ಲೈಫ್ ಸ್ಟೈಲ್
ಕಸದಿಂದ ರಸ | ಪ್ಲಾಸ್ಟಿಕ್ ಬಾಟಲ್ ಗಳನ್ನು ಹೀಗೂ ಬಳಸಿಕೊಳ್ಳಬಹುದು..!

ಬಸ್ಸ್ಟಾಂಡ್, ರಸ್ತೆಯ ಬದಿಯಲ್ಲಿ, ಕಸದ ತೊಟ್ಟಿಗಳಲ್ಲಿ ಎನ್ನದೆ ನಿರೂಪಯುಕ್ತ ಕುಡಿಯುವ ನೀರಿನ ಬಾಟಲಿಗಳು ಎಲ್ಲಂದರಲ್ಲಿ ಬಿದ್ದು ಉರುಳಾಡುತ್ತಿರುತ್ತವೆ. ಇಂತಹ ಬಾಟಲಿಗಳಲಿಂದ ಕೃಷಿಯಲ್ಲಿ ಒಂದು ವಿಭಿನ್ನವಾದ ರೀತಿಯಲ್ಲಿ ಹೊಸ ರೂಪವನ್ನ ನೀಡಿಬಹುದಾಗಿದೆ. ಇವುಗಳಲ್ಲಿ ದಿನನಿತ್ಯ ಜೀವನದಲ್ಲಿ ಬೇಕಾದ ಸೊಪ್ಪನ್ನು ಬೆಳೆಸಿ ಎಳೆ ಚಿಗುರನ್ನು ನೋಡುತ್ತಾ ಸಂಭ್ರಮವನ್ನು ಆನಂದಿಸಬಹುದಾಗಿದೆ.
ಅದೊಂದು ದಿನ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಬಸ್‍ನಲ್ಲಿ ಬರುವಾಗ ನಡೆದ ಘಟನೆಯಿದು. ನನ್ನ ಪಕ್ಕ ಸೀಟ್‍ನಲ್ಲಿ ಹಾಗೂ ನುಂದಿನ ಸೀಟ್‍ನಲ್ಲಿ ಕೆಲವು ಹುಡಗ ಹುಡುಗಿರ ಗುಂಪು ಕುತುಕೊಂಡು ಮಾತನಾಡುತ್ತಿದ್ದರು. ನಾನು ಪುಸ್ತಕ ಓದುತ್ತಿದೆ. ನನಗೆ ಅವರ ಚರ್ಚೆ ಪುಸ್ತಕ ಓದಲು ಅಡಚಣೆ ಮಾಡಿದರು ಕೂಡಾ ಆಸಕ್ತಿದಾಯವಾಗಿತ್ತು. ಅದೇನು ಅಂತಿರಾ ಹಾಗಾದರೆ ಮುಂದೆ ಓದಿ.
ನಾನು ಸುಮ್ಮನೆ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಂಡೆ. ನಂತರ ನಾನು ಕೂಡಾ ಅವರೊಂದಿಗೆ ಮಾತು ಬೆಳೆಸಿದಾಗ ನನಗಂತ್ತು ಒಂದು ಅದ್ಬುತವಾದ ವಿಷಯ ತಿಳಿದುಕೊಂಡೆ. ಅದರಲ್ಲು ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದರ ಬರುಬಳಕೆ ಹೇಗೆ ಮಾಡಬೇಕು ಎನ್ನುವುದನ್ನು ಅರಿತುಕೊಂಡೆ. ಅದನೆ ನನ್ನ ಅನುಭವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ.
ಪ್ಲಾಸ್ಟಿಕ್ ಬಕಳಕೆಯು ತುಂಬಾ ಅಪಾಯಕಾರಿಯಾಗಿದೆ. ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮಾಡುತ್ತಿದ್ದಾರೆ. ಒಂದು ತಿಂಗಳು ಗಲ್ಲಿ ಗಲ್ಲಿ ಸುತ್ತಿ, ಹೋಟೆಲ್‍ಗಳು, ಅಂಗಡಿಗಳಿಂದ ನೀರು, ತಂಪು ಪಾನೀಯ ಕುಡಿದು ಎಸೆದ ಬಾಟಲಿಗಳನ್ನು ಸಂಗ್ರಹಿಸಿದರು. ನಂತರ ಸಗ್ರಹಿಸಿದ ಬಾಟಲಿಗಳಿಗೆ ಜೀವಕಳೆ ತುಂಬಿ, ಪರಿಸರ ಮಾಲಿನ್ಯ ತಡೆಗಟ್ಟಲು ವಿದ್ಯಾರ್ಥಿಗಳ ಪುಟ್ಟ ಪ್ರಯತ್ನನೊಂದಿಗೆ ಅಡಿಗಲ್ಲನ್ನು ಹಾಕಿದ್ದಾರೆ.
ಕಾಲೇಜಿನ ಎದುರು ಇರುವ ನಾಲ್ಕು ಕಂಬಗಳ ನಡುವೆ ವರ್ಟಿಕಲ್ ಗಾರ್ಡನ್ ನಿರ್ಮಿಸಿದ್ದಾರೆ. ಕಾಲೇಜಿಗೆ ಭೇಟಿ ನೀಡುವವರ ಗಮನವನ್ನು ಇಲ್ಲಿ ಜೋತಾಡುವ ದಾರಗಳ ನಡುವೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೊಂಪಾಗಿ ಬೆಳೆದಿರುವ ಸೊಪ್ಪುಗಳು ಸೆಳೆಯುತ್ತವೆ. ಅರ್ಧ ಕಟ್ ಮಾಡಿರುವ ಬಾಟಲಿಗಳಲ್ಲಿ ಮೆಂತೆ, ಹರಿವೆ, ಪಾಲಕ್, ಸಬ್ಬಸಿಗೆ, ಈರುಳ್ಳಿ, ಕೊತ್ತಂಬರಿ ಬೀಜ ಬಿತ್ತಿ, ಸೊಪ್ಪು ಬೆಳೆಸುತ್ತಿದ್ದಾರೆ.
`ಇದಕ್ಕೇನು ಹೆಚ್ಚು ಶ್ರಮವಿಲ್ಲ. ಅಂಗಡಿ ಮುಂಗಟ್ಟುಗಳಿಂದ ಸಂಗ್ರಹಿಸಿ ತಂದಿದ್ದ ಪ್ಲಾಸ್ಟಿಕ್ ಬಾಟಲಿಗಳ ಹೊಟ್ಟೆ ಸಿಳಿ, ಅದರಲ್ಲಿ ತೆಂಗಿನ ನಾರಿನ ಪುಡಿ ತುಂಬಿ, ಬೀಜ ಬಿತ್ತನೆ ಮಾಡಬೇಕು. ನಾರಿನ ಪುಡಿಗೆ ತೇವಾಂಶ ಹಿಡಿದಿಟ್ಟುಕೊಳ್ಳುವ ಗುಣವಿದೆ. ಹೀಗಾಗಿ, ಎರಡು ದಿನಕ್ಕೊಮ್ಮೆ ನೀರು ಕೊಟ್ಟರೂ ಸಾಕು. ಬೀಜ ಹಾಕಿದ 8ರಿಂದ10 ದಿನಗಳಲ್ಲಿ ಸಸಿಗಳು ಮೇಲೇಳುತ್ತವೆ. ಎನ್‍ಪಿಕೆ ಗೊಬ್ಬರವನ್ನು (19:19:19) ಸಿಂಪಡಣೆ ಮಾಡಿದರೆ, ಸಸಿಗಳು ಆರೋಗ್ಯಕರವಾಗಿ ಬೆಳೆಯುತ್ತವೆ. ಇದು ಸುಲಭವಾಗಿ ನೀರಿನಲ್ಲಿ ಕರಗುತ್ತದೆ. ಹಾಗಾಗಿ ಸಿಂಪಡಣೆಯೂ ಸುಲಭ’ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಡುತ್ತಾರೆ.
ಬಾಟಲಿಯ ಪುನರ್ ಬಳಕೆಯ ವಿಚಾರ ಬಂದಿದ್ದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ಇಸ್ರೇಲ್ ವಿಜ್ಞಾನ ಕೇಂದ್ರದಲ್ಲಿ ನೋಡಿದ್ದ ಬಾಟಲಿಯ ಮರು ಬಳಕೆಯ ಪ್ರಯೋಗವನ್ನು ಕಾಲೇಜಿನಲ್ಲಿ ಮಾಡೋಣವೆಂದು `ನಮ್ಮ ತರಕಾರಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವರು ನಮ್ಮನ್ನು ಹುರಿದುಂಬಿಸಿದರು ಎಂದು ಹೇಳಿದರು. ವಿದ್ಯಾರ್ಥಿಗಳೆಲ್ಲರು ಪ್ರತ್ಯೇಕವಾಗಿ ತಂಡ ಕಟ್ಟಿಕೊಂಡು ಬಾಟಲಿಗಳ ರಾಶಿ ತಂದು ಸುರಿದೆವು. ಈಗ ನೋಡಿ, ಅವೆಲ್ಲ ಶೋ ಪೀಸ್‍ಗಳಂತೆ ಕಾಣುತ್ತಿವೆ’ ಎಂದು ಅವರು ಕಾಲೇಜಿನ ಕಾರಿಡಾರ್ ಕಟ್ಟೆಯಂಚನ್ನು ಆವರಿಸಿಕೊಂಡಿದ್ದ ಬಾಟಲಿ ಪಾಟ್‍ನೆಡೆಗೆ ಕೈತೋರಿದರು ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ಅಂಗಳದಲ್ಲಿದ್ದ ಕೈತೋಟ್ (ಗಾರ್ಡನ್) ಈಗ ಮಹಡಿಯನ್ನೇರಿದೆ. ಕಾರಿಡಾರಿನ ಸುತ್ತ, ಟೆರೇಸ್ ಮೇಲಿನ ನೆರಳಿನ ಜಾಗದಲ್ಲೆಲ್ಲ ಜಲಪಾತದಂತೆ ಇಳಿಬಿದ್ದಿರುವ ಬಾಟಲಿಗಳು ಕಾಣುತ್ತವೆ.
ಮಳೆಗಾಲದಲ್ಲಿ ತೆರೆದ ಬಯಲಿನಲ್ಲಿ ತರಕಾರಿ, ಸೊಪ್ಪು ಬೆಳೆಸಿದರೆ, ಮಲೆನಾಡಿನ ಮಳೆಗೆ ಕೊಳೆಯುವ ಸಾಧ್ಯತೆ ಹೆಚ್ಚು. ಹಾಗೆಂದು, ಚಾವಣಿ ಕೆಳಗೆ ಸುಲಭದಲ್ಲಿ ಬೆಳೆಬಹುದು. ಬಾಟಲಿ ಗಟ್ಟಿಯಿದ್ದರೆ ಎರಡರಿಂದ ಮೂರು ಬೆಳೆಯನ್ನು ಆರಾಮವಾಗಿ ತೆಗೆಯಬಹುದು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ವಿದ್ಯಾರ್ಥಿಗಳು, ತೆಂಗಿನ ಚಿಪ್ಪಿನಲ್ಲೂ ಸಸಿ ಬೆಳೆಸಲು ತಯಾರಿ ನಡೆಸಿದ್ದಾರೆ. ತೆಂಗಿನ ಚಿಪ್ಪು ನೋಟದಲ್ಲೂ ಕಲಾತ್ಮಕ ಎಂದರು, ಅಲ್ಲಿನ ವಿದ್ಯಾರ್ಥಿಗಳು.
ಪೇಟೆಯಲ್ಲಿ ರಾಸಾಯನಿಕ ರಹಿತ ತರಕಾರಿ ಹುಡುಕುವುದೇ ಕಷ್ಟ. ರಾಸಾಯನಿಕ ಸಿಂಪಡಿಸಿದ ತರಕಾರಿ ಸೇವನೆ ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಸಾಧ್ಯವಾದಷ್ಟು ಮನೆಯಲ್ಲೇ ಬೆಳೆಸಿಕೊಂಡರೆ, ಸಾವಯವ ತರಕಾರಿ ತಿಂದ ಸಮಾಧಾನವೂ ಸಿಕ್ಕೀತು. ನಗರದಲ್ಲಿ ತರಕಾರಿ ಬೆಳೆಸಲು ಜಾಗ ಇಲ್ಲದಿದ್ದರೆ, ಪ್ಲಾಸ್ಟಿಕ್ ಬಾಟಲಿಯಲ್ಲಿ ಆಳ ಬೇರು ಬಿಡದಂತಹ ಸೊಪ್ಪು ಬೆಳೆಯಬಹುದು. ಎಣ್ಣೆ ಕ್ಯಾನ್, ಒಡೆದ ಬಕೆಟ್, ಪೇಂಟ್ ಡಬ್ಬ, ಸಿಮೆಂಟ್ ಚೀಲ ಹೀಗೆ ಎಸೆಯುವ ಪ್ಲಾಸ್ಟಿಕ್ ಅನ್ನು ಟೆರೇಸ್ ಮೇಲಿಟ್ಟು ತರಕಾರಿ ಗಿಡಗಳ ಬೆಳೆಸಬಹುದು ಎಂಬುದು ಅಲ್ಲಿನ ಪ್ರಾಧ್ಯಾಪಕರು ಸಲಹೆ ನೀಡುತ್ತಾರೆ.
ಹೀಗೆ ಬೆಳೆಯುವಾಗ ಮಣ್ಣನ್ನು ಉಪಯೋಗಿಸದಿರುವುದು ಲೇಸು. ತೆಂಗಿನ ನಾರಿನ ಪುಡಿ ಹಗುರ. ಇದು ಬಾಟಲಿಗೂ ಭಾರವಲ್ಲ, ಟೆರೇಸ್ ಮೇಲಿಟ್ಟರೂ ಬಾರಯಾಗುವುದಿಲ್ಲ ಜೊತೆಗೆ ದುಡ್ಡಿಗೂ ಕಷ್ಟವಿಲ್ಲ. ಮಾರ್ಕೆಟ್‍ನಲ್ಲಿ ಸುಲಭವಾಗಿ ಸಿಗುವ ನಾರಿನ ಪುಡಿ ಕೆ.ಜಿ.ಯೊಂದಕ್ಕೆ 10 ರೂಪಾಯಿಯಷ್ಟೇ, ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
–ಕಾಂಚನಾ. ಬಸವರಜ. ಪೂಜಾರಿ
3ನೇ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ತೋರವಿ
ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್‌ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್‌ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್‌ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್‌ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್‌ಬಾಕ್ಸ್‌ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್‌ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್‌ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್‌ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ1 day ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ3 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್
-
ದಿನದ ಸುದ್ದಿ2 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ