ಸಿನಿ ಸುದ್ದಿ
ಕುಡಿದ ಮತ್ತಿನಲ್ಲಿ ಅಕ್ಕನ ನಗ್ನ ವಿಡಿಯೋ ಶೇರ್ ಮಾಡಿದ ತಂಗಿ !

ಸುದ್ದಿದಿನ ಡೆಸ್ಕ್ : ಕುಡಿದ ಮತ್ತಿನಲ್ಲಿ ಏನೆಲ್ಲಾ ಎಡವಟ್ಟು ಆಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಬಿಗ್ ಬಾಸ್ ಹಿಂದಿ ಅವತರಣಿಕೆಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನು ಆಯ್ಕೆ ತಂಗಿ ಕುಡಿದ ಮತ್ತಿನಲ್ಲಿ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ.
ಸಾರಾ ಖಾನ್ ಮತ್ತು ಆಕೆಯ ತಂಗಿ ಆರ್ಯ ಖಾನ್ ಈಚೆಗೆ ಶ್ರೀಲಂಕಾ ದೇಶಕ್ಕೆ ಹೋಗಿದ್ದು, ಹೋಟೆಲ್ ಒಂದರಲ್ಲಿ ತಂಗಿದ್ದರು. ಸಾರಾ ಖಾನ್ ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಆಕೆಯ ತಂಗಿ ಸಾರಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾಳೆ. ಅದು ವೈರಲ್ ಆದ ತಕ್ಷಣ ಎಚ್ಚೆತ್ತುಕೊಂಡು ಡಿಲಿಟ್ ಮಾಡಿದ್ದಾರೆ.
ಈ ಕುರಿತು ಸ್ವತಃ ಸಾರಾ ಖಾನ್ ಸ್ಪಷ್ಟನೆ ನೀಡಿದ್ದು, ಇದು ಕೇವಲ ಹುಡುಗಾಟಿಕೆಗೆ ಮಾಡಿದ ವಿಡಿಯೋ. ಕುಡಿದ ಮತ್ತಿ ನಲ್ಲಿ ಶೇರ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಸಿನಿ ಸುದ್ದಿ
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!

ಸುದ್ದಿದಿನ ಡೆಸ್ಕ್ : ಕನ್ನಡದ ಬಹುನಿರೀಕ್ಷಿತ ಸಿನೆಮಾ ಡಿ ಬಾಸ್ ತೂಗುದೀಪ ದರ್ಶನ್ ಅಭಿನಯದ ರಾಬರ್ಟ್. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ತೆಲುಗು ಅವತರಣಿಕೆಯ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಂದ್ರಪ್ರದೇಶದದಲ್ಲೂ ರಾಬರ್ಟ್ ತೆರೆಗೆ ಸಿದ್ಧಾವಾಗಿದ್ದಾನೆ.
ತರುಣ್ ಸುಧೀರ್ ಈ ಸಿನೆಮಾದ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ಹಣ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದ ಮೊದಲ ಹಾಡು ಇದೀಗ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಡಿ ಬಾಸ್ ಗೆ ನಾಯಕಿಯಾಗಿ ಆಶಾ ಭಟ್ ಜತೆಯಾಗಿದ್ದು, ಚಿಕ್ಕಣ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ಧಾರೆ.
Here comes the 1st video track #BabyDanceFloorReady from our movie #Roberrt. Watch and share your thoughts 🙂https://t.co/mNX5RLUGa5@UmapathyFilms @TharunSudhir @StarAshaBhat @aanandaaudio pic.twitter.com/7LS2r0pePy
— Darshan Thoogudeepa (@dasadarshan) February 28, 2021
ನಮ್ಮ #Roberrt ಚಿತ್ರದ ಮೊದಲ ವಿಡಿಯೋ ಸಾಂಗ್ #BabyDanceFloorReady ಈಗ ನಿಮ್ಮ ಮುಂದೆ. ನೋಡಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿhttps://t.co/8Zjsf8DN72@UmapathyFilms @TharunSudhir @StarAshaBhat @aanandaaudio pic.twitter.com/IaDVLdk4yh
— Darshan Thoogudeepa (@dasadarshan) February 28, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?

ಸುದ್ದಿದಿನ,ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 8 ಕ್ಕೆ ಇಂದು ಗ್ರ್ಯಾಂಡ್ ಒಪನಿಂಗ್ ನಡೆಯಲಿದ್ದು, ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳು ಫೈನಲ್ ಆಗಿದ್ದಾರೆ.
ಸ್ಯಾಂಡಲ್ವುಡ್ ನ ಸ್ಟಾರ್ ನಟ-ನಟಿಯರು ಹಾಗೂ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಲವರ ಹೆಸರು ಕೇಳಿಬರುತ್ತಿತ್ತು. ಆದರೆ ಇಂದು ಕೇಳಿ ಬಂದಿರುವ ಹೆಸರುಗಳು ಬಿಗ್ ಬಾಸ್ ಮನೆಯಲ್ಲಿ ಆಟ ಆಡಲು ಬರುತ್ತಿದ್ದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಬಿಗ್ ಬಾಸ್ ಸ್ಪರ್ಧಿಗಳು
ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪಟ್ಟಗೌರಿ ಖ್ಯಾತಿಯ ಚಂದ್ರಕಲಾ ಮೋಹನ್, ಹಾಡು ಕರ್ನಾಟಕ ಫೇಮ್ ವಿಶ್ವನಾಥ್ ಹಾವೇರಿ, ನಾಯಕ ಸುನಿಲ್ ರಾವ್ ಮತ್ತು ಓರ್ವ ಬೈಕ್ ರೈಡರ್ ಸೇರಿದಂತೆ ಹಲವು ಕಿರುತೆರೆಯ ನಟನಟಿಯರು ಹಾಗೂ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ದೊಡ್ಡ ಬಿಗ್ ಬಾಸ್ ಮನೆಯಲ್ಲಿ ಲಾಕ್ ಆಗಲಿದ್ದಾರೆ.
ಇಂದು ಸಂಜೆ 6ಕ್ಕೆ
ಬಿಗ್ ಬಾಸ್ ಸೀಸನ್ 8 | ಪ್ರತಿ ರಾತ್ರಿ 9.30#BBK8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/3B8kujM5HO
— Colors Kannada (@ColorsKannada) February 28, 2021
ಹಾಡುವ ಕೋಗಿಲೆಗಳು, ನಟಿಸುವ ಗೊಂಬೆಗಳು, ನಕ್ಕುನಗಿಸುವ ಹಾಸ್ಯ ಕಲಾವಿದರು, ಹಿರಿಯ ಕಲಾವಿದರು ಹೀಗೆ ಹಲವರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ
100 ದಿನಗಳ ಆಟ ಇಂದಿನಿಂದ ಪ್ರಾರಂಭಾವಾಗಲಿದೆ.ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಿಗ್ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಒಪನಿಂಗ್ ನಡೆಯಲಿದ್ದು, ಕಂಟೆಸ್ಟೆಂಟ್ಗಳು ವೇದಿಕೆಗೆ ಏರುವುದರ ಜೊತೆಗೆ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುತ್ತವೆ.
#BigBoss Season 8,, from Tmrw. pic.twitter.com/TVW7KSFONR
— Kichcha Sudeepa (@KicchaSudeep) February 26, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ

ಸುದ್ದಿದಿನ, ಬೆಂಗಳೂರು : ಕೊನೆಗೂ ‘ಪೊಗರು’ ಸಿನಿಮಾದ ಕಾಂಟ್ರವರ್ಸಿ ಸುಖಾಂತ್ಯ ಕಂಡಿದ್ದು, ಸಿನಿಮಾ ನೋಡಿ ಬ್ರಾಹ್ಮಣ ಸಭಾದ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಂದ ಕಿಶೋರ್ ನಿರ್ದೇಶಸಿ, ಧ್ರುವ ಸರ್ಜಾ ನಟಿಸಿರುವ ‘ಪೊಗರು’ ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿತ್ತು. ಬ್ರಾಹ್ಮಣರನ್ನು ಅವಹೇಳನ ಮಾಡುವ ಸಂಭಾಷಣೆ ಮತ್ತು ದೃಶ್ಯಗಳನ್ನ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ ಎಂದು ಕ ಬ್ರಾಹ್ಮಣ ಸಮುದಾಯು ‘ಪೊಗರು’ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳವಾರ ಬ್ರಾಹ್ಮಣ ಸಭಾದ ಸದಸ್ಯರು ಫಿಲ್ಮ್ ಚೇಂಬರ್ ಗೆ ಹೋಗಿ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಿರುವ ದೃಶ್ಯಗಳನ್ನ ತೆಗೆಯುವಂತೆ ಆಗ್ರಹಿಸಿದ್ದರು. ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್ ಹಾಗೂ ನಿರ್ದೇಶಕ ನಂದ ಕಿಶೋರ್ ಅವರು ಬ್ರಾಹ್ಮಣ ಸಮುದಾಯದ ಜೊತೆ ಚರ್ಚಿಸಿ ಅವಹೇಳನದಂತೆ ಕಾಣುವ ದೃಶ್ಯಗಳನ್ನು ಎಡಿಟ್ ಮಾಡುವಂತೆ ತಿಳಿಸಿದ್ದರು.
ಬುಧವಾರ ಬ್ರಾಹ್ಮಣ ಸಮುದಾಯದ ಸದಸ್ಯರು ಎಡಿಟ್ ಮಾಡಿದ ‘ಪೊಗರು’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಸದಸ್ಯರು ಹೇಳಿದ ದೃಶ್ಯಗಳಿಗೆ ‘ಪೊಗರು’ ಚಿತ್ರತಂಡ ಕತ್ತರಿ ಹಾಕಿದ್ದು, ಬ್ರಾಹ್ಮಣ ಸಮುದಾಯದ ಸದಸ್ಯರು ‘ಪೊಗರು’ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ7 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ7 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್7 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ6 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು