ದಿನದ ಸುದ್ದಿ
ಭೈರಪ್ಪನವರೇ, ನಿಮ್ಮ ‘ಧರ್ಮಶಾಸ್ತ್ರ’ ಅಂದರೆ ಯಾವುದು..?
ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ಸಂವಿಧಾನದ ಬಗ್ಗೆ, ತಮ್ಮ ‘ಧರ್ಮಶಾಸ್ತ್ರ’ದ ಬಗ್ಗೆ ತಮ್ಮ ಸಹಜ ಅಭಿಪ್ರಾಯಗಳನ್ನು ಹೇಳುತ್ತಾ ಹಿಂದೂಗಳಲ್ಲಿನ ಗಂಡುಹೆಣ್ಣಿನ ಸಂಭಂದದ ಬಗ್ಗೆ, ನಮ್ಮ ನ್ಯಾಯಾಲಯ, ನ್ಯಾಯಾಲಯದ ತೀರ್ಪುಗಳ ಬಗ್ಗೆಯೂ ಕೀಟಲೆಯ ದ್ವನಿಯಲ್ಲಿ ಮಾತನಾಡಿದ್ದಾರೆ!
ಪ್ರಗತಿಪರರು ಸಾಮಾಜಿಕ ಜಾಲತಾಣಗಳಲ್ಲಿ
ಭೈರಪ್ಪನವರ ಮಾತುಗಳನ್ನು ಉಗ್ರವಾಗಿ ವಿರೋಧಿಸುತ್ತಾ ಎಸ್.ಎಲ್.ಭೈರಪ್ಪನವರನ್ನು ವೈಯಕ್ತಿಕ ನಿಂದೆಗೆ ಇಳಿದಿದ್ದಾರೆ.!
ಭೈರಪ್ಪನವರು ಇದನ್ನು ಬಿಟ್ಟು ಮತ್ತೇನು ಮಾತಾಡಲು ಸಾದ್ಯ..? ಅವರು ನಂಬಿದ ಸಿದ್ದಾಂತಕ್ಕೆ ಅವರು ತೋರುವ ಕಾಳಜಿ, ಬದ್ದತೆಗಳು ನಿಜಕ್ಕೂ ಶ್ಲಾಘನೀಯ! ಅವರು ಮಾತಾಡಿರುವುದಾದರೂ ಎಲ್ಲಿ? ಅವರ ಜಾತಿಯವರೇ ಆದವರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಅವರದೇ ಪರಿಸರದಲ್ಲಿ, ಅವರ ಅನುಯಾಯಿಗಳ ನಡುವೆ. ಅದರಲ್ಲೂ ಅವರು ಅವರದೇ ‘ಧರ್ಮಗ್ರಂಥ’ಗಳನ್ನು ಬೇರೆ ಸಮರ್ಥಿಸಿಕೊಂಡಿದ್ದಾರೆ! ಇದೂ ನನಗೆ ಆಶ್ಚರ್ಯ ಎನಿಸಲಿಲ್ಲ!? ಅವರು, ಅವರ ಯಥಾಸ್ಥಿತಿವಾದದ, ಅವರಿಗೆ ಶ್ರೇಯಕರವಾದ ಧರ್ಮಗ್ರಂಥವನ್ನು ಸಮರ್ಥಿಸದೆ ನಿಮ್ಮ ಧರ್ಮಗ್ರಂಥವಾದ ಸಂವಿಧಾನವನ್ನು ಏಕೆ ಸಮರ್ಥಿಸಬೇಕು? ಅವರ ಧರ್ಮಗ್ರಂಥಗಳಿಗೆ ‘ಹಿಂದೂ’. ‘ಭಾರತೀಯ’ ‘ಪ್ರಾಚೀನ’ ‘ಪುರಾತನ’ ‘ಸನಾತನ’ ಎಂದು ಏನೇ ನಾಮಕರಣ ಮಾಡಿ, ಹೆಸರಿಟ್ಟು ಕರೆದರೂ ಅದು ಬ್ರಾಹ್ಮಣ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಧರ್ಮಗ್ರಂಥವಾಗಿರುತ್ತದೆ! ಬ್ರಾಹ್ಮಣರಾದ ಭೈರಪ್ಪನವರಿಗೆ, ಅವರ ಕುಲಭಾಂಧವರಿಗೆ ಅದರಿಂದ ಲಾಭವಿದೆ! ಪರಂಪರಾನುಗತವಾಗಿ ಅವರು ಅದರ ಹಣ್ಣುಗಳನ್ನು ಸವಿದಿದ್ದಾರೆ!
‘ಭಾರತೀಯತೆ’ ಅಂದರೆ ಅವರ ಅರ್ಥದಲ್ಲಿ ಅದು ‘ವೈದಿಕೇಯತೆ’ಯೇ ಅಲ್ಲವೆ? ಭಾರತೀಯತೆ ಅರ್ಥಾತ್ ಬ್ರಾಹ್ಮಣೀಯತೆಯನ್ನು ಯಥಾಸ್ಥಿತಿಗೊಳಿಸುವುದು, ಸ್ಥಾವರಗೊಳಿಸುವುದೇ ಅವರ ಮೂಲ ಉದ್ದೇಶವೆಂಬುದನ್ನು ನಾವೇಕೆ ಗ್ರಹಿಸುತ್ತಿಲ್ಲ.? ಇದನ್ನು ಕೇವಲ ಎಸ್.ಎಲ್.ಭೈರಪ್ಪನವರು ಹೇಳುತ್ತಿರುವುದಲ್ಲ, ಇವರ ಪೂರ್ವಿಕರಾದ ಸಂಘಪರಿವಾರದ ಸ್ಥಾಪಕರೆಲ್ಲಾ ಹಿಂದಿನಿಂದಲೂ ಹೇಳುತ್ತಾ ಬಂದಿರುವುದೇ ಇದೇ ಆಗಿದೆ!? ಉದಾಹರಣೆಗೆ ಇಂದು ಎಸ್.ಎಲ್.ಬೈರಪ್ಪನವರು ನಮ್ಮ ಮದುವೆಗಳ, ವಿಚ್ಚೇದನಗಳ, ಗಂಡು ಹೆಣ್ಣು ಸಂಭಂದಗಳ ಪರಿಸ್ಥಿತಿ ಯನ್ನು ಕಂಡು ವ್ಯಂಗ್ಯವಾಡಿದ್ದಾರಲ್ಲ, ಅದನ್ನೇ ಇಂದಿಗೆ ಸರಿಯಾಗಿ ಎಪ್ಪತ್ತು ವರ್ಷಗಳ ಹಿಂದೆ ಭೈರಪ್ಪನವರ ಪೂರ್ವಿಕರಾದ ಗೋಳ್ವಾಲ್ಕರ್ ರವರೂ ಹೇಳಿದ್ದನ್ನು ನಮ್ಮ ಇತಿಹಾಸಕಾರ ರಾಮಚಂದ್ರ ಗುಹ ಕೋಟ್ ಮಾಡಿದ್ದನ್ನೇ ನಾನೂ ಕೋಟ್ ಮಾಡಿದ್ದೇನೆ ಗಮನಿಸಿ….
The RSS sarsanghchalak, M.S. Golwalkar, complained in a speech of August 1949 that the reforms piloted by Ambedkar “has nothing Bharatiya about it. The questions like those of marriage and divorce cannot be settled on the American or British model in this country. Marriage, according to Hindu culture and law is a sanskar which cannot be changed even after death and not a ‘contract’ which can be broken any time”. Golwalkar continued: “Of course some lower castes in Hindu Society in some parts of the country recognise and practise divorce by custom. But their practice cannot be treated as an ideal to be followed by all”. (Organiser, September 6, 1949).
ಯಥಾಸ್ಥಿತಿವಾದ ಅಂದರೆ ಇದೇ.. ಅದಕ್ಕೆ ಕಾಲಮಾನಗಳ ಅಂತರವಿರಲ್ಲ, ಬಾಷೆ ಮತ್ತು ಚಿಂತನೆಯಲ್ಲಿ ವ್ಯತ್ಯಾಸ ಇರಲ್ಲ, ವ್ಯಕ್ತಿ ವ್ಯಕ್ತಿಗಳ ನಡುವೆ ಗೊಂದಲವಿರಲ್ಲ..! ಇದನ್ನೇ ನಮ್ಮವರು ಪ್ಯಾಸಿಸಂ ಎಂದು ಕರೆದರು. ಅಂದು ಅವರು ಪ್ರತಿಪಾದಿಸಿದ್ದು, ಅದು ಮುಂದುವರೆದಿದ್ದೂ, ಇಂದು ಪ್ರತಿಪಾದಿಸುತ್ತಿರುವುದು ಒಂದೇ..!? ಭಾರತೀಯತೆಯ ಹೆಸರಲ್ಲಿ ಬ್ರಾಹ್ಮಣೀಯತೆಯನ್ನು, ಇದರಿಂದ ಭಾರತೀಯರಾದ ಇತರ ಬ್ರಾಹಮಣೇತರರಿಗೆ ಏನೇ ನಷ್ಟವಾದರೂ ಚಿಂತೆಯಿಲ್ಲ ಅವರಿಗೆ ಮಾತ್ರ ಲಾಭವಾಗಬೇಕಷ್ಟೆ ಅವರ ಸವರ್ಣಕುಲದ ಶ್ರೇಷ್ಠತೆ ಉಳಿಯಬೇಕಷ್ಟೆ!
ಇಲ್ಲಿ ಭಾರತೀಯರು, ಅದರಲ್ಲೂ ಬ್ರಾಹ್ಮಣ ಹೆಣ್ಣುಮಕ್ಕಳನ್ನೂ ಸೇರಿಸಿದಂತೆ ಇಡೀ ಸ್ತ್ರೀಕುಲಕ್ಕೆ ಇವರ ‘ಸಿದ್ದಾಂತ’ ಅದೆಷ್ಟು ಅಪಾಯಕಾರಿಯಾಗಿದೆ ಗಮನಿಸಿ? ಭೈರಪ್ಪನವರು ಹೆಣ್ಣಿನ ಮುಟ್ಟಿನ ಬಗ್ಗೆ, ಶಬರಿಮಲೆ ದೇವಾಲಯದ ಪ್ರವೇಶದ ಬಗ್ಗೆ ಅಸಹನೆ ಬೆರೆತ ವ್ಯಂಗ್ಯದಲ್ಲಿ ಮಾತನಾಡಿದ್ದಾರೆ. ಇದರಲ್ಲಿ ಅವರ ‘ಧ್ವನಿ’ಯನ್ನು ಗಮನಿಸಿ..? ಅದೇ ಏಳು ದಶಕಗಳ ಹಿಂದೆ ಅಪ್ಪನ ಆಸ್ತಿಯಲ್ಲಿ(ಪಿತ್ರಾರ್ಜಿತ ಆಸ್ತಿ) ಹೆಣ್ಣು ಮಕ್ಕಳಿಗೆ ಸಮಪಾಲು ನೀಡಬೇಕೆಂದು ಬಾಬಾಸಾಹೇಬರು ‘ಹಿಂದು ಕೋಡ್ ಬಿಲ್’ ತಂದಾಗ, ಅಂದೂ ಬೈರಪ್ಪನವರ ತಲೆಮಾರಿನವರು ಮಾತಾಡಿದ್ದು ಇಲ್ಲಿದೆ ಗಮನಿಸಿ…
An article in the Organiser, dated November 2, 1949, characterised the Hindu Code Bill “as a direct invasion on the faith of the Hindus”, remarking that “its provisions empowering women to divorce is revolting to the Hindu ideology”. An editorial published a month later (“The Hindu Code Bill”, the Organiser, December 7, 1949) led with this paragraph: “We oppose the Hindu Code Bill. We oppose it because it is a derogatory measure based on alien and immoral principles. It is not a Hindu Code Bill. It is anything but Hindu. We condemn it because it is a cruel and ignorant libel on Hindu laws, Hindu culture and Hindu dharma”.
ಮಾತೆತ್ತಿದರೆ ಭಾರತಮಾತೆಯನ್ನು ಉದ್ಗರಿಸುವ ಇವರ ಉದರದಲ್ಲಿರುವ ಸ್ತ್ರೀದ್ವೇಶವನ್ನು ಗಮನಿಸಿ..? ಅಂದಿಗೂ ಇಂದಿಗೂ ಬೈರಪ್ಪನವರ ಮತ್ತವರ ಪೂರ್ವಿಕರ ಚಿಂತನೆ ಮತ್ತು ಉದ್ದೇಶದಲ್ಲಿ ಏನಾದರೂ ಎಳ್ಳಷ್ಟು ವ್ಯತ್ಯಾಸವಿದೆಯೇ..? ಇಂತದ್ದೇ ಸ್ಪಷ್ಟತೆ ಅಂದು ಹಿಟ್ಲರ್ ನಲ್ಲೂ ಇತ್ತು ಇಂದು ಇವರಲ್ಲೂ ಇದೆ!
ನಾವು ಭೈರಪ್ಪನಂತವರನ್ನು ಬೈಯುವುದನ್ನು ನಿಲ್ಲಿಸಬೇಕು ಇಂದಾದರೂ ಒಂದಾಗಿ ಪರ್ಯಾಯಗಳನ್ನು ಹುಡುಕಬೇಕು.. ಈ ದೇಶವನ್ನು ಇವರಿಂದ ಉಳಿಸಬೇಕಾದರೆ ಇವರ ಮಾತುಗಳನ್ನು, ಇವರ ನುಡಿಕಟ್ಟನ್ನು ಅದರ ಹಿಂದಿನ ದುರುದ್ದೇಶಗಳನ್ನು ಮುಂದಿನ ತಲೆಮಾರಿಗಾದರೂ ಅರ್ಥಮಾಡಿಸಬೇಕು..
– ಸಿ.ಎಸ್.ದ್ವಾರಕಾನಾಥ್
‘ನಮ್ಮ ಸಂವಿಧಾನದಲ್ಲಿ ಪರಂಪರೆ’ ಇಲ್ಲ ಎಂದು ಹೇಳಿದ ಎಸ್.ಎಲ್.ಭೈರಪ್ಪ ಅವರ ಸುದ್ದಿ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.prajavani.net/stories/stateregional/shreevasta-smruti-632572.html
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ತನ್ನ 75 ವರ್ಷಗಳ ಅತ್ಯುತ್ತಮ ಶೈಕ್ಷಣಿಕ ಸೇವೆಯ ನೆನಪಿಗಾಗಿ (1951-2026) ಹಮ್ಮಿಕೊಂಡಿರುವ ಭವ್ಯ “ವಜ್ರ ಮಹೋತ್ಸವ ಕಾರ್ಯಕ್ರಮವು ಮೇ 29 ಮತ್ತು 30 ರಂದು ಕಾಲೇಜಿನ ಆವರಣದಲ್ಲಿ ಜರುಗಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಂಗಸಂಸ್ಥೆಯಾಗಿರುವ ಈ ಕಾಲೇಜಿನ ಉದ್ಘಾಟನಾ ಸಮಾರಂಭವು ಮೇ 29 ರ ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಆರಂಭವಾಗಲಿದ್ದು, ದೇಶ ಹಾಗೂ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿ.ಟಿ.ಯು. ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ , ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ (FTE&M) ಅಧ್ಯಕ್ಷರಾದ ಪ್ರೊ. ಟಿ. ಜಿ. ಸಿತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ವಿ.ಟಿ.ಯು ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ರಿಜಿಸ್ಟ್ರಾರ್ ಡಾ. ಪ್ರಸಾದ್ ಬಿ ರಾಂಪುರೆ , ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಉಜ್ವಲ್ ಯು.ಜೆ , ಹಣಕಾಸು ಅಧಿಕಾರಿ ಡಾ. ಪ್ರಶಾಂತ್ ನಾಯಕ್ , ಯು.ಬಿ.ಡಿ.ಟಿ.ಇ ಪ್ರಾಂಶುಪಾಲರಾದ ಡಾ. ಡಿ. ಪಿ. ನಾಗರಾಜಪ್ಪ ಮತ್ತು ವಿವಿ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶಾಸಕರುಗಳಾದ ಶಾಂತನಗೌಡ ಡಿ.ಜಿ., ಬಿ. ದೇವೇಂದ್ರಪ್ಪ, ಬಿ. ಪಿ. ಹರೀಶ್, ಶ್ರೀ ಬಸವರಾಜು ವಿ. ಶಿವಗಂಗಾ, ಕೆ. ಎಸ್. ಬಸವಂತಪ್ಪ, ಸಮರ್ಥ್ ಶಾಮನೂರು, ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್. ಭೋಜೆಗೌಡ, ಡಿ.ಎಸ್.ಅರುಣ್, ಡಾ. ಧನಂಜಯ್ ಸರ್ಜಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕಾಲೇಜಿನ ಹಳೆಯ ವಿದ್ಯಾರ್ಥಿ ಟಿ. ರಘುಮೂರ್ತಿ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಕಾಲೇಜಿನ ಹಳೆಯ ವಿದ್ಯಾರ್ಥಿ ಜನಾರ್ಧನ ಸ್ವಾ̧ಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ : ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ 2006 ರಿಂದ 2025ರ ಅವಧಿಯಲ್ಲಿ ಅಧ್ಯಯನ ಮಾಡಿರುವ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನದ ವಿತರಣೆ ಹಾಗೂ ಟ್ಯಾಬ್, ಲ್ಯಾಪ್‌ಟ್ಯಾಪ್, ಟೂಲ್‌ಕಿಟ್ ವಿತರಣೆಯಲ್ಲಿ ವಂಚನೆ ನಡೆಸಿರುವ ಪ್ರಾಂಶುಪಾಲರಾದ ಶ್ರೀ ಅಮರಪ್ಪ ಗಾಣಿಗೇರ ಇವರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ 2006 ರಿಂದ 2025ರ ಅವಧಿಯಲ್ಲಿ ಅಧ್ಯಯನ ಮಾಡಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿವೇತನ ಮತ್ತು ಅಧ್ಯಯನಕ್ಕೆ ಪೂರಕವಾಗಿ ಸರ್ಕಾರದಿಂದ ನೀಡಲಾದ ಟೂಲ್‌ಕಿಟ್‌ಗಳನ್ನು ವಿತರಣೆ ಮಾಡದೆ ವಂಚನೆ ಮಾಡಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಜಂಟಿ ನಿರ್ದೇಶಕರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳಿ ಇವರಿಗೆ ದೂರು ನೀಡಲಾಗಿತ್ತು.
ದೂರು ನೀಡಿ 4 ತಿಂಗಳು ಕಳೆಯುತ್ತ ಬಂದರೂ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳಿ ಇವರು ಯಾವುದೇ ತನಿಖೆ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕಾರಣ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇಂದು ಕರೆಂಟ್ ಇರಲ್ಲ
ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್‌ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್‌ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್‌ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ6 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ದಿನದ ಸುದ್ದಿ4 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ಅಂಕಣ6 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ7 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
-
ದಿನದ ಸುದ್ದಿ7 days agoಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
-
ದಿನದ ಸುದ್ದಿ2 days agoದಾವಣಗೆರೆ | ಇಂದು ಕರೆಂಟ್ ಇರಲ್ಲ
-
ದಿನದ ಸುದ್ದಿ1 day agoವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು

