ದಿನದ ಸುದ್ದಿ
ವೆರಿಕೋಸ್ ವೇನ್ಸ್ ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆ
ವೆರಿಕೋಸ್ ವೇನ್ಸ್ ಈಗ ಮನೆ ಮನೆ ಸಮಸ್ಯೆ ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆಧುನಿಕ ಜೀವನ ಶೈಲಿ ಸೃಷ್ಟಿಸಿರುವ ಅತಿ ದೊಡ್ಡ ಆರೋಗ್ಯ ಸವಾಲು ಇದಾಗಿದೆ. ಸುದೈವವಶಾತ್, ನಮ್ಮ ಹಿರಿಯರು ನಮಗೆ ಕಾಣಿಕೆಯಾಗಿ ನೀಡಿರುವ ಆಯುರ್ವೇದ ವೈದ್ಯಶಾಸ್ತ್ರ, ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆ ರಹಿತ, ಶಾಶ್ವತ ಪರಿಹಾರವನ್ನು ಕೊಟ್ಟಿದೆ.
ರಕ್ತನಾಳಗಳ ಉಬ್ಬುವಿಕೆಯ ಸಮಸ್ಯೆ ಸುಮಾರು 30ರಿಂದ 40 ಶೇಕಡಾ ಜನರನ್ನು ಈಗ ಬಾಧಿಸುತ್ತಿದೆ. ಈ ಸಮಸ್ಯೆ ಉಲ್ಬಣಗೊಂಡರೆ, ಶಸ್ತ್ರಚಿಕಿತ್ಸೆ ಮೂಲಕ ಕಾಲು ಅಥವಾ ಬೆರಳನ್ನು ಕತ್ತರಿಸಬೇಕಾದ ಅನಿವಾರ್ಯತೆ ಕೂಡ ಎದುರಾಗಬಹುದು. ಆದರೆ ಈಗ ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಡಾ.ಎಂ ವಿ ಉರಾಳ್ ಅವರು ತಮ್ಮ ಅಪಾರ ಆಯುರ್ವೇದ ಜ್ಞಾನ- ಸಂಶೋಧನೆಗಳಿಂದ ಅಭಿವೃದ್ಧಿಪಡಿಸಿರುವ ಔಷಧ ,ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ಕೊಡುತ್ತಿದೆ.
ಅವೈಜಾನಿಕ ಜೀವನ ಶೈಲಿಯೇ ಈ ಸಮಸ್ಯೆಯ ಮೂಲ ಕಾರಣ
ಮನೆ ಇರಲಿ, ಕಚೇರಿ ಇರಲಿ, ಇಂದು ನಾವು ಮಾಡುವ ಕೆಲಸಗಳೆಲ್ಲವೂ ಸತತ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತವೆ. ಪರಿಣಾಮ ನಮ್ಮ ಕಾಲಿನ ರಕ್ತನಾಳಗಳ ಉಬ್ಬುವಿಕೆ ಸಮಸ್ಯೆ ಸಾಮಾನ್ಯ ಎಂಬುವಂತಾಗಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೇನ್ಸ್” ಎನ್ನುತ್ತಾರೆ. ಈ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ನೋವು ಕ್ರಮೇಣ ಹೆಚ್ಚಾಗುತ್ತದೆ, ಚರ್ಮ ಕಪ್ಪಾಗುತ್ತದೆ. ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಬೆರಳು ಅಥವಾ ಕಾಲು ಕತ್ತರಿಸುವ ಹಂತಕ್ಕೂ ಇದು ಮುಟ್ಟಬಹುದು. ನಮ್ಮ ದೈಹಿಕ ಚಟುವಟಿಕೆಗಳಲ್ಲಿನ ಅಸ್ಥಿರತೆ, ಅವೈಜ್ಞಾನಿಕತೆ, ಆಹಾರ ವ್ಯತ್ಯಾಸಗಳು, ಹೀಗೆ ನಮ್ಮ ಅವೈಜಾನಿಕ ಜೀವನ ಶೈಲಿಯೇ ಈ ಸಮಸ್ಯೆಯ ಮೂಲ ಕಾರಣ.
ಈ ಸಮಸ್ಯೆಗೆ ಕಾರಣವಾಗುವ ಅಂಶಗಳನ್ನು ಮೂರೂ ವಿಧವಾಗಿ ವಿಂಗಡಿಸಬಹುದು. ನೈಸರ್ಗಿಕ ಕಾರಣಗಳು, ಜೀವನ ಶೈಲಿ ಕಾರಣಗಳು, ಹಾಗು ಅನುವಂಶಿಕ ಕಾರಣಗಳು. ಹೃದಯವು ರಕ್ತವನ್ನು ದೇಹದೆಲ್ಲೆಡೆ ಪ್ರಸರರಿಸುವ ಕಾರ್ಯಮಾಡುತ್ತದೆ, ರಕ್ತವನ್ನು ಮತ್ತೆ ಹೃದಯಕ್ಕೆ ಸೇರುವ ಕಾರ್ಯ ಮಾಡಲು ಕಾಲಿನ ಮೀನಖಂಡಗಳು, ನಮ್ಮ ಉಸಿರಾಟ ಪ್ರಕ್ರಿಯೆ ಮತ್ತು ವೈನ್ಸ್ ಗಳಲ್ಲಿ ಮೇಲ್ಮುಖವಾಗಿ, ಏಕಮುಖ ರಕ್ತ ಸಂಚಾರಕ್ಕೆ ಸಹಕಾರಿಯಾಗುವ ವಾಲ್ವ್ ಗಳು ಪ್ರಮುಖ ಕಾರ್ಯವಹಿಸುತ್ತವೆ. ಮೀನಖಂಡಗಳು ಮತ್ತು ಉಸಿರಾಟ ಪ್ರಕ್ರಿಯೆಗಳು ನಮ್ಮ ಎರಡನೇ ಹೃದಯ ದಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳ ಕಾರ್ಯದಲ್ಲಿ ಉಂಟಾಗುವ ಪೂರ್ಣತೆ ಅಥವಾ ಅಶಕ್ತತೆ ಇಂದ ವೆರಿಕೋಸ್ ವೇನ್ಸ್ ಸಂಭವಿಸುತ್ತದೆ
ಸ್ವಾಭಾವಿಕವಾಗಿ ವೇನ್ಸ್ ಗಳಲ್ಲಿ ಕಡಿಮೆ ಇರುವ ರಕ್ತದೊತ್ತಡ, ರಕ್ತ ಪರಿಚಲನೆಯಲ್ಲಾಗುವ ಏರಿಳಿತ, ಹೆಚ್ಚು ರಕ್ತವನ್ನು ಹಿಡಿದಿಟ್ಟುಕೊಳ್ಳಲು ಹಿಗ್ಗುವ ರಕ್ತನಾಳಗಳು, ಮುಪ್ಪಿನ ಕಾರಣ ವೇನ್ಸ್ ಹಿಗ್ಗುವಿಕೆಯು ಕಡಿಮೆಯಾಗುತ್ತದೆ , ಹಾಗೂ ವೈನ್ಸ್ ವಾಲ್ವ್ ಗಳಿ ಗೆ ಗುರುತ್ವಾಕರ್ಷಣೆಯ ಒತ್ತಡ ನೈಸರ್ಗಿಕ ಕಾರಣಗಳು. ಅನಿಯಮಿತ ತೂಕ ಹೆಚ್ಚಳ, ಅನಿಯಮಿತ ವ್ಯಾಯಾಮ, ಅವೈಜ್ಞಾನಿಕ ಆಹಾರ ಪದ್ಧತಿ, ಮಲ ಬದ್ಧತೆ, ಹೆಚ್ಚು ಸಮಯ ನಿಂತು ಅಥವಾ ಕುಳಿತು ಕೆಲಸ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ಜೀವನ ಶೈಲಿ ಕಾರಣಗಳು. ಕೆಲವರಿಗೆ, ಕೌಟುಂಬಿಕ ಕಾರಣಕ್ಕೂ ಈ ಸಮಸ್ಯೆ ಎದುರಾಗಬಹುದು. ಹೆಚ್ಚು ಹೊತ್ತು ನಿಂತೇ ಕೆಲಸ ಮಾಡುವ ಶಿಕ್ಷಕರು,ಕಾರ್ಮಿಕರು, ಪೊಲೀಸರು, ಭದ್ರತಾ ಸಿಬ್ಬಂದಿ, ಇತ್ಯಾದಿ ದುಡಿಯುವ ವರ್ಗದ ಜನರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ.
ವೆರಿಕೋಸ್ ವೇನ್ಸ್ : ಪ್ರಮುಖ ಲಕ್ಷಣಗಳು
* ಕಾಲುಗಳಲ್ಲಿ ಅಥವಾ ಮೀನಖಂಡ ಗಳಲ್ಲಿ ಸೆಳೆತ
* ಕಾಲುಗಳ ಜೋಮು ಹಿಡಿಯುವಿಕೆ
* ಕಾಲುಗಳು ಅಥವ ಪಾದ ಊದಿ ಕೊಳ್ಳುವುದು
* ಕಾಲಿನ ವೇನ್ಸ್ ಉಬ್ಬಿರಿವುದು, ಕೆಂಪು ನೀಲಿ ಬಣ್ಣ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವು
* ಕಾಲಿನ ಚರ್ಮ ಕಪ್ಪಾಗುವಿಕೆ ಮತ್ತು ತುರಿಕೆ
* ಕಾಲುಗಳಲ್ಲಿ ಗುಣವಾಗದ ಗಾಯ ಮತ್ತು ನೋವು
ಚಿಕಿತ್ಸೆ : ಈ ಸಮಸ್ಯೆಗೆ ಶಾಶ್ವತ ಸರ್ಜರಿ ರಹಿತ ಚಿಕಿತ್ಸೆಯನ್ನು ಖ್ಯಾತ ಆಯುರ್ವೇದಿಕ್ ತಜ್ಞ ವೈದ್ಯ ಡಾ. ಎಂ ವಿ ಉರಾಳ್ ಅಭಿವೃದ್ಧಿ ಪಡಿಸಿದ್ದಾರೆ. ಡಾ ಉರಾಳ್ ವೆರಿಕೋಸ್ ವೇನ್ಸ್ ಆಯುರ್ವೇದಿಕ್ ಕೇರ್’ 15 ವರ್ಷಗಳ ಸತತ ಪರಿಶ್ರಮದ ಫಲವಾಗಿದೆ. ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದಗಳ ಸಂಗಮ ಈ ಚಿಕಿತ್ಸೆ. ಈ ವಿಧಾನದ ಸದುಪಯೋಗವನ್ನು ಈಗಾಗಲೇ ದೇಶ -ವಿದೇಶಗಳ ಸಾವಿರಾರು ಜನರು ಪಡೆದು, ನೋವಿನಿಂದ ಶಾಶ್ವತ ಮುಕ್ತಿ ಪಡೆದಿದ್ದಾರೆ.
ಈವರೆಗೆ ಕೇವಲ ರೋಗದ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಈಗ ಈ ರೋಗಕ್ಕೆ ಆಯುರ್ವೇದ ಚಿಕಿತ್ಸೆ ಲಭ್ಯವಿದೆ. ಆಯುರ್ವೇದ ಔಷಧಿ ಜೊತೆಗೆ ಯೋಗಾಸನಗಳಾದ ತಾಡಾಸನ, ಪ್ರಸಾರಿತ ಪಾದೋತ್ತಾನಾಸನ, ತ್ರಿಕೋನಾಸನ, ಸರ್ವಾಂಗಾಸನ, ಪಶ್ಚಿಮೋತ್ತಾಸನ, ಹಲಾಸನ, ಮತ್ಸ್ಯಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಮತ್ತು ಅನುಲೋಮ ವಿಲೋಮ ಪ್ರಾಣಾಯಾಮ, ಕಪಾಲಭಾತಿಗಳು ಮೀನಖಂಡಗಳ ಮತ್ತು ಉಸಿರಾಟ ಪ್ರಕ್ರಿಯೆಗಳಲ್ಲಿ ಉಂಟಾಗುವ ಅಪರಿಪೂರ್ಣತೆ ಅಥವಾ ಅಶಕ್ತತೆಯನ್ನು ಸರಿಪಡಿಸುವಲ್ಲಿ ಸಹಕಾರಿಯಾಗಿವೆ.
ವೆರಿಕೋಸ್ ವೇನ್ಸ್: ಮುನ್ನೆಚ್ಚರಿಕೆ ಕ್ರಮಗಳು -ಕುಳಿತಾಗ, ಮಲಗಿದಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿಡುವುದು.
*ದಿನಕೊಮ್ಮ 30 ನಿಮಿಷ ಎಣ್ಣೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡುವುದು.
* ಕಾಲುಗಳಿಗೆ ನಿಯಮಿತವಾಗಿ ವಿಶ್ರಾಂತಿ ನೀಡುವುದು.
-ವೈಜ್ಞಾನಿಕವಾಗಿ ಕುಳಿತುಕೊಳ್ಳುವುದು, ನಡೆಯುವುದು ಹಾಗೂ ನಿಂತು ಕೊಳ್ಳುವುದು.
* ಪ್ರಯಾಣದ ಸಂದರ್ಭದಲ್ಲಿ ಬಿಗಿಯಾದ ಕಾಲುಚೀಲ ಧರಿಸುವುದು.
* ನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮತ್ತು ಪ್ರಾಣಾಯಾಮಕ್ಕೆ ಆದ್ಯತೆ
* ದೇಹದ ತೂಕ ಹೆಚ್ಚಾಗದಂತೆ ಮುನ್ನೆಚ್ಚರಿಕೆ
* ಧೂಮಪಾನ, ಮದ್ಯಪಾನಗಳಿಂದ ದೂರ ಇರುವುದು.
* ಶಿಸ್ತಿನ ಜೀವನ ಶೈಲಿ.(DrVasudev Ural,ಡಾ ಎಂ. ವಿ. ಉರಾಳ್, ಶೃಂಗೇರಿ.8105371042 ಗೆ ಕರೆ ಮಾಡಿ.www.uralsayurveda.in)ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


