ಲೈಫ್ ಸ್ಟೈಲ್
ಸೀರಿಯಲ್ ಸುಂದರಿಯರ ಟ್ರೆಂಡೀ ಆಭರಣಗಳ ಗುಟ್ಟು, ರಟ್ಟಾಯ್ತು ನೋಡಿ..!
ಮಹಿಳೆಯರಿಗೂ ಸೀರಿಯಲ್ ಗೂ ಇರುವ ಅವಿನಾಭಾವ ಸಂಬಂಧ ವಿವರಿಸಲು ಕೂತರೆ ಸಾವಿರ ಪುಟಗಳು ಸಾಲದು. ಮಹಿಳೆಯರ ಒಡವೆಗಳ ವ್ಯಾಮೋಹ ಎಲ್ಲರಿಗೂ ತಿಳಿದಿರುವ ಸಂಗತಿ. ಇತ್ತೀಚೆಗೆ ಸೀರಿಯಲ್ ಕ್ರೇಜ್ ಹೆಚ್ಚಿದ್ದು..ಕಿರುತೆರೆ ಈ ಪಾತ್ರಗಳು ಸಮಾಜಕ್ಕೆ ಹತ್ತಿರವಾಗುತ್ತಿದೆ. ಮಹಿಳಾ ಪ್ರಧಾನ ಕಥಾಹಂದರವನ್ನು ಹೊಂದಿರುವ ಈ ಸೀರಿಯಲ್ ಗಳು ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬಂತೆ ರೂಪಗೊಂಡಿದ್ದು ಹೆಚ್ಚು ಮಹಿಳಾ ಪ್ರೇಕ್ಷಕರನ್ನು ಹೊಂದಿದೆ.
ಸೀರಿಯಲ್ ಗಳಲ್ಲಿನ ಪಾತ್ರ ದಷ್ಪೇ ಫೇಮಸ್ ಆ ಪತ್ರದ ಸ್ಟೈಲ್ ಸ್ಟೇಟ್ ಮೆಂಟ್! ಈಗಂತೂ ಸೀರಿಯಲ್ ತಾರೆಯರು ಸೀರೆ-ಒಡವೆಗಳ ಫ್ಯಾಷನ್ ಫಾಲೋ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅಂತಹದೇ ಸ್ಟೋರಿ ಇಲ್ಲಿದೆ ನೋಡಿ.
ಕಲರ್ಸ್ ಕನ್ನಡ ದ “ರಾಧಾರಮಣ” ಸೀರಿಯಲ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಪ್ರತಿ ಪಾತ್ರ್ರ ತನ್ನದೇ ವಿಭಿನ್ನ ಸ್ಟೈಲ್ ಸ್ಟೇಟ್ ಮೆಂಟ್ ಹೊಂದಿದೆ.
ಈ ಸೀರಿಯಲ್ ನ ಮತ್ತೊಂದು ಪ್ರಮುಖ ಪಾತ್ರ “ಸಿತಾರಾದೇವಿ” ನೆಗಟಿವ್ ಷೇಡ್ ಹೊಂದಿದ್ದರೂ ತನ್ನದೇ ವಿಭಿನ್ನ ಮ್ಯಾನರಿಸಂ, ಸ್ಟೈಲ್ ಮತ್ತು ಅಧ್ಬುತ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾರೆ ಕಾಮಿಡಿ ಟೈಮ್ ಖ್ಯಾತಿಯ ಸುಜಾತಾ ರವರು. ಇವರ ಖಡಕ್ ಡೈಲಾಗ್..ಹಾವ-ಭಾವ ಗಳಷ್ಟೇ ಫೇಮಸ್ “ಸಿತಾರಾದೇವಿಯ” ಇವರ ಫ್ಯಾಷನಬಲ್ ಲುಕ್.. ಇವರ ವಿಶಿಷ್ಟ ಶೈಲಿಯ ಒಡವೆಗಳು ಸೀರಿಯಲ್ ಪ್ರಿಯರಲ್ಲಿ ತುಂಬಾ ನೇ ಚರ್ಚೆಗೆ ಗ್ರಾಸವಾಗಿದೆ.
ಈಗಂತೂ ಫ್ಯಾಷನ್ ಜಿವಲೆರಿ ಟ್ರೆಂಡ್ ಫಾಲೋ ಆಗುತ್ತಿದ್ದು..ಸೆಲಿಬ್ರಿಟಿ ಗಳಾಗಲೀ..ಸಾಮಾನ್ಯ ಜನರಾಗಲೀ ಎಲ್ಲರೂ ತಮ್ಮದೇ ಆದ ವಿಭಿನ್ನ ಫ್ಯಾಷನ್ ಮತ್ತು ಸ್ಟೈಲ್ ಸ್ಟೇಟ್ ಮೆಂಟ್ ಹೊಂದಲು ಬಯಸುತ್ತಾರೆ.
ಬಣ್ಣ ಬಣ್ಣದ ಟೆರಾಕೋಟಾ ಒಡವೆಗಳು.. ಕಾಪರ್, ಕಪ್ಪು ಲೋಹ, ಬಿಳಿ ಲೋಹ..ಬೆಳ್ಳಿ ಯ ಒಡವೆಗಳು ಭಾರೀ ಪ್ರಮಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ. ವಿಭಿನ್ನ ಹಾಗೂ ಆಕರ್ಷಕ ವಿನ್ಯಾಸಗಳಲ್ಲಿ ಮಹಿಳೆಯರ ಮನಸೂರೆ ಗೊಂಡಿದೆ ಈ ಫ್ಯಾಷನ್ ಜಿವೆಲೆರೀ..
ಅಂದಹಾಗೆ ಈ ಸೀರಿಯಲ್ ಬೆಡಗಿಯರ ಕಿವಿ ಓಲೆ..ಝುಮಕಿ, ಸರ.. ಬಳೆ..ಮೂಗುತಿ.. ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ. ಇವರ ಈ ವಿಶಿಷ್ಟ ಒಡವೆಗಳ ಹಿಂದಿನ ರಹಸ್ಯ ತಿಳಿಯುವ ಕುತೂಹಲ ನಿಮಗಿದ್ದರೆ , ಸೀರಿಯಲ್ ಬೆಡಗಿಯರ ಜಿವಲೆರಿ ಸ್ಟೋರಿ ನಿಮಗಾಗಿ ಇಲ್ಲಿದೆ ನೋಡಿ..
ಜೋಜೋಲಾಲಿ ಸೀರಿಯಲ್ ನ ನವ್ಯಾ ಶೆಟ್ಟಿ..ಸುವರ್ಣ ವಾಹಿನಿಯ “ಪುಟ್ಟಮಲ್ಲಿ” ಖ್ಯಾತಿಯ ವೀಣಾ ಪೊಣ್ಣಪ್ಪ.. ಆರನೇ ಮೈಲಿ ಚಿತ್ರದ ನಾಯಕನಟಿಯ ವಿಶೇಷ ಸ್ಟೈಲ್ ಸ್ಟೇಟ್ ಮೆಂಟ್… ಕೇವಲ ಸೀರಿಯಲ್ ಸುಂದರಿರು ಅಷ್ಟೇ ಅಲ್ಲದೆ, ಸ್ಯಾಂಡಲ್ ವುಡ್ ನ ಖ್ಯಾತ ಗಾಯಕಿ ಅನನ್ಯಾ ಭಟ್ ರ ಸ್ಟೈಲಿಶ್ ಲುಕ್ ನ ಹಿಂದಿನ ರಹಸ್ಯ ನಿಮಗಾಗಿ ನವು ತಂದಿದ್ದೇವೆ.
ಈ ಎಲ್ಲಾ ಸುಂದರಿ ಯರ ಚೆಲುವನ್ನ ತಮ್ಮ ವಿಶಿಷ್ಟ ಸ್ಟೈಲಿಂಗ್ ನಿಂದ ತೆರೆಯ ಮೇಲೆ ಸುಂದರವಾಗಿ ಮಿಂಚುವಂತೆ ಮಾಡಿರುವುದು..ಪ್ರತಿಷ್ಠಿತ ಸೆಲಿಬ್ರಿಟಿ ಜಿವಲೆರಿ ಡಿಸೈನರ್ , ಸೀಮಾ ಆಥ್ರೇಯ.
ಯಾರು ಸೀಮಾ ಆಥ್ರೇಯ..?
ಬೆಂಗಳೂರಿನ ಪದ್ಮ ಮತ್ತು ನಾಗರಾಜ್ ದಂಪತಿಗಳ ಮಗಳು ಸೀಮಾ. ಪಿ.ಜಿ ಇನ್ ಬಿಸಿನೆಸ್ ಅಡ್ಮಿನಿಸ್ಟೇಷನ್ ಪಧವೀಧರೆ ಆಗಿರುವ ಸೀಮಾಗೆ ಕಲೆ ಯಲ್ಲಿ ವಿಶೇಷ ಆಸಕ್ತಿ. ಪತಿ ಹರೀಶ್ ರೊಂದಿಗೆ ಬೆಂಗಳೂರಿನಲ್ಲೇ ನೆಲಸಿರುವಾ ಸೀಮಾ ಜಿವಲೆರಿ ಡಿಸೈನಿಂಗ್ ಪ್ರವೀಣೆ . ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸೀಮಾ ತಮ್ಮ ದೇ ವಿಶಿಷ್ಟ ಜಿವಲೆರಿ ಡಿಸೈನ್ ಗಳಿಂದ ಸೆಲಿಬ್ರಿಟಿ ಡಿಸೈನರ್ ಆಗಿ ಮಿಂಚುತ್ತಿದ್ದಾರೆ. ಇವರ *ಬೀಡೆಡ್ ಜಿವಲೆರಿ*ಸಂಸ್ಥೆ ಮುಖಾಂತರ ಹಲವಾರು ಖ್ಯಾತ ಸೀರಿಯಲ್ ಸುಂದರಿಯರ ನ್ನು ಸ್ಟೈಲ್ ಮಾಡಿದ್ದಾರೆ.
ಸುಜಾತಾ..ಅನನ್ಯಾ ಭಟ್..ಸುರಭಿ ವಸಿಷ್ಟ..ವೀಣಾ ಪೂಣಚ್ಚ..ನವ್ಯ ಶೆಟ್ಟಿ.. ಹಲವಾರು ಸೆಲಿಬ್ರಿಟಿ ನಟಿಯರ ಮನಮೋಹಕ ಒಡವೆಗಳ ಕತೃ ಇವರು. ಸೆಲಿಬ್ರಿಟಿ ಗಳಷ್ಟೇ ಅಲ್ಲದೆ, ಸಾಫ್ಟವೇರ್ ಕಂಪನಿ..M.N.C ಕಂಪನಿಗಳು ಸೇರಿ.. ನಾಟಕಗಳಿಗೂ ಇವರು ಜಿವಲೆರಿ ಡಿಸೈನರ್ ಆಗಿದ್ದಾರೆ. ಜಿವಲೆರಿ ಡಿಸೈನಿಂಗ್ ಕ್ಷೇತ್ರದಲ್ಲಿ ಯಾರು ಅತ್ಯುತ್ತಮ ಡಿಸೈನ್ಗಳನ್ನು ನೀಡುತ್ತಾರೋ ಅವರೇ ಹೆಚ್ಚು ಕಾಲ ಉಳಿಯಲು ಸಾಧ್ಯ ಎನ್ನುತ್ತಾರೆ ಸೀಮ.
ಕ್ರಿಯಾಶೀಲತೆ..ಹೊಸತನ..ಫ್ಯಾಷನ್..ಸ್ಟೈಲ್ ಎಲ್ಲವೂ ಇದ್ದಲ್ಲಿ ಮಾತ್ರ ಇಲ್ಲಿ ಬಹೈಕಾಲ ಉಳಿಯಲು ಸಾಧ್ಯ. ತಮ್ಮ ಅದ್ಭುತ ಕಲೆ ಹಾಗೂ ವಿನ್ಯಾಸ ದಿಂದ ಸೀರಿಯಲ್ ಕ್ಷೇತ್ರದಲ್ಲಿ ದಿ ಬೆಸ್ಟ್ ಜಿವಲೆರಿ ಸ್ಟೈಲಿಸ್ಟ್ ಆಗಿ ಮಿಂಚುತ್ತಿರುವ ಸೀಮಾ ರ ಎಲ್ಲಾ ಕನಸುಗಳು ಈಡೇರಲಿ ಎಂದು ಹಾರೈಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!
ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.
ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.
http://Visit : www.suddidina.com
ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ
ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್ ಮದ್ರಾಸ್ ಗರ್ದನ್‌ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್‌ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.
ರೈಲು ಸಂಚಾರಕ್ಕೂ ಸುರಕ್ಷತೆ
ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.
ಮುಂದಿನ ಹಂತದಲ್ಲಿ ದೊಡ್ಡ ಯೋಜನೆ
ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

ದಿನದ ಸುದ್ದಿ
ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!
ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ
ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ಕುರಿತು ಇದೀಗ ಚರ್ಚೆ ಜೋರಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿಯಾಗಿದ್ದು, ಈ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಕುತೂಹಲ ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಮೂಡಿದೆ.
ರವಿಚಂದ್ರನ್ ಮತ್ತು ಡಿಕೆ ಶಿವಕುಮಾರ್ ಬಾಲ್ಯದ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳು ಎಂಬುದು ವಿಶೇಷ. ಹೀಗಾಗಿ ಇಬ್ಬರ ಭೇಟಿಯನ್ನು ಕೇವಲ ಸ್ನೇಹಪೂರ್ವಕ ಭೇಟಿ ಎಂದೇ ನೋಡಬೇಕೇ ಅಥವಾ ಇದರ ಹಿಂದೆ ಮತ್ತೇನಾದರೂ ರಾಜಕೀಯ ಬೆಳವಣಿಗೆ ಇದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
http://Visit : www.suddidina.com
ನಾಲ್ಕು ದಶಕಗಳ ಸಿನಿಮಾ ಪಯಣ
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಇದೀಗ ಅವರಿಗೆ ರಾಜಕೀಯ ಕ್ಷೇತ್ರದಲ್ಲೂ ಅವಕಾಶ ನೀಡುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಡಿಕೆಶಿ ಭೇಟಿಗೆ ಹೊಸ ಅರ್ಥ?
ರವಿಚಂದ್ರನ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಬಾಲ್ಯದ ಗೆಳೆಯನನ್ನು ಭೇಟಿಯಾದ ಸಂತಸವನ್ನು ಡಿಕೆ ಶಿವಕುಮಾರ್ ಹಂಚಿಕೊಂಡಿದ್ದರೂ, ಭೇಟಿಯ ರಾಜಕೀಯ ಆಯಾಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ.
ಆದರೆ ರವಿಚಂದ್ರನ್ ಅವರನ್ನು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಕರೆತರುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಅಧಿಕೃತಗೊಂಡರೆ, ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶಿಸುವ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿ ರವಿಚಂದ್ರನ್ ಗುರುತಿಸಿಕೊಳ್ಳಲಿದ್ದಾರೆ.
ಅಧಿಕೃತ ಘೋಷಣೆಗಾಗಿ ಕಾಯುವಿಕೆ
ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ವಿಚಾರ ಸದ್ಯಕ್ಕೆ ಚರ್ಚೆ ಹಾಗೂ ನಿರೀಕ್ಷೆಯ ಹಂತದಲ್ಲಿದೆ. ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.
ಚಿತ್ರರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ರವಿಚಂದ್ರನ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ, ಅದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕೀಯ ಎರಡರಲ್ಲೂ ಗಮನಾರ್ಹ ಬೆಳವಣಿಗೆಯಾಗಲಿದೆ. ಹೀಗಾಗಿ ಡಿಕೆ ಶಿವಕುಮಾರ್-ರವಿಚಂದ್ರನ್ ಭೇಟಿ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.

ದಿನದ ಸುದ್ದಿ
ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!
ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸುವಿಕೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದಾರೆ.
http://Visit : www.suddidina.com
ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಒಟ್ಟು 5.67 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಬರೋಬ್ಬರಿ ₹2,361.75 ಕೋಟಿ ದಂಡ ಸಂಗ್ರಹಿಸಲಾಗಿದೆ. ಈ ಅಂಕಿ-ಅಂಶಗಳು ರಾಜ್ಯದ ರಸ್ತೆಗಳಲ್ಲಿ ನಿಯಮ ಪಾಲನೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತವೆ.
2024ರಲ್ಲಿ ಗರಿಷ್ಠ ಪ್ರಕರಣಗಳ ದಾಖಲು
ವರ್ಷವಾರು ಪ್ರಕರಣಗಳನ್ನು ಗಮನಿಸಿದರೆ, 2023ರಲ್ಲಿ 1.27 ಕೋಟಿ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1.61 ಕೋಟಿಗೆ ಏರಿಕೆಯಾಗಿದೆ. 2025ರಲ್ಲಿ 1.60 ಕೋಟಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ 1.17 ಕೋಟಿ ಪ್ರಕರಣಗಳು ದಾಖಲಾಗಿವೆ.
ದಂಡ ಸಂಗ್ರಹದಲ್ಲೂ ವರ್ಷದಿಂದ ವರ್ಷಕ್ಕೆ ದೊಡ್ಡ ಮೊತ್ತ ದಾಖಲಾಗಿದೆ. 2023ರಲ್ಲಿ ₹684.76 ಕೋಟಿ, 2024ರಲ್ಲಿ ₹915.95 ಕೋಟಿ ದಂಡ ಸಂಗ್ರಹವಾಗಿದೆ. 2025 ಮತ್ತು 2026ರ ಅಂಕಿ-ಅಂಶಗಳಲ್ಲೂ ಗಮನಾರ್ಹ ಮೊತ್ತ ದಾಖಲಾಗಿದೆ.
ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮ
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಅಧಿನಿಯಮದ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ಶಾಲಾ ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣವೂ ಜಾಗೃತಿಯ ವೇದಿಕೆ
ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕವೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಜನರಿಗೆ ತಲುಪಿಸಲಾಗುತ್ತಿದೆ. ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಕುರಿತು ಪೋಸ್ಟರ್‌ಗಳು ಹಾಗೂ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.
ದಂಡದ ಹಣ ಎಲ್ಲಿ ಹೋಗುತ್ತದೆ?
ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಮೊತ್ತ ಸರ್ಕಾರದ ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಜಮೆಯಾಗುತ್ತದೆ. ಸಂಚಾರ ಪೊಲೀಸ್ ವಿಭಾಗಕ್ಕೆ ಈ ಹಣವನ್ನು ಸ್ವತಂತ್ರವಾಗಿ ಬಳಸುವ ಅಧಿಕಾರವಿಲ್ಲ. ಸರ್ಕಾರದ ಆದೇಶದಂತೆ ಸಂಗ್ರಹವಾಗುವ ದಂಡದ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತಾ ಕಾರ್ಯಗಳಿಗೆ ಬಳಸಲಾಗುತ್ತಿದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ5 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ5 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ5 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ





