ದಿನದ ಸುದ್ದಿ
ನ್ಯಾಮತಿ – ಚನ್ನಗಿರಿ ತಾಲ್ಲೂಕು | ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಟ್ಟಿ
ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿಯ ಮೊದಲನೇ 30 ತಿಂಗಳ ಅವಧಿಗೆ ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಕೆಳಕಂಡ ಪಟ್ಟಿಯನ್ವಯ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಯಿತು.
ನ್ಯಾಮತಿ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ17(9) 3(2) 1(1) 3(2) 1(0) 9(4)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ
- ಚೀಲೂರು ಕಡದಕಟ್ಟೆ : ಹಿಂದುಳಿದ ‘ಅ’ ವರ್ಗ, ಸಾಮಾನ್ಯ(ಮಹಿಳೆ)
- ಗುಡ್ಡೇಹಳ್ಳಿ: ಹಿಂದುಳಿದ ‘ಅ’ ವರ್ಗ(ಮಹಿಳೆ), ಸಾಮಾನ್ಯ
- ಗೋವಿನಕೋವಿ : ಹಿಂದುಳಿದ ‘ಅ’ ವರ್ಗ(ಮಹಿಳೆ), ಹಿಂದುಳಿದ ‘ಬ’ ವರ್ಗ
- ಸುರಹೊನ್ನೆ : ಹಿಂದುಳಿದ ‘ಬ’ ವರ್ಗ, ಅನುಸೂಚಿತ ಜಾತಿ(ಮಹಿಳೆ)
- ಯರಗನಾಳು : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕೆಂಚಿಕೊಪ್ಪ : ಸಾಮಾನ್ಯ, ಅನುಸೂಚಿತ ಪಂಗಡ(ಮಹಿಳೆ)
- ವಡೇರಹತ್ತೂರು : ಸಾಮಾನ್ಯ, ಅನುಸೂಚಿತ ಜಾತಿ
- ಗಂಗನಕೋಟೆ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಚೀಲೂರು: ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಚಿನ್ನಿಕಟ್ಟೆ : ಸಾಮಾನ್ಯ(ಮಹಿಳೆ), ಹಿಂದುಳಿದ ‘ಅ’ವರ್ಗ
- ಸವಳಂಗ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಕುಂಕೊವ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಫಲವನಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಟಿ.ಗೋಪಗೊಂಡನಹಳ್ಳಿ: ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
- ಬಸವನಹಳ್ಳಿ : ಅನುಸೂಚಿತ ಜಾತಿ(ಮಹಿಳೆ) ಹಿಂದುಳಿದ ‘ಅ’ವರ್ಗ(ಮಹಿಳೆ)
- ಚಟ್ನಿಹಳ್ಳಿ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ ‘ಅ’ವರ್ಗ(ಮಹಿಳೆ)
- ಬೆಳಗುತ್ತಿ : ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ
ಚನ್ನಗಿರಿ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ61(31) 12(6) 6(3) 10(5) 2(1) 31(16)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ
- ಚಿರಡೋಣಿ : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಪಂಗಡ(ಮಹಿಳೆ)
- ಹೊಸಕೆರೆ (ಬಸವಾಪಟ್ಟಣ): ಹಿಂದುಳಿದ ‘ಅ’ ವರ್ಗ, ಅನುಸೂಚಿತ ಜಾತಿ(ಮಹಿಳೆ)
- ಬುಳಸಾಗರ : ಹಿಂದುಳಿದ ‘ಅ’ ವರ್ಗ, ಸಾಮಾನ್ಯ(ಮಹಿಳೆ)
- ತಿಪ್ಪಾಗೊಂಡನಹಳ್ಳಿ : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಜಾತಿ(ಮಹಿಳೆ)
- ವಡ್ನಾಳು : ಹಿಂದುಳಿದ ‘ಅ’ ವರ್ಗ, ಸಾಮಾನ್ಯ(ಮಹಿಳೆ)
- ಕಾರಿಗನೂರು : ಹಿಂದುಳಿದ ‘ಅ’ ವರ್ಗ(ಮಹಿಳೆ), ಸಾಮಾನ್ಯ
- ನವಿಲೇಹಾಳು : ಹಿಂದುಳಿದ ‘ಅ’ ವರ್ಗ(ಮಹಿಳೆ), ಅನುಸೂಚಿತ ಜಾತಿ
- ಕೊರಟಿಕೆರೆ : ಹಿಂದುಳಿದ ‘ಅ’ ವರ್ಗ(ಮಹಿಳೆ), ಸಾಮಾನ್ಯ
- ಕೊಂಡದಹಳ್ಳಿ : ಹಿಂದುಳಿದ ‘ಅ’ ವರ್ಗ(ಮಹಿಳೆ), ಸಾಮಾನ್ಯ
- ಹೊನ್ನೇಬಾಗಿ : ಹಿಂದುಳಿದ ‘ಅ’ ವರ್ಗ(ಮಹಿಳೆ), ಅನುಸೂಚಿತ ಪಂಗಡ
- ದೇವರಹಳ್ಳಿ : ಹಿಂದುಳಿದ ‘ಬ’ ವರ್ಗ, ಅನುಸೂಚಿತ ಜಾತಿ(ಮಹಿಳೆ)
- ಕೆರೆಬೆಳಚಿ : ಹಿಂದುಳಿದ ‘ಬ’ ವರ್ಗ , ಅನುಸೂಚಿತ ಜಾತಿ
- ಕತ್ತಲಗೆರೆ : ಸಾಮಾನ್ಯ , ಅನುಸೂಚಿತ ಪಂಗಡ(ಮಹಿಳೆ)
- ಬೆಳಲಗೆರೆ : ಸಾಮಾನ್ಯ , ಅನುಸೂಚಿತ ‘ಅ’ ವರ್ಗ(ಮಹಿಳೆ)
- ದಾಗಿನಕಟ್ಟೆ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಗುಡ್ಡದ ಕೋಮಾರನಹಳ್ಳಿ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕೊಗಲೂರು : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕಬ್ಬಳ : ಸಾಮಾನ್ಯ, ಅನುಸೂಚತ ಪಂಗಡ(ಮಹಿಳೆ)
- ಕಗತೂರು : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಸಿದ್ದನಮಠ : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಸಂತೇಬೆನ್ನೂರು : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಚನ್ನೇಶಪುರ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಹರೋನಹಳ್ಳಿ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಮಲಹಾಳು : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಪಾಂಡೋಮಟ್ಟಿ : ಸಾಮಾನ್ಯ, ಅನುಸೂಚಿತ ‘ಬ’ ವರ್ಗ(ಮಹಿಳೆ)
- ಇಟ್ಟಗಿ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕಂಸಾಗರ : ಸಾಮಾನ್ಯ, ಸಾಮಾನ್ಯ
- ಕೋಟೆಹಾಳ್ : ಸಾಮಾನ್ಯ(ಮಹಿಳೆ), ಅನುಸೂಚಿತ ‘ಅ’ವರ್ಗ(ಮಹಿಳೆ)
- ನಿಲೊಗಲ್ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ತ್ಯಾವಣಗಿ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಮೆದಿಕೆರೆ : ಸಾಮಾನ್ಯ(ಮಹಿಳೆ), ಸಾಮಾನ್ಯ
- ತಣಿಗೆರೆ : ಸಾಮಾನ್ಯ(ಮಹಿಳೆ), ಅನುಸೂಚಿತ ‘ಅ’ ವರ್ಗ
- ಕೆಂಪನಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ದೊಡ್ಡಬ್ಬಿಗೆರೆ : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
- ಅಗರಬನ್ನಿಹಟ್ಟಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಅಜ್ಜಿಹಳ್ಳಿ: ಸಾಮಾನ್ಯ(ಮಹಿಳೆ), ಅನುಸೂಚಿತ ‘ಬ’ ವರ್ಗ
- ಹೆಬ್ಬಳಗೆರೆ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಹಿರೆಮಳಲಿ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಗರಗ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಲಿಂಗದಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಹೊದಿಗೆರೆ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಗೊಪ್ಪೇನಹಳ್ಳಿ : ಸಾಮಾನ್ಯ(ಮಹಿಳೆ), ಅನುಸೂಚಿತ ‘ಅ’ ವರ್ಗ
- ನೆಲ್ಲಿಹಂಕಲು : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
- ಕಣಿವೆಬಿಳಚಿ : ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
- ಸೋಮಲಾಪುರ : ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
- ಬೆಳ್ಳಿಗನೂಡು : ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
- ಕರೆಕಟ್ಟೆ : ಅನುಸೂಚಿತ ಜಾತಿ, ಅನುಸೂಚಿತ ‘ಅ’ ವರ್ಗ(ಮಹಿಳೆ)
- ಮುದಿಗೆರೆ : ಅನುಸೂಚಿತ ಜಾತಿ, ಅನುಸೂಚಿತ ‘ಅ’ ವರ್ಗ(ಮಹಿಳೆ)
- ದುರ್ವಿಗೆರೆ : ಅನುಸೂಚಿತ ಜಾತಿ, ಸಾಮಾನ್ಯ(ಮಹಿಳೆ)
- ಚಿಕ್ಕಗಂಗೂರು : ಅನುಸೂಚಿತ ಜಾತಿ(ಮಹಿಳೆ), ಅನುಸೂಚಿತ ‘ಅ’ ವರ್ಗ
- ನುಗ್ಗಿಹಳ್ಳಿ : ಅನುಸೂಚಿತ ಜಾತಿ(ಮಹಿಳೆ), ಅನುಸೂಚಿತ ‘ಅ’ ವರ್ಗ
- ಕಾಕನೂರು : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ಜೋಳದಾಳು : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ನಲ್ಲೂರು : ಅನುಸೂಚಿತ ಜಾತಿ(ಮಹಿಳೆ), ಅನುಸೂಚಿತ ‘ಅ’ ವರ್ಗ(ಮಹಿಳೆ)
- ಕಂಚಿಗನಾಳು : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ನಲ್ಕುದುರೆ : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
- ಮಲ್ಲಾಪುರ : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
- ರುದ್ರಾಪುರ : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
- ರಾಜಗೊಂಡನಹಳ್ಳಿ : ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ
- ಮರವಂಜಿ : ಅನುಸೂಚಿತ ಪಂಗಡ(ಮಹಿಳೆ), ಸಾಮಾನ್ಯ
- ತಾವರೆಕೆರೆ : ಅನುಸೂಚಿತ ಪಂಗಡ(ಮಹಿಳೆ), ಅನುಸೂಚಿತ ‘ಅ’ ವರ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


