸುದ್ದಿದಿನ,ಟಿ.ನರಸೀಪುರ: ಮನೀಷಾ ವಾಲ್ಮೀಕಿ ಯುವತಿ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆ ಮಾಡಿರುವ ಕಾಮಾಂದರನ್ನು ನೇಣಿಗೇರಿಸಿ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲಾಗದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು, ಜಯ ಕರ್ನಾಟಕ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ  ಎಲ್.ಪಿ.ರೇವತಿ ಆಗ್ರಹಿಸಿದರು.

ಪಟ್ಟಣದ ತಹಶಿಲ್ದಾರ್ ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಜಯ ಕರ್ನಾಟಕ, ವಾಲ್ಮೀಕಿ ನಾಯಕರ ಸಂಘ, ಮುಸ್ಲಿಂ ಯೂತ್ ವಾಯ್ಸ್ ಫೆಡರೇಶನ್ ಒಕ್ಕೂಟದ ವತಿಯಿಂದ ಉತ್ತರ ಪ್ರದೇಶದಲ್ಲಿ ಮನೀಷಾ ವಾಲ್ಮೀಕಿ ಯುವತಿ ಮೇಲೆ ನಡೆದ ಅತ್ಯಾಚಾರ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿತು.

ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉತ್ತರ ಪ್ರದೇಶ ಹಾಥರಸ್ ನಲ್ಲಿ ಮನೀಷಾ ವಾಲ್ಮೀಕಿ 19 ವರ್ಷದ ಯುವತಿ ಮೇಲೆ ಠಾಕೂರ್ ಸಮುದಾಯದ ಕಾಮಾಂಧರು ಅತ್ಯಾಚಾರ ಮಾಡಿ ಆನಂತರ ನಾಲಿಗೆ ಕತ್ತರಿಸಿ,ಬೆನ್ನು, ಕಾಲು ಮೂಳೆಗಳನ್ನು ಮುರಿದು ಕ್ರೂರವಾಗಿ ಕೊಲೆ ಮಾಡಿರುವ ಅಮಾನವೀಯ ಘೋರ ಕೃತ್ಯವನ್ನು ಸಂಘಟನೆಗಳು ಉಗ್ರವಾಗಿ ಖಂಡಿಸುತ್ತವೆ.

ಮಹಿಳೆ ಮೇಲಿನ ದೌರ್ಜನ್ಯ ನಿಯಂತ್ರ ಕಾಯಿದೆ, ಪೋಕ್ಷೋ ಕಾಯಿದೆ, ಪರಿಣಾಮಕಾರಿಯಾಗಿ ಜಾರಿಯಲ್ಲಿದ್ದರೂ ಕಾನೂನನ್ನು ಲೆಕ್ಕಿಸದೆ ರಾಜಾರೋಷವಾಗಿ, ನಿರ್ಭಯವಾಗಿ ಅತ್ಯಾಚಾರ ಹತ್ಯೆ ಮಾಡುವ ದುಷ್ಕರ್ಮಿಗಳ ಪರ ನ್ಯಾಯಾವಾದಿಗಳು ವಕಾಲತ್ತು ವಹಿಸಬಾರದಂದು ಸಂಘಟನೆಗಳ ಮನವಿ ಮಾಡಿಕೊಳ್ಳುತ್ತವೆ. ಮಾನವೀಯ ಮತ್ತು ಮನಿಸತ್ವಕ್ಕೆ ಬೆಲೆ ನೀಡದೆ ಪೈಶಾಚಿಕ ಕೃತ್ಯವೆಸಗುವ ವ್ಯಕ್ತಿಗಳನ್ನು ಯಾವುದೇ ಕ್ಷಮಾಪಣೆ ನೀಡದೆ ಗಲ್ಲಿಗೇರಿಸುವಂತಹ ನಿಯಮವನ್ನು ಜಾರಿಗೊಳಿಸಬೇಕಿದೆ.

ದಸಂಸ ಜಿಲ್ಲಾ ಸಂಚಾಲಕ ಡಾ.ಆಲಗೂಡು ಎಸ್. ಚಂದ್ರಶೇಖರ್, ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಕೆ.ಎನ್‌.ಪ್ರಭುಸ್ವಾಮಿ, ಮು.ಯೂ.ವಾ.ಫೆಡರೇಶನ್ ಜಿಲ್ಲಾಧ್ಯಕ್ಷ ಅಮ್ ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ ಸಂಚಾಲಕ ಕಳ್ಳೀಪುರ ಮಹದೇವಸ್ವಾಮಿ ಮಾತನಾಡಿ ಅತ್ಯಾಚಾರ ಕೊಳಗಾಗಿ ಸಾವನಪ್ಪಿದ ಯುವತಿ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಭೀಮ್ ಆರ್ಮಿ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಅಝಾದ್ ಸಹಿತ ಐನೂರು ವ್ಯಕ್ತಿಗಳ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವುದನ್ನು ಕೂಡಲೇ ರದ್ದು ಪಡಿಸಿ ರಾತ್ರೋರಾತ್ರಿ ಮನೀಷಾಳ ದೇಹವನ್ನು ಸುಟ್ಟು ಹಾಕಿ ಸತ್ಯ ಸಾಕ್ಷಿ ನಾಶ ಮಾಡಿರುವ ಪೊಲೀಸರ ಗೂಂಡಾ ಕ್ರಮವನ್ನು ಮತ್ತು ಕಾನೂನು ವಿರೋಧಿ ನಡವಳಿಕೆಯನ್ನು ಖಂಡಿಸುತ್ತೇವೆಂದರು.

ಈ ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸರನ್ನು ಕೆಲಸದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸುತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ವತ್ತರ ಕಳವಳ ವ್ಯಕ್ತಪಡಿಸಿದ್ದು ಉತ್ತರ ಪ್ರದೇಶ ಆಡಳಿತ ಸರ್ಕಾರ ಪ್ರಸ್ತುತ ಅತ್ಯಾಚಾರ, ಕೊಲೆಗಡುಕ ಹಾಗೂ ಸಂವಿಧಾನ ನಾಶ ಪಡಿಸುವಂತಹ ಸಾಮ್ರಾಜ್ಯವಾಗಿದ್ದು ಮತ್ತು ಸಂಪೂರ್ಣ ಕಾನೂನು ಸುವ್ಯವಸ್ಥೆ ಹಾಳಾಗಿದೆ‌.

ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಅತ್ಯಾಚಾರ ಹತ್ಯೆ ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಜನಸಾಮಾನ್ಯರು ಭಯದ ವಾತಾವರಣದಲ್ಲಿ ಬದುಕಬೇಕಾದಂದಹ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ರಾಷ್ಟ್ರ ಪತಿಗಳು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾ ಮಾಡಿ ಪ್ರಜಾಪ್ರಭುತ್ವ ಉಳಿವು ಮತ್ತು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡುತ್ತ ಮನವಿ ಪತ್ರವನ್ನು ತಹಶಿಲ್ದಾರ್ ಡಿ.ನಾಗೇಶ್ ರವರೆಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆ.ಜಿ.ಶಿವಪ್ರಸಾದ್, ಪ್ರದೀಪ್, ರಾಜು, ಗಿರೀಶ್, ಮರಿಸ್ವಾಮಿ , ಎಸ್.ಕೃಷ್ಣ ಮೂರ್ತಿ, ಸ್ವಾಮಿರಾಜ್, ಮನೋಜ್ ಕುಮಾರ್, ರಾಜಪ್ಪ, ಪ್ರಭಾಕರ್, ಕುಮಾರ್, ಪರಶುರಾಮ್, ಜಯಣ್ಣ, ದೇವರಾಜು, ಚಂದ್ರಪ್ಪ, ಗೋವಿಂದ ರಾಜು, ಗೋಪಿಕೃಷ್ಣ, ಪುಟ್ಟರಾಜು, ಚಿನ್ನಸ್ವಾಮಿ, ಸಿದ್ದರಾಜು, ಪುಟ್ಟಸ್ವಾಮಿ, ಮಹದೇವಸ್ವಾಮಿ, ಕೇಶವ ಮೂರ್ತಿ, ರಾಜುಗೌಡ ಹಾಗೂ ಇತರರು ಭಾಗವಹಿಸಿದ್ದರು.

ವರದಿ : ಎಂ. ನಾಗೇಂದ್ರ ಕುಮಾರ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆಂಗಾಪುರ | ಮಾ.12 ರಂದು ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳುಗದ್ದಿಗೆ ; ಉಚಿತ ಸಾಮೂಹಿಕ ವಿವಾಹ ಮಹೋತ್ಸವ

Published

on

ಸುದ್ದಿದಿನ, ಚನ್ನಗಿರಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳು ಗದ್ದಿಗೆ ಮಹೋತ್ಸವವು ಸುಕ್ಷೇತ್ರ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಮಾ.12 ರಂದು ನಡೆಯಲಿದೆ.

ಇದನ್ನೂ ಓದಿ | ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

ಈ ಮಹೋತ್ಸವದಲ್ಲಿ ಕುಂಭಾಭಿಷೇಕ ಮತ್ತು 101 ಉಚಿತ ಸಾಮೂಹಿಕ ವಿವಾಹವು ಜರುಗಲಿದ್ದು ವಧು-ವರರಿಗೆ ತಾಳಿ-ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ಹಾಗೂ ಶ್ರೀಮಠದ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲರಾದ ಟಿ.ಎಂ.ದಾದಾಪೀರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

Published

on

ಸುದ್ದಿದಿನ,ದಾವಣಗೆರೆ: ನಗರದ ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಬೆಳಗ್ಗೆ 7.30 ಕ್ಕೆ 80 ಭಕ್ತಾದಿಗಳು ಪಾದಯಾತ್ರೆ ಆರಂಭಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 9ನೇವರ್ಷದ ಪಾದಯಾತ್ರೆಯನ್ನು ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆ ನಗರಪಾಲಿಕೆ ಮಾಜಿ ಸದಸ್ಯರಾದ ಶ್ರೀ ರಮೇಶ್ ನಾಯ್ಕರವರು ಚಾಲನೆ ನೀಡಿದರು.

ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್

ಪಾದಯಾತ್ರಿಗಳು ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ, ಕಡೂರು, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಮಾರ್ಚ್ 10ನೆ ತಾರೀಖಿನಂದು ಧರ್ಮಸ್ಥಳ ತಲುಪುವರು ಈ ಪಾದಯಾತ್ರೆಗೆ ದಾವಣಗೆರೆ ಮತ್ತು ಹರಿಹರದ ಸುಮಾರು 80 ಜನ ಭಕ್ತಾದಿಗಳು ಪಾದಯಾತ್ರಿ ಸೇವಾ ಸಮಿತಿಯ ರಾಜನಾಯ್ಕ, ಶಿವಾಜಿ, ಎ.ಬಿ.ಚಂದ್ರಪ್ಪ, ವೇಣುಗೋಪಾಲ್, ಕೃಷ್ಣ, ಅರುಣ್ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ

Published

on

ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ ಸಂಯೋಜನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ | ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್

ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾ ಸದಸ್ಯರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಜಯಪ್ರಕಾಶ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending