ಲೈಫ್ ಸ್ಟೈಲ್
ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು
ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.
ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).
1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.
2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.
3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.
4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.
5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.
6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.
7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.
8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.
ಪುರಾಣಗಳ ಪ್ರಕಾರ ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.
- ಹೆಬ್ಬೆರಳು: ಅಗ್ನಿತತ್ವ
- ತೋರು ಬೆರಳು: ವಾಯುತತ್ವ
- ಮಧ್ಯ ಬೆರಳು: ಆಕಾಶ
- ಉಂಗುರ ಬೆರಳು: ಭೂಮಿ
- ಕಿರುಬೆರಳು: ಜಲತತ್ವ
ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.
ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ…
ಸಂಸ್ಕೃತಿಗೆ ಕೊಟ್ಟರೆ…
ಮಾನವ ಜೀವನ ಆರೋಗ್ಯಕರ…..
ಯೋಚಿಸಿ……
ಅಲಂಕಾರ ಬೇಕೆ ?
ಅಥವಾ
ಆರೋಗ್ಯವೇ ????
(ಸಂಗ್ರಹ)
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಲೈಫ್ ಸ್ಟೈಲ್
ಅನ್ನ ಜಿಗುಟಾಯಿತಾ? ಬ್ರೆಡ್‌ನ ಈ ಸರಳ ಟ್ರಿಕ್‌ನಿಂದ ಮೆತ್ತಗಾದ ಅನ್ನಕ್ಕೆ ಪರಿಹಾರ!
ಸುದ್ದಿದಿನ: ಅನ್ನ ಬೇಯಿಸುವಾಗ ನೀರು ಹೆಚ್ಚಾಗಿ ಬಿದ್ದು ಮೆತ್ತಗಾಗುವುದು ಅಥವಾ ಹೆಚ್ಚು ಹೊತ್ತು ಬೇಯಿಸಿ ಜಿಗುಟಾಗುವುದು ಸಾಮಾನ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಅನ್ನವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಅಡುಗೆಮನೆಯಲ್ಲಿರುವ ಒಣ ಬ್ರೆಡ್ ತುಂಡೇ ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಈ ಸರಳ ತಂತ್ರವನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ.
ಅಕ್ಕಿಯನ್ನು ಅಗತ್ಯಕ್ಕಿಂತ ಹೆಚ್ಚು ಬೇಯಿಸಿದಾಗ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತವೆ. ಪರಿಣಾಮವಾಗಿ ಅವುಗಳ ಸಹಜ ರಚನೆ ಕಳೆದು, ಮೆತ್ತಗೆ ಹಾಗೂ ಒಂದಕ್ಕೊಂದು ಅಂಟಿಕೊಳ್ಳುವಂತಾಗುತ್ತವೆ. ಹೆಚ್ಚು ನೀರು ಸೇರಿಸುವುದು, ಅಗತ್ಯಕ್ಕಿಂತ ಹೆಚ್ಚು ಸಮಯ ಬೇಯಿಸುವುದು ಮತ್ತು ಅಕ್ಕಿಯ ಪ್ರಕಾರಕ್ಕೆ ಸರಿಯಾದ ನೀರಿನ ಪ್ರಮಾಣ ಬಳಸದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಅಕ್ಕಿ ಸಂಪೂರ್ಣವಾಗಿ ಗಂಜಿಯಂತಹ ಹದಕ್ಕೆ ಬರುವ ಮೊದಲು ಸಮಸ್ಯೆಯನ್ನು ಗುರುತಿಸಿದರೆ, ಹೆಚ್ಚುವರಿ ತೇವಾಂಶವನ್ನು ಕಡಿಮೆ ಮಾಡುವ ಮೂಲಕ ಅನ್ನದ ಹದವನ್ನು ಸ್ವಲ್ಪಮಟ್ಟಿಗೆ ಸುಧಾರಿಸಬಹುದು.
http://Visit : www.suddidina.com
ಬ್ರೆಡ್ ತುಂಡು ಹೇಗೆ ಸಹಾಯ ಮಾಡುತ್ತದೆ?
ಅನ್ನದಲ್ಲಿ ನೀರು ಹೆಚ್ಚಾಗಿ ಉಳಿದಿದ್ದರೆ ಮೊದಲು ಸಾಧ್ಯವಾದಷ್ಟು ಹೆಚ್ಚುವರಿ ನೀರನ್ನು ಎಚ್ಚರಿಕೆಯಿಂದ ಬಸಿದು ತೆಗೆಯಬೇಕು. ಬಳಿಕ ಅನ್ನದ ಮೇಲೆ ದಪ್ಪವಾದ, ಸ್ವಲ್ಪ ಒಣಗಿದ ಬ್ರೆಡ್ ತುಂಡನ್ನು ಇರಿಸಿ ಪಾತ್ರೆಯನ್ನು ಮುಚ್ಚಬೇಕು.
ಉರಿಯನ್ನು ತೀರಾ ಕಡಿಮೆ ಮಟ್ಟದಲ್ಲಿಟ್ಟು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಬ್ರೆಡ್‌ನ ಒಣ ರಚನೆಯು ಸ್ಪಂಜಿನಂತೆ ವರ್ತಿಸಿ ಅನ್ನದಲ್ಲಿರುವ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಹೆಚ್ಚು ನೀರಾದ ಅನ್ನಕ್ಕೆ ಎರಡು–ಮೂರು ಬ್ರೆಡ್ ತುಂಡು
ಅನ್ನದಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದರೆ ಒಂದು ಬ್ರೆಡ್ ತುಂಡು ಸಾಕಾಗದಿರಬಹುದು. ಅಂತಹ ಸಂದರ್ಭದಲ್ಲಿ ಎರಡು ಅಥವಾ ಮೂರು ಒಣ ಬ್ರೆಡ್ ತುಂಡುಗಳನ್ನು ಅನ್ನದ ಮೇಲೆ ಬೇರೆ ಬೇರೆ ಕಡೆಗಳಲ್ಲಿ ಇರಿಸಬಹುದು. ಕೆಲವು ನಿಮಿಷಗಳ ನಂತರ ಬ್ರೆಡ್ ತುಂಡುಗಳನ್ನು ತೆಗೆದುಹಾಕಬೇಕು.
ಆದರೆ ಬ್ರೆಡ್ ಅನ್ನು ಹೆಚ್ಚು ಹೊತ್ತು ಪಾತ್ರೆಯಲ್ಲೇ ಬಿಡಬಾರದು. ಅದು ಹೆಚ್ಚಿನ ತೇವಾಂಶ ಹೀರಿಕೊಂಡು ಮೆತ್ತಗಾಗಬಹುದು.
ಈ ವಿಧಾನ ಯಾವಾಗ ಪರಿಣಾಮಕಾರಿ?
ಅನ್ನ ಸ್ವಲ್ಪ ಹೆಚ್ಚು ತೇವವಾಗಿದ್ದಾಗ ಅಥವಾ ಕಾಳುಗಳು ತಮ್ಮ ಆಕಾರವನ್ನು ಇನ್ನೂ ಉಳಿಸಿಕೊಂಡಿರುವಾಗ ಈ ತಂತ್ರ ಹೆಚ್ಚು ಉಪಯುಕ್ತ. ಆದರೆ ಅಕ್ಕಿ ಸಂಪೂರ್ಣವಾಗಿ ಬೆಂದು ಒಡೆದು ಗಂಜಿಯಂತಹ ಹದಕ್ಕೆ ಬಂದಿದ್ದರೆ, ಬ್ರೆಡ್ ಅದನ್ನು ಮತ್ತೆ ಉದುರುದುರಾದ ಅನ್ನವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಬ್ರೆಡ್ ಹೆಚ್ಚುವರಿ ತೇವಾಂಶವನ್ನು ಮಾತ್ರ ಹೀರಿಕೊಳ್ಳುತ್ತದೆ.
ರೈಸ್ ಕುಕ್ಕರ್‌ನಲ್ಲೂ ಬಳಸಬಹುದು
ರೈಸ್ ಕುಕ್ಕರ್‌ನಲ್ಲಿ ಅನ್ನ ಬೇಯಿಸುವಾಗ ಆಕಸ್ಮಿಕವಾಗಿ ನೀರು ಹೆಚ್ಚಾದರೂ ಇದೇ ವಿಧಾನ ಪ್ರಯತ್ನಿಸಬಹುದು. ಮೊದಲು ಅನ್ನ ಸಂಪೂರ್ಣವಾಗಿ ಬೆಂದಿದೆಯೇ ಎಂದು ಪರಿಶೀಲಿಸಿ.
ಕಾಳುಗಳು ಚೆನ್ನಾಗಿದ್ದು ಹೆಚ್ಚುವರಿ ತೇವಾಂಶ ಮಾತ್ರ ಉಳಿದಿದ್ದರೆ, ಒಣ ಬ್ರೆಡ್ ತುಂಡನ್ನು ಮೇಲೆ ಇರಿಸಿ 5 ನಿಮಿಷ ಮುಚ್ಚಿಡಬಹುದು.
ಮುಂದೆ ಅನ್ನ ಜಿಗುಟಾಗದಂತೆ ಏನು ಮಾಡಬೇಕು?
ಪ್ರತಿಯೊಂದು ಬಗೆಯ ಅಕ್ಕಿಗೂ ಬೇಕಾಗುವ ನೀರಿನ ಪ್ರಮಾಣ ಒಂದೇ ಆಗಿರುವುದಿಲ್ಲ. ಆದ್ದರಿಂದ ಅಕ್ಕಿಯ ಪ್ಯಾಕೆಟ್‌ನ ಸೂಚನೆ ಅಥವಾ ನೀವು ಅನುಸರಿಸುವ ಪಾಕವಿಧಾನದ ಪ್ರಕಾರ ನೀರನ್ನು ಅಳೆಯುವುದು ಉತ್ತಮ.
ಅನ್ನ ಬೇಯುವಾಗ ಪದೇಪದೇ ಮುಚ್ಚಳ ತೆರೆಯುವುದನ್ನು ತಪ್ಪಿಸಿ. ಸರಿಯಾದ ಸಮಯದಲ್ಲಿ ಉರಿಯನ್ನು ಆರಿಸಿ, ಅನ್ನವನ್ನು ಅಗತ್ಯಕ್ಕಿಂತ ಹೆಚ್ಚು ಹೊತ್ತು ಒಲೆಯ ಮೇಲಿಡದಿರುವುದು ಕೂಡ ಮುಖ್ಯ.

ಲೈಫ್ ಸ್ಟೈಲ್
ರಕ್ಷಾಬಂಧನದ ಸಿಹಿಗೆ ಮಾರುಕಟ್ಟೆ ಖೋವಾ ಬೇಡ; ಮನೆಯಲ್ಲೇ ಶುದ್ಧ ಮಾವಾ ತಯಾರಿಸಿ!
ಸುದ್ದಿದಿನ: ರಕ್ಷಾಬಂಧನ ಸೇರಿದಂತೆ ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಗುಲಾಬ್ ಜಾಮೂನ್, ಪೇಡಾ, ಬರ್ಫಿ, ಗುಜಿಯಾ ಸೇರಿದಂತೆ ಹಲವು ಸಿಹಿತಿಂಡಿಗಳ ತಯಾರಿಕೆಯಲ್ಲಿ ಖೋವಾ ಪ್ರಮುಖ ಪದಾರ್ಥವಾಗಿದೆ. ಇದೇ ಕಾರಣಕ್ಕೆ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಖೋವಾಕ್ಕೆ ಬೇಡಿಕೆಯೂ ಹೆಚ್ಚುತ್ತದೆ.
ಆದರೆ ಮಾರುಕಟ್ಟೆಯಲ್ಲಿ ಸಿಗುವ ಖೋವಾದ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಕಲಬೆರಕೆಯ ಖೋವಾದಲ್ಲಿ ಪಿಷ್ಟ, ಕೃತಕ ಕೊಬ್ಬು ಅಥವಾ ಇತರ ಅನಗತ್ಯ ಪದಾರ್ಥಗಳನ್ನು ಬಳಸುವ ಸಾಧ್ಯತೆ ಇರುವುದರಿಂದ, ಸಾಧ್ಯವಾದರೆ ಮನೆಯಲ್ಲೇ ಖೋವಾ ತಯಾರಿಸುವುದು ಉತ್ತಮ ಆಯ್ಕೆಯಾಗಬಹುದು.
http://Visit : www.suddidina.com
ನಿರಂತರವಾಗಿ ಕೈಯಾಡಿಸುವುದೇ ಮುಖ್ಯ
ಹಾಲು ಕುದಿಯುತ್ತಿರುವಾಗ ದಪ್ಪ ಸೌಟಿನಿಂದ ನಿರಂತರವಾಗಿ ಕಲಕುತ್ತಿರಬೇಕು. ವಿಶೇಷವಾಗಿ ಹಾಲು ಗಟ್ಟಿಯಾಗಲು ಆರಂಭಿಸಿದಾಗ ಪಾತ್ರೆಯ ತಳಕ್ಕೆ ಅಂಟದಂತೆ ಎಚ್ಚರಿಕೆ ವಹಿಸಬೇಕು. ಪಾತ್ರೆಯ ಅಂಚಿನಲ್ಲಿ ಶೇಖರವಾಗುವ ಕೆನೆಯನ್ನು ಕೆರೆದು ಮತ್ತೆ ಹಾಲಿನಲ್ಲೇ ಸೇರಿಸುತ್ತಿರಿ.
ಸುಮಾರು 20–25 ನಿಮಿಷಗಳ ಬಳಿಕ ಹಾಲು ಅರ್ಧದಷ್ಟು ಕಡಿಮೆಯಾಗಿ ರಾಬ್ರಿಯಂತೆ ದಪ್ಪವಾಗುತ್ತದೆ. ನಂತರ ಉರಿಯನ್ನು ಮಧ್ಯಮ ಅಥವಾ ಕಡಿಮೆ ಮಟ್ಟಕ್ಕೆ ಇಟ್ಟು ಮತ್ತಷ್ಟು ಕೈಯಾಡಿಸುತ್ತಿರಬೇಕು. ಇನ್ನೂ 10–15 ನಿಮಿಷಗಳಲ್ಲಿ ತೇವಾಂಶ ಕಡಿಮೆಯಾಗಿ ಮಿಶ್ರಣ ಗಟ್ಟಿಯಾಗಲು ಆರಂಭಿಸುತ್ತದೆ.
ಖೋವಾ ಸಿದ್ಧವಾಗುವುದು ಹೇಗೆ ಗೊತ್ತಾಗುತ್ತದೆ?
ಮಿಶ್ರಣವು ಹಿಟ್ಟಿನಂತೆ ಗಟ್ಟಿಯಾಗಿ, ಬಾಣಲೆಯ ತಳವನ್ನು ಬಿಡಲು ಆರಂಭಿಸಿದಾಗ ಖೋವಾ ಸಿದ್ಧವಾಗಿದೆ ಎಂದು ತಿಳಿಯಬಹುದು. ಉರಿ ಆರಿಸಿದ ನಂತರವೂ ಬಾಣಲೆ ಬಿಸಿಯಾಗಿರುವುದರಿಂದ ಒಂದು–ಎರಡು ನಿಮಿಷ ಸೌಟಿನಿಂದ ನಿಧಾನವಾಗಿ ಕೈಯಾಡಿಸಿ ಬಳಿಕ ತಟ್ಟೆ ಅಥವಾ ಬಟ್ಟಲಿಗೆ ವರ್ಗಾಯಿಸಿ.
ತಣ್ಣಗಾದಂತೆ ಖೋವಾ ಇನ್ನಷ್ಟು ಗಟ್ಟಿಯಾಗಿ ಉತ್ತಮ ಹರಳಿನ ಹದ ಪಡೆಯುತ್ತದೆ. ಇದನ್ನು ಪೇಡಾ, ಬರ್ಫಿ, ಗುಲಾಬ್ ಜಾಮೂನ್, ಗುಜಿಯಾ ಸೇರಿದಂತೆ ವಿವಿಧ ಸಿಹಿತಿಂಡಿಗಳಿಗೆ ಬಳಸಬಹುದು.
ಶೇಖರಣೆ ಮತ್ತು ಮುನ್ನೆಚ್ಚರಿಕೆ
ಖೋವಾ ತಯಾರಿಸುವಾಗ ದಪ್ಪ ತಳದ ಪಾತ್ರೆ ಬಳಸುವುದು ಅತ್ಯಗತ್ಯ. ಹಾಲು ಗಟ್ಟಿಯಾಗುವ ಹಂತದಲ್ಲಿ ನಿರಂತರವಾಗಿ ಕಲಕಬೇಕು. ಹೆಚ್ಚಿನ ಉರಿಯಲ್ಲಿ ಹೆಚ್ಚು ಹೊತ್ತು ಇಟ್ಟರೆ ಖೋವಾ ಸುಟ್ಟು ಬಣ್ಣ ಮತ್ತು ರುಚಿ ಬದಲಾಗಬಹುದು.
ಖೋವಾದಲ್ಲಿ ತೇವಾಂಶ ಮತ್ತು ಪೋಷಕಾಂಶ ಹೆಚ್ಚಿರುವುದರಿಂದ ಸಾಮಾನ್ಯ ತಾಪಮಾನದಲ್ಲಿ ಹೆಚ್ಚು ಕಾಲ ಇಡುವುದು ಸೂಕ್ತವಲ್ಲ. ತಯಾರಿಸಿದ ಖೋವಾವನ್ನು ಸ್ವಚ್ಛ, ಗಾಳಿಯೇರದ ಪಾತ್ರೆಯಲ್ಲಿ ಶೀತಲೀಕರಿಸಿ ಇಡುವುದು ಉತ್ತಮ. ದೀರ್ಘಕಾಲ ಸಂಗ್ರಹಿಸಬೇಕಾದರೆ ಫ್ರೀಜರ್ ಬಳಸಬಹುದು. ಬಳಸುವ ಮೊದಲು ಅದರ ವಾಸನೆ, ಬಣ್ಣ ಮತ್ತು ಹದದಲ್ಲಿ ಯಾವುದೇ ಬದಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ.

ದಿನದ ಸುದ್ದಿ
ರಿಲೀಸ್‌ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ಚೆನ್ನೈ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಯಶ್; ಕೆಜಿಎಫ್-2 ಬಳಿಕ ಮತ್ತೊಮ್ಮೆ ಹಳೆಯ ಸಂಪ್ರದಾಯ ಮುಂದುವರಿಕೆ
- ಟಾಕ್ಸಿಕ್ ರಿಲೀಸ್‌ಗೂ ಮುನ್ನ ಧರ್ಮಸ್ಥಳದಲ್ಲಿ ಯಶ್!
- ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಸುದ್ದಿದಿನ,ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಕಾರ್ಯಕ್ರಮ ಮುಗಿದ ಬಳಿಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
http://Visit : www.suddidina.com
ರಿಲೀಸ್‌ಗೂ ಮುನ್ನ ದೇವರ ದರ್ಶನದ ಸಂಪ್ರದಾಯ
ಸಿನಿಮಾ ಬಿಡುಗಡೆಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆಯುವುದು ಯಶ್ ಅವರಲ್ಲಿ ಹಿಂದಿನಿಂದಲೂ ಕಂಡುಬರುವ ಸಂಪ್ರದಾಯ. ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯ ಮುನ್ನವೂ ಯಶ್ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದೀಗ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಯಶ್ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಹರಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅವರ ದೇವಸ್ಥಾನ ಭೇಟಿ ಅಭಿಮಾನಿಗಳ ಗಮನ ಸೆಳೆದಿದೆ.
ಟಾಕ್ಸಿಕ್ ಮೇಲೆ ಭಾರಿ ನಿರೀಕ್ಷೆ
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿದೆ.
ಯಶ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ನಯನತಾರಾ ಸೇರಿದಂತೆ ಬಹುಭಾಷಾ ತಾರೆಯರ ದೊಡ್ಡ ಬಳಗವೇ ಇದೆ. ಹೀಗಾಗಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಹಾಗೂ ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ಟಿಕೆಟ್ ದರಕ್ಕೆ ಶಾಕ್!
‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಕೆಲವು ಪ್ರೀಮಿಯಂ ಥಿಯೇಟರ್‌ಗಳಲ್ಲಿ ಟಿಕೆಟ್ ದರ ₹3,600ರ ಗಡಿ ತಲುಪಿರುವುದು ಗಮನ ಸೆಳೆದಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ರೆಕ್ಲೈನರ್ ಟಿಕೆಟ್‌ಗಳು ₹700ರಿಂದ ₹1,600ರವರೆಗೆ ಲಭ್ಯವಿದ್ದರೆ, ಕೆಲವು ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ ದರ ಇನ್ನಷ್ಟು ಹೆಚ್ಚಾಗಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿ ‘ಟಾಕ್ಸಿಕ್’ ಸುಮಾರು ₹18.73 ಕೋಟಿ ಮುಂಗಡ ಬುಕ್ಕಿಂಗ್ ದಾಖಲಿಸಿದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಯ ನಡುವೆಯೂ ಬುಕ್ಕಿಂಗ್ ವೇಗ ಕುಂದಿಲ್ಲ.
ರಿಲೀಸ್‌ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ನಾಳೆ ತೆರೆಗೆ ‘ಟಾಕ್ಸಿಕ್’
ಯಶ್ ಮತ್ತು ಗೀತು ಮೋಹನ್‌ದಾಸ್ ಕಥೆ ಬರೆದಿರುವ ಈ ಚಿತ್ರವು ಭಿನ್ನ ಕಥಾಹಂದರ ಹಾಗೂ ಭರ್ಜರಿ ಆಕ್ಷನ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ. ಈಗ ಧರ್ಮಸ್ಥಳದ ಸನ್ನಿಧಿಯಲ್ಲಿ ಯಶ್ ಪಡೆದ ಆಶೀರ್ವಾದದ ಬೆನ್ನಲ್ಲೇ, ನಾಳೆ ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ







