Connect with us

ದಿನದ ಸುದ್ದಿ

ನಿರುದ್ಯೋಗ ಮತ್ತು ಮೋದಿಯ ‘ಫಿಟ್ ಇಂಡಿಯಾ’ ಚಳವಳಿ

Published

on

  • ಸೋಮನಗೌಡ.ಎಸ್.ಎಂ.ಕಟ್ಟಿಗೆಹಳ್ಳಿ

ಪ್ರಧಾನಿಮೋದಿ ಅವರು ಫಿಟ್ ಇಂಡಿಯಾ ಚಳವಳಿಗೆಚಾಲನೆ ನೀಡಲಿದ್ದಾರೆ ಎಂದು ನಿರೂಪಕಿ ಹೇಳುತ್ತಿದ್ದಂತೆಒಮ್ಮೆಲೆ ನನಗೆ ಕೇಳಿಸಿದ್ದು ‘ಕ್ವಿಟ್ ಇಂಡಿಯಾ’ ಚಳವಳಿನಾ’ಎಂದು! ಅನಂತರ ದಿಟ್ಟಿಸಿ ಸೂಕ್ಷ್ಮವಾಗಿಟಿವಿ ನೋಡಿದಾಗ ಮೋದಿ ಅವರು ‘ಸದೃಢ ಭಾರತ ಸಶಕ್ತಭಾರತ’ಕ್ಕೆ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳಲ್ಲಿಎಲ್ಲರೂ ತೊಡಗಿಕೊಳ್ಳಿ ಎಂದು ಹೇಳುವ ಸಾರವೇ ಫಿಟ್ಇಂಡಿಯಾ ಚಳವಳಿ ಎಂದಾಗ ಅರ್ಥವಾಯಿತು.

‘ಹಮ್ ಫಿಟ್, ತೋ ಇಂಡಿಯಾ ಫಿಟ್’ ಹ್ಯಾಶ್ಟ್ಯಾಗ್‍ನಲ್ಲಿ ಕಳೆದ ವರ್ಷ ಕೇಂದ್ರದ ಕ್ರೀಡಾ ಸಚಿವರಾಜವರ್ಧನ ಸಿಂಗ್ ರಾಥೋಡ್ (ಈಗ ಮಾಜಿ) ಟ್ಟೀಟರ್‍ನಲ್ಲಿ ಫಿಟ್‍ನೆಸ್ ಸವಾಲೆಸೆದಿದ್ದರು. ಇದಕ್ಕೆಕ್ರೀಡಾಪಟುಗಳು, ಸಿನಿಮಾ ತಾರೆಯರು ಸವಾಲುಸ್ವೀಕರಿಸಿ ಯೋಗ, ಜಿಮ್, ಕಚೇರಿಯಲ್ಲೇ ವ್ಯಾಯಾಮಮಾಡಿ ಸಶಕ್ತ ಭಾರತಕ್ಕೆ ನಾವು ಬದ್ಧ ಎಂದು ಸಾಮಾಜಿಕಜಾಲತಾಣಗಳಲ್ಲಿ ಪ್ರಚಾರಗಿಟ್ಟಸಿಕೊಂಡಿದ್ದರು.

1942 ಆಗಸ್ಟ್ 8 ರಂದು ಕ್ರಿಪ್ಸ್ ಶಿಫಾರಸ್ಸುಗಳನ್ನುತಿರಸ್ಕರಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಾಂಬೆಯಗೋವಳಿ ಮೈದಾನದಲ್ಲಿ ಸಭೆ ಸೇರಿ ‘ಭಾರತ ಬಿಟ್ಟುತೊಲಗಿ’ ಠರಾವನ್ನು ಅಂಗೀಕರಿಸಿತ್ತು. ಮಹಾತ್ಮಗಾಂಧಿಯವರು ‘ಬ್ರಿಟೀಷರು ತಕ್ಷಣ ಭಾರತ ಬಿಟ್ಟುತೊಲಗಿ. ಇಲ್ಲವಾದರೆ ಕಾನೂನು ಭಂಗ ಚಳವಳಿಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ಭಾರತೀಯರಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಕರೆನೀಡಿದ್ದರು.ಗಾಂಧೀಜಿಯವರು ಗುಜರಾತ್ ರಾಜ್ಯದವರು. ಈಗಪ್ರಧಾನಿ ಮೋದಿಯವರು ಕೂಡಾ ಗುಜರಾತ್ರಾಜ್ಯದವರೇ.‘ಕ್ವಿಟ್ ಇಂಡಿಯಾ’ ಚಳವಳಿಆರಂಭವಾಗಿದ್ದು 1942 ಆಗಸ್ಟ್ 8 ರಂದು.‘ಫಿಟ್ಇಂಡಿಯಾ’ ಚಳವಳಿ ಆರಂಭವಾಗಿದ್ದು 2019 ಆಗಸ್ಟ್29ರಂದು. ಆಗ ಭಾರತಕ್ಕೆ ಅಂಟಿದ್ದ ಬ್ರಿಟೀಷ್ ರೋಗತೊಳೆಯಲು ಕರೆ ನೀಡಿದ್ದು ಕ್ವಿಟ್ ಇಂಡಿಯಾ ಚಳವಳಿ.ಈಗ ಮೋದಿ ಅವರು ಸದೃಢ ಭಾರತ ಕಟ್ಟಲು ಫಿಟ್ಇಂಡಿಯಾ ಚಳವಳಿಗೆ ಕರೆ ನೀಡಿದ್ದಾರೆ.

ಕುಸಿಯುತ್ತಿರುವ ಆರ್ಥಿಕತೆಯಿಂದ ದೇಶತಲ್ಲಣಗೊಂಡಿದೆ. ಉದ್ಯೋಗಗಳು ಮರೀಚಿಕೆಯಾಗಿ. ಯುವಜನತೆ ಉದ್ಯೋಗವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಈದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆರೋಗ್ಯ, ಬಡತನ, ಹಸಿವು, ದಾರಿದ್ರ್ಯ ಎಲ್ಲೆಲ್ಲೂ ಜೀವಂತವಾಗಿರುವಕಾಲದಲ್ಲಿ ಇಂಡಿಯಾ ‘ಫಿಟ್ ಇಂಡಿಯಾ’ ಆಗಿದೆಯೇ? ಎಂದು ಮೊದಲು ಪ್ರಧಾನಿಯವರು ಮನಗಾಣಬೇಕು.
ಸ್ವಾತಂತ್ರ್ಯ ಬಂದು 73 ವರ್ಷಗಳೇ ಕಳೆದಿವೆ. ಐತಿಹಾಸಿಕಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರಮೋದಿಯವರು ಈದೇಶದ ಬಡತನ ನಿವಾರಣೆ ಬಗ್ಗೆ, ಪರಿಸರ ರಕ್ಷಣೆಯ ಬಗ್ಗೆ ಮಾತನಾಡಿದ್ದರು.

2017ರಜುಲೈ 18ರಂದು ಕರ್ನಾಟಕದ ಗೋಕರ್ಣದ ದಲಿತಕುಟುಂಬದ ಮೂವರು ಹಸಿವಿನಿಂದ ಸತ್ತರು. ಕಳೆದಎರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಹಸಿವನ್ನುತಾಳಲಾರದೇ ಮಣ್ಣು ತಿಂದು ಇಬ್ಬರು ಮಕ್ಕಳುಮೃತಪಟ್ಟರು. ಈ ಸುದ್ದಿ ಇಡೀ ದೇಶದ ಹಸಿವು ಎಂಬಅಂಟು ಜಾಢ್ಯಕ್ಕೆ ಹಿಡಿದ ಕನ್ನಡಿ. ಆಹಾರದ ಹಕ್ಕುಅಭಿಯಾದನ ಭಾಗವಾಗಿ ಹಲವು ಸ್ವಯಂ ಸೇವಾಸಂಸ್ಥೆಗಳು ಸಿದ್ಧಪಡಿಸಿದ ಅಧ್ಯಯನ ವರದಿಯ ಪ್ರಕಾರ2015-2019ರವರೆಗೆ ಹಸಿವಿನಿಂದ ಸತ್ತವರ ಸಂಖ್ಯೆ 58. (ಜಾರ್ಖಂಡ್-16, ಉತ್ತರಪ್ರದೇಶ-16, ಒಡಿಶಾ-10, ಕರ್ನಾಟಕ-3, ದೆಹಲಿ-3, ಬಿಹಾರ-3, ಛತ್ತಿಸ್‍ಗಡ-3, ಆಂಧ್ರ-2 ರಾಜಸ್ಥಾನ-1, ಪ.ಬಂಗಾಳ-1) ಇದನ್ನುಮೊದಲು ಸರಿಪಡಿಸಿ ದಿಟ್ಟಕ್ರಮ ಕೈಗೊಂಡರೆ ಅದೇಅಲ್ಲವೇ ಫಿಟ್ ಇಂಡಿಯಾ?

2019 ಲೋಕಸಭೆಯ ಚುನಾವಣಾ ಆದ್ಯತಾವಿಷಯವಾಗಿ ಪ್ರಚಾರ ಮಾಡಿ,2ನೇ ಬಾರಿಗೆ ಆಡಳಿತಕ್ಕೆಬಂದ ಪ್ರಧಾನಿ ಮೋದಿ ಅವರ ಎನ್‍ಡಿಎ-2.0 ಸರ್ಕಾರಯುವಜನರಿಗೆ ಕೊಟ್ಟ ಉದ್ಯೋಗ ಭರವಸೆಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಉದ್ಯೋಗಕಳೆದುಕೊಂಡು ಬೀದಿಗೆ ಬಂದಿರುವ ನಿರುದ್ಯೋಗಿಗಳಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಆಟೊಮೊಬೈಲ್ ಕ್ಷೇತ್ರ, ಜವಳಿ ಕ್ಷೇತ್ರ ಹೀಗೆ ಎಲ್ಲೆಲ್ಲೂಉದ್ಯೋಗ ಕಳೆದುಕೊಂಡು ಅಭದ್ರರಾಗಿದ್ದಾರೆ. ಪ್ರಧಾನಿಮೋದಿ ಅವರ ಎನ್‍ಡಿಎ-1 ಸರ್ಕಾರ ಕಳೆದ 5 ವರ್ಷಗಳಲ್ಲಿ ಪ್ರಮುಖ ಯೋಜನೆಗಳ ಮೂಲಕಸೃಷ್ಟಿಯಾಗಿರುವ ಉದ್ಯೋಗ 27.5ರಷ್ಟು.

2022ರೊಳಗೆ‘ಮೇಕ್ ಇನ್ ಇಂಡಿಯಾ’ ಯೋಜನೆಯೊಂದರಲ್ಲೇ 10 ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೇಂದ್ರನೀಡಿತ್ತು. ಆದರೆ ಸೃಷ್ಟಿಯಾದ ಉದ್ಯೋಗಸಾಸಿವೆಯಷ್ಟು. ಅತಿವೃಷ್ಠಿ-ಅನಾವೃಷ್ಠಿಗಳಿಂದಕೃಷಿರಂಗದಲ್ಲೂ ಉದ್ಯೋಗ ಪ್ರಮಾಣ ಕುಂಠಿತವಾಗಿದೆ.ದ್ವಿದಳ ದಾನ್ಯಗಳ ಉತ್ಪಾದನೆ ಕಡಿಮೆಯಾಗಿ ಬೆಲೆಗಳುಗಗನಕ್ಕೇರುತ್ತಿವೆ.ದುಡಿಯುವ ಯುವಜನರಿಗೆಉದ್ಯೋಗ ಭದ್ರತೆಕೊಟ್ಟರೆ ಅಲ್ಲವೇ ಫಿಟ್ಇಂಡಿಯಾವಾಗೋದು. ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿಎನ್ನುವಂತಾಗಿದೆ ಯುವಜನರ ಪಾಡು.

ಸದಾಅಭದ್ರತೆಯಲ್ಲೇ ಬದುಕುವ ಜನತೆ ಆರ್ಥಿಕವಾಗಿಸದೃಢವಾಗದಿದ್ದರೆ ‘ಫಿಟ್ ಇಂಡಿಯಾ’ ಚಳವಳಿಹಾಸ್ಯಾಸ್ಪದವೆನ್ನಿಸುತ್ತದೆ.ಲಿಂಗಾನುಪಾತ ಪ್ರಮಾಣ ಕಳವಳಕಾರಿಯಾಗಿದೆ. ಭಾರತದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಗಮನಾರ್ಹವಾಗಿಇಳಿಮುಖವಾಗಿದೆ ಎಂದು ಭಾರತೀಯ ರಿಜಿಸ್ಟ್ರಾರ್ಜನರಲ್ ಸಿದ್ಧಪಡಿಸಿದ ಅಂಕಿಅಂಶಗಳುಬೆಚ್ಚಿಬೀಳಿಸುವಂತಹದ್ದು. ಕರ್ನಾಟಕದಲ್ಲಿ 2007 ರಲ್ಲಿ1004ರಷ್ಟಿದ್ದ ಲಿಂಗಾನುಪಾತ 2016ರ ವೇಳೆಗೆ 896ಕ್ಕೆಕುಸಿದಿದೆ. ಆಂಧ್ರ, ತಮಿಳುನಾಡು, ತೆಲಂಗಾಣರಾಜ್ಯಗಳಲ್ಲಿ ಶಿಶುಮರಣ ಪ್ರಮಾಣ ಇಳಿಕೆಯಾಗಿದ್ದರುಲಿಂಗಾನುಪಾತದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಿಶ್ವಆರ್ಥಿಕ ವೇದಿಕೆ ಪ್ರಕಟಿಸಿರುವ ಜಾಗತಿಕ ಲಿಂಗತ್ವಅಸಮಾನತೆ ಸೂಚ್ಯಾಂಕದಲ್ಲಿ ಭಾರತವು 21ನೇಸ್ಥಾನದಲ್ಲಿದೆ. ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲುಇದೆ. ರಾಜಕೀಯ ಅಧಿಕಾರ, ಆರೋಗ್ಯ ಜೀವನ ನಿರೀಕ್ಷೆಮತ್ತು ಸಾಕ್ಷರತೆಯ ವಿಚಾರದಲ್ಲಿ ಲಿಂಗ ಸಮಾನತೆಹೆಚ್ಚಿರುವುದೇ ಜಾಗತಿಕ ಸೂಚ್ಯಾಂಕದಲ್ಲಿ ಭಾರತದ ಸ್ಥಾನಕುಸಿಯಲು ಕಾರಣ. ಮೊದಲು ಇಂತಹ ವಿಚಾರದಲ್ಲಿದೇಶ ಫಿಟ್ ಆಗಿದ್ದರೆ ಮಾತ್ರ ಸದೃಢ ಭಾರತವಾಗಲುಸಾಧ್ಯವಲ್ಲವೇ?

ತಾಯಂದಿರ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ಹೆರಿಗೆಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹುಟ್ಟಿನ ಕೆಲವೇಹೊತ್ತಿನಲ್ಲಿ ಶಿಶುಗಳ ಸಂಖ್ಯೆ ಎಷ್ಟು ಎಂದುರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಉಬ್ಬೇರಿಸುವಂತಿತ್ತು. ಅಸ್ಸಾಂ- ಉತ್ತರಪ್ರದೇಶ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ, ಛತ್ತಿಸ್‍ಗಡ, ಬಿಹಾರ,ಪಂಜಾಬ್‍ಗಳಲ್ಲಿ ಪ್ರತಿ ಒಂದು ಸಾವಿರಕ್ಕೆ 167 ಗರ್ಭಿಣಿಯರು-ಬಾಣಂತಿಯರು ಸಾವನ್ನಪ್ಪಿದ್ದಾರೆ. ಈದೇಶದಲ್ಲಿ 896 ರೋಗಿಗೆ ಒಬ್ಬ ವೈದ್ಯನಿದ್ದಾನೆ. ಹೀಗಾದರೆಹೇಗೆ ಫಿಟ್ ಇಂಡಿಯಾವಾಗಲು ಸಾಧ್ಯ?

ಇವಷ್ಟೇ ಅಲ್ಲ ಹೆಚ್ಚುತ್ತಿರುವ ವಾಯುಮಾಲಿನ್ಯ,ಜಲಮಾಲಿನ್ಯಗಳಿಂದ ದೇಶದಾದ್ಯಂತ ಕ್ಯಾನ್ಸರ್ ಪೀಡಿತರಸಂಖ್ಯೆ, ಹೃದಯರೋಗಿಗಳ ಸಂಖ್ಯೆ ಗಣನೀಯವಾಗಿಹೆಚ್ಚಾಗುತ್ತಿದೆ. ಪ್ರಕೃತಿಯ ಮೇಲೆ ಮಾನವನಸವಾರಿಯಿಂದ ಪರಿಸರ ಹಾಳಾಗಿ ಹೋಗುತ್ತಿದೆ. ಜಗತ್ತಿನಅನೇಕ ದೇಶಗಳನ್ನು ಸುತ್ತಿ ಬಂದಿರುವ ಪ್ರಧಾನಿಯವರುಭಾರತ ‘ಫಿಟ್ ಇಂಡಿಯಾ’ ಆಗಬೇಕು ಎಂಬ ಕನಸನ್ನುಒಪ್ಪೋಣ. ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದರೆ ಫಿಟ್ಇಂಡಿಯಾವಾಗದು.ಅದನ್ನು ಕಾರ್ಯರೂಪಕ್ಕೆತರಬೇಕಾದರೆ ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನುಸರಿಪರಿಸಬೇಕು. ಉದ್ಯೋಗ ಸೃಷ್ಟಿ, ಪರಿಸರಸಮತೋಲನ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳುಅಭಿವೃದ್ಧಿ ಕಂಡು ಅದರ ಫಲ ಪ್ರತಿಯೊಬ್ಬ ನಾಗರಿಕನಮನೆಬಾಗಲಿಗೆ ಹೋದಾಗ ಮಾತ್ರವೇ ಫಿಟ್ಇಂಡಿಯಾವಾದೀತು. ಇವೆಲ್ಲದರಿಂದ ರೋಸಿ ಹೋದಯುವಜನತೆ ‘ಮೋದಿ ಕ್ವಿಟ್ ಇಂಡಿಯಾ’ ಎನ್ನವುದಕ್ಕೂಮೊದಲು ಜಾಗೃತರಾಗಿ. ಭಾರತವನ್ನು ಎಲ್ಲಾಅಂಶಗಳಿಂದಲೂ ಫಿಟ್ ಇಂಡಿಯಾ ಮಾಡಿ. ಆಗ ಎಲ್ಲವರ್ಗದ ಜನತೆಯೂ ‘ಫಿಟ್ ಇಂಡಿಯಾ’ ಚಳವಳಿಯನ್ನುಒಪ್ಪುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

Published

on

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ 23ಕ್ಕೆ ಹೆಚ್ಚು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ *ಮಹಬೂಬ್ ಭಾಷಾ* ಆಗ್ರಹಿಸಿದ್ದಾರೆ ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ ಯುವಜನರು ಹಾಗೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು, ಸಂವಿಧಾನ ವಿರೋಧಿ ನಡೆ ಹಾಗೂ ಹೋರಾಟವನ್ನು ಹತ್ತಿಕ್ಕು ಹೊನ್ನಾರವಾಗಿದೆ.

ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಕಾರ್ಪೊರೇಟರ್ ಶಿಕ್ಷಣ ನೀತಿಗಳ ಕಾರಣ, ಪರೀಕ್ಷೆಯ ಅಕ್ರಮ ವಿರುದ್ಧ ಹೋರಾಟ ಎರಡನೇ ಸ್ವತಂತ್ರ ಸಂಗ್ರಾಯದ ರೀತಿಯಲ್ಲಿ ದೇಶದಿಂದ ವ್ಯಾಪಿಸುತ್ತಿದ್ದು, ಆಳುವ ಸರ್ಕಾರ ರಾಷ್ಟ್ರದ ಭವಿಷ್ಯ ವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದೆಂದು ಹೇಳಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸುದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

Published

on

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ

ರಾಜಿನಾಮೆ ನೀಡಬೇಕು. ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ಆಡಳಿತ ವ್ಯವಸ್ಥೆ ಕೊನೆಯಾಗಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ ,ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ವಿನಾಯಕ ಬಿ.ಎನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಮಾಡಿದ್ದಾರೆ.

ಸಂವಿಧಾನ ವಿರೋಧಿ ಆಡಳಿತಕ್ಕೆ ಕಡಿವಾಣ ಹಾಕಲು ದೇಶದ
ಯುವಜನರು, ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ಸೊನಮ್ ವಾಂಗ್ಟಕ್ ಅವರನ್ನು ಏಕಾಏಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಸಂವಿಧಾನವಿರೋಧಿ ನಡೆ, ಹೋರಾಟ ಹತ್ತಿಕ್ಕುವ ಹುನ್ನಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀಟ್ ಹಗರಣ, ವಿದ್ಯಾರ್ಥಿಗಳ ಆತ್ಮ ಹತ್ಯೆಗೆ ಕಾರ್ಪೊರೇಟ್ ಶಿಕ್ಷಣ ನೀತಿಗಳು ಕಾರಣ. ನೀಟ್ ಪರೀಕ್ಷೆ ಅಕ್ರಮದ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ದೇಶದಾದ್ಯಂತ ವ್ಯಾಪಿಸುತ್ತಿದೆ. ಆಳುವ ಸರ್ಕಾರ ರಾಷ್ಟ್ರದ ಭವಿಷ್ಯವಾಗಿರುವ ಯುವ ಸಮೂಹದ ಕನಸುಗಳನ್ನು ಹೊಸಕಿ ಹಾಕಬಾರದು’.ಎಂದು ತಿಳಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಂದನೆಗಳೊಂದಿಗೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

Published

on

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು ಡಿಜಿಟಲೀಕರಣ ಸಾಧನೆ ಮಾಡಲಾಗಿರುವುದರಿಂದ, ಪ್ರಗತಿಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದರು.

ಅವರು ಮಂಗಳವಾರ ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ 108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

108-ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಒಟ್ಟು 1,97,048 ಮತದಾರರನ್ನು ಹೊಂದಿದ್ದು ಎಲ್ಲಾ 1,97,048 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ ಇದುವರೆಗೆ ಒಟ್ಟು 1,81,890 ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದ್ದು, ಶೇಕಡಾ 92.31 ರಷ್ಟು ಗುರಿಯನ್ನು ತಲುಪಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆಯಲ್ಲಿ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಗಣತಿ ನಮೂನೆಗಳ ಹಂಚಿಕೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಬಿರುಸಿನಿಂದ ಸಾಗಿದ್ದು, ಇನ್ನು ಕೇವಲ 4,165 ಫಾರ್ಮ್‌ಗಳು (ಶೇಕಡಾ 2.11) ಮಾತ್ರ ಡಿಜಿಟಲೀಕರಣಕ್ಕೆ ಬಾಕಿ ಇವೆ ಕ್ಷೇತ್ರದಲ್ಲಿ ಯಾವುದೇ ಹಂಚಿಕೆಯಾಗದ ಫಾರ್ಮ್‌ಗಳು ಬಾಕಿ ಉಳಿದಿಲ್ಲ, ಬಾಕಿ ಉಳಿದಿರುವ ಗಣತಿ ನಮೂನೆಗಳ ಗಣಕೀಕರಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಮನೆ ಮನೆ ಭೇಟಿ ಸಂದರ್ಭದಲ್ಲಿ ಇಂದಿನವರೆಗೆ ಮಾಯಾಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,993 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 193 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5059 ಶಾಶ್ವತ ವಲಸೆ, 3951 ಮರಣ ಪ್ರಕರಣ, 1760 ದ್ವಿಪ್ರತಿ ನಮೂನೆಗಳು ಹಾಗೂ 30 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ತಾಲ್ಲೂಕು ತಹಶೀಲ್ದಾರ್‌ ರಾಜೇಶ್‌ ಕುಮಾರ್‌ ಸಿ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 days ago

ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ

ಸುದ್ದಿದಿನ,ದಾವಣಗೆರೆ:ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ,...

ದಿನದ ಸುದ್ದಿ4 days ago

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ

ಸುದ್ದಿದಿನ,ದಾವಣಗೆರೆ :ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಂತರ20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ....

ದಿನದ ಸುದ್ದಿ4 days ago

ಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ

ಸುದ್ದಿದಿನ,ದಾವಣಗೆರೆ‌ : ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಕಾರ್ಯದಲ್ಲಿ ಮಾಯಾಕೊಂಡ ಕ್ಷೇತ್ರವು ನಿಗದಿತ ಅವಧಿಗಿಂತ ಮೊದಲೇ ಗಣತಿ ನಮೂನೆಗಳ ಹಂಚಿಕೆಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಶೇ. 92.31 ರಷ್ಟು...

ದಿನದ ಸುದ್ದಿ1 week ago

ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ

ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ...

ದಿನದ ಸುದ್ದಿ2 weeks ago

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ...

ದಿನದ ಸುದ್ದಿ2 weeks ago

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ...

ದಿನದ ಸುದ್ದಿ2 weeks ago

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ. ಅಂತ್ಯಕ್ರಿಯೆಯನ್ನು...

ಅಂಕಣ2 weeks ago

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ...

ದಿನದ ಸುದ್ದಿ2 weeks ago

ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ

ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ...

ದಿನದ ಸುದ್ದಿ2 weeks ago

ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು

ಮುಖ್ಯಾಂಶಗಳು ​ ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ ​ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್ ಸುದ್ದಿದಿನ,​ದಾವಣಗೆರೆ:...

Trending