Connect with us

ದಿನದ ಸುದ್ದಿ

ಆರ್ಥಿಕ ಹಿಂಜರಿತದ ಬಿರು ಮೋಡಗಳು ದಟ್ಟೈಸುತ್ತಿವೆ

Published

on

  • ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ. ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಮೋದಿ ಸರ್ಕಾರಕ್ಕೆ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.

ಜೂನ್ 2013 ರ ನಂತರ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ಮೊದಲ ಬಾರಿಗೆ 2019ರ ಮಾರ್ಚ್‌ನಲ್ಲಿ ಅದರ ಹಿಂದಿನ ಮಾರ್ಚ್‌ಗೆ ಹೋಲಿಸಿದರೆ 0.1% ಇಳಿಕೆಯಾಗಿದೆ. ಹಿಂದಿನ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಕಂಡ ತುಸು ಏರಿಕೆಯ ನಂತರ ಸೂಚ್ಯಂಕದಲ್ಲಿ ಇಳಿಕೆಯಾಗಿದೆ. ಇತ್ತೀಚಿನ ಅವಧಿಯಲ್ಲಿ ಕೈಗಾರಿಕಾ ಬೆಳವಣಿಗೆ ಮಂದವಾಗುತ್ತಿದೆ ಎಂಬ ಅಂಶವನ್ನು ಈ ಅಂಕಿಗಳು ಗಟ್ಟಿಯಾಗಿಯೇ ದೃಢಪಡಿಸುತ್ತವೆ.

ಈ ಸೂಚ್ಯಂಕದಲ್ಲಿ, 77.6 ಗಣನೆ ಹೊಂದಿರುವ ತಯಾರಿಕಾ ವಲಯದ ಬೆಳವಣಿಗೆಯು 2019ರ ಮಾರ್ಚ್‌ನಲ್ಲಿ ಅದರ ಹಿಂದಿನ ಮಾರ್ಚ್‌ಗೆ ಹೋಲಿಸಿದರೆ 0.4% ಇಳಿದಿದೆ. ತಯಾರಿಕಾ ವಲಯದ ಉಪ ವಿಭಾಗಗಳಾದ ಮೂಲ ವಸ್ತುಗಳ ಉತ್ಪಾದನೆಯಲ್ಲಿ 8.7%ಗೃಹ ಬಳಕೆ ವಸ್ತುಗಳ ಉತ್ಪಾದನೆಯಲ್ಲಿ 5.1%,ಮಧ್ಯವರ್ತಿ ವಸ್ತುಗಳ ಉತ್ಪಾದನೆಯಲ್ಲಿ 2.5%ಇಳಿಕೆಯಾಗಿದೆ ಮತ್ತು ಗೃಹ ಬಳಕೆಯೇತರ ವಸ್ತುಗಳ ಉತ್ಪಾದನೆಯಲ್ಲಿ 0.3% ಏರಿಕೆಯಾಗಿದೆ. ಇಡೀ 2018-19 ವರ್ಷದಲ್ಲಿ ಒಟ್ಟಾರೆ ಆಗಿರುವ 3.6% ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಅದರ ಹಿಂದಿನ 2017-18 ವರ್ಷದಲ್ಲಿದ್ದ 4.4% ಬೆಳವಣಿಗೆಗಿಂತಲೂ ಕಡಿಮೆ ಇದೆ. ಹಾಗಾಗಿ, 2018-19 ವರ್ಷದ ಕೊನೆಯ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತ ಬಲಿಯಲಾರಂಭಿಸಿತು.

ಒಂದು ರೀತಿಯಲ್ಲಿ ಈ ಹಿಂಜರಿತವು ಅನಿವಾರ್ಯವೇ. ಏಕೆಂದರೆ, ಭಾರತದ ಅರ್ಥವ್ಯವಸ್ಥೆಯು, ವಿಶ್ವದ ಇತರ ಅರ್ಥವ್ಯವಸ್ಥೆಗಳಂತಲ್ಲದೆ, ತ್ರಿಶಂಕು ಸ್ಥಿತಿಗೊಳಗಾಗಿದೆ. ಇದು, ರೋಗ ತಟ್ಟಿದೆ ಎಂಬುದರ ಒಂದು ಸೂಚನೆ. ನವ ಉದಾರವಾದವೇ ಅವಸಾನದ ಅಂಚಿನಲ್ಲಿದೆ. ಅದರ ಹಿಡಿತಕ್ಕೆ ಒಳಪಟ್ಟಿರುವ ಭಾರತದ ಅರ್ಥವ್ಯವಸ್ಥೆಯಲ್ಲಿ ಹಾಲಿ ಪರಿಸ್ಥಿತಿಯನ್ನು ಬದಲಿಸುವಂತಹ ಆಂತರಿಕ ಮಾರುಕಟ್ಟೆ ಆಧರಿತ ಯಾವ ಬದಲಿ ಆರ್ಥಿಕ ಆಳ್ವಿಕೆವೂ ಮುಂದೆ ಬರುತ್ತಿಲ್ಲ. ಹಾಗಾಗಿ, ಭಾರತದ ಅರ್ಥವ್ಯವಸ್ಥೆಯು ಒಂದು ತ್ರಿಶಂಕು ಸ್ಥಿತಿಯಲ್ಲಿದೆ.

ಜಾಗತಿಕ ಅರ್ಥವ್ಯವಸ್ಥೆಯ ಮಂದಗತಿಯ ಪರಿಣಾಮವಾಗಿ ಭಾರತ ಮತ್ತು ಚೀನಾದಂತಹ ಅರ್ಥವ್ಯವಸ್ಥೆಗಳು ಈಗ ನಲುಗುತ್ತಿವೆ. ಈ ದೇಶಗಳ ರಫ್ತು ದರಗಳು ಇಳಿಮುಖವಾಗುತ್ತಿವೆ. ರಫ್ತುಗಳ ಈ ಇಳಿಕೆಯನ್ನು ಸರಿದೂಗಿಸಿಕೊಳ್ಳಲು ಬೇಕಾಗುವ ಮಟ್ಟದಲ್ಲಿ ಆಂತರಿಕ ಮಾರುಕಟ್ಟೆಗಳನ್ನು ಬೆಳೆಸುವ ಕ್ರಮಗಳನ್ನೇ ದೇಶದಲ್ಲಿ ಕೈಗೊಂಡಿಲ್ಲ. ಹಾಗಾಗಿ, ದೇಶದ ಆಂತರಿಕ ಮಾರುಕಟ್ಟೆಯೂ ಕುಗ್ಗುತ್ತಿದೆ.

ಗ್ರಾಮೀಣ ಪರಿಸ್ಥಿತಿಯ ಯಾತನಾಮಯ ಕಾರಣದಿಂದಾಗಿ ಮತ್ತು ರಫ್ತು ದರ ಇಳಿಕೆಯ ಅಡ್ಡ ಪರಿಣಾಮಗಳ ಕಾರಣಗಳಿಂದಾಗಿ ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದೆ. ಜೊತೆಗೆ, ವಸೂಲಾಗದ ಸಾಲಗಳು ಹೆಚ್ಚಿದ ಕಾರಣದಿಂದಾಗಿ ಹೊಸ ಸಾಲಗಳು ದುರ್ಲಭವಾಗುತ್ತಿವೆ. ಇದರಿಂದಾಗಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಖರ್ಚು ಮಾಡುವುದು ಸಾಧ್ಯವಾಗುತ್ತಿಲ್ಲ. ಅಂದರೆ, ರಫ್ತುಗಳ ಇಳಿಕೆಯು, ಅದನ್ನು ಸರಿದೂಗಿಸಿಕೊಳ್ಳುವ ಮಾತು ಒತ್ತಟ್ಟಿಗಿರಲಿ, ದೇಶದ ಆಂತರಿಕ ಮಾರುಕಟ್ಟೆಯ ಕುಗ್ಗುವಿಕೆಗೂ ಕಾರಣವಾಗಿದೆ.

ಗೃಹ ಬಳಕೆ ವಸ್ತುಗಳ ತಯಾರಿಕೆ ಕುಗ್ಗುತ್ತಿರುವ ಅಂಶವು ದೇಶದ ಆಂತರಿಕ ಮಾರುಕಟ್ಟೆ ಕುಗ್ಗಿರುವ ಅಂಶವನ್ನು ಸ್ಪಷ್ಟಪಡಿಸುತ್ತದೆ. ಮತ್ತು, ಗೃಹ ಬಳಕೆಯೇತರ ವಸ್ತುಗಳ ಉತ್ಪಾದನಾ ವಲಯವು ಎಪ್ರಿಲ್‌ನಲ್ಲಿ ಅದರ ಹಿಂದಿನ ಎಪ್ರಿಲ್‌ಗೆ ಹೋಲಿಸಿದರೆ ಸ್ಥಗಿತವಾಗಿತ್ತು. ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ಇಳಿಯುತ್ತಿದೆ ಎಂಬುದನ್ನು ಅದಾಗಲೇ ಫೆಬ್ರವರಿಯಲ್ಲಿಯೇ ಮೂಲ ಸರಕು ಉತ್ಪಾದನಾ ವಲಯವು ಸ್ಥಗಿತಗೊಂಡಿದ್ದ ಪರಿಸ್ಥಿತಿಯೇ ಸೂಚಿಸುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಎರಡು ಬಾರಿ, ಪ್ರತಿ ಸಲವೂ 25 ಮೂಲಾಂಶದಷ್ಟು (ಅಂದರೆ, ಒಟ್ಟು 0.5%) ಬಡ್ಡಿ ದರ ಇಳಿಸಿದೆ. ಈ ಕ್ರಮದಿಂದಾಗಿ ಪರಿಸ್ಥಿತಿ ಹೆಚ್ಚು ಸುಧಾರಿಸುವ ಸಂಭವವಿಲ್ಲ. ಏಕೆಂದರೆ, ಸಾಲದ ಮೇಲಿನ ಬಡ್ಡಿ ದರ ಎಷ್ಟು ಎಂಬುದಕ್ಕಿಂತಲೂ ಸಾಲ ಕೊಡಲು ಬ್ಯಾಂಕ್‌ಗಳ ಬಳಿ ಎಷ್ಟು ಹಣ ಲಭ್ಯವಿದೆ ಎಂಬುದೇ ಸಾಲ ಕೊಡುವಿಕೆಯನ್ನು ತಡೆ ಹಿಡಿದಿರುವ ಅಂಶ.

ಹಿಂದಿನ ಸಾಲಗಳು ವಸೂಲಾಗದೇ ಉಳಿದ ಕಾರಣದಿಂದಾಗಿ ಬ್ಯಾಂಕ್‌ಗಳ ಬಳಿ ಹೊಸ ಸಾಲ ಕೊಡಲು ಹಣ ಲಭ್ಯವಿಲ್ಲ. ಒಂದು ವೇಳೆ ಹೊಸ ಸಾಲಗಳು ಲಭ್ಯವಿದ್ದರೂ ಅದರಿಂದ ಪರಿಸ್ಥಿತಿ ಎಷ್ಟರಮಟ್ಟಿಗೆ ಸುಧಾರಿಸುತ್ತಿತ್ತು ಎಂಬುದು ಸ್ಪಷ್ಟವಿಲ್ಲ. ಅದೇನಿದ್ದರೂ, ಸಾಲ ಲಭ್ಯತೆಯೇ ಬಿಗಿತಗೊಂಡಿರುವ ಪರಿಸ್ಥಿತಿಯಲ್ಲಿ ಬಡ್ಡಿ ದರ ಇಳಿಸುವುದರಿಂದಾಗಿ ಸಾಲ ಲಭ್ಯತೆ ಗಣನೀಯ ಎನ್ನುವಷ್ಟು ಹೆಚ್ಚುವುದಿಲ್ಲ.

ಈ ಪರಿಸ್ಥಿತಿಯಲ್ಲಿ ಅಗತ್ಯವಿರುವುದು ಏನೆಂದರೆ, ವಿತ್ತೀಯ ವಿಸ್ತರಣೆ. ಇಡೀ ಈ ವಿಷಯದ ಸಾರಾಂಶ ಇರುವುದು ಇಲ್ಲೇ. ಚುನಾವಣೆಗಳ ಈ ಕಾಲದಲ್ಲಿ, ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವ ಭರವಸೆಯನ್ನು ಬೇರೆ ಬೇರೆ ರಾಜಕೀಯ ಪಕ್ಷಗಳು ಕೊಟ್ಟಿವೆ. ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ ಮತ್ತು ಸೊರಗುತ್ತಿರುವ ಕೈಗಾರಿಕೆಗಳ ಉತ್ಪಾದನೆಗೆ ಚೈತನ್ಯ ತುಂಬುತ್ತದೆ. ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್‌ನಲ್ಲಿ, ಬಡ ಕುಟುಂಬಗಳಿಗೆ ಸೇರಿದ 12 ಕೋಟಿ ವ್ಯಕ್ತಿಗಳಿಗೆ ತಲಾ ವಾರ್ಷಿಕ 6,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ಅದಕ್ಕಿಂತಲೂ ಮುಂದೆ ಹೋಗಿ, ತನ್ನ ನ್ಯಾಯ ಯೋಜನೆಯಡಿಯಲ್ಲಿ, ಐದು ಕೋಟಿ ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂಗಳಂತೆ ವರ್ಷಕ್ಕೆ 72,000 ರೂಗಳನ್ನು ಕೊಡುವುದಾಗಿ ಭರವಸೆ ಕೊಟ್ಟಿತ್ತು.

ಇಂತಹ ಯೋಜನೆಗಳು, ಅದರಲ್ಲೂ ವಿಶೇಷವಾಗಿ ಭಾರೀ ಮಹತ್ವಾಕಾಂಕ್ಷೆಯ ನ್ಯಾಯ ಯೋಜನೆಯು ದೇಶದ ಆಂತರಿಕ ಮಾರುಕಟ್ಟೆಯನ್ನು ಹಿಗ್ಗಿಸುವಲ್ಲಿ ಸಹಾಯವಾಗುತ್ತಿತ್ತು. ಆದರೆ, ಇಂತಹ ಯೋಜನೆಗೆ ಹಣ ಎಲ್ಲಿದೆ ಎಂಬ ಪ್ರಶ್ನೆ ಏಳುತ್ತದೆ. ಶ್ರೀಮಂತರಿಗೆ ತೆರಿಗೆ ವಿಧಿಸುವ ಮೂಲಕ, ಅಂದರೆ ಅವರ ಸಂಪತ್ತಿನ ಮೇಲೆ ತೆರಿಗೆ ಹಾಕುವ ಮೂಲಕ ಈ ಯೋಜನೆಗೆ ಬೇಕಾಗುವಷ್ಟು ಹಣವನ್ನು ಹೊಂದಿಸಿಕೊಳ್ಳಬಹುದು. ಈ ದೇಶದಲ್ಲಿ ಸಂಪತ್ತಿನ ಮೇಲೆ ತೆರಿಗೆಯೇ ಇಲ್ಲ. ಹಿಂದೆ ಇದ್ದ ಇಂತಹ ಒಂದು ಕಾನೂನನ್ನು ಕಿತ್ತುಹಾಕಿ ವರ್ಷಗಳೇ ಕಳೆದಿವೆ.

ಸಂಪತ್ತು ತೆರಿಗೆಯಂತಹ ಒಂದು ಕಾನೂನನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಶತಾಯು ಗತಾಯು ವಿರೋಧಿಸುತ್ತದೆ. ನ್ಯಾಯ ಯೋಜನೆಯ ಘೋಷಣೆ ಮಾಡುವಾಗ, ಅದಕ್ಕೆ ಬೇಕಾಗುವ ಹಣ ಹೊಂದಿಸಿಕೊಳ್ಳುವುದು ಕಷ್ಟವಾಗಲಾರದು ಎಂಬ ಬಹಳ ಚಾತುರ್ಯದ ಉತ್ತರ ಕೊಟ್ಟಿದ್ದರು ಮನಮೋಹನ ಸಿಂಗ್. ಆದರೆ, ನವ ಉದಾರ ಆರ್ಥಿಕ ಆಳ್ವಿಕೆಯಲ್ಲಿ ಇಂತಹ ಯೋಜನೆಗೆ ಹಣ ಹೊಂದಿಸಿಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸವೇ.

ಅದೇ ರೀತಿಯಲ್ಲಿ ಇಂತಹ ಯೋಜನೆಗೆ ಸರ್ಕಾರವು ವಿತ್ತೀಯ ಕೊರತೆಯ ಮೂಲಕ ಭಾಗಶಃ ಹಣ ಒದಗಿಸಿದರೂ ಅದು ವಿತ್ತೀಯ ಕೊರತೆಯನ್ನು ಹೆಚ್ಚಿಸಿ ಜೊತೆಗೆ, ಈ ಕೊರತೆಯ ಮೇಲೆ ವಿಧಿಸಿರುವ ಮಿತಿಯನ್ನು (ಜಿಡಿಪಿಯ 3.4%) ತಪ್ಪದೇ ಮೀರುತ್ತದೆ. ಆಗ, ಭಾರತದ ಕ್ರೆಡಿಟ್ ರೇಟಿಂಗ್‌ಅನ್ನು ಕೆಳ ದರ್ಜೆಗೆ ಇಳಿಸುವ ಸಂಭವವಿದೆ. ಅಂತಹ ಸಂದರ್ಭದಲ್ಲಿ, ವಿದೇಶ ವ್ಯಾಪಾರದಿಂದ ಉಂಟಾದ ಕೊರತೆಯನ್ನು ತೀರಿಸುವ ಸಲುವಾಗಿ ಚಾಲ್ತಿ ಖಾತೆಯ(ವಿದೇಶಿ ವಿನಿಮಯ) ಕೊರತೆ ತುಂಬಿಸಿಕೊಳ್ಳುವುದು ಭಾರೀ ಕಷ್ಟದ ಕೆಲಸವಾಗುತ್ತದೆ.

ಚಾಲ್ತಿ ಖಾತೆ ಕೊರತೆ ಸಮಸ್ಯೆಯು ಅಮೇರಿಕಾದ ಒತ್ತಾಯಕ್ಕೆ ಕಟ್ಟುಬಿದ್ದು ಮಾರುಕಟ್ಟೆಯ ದೈನಿಕ ದರದಲ್ಲಿ ತೈಲ ಕೊಂಡಾಗಲೂ ಉಂಟಾಗುತ್ತದೆ. ಈಗ ದೇಶವು ಇರಾನಿನಿಂದ ಅಗ್ಗದ ದರದಲ್ಲಿ ತೈಲ ಕೊಳ್ಳುತ್ತಿದೆ, ಬೇರೊಂದು ಕಾರಣದ ಮೇಲೆ, ಇರಾನಿನಿಂದ ತೈಲ ಕೊಳ್ಳಕೂಡದು ಎಂದು ಅಮೇರಿಕಾ ಒತ್ತಾಯಿಸುತ್ತಿದೆ. ಅಮೇರಿಕಾದ ಒತ್ತಡಕ್ಕೆ ಮೋದಿ ಸರ್ಕಾರವು ಈಗಾಗಲೇ ತಲೆಬಾಗಿದೆ. ಅಧಿಕಾರಕ್ಕೆ ಮರಳಿದ ನಂತರವೂ ಇದೇ ನಿಲುವಿಗೆ ಆತುಕೊಳ್ಳುತ್ತದೆ.

ಈಗಾಗಲೇ ಖಚಿತ ಏರು ಮುಖಿಯಾಗಿರುವ ತೈಲ ಬೆಲೆಗಳಿಂದಾಗಿ ಚಾಲ್ತಿ ಖಾತೆಯಲ್ಲಿ ಕೊರತೆ ಹೆಚ್ಚಲಿದೆ. ಇರಾನಿನ ಮೇಲೆ ಅಮೇರಿಕಾ ಹೇರಿರುವ ನಿರ್ಬಂಧಗಳು ಜಾರಿಯಾದಾಗ ಚಾಲ್ತಿ ಖಾತೆಯಲ್ಲಿ ಕೊರತೆ ಮತ್ತಷ್ಟು ಹೆಚ್ಚಲಿದೆ. ಅದರ ಜೊತೆಗೆ ವಿತ್ತೀಯ ಕೊರತೆಯು ಗರಿಷ್ಠ ಮಿತಿಗಿಂತಲೂ ಹೆಚ್ಚಿಗೆ ಇದ್ದರೆ, ಕ್ರೆಡಿಟ್ ರೇಟಿಂಗ್ ಕೆಳ ದರ್ಜೆಗೆ ಇಳಿಯುತ್ತದೆ. ಅದರ ಪರಿಣಾಮವಾಗಿ ಬಂಡವಾಳದ ಒಳಹರಿವೂ ಬತ್ತುತ್ತದೆ. ಆಗ, ಚಾಲ್ತಿ ಖಾತೆ (ವಿದೇಶಿ ವಿನಿಮಯ) ಕೊರತೆ ನಿಭಾಯಿಸುವುದು ವಾಡಿಕೆಯ ಪ್ರಕಾರ ಸಾಧ್ಯವಾಗುವುದಿಲ್ಲ.

ನಾವೀಗ ಒಂದು ವಿಲಕ್ಷಣ ಪರಿಸ್ಥಿತಿಯಲ್ಲಿದ್ದೇವೆ. ಬಲಿಯುತ್ತಿರುವ ಹಿಂಜರಿತವನ್ನು ತಡೆಯಲು ಒಂದು ಕಡೆ ಪ್ರಯತ್ನಿಸಿದರೆ ಚಾಲ್ತಿ ಖಾತೆ ಕೊರತೆ ನಿಭಾಯಿಸುವುದು ಕಷ್ಟವಾಗುತ್ತದೆ. ಇನ್ನೊಂದು ಕಡೆ ಹಿಂಜರಿತವನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡದಿದ್ದರೆ, ಈಗಾಗಲೇ ಭೀಕರವಾಗಿರುವ ನಿರುದ್ಯೋಗವು ಇನ್ನಷ್ಟು ಭೀಕರವಾಗಗುತ್ತದೆ.

ನಿರುದ್ಯೋಗದ ಭೀಕರತೆ ಸಾರ್ವಜನಿಕರ ಗಮನಕ್ಕೆ ಬರದಿರಲಿ ಎಂಬ ದುರುದ್ದೇಶದಿಂದ ಸರ್ಕಾರವು ನಿರುದ್ಯೋಗ ಪರಿಸ್ಥಿತಿಯ ಬಗ್ಗೆ ಯಾವ ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಲು ಎರಡು ವರ್ಷಗಳಿಂದಲೂ ನಿರಾಕರಿಸಿದೆ. ಆದರೆ, ಸರ್ಕಾರದ ಅಂಕಿ ಸಂಖ್ಯೆಗಳ ಸಂಸ್ಥೆಯು ಬಚ್ಚಿಟ್ಟಿದ್ದ ಒಂದು ವರದಿಯು ಸೋರಿಕೆಯಾಗಿದೆ. ಈ ವರದಿಯ ಪ್ರಕಾರ, 6.1%ನಿರುದ್ಯೋಗ ದರ ಏರಿಕೆ ಕಳೆದ 45ವರ್ಷಗಳಲ್ಲೇ ಅತಿ ಹೆಚ್ಚಿನದು.

ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ಸಿಎಂಐಇ ಸಂಸ್ಥೆಯ ಪ್ರಕಾರ 2019ರ ಎಪ್ರಿಲ್‌ನಲ್ಲಿ ನಿರುದ್ಯೋಗ ದರ 7.6% ಇತ್ತು. ನಿರುದ್ಯೋಗ ದರವು ನಿರುದ್ಯೋಗದ ಏರಿಕೆ ಅಥವಾ ಇಳಿಕೆಯ ದಿಕ್ಕನ್ನು ಸೂಚಿಸುತ್ತದೆಯಲ್ಲದೆ ಅದರ ಅಗಾಧತೆಯನ್ನು ತೋರಿಸುವುದಿಲ್ಲ. ಏಕೆಂದರೆ, ಉದ್ಯೋಗಗಳ ಹರವು ಏಕ ರೂಪದಲ್ಲಿಲ್ಲ. ಎಲ್ಲೋ ಕೆಲವರು ಪೂರ್ಣಾವಧಿ ಉದ್ಯೋಗದಲ್ಲಿದ್ದರೆ, ಹೆಚ್ಚಿನ ಮಂದಿ ಅರೆ ಕಾಲಿಕ ಉದ್ಯೋಗದಲ್ಲಿದ್ದಾರೆ, ಉಳಿದವರು ಪೂರಾ ನಿರುದ್ಯೋಗಿಗಳು.

ಆದ್ದರಿಂದ, ಸರ್ಕಾರವು ನಿರುದ್ಯೋಗ ಪರಿಸ್ಥಿತಿಯನ್ನು ತಕ್ಕಮಟ್ಟಿಗಾದರೂ ಸುಧಾರಿಸುವ ಕೆಲಸ ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಏನು ಮಾಡಲು ಹೊರಟರೂ, ನವ ಉದಾರ ಮಾದರಿಯ ಆರ್ಥಿಕ ಆಳ್ವಿಕೆಯ ಸಂದರ್ಭದಲ್ಲಿ, ಅದು ವಿದೇಶ ವ್ಯಾಪಾರದ ಬಾಕಿ ಚುಕ್ತಾ (ಪಾವತಿ ಶೇಷ) ಪರಿಸ್ಥಿತಿಯನ್ನು ಅಸ್ಥಿರಗೊಳಿಸುತ್ತದೆ. ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ನವ ಉದಾರ ಆರ್ಥಿಕ ಮಾದರಿಯ ಪರಿಸ್ಥಿತಿ.

ನವ ಉದಾರವಾದವೇ ತನ್ನ ಅಂತ್ಯವನ್ನು ತಲುಪಿರುವ ಪರಿಸ್ಥಿತಿಯಲ್ಲಿ ಅದರ ಹಿಡಿತದಿಂದ ಕಳಚಿಕೊಳ್ಳುವ ಒಂದು ಅವಕಾಶವಿದೆ. ವಿದೇಶ ವ್ಯಾಪಾರ ಮತ್ತು ಬಂಡವಾಳದ ಹರಿವಿನ ಮೇಲೆ ನಿಯಂತ್ರಣ ಹೇರುವ ಮೂಲಕ ನವ ಉದಾರವಾದದ ಹಿಡಿತದಿಂದ ಕಳಚಿಕೊಳ್ಳುವ ಅವಕಾಶವನ್ನು ಸದುಪಯೋಗಿಸಿ ಕೊಳ್ಳಬಹುದು. ಅಮೇರಿಕಾ ಈಗಾಗಲೇ ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದೆ.

ಭಾರತವೂ ಅದನ್ನು ಅನುಸರಿಸಬಹುದಿತ್ತು. ಅಂತಹ ಒಂದು ತೀರ್ಮಾನ ಕೈಗೊಂಡಾಗ, ಸಂಪತ್ತು ತೆರಿಗೆ ಮತ್ತು ಅನುವಂಶಿಕ ಆಸ್ತಿ ತೆರಿಗೆ ವಿಧಿಸುವುದು ಸಾಧ್ಯವಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ, ಚುನಾವಣೆಗಳ ಸಮಯದಲ್ಲಿ ಗ್ರಾಮೀಣ ಬಡವರಿಗೆ ದೊಡ್ಡ ಮೊತ್ತದ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸುವುದಾಗಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸುವುದು ಸಾಧ್ಯವಿತ್ತು. ವರ್ಗಾವಣೆಯ ಈ ಕಾರ್ಯಕ್ರಮವು ಖಂಡಿತವಾಗಿಯೂ ದೇಶದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿತ್ತು. ತರುವಾಯ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವ ಕ್ರಮ ಕೈಗೊಳ್ಳಬಹುದಿತ್ತು.

ಈ ರೀತಿಯಲ್ಲಿ ನೀತಿಗಳನ್ನು ಬದಲಾಯಿಸಿಕೊಂಡಿದ್ದರೆ, ಬಂಡವಾಳದ ಒಳ ಹರಿವು ಬತ್ತಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ವಿದೇಶ ವ್ಯಾಪಾರದ ಮೇಲೆ ನಿಯಂತ್ರಣ ಹೇರಿದಾಗ ಚಾಲ್ತಿ ಖಾತೆಯ ಕೊರತೆಯೂ ಹದ್ದುಬಸ್ತಿನಲ್ಲಿರುತ್ತದೆ. ಹಾಗಾಗಿ, ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೂ ಸಮಸ್ಯೆಯಾಗುವುದಿಲ್ಲ.

ಆದರೆ, ನವ ಉದಾರವಾದವು ತನ್ನ ಅಂತ್ಯವನ್ನು ತಲುಪಿದೆ ಎಂಬ ಅರಿವು ಮೋದಿ ಸರ್ಕಾರಕ್ಕೆ ಇದ್ದಂತಿಲ್ಲ. ನವ ಉದಾರವಾದೀ ಸುಧಾರಣೆಗಳ ವಿನ್ಯಾಸಕಾರನಾದ ಕಾಂಗ್ರೆಸ್ ಪಕ್ಷಕ್ಕೆ, ನ್ಯಾಯ ಯೋಜನೆಯ ಬಗ್ಗೆ ಕೊಟ್ಟ ಭರವಸೆಯ ಹೊರತಾಗಿಯೂ, ನವ ಉದಾರವಾದಕ್ಕೆ ಮುಂದಕ್ಕೆ ಸಾಗಲು ದಾರಿ ಕಾಣದಾಗಿರುವಾಗ ಅದನ್ನು ಧಿಕ್ಕರಿಸುವ ನೀತಿಗಳನ್ನು ಅನುಸರಿಸುವ ಧೈರ್ಯವಿಲ್ಲ. ಆದ್ದರಿಂದ, ಕೈಗಾರಿಕಾ ಹಿಂಜರಿತವು ಉಲ್ಬಣಗೊಳ್ಳುವ ಸಂಭವವಿದೆ.

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

Published

on

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ14 hours ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ....

ದಿನದ ಸುದ್ದಿ14 hours ago

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು...

ದಿನದ ಸುದ್ದಿ2 days ago

ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ

ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ...

ದಿನದ ಸುದ್ದಿ3 days ago

ಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:2026-27ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾವಂತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ದಾಖಲಿಸುವ ಯೋಜನೆಯಡಿ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿ̧ದೆ, ಅರ್ಜಿಗಳನ್ನು ಏಪ್ರಿಲ್‌...

ದಿನದ ಸುದ್ದಿ3 days ago

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಸೇರಲು ಆಸಕ್ತರು ಏಪ್ರಿಲ್‌ 10 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಆಸಕ್ತರು ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ...

ದಿನದ ಸುದ್ದಿ3 days ago

ಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 9 ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು...

ಅಂತರಂಗ4 days ago

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

~ಗೋವರ್ಧನ ನವಿಲೇಹಾಳು  ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ...

ದಿನದ ಸುದ್ದಿ7 days ago

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್...

ಅಂಕಣ7 days ago

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

~ಗೋವರ್ಧನ ನವಿಲೇಹಾಳು ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ....

ದಿನದ ಸುದ್ದಿ1 week ago

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು...

Trending