Connect with us

ರಾಜಕೀಯ

ಕಾಂಗ್ರೆಸ್ ನಲ್ಲಿ ಸಿದ್ದು ಬಗ್ಗೆ ಇದೆ ಸಾಫ್ಟ್ ಕಾರ್ನರ್ !

Published

on

  • ಎಚ್‌ಡಿಕೆಗೆ ಸಿದ್ದು ಗೈಡ್ ಆಗಿರಲಿ
  • ಹಣಕಾಸು ವಿಚಾರದಲ್ಲಿ ಸಿದ್ದರಾಮಯ್ಯ ಅವರಷ್ಟು ಚಾಣಾಕ್ಷರು ಮತ್ತೊಬ್ಬರಿಲ್ಲ
  • ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಫೇಸ್‌ಬುಕ್‌ನಲ್ಲಿ ಸಿಗುತ್ತಿದೆ ಒಮ್ಮತ
ಸುದ್ದಿದಿನ ವಿಶೇಷ : ಈ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲಿನ ಎಲ್ಲ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹೊರಿಸಿದೆ. ಕೆಪಿಸಿಸಿ ಸಭೆಯಲ್ಲಿ ಈ ಕೈ ಮುಖಂಡ ಕೋಳಿವಾಡ ಅವರು ನಡೆದುಕೊಂಡ ವರ್ತನೆಯು ಇದಕ್ಕೆ ಕನ್ನಡಿ ಹಿಡಿದಂತಿತ್ತು.
ಆಡಳಿತ ವಿರೋಧಿ ಅಲೆ ಇಲ್ಲದಿರುವಾಗ ಸಿದ್ದರಾಮಯ್ಯ ಅವರ ಏಕ ಪಕ್ಷೀಯ ನಿರ್ಧಾರಗಳೇ ಸೋಲಿಗೆ ಕಾರಣವಾಯಿತು ಎಂಬ ಚರ್ಚೆಗಳೂ ಚಾಲ್ತಿಯಲ್ಲಿವೆ. ಆದರೆ, ಕೈ ಪಾಳಯದೊಳಗೆ ಸಿದ್ದರಾಮಯ್ಯ ಅವರ ಕುರಿತು ಕೆಲ ಮುಖಂಡರು ಒಳ್ಳೆಯ ಅಭಿಪ್ರಾಯ ಅದರಲ್ಲೂ ಸಾಫ್ಟ್ ಕಾರ್ನರ್ ಹೊಂದಿರುವುದು ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.
ಫೇಸ್‌ಬುಕ್‌ನಲ್ಲಿ ಬರಹಗಾರ ರಾಜಾರಾಂ ತಳ್ಳೂರ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದು, ಇದಕ್ಕೆ ಚಿಂತಕರು, ವಾಗ್ಮಿಗಳು, ಬರಹಗಾರರು ಮೊದಲಾದ ಗಣ್ಯರ ಪಡೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಪೋಸ್ಟ್ ಹೀಗಿದೆ:

ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವ ಮುನ್ನ ಸ್ಪೀಕರ್ ಮಾತನಾಡುತ್ತಾ: ರಾಜನೀತಿ ತಜ್ನನಾಗಿ ಒಂದು ಮಾತು ಹೇಳ್ತೇನೆ. ಇದು ಸ್ಪೀಕರ್ ಕುರ್ಚಿಯಿಂದ ಹೇಳುವ ಮಾತಲ್ಲ ಅಥವಾ ರಾಜಕೀಯ ಪಕ್ಷದ ಪ್ರತಿನಿಧಿ ಆಗಿಯೂ ಹೇಳುವ ಮಾತಲ್ಲ.
ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಬಿಲ್ ಸ್ವಲ್ಪವೂ ಉಲ್ಲಂಘನೆ ಆಗದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಅದಕ್ಕೆ ಹಣಕಾಸನ್ನೂ ವ್ಯವಸ್ಥೆ ಮಾಡಿ, ಯಾವುದೇ ಸರ್ಕಾರಿ ಚೆಕ್ ಬೌನ್ಸ್ ಆಗದಂತೆ ಅದನ್ನೆಲ್ಲ ಜಾರಿ ಮಾಡಿದ ಸಿದ್ದರಾಮಯ್ಯ ಹಣಕಾಸು ಸಚಿವರಾಗಿಯೂ ಹಲವು ಸಂಪುಟಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಇರುವವರು. ಹೆಚ್ಚಿನಂಶ ಪ. ಬಂಗಾಳದ ಕಮ್ಯುನಿಸ್ಟ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅಶೋಕ್ ಮಿತ್ರಾ ಬಿಟ್ಟರೆ ಇಂತಹ ಹಣಕಾಸಿನ ಶಿಸ್ತು ಹೊಂದಿದ್ದ ದೇಶದ ಮತ್ತೊಬ್ಬ ಹಣಕಾಸು ಸಚಿವರೆಂದರೆ ಸಿದ್ಧರಾಮಯ್ಯ ಎಂದರು. ಜೊತೆಗೆ ಹೊಸ ಮುಖ್ಯಮಂತ್ರಿಗಳಿಗೆ ಸಿದ್ಧರಾಮಯ್ಯ ಅವರಿಂದ ಸಲಹೆಗಳನ್ನು ಪಡೆದು ಮುಂದುವರಿಯಲು ಹೇಳಿದರು.
ಹೆಚ್ಚಿನಂಶ ಮಾಜೀ ಮುಖ್ಯಮಂತ್ರಿಯೊಬ್ಬರು ತನ್ನ ಸಾರ್ವಜನಿಕ ಸೇವೆಗಾಗಿ ಸಂಸದೀಯ ಸೀಟೊಂದರಿಂದ ಪಡೆಯಬಹುದಾದ ಅತಿದೊಡ್ಡ ಮಾತಿನ ಗೌರವ ಇದು.
ರಾಜಾರಾಂ ಅವರ ಈ ಪೋಸ್ಟ್ ಫೇಸ್‌ಬುಕ್‌ನಲ್ಲಿ ಕಂಡ ಕೂಡಲೇ ಹಲವರು ಸಿದ್ದರಾಮಯ್ಯ ಅವರ ಪರ ಭಾವನಾತ್ಮಕವಾದ ಸಾಲುಗಳನ್ನು ಬರೆದಿದ್ದಾರೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಅರಸು ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಾರೆ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತವಾಗಿದೆ.  ಫೇಸ್‌ಬುಕ್‌ನಲ್ಲಿ ವ್ಯಕ್ತವಾಗಿರುವ ಕೆಲವು ಕಮೆಂಟ್‌ಗಳು ಇಲ್ಲಿವೆ.

ದಿನೇಶ್ ಅಮಿನ್ ಮಟ್ಟು

ಇದೇ ಮಾತನ್ನು ಮಾಜಿಪ್ರಧಾನಿ ಮನಮಮೋಹನ್ ಸಿಂಗ್ ಬೆಂಗಳೂರಿನಲ್ಲಿ ಹೇಳಿದ್ದರು. ಸಿಂಗ್ ಅವರ ಮಾತಿನಲ್ಲಿ ಸ್ವಲ್ಪ ಪಶ್ಚಾತಾಪ ಮತ್ತು ಸ್ವಲ್ಪ ಅಪರಾಧಿ ಪ್ರಜ್ಞೆ ಕೂಡಾ ಇತ್ತೆಂದು ನನಗನಿಸಿತ್ತು.

ಗೋವಿಂದ ರಾಜ್ ಬೈಚನಕುಪ್ಪೆ

ದೂರದರ್ಶಿತ್ವ, ಮತ್ಸದ್ದಿತನ, ತಾಳ್ಮೆ ಗಾಂಭೀರ್ಯ, ಮಾತು ಮತ್ತು ಮೌನಗಳ ತಿಳುವಳಿಕೆ ಸಿದ್ದರಾಮಯ್ಯ ಅವರಲ್ಲಿ ಅಪಾರವಾಗಿದ್ದವು…( ನಮ್ಮಲ್ಲಿ ಅಧಿಕಾ ಸಿಗಲಿಲ್ಲವೆಂದೂ, ಸಿಕ್ಕ ಅಧಿಕಾರ ಹೋಯ್ತು ಎಂದೂ, ಖಾಸಗಿ ವಿಚಾರಗಳಿಗೂ ಆಶ್ರುಧಾರೆಯರಿಸುವ ರಾಜಕಾರಣಿಗಳು ಬಹಳ ಇದ್ದಾರೆ. ಆದರೆ ಸಿದ್ದು ಆ ಕೆಟಗರಿ ಅಲ್ಲ. ಮಗ ಸತ್ತಾಗ ಕೂಡ ಜನರ ಮುಂದೆ ಕಣ್ಣೀರಾಕಲಿಲ್ಲ. ಸಾಂಸತ್ವನ ಹೇಳಲು ಬಂದುದ್ದವರು ಕಣ್ಣೀರು ಹಾಕಿ ಆಶ್ಚರ್ಯ ಮೂಡಿಸಿದ್ದರು)
ಇನ್ನು ಮ.ಸಿಂಗ್ ಹಾಗೂ ಸಿದ್ದು ಇಬ್ಬರಲ್ಲೂ ಈ ವಿಚಾರದಲ್ಲಿ ಸಾಮ್ಯತೆ ಇದೆ…
ದೇಶ, ಧರ್ಮ, ಹುಟ್ಟು, ಸಾವುಗಳನ್ನೇ ಬಂಡವಾಳ ಮಾಡಿಕೊಂಡು ಭಾವನಾತ್ಮಕ ರಾಜಕಾರಣವವರು ಈ ಇಬ್ಬರಿಂದಲೂ ಕಲಿವುದು ಸಾಕಷ್ಟಿದೆ…

ಮಂಜುನಾಥ್ ಚಾಂದ್

ಮನ್ನಾಗಳ ದೊಡ್ಡ ಸಂತೆಯೇ ಇರುವ ಜೆಡಿಎಸ್ ಪ್ರಣಾಳಿಕೆಯನ್ನು ಈಡೇರಿಸುವುದಲ್ಲ, ನಿಭಾಯಿಸುವುದಕ್ಕೆ ಸಿದ್ದರಾಮಯ್ಯನವರೇ ಮುಂಚೂಣಿಯಲ್ಲಿ ನಿಲ್ಲಬೇಕಾಗುತ್ತದೆ. ಇಲ್ಲವಾದರೆ ಸರಕಾರ ಮಕಾಡೆ ಮಲಗಬೇಕಾಗುತ್ತದೆ.

ರಾಘವೇಂದ್ರ ಹೆಗಡೇಕರ್

 ಸಿದ್ಧರಾಮ್ಯನವರ ಬಡವರ ಪರ ಯೋಜನೆಗಳು ಹೆಚ್ಚು ಪ್ರಚಾರವಾಗದೆ ಮೇಲ್ವರ್ಗದ ಕುರಿತ ಅವರ ಉಡಾಪೆ ಮತ್ತು ವಿರೋಧಿ ನೀತಿಗಳೆ ಅಗತ್ಯಕ್ಕಿಂತ ಹೆಚ್ಚು ಪ್ರಚಾರವಾಗಿ ಅವರಿಗೆ ಮುಳುವಾಯಿತು..

ನವೀನ್ ತೀರ್ಥಹಳ್ಳಿ

ನಿಜಕ್ಕೂ ಸಿದ್ದರಾಮಯ್ಯನವರು ದೇವರಾಜ ಅರಸು ಅವರಂತ ಬಲಿಷ್ಠ ಯೋಗ್ಯ ಮುಖ್ಯಮಂತ್ರಿ ಯಾಗಿದ್ದರು
ಈ ನಾಡಿನ ಮತದಾರ ಜಾತೀವಾದಿಗಳ
ಹುನ್ನಾರ ಕ್ಕೆ ಬಲಿಯಾಗಿ ಕಾಂಗ್ರೆಸ್‌ಗೆ ಕಡಿಮೆ ಮತ ಹಾಕಿದ ಅದರಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಯಾಗುವುದು ತಪ್ಪಿ ಹೋಗಿದೆ.

ವೀರಭದ್ರ ಭದ್ರ

 ದೂರದರ್ಶಿತ್ವ, ಮತ್ಸದ್ದಿತನ, ತಾಳ್ಮೆ ಗಾಂಭೀರ್ಯ, ಮಾತು ಮತ್ತು ಮೌನಗಳ ತಿಳುವಳಿಕೆ ಸಿದ್ದರಾಮಯ್ಯ ಅವರಲ್ಲಿ ಅಪಾರವಾಗಿದ್ದವು…( ನಮ್ಮಲ್ಲಿ ಅಧಿಕಾ ಸಿಗಲಿಲ್ಲವೆಂದೂ, ಸಿಕ್ಕ ಅಧಿಕಾರ ಹೋಯ್ತು ಎಂದೂ, ಖಾಸಗಿ ವಿಚಾರಗಳಿಗೂ ಆಶ್ರುಧಾರೆಯರಿಸುವ ರಾಜಕಾರಣಿಗಳು ಬಹಳ ಇದ್ದಾರೆ. ಆದರೆ ಸಿದ್ದು ಆ ಕೆಟಗರಿ ಅಲ್ಲ. ಮಗ ಸತ್ತಾಗ ಕೂಡ ಜನರ ಮುಂದೆ ಕಣ್ಣೀರಾಕಲಿಲ್ಲ. ಸಾಂಸತ್ವನ ಹೇಳಲು ಬಂದುದ್ದವರು ಕಣ್ಣೀರು ಹಾಕಿ ಆಶ್ಚರ್ಯ ಮೂಡಿಸಿದ್ದರು)
ಇನ್ನು ಮ.ಸಿಂಗ್ ಹಾಗೂ ಸಿದ್ದು ಇಬ್ಬರಲ್ಲೂ ಈ ವಿಚಾರದಲ್ಲಿ ಸಾಮ್ಯತೆ ಇದೆ…ದೇಶ, ಧರ್ಮ, ಹುಟ್ಟು, ಸಾವುಗಳನ್ನೇ ಬಂಡವಾಳ ಮಾಡಿಕೊಂಡು ಭಾವನಾತ್ಮಕ ರಾಜಕಾರಣವವರು ಈ ಇಬ್ಬರಿಂದಲೂ ಕಲಿವುದು ಸಾಕಷ್ಟಿದೆ…

ಚೆನ್ನರಾಜು

ಅಗೋರಿಗಳನ್ನು ನಂಬುವ ಯಡ್ಡಿ, ಜೋತಿಷ್ಯವನ್ನು ನಂಬುವ ಕುಮಾರಸ್ವಾಮಿ ಇವರ ನಡುವೆ ಸಿದ್ದರಾಮಯ್ಯ ಎಂಬ ನೈತಿಕ ಗುರುವೊಬ್ಬರಿದ್ದಾರೆ ಎಂದರೆ ನಂಬಲಾಗದು. ಅವರಿಗೆ ಇದುವರೆಗೂ ಯಾವ ಸ್ಥಾನವೂ ನೀಡದೆ ಎಲ್ಲಿ ಮೂಲೆಗುಂಪಾಗಿ ಬಿಡುವರೋ ಎಂಬ ಆತಂಕವಿದೆ. ಒಂದಂತು ನಿಜ ನೈತಿಕ ಸ್ವಾಭಿಮಾನದ ಸಮಾಜವಾದಿ ರಾಜಕಾರಣಿ ಸಿದ್ದರಾಮಯ್ಯ . ಲವ್ ಯು ಎರ್ ಸರ್

ಲೋಕೇಶ್ ಮುನಿಯಪ್ಪ

ಬಹುಶಃ ಭಾರತದ ರಾಜಕೀಯದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ತಾನು ಇಷ್ಟು ಮಾಡುತ್ತೇನೆ(ಸಿದ್ದರಾಯ್ಯ ಅದನ್ನು ಚುನಾವಣಾಆಶ್ವಾಸನೆಯಾಗಿ ಹೇಳಿರಲಿಲ್ಲ)ಎಂದು ಹೇಳಿದನ್ನು ಚ್ಯುತಿ ಇಲ್ಲದೇ ಪಾಲಿಸಿದರು. ಖಂಡಿತವಾಗಿಯೂ ಅದು ಎಲ್ಲರಿಗೂ ಸಾದ್ಯವಿರಲಿಲ್ಲ. ನಮಸ್ಕಾರ ಸಾರ ನೀವು ನಮ್ಮ ಜೊತೆಗಿರುತ್ತೀರಾ..

ಚಿದಂಬರ್ ಜೋಷಿ

ಮಾನ್ಯ ಸಿದ್ದರಾಮಯ್ಯ ಸಾಹೇಬರದು ಉನ್ನತ ವ್ಯಕ್ತಿತ್ವ, ಕಳಂಕ ರಹಿತ ಸಮಾಜ ಸೇವೆ, ಇಷ್ಟೊಂದು ವರ್ಷ ರಾಜಕೀಯದಲ್ಲಿದ್ದರೂ ಅವರ ಅಣ್ಣತಮ್ಮಂದಿರುಗಳಿಗೆ ಯಾವುದೇ ಸಹಾಯ ಮಾಡಿರದ ವ್ಯಕ್ಕಿ— ಸನ್ಮಾನ್ಯ ಮೋದೀಜಿಯವರ ಹಾಗೆ, ಚಾಣಾಕ್ಷ ನಡೆ ಹೊಂದಿದವರು, ಐದು ವರ್ಷ ಮುಖ್ಯಮಂತ್ರಿಯಾಗಿ ಯಾವ ಕಪ್ಪು ಚುಕ್ಕೆ ಇಲ್ಲದೇ ಇರುವದು ಸಾಮಾನ್ಯ ಮಾತಲ್ಲ. ಹಗರಣಗಳಂತೂ ಇಲ್ಲವೇ ಇಲ್ಲ.

ದಿನದ ಸುದ್ದಿ

ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ

Published

on

ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ  2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆಶ್ರಯ ಯೋಜನೆ – ಆವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್‌ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್‌ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ

Published

on

ಸುದ್ದಿದಿನ,ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದು, ಯುವಕರು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ತ್ವರಿತ ಪರಿಹಾರವೇ ತಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಜೊತೆಗೆ ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ “ಭಾರತ್ ಜೋಡೋ ಯುವ ಸಂಘ”ಗಳ ರಚನೆಗೆ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು. ಈ ಸಂಘಟನೆಗಳು ಸಾಮಾಜಿಕ ಸೌಹಾರ್ದತೆ ಮತ್ತು ಯುವಜನರ ಸಬಲೀಕರಣಕ್ಕೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ವಿಶೇಷವಾಗಿ ಬೆಂಗಳೂರಿನ ಹದಗೆಟ್ಟ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜನರು ಎದುರಿಸುತ್ತಿರುವ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಮನೆ ನಿರ್ಮಾಣ ಹಾಗೂ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆಗಳ ಪರಿಹಾರಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಜನಸಾಮಾನ್ಯರ ಬದುಕಿಗೆ ನೇರವಾಗಿ ಸಂಬಂಧಿಸಿದ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ತಮ್ಮ ಜೀವನದ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡು ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ರಾಜ್ಯದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದ್ದು, ಪಾರದರ್ಶಕ ಮತ್ತು ಉತ್ತರದಾಯಿ ಆಡಳಿತ ನೀಡುವುದು ತಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

“ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರವನ್ನು ನೀಡುತ್ತೇವೆ. ಯುವಕರು, ರೈತರು, ಮಹಿಳೆಯರು ಮತ್ತು ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದುವಾಗಿರುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ವಸತಿ ಯೋಜನೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ. ಈ...

ದಿನದ ಸುದ್ದಿ3 days ago

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ...

ದಿನದ ಸುದ್ದಿ3 days ago

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ...

ದಿನದ ಸುದ್ದಿ3 days ago

ಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ 12 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ....

ದಿನದ ಸುದ್ದಿ3 days ago

ಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕೃಷಿ ಇಲಾಖೆ ಹಾಗೂ ಆತ್ಮ (ATMA) ಯೋಜನೆಯಡಿ 2026-27ನೇ ಸಾಲಿನ ವಿವಿಧ ಕೃಷಿ ಪ್ರಶಸ್ತಿಗಳಿಗಾಗಿ ದಾವಣಗೆರೆ ಜಿಲ್ಲೆಯ ಅರ್ಹ ಹಾಗೂ ಆಸಕ್ತ ರೈತ ಮತ್ತು ರೈತ...

ಅಂಕಣ5 days ago

ಕವಿತೆ | ದೇವರ ಹೂವು

~ ಡಾ. ಸಿ.ಬಿ.ಐನಳ್ಳಿ ಊಟ ಮಾಟ ವೇಷ ಭಾಷೆ ಪ್ರಾರ್ಥನೆ ಬೇರೆ ಬೇರೆ ಪವಿತ್ರಪಠ್ಯ ಅವನದೊಂದು ನನ್ನದಿನ್ನೊಂದಂತೆ ನದಿ ದಂಡೆಯ ಮೇಲೆ ನೋಟ ಬೆರೆತು ಮಾತು ಮರೆತು...

ದಿನದ ಸುದ್ದಿ5 days ago

ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ

ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ...

ದಿನದ ಸುದ್ದಿ6 days ago

ಆಶ್ರಯ ಯೋಜನೆ – ಆವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್‌ 30...

ದಿನದ ಸುದ್ದಿ1 week ago

ಗರಿಕೆ ಹುಲ್ಲಿನ ಜ್ಯೂಸ್‌ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ

ಗಿರೀಶ್ ಮುತ್ತು ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು...

ದಿನದ ಸುದ್ದಿ1 week ago

ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ

ಸುದ್ದಿದಿನ,ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದು, ಯುವಕರು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ...

Trending