ಲೈಫ್ ಸ್ಟೈಲ್
[ ಬೇವಿನ ಉಪಯೋಗ] ಕಹಿ ಬೇವು ಗುಣದಲ್ಲಿ ಅಮೃತ !
ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು.
ಆರೋಗ್ಯ ರಕ್ಷಣೆಯಂತೆ ಪರಿಸರ ಸಂರಕ್ಷಣೆ ಇಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಮನುಷ್ಯನ ಪರಿಸರ ವಿರೋಧಿ ಚಂತನೆ ಇದಕ್ಕೆ ಮುಖ್ಯ ಕಾರಣ. ಈಗ ಸವಾಲು ಎದುರಿಸಲು ನಮಗಿರುವ ಏಕೈಕ ಮಾರ್ಗವೆಂದರೆ ಪರಸರಿ ಸಂಪತ್ತಿನ ರಕ್ಷಣೆ ಮಾಡುವುದು. ಪರಿಸರ ಮಾಲಿನ್ಯದ ತಡೆ ಜೊತೆಗೆ ಆರೋಗ್ಯಯುವ ಬದುಕು ಕಲ್ಪಿಸುವ ವೃಕ್ಷಗಳಲ್ಲಿ ಬೇವಿಗೆ (ಬೇವು-neem) ಮೊದಲ ಹೆಸರು. [ ಬೇವಿನ ಉಪಯೋಗ] (health benefits of neem in kannada)
# ಬೇವಿನ ಉಪಯೋಗ 1). ಗುಣದಿಂದ ಬೇವು ಕಲ್ಪವೃಕ್ಷ !
ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಮುಂದಿರುತ್ತದೆ.
ವೇದ ಸಾಹಿತ್ಯದಲ್ಲಿ ಬಹುವಾಗಿ ಉಲ್ಲೇಕಿತವಾಗಿರುವ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.
# ಬೇವಿನ ಉಪಯೋಗ 2). ಹಲವು ರೋಗಗಳಿಗೆ ಮದ್ದು ಬೇವು
ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.
ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕಿಮಿನಾಶಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.
ಕಡಿಮೆ ಮಳೆ ಬೀಲುವ ಮತ್ತು ಬಿಸಿಲಿನ ತಾಪ ಅಧಿವಾಗಿರುವ ಪ್ರದೇಶದಲ್ಲಿ ಬೇವಿನ ಮರ ಹುಸುಸಾಗಿ ಬೆಳೆಯುತ್ತವೆ. ಇಂದು ಪ್ರಕೃತಿ ವಿಶೇಷ. ಬೇವಿನ ಮರಗಳ ಮೇಲಿಂದ ಬೀಸುವಗಾಳಿಯು ಬಿಸಿಲಿನ ತಾಪಂದಿಂದ ಬಳಲಿದ ದೇಹಕ್ಕೆ ತಂಪು ನೀಡುತ್ತದೆ. ಇದು ಆರೋಗ್ಯಕರ ಕೂಡ ಹೌದು.
ಇದನ್ನು ಓದಿ: ನಿಯಮಿತ ಬಾಳೆಹಣ್ಣು ಸೇವಿಸಿದರೆ ನಿಮ್ಮ ಬಾಳು ಬಂಗಾರ !
# ಬೇವಿನ ಉಪಯೋಗ 3). ಬೇವಿನಿಂದ ಮಲೇರಿಯಾ ದೂರ !
ಬೇವಿನ ಸೊಪ್ಪು, ಬೇವಿನ ಹೋವು, ಬೇವಿನ ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅಂಬೋಣ.
ಬೇವಿನ ಮರದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ರೋಗಾದಿ ಚರ್ಮ ರೋಗಗಳು ನಿವಾರಣೆಯಾಗುವುವು. ಮಧುಮೇಹ, ನಿಶ್ಯಕ್ತಿ, ವಾಕರಿಕೆ, ಬಾಯಾರಿಕೆ, ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ.
ಮಲೇರಿಯಾ ಜ್ವರದಲ್ಲಿ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲೀ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃಧ್ಧಿಸುತ್ತದೆ.
ಸೀಮೆಎಣ್ಣೆಯೊಂದಿಗೆ ಬೇವಿನ ಎಣ್ಣೆ ಬೆರೆಸಿ ದೀಪ ಉರಿಸುವುದರಿಂದ ಸೊಳ್ಳೆಗಳ ಕಾಟ ತಪ್ಪಿಸ ಬಹುವುದು. ದ್ವಿಶತಾಂಶ ಬೇವಿನ ಎಣ್ಣೆಯೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ದೇಹಕ್ಕೆ ಲೇಪಿಸಿದರೆ ಸೊಳ್ಳೆಗಳು ಹತ್ತಿರಕ್ಕೆ ಬರುವುದಿಲ್ಲ.
ಬೇವಿನ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಆಮಾತಿಸಾರ (dysentery) ಮತ್ತು ಅತಿಸಾರ (diarrhoea) ದಿಂದ ಗುಣಮುಖವಾಗಬಹುದು. ಪ್ರತಿದಿನ ಬೆಳಗ್ಗೆ 10-12 ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚನ್ನಾಗಿ ಅಗೆದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತವೆ ಎಂಬುದು ಹಿರಿಯರ ಅಭಿಪ್ರಾಯ.
ಇದನ್ನು ಓದಿ: ಒಂದು ಚಿಕ್ಕ ಬೆಳ್ಳುಳ್ಳಿ ಶಕ್ತಿ ಎಂತದ್ದು ಗೊತ್ತಾ ?
# ಬೇವಿನ ಉಪಯೋಗ 4). ಕಹಿ ಬೇವು ಗುಣದಲ್ಲಿ ಅಮೃತ !
ಒಟ್ಟಾರೆ ಬೇವು ಗುಣದಲ್ಲಿ ಕಹಿ ಎನಿಸಿದರೂ ಅದರ ಉಪಯೋಗದಲ್ಲಿ ಮಾತ್ರ ಅಮೃತ. ಬೇವು ಅಂದಕೂಡಲೇ ನಾವು ಮುಖ ಸಿಂಡರಸಿಕೊಳ್ಳುತ್ತೆವೆ. ಆದರೆ ಬೇವಿನ ಉಪಯೋಗ ಅರಿತು ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ಆರೋಗ್ಯಯುತ ಜೀವನ ನಡೆಸಬಹುದು ಎಂಬುದು ನಮ್ಮ ಪೂರ್ವಜರ ಸಲಹೆ.
-ಸಂಗ್ರಹ
ಆರೋಗ್ಯ, ಆಹಾರ, ಜೀವನಶೈಲಿ ಕುರಿತು suddidina.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ suddidina@gmail.com ಗೆ ಸಂಪರ್ಕಿಸಿ.
#ಆರೋಗ್ಯ #ಆಹಾರ #ಜೀವನಶೈಲಿ #kannadatips #kannadahealthtips #healthtips

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


