Connect with us

ರಾಜಕೀಯ

ಬಹುಜನ ಸಮಾಜ ಪಕ್ಷ ನಿಜಕ್ಕೂ ಬಹು ಜನರನ್ನು ಒಳಗೊಂಡಿದೆಯೇ..?

Published

on

  • ವಿವೇಕಾನಂದ. ಹೆಚ್.ಕೆ

ಭಾರತದಲ್ಲಿ ಅಸ್ತಿತ್ವದಲ್ಲಿರುವ ಬಹುಮುಖ್ಯ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಕಾಂಗ್ರೆಸ್‌, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಪಕ್ಷ. ಉತ್ತರ ಪ್ರದೇಶದಲ್ಲಿ ಮೂರು ಬಾರಿ ಅಧಿಕಾರವನ್ನು ನಡೆಸಿದೆ ಮತ್ತು ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದ ಭಾಗವೂ ಆಗಿದ್ದಿತು.ಕಾನ್ಷಿರಾಂ ಎಂಬುವವರು ಬಹು ಶ್ರಮದಿಂದ ಕಟ್ಟಿದ ಮತ್ತು ಈಗ ಮಾಯಾವತಿಯವರು ಅಧ್ಯಕ್ಷರಾಗಿರುವ ಪಕ್ಷವದು.ಅಂಬೇಡ್ಕರ್ ಮತ್ತು ಅವರ ವಿಚಾರಗಳ ಆಧಾರದ ಮೇಲೆ ಈ ಪಕ್ಷ ಹೋರಾಟ ಮಾಡುತ್ತಿದೆ ಎಂಬುದು ಅದರ ಅನುಯಾಯಿಗಳ ಸಮರ್ಥನೆ ಮತ್ತು ಮೂಲ ಆಶಯ.

ಹಾಗಾದರೆ ಇದು ವಾಸ್ತವವೇ ?

ಅದರ ಒಟ್ಟು ಇತಿಹಾಸದ ರಾಜಕೀಯ ನಡೆಗಳನ್ನು ಗಮನಿಸಿದಾಗ ನಮ್ಮ ಕರ್ನಾಟಕದ ಜನತಾದಳ ಪಕ್ಷದಂತೆ ಬಹುತೇಕ ಅಧಿಕಾರದ ಲಾಭ ನಷ್ಟಗಳನ್ನು ನೋಡಿಕೊಂಡು ಎಲ್ಲಾ ಕಡೆಯೂ ಸಲ್ಲುವ ಅನುಕೂಲಕರ ನಿರ್ಧಾರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ತನ್ನ ಸಿದ್ದಾಂತಗಳಿಗೆ ವಿರುದ್ಧ ನಿಲುವಿನ ಬಿಜೆಪಿಯ ಜೊತೆಗೂ, ತನ್ನ ಮೇಲೆ ಹಲ್ಲೆ ಮಾಡಿದ ಪ್ರಬಲ ಯಾದವ ಜಾತಿಯ ಸಮಾಜವಾದಿ ಪಕ್ಷದ ಜೊತೆಗೂ, ಕೆಲವು ಕಡೆ ತಾವು ವಿರೋಧಿಸುವ ಗಾಂಧಿ ತತ್ವದ ನೆಲೆಯ ಕಾಂಗ್ರೆಸ್ ಪಕ್ಷದ ಜೊತೆಯೂ ಸೇರುತ್ತಾರೆ.

ಅಂದರೆ ಅಂಬೇಡ್ಕರ್ ಶೋಷಿತರ ಜಾಗೃತಿಗಾಗಿ ಘೋಷಿಸಿದ ಶಿಕ್ಷಣ ಸಂಘಟನೆ ಹೋರಾಟ ಎಂಬ ತ್ರಿವಳಿ ಸಂದೇಶಕ್ಕೆ ಎಲ್ಲವೂ ಅಧಿಕಾರಕ್ಕಾಗಿ ಎಂಬುದನ್ನು ಹೊಸದಾಗಿ ಸೇರ್ಪಡೆಯಾದಂತೆ ಆಗುತ್ತದೆ. ಅಂಬೇಡ್ಕರ್ ರಾಜಕೀಯ ಅಧಿಕಾರದ ಪ್ರಾಮುಖ್ಯತೆ ಬಗ್ಗೆ ಖಂಡಿತ ಹೇಳಿದ್ದಾರೆ. ಅದರ ಜೊತೆಗೆ ಮಾರ್ಗವೂ ಮುಖ್ಯವಾಗಬೇಕಾಗುತ್ತದೆ.

ವಿಶಾಲ ತಳಹದಿಯ ಮೇಲೆ ಒಂದು ಪಕ್ಷ ಮತ್ತು ಸಂಘಟನೆ ದೊಡ್ಡದಾಗಿ ಬೆಳೆಯಬೇಕಾದರೆ ದೀರ್ಘಕಾಲದಲ್ಲಿ ಹೇಗೆಂದರೆ ಹಾಗೆ ತತ್ ಕ್ಷಣದ ಲಾಭವನ್ನು ನೋಡಬಾರದು. ಒಂದು ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೂಡ ಆ ಪಕ್ಷದ ಬಗ್ಗೆ ಅದರ ನ್ಯಾಯ ನೀತಿ ಧರ್ಮದ ಬಗ್ಗೆ ಸಹಜ ಗೌರವ ಮೂಡುವಂತಿರಬೇಕು. ಅದರಲ್ಲಿ ಬಿಎಸ್ಪಿ ವಿಫಲವಾಗಿದೆ ಎಂದು ಹೇಳಬಹುದು.

ಮಾಯಾವತಿ ಹೊರತುಪಡಿಸಿ ಮತ್ತೊಂದಿಷ್ಟು ನಾಯಕರಗಳನ್ನು ಅವರ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸಲಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಾಣುತ್ತದೆ . ಅಂಬೇಡ್ಕರ್ ವಾದದ ಹಿನ್ನೆಲೆಯ ಅನೇಕ ಯುವ ಮತ್ತು ಅನುಭವಿ ಸಂಘಟಕರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸದೆ ಪರ್ಯಾಯ ನಾಯಕತ್ವದ ಅಸೂಯೆಯಿಂದ ಅವರಿಗೆ ಪ್ರೋತ್ಸಾಹ ನೀಡಲಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಿದ್ಧವಾಗುತ್ತಿರುವಾಗಲೇ ರಾಜಕೀಯ ಪ್ರವೇಶಿಸಿದ ವಿದ್ಯಾವಂತೆ ಮತ್ತು ಬುದ್ದಿವಂತೆಯಾದ ಮಾಯಾವತಿಯರ ಬಹುದೊಡ್ಡ ಸಮಸ್ಯೆ ಸರ್ವಾಧಿಕಾರಿ ಮನೋಭಾವ, ಅಧಿಕಾರ ಲಾಲಸೆ ಮತ್ತು ಹೊಂದಾಣಿಕೆಯ ಮನೋಭಾವದ ಕೊರತೆ. ಜೊತೆಗೆ ಆಡಳಿತಾತ್ಮಕ ದಕ್ಷತೆಯೂ ಕಡಿಮೆ.

ಸರಿಯೋ ತಪ್ಪೋ ಆದರೆ ಜನರ ಬೆಂಬಲವನ್ನು ನಿರಂತರವಾಗಿ ಗಳಿಸಿದ ದೆಹಲಿಯ ಶೀಲಾ ದೀಕ್ಷಿತ್, ಪಶ್ಚಿಮ ಬಂಗಾಳದ ಜ್ಯೋತಿ ಬಸು, ಗುಜರಾತಿನ ನರೇಂದ್ರ ಮೋದಿ, ಒರಿಸ್ಸಾದ ನವೀನ್ ಪಾಟ್ನಾಯಕ್ ಮುಂತಾದವರ ಸಾಲಿನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.

ಅಧಿಕಾರಕ್ಕೆ ಏರುವುದು ಒಂದು ಸಾಧನೆಯಾದರೆ ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಅದರಲ್ಲೂ ಒಬ್ಬ ದಲಿತ ಹೆಣ್ಣು ಮಗಳು ತಮಗೆ ಸಿಕ್ಕಿದ ಅಪರೂಪದ ಅವಕಾಶವನ್ನು ಇನ್ನಷ್ಟು ಜನರಿಗೆ ಹತ್ತಿರವಾಗುವ ರೀತಿ ಬಳಸಬಹುದಿತ್ತು.ಹೌದು, ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಜನರಿಗೆ ಅನುಕೂಲಕರ ಕೆಲಸ ಮಾಡುವಾಗ ಖಂಡಿತ ಜನರಿಂದ ಪ್ರೋತ್ಸಾಹ ಸಿಕ್ಕೇ ಸಿಗುತ್ತದೆ.

ನಮ್ಮ ಜನರ ಮನಸ್ಥಿತಿ ಹೇಗಿದೆ ಎಂದರೆ, ನೀವು ಸಾರ್ವಜನಿಕವಾಗಿ ಒಳ್ಳೆಯ ಉದ್ದೇಶಕ್ಕೇ ಆದರೂ ಸ್ವಲ್ಪ ಕೆಟ್ಟ ಅಥವಾ ತಪ್ಪು ನಿರ್ಧಾರ ಕೈಗೊಂಡರೇ ಜನ ಅದನ್ನೇ ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗೆ ಇದನ್ನೇ ನಿದರ್ಶನವಾಗಿ ಉಪಯೋಗಿಸಿಕೊಳ್ಳುತ್ತಾರೆ.

ಇದೇ ಬಹುಮುಖ್ಯವಾಗಿ ಇಂದು ಅಂಬೇಡ್ಕರ್ ವಾದದ ಬಹುಜನ ಚೆಲ್ಲಾಪಿಲ್ಲಿಯಾಗಿ ಒಂದೊಂದು ಪಕ್ಷ ಅಥವಾ ಸಂಘಟನೆಯ ದಾರಿ ಹಿಡಿದಿದ್ದಾರೆ. ಸಹಜವಾಗಿ ಅದರ ವಿರೋಧಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಬಹುಜನರ ಪಕ್ಷ ಆಂತರಿಕವಾಗಿಯೂ ಬಹುಜನರ ಪಕ್ಷವಾಗೇ ಇರಬೇಕೆ ಹೊರತು ಹೆಸರಿಗೆ ಮಾತ್ರ ಇದ್ದು ಸಂಘಟನೆಯಲ್ಲಿ ನೆಪ ಮಾತ್ರದ ನಡವಳಿಕೆ ಇದ್ದರೆ ಖಂಡಿತ ಬಹುಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ.

ಜೊತೆಗೆ ಹೋರಾಟ ಸಿದ್ದಾಂತಗಳೊಂದಿಗೆ ಆಡಳಿತಾತ್ಮಕ ದಕ್ಷತೆ ಸಹ ಮುಖ್ಯವಾಗುತ್ತದೆ. ಅಧಿಕಾರಕ್ಕೆ ಬರುವವರೆಗೂ ಚಳವಳಿ ಮುಖ್ಯ. ಬಂದ ನಂತರ ಆಡಳಿತ ಮಾಡುವುದು ಅತಿಮುಖ್ಯ ಇಲ್ಲದಿದ್ದರೆ ಜನ ಬಹುಬೇಗ ನಿರಾಸೆಗೊಳಗಾಗಿ ಪಕ್ಷ ತಿರಸ್ಕರಿಸಲ್ಪಡುತ್ತದೆ. ಆಗ ಪಕ್ಷ ಬೆಳೆಸಲು ಅಡ್ಡ ದಾರಿ ಹಿಡಿಯುವ ಅವಶ್ಯಕತೆ ಬರುತ್ತದೆ. ಅದು ಒಂದು ಸಿದ್ಧಾಂತದ ಅವಸಾನಕ್ಕೆ ದಾರಿ ಮಾಡಿಕೊಡುತ್ತದೆ.

ಬಹುಶಃ ಇಂದು ಕವಲು ದಾರಿಯಲ್ಲಿ ಸಾಗುತ್ತಿರುವ ಬಹುಜನ ಸಮಾಜ ಪಕ್ಷದ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವೆಂದು ಭಾವಿಸಬಹುದು.ಯಾವುದೇ ವ್ಯಕ್ತಿ ಪಕ್ಷ ಸಂಘಟನೆ ಸಿದ್ಧಾಂತ ಸಾಮಾಜಿಕ ಮೌಲ್ಯಗಳನ್ನು ಸದಾ ಪ್ರತಿನಿಧಿಸುವಂತಿರಬೇಕು. ಅದರ‌ ಸ್ವಾರ್ಥದ ನಡೆಯನ್ನು ಜನ ಗಮನಿಸುತ್ತಿರುತ್ತಾರೆ. ಅಧಿಕಾರವೇ ಎಲ್ಲವೂ ಅಲ್ಲ. ಅದರಲ್ಲೂ ಶೋಷಿತ ಸಮುದಾಯಗಳ ಒಂದು ಪಕ್ಷ ಅತ್ಯಂತ ಶುದ್ದ ಪ್ರಾಮಾಣಿಕ ದೂರದೃಷ್ಟಿಯ ನಿಲುವುಗಳನ್ನು ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ವ್ಯವಸ್ಥೆ ಇರುವುದಕ್ಕಿಂತ ಮತ್ತಷ್ಟು ಉತ್ತಮವಾಗಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಇದು ಬಹಳ ಮುಖ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

Published

on

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ ಖಾತೆ ಆಂದೋಲನವನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

Published

on

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 9 ಕ್ಕೆ ಮುಂದೂಡಿದೆ.

ಇದೇ ವೇಳೆ ಮಧ್ಯಂತರ ಆದೇಶವನ್ನು ನ್ಯಾಯಾಲಯ ವಿಸ್ತರಿಸಿದೆ. ಇದೇ 9 ರಂದು ಎ.ಜೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದು, ಇದೇ 12 ರಂದು ಮುಖ್ಯಮಂತ್ರಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ಹೇಳಿ ನ್ಯಾಯಾಲಯದ ಕಲಾಪ ಮುಂದೂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ...

ದಿನದ ಸುದ್ದಿ9 hours ago

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ...

ದಿನದ ಸುದ್ದಿ17 hours ago

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ...

ದಿನದ ಸುದ್ದಿ1 day ago

ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಂ.ಎಂ.ಟಿ.ಎಂ 1, ಡಿಎಂಎಂ 20, ಸಿಒಪಿಎ 20, ವೆಲ್ಡರ್ 34 ಹಾಗೂ ರೋಬೊಟಿಕ್ಸ 12 ಖಾಲಿ ಇರುವ...

ದಿನದ ಸುದ್ದಿ1 day ago

ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಯುವಜನರನ್ನು ಸ್ವಾವಲಂಭಿಯಾಗಿ ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಪರಿಶಿಷ್ಟ...

ದಿನದ ಸುದ್ದಿ2 days ago

ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು

ಸುದ್ದಿದಿನಡೆಸ್ಕ್:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು...

ದಿನದ ಸುದ್ದಿ4 days ago

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ...

ದಿನದ ಸುದ್ದಿ5 days ago

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ...

ದಿನದ ಸುದ್ದಿ5 days ago

KPSC | 2 ತಿಂಗಳೊಳಗೆ ಮರು ಪರೀಕ್ಷೆ

ಸುದ್ದಿದಿನಡೆಸ್ಕ್:ಇತ್ತೀಚಿನ ಕೆ.ಪಿ.ಎಸ್.ಸಿ. ಗಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ, ಅಸಮರ್ಪಕ ಕನ್ನಡಾನುವಾದ ಹಿನ್ನೆಲೆ, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ, 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ, ಕರ್ನಾಟಕ ಲೋಕ...

ದಿನದ ಸುದ್ದಿ5 days ago

ADITYA-L1 | ಇಸ್ರೋ ಆದಿತ್ಯ ಎಲ್-1 ನೌಕೆ ಉಡಾವಣೆಗೆ ಒಂದು ವರ್ಷ; ಸೂರ್ಯನ ಅಧ್ಯಯನದಲ್ಲಿ ಮಹತ್ವದ ಪ್ರಗತಿ

ಸುದ್ದಿದಿನಡೆಸ್ಕ್:ಇಸ್ರೋದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. 2023ರ ಸೆಪ್ಟೆಂಬರ್ 2 ರಂದು ಉಡಾವಣೆಗೊಂಡಿರುವ ಎಲ್-1ನೌಕೆ ಕಕ್ಷೆ ತಲುಪಿದ್ದು, ಭೂಮಿಯಿಂದ ಸುಮಾರು...

Trending