ದಿನದ ಸುದ್ದಿ
ಮೊಣಕಾಲ್ಮೂರು | ಪರಿಶಿಷ್ಟ ಪಂಗಡದ ಪಟ್ಟಿಯಿಂದ ‘ನಾಯಕ’ ಪದ ಕೈಬಿಟ್ಟಿರುವುದನ್ನು ವಿರೋಧಿಸಿ ನಾಳೆ ಪ್ರತಿಭಟನೆ
ಸುದ್ದಿದಿನ, ಚಿತ್ರದುರ್ಗ (ಮೊಣಕಾಲ್ಮೂರು) : ಪರಿಶಿಷ್ಟ ಪಂಗಡದ ಪಟ್ಟಿಯಿಂದ ಕೈಬಿಟ್ಟಿರುವ “ನಾಯಕ’ ಪದವನ್ನು ಕೂಡಲೇ ನಾಡ ಕಛೇರಿ ಕೇಂದ್ರದ ಅಂತರ್ಜಾಲದಲ್ಲಿ ಸೇರಿಸಿ “ನಾಯಕ” (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರ ನೀಡಲು ಸರ್ಕಾರವನ್ನು ಒತ್ತಾಯಿಸಿ ನಾಳೆ ಮಂಗಳವಾರ ಮೊಣಕಾಲ್ಮೂರು ತಹಶೀಲ್ದಾರರ ಕಛೇರಿ ಮುಂದೆ ಮ್ಯಾಸ ಬುಡಕಟ್ಟು ಸಂರಕ್ಷಣಾ ಸಮಿತಿಯು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಬಳ್ಳಾರಿ, ವಿಜಯನಗರ, ಹಾಗೂ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಯ್ಕಡ ಬುಡಕಟ್ಟಿಗೆ ಸೇರಿದ ನಾಯಕ ಅಥವಾ ನಾಯ್ಕ ಪಂಗಡದವರಾದ ಮಾಸ ನಾಯಕ ಅಥವಾ ಮಾಸ ಬೇಡರಿಗೆ 1976 ಮತ್ತು 1991 ನೇ ಸಾಲಿನಿಂದ 2021ನೇ ಸಾಲಿನವರೆಗೂ ಪರಿಶಿಷ್ಟ ಪಂಗಡದ “ನಾಯಕ” ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದರೆ ಪರಿಶಿಷ್ಟ ಪಂಗಡದ “ನಾಯಕ ಪ್ರಮಾಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ ಈಗ ಸುಮಾರು 5-6 ತಿಂಗಳಿಂದ ನಾಡ ಕಛೇರಿ (ಅಟಲ್ ಜಿ ಜನಸ್ನೇಹಿ ಕೇಂದ್ರದ ಅಂತರ್ಜಾಲದಲ್ಲಿ ಪರಿಶಿಷ್ಟ ಪಂಗಡದ ನಾಯಕ ” ಎಂಬ ಪದವನ್ನು ಕೈ ಬಿಡಲಾಗಿದೆ ಮತ್ತು ನಾಯಕ ಎಂದು ಎಸ್ ಟಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ.
ನಾಯಕ Nayaka’ ಬದಲಾಗಿ (Nayaka (Including Parivara and Talawara)) (ನಾಯಕ(ಪರಿವಾರ ತಳವಾರ ಸೇರಿದಂತೆ)) ಅಥವಾ ನಾಯಕ(ಪರಿವಾರ) ಅಥವಾ ನಾಯಕ (ತಳವಾರ) ಎಂದು ನೀಡಲಾಗುತ್ತಿದೆ. ಸರ್ಕಾರದ ಈ ಸಂವಿಧಾನ ವಿರೋಧಿ ಕ್ರಮವು ನಿಜವಾದ ನಾಯ್ಕಡ-ನಾಯಕ ಪಂಗಡದವರಿಗೆ ಕಾನೂನಿನ ಹಾನಿಯುಂಟು ಮಾಡಿದೆ.
“ಯಾರು ತಳವಾರ ಮತ್ತು ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಬೇಡಿಕೆಯನ್ನು ಇಟ್ಟರೂ, ಯಾರು ತಳವಾರ ಮತ್ತು ಪರಿವಾರ ಎಂದು ಎಸ್ ಟಿ ಪ್ರಮಾಣ ಪತ್ರ ಕೋರಿ ಅರ್ಜಿಸಲ್ಲಿಸುತ್ತಾರೋ ಅವರಿಗೆ ನೀಡಲಿ.” ಅದು ಬಿಟ್ಟು ಮೂಲ ನಾಯಕ ಪಂಗಡದವರಾದ ನಮಗೆ ನಾಯಕ ಪುಮಾಣ ಪತ್ರವನ್ನು ಕೊಡದ ಹೊಸ ಜಾತಿಯನ್ನು ಬರೆದುಕೊಳ್ಳುವಂತೆ ಮಾಡಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕೂಡಲೇ ಸರ್ಕಾರ ನಾಯಕ (ಪರಿಶಿಷ್ಟ ಪಂಗಡ) ಎಂದು ಪ್ರಮಾಣ ಪತ್ರವನ್ನು ನೀಡುವಂತೆ ಕೋರುತ್ತೇವೆ ಎಂದು ತಿಳಿಸಿದ್ದಾರೆ.
1976 ರಿಂದ ಮಾಸ ನಾಯಕರ ಬುಡಕಟ್ಟು, ಲಕ್ಷಣಗಳನ್ನು ಆಧಾರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂದು ಮಾಸ ನಾಯಕರಿಗೆ “ನಾಯಕ” ಎಂದೇ ಎಸ್ ಟಿ ಪ್ರಮಾಣ ಪತ್ರ ಕೊಡಲಾಗುತ್ತಿತ್ತು. ಆದರೆ ನಮಗೆ ನಮ್ಮ ಪಂಗಡದ ಹೆಸರನ್ನು ಬದಲಾವಣೆ ಮಾಡಿ ನಾಯಕ (ಪರಿವಾರ ಮತ್ತು ತಳವಾರ) ಎಂದು ನಮೂದಿಸಿ ನಮ್ಮ ಬುಡಕಟ್ಟಿನ ಮೂಲ ಹೆಸರನ್ನೆ ಇಲ್ಲದಂತೆ ಮಾಡಿರುತ್ತಿರಿ. ನಮಗೂ ಪರಿವಾರ ಮತ್ತು ತಳವಾರ ಜಾತಿಯವರಿಗೂ ಯಾವುದೇ ಸಂಬಂಧವಿರುವುದಿಲ್ಲ. ದುರುದ್ದೇಶದಿಂದ ಈ ರೀತಿ ಕಾನೂನನ್ನು ಮಾಡಿ ಮೂಲ ಬುಡಕಟ್ಟು ಜನರಿಗೆ ಕಾನೂನು ತೊಡಕನ್ನು ಉಂಟು ಮಾಡುತ್ತಿರುವುದಲ್ಲದೆ ನಮ್ಮ ಮೂಲ ಪಂಗಡದ ಹೆಸರನ್ನು ನಿರ್ನಾಮ ಮಾಡಲು ಹೊರಟಿರುತ್ತೀರಿ ಎಂದಿದ್ದಾರೆ.
ಆದ್ಯರಿಂದ ಮಾಸ ನಾಯಕರಾದ ನಮಗೆ “ನಾಯಕ’ ಎಂದೇ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಮಾತ್ರ ನೀಡಲು ಒತ್ತಾಯಪೂರ್ವಕವಾಗಿ ವಿನಂತಿಸುತ್ತಿದ್ದೇವೆ. ನಮ್ಮ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳಲ್ಲಿ ತಳವಾರ ಪರಿವಾರ ಎಂಬ ಹೆಸರಗಳನ್ನು ನಮೂದಿಸುವಂತಿಲ್ಲ. ಇತ್ತೀಚೆಗೆ ಸಂಸತ್ ನಲ್ಲಿ ಮಾಡಿರುವ The Counstitution (Scheduled Tribes) Order (Amendment) Act,2020ರ ಪುಕಾರ ನಮ್ಮ ಮೂಲ ನಾಯ್ಕಡ ನಾಯಕ ಪಂಗಡದ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಯಾವುದೇ ಕಾನೂನನ್ನು ಮಾಡಿರುವುದಿಲ್ಲ. ಆದರೂ ಸಹ ತಪ್ಪು ತಪ್ಪಾಗಿ ಕಾನೂನನ್ನು ಅರ್ಥೈಸಿ ಬುಡಕಟ್ಟು ಜನರ ಅಸ್ತಿತ್ವವನ್ನು ನಿರ್ನಾಮ ಮಾಡುತ್ತಾ ಹಕ್ಕುಗಳನ್ನು ಅಪಹರಿಸಲು ಸಂಚನ್ನು ಮಾಡಲಾಗುತ್ತಿದೆ.
ಆದ್ದರಿಂದ ಎಲ್ಲಾ ರೀತಿಯಿಂದ ಸರ್ಕಾರದ ಈ ನಡೆಯನ್ನು ಪರಿವಾರ ತಳವಾರ ಜಾತಿಯವರ ಕುಯಿಕ್ತಿಯಂತೆ ಮಾಡುತ್ತಿರುವುದು ನಮ್ಮ ವ್ಯಾಸ ನಾಯಕರಿಗೆ ಬಾರಿ ಅನಾವಾಗುತ್ತಿದೆ. ಆದ್ದರಿಂದ ಈ ಕೂಡಲೇ ಮೊದಲಿನ ರೀತಿಯಲ್ಲಿ ನಾಯಕ (ಪರಿಶಿಷ್ಟ ಪಂಗಡ) ಎಂದು ಮಾತ್ರ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು.
ಆದ್ದರಿಂದ ನಮ್ಮ ಬುಡಕಟ್ಟು ಜನಾಂಗದ ಎಲ್ಲಾ ಬಂಧುಗಳು ಈ ಒಂದು ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


