Connect with us

ಸಿನಿ ಸುದ್ದಿ

ಟಾಕೀಸ್ ಸಿನಿವಾರದಲ್ಲಿ– ‘ಸ್ಪಾಟ್ ಲೈಟ್’ ಚಿತ್ರ ಪ್ರದರ್ಶನ ಮತ್ತು ಸಂವಾದ

Published

on

ಸುದ್ದಿದಿನ,ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ವಿಶ್ವ ಪತ್ರಿಕೋದ್ಯಮ ದಿನದ ಅಂಗವಾಗಿ2015ರಲ್ಲಿ ತೆರೆಕಂಡ ತನಿಕಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸ್ಪಾಟ್ ಲೈಟ್ ಇಂಗ್ಲೀಷ್ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾ ಭವನದ ಎರಡನೇ ಮಹಡಿಯ ಮಿನಿಚಿತ್ರಮಂದಿರಲ್ಲಿ ದಿನಾಂಕ 06-07-2019ರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ಸ್ಪಾಟ್ ಲೈಟ್ ಚಿತ್ರ ಆರಂಭವಾಗುವುದು 1976ರ ಒಂದು ಘಟನೆಯಿಂದ. ಅಮೇರಿಕಾದ ಬೋಸ್ಟನ್‍ನ ಒಂದು ಪೋಲಿಸ್ ಠಾಣೆಯಲ್ಲಿ ಒಂದೆಡೆ ನಾಲ್ಕು ಮಕ್ಕಳು ಮತ್ತು ಅವರ ತಾಯಿ ಕುಳಿತಿದ್ದರೆ ಇನ್ನೊಂದು ಕೋಣೆಯಲ್ಲಿ ಅ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಕಿದ ಒಬ್ಬ ಪಾದ್ರಿ ಕುಳಿತಿರುತ್ತಾನೆ. ಪೋಲಿಸ್ ಅಧಿಕಾರಿಗಳು ಮತ್ತು ಡಿಸ್ಟ್ರಿಕ್ಟ್ ಅಟಾರ್ನಿ ಸೇರಿ ಪಾದ್ರಿಯನ್ನು ಬಿಡುಗಡೆಗೊಳಿಸಿ ಆ ಘಟನೆಯನ್ನು ಅಲ್ಲಿಯೇ ಮುಚ್ಚಿಹಾಕಲಾಗುತ್ತದೆ.2001ರಲ್ಲಿ ಬೋಸ್ಟನ್ ಗ್ಲೋಬ್ ಪತ್ರಿಕೆಗೆ ಹೊಸ ಸಂಪಾದಕ ನೇಮಕಗೊಳ್ಳುತ್ತಾನೆ. ಆ ಪತ್ರಿಕೆಯ ತನಿಕಾ ಪತ್ರಿಕೋದ್ಯಮದಲ್ಲಿ ನಿರತವಾಗಿರುವ ತಂಡವಿದೆ. ಅದುವೇ ಸ್ಪಾಟ್‍ಲೈಟ್ ತಂಡ. 1976ರ ಘಟನೆ ಸರಿಯಾದ ಫಾಲೋಅಪ್ ಆಗಿಲ್ಲವಾದುದ್ದರಿಂದ ಆ ವಿಷಯನ್ನು ಕೈಗೆತ್ತಿಕೊಳ್ಳುವಂತೆ ಹೊಸ ಸಂಪಾದಕ ಸ್ಪಾಟ್‍ಲೈಟ್ ತಂಡಕ್ಕೆ ಸೂಚಿಸುತ್ತಾನೆ.

ಮುಂದಿನ ಘಟನಾವಳಿಯನ್ನು ಚಿತ್ರ ಪ್ರೇಕ್ಷಕನ ಮುಂದೆ ಅತ್ಯುತ್ತಮವಾಗಿ ನಿರ್ದೇಶಕ ಟಾಮ್‍ಮ್ಯಾಕ್‍ಕಾರ್ಟಿ ತೆರೆದಿಟ್ಟಿದ್ದಾರೆ. ಚಿತ್ರವು 2015ರ ಅತ್ಯುತ್ತಮ ಚಿತ್ರ ಜೊತೆಗೆ 150ಕ್ಕೂ ಹೆಚ್ಚು ಪ್ರಶಸ್ತಿ ಮತ್ತು ನಾಮಿನೇಶನ್ ಗಳನ್ನು ಪಡೆದ ಚಿತ್ರವೆಂಬ ಹೆಗ್ಗಳಿಕೆ ಪಡೆದು ಹಲವಾರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಚಿತ್ರದ ಒಟ್ಟು ಅವಧಿ 129 ನಿಮಿಷಗಳು. ಚಿತ್ರಕ್ಕೆ ಇಂಗ್ಲೀಷ್ ಸಬ್‍ಟೈಟಲ್ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ

Published

on

ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.

ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ

Published

on

ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ

Published

on

ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.

ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್‌ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್‌ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್...

ದಿನದ ಸುದ್ದಿ2 hours ago

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ....

ದಿನದ ಸುದ್ದಿ17 hours ago

ವಿಷಹಾರ | ಹೋಟೆಲ್, ರೆಸ್ಟೋರೆಂಟ್ ತಪಾಸಣೆಗೆ ಕ್ರಮ

ಸುದ್ದಿದಿನಡೆಸ್ಕ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and...

ದಿನದ ಸುದ್ದಿ18 hours ago

ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ

ಸುದ್ದಿದಿನ,ಬೆಂಗಳೂರು:ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್...

ದಿನದ ಸುದ್ದಿ18 hours ago

ರೇಣುಕಸ್ವಾಮಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಲಿ : ಜಂಗಮ ಸಮಾಜ ಪ್ರತಿಭಟನೆ

ಸುದ್ದಿದಿನ,ಮಸ್ಕಿ:ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಜಂಗಮ ಸಮಾಜ ವತಿಯಿಂದ ನಮ್ಮ ಸಮುದಾಯದ ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಕೊಲೆಗೈದ ಕೊಲೆಗಡಕರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಗಚ್ಚಿನ...

ದಿನದ ಸುದ್ದಿ1 day ago

ಜಗಳೂರು | ವ್ಯಕ್ತಿ ಮೇಲೆ ನಾಲ್ಕು ಕರಡಿದಾಳಿ

ಸುದ್ದಿದಿನ,ಜಗಳೂರು : ಜಮೀನಿಗೆ ಹೋಗಿದ್ದ ವ್ಯಕ್ತಿ ಮೇಲೆ ನಾಲ್ಕು ಕರಡಿಗಳ ದಾಳಿ‌ ಮಾಡಿ ಹಿಗ್ಗಾಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ...

ದಿನದ ಸುದ್ದಿ1 day ago

ಶ್ರೀ ಉಚ್ಚಂಗೆಮ್ಮದೇವಿ ಸದ್ಭಕ್ತರಿಗೊಂದು ವಿಸ್ಮಯಕಾರಿ ಸುದ್ದಿ : ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್

ಗಂಗಾಧರ ಬಿ ಎಲ್ ನಿಟ್ಟೂರ್ ಭಾರತ ದೇಶ ಹಲವು ಅಚ್ಚರಿ, ವಿಚಿತ್ರ, ವಿಸ್ಮಯಗಳ ತಾಣ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಹಿಡಿದು, ಸೃಷ್ಟಿಕರ್ತನ ಕೈಚಳಕದ ಕುಲುಮೆಯಲ್ಲಿ ಅರಳಿರುವ ಹಲವು...

ಅಂತರಂಗ1 day ago

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

ರುದ್ರಪ್ಪ ಹನಗವಾಡಿ  ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ...

ದಿನದ ಸುದ್ದಿ1 day ago

ಪಿಎಂ ಕಿಸಾನ್ ನಿಧಿ ಯೋಜನೆ | ರೈತರ ಖಾತೆಗಳಿಗೆ ಬರುವ ಮಂಗಳವಾರ ಹಣ ವರ್ಗಾವಣೆ

ಸುದ್ದಿದಿನಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರುವ ಮಂಗಳವಾರ 18 ರಂದು ’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ 9 ಕೋಟಿ 3 ಲಕ್ಷ ರೈತರ ಖಾತೆಗೆ 20...

ದಿನದ ಸುದ್ದಿ2 days ago

ಭಾರತೀಯ ಸೇನೆ | ವಿವಿಧ ಹುದ್ದೆಗಳಿಗೆ ಸೇರಬಸುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಭಾರತೀಯ ಸೇನೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1,...

Trending