ದಿನದ ಸುದ್ದಿ
ಪರಿಸರ ಸ್ನೇಹಿ ಪವನ ವಿದ್ಯುತ್ ಶಕ್ತಿ ಸ್ಥಾವರದ ಬಗ್ಗೆ ನಿಮಗಿಷ್ಟು ತಿಳಿದಿರಲಿ..!

- ಆಶಾ ಸಿದ್ದಲಿಂಗಯ್ಯ
ವಿಶ್ವದಾದ್ಯಂತ ಸ್ಥಾಪಿತವಾಗಿರುವ ಪವನ ವಿದ್ಯುತ್ ಶಕ್ತಿಯ ಉತ್ಪಾದನಾ ಸಾಮರ್ಥ್ಯ ಸದ್ಯ 2009 ರ ಕೊನೆಯಲ್ಲಿ 157,899 MW ಗೆ ತಲುಪಿದೆ. USA (35,159 MW), ಜರ್ಮನಿ (25,777 MW), ಸ್ಪೇನ್ (19,149 MW) ಮತ್ತು ಚೀನಾ (25,104 MW) ಇವೆಲ್ಲ ಭಾರತಗಿಂತ ಮುಂದಿವೆ, ಸದ್ಯಕ್ಕೆ ಭಾರತ ಐದನೆಯ ಸ್ಥಾನದಲ್ಲಿದೆ. ಸದ್ಯ ಸಣ್ಣ ಪ್ರಮಾಣದಲ್ಲಿರುವ ಈ ಗಾಳಿ ವಿದ್ಯುತ್ ಯೋಜನೆಯು ಗಾಳಿ ಟರ್ಬೈನ್ ಗಳ ಸ್ಥಾಪನೆ ಮಟ್ಟದಲ್ಲಿದೆ. ಭಾರತದಲ್ಲಿನ ವಿದ್ಯುತ್ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೆಚ್ಚಳಕ್ಕೆ ಇದು ಉತ್ತಮ ಆಯ್ಕೆ ಎನಿಸಿದೆ.
ಸುಜ್ಲೊನ್ ಎಂಬ ಭಾರತೀಯ ಒಡೆತನದ ಕಂಪನಿಯು ವಿಶ್ವಾದಾದ್ಯಂತ ಕಳೆದ ದಶಕದಲ್ಲಿ ಗಾಳಿ ಟರ್ಬೈನ್ ಗಳ ಮಾರಾಟದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ 7.7 ರಷ್ಟು ತನ್ನ ಪಾಲು ಪಡೆದಿದೆ. ಸುಜ್ಲೊನ್ ಸದ್ಯ ಭಾರತೀಯ ಟರ್ಬೈನ್ ಮಾರುಕಟ್ಟೆಯಲ್ಲಿ ಶೇಕಡಾ 52 ರಷ್ಟು ಪಾಲು ಪಡೆದಿದೆ. ಸುಜ್ಲೊನ್ ಈ ತಂತ್ರಜ್ಞಾನದ ಯಶಸ್ಸು ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿಸಿದೆ.
ಭಾರತದಲ್ಲಿ ಪವನ ವಿದ್ಯುತ್ ಶಕ್ತಿ
ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು.ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣವೂ ಏರಿಕೆ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ US ಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ. ಇತ್ತೀಚಿನ ಅಂದರೆ 31 ಅಕ್ಟೋಬರ್ 2009 ರವರೆಗೆ ಒಟ್ಟು ಸ್ಥಾಪಿತ ಭಾರತದಲ್ಲಿನ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವೆಂದರೆ 11806.69 MW, ಆಗಿದೆ.
ಪ್ರಮುಖವಾಗಿ ಇದರ ಉತ್ಪಾದನಾ ಚಟುವಟಿಕೆಯು ಎಲ್ಲೆಡೆಗೂ ತಮಿಳುನಾಡು (4900.765 MW), ಮಹಾರಾಷ್ಟ್ರಾ (1945.25 MW), ಗುಜರಾತ (1580.61 MW), ಕರ್ನಾಟಕ (1350.23 MW), ರಾಜಸ್ಥಾನ (745.5 MW), ಮಧ್ಯಪ್ರದೇಶ (212.8 MW), ಆಂಧ್ರ ಪ್ರದೇಶ (132.45 MW), ಕೇರಳ (46.5 MW), ಒಡಿಶಾ (2MW), ಪಶ್ಚಿಮ ಬಂಗಾಲBengal (1.1 MW) ಅದಲ್ಲದೇ ಇನ್ನುಳಿದ ರಾಜ್ಯಗಳಿಂದ (3.20 MW) ಮುಂಬರುವ 2012 ರ ಹೊತ್ತಿಗೆ ಭಾರತದಲ್ಲಿ ಸುಮಾರು 6,000 ಮೆಗಾವ್ಯಾಟ್ ಪವನಶಕ್ತಿ ವಿದ್ಯುತ್ ಉತ್ಪಾದನೆಗೆ ಅಂದಾಜಿಸಲಾಗಿದೆ. ಈ ಪವನಶಕ್ತಿ ವಿದ್ಯುತ್ ಒಟ್ಟು 6% ರಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಭಾರತದ ವಿದ್ಯುತ್ ಶಕ್ತಿಗೆ 1.6% ರಷ್ಟು ತನ್ನ ಕೊಡುಗೆ ನೀಡುತ್ತದೆ. ಭಾರತವು ಗಾಳಿ ಕುರಿತಾದ ನಕ್ಷೆಯೊಂದನ್ನು ಸಿದ್ದಪಡಿಸುತ್ತಿದೆ.
ಕರ್ನಾಟಕ(1340.23 MW)
ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಪವನ ವಿದ್ಯುತ್ ಶಕ್ತಿ ಉತ್ಪಾದನೆಯ ಕೇಂದ್ರಗಳಿದ್ದು ದೇಶದಲ್ಲಿಯೇ ಅದು ಅತಿ ಹೆಚ್ಚು ಸಂಖ್ಯೆಯ ವಿಂಡ್ ಮಿಲ್ ಫಾರ್ಮ್ ಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದುರ್ಗ,ಗದಗ ಮೊದಲಾದೆಡೆ ಜಿಲ್ಲಾ ಪ್ರದೇಶಗಳಲ್ಲಿ ಅಸಂಖ್ಯಾತ ವಿಂಡ್ ಮಿಲ್ ಗಳಿವೆ. ಚಿತ್ರದುರ್ಗ ಒಂದರಲ್ಲಿಯೇ ಒಟ್ಟು 20000 ಕ್ಕಿಂತ ಅಧಿಕ ಗಾಳಿ ಟರ್ಬೈನ್ ಗಳಿವೆ.
ಒಟ್ಟು 13.2 MW ನ ಅರಷಿನಗುಡಿ (ARA) ಮತ್ತು 16.5 MW ನ ಅಣಬೂರ್ ನ(ANA) ವಿಂಡ್ ಫಾರ್ಮ್ ಗಳು ACCIONA ಕಂಪನಿಯ ಮೊದಲ ಪ್ರಯೋಗಗಳಾಗಿವೆ. ಇದು ದಾವಣಗೆರೆ ಜಿಲ್ಲೆಯಲ್ಲಿದೆ.(ಕರ್ನಾಟಕ ರಾಜ್ಯ),ಅವುಗಳು ಒಟ್ಟು ಸ್ಥಾಪಿತ 29.7 MW ಮತ್ತು ಒಟ್ಟು18 ವೆಸ್ತಾಸ್ ಗಳ 1.65MW ಸಾಮರ್ಥ್ಯದ ವಿಂಡ್ ಟರ್ಬೈನ್ಸ್ ಗಳನ್ನು ವೆಸ್ತಾಸ್ ವಿಂಡ್ ಟೆಕ್ನಾಲಜಿ ಇಂಡಿಯಾ ಕಂಪನಿಯು ಪೂರೈಕೆ ಮಾಡಿದೆ.
ಈ ARA ವಿಂಡ್ ಫಾರ್ಮ್ ಜೂನ್ 2008ರಲ್ಲಿ ಸ್ಥಾಪಿತವಾಗಿ ಕಾರ್ಯ ಆರಂಭಿಸಿತು. ಅದೇ ರೀತಿ ANA ವಿಂಡ್ ಫಾರ್ಮ್ 2008ರ ಸೆಪ್ಟೆಂಬರ್ ನಲ್ಲಿ ಆರಂಭಿಸಿತು. ಪ್ರತಿಯೊಂದು ಕಂಪನಿಯು 20-ವರ್ಷಗಳ ಪಾವರ್ ಪರ್ಚೇಜ್ ಅಗ್ರೀಮೆಂಟ್ (PPA)ಗೆ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (BESCOM)ನೊಂದಿಗೆ 100% ಇದರ ಉತ್ಪಾದನೆಯನ್ನು ಪಡೆಯಲು ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು. ARA ಮತ್ತು ANA ಗಳು Acciona (ಆಕ್ಸಿಯೊನಾ) ಕಂಪನಿಯ ಮೊದಲ ವಿಂಡ್ ಫಾರ್ಮ್ಸ್ ಆಗಿವೆ. ಇವುಗಳು CER ಕ್ರೆಡಿಟ್ಸ್ ಗಳಿಗೆ ಪಾತ್ರವಾಗುತ್ತವೆ.ಇದನ್ನು ಕ್ಲೀನ್ ಡೆವಲಪ್ಮೆಂಟ್ ಮೆಕಾನಿಸಮ್(CDM)ನ ಮೂಲಕ ಇದಕ್ಕೆ ನೆರವು ದೊರಕಿಸಿಕೊಳ್ಳಬಹುದು.
ACCIONA ಕಂಪನಿಯು ವಿಶ್ವ ಬ್ಯಾಂಕಿನಿಂದ ದಿ ಸ್ಪ್ಯಾನಿಶ್ ಕಾರ್ಬನ್ ಫಂಡ್ ಮೂಲಕ ಈ ಯೋಜನೆಯ ಉತ್ಪಾದನೆಯ CER ನ ಖರೀದಿದಾರನಾಗಿ ಕೆಲಸ ಮಾಡುತ್ತದೆ.ಇದರ CERಗಳು 2010 ದಿಂದ 2012 ವರೆಗೆ ಹೊರಬೀಳಲಿವೆ.ಇದಕ್ಕಾಗಿ ಮಾತುಕತೆಗಳು ಜಾರಿಯಲ್ಲಿವೆ. ಇದಕ್ಕಾಗಿ ಅವಶ್ಯವಿರುವ ಪರಿಸರೀಯ ಮತ್ತು ಸಾಮಾಜಿಕ ವಿಷಯಗಳ ಕುರಿತು ಎಲ್ಲಾ ವಿಧಿ-ವಿಧಾನಗಳನ್ನು ಪೂರೈಸಿ ಸಂಬಂಧಿಸಿದ ಕಾಗದಪತ್ರಗಳನ್ನು ಒದಗಿಸಲಾಗಿದೆ. ಇವೆಲ್ಲವೂ ಕೆಳಗಿರುವಂತೆ ವಿಶ್ವ ಬ್ಯಾಂಕಿನ ಬಹಿರಂಗ ನೀತಿ-ಸೂತ್ರಕ್ಕನುಗುಣವಾಗಿರಬೇಕಾಗುತ್ತದೆ.
ಭಾರತದಲ್ಲಿ ಉನ್ನತ ದಕ್ಷತೆಯ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದರೂ ಸರಕಾರಿ ನೀತಿ ಮತ್ತು ಸೂಕ್ತ ಕಾರ್ಯಾಚಾರಣೆಯ ಕೊರತೆಯಿಂದ ಅವು ಮಂದಗತಿಯಲ್ಲಿ ಸಾಗಿವೆ.ಅವುಗಳ ಸ್ಥಾಪನೆಗೆ ನೀಡಿದಷ್ಟು ಗಮನವನ್ನು ಅವುಗಳ ಅನುಷ್ಠಾನದ ಬಗ್ಗೆಯೂ ಸರ್ಕಾರ ವಹಿಸಬೇಕಾಗುತ್ತದೆ. ಭಾರತದಲ್ಲಿ ಕೇವಲ 1.6% ರಷ್ಟು ಮಾತ್ರ ಉತ್ಪಾದನೆಯಾಗುತ್ತಿದ್ದು ಆದರೆ ನಿಜವಾಗಿ ಉತ್ಪಾದನಾ ಸಾಮರ್ಥ್ಯವು 6% ಇರಬೇಕಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರೋಟರಿ ಆಶ್ರಯದಲ್ಲಿ ನೋಟು-ನಾಣ್ಯಗಳ “ಅಪೂರ್ವ ಸಂಗ್ರಹ” ಪ್ರದರ್ಶನ : ಭಾನುವಾರ ಕಡೆ ದಿನ

ಸುದ್ದಿದಿನ,ದಾವಣಗೆರೆ : ನೋಟುಗಳು – ನಾಣ್ಯಗಳು, ಇಂದಿನ ಕಾಲದ – ಹಿಂದಿನ ಕಾಲದ, ದೇಶದ – ವಿದೇಶದ ಅಪೂರ್ವ ಸಂಗ್ರಹವನ್ನು ನೋಡುವ ಅಪರೂಪದ ಅವಕಾಶ ನಗರದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಒದಗಲಿದೆ.
ದಾವಣಗೆರೆ ರೋಟರಿ ಸಂಸ್ಥೆ ಬರುವ ಶನಿವಾರ ಮಾರ್ಚ್ 6 ಮತ್ತು ಭಾನುವಾರ ಮಾ.7ರಂದು ಎಂ.ಸಿ.ಸಿ ಎ ಬ್ಲಾಕಿನಲ್ಲಿರುವ ದಾವಣಗೆರೆ ಹರಿಹರ-ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಲಿದೆ.
ಬೆಳಗಾವಿಯ ಈರಪ್ಪ ಗುರುಲಿಂಗ ಪರಮಶೆಟ್ಟಿ ಕಳೆದ ಐದು ದಶಕಗಳಿಂದ ಸಂಗ್ರಹಿಸಿರುವ ಅಪರೂಪದ ನೋಟುಗಳು-ನಾಣ್ಯಗಳು ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ಬ್ರಿಟೀಷ್ ಆಡಳಿತದ, ಮರಾಠಾ, ಪೇಶ್ವೇ, ಮೊಘಲರು ನಿಜಾಮರ ಹಾಗೂ ಟಿಪ್ಪು ಆಡಳಿತದ ನಾಣ್ಯಗಳ ಪ್ರದರ್ಶನ ವಿಶೇಷವಾದದ್ದು.
ಒಂದರಿಂದ ಸಾವಿರ ರೂಗಳ ಹಳೆಯ ಬೆಳ್ಳಿಯ ನಾಣ್ಯಗಳು ಇಲ್ಲಿ ಕಾಣ ಸಿಗುತ್ತವೆ. ಒಂದೇ ಮೌಲ್ಯದ ನೂರ ಐವತ್ತಕ್ಕೂ ಹೆಚ್ಚು ವಿವಿಧ ನೋಟುಗಳ ನೋಟ ಅಪರೂಪದ ಆಕರ್ಷಣೆಯಾಗಲಿದೆ.ಇವರ ಸಂಗ್ರಹ “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ 1997ರಿಂದ ಸತತವಾಗಿ ಮೂರು ವರ್ಷಗಳ ಕಾಲ ನಮೂದಿಸಲ್ಪಟ್ಟಿದೆ.
ಮಾರ್ಚ್ ಆರು ಶನಿವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ದಾವಣಗೆರೆಯ ಪ್ರಥಮ ಪೌರರಾದ ಎಸ್.ಟಿ. ವೀರೇಶ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಆರ್.ಟಿ. ಮೃತ್ಯುಂಜಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಡಿಡಿಪಿಐ ಪರಮೇಶ್ವರಪ್ಪ ತಹಶೀಲ್ದಾರ್ ಗಿರೀಶ್ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಅಪರೂಪದ ನೋಟು-ನಾಣ್ಯಗಳ ಪ್ರದರ್ಶನ ಮಾರ್ಚ್ ಆರು ಮತ್ತು ಏಳರ ಬೆಳಿಗ್ಗೆ 9ರಿಂದ ಸಂಜೆ 7ರ ವರೆಗೆ ನಡೆಯಲಿದ್ದು ಎಲ್ಲರಿಗೂ ಉಚಿತ ಪ್ರವೇಶವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂದುವಾಡ ಕೆರೆ ಅಭಿವೃದ್ದಿ ಕಾಮಗಾರಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಮಾಲೀಕತ್ವದಲ್ಲಿರುವ ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿದ್ದು, ಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. 1.2 ಕಿ.ಮೀ ಏರಿಯನ್ನು ಎತ್ತರಿಸಿ ಗಟ್ಟಿಗೊಳಿಸಲಾಗಿದ್ದು, ಕಲ್ಲುಗಳ ಹೊದಿಕೆಯ ಕೆಲಸವು ಪ್ರಗತಿಯಲ್ಲಿದೆ.
ಉಳಿದಂತೆ 3.7 ಕಿ.ಮೀ ನಲ್ಲಿ ಮುಳ್ಳು ಗಂಟೆ ಪೊದೆ ಮತ್ತು ಹಳೆಯ ಕಲ್ಲುಗಳ ಹೊದಿಕೆಯ ತೆರವುಗೊಳಿಸುವ ಕಾರ್ಯ ಚಾಲ್ತಿಯಲ್ಲಿರುತ್ತದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯುತ್ ಬಿಲ್ ಪಾವತಿ ವಂಚನೆ ಬಗ್ಗೆ ಜಾಗೃತಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೆಳಕಂಡ ಕೆಲವು ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.
ವಿದ್ಯುತ್ ಬಿಲ್ಲನ್ನು ಬೆ.ವಿ.ಕಂ ನ ಅಧಿಕೃತ ಕೌಂಟರ್ಗಳಲ್ಲಿಯೇ ಪಾವತಿಸಬೇಕು. ಬೆ.ವಿ.ಕಂ. ನಿಂದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿ ತಮ್ಮಲ್ಲಿಗೆ ಬಂದಾಗ ಗುರುತಿನ ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
ವಿದ್ಯುತ್ ಬಿಲ್ಲನ್ನು ಆನ್ಲೈನ್ನಲ್ಲಿ ಪಾವತಿಸುವುದರ ಮೂಲಕ ಈ ತರಹದ ವಂಚನೆಗಳನ್ನು ತಪ್ಪಿಸಬಹುದು. ಪೇ-ಟಿಎಮ್, ಗೂಗಲ್ ಪೇ ಹಾಗೂ ಬೆವಿಕಂ.ನ “ಬೆಸ್ಕಾಂ ಮಿತ್ರ” ಆ್ಯಪ್ ನ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ.
ಯಾರಾದರೂ ಅನುಮಾನಾಸ್ಪದವಾಗಿ ವರ್ತಸಿದಲ್ಲಿ ಕೂಡಲೇ ಬೆ.ವಿ.ಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 08912-250210 ಹಾಗೂ ಮೊಬೈಲ್ ನಂ. 9483549210 ಗೆ ತಿಳಿಸಬೇಕೆಂದು ಬೆಸ್ಕಾಂ ನಗರ ಉಪ ವಿಭಾಗ-1 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ7 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ದಿನದ ಸುದ್ದಿ6 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ
-
ನಿತ್ಯ ಭವಿಷ್ಯ6 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ6 days ago
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ..!
-
ನಿತ್ಯ ಭವಿಷ್ಯ5 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ಬಹಿರಂಗ5 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
-
ದಿನದ ಸುದ್ದಿ3 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ನಿತ್ಯ ಭವಿಷ್ಯ4 days ago
ಬುಧವಾರ ರಾಶಿ ಭವಿಷ್ಯ : ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಆತಂಕ ದೂರವಾಗಲಿದೆ