ಲೈಫ್ ಸ್ಟೈಲ್
ಇದು ನಮ್ಮೂರು ‘ಅಥರ್ಗಾ’ ಹೋಳಿ ಹಬ್ಬದ ಸ್ಪೇಷಲ್…!
‘ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ರಂಗು ರಂಗೋಲಿ’ ಎಂದು ಕವಿ ಹೋಳಿ ಹಬ್ಬವನ್ನು ವಿಭಿನ್ನರೀತಿಯಲ್ಲಿ ವರ್ಣಿಸುತ್ತಾನೆ. ಹೋಳಿ ಹಬ್ಬ ರಾಷ್ಟ್ರೀಯ ಹಬ್ಬವಾಗಿದೆ. ಹೋಳಿ ಹಬ್ಬವು ದೇಶದ ವಿಧಿದ ಭಾಗಗಳಲ್ಲಿ ವಿಭೀನ್ನವಾಗಿ ಆಚರಣೆ ಮಾಡುತ್ತಾರೆ. ಇದು ಕೇವಲ ಪುರುಷರಿಗಾಗಿ ಇರುವ ಏಕೈಕ ಹಬ್ಬವೆಂದು ಹೇಳಬಹುದಾಗಿದೆ.
ನಮ್ಮೂರು ಅಥರ್ಗಾ. ಇದು ಇರೋದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ. ಇದು ನೋಡದಿಕ್ಕೆ ಪುಟ್ಟು ಗ್ರಾಮವಾದರೂ ಬಹು ಹೆಸರುವಾಸಿ. ಅದೇ ರೀತಿ ಗಂಡ ಹುಡಗರ ಎಂದೇ ಹೆಸರುವಾಸಿಯಾಗಿರುವ ಹಬ್ಬ ಹೋಳಿ. ಈ ಹುಣ್ಣಿಮೆಯು ಈ ಊರಲ್ಲಿ ವಿಶಿಷ್ಠವಾಗಿ ಆಚರಿಸುತ್ತಾರೆ. ಅದೇನು ಹೇಗೆ ಅನ್ನುವ ಕುತೂಲಕ್ಕೆ ಇಲ್ಲದೇ ಉತ್ತರ…!
ಈ ಹಬ್ಬದ ವಿಶೇಷತೆಗಳು ಕೇಳಿದರೆ ಹುಡುಗರು ಬಾಯಿ ಬಡಕೊಳ್ಳುತ್ತಾ, ಹಲಗೆ ಬಾರಿಸುತ್ತಾರೆ. ಇದರ ಜೊತೆಗೆ ಕಾಮಣ್ಣನ ಮೂರ್ತಿ ಮಾಡುತ್ತಾರೆ. ಕಾಮಣನ ಮೇಲೆ ಗ್ರಾಮಿಣ ಪ್ರದೇಶದ ಜನರು ಸಣ್ಣ ಪದಗಳನ್ನು ಕಟ್ಟುತ್ತಾರೆ. ಕಾಮಣ್ಣನನ್ನು ಸುಡಲು ಓಣಿಗಳಲ್ಲಿರುವ ಮನೆಗಳಿಂದ ಕಟ್ಟಿಗೆ, ಕುಳ್ಳುಗಳನ್ನು ಕದಿಯುತ್ತಾರೆ ನಂತರ ಇವುಗಳನ್ನು ಹೋಳಿ ಹಬ್ಬದ ದಿನ ಓಣಿ ಮಧ್ಯದಲ್ಲಿ ಅಥವಾ ಊರ ಅಗಸಿ ಬಾಗಿಲ ಬಳಿ ಗುಡ್ಡೆ ಹಾಕಿ ಬೆಂಕಿ ಹಚ್ಚುತ್ತಾರೆ. ಇದು ಒಂದು ರೀತಿಯಾದರೆ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಅಥರ್ಗಾ ಗ್ರಾಮದಲ್ಲಿ ಈ ಹಬ್ಬವನ್ನು ಇನ್ನೂ ವಿಭಿನ್ನವಾಗಿ ಆಚರಿಸುತ್ತಾರೆ.
ಗ್ರಾಮದ ಕುಂಬಾರನ ಮನೆಯಲ್ಲಿ ಕಾಮಣ್ಣನ ಮುಖ ತಾಯಾರಾಗುತ್ತದೆ. ಓಣಿಯಲ್ಲಿ ಹುಡುಗರು ಶಿವರಾತ್ರಿ ಅಮವಾಸ್ಯೆಯ ಮಾರನೆ ದಿನದಿಂದ ಹಲಗೆ ಬಾರಿಸಲು ಶುರುಮಾಡುತ್ತಾರೆ. ಹುಡುಗರು ಮನೆ ಮನೆಗೂ ಹೂಗಿ ದೇಣಿಗೆ ಸಂಗ್ರಹಿಸುತ್ತಾರೆ. ಊರಿನ ಓಣಿಗಳಲ್ಲಿ ಕಾಮಣ್ಣನನ್ನು ಕುಡಿಸುವ ಕಟ್ಟೆಗಳನ್ನು ರೆಡಿ ಮಾಡುತ್ತಾರೆ. ಆ ಕಟ್ಟೆಗಳನ್ನು ತೊಳೆದು ಸುಣ್ಣ-ಬಣ್ಣ ಹಚ್ಚಿ, ಕಟ್ಟೆಗಳ ಬಳಿ ಪೇಂಡಾಲ ಹಾಕಲಾಗುತ್ತದೆ.
ಕಲರ್ ಪೇಪರ್‍ಗಳಿಂದ ಅಲಂಕಾರ ಮಾಡಿ, ಮೈಕ್ ಹಚ್ಚುತ್ತಾರೆ. ಇದಿಷ್ಟು ಕಾಮಣ್ಣನನ್ನು ಕುಡಿಸಲು ನಡೆಯುವ ಸಿದ್ಧತೆಗಳದರೆ, ಹುಣ್ಣಿಮೆ ನಾಳೆ ಅಂದರೆ ಹಿಂದಿನ ದಿನ ರಾತ್ರಿಯೇ ಸಾಂಪ್ರದಾಯಿಕವಾಗಿ ಗೋಧಿಹುಲ್ಲನ್ನು ಸಂಗ್ರಹಿಸುತ್ತಾರೆ. ಈತ್ತ ಹಿರಿಯರು ಗೋಧಿ ಹುಲ್ಲನ್ನು ಪ್ಯಾಂಟ್ ಶರ್ಟ್‍ನಲ್ಲಿ ತುಂಬಿ ಮನುಷ್ಯನ ರೂಪದಲ್ಲಿ ಸಿದ್ಧ ಪಡೆಸುತ್ತಾರೆ.
ಗುಂಪಿನ ಇತರ ಹುಡುಗರು ಸೇರಿ ಕುಂಬಾರನ ಮನೆಗೆ ಹೋಗಿ ಕಾಮಣ್ಣನ ಮುಖವನ್ನು ಮೆರವಣಿಗೆ ಮೂಲಕ ತರುತ್ತಾರೆ. ನಂತರ ಸಂಪೂರ್ಣವಾಗಿ ಮನುಷ್ಯನ ರೂಪ ಸಿದ್ಧಗೊಂಡ ಮೇಲೆ ಕಾಮಣ್ಣನ ಮುಖ ಇಟ್ಟು ಮತ್ತೋಮ್ಮೆ ಊರಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗುತ್ತಾರೆ.
ಇದು ಊರಿನ ಹಿರಿಯ ಕಾಮಣ್ಣ. ಪ್ರತಿಯೊಂದು ಓಣಿಯಲ್ಲಿ ವಿವಿಧ ವೇಷದಲ್ಲಿ ಕಾಮಣ್ಣನನ್ನು ಪೂಜಿಸುತ್ತಾರೆ. ಈ ಮೆರವಣಿಗೆ ಮುಗಿಯಲು ಸುಮಾರು ಮಧ್ಯರಾತ್ರಿಯೇ ಆಗುತ್ತದೆ. ಆದರೂ ಪ್ರತಿ ಓಣಿ ಜನರು ಈ ಮೆರವಣಿಗೆ ನೋಡಲು ಕಾದು ಕುಳಿತಿರುತ್ತಾರೆ. ನಂತರ ಒಂದು ಕಟ್ಟೆಯ ಮೇಲೆ ತಂದು ಪ್ರತಿಷ್ಠಾನ ಮಾಡುತ್ತಾರೆ. ಹುಣ್ಣಿಮೆಯ ದಿನ ಬೆಳ್ಳಗ್ಗೆ ಓಣಿಯಲ್ಲಿರುವ ಮನೆಗಳಿಂದ ಹೋಳಿಗೆ ನೈವಿಧ್ಯ ಮಾಡುತ್ತಾರೆ. ಚಿಕ್ಕ ಮಕ್ಕಳ ಕೊರಳಲ್ಲಿ ಹಾಗೂ ಕಾಮಣ್ಣನ ಕೊರಳಲ್ಲಿ ಸಕ್ಕರೆಯ ಸರವನ್ನು ಹಾಕುತ್ತಾರೆ.
ಮಧ್ಯಾಹ್ನ ಪ್ರಸಾದ
ಪ್ರಸಾದವನ್ನು ತಾಯಾರಿಸಿ ಮನೆಮನೆಗಳಿಗೂ ಹಂಚುತ್ತಾರೆ. ಸಾಯಂಕಾಲ ಊರಲ್ಲಿರುವ ಚಿಕ್ಕ ಕಾಮಣ್ಣಗಳನ್ನು ತೆಗೆದುಕೊಂಡು ಹುಡುಗರೆಲ್ಲರೂ ಸೇರಿ ಮೆರವಣಿಗೆಯ ಮೂಲಕ ಹಿರಿಯ ಕಾಮಣ್ಣನನ್ನು ಭೇಟಿಯಾಗಲು ತರುತ್ತಾರೆ. ಇದಿಷ್ಟು ಕಾಮಣ್ಣನ ಸಂಭ್ರಮವಾದರೆ ಮರುದಿನ ಬೆಳಗ್ಗಿನ ಜಾವಾ ನಾಲ್ಕು ಗಂಟೆಗೆ ಸಂಗ್ರಹಿಸಿದ ಕಟ್ಟಿಗೆ ಕುಳ್ಳುಗಳನ್ನು ಕಾಮಣನ ಕಟ್ಟೆಯ ಎದುರಿಗೆ ಕುಡಿಹಾಕಿ ಬೆಂಕಿ ಹಚ್ಚುತ್ತಾರೆ.
ಈ ಬೆಂಕಿಯಲ್ಲಿ ಕಾಮಣ್ಣನ ಮುಖವನ್ನು ಸಹ ಹಾಕುತ್ತಾರೆ. ಈ ಬೆಂಕಿಗೆ ಊರಲ್ಲಿರುವ ಕಂಬಿಮಲ್ಲಯ್ಯ ಮೂರು ಸುತ್ತು ಹಾಕಿ ಹೊಗುವ ಪ್ರತೀತಿ ಇದೆ. ತದನಂತರ ಕಾಮಣ್ಣನಿಗೆ ಅಗ್ನಿ ಸ್ಪರ್ಷ ಮಾಡುತ್ತಾರೆ.
ಸಂಪ್ರದಾಯ
ಮುಂಜಾವಿನ ಕೋಳಿ ಕೂಗುವದರಲ್ಲಿ ಎದ್ದು, ಕಾಮಣ್ಣನ ಬೂದಿ ತಂದು ಓಲೆಗೆ ಹಾಕುವ ಸಂಪ್ರದಾಯ ಅಥರ್ಗಾದಲ್ಲಿದೆ. ಇದೇ ಬೆಂಕಿಯಲ್ಲಿ ಮೊದಲು ಅಡಗೆ ತಯಾರಗಬೇಕು ಎನ್ನುವುದು ಹಿರಿಯರ ಮಾತು. ಅಗಸಿ, ಹುಣಸೆ ಬೀಜಗಳನ್ನು ಹುರಿಯುವ ರೂಢಿ ಬೆಳೆದುಬಂದಿದೆ.
ಆಹಾರದಲ್ಲಿ ವೈವಿಧ್ಯ
ಹಬ್ಬಕ್ಕೆ ವಿಶೇಷವಾಗಿ ಮುದ್ದಿ ಹೋಳಿಗೆಯನ್ನು ತಯಾರಿಸುತ್ತಾರೆ. ಈ ಮುದ್ದಿಗಾಗಿ ಗಜ್ಜರಿ, ಗೆಣಸು, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಶಿತ್ನಿ ಜ್ವಾಳ, ಗೋಧಿ, ಶೇಂಗಾ ಇದೆಲ್ಲವನ್ನು ಕುದಿಸಿ ನಂತರ ಹೋಳಿಗೆ, ಉಪ್ಪು, ಕಾರ, ಎಣ್ಣೆ ಹಾಕಿ ಮಿಶ್ರಣ ಮಾಡಿ ತಯಾರಿಸುತ್ತಾರೆ
–ಕಾಂಚನಾ ಪೂಜಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ6 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ



