ಲೈಫ್ ಸ್ಟೈಲ್
‘ಕೊರೊನ’ ಇದು ಪ್ರಕೃತಿ ಸೃಷ್ಟಿಸೋ ಅವತಾರ..! HANDS UP ಮಾನವನೇ..!
“ಮಾನವ ಸಂಕುಲದ ನಾಗಲೋಟಕ್ಕೊಂದು ಮಾರಕ ತಡೆ” “LOCK DOWN : ಇದೊಂದು ಆತ್ಮ ವಿಮರ್ಶೆಯ ಸಮಯ.”
- ಡಾ. ಬಿನಯ್ ಕುಮಾರ್ ಸಿಂಗ್ , ಸನ್‍ಶೈನ್ ಪುರಂತರ ಆಸ್ಪತ್ರೆ, ದಾವಣಗೆರೆ
ಅಸಂಖ್ಯಾತ ಜೀವರಾಶಿಗಳ ನೆಲೆಯಾಗಿರುವ ಪ್ರಕೃತಿ ಮತ್ತು ಭೂಮಿಯ ಮೇಲೆ ತನ್ನನ್ನು ತಾನು ಪರಮಶಕ್ತನೆಂದು ಬಿಂಬಿಸಿಕೊಂಡಿರುವ ಅತ್ಯಂತ ನೀಚ ಬುದ್ದಿಯ ಜೀವಿಯಾದ ಮನುಷ್ಯ ಇವುಗಳ ಮಧ್ಯೆ ಯುದ್ದ ಸಾರಿದಂತಿದೆ.ಇದು ಒಂದು ರೀತಿಯ ಮೂರನೇ ಮಹಾಯುದ್ದವನ್ನು ಸಾರಿದಂತಿದೆ. ಇಲ್ಲಿ ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಜೀವಿಯಾದ ವೈರಾಣು ತಮ್ಮ ಉಳಿವಿಗೋಸ್ಕರ ತಮ್ಮ ಸ್ಥಾನವನ್ನು ಆಕ್ರಮಿಸುತ್ತಿರುವ ಮಾನವನ ವಿರುದ್ದ ತಿರುಗಿ ಬಿದ್ದಂತಿದೆ.
ಸಂಶೋಧನೆಗಳು ಧೃಡಪಡಿಸಿರುವ ಪ್ರಕಾರ ಸಕಲ ಜೀವರಾಶಿಗಳಿಗೆ ಜೀವಿಸಲು ಯೋಗ್ಯವಾದ ಸ್ಥಳ ಭೂಮಿ ಮಾತ್ರ. ಭೂಮಿಯ ಮೇಲೆ ಜೀವಿಸಲು ಒಂದು ಸಾಮಾನ್ಯ ನಿಯಮವಿದ್ದು,ಅದೇನೆಂದರೆ ಎಲ್ಲಾ ಜೀವರಾಶಿಗಳು ಪರಸ್ಪರ ಗೌರವಿಸುವುದು, ಎಲ್ಲರುಗಳ ಸ್ವಂತಂತ್ರವನ್ನು ಕಾಪಾಡುವುದು ಮತ್ತು ಪರಿಸರವನ್ನು ರಕ್ಷಿಸುವುದು ಈ ನಿಯಮಗಳಿಗೆ ಚ್ಯುತಿ ಬಂದಾಗ ಈ ತರಹದ ಸ್ವಯಂಕೃತ ವಿಪತ್ತುಗಳಿಗೆ (MANMADE DISASTER) ಎಡೆ ಮಾಡಿಕೊಡುತ್ತದೆ. ಇಂದಿನ ಈ ಸನ್ನಿವೇಶಕ್ಕೆ ಇದೇ ಮೂಲಭೂತವಾದ ಕಾರಣವಾಗಿದೆ.
ಕೇವಲ ಕಳೆದ ನೂರು ವರ್ಷಗಳಲ್ಲಿ ಮಾನವ ತನ್ನ ಆಸೆ ಮತ್ತು ಲಾಭಕ್ಕೋಸ್ಕರ ಪರಿಸರ ಮತ್ತು ಜೀವರಾಶಿಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಪ್ರಕೃತಿಯ ಆಗಿಂದಾಗ್ಗೆ ಅತಿವೃಷ್ಠಿಯಿಂದಲೋ, ಅನಾವೃಷ್ಠಿಯಿಂದಲೋ, ಬಿರುಗಾಳಿಗಳಿಂದಲೋ ತನ್ನ ಮೇಲೆ ಮಾನವ ನೀಡುತ್ತಿರುವ ದೌರ್ಜನ್ಯದ ವಿರುದ್ದ ಸೂಚನೆ ಸಂಕೇತಗಳನ್ನು ನೀಡುತ್ತಿದ್ದರೂ ತಾತ್ಸಾರ ಮಾಡುವ ಮನುಷ್ಯ ತನ್ನ ನೀಚ ಕೃತ್ಯದಿಂದಾಗಿ ಭೂ ತಾಯಿಯನ್ನು ವಿನಾಶಗೊಳಿಸುವುದರಲ್ಲಿ ತೊಡಗಿದ್ದಾನೆ.
ಮಹಾಭಾರತದಲ್ಲಿ ಉಲ್ಲೇಖಿಸಿದಂತೆ, “ಅಭ್ಯುತ್ಥಾನಂ ಅಧರ್ಮಸ್ಯ,ಸಂಭವಾಮಿ ಯುಗೇ ಯುಗೇ..” ಮಾನವನ ಪಾಪ ಕರ್ಮಗಳು ಪರಿಸರ ಮತ್ತು ಜೀವರಾಶಿಗಳ ಮೇಲೆ ಎಲ್ಲಾ ಎಲ್ಲೆಯನ್ನು (ಮಿತಿಗಳನ್ನು) ದಾಟಿವೆ. (ಈ)ಇಂತಹ ಸನ್ನಿವೇಶದಲ್ಲಿ ಮನುಷ್ಯನ ಕಣ್ಣಿಗೆ ಕಾಣದ ಒಂದು ವೈರಾಣು ತಿರುಗಿಬಿದ್ದಿದೆ. ಕೇವಲ ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನೇ ಮಂಡಿಯೂರಿ ಪರಿತಪಿಸುವಂತೆ ಮಾಡಿದೆ. ಎಲ್ಲವನ್ನೂ ತಾನು ಜಯಿಸಬಹುದೆಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಮಾನವನಿಗೆ, ಆ ಭಗಂವಂತ ತನ್ನ ಜೀವರಾಶಿಗಳಲ್ಲೇ ಇರುವ ಅತ್ಯಂತ ಸೂಕ್ಷ್ಮ ಜೀವಿಯಿಂದ, ಮಾನವನನ್ನು ಸಂಹರಿಸುವುದು ಎಷ್ಟು ಸುಲಭವೆಂದು ತೋರಿಸುತ್ತಿರುವಂತಿದೆ. ಹೀಗಿರುವಾಗ ಮಾನವ ತನ್ನನ್ನು ತಾನು ಜಗತ್ತಿನ ಪ್ರಭುವೆಂದು ಭಾವಿಸುವುದರಲ್ಲಿ ಅರ್ಥವಿದೆಯೇ?
ಈ ಸಂಧರ್ಭದಲ್ಲಿ ” ಪ್ರಕೃತಿಯು ಎಲ್ಲವನ್ನು ಸಮತೋಲನಗೊಳಿಸುತ್ತದೆ ” ಎಂಬ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಮತ್ತು ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅದು ನಿಜವೆನ್ನಿಸುತ್ತದೆ. ಅತ್ಯಂತ ಶಕ್ತಿಶಾಲಿಯಾದ ಮಾನವ ಸಂಕುಲ ತನ್ನನ್ನು ಸಂರಕ್ಷಿಸಿಕೊಳ್ಳಲು ಪಂಜರದಲ್ಲಿ (ಮನೆಗಳಲ್ಲಿ–HOME QUARANTINE) ಬಂಧಿಯಾಗಿದ್ದಾನೆ. ಆದರೆ ಉಳಿದ ಎಲ್ಲಾ ಜೀವರಾಶಿಗಳು ತಮ್ಮ ಜೀವನವನ್ನು ಪರಿಸರದಲ್ಲಿ ಯಾವ ಅಡೆತಡೆಗಳಿಲ್ಲದೆ ಆನಂದದಿಂದ ಅನುಭವಿಸುತ್ತಿವೆ. ಸೂರ್ಯನ ಸುತ್ತಲಿರುವ ಪ್ರಭೆಯಂತೆ ಗೋಚರಿಸುತ್ತಿರುವ ಕಾಂತಿಯು (CORONA) ಈ ಅವಕಾಶವು ಮಾನವನು ಪರಿಸರದ ಮೇಲೆ ಮಾಡಿರುವ ದೌರ್ಜನ್ಯಗಳನ್ನು ಆತ್ಮಾವಲೋಕನ ಮಾಡುವ ಸಮಯ ಇದಾಗಲಿ.
ನಾವೀಗ ವೈರಾಣುಗಳ ಪ್ರಪಂಚದ ಬಗ್ಗೆ ಅವಲೋಕಿಸೋಣ
- ವೈರಾಣುಗಳು ಕೇವಲ ರಾಸಾಯನಿಕ ಸೂಕ್ಷ್ಮತೆಗಳು (Chemical Living Beings) ಇವುಗಳನ್ನು ಜೀವಕೋಶಗಳೆಂದು ಕರೆಯಲಾಗುವುದಿಲ್ಲ. ಏಕೆಂದರೆ ಜೀವಕೋಶಗಳಲ್ಲಿ ಕಂಡುಬರುವ ವಿವಿಧ ಭಾಗಗಳು ಇರುವುದಿಲ್ಲ. ಒಂದು ವೈರಾಣುವಿನಲ್ಲಿ ಕೇವಲ ಜೀನೋಮ್ (Genome) ಮತ್ತು ಅದರ ಮೇಲ್ಮೈಯಲ್ಲಿ ಪ್ರೋಟೀನ್‍ನ ಕವಚವಿರುತ್ತದೆ. ವೈರಾಣುಗಳಲ್ಲಿ ತಾವು ಸ್ವತಂತ್ರವಾಗಿ ಬೆಳೆದು ದ್ವಿಗುಣವಾಗುವ ಸಾಮಾಥ್ರ್ಯವಿರುವುದಿಲ್ಲ. ಇವುಗಳು ತಮ್ಮ ಬೆಳೆವಣಿಗೆಗೆ ಆಶ್ರಯದಾತನ (ಮನುಷ್ಯನ) ಜೀವಕೋಶಗಳ ಮೇಲೆ ಅವಲಂಭಿತವಾಗಿರುತ್ತದೆ. ಮಾನವ ಸೃಷ್ಟಿಯಾದ ಕಾಲದಿಂದಲೂ ಈ ವೈರಾಣುಗಳೂ ಭೂಮಿಯ ಮೇಲಿವೆ. ಅವುಗಳ ಸಹಜವಾದ ಆಶ್ರಯ ತಾಣಗಳು ಯಾವುವೆಂದರೆ ಮಾನವ, ಸಸ್ತನಿಗಳು(mammals) ಮತ್ತು ಪಕ್ಷಿಗಳು(birds). ಭೂಮಿಯ ಮೇಲೆ ಅನೇಕ ವಿಧದ ವೈರಾಣುಗಳಿದ್ದು, ಅದರಲ್ಲಿ ಬಹಳಷ್ಟು ವೈರಾಣುಗಳು ರೋಗಕಾರಕಗಳಲ್ಲ.
- ಕೊರೊನ ವೈರಸ್ RNA ಗುಂಪಿನ ವೈರಾಣುವಾಗಿದ್ದು ಇದರ ಮೇಲ್ಮೈಯಲ್ಲಿ ಚೆಂಡು ಹೂವಿನ ಆಕಾರದ ಬಹು ಪ್ರಕ್ಷೇಪಗಳ ಹಂಚನ್ನು ಹೊಂದಿದ್ದು, ಸೌರ ಕೊರೊನವನ್ನು ಹೋಲುತ್ತದೆ ಆದ್ದರಿಂದ ಈ ವೈರಾಣು ಸೃಷ್ಠಿಸುವ ವಿಶೇಷ ನೋಟಕ್ಕೆ ಕೊರೊನ ವೈರಸ್ ಎಂದು ಹೆಸರಿಸಲ್ಪಟ್ಟಿದೆ. ಇದರ ಗಾತ್ರ ಕೇವಲ 100nM ( 10-9 ).
- ಈ corona ವೈರಾಣುಗಳು ಮನುಷ್ಯರು, ಪಕ್ಷಿಗಳು, ಪ್ರಾಣಿಗಳು, ಕೀಟಗಳು ಮತ್ತು ಜಲಚರಗಳಲ್ಲಿ ಸಹಜವಾಗಿ ಬದುಕಿರುತ್ತವೆ. ಮಾನವರಲ್ಲಿ ಸಾಮಾನ್ಯ ನೆಗಡಿ(common cold) ಕಾಯಿಲೆಯನ್ನು ಭರಿಸುವ ಪ್ರಮುಖ ವೈರಾಣುಗಳಲ್ಲಿ ಎರಡನೆಯದಾಗಿದೆ. (Rhino virus ಗಳು ಮೊದಲನೆಯದಾಗಿದೆ).
- ಈ ಕೋರೊನ ವೈರಸ್ ನಮಗೆ ಹೊಸದೇನಲ್ಲ, ಈ ಹಿಂದೆಯೇ 2002ರಲ್ಲಿ SARS ಎಂಬ ಸಾಂಕ್ರಮಿಕ ರೋಗವನ್ನು ಮತ್ತು 2012ರಲ್ಲಿ MERS ಎಂಬ ಸಾಂಕ್ರಮಿಕ ರೋಗವನ್ನು ಕೊರೊನ ವೈರಸ್‍ನ ತಳಿಗಳು ಹರಡಿ ಹೆಸರುವಾಸಿಯಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ಹಿಂದೆ SARS ಎಂಬ ಸಾಂಕ್ರಮಿಕವು 30 ರಾಷ್ಟ್ರಗಳಲ್ಲಿ ಹರಡಿತ್ತು ಮತ್ತು ಅದರ ನಿಯಂತ್ರಣವನ್ನು ಪಡೆಯಲು ಸುಮಾರು 15-18 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು ಮತ್ತು ಅದೇ ತರಹ MERS ಸಾಂಕ್ರಾಮಿಕ ರೋಗವು 7 ದೇಶಗಳಲ್ಲಿ ಹರಡಿ ಅದನ್ನು ನಿಯಂತ್ರಿಸಲು ಸುಮಾರು 12 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು.
ಇಷ್ಟೆಲ್ಲಾ ತಿಳಿದ ಮೇಲೆ ಕಾಡುವ ಯಕ್ಷ ಪ್ರಶ್ನೆ ಏನೆಂದರೆ ಹೀಗಿರುವ corona virus ಇಷ್ಟೊಂದು ಮಾರಾಣಾಂತಿಕ ಏಕೆ? [covid-19= COrona VIrus Disease-2019]
- ಈ ವೈರಾಣುವಿನ ಮುಖ್ಯ ಲಕ್ಷಣವೇನೆಂದರೆ ಅವುಗಳು ಪದೇ ಪದೇ ಅನುವಂಶಿಕ ಬದಲಾವಣೆಯನ್ನು ಹೊಂದುವುದು (Genetic Modification) ಈ ಪ್ರಕ್ರಿಯೆಯಲ್ಲಿ ಒಂದೇ ಕುಲಕ್ಕೆ ಸೇರಿದ ಎರಡು ತಳಿಗಳ ವೈರಾಣುಗಳು ಒಂದೇ ಜೀವಕೋಶದಲ್ಲಿ ಪ್ರವೇಶಿಸಿದಾಗ ಅವೆರಡರ ಮದ್ಯೆದಲ್ಲಿ genomeನ ಒಂದು ಭಾಗವು ವಿನಿಮಯವಾಗಿ (RECOMBINATION) ಮೂರನೇಯ ತಳಿಯು ಸೃಷ್ಠಿಯಾಗುತ್ತದೆ. ಹೀಗೆ ಸೃಷ್ಠಿಯಾದ ಹೈಬ್ರೀಡ್ ತಳಿಯು ತನ್ನ ಮಾತೃ ವೈಶಿಷ್ಠ್ಯಗಳ ಜೊತೆಗೆ ಹೊಸದಾದ ಗುಣಗಳನ್ನು ಹೊಂದಿರುತ್ತದೆ. ಈ ಹೊಸ ಗುಣಗಳೇ ಇದನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಸೃಷ್ಠಿಸುತ್ತದೆ.
- ಒಂದು ಶಂಕೆಯ ಪ್ರಕಾರ covid-19 ಎಂಬ ವೈರಾಣು ಹಾವು ಮತ್ತು ಬಾವಲಿಗಳಲ್ಲಿ ಕಂಡುಬರುವ corona ವೈರಾಣುಗಳ ಹೈಬ್ರೀಡ್ ತಳಿಯಾಗಿರಬಹುದು ಆದ್ದರಿಂದ ಈ ವೈರಾಣುವು ಅಷ್ಟೊಂದು ಮಾರಕವಾಗಿದೆ. ಒಂದು ಗಮನಿಸಬೇಕಾದ ಅಂಶವೆಂದರೆ ಇಂತಹ ವೈರಾಣು ಮನುಷ್ಯನಲ್ಲಿ ಕಾಣಬೇಕಾದರೆ, ಮಾನವರು ವೈರಾಣುಗಳ ನಿಕಟ ಸಂಪರ್ಕದಲ್ಲಿರಬೇಕಾಗುತ್ತದೆ. ಇಂತಹ ಸನ್ನಿವೇಶ ಕೇವಲ ಚೈನಾ (china) ದೇಶದಲ್ಲಿ ಸಹಜವಾಗಿ ಕಾಣಬಹುದಾಗಿದೆ. ಏಕೆಂದರೆ ಇಲ್ಲಿಯ ಜನರು ಮೇಲೆ ತಿಳಿಸಿದ ಹಾವು & ಬಾವಲಿಗಳ ನಿಕಟ ಸಂಪರ್ಕದಲ್ಲಿ ಬರುವುದಲ್ಲದೇ ಅವುಗಳನ್ನು ಭಕ್ಷಿಸುತ್ತಾರೆ ಆದ್ದರಿಂದ ಈ ಹೈಬ್ರೀಡ್ ವೈರಾಣು (covid-19) ಮಾನವನಲ್ಲಿ ಸುಲಭವಾಗಿ ಪ್ರವೇಶಿಸಿರಬಹುದಾಗಿದೆ. ಆದ್ದರಿಂದಲೇ ಚೈನಾ ದೇಶದ WUHAN ಪ್ರಾಂತ್ಯವು (covid-19)ಉತ್ಪತ್ತಿ ತಾಣವಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
- covid-19 ವೈರಾಣು ಮೂಗು, ಬಾಯಿ, ಕಣ್ಣಿನ ಮುಖಾಂತರ ಮನುಷ್ಯನಲ್ಲಿ ಪ್ರವೇಶಿಸುತ್ತದೆ. ಈ ವೈರಾಣು Upper Respiratory Tract ನಲ್ಲಿ ದ್ವಿಗುಣಗೊಳ್ಳುವ (replication) ಪ್ರಕ್ರಿಯೆಯನ್ನು ಆಂರಭಿಸುತ್ತದೆ. ಸೊಂಕು ತಗುಲಿದ ಸುಮಾರು5 ರಿಂದ 10 ದಿನಗಳ ಕಾಲದವರೆಗೆ ಈ ದ್ವಿಗುಣಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದೇ ಸಮಯದಲ್ಲಿ ಈ ವೈರಾಣುವಿನ ವಿಶಿಷ್ಠ ಲಕ್ಷಣವಾದ ಶ್ವಾಸಕೋಶದ ALVEOLI ಗಳವರೆಗೂ ತಲುಪಿ ಅಲ್ಲಿಯೂ replication process (ಪ್ರಕ್ರಿಯೆ) ಯನ್ನು ಮುಂದುವರೆಸುತ್ತದೆ. ಈ ವೈರಾಣುಗಳು ನಮ್ಮ ದೇಹದಲ್ಲಿ ಬೆಳೆಯುವಾಗ ಅದರ ಸುತ್ತಮುತ್ತಲಿನ ಜೀವಕೋಶಗಳನ್ನು ನಾಶ ಪಡಿಸುತ್ತದೆ. ಈ ಪ್ರಕ್ರಿಯೆಯು ಗಂಟಲು ಮತ್ತು ಶ್ವಾಸನಾಳದಲ್ಲಿ ನಡೆಯುವುದರಿಂದ ಅನಿಯಮಿತವಾದ ಒಣ ಕೆಮ್ಮು ಬರುತ್ತದೆ. ಈ ವೈರಾಣುವಿನಹಾವಳಿಯೂ ಶ್ವಾಸಕೋಶಗಳಲ್ಲು ನಡೆಯುವುದರಿಂದ ಆಮ್ಲಜನಕ ವಿನಿಮಯ ಪ್ರಕ್ರಿಯೆಯಲ್ಲಿ ಭಾದಿಸುತ್ತದೆ ಮತ್ತು ALVEOLI ಗಳನ್ನು ನಷ್ಟಪಡಿಸಿ ಕೀವುಂಟು ಮಾಡಿ VIRAL-PNEMONIA ವನ್ನು ಉಂಟು ಮಾಡುತ್ತದೆ ಆದ್ದರಿಂದಲೇ covid-19 ಪೀಡಿತ ಜನರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಗಳಲ್ಲಿ ಆಮ್ಲಜನಕದ ಕೊರತೆಯಾಗಿ, ಬಹು ಅಂಗಾಂಗಳ ವೈಪಲ್ಯಕ್ಕೆ ಎಡೆ ಮಾಡಿಕೊಡುತ್ತದೆ, ಆದ್ದರಿಂದಲೇ ಈ covid-19 ಸೊಂಕು ಇಷ್ಟೊಂದು ಮಾರಾಣಾಂತಿಕ.
ಈ ಕೊವಿಡ್-19 ಸೊಂಕಿನ ಲಕ್ಷಣಗಳು
- ಇದರ ಪ್ರಾರಂಭಿಕ ಲಕ್ಷಣಗಳು ತನ್ನ ಮೂಲ ವೈರಾಣುವಿನಂತೆಯೇ ಸಾಮಾನ್ಯ ನೆಗಡಿ/ಸೀನು/ಜ್ವರ/ಮೈ ಕೈ ನೋವು ಕ್ರಮೇಣವಾಗಿ ಒಣಕೆಮ್ಮು/ ಅತಿಯಾದ ಜ್ವರ ಶುರುವಾಗಿ ತದನಂತರ ಉಸಿರಾಟದಲ್ಲಿ ತೊಂದರೆ ಕಂಡುಬರುತ್ತದೆ.
- ವೈರಸ್‍ನ ಸೊಂಕು ತಗುಲಿ ಅದರ ಲಕ್ಷಣಗಳು ಗೋಚರಿಸುವ ಸಮಯವಾದ 5 ರಿಂದ 10 ದಿನಗಳಲ್ಲಿ ಈ ವೈರಾಣುಗಳು Upper Respiratory Tract ನಲ್ಲಿ ಅಸಂಖ್ಯಾತವಾಗಿ ನೆಲೆಯೂರಿರುತ್ತದೆ. ನಾವು ಸೀನುವಾಗ, ಕೆಮ್ಮುವಾಗ, ಉಗುಳುವಾಗ, ಮಾತಾನಾಡುವಾಗ ಈ ವೈರಾಣುಗಳು ಗಾಳಿಯಲ್ಲಿ ಹೊರಬರುತ್ತವೆ. ಒಂದು ಹನಿಯಷ್ಟು ಬಾಯಿ-ಮೂಗಿನಿಂದ ಬರುವ ದ್ರಾವರಸದಲ್ಲಿ ಲಕ್ಷಾಂತರ ವೈರಾಣುಗಳಿರುತ್ತವೆ. ಆದ್ದರಿಂದ ಈ ಸೊಂಕು ಹತ್ತಿರದ ಸಂಪರ್ಕದಲ್ಲಿ ಬರುವವರಿಗೆಲ್ಲಾ ಸಹಜ ಮತ್ತು ಸುಲಭವಾಗಿ ತಗಲುತ್ತದೆ. ಈ ಸಮಯದಲ್ಲಿ ರೋಗಿಯಲ್ಲಿ ಕಾಯಿಲೆಯ ಲಕ್ಷಣಗಳು ಕಾಣದೆ ಇರುವುದರಿಂದ ಇಬ್ಬರ ಗಮನಕ್ಕೂ ಬಾರದೆ ಸೊಂಕು ಹರಡುವ ಪ್ರಕ್ರಿಯೆ ಶುರುವಾಗಿರುತ್ತದೆ. ನಾವು ಮಾತಾನಾಡುವಾಗ ಬಾಯಿಂದ (Droplet) ಬರುವ ದ್ರಾವಣ ಸುಮಾರು 1 ರಿಂದ 1ಳಿ ಅಡಿಯವರೆಗೂ ಪಸರಿಸುತ್ತದೆ. ಅದೇ ತರಹ ಸೀನುವಾಗ ಮತ್ತು ಕೆಮ್ಮುವಾಗ ಬಾಯಿಯಿಂದ ಬರುವ ದ್ರಾವರಸ ಸುಮಾರು 1 ಮೀಟರ್ ವರೆಗು ಚಲಿಸುತ್ತದೆ. ಇದರಿಂದ ತಿಳಿಯುವುದೇನೆಂದರೇ ಸಾಮಾಜಿಕ ಅಂತರವನ್ನು (SOCIAL DISTANCING)ಕನಿಷ್ಟ 1 ಮೀಟರ್ ಪಾಲಿಸಿದರೆ, ಒಬ್ಬರಿಂದೊಬ್ಬರಿಗೆ ವೈರಾಣು ಹರಡುವುದನ್ನು ಸರಳವಾಗಿ ಮತ್ತು ಸಹಜವಾಗಿ ತಡೆಯಬಹುದು.
- ಸುಮಾರು 60 ರಿಂದ 70% ಜನರಲ್ಲಿ ಈ ಸೊಂಕು ಸಾಮಾನ್ಯ ವೈರಲ್ ಜ್ವರದಂತೆ ವರ್ತಿಸುತ್ತದೆ. ಇಂತಹ ಜನರಲ್ಲಿ ರೋಗ ನಿರೋಧಕ ಶಕ್ತಿ ಬಹಳ ಚೆನ್ನಾಗಿರುತ್ತದೆ.
- ಸುಮಾರು 10 ರಿಂದ 25% ಜನರಲ್ಲಿ, ಈ ಸೊಂಕು ಹೆಚ್ಚು ತೊಂದರೆ ನೀಡುತ್ತದೆ. ಅವರಲ್ಲಿ ಹೆಚ್ಚಿನ ಜ್ವರ, ನಿರಂತರ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಬಹುದು. ಈ ತರಹದ ಸೊಂಕು ಎಲ್ಲಾ ವಯೋಮಾನದವರಿಗೂ ಬರಬಹುದು ಮತ್ತು ಇವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೂ, ಇದರ ಜೊತೆಗೆ ಸುಸಜ್ಜಿತವಾದ ಔಷಧೋಪಚಾರದಿಂದ ಇವರನ್ನು ಸೊಂಕಿನಿಂದ ಮುಕ್ತಗೊಳಿಸಬಹುದು.
- ಸುಮಾರು 5 ರಿಂದ 15% ಜನರಲ್ಲಿ ಈ ಸೊಂಕು ತೀವ್ರವಾಗುವ ಸಂಭವವಿರುತ್ತದೆ. ಅದರಲ್ಲಿ 2 ರಿಂದ 5% ಜನರು ಮರಣವನ್ನು ಹೊಂದಬಹುದು ಅವರುಗಳಲ್ಲಿ ಪ್ರಮುಖವಾಗಿ ಗಂಭೀರ ಖಾಯಿಲೆಗಳ ಹಿನ್ನಲೆ ಇರುತ್ತದೆ.
ಉದಾಹರಣೆಗೆ
- ಸಕ್ಕರೆ ಖಾಯಿಲೆ
- ಕಿಡ್ನಿ ಸಮಸ್ಯೆ (Chronic kidney Dieseas)
- ಶ್ವಾಸಕೋಶದ ತೊಂದರೆಗಳು
- ಕೀಮೋ ಥೆರೆಫಿ ರೋಗಿಗಳು (Chemotherapy)
- Steroid ಬಳಸುವವರು
- Bone marrow ತೊಂದರೆ ಇರುವವರು
- ಮಧ್ಯಪಾನ ಮತ್ತು ಧೂಮಪಾನಿಗಳು
- 8.8 ವರ್ಷದ ಕೆಳಗಿನ ಮಕ್ಕಳು
- 9.60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು
- ಗರ್ಭಿಣಿಯರು
- ರೋಗ ನಿರೋಧಕ ಶಕ್ತಿ ಕಡಿಮೆಯಿರುವ (ಯಾವುದೇ ಕಾರಣದಿಂದ)
ವೈರಾಣುವಿನ ಸೊಂಕನ್ನು ತಡೆಯಲು ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಗಳು ಮಾನವನ ಶರೀರವು ಎರಡು ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.
- ಸಹಜ ರಕ್ಷಣೆ (Innate immunity) -ಜನ್ಮ ತಳಿ ಬಂದಿರುವುದು
- ಅರ್ಜಿಸಿದ ರಕ್ಷಣೆ (acquired immunity)
- ಅರ್ಜಿಸಿದ ರಕ್ಷಣೆ – ಲಸಿಕಾ ವಿದಾನದಿಂದ
ಒಂದು ವೈರಾಣು ದೇಹದಲ್ಲಿ ಪ್ರವೇಶಿಸುತ್ತಿದ್ದ ಹಾಗೆಯೇ ಅದನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು lymphocytes ಮತ್ತು microphages ಗಳಿಂದ ಶುರುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈರಾಣುವು ಬಹಳ ಪ್ರಭಲವಾಗಿದ್ದಲ್ಲಿ, ಖಾಯಿಲೆ ಪ್ರಕ್ರಿಯೆಯು ಮುಂದುವರೆಯುತ್ತದೆ. ಇಲ್ಲವಾದಲ್ಲಿ ಈ ಪ್ರಕ್ರಿಯೆಯು ಇಲ್ಲಿಗೆ ನಿಲ್ಲುತ್ತದೆ.ಇದೇ ಸಮಯದಲ್ಲಿ ನಮ್ಮ ದೇಹದಲ್ಲಿರುವ IgA antibodyಗಳು ಮತ್ತು INTERFERONS ಗಳು ಸಹ ತಕ್ಷಣ ರಕ್ಷಣೆಗೆ ಬಂದು ವೈರಸ್‍ನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತದೆ.
ಮೇಲೆ ತಿಳಿಸಿದ ಎರಡೂ ವಿಧಾನಗಳು ಯಶಸ್ವಿಯಾಗದಿದ್ದಾಗ ನಮ್ಮ B-LYMPHOCYTES (Plasma Cells) ಗಳು ಸಕ್ರಿಯವಾಗಿ ವೈರಾಣುವಿನ ವಿರುದ್ದ ನಿರ್ದಿಷ್ಟವಾದ ಚಿ antibody ಗಳನ್ನು ಉತ್ಪನ್ನ ಮಾಡುತ್ತದೆ. ಅದರಂತೆಯೇ T-Lymphocytes ಗಳು ವೈರಸ್‍ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗುತ್ತದೆ. ಈ ಎರಡು ಕ್ರಿಯೆಗಳು ರೋಗ ಲಕ್ಷಣ ಶುರುವಾದ 48 ರಿಂದ 72 ತಾಸುಗಳ ನಂತರ ಶುರುವಾಗುತ್ತದೆ. ಸುಮಾರು 2 ರಿಂದ 3 ವಾರಗಳ ಕಾಲ ಮುಂದುವರೆದು ಮೈಯಲ್ಲಿ ಒಂದು ವೈರಾಣು ಇರದ ಹಾಗೆ ನೋಡಿಕೊಳ್ಳುತ್ತವೆ. ಈ ಎರಡೇ ವಿಧಾನದಿಂದ ಮೈಯಲ್ಲಿ ಬರುವ ರೋಗನಿರೋಧಕ ಶಕ್ತಿಯು ಆ ವೈರಾಣುವಿನ ವಿರುದ್ದ ಜೀವನ ಪೂರ್ತಿ ಉಳಿಯುತ್ತದೆ. ಮತ್ತೊಮ್ಮೆ ಇದೇ ವೈರಾಣು ದೇಹದಲ್ಲಿ ಸೊಂಕು ಬರದ ಹಾಗೆ ನೋಡಿಕೊಳ್ಳುತ್ತದೆ (ಈ ಮೇಲೆ ತಿಳಿಸಿದ ಪ್ರಕ್ರಿಯೆಯನ್ನೆ ನಾವು ಲಸಿಕಾ ವಿಧಾನದಿಂದ ಬಳಸಿ, ದೀರ್ಘಕಾಲದ ರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡಲಾಗುತ್ತದೆ Vaccination/ Immunization process) ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ಅನುವಂಶಿಕತೆ, ವಯಸ್ಸು, ಊಟೋಪಚಾರ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ.
ಈ ವೈರಾಣುವನ್ನು ತಡೆಗಟ್ಟುವ ಬಗೆ
- ನಮ್ಮ ದೇಹದ ರೋಗ ನಿರೋಧಕ ಶಕ್ತಿ
- ಸದ್ಯದಲ್ಲಿ ಯಾವುದೇ ಪರಿಣಾಮಕಾರಿ ಔಷಧಿಗಳಿಲ್ಲ. ಹಾಗೆಂದು ನಿರಾಶೆಗೊಳ್ಳುವುದು ಬೇಕಿಲ್ಲ. ಈ ಮೊದಲು ಸಂಶೋಧನೆಗೊಂಡಿರುವ ಕೆಲವೊಂದು anti-viral medicine ಗಳನ್ನು ವಿವಿಧ ಸಂಯೋಜನೆಯಲ್ಲಿ ಬಳಸಿ ಸಕಾರಾತ್ಮಕವಾದ ಫಲಿತಾಂಶವನ್ನು ಪಡೆದ ನಿದರ್ಶನಗಳಿವೆ.
- ಇವೆಲ್ಲದಕ್ಕಿಂತ ಪರಿಣಾಮಕಾರಿ ಮತ್ತು ಸರಳವಾದ ವಿಧಾನವೆಂದರೆ
- A. ಖಾಯಿಲೆ ಇರುವವರನ್ನು ಪ್ರತ್ಯೇಕಿಸುವುದು. (isolation)
- ಖಾಯಿಲೆ ಇದ್ದವರ ನಿಕಟ ಸಂಪರ್ಕದಲ್ಲಿದ್ದವರನ್ನು ಬೇರ್ಪಡಿಸುವುದು. (Home Quarantine)
- C. ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು (Social Distancing) ಕಡ್ಡಾಯವಾಗಿ ಪಾಲಿಸುವುದು.
ಮೇಲೆ ತಿಳಿಸಿದ ವಿಚಾರದ ಸಾರಾಂಶವೇನೆಂದರೆ ನಮ್ಮ ಶತ್ರುವಾದ ವೈರಸ್‍ನಿಂದ ದೂರವಿರುವುದು ಅಥವಾ ತಪ್ಪಿಸಿಕೊಂಡು ಓಡುವುದು. ಇದು ಕೇಳಲಿಕ್ಕೆ ಎಷ್ಟು ಹಾಸ್ಯಸ್ಪದವಲ್ಲವೇ??? ಜಗತ್ತಿನ ಅತ್ಯಂತ ಬಲಿಷ್ಠ ಮತ್ತು ಬುದ್ದಿಶಾಲಿ ಜೀವಿ ಒಂದು ಸೂಕ್ಷ್ಮಾಣುವಿನಿಂದ ತಪ್ಪಿಸಿಕೊಂಡು ಓಡುವುದು. ಆದರೆ ಈ ಸೊಂಕನ್ನು ಮತ್ತು ಸಾಂಕ್ರಮಿಕವನ್ನು ಯಶಸ್ವಿಯಾಗಿ ತಡೆಯಬೇಕೆಂದರೆ ಮೇಲೆ ತಿಳಿಸಿರುವ ವಿಧಾನವೇ ಅತ್ಯಂತ ಸರಳ ಮತ್ತು ಸೂಕ್ತ.
covid-19 ವೈರಸ್ ಮೇಲೆ ಬಾಹ್ಯ ವಸ್ತುಗಳ ಪ್ರಭಾವವೇನು?
- >540c ಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ವೈರಾಣು ಸಾಯುತ್ತದೆ.
- ರಾಸಾಯನಿಕ ದ್ರವಗಳಾದ ÁzÀ FORMALDEHYDE, GLUTARALDEHYDE, SODIUM HYPOCHLORIDE (BLEECHING POWDER), BETA PROPIO-LACTONE ಈ ದ್ರವಗಳ ಸಿಂಪಡನೆಯಿಂದ ವೈರಾಣುವನ್ನು ಕೆಲವು ನಿಮಿಷಗಳಲ್ಲೆ ನಿಷ್ಕ್ರಿಯೆಗೊಳಿಸಬಹುದು. ಮೇಲೆ ತಿಳಿಸಿದ ಉಳಿದ ರಾಸಾಯನಿಕ ದ್ರವಗಳನ್ನು ಸಮುದಾಯ ಸ್ವಚ್ಛತೆಗೆ ಬಳಸಬೇಕು. ಈ ದ್ರವ ರಾಸಾಯನಿಕಗಳ ಸಂಪರ್ಕವನ್ನು ನಮ್ಮ ಚರ್ಮಕ್ಕೆ ದುಷ್ಪರಿಣಾಮ ಮಾಡುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.
- >70% alcohol ಇರುವ ದ್ರಾವಣಗಳಿಂದ ಕೆಲವು ಸೆಕೆಂಡ್‍ಗಳಲ್ಲಿಯೇ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ನಾವು ಬಳಸುವ ಹ್ಯಾಂಡ್ ಸ್ಯಾನಿಟೈಜರ್‍ಗಳಲ್ಲಿ ಚಿಟಛಿohoಟ ನ ಪ್ರತಿಶತ >70% ಇರುತ್ತದೆ. ಆದ್ದರಿಂದ ಅದು ಬಹು ಉಪಯೋಗಿಯಾಗಿರುತ್ತದೆ.
- ನಿರ್ಜೀವ ವಸ್ತುಗಳ ಮೇಲೆ ಹತ್ತಿರುವ ವೈರಾಣು 15-20ನಿಮಿಷದವರೆಗೆ ಮಾತ್ರ ಬದುಕಿರುತ್ತದೆ.
ಈ ರೋಗ ಹರಡುವ ಹಂತಗಳು
stage I:-ಸೊಂಕಿರುವ ದೇಶದಿಂದ, ಸೊಂಕಿರುವ ವ್ಯಕ್ತಿ ಸ್ವದೇಶಕ್ಕೆ ಆಗಮಿಸಿರುವುದು. (ನಮ್ಮ ದೇಶದಲ್ಲಿ ಸೊಂಕು ಪ್ರಾರಂಭ) (Primary/ Index Case)
stage II:- ಸೊಂಕಿತರ ನಿಕಟ ಸಂಪರ್ಕದಲ್ಲಿರುವವರಲ್ಲಿ ಸೊಂಕು ಕಾಣಿಸಿಕೊಳ್ಳುವುದು.
stage III:- ವಿದೇಶದಿಂದ ಬಂದಿರದೇ, ಮತ್ತು ಬಂದಿರುವವರ ನಿಕಟ ಸಂಪರ್ಕದಲ್ಲಿರದ, ವ್ಯಕ್ತಿಗಳಲ್ಲಿ ಕಂಡುಬರುವ ಸೊಂಕು (Community Spread)
stage IV:- ದೇಶದ ವಿವಿಧ ಭಾಗಗಳಲ್ಲಿ ಸೋಂಕು ಹರಡುವುದು. (ex:- ನಿಜಾಮುದ್ದೀನ್ ಪ್ರಕರಣ)
ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ದೇಶದ ಬಹಳಷ್ಟು ಭಾಗಗಳು ಎರಡನೇ ಹಂತದಲ್ಲಿದ್ದು, ಕೆಲವೊಂದು ಭಾಗಗಳು 3ನೇ ಹಂತ ಪ್ರವೇಶಿಸುತ್ತಿದೆ.
ದೇಶವನ್ನು Lock-down ಮಾಡುವುದು ಹೇಗೆ ಸಹಕಾರಿ?
ಈ ವೈರಾಣುವು ತಾನಾಗಿಯೇ ಚಲನಶೀಲವಲ್ಲ. ಈ ವೈರಾಣುವನ್ನು ಸೊಂಕಿತ ವ್ಯಕ್ತಿಯೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗಬಹುದು. ಮತ್ತು ಸೊಂಕಿತ ವ್ಯಕ್ತಿಯಿಂದಲೇ ಮತ್ತೊಂದು ನಿಕಟ ಸಂಪರ್ಕದಲ್ಲಿ ಬಂದ ವ್ಯಕ್ತಿಗೆ ಹರಡಬೇಕು. Lock-down ಮತ್ತು Social-distancing ನ ಮರ್ಮ ಮೇಲಿನ ವಿಚಾರದಲ್ಲಿ ಅಡಗಿದೆ.
covid-19 ಭಾರತದಲ್ಲಿ ಏನಿದರ ಪಾಡು?
ಈಗಾಗಲೇ ಅತಿಯಾಗಿ ಸೋಂಕು ಪೀಡಿತರಾಗಿರುವ ಪಾಶ್ಚಿಮಾತ್ಯ ದೇಶಗಳನ್ನು ಗಮನಿಸಿವಿಶ್ಲೇಶಿಸುವುದಾದರೆ ಕೆಲವೊಂದು ದಿಗ್ಬ್ರಮೆಗೊಳಿಸುವ ವಿಚಾರಗಳು ಹೊರಹೊಮ್ಮುತ್ತದೆ.
1) ಈ ವೈರಾಣುವಿನ ಸೊಂಕು ತಾಗಿಸುವ ಕ್ಷಮತೆ(Infectivity) ತುಂಬಾ ಹೆಚ್ಚಾಗಿದೆ. ಅಂದರೆ ಕ್ಷಣ ಮಾತ್ರದಲ್ಲಿ ದೊಡ್ಡ ಸಮುದಾಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮಥ್ರ್ಯವಿದೆ
2) ವೃದ್ಧರಲ್ಲಿ ಮತ್ತು ದೀರ್ಘಸ್ವರೂಪದ ಖಾಯಿಲೆಗಳ ಹಿನ್ನೆಲೆಯವರಿಗೆ ಮಾರಣಂತಿಕವಾಗಿದೆ. (Virulence)
3) ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಮತ್ತು ಸ್ವಯಂ ಪ್ರತ್ಯೇಕಿಸಿಕೊಳ್ಳದವರು (Self Quarantine) ಸೊಂಕಿಗೆ ಗುರಿಯಾಗಿದ್ದಾರೆ.
4) ಅತ್ಯಂತ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಹೊಂದಿದ್ದರೂ, ಸೊಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಮಿತಿಮೀರುವ ಪರಿಸ್ಥಿತಿಯಿಂದ, ಒಂದು ಒಳ್ಳೆಯ ಆರೋಗ್ಯ/ಆಸ್ಪತ್ರೆಯ ವ್ಯವಸ್ಥೆಯನ್ನು ಸಹ ವಿಫಲಗೊಳಿಸಿ, ನರಳುವ-ಸಾಯುವ ರೋಗಿಗಳನ್ನು ಮೂಕ ಪ್ರೇಕ್ಷಕರಾಗಿ ನೋಡುವಂತೆ ಮಾಡುತ್ತದೆ.
5) ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ನು ಪಾಲಿಸದೇ ತಮ್ಮನ್ನು ತಾವು ಶಿಸ್ತುಬದ್ಧಗೊಳಿಸದೇ ಇರುವುದರಿಂದ, ಅವರಲ್ಲಿ (ಪಾಶ್ಚಿಮಾತ್ಯ ದೇಶಗಳು) ಸೋಂಕಿತರ ಸಂಖ್ಯೆಯು ಕೈ ಮೀರಿ ಹೋಗಿರುವುದನ್ನು ಕಾಣಬಹುದಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಬಹಳ ಪೂರಕ ವಾತವರಣವಿದೆ. ನಮ್ಮ ಜನರು ವಿದೇಶಿಗರು ಮಾಡಿದ ತಪ್ಪುಗಳನ್ನು ಪುನಾರವರ್ತಿಸಬಾರದಷ್ಟೇ.
ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಮ್ಮಲ್ಲಿ ಆರೋಗ್ಯ ಸೇವೆಯು ಅಷ್ಟಕ್ಕಷ್ಟೆ ಮತ್ತು ನಮ್ಮ ಜೀವನಶೈಲಿಯೂ ಅತ್ಯಂತ ಉತ್ಕøಷ್ಟವಾಗಿಲ್ಲದಿರುವುದರಿಂದ, ನಾವು ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ಸಾಮ್ಯವಾದ ಸೋಂಕುಗಳಿಗೆ ತುತ್ತಾಗಿರುತ್ತೇವೆ. ಇದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಆರ್ಜಿಸಿದ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಇದು ಇಂತಹ ಸನ್ನಿವೇಶಗಳಲ್ಲಿ ಬಹಳಷ್ಟು ಸಹಾಯಕಾರಿ. ನಮ್ಮ ದೇಶದಲ್ಲಿ ಯುವ ಪೀಳಿಗೆಯ ಜನಸಂಖ್ಯೆ ಯಥೇಚ್ಛವಾಗಿರುವುದರಿಂದ, ಈ covid-19 ವೈರಸ್‍ನ ಪ್ರಭಾವ ಮತ್ತು ಹಾವಳಿಯನ್ನು ತಡೆಗಟ್ಟುವಲ್ಲಿ ಅನೂಕೂಲಕರವಾದ ವಾತಾವರಣವಿದೆ.
ನಮ್ಮ ದೇಶದಲ್ಲಿ ಒಟ್ಟಾರೆ ಸುಮಾರು 10ಲಕ್ಷ ಜನರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಮತ್ತು ಸುಮಾರು 12 ಸಾವಿರ ಜನರಿಗೆ ತೀವ್ರಾ ನಿಗಾ ಘಟಕದಲ್ಲಿಟ್ಟು ventilator ನಲ್ಲಿ ಇರಿಸಿ, ಚಿಕಿತ್ಸೆ ಮಾಡುವ ಸಾಮಾಥ್ರ್ಯವಿದೆ.
ಹೀಗೊಂದು ಪರಿಸ್ಥಿತಿಯನ್ನು ಅವಲೋಕಿಸೋಣ
ನಮ್ಮ ದೇಶದ ಜನಸಂಖ್ಯೆ ಸುಮಾರು130 ಕೋಟಿ, ಅದರಲ್ಲಿ ಕೇವಲ 15% ಜನರಿಗೆ ಸೊಂಕು ತಗುಲಿದರೆ 2 ಕೋಟಿ ಜನ ಆಸ್ಪತ್ರೆ ಕಡೆ ಮುಖ ಮಾಡಿ, ಅದರಲ್ಲಿ ಕೇವಲ 15% ಜನರಿಗೆ ಅಂದರೆ 30 ಲಕ್ಷ ಜನರಿಗೆ ಒಳರೋಗಿಯಾಗಿ ಚಿಕಿತ್ಸೆ ಕೊಡುವುದು ಮತ್ತು ಅದರಲ್ಲಿ ಕೇವಲ 15% ಜನರಿಗೆ ಅಂದರೆ 45 ಸಾವಿರ ರೋಗಿಗಳಿಗೆ ತೀವ್ರಾ ನಿಗಾ ಘಟಕದ ಅವಶ್ಯಕತೆ ಬಂದಲ್ಲಿ ನಮ್ಮಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಶಕ್ತಿ ಇದೆಯೇ?? ಇದು ಸಾದ್ಯವೇ??
ಇದು ನಮ್ಮ ಕನಸಿನಲ್ಲಿ ಊಹಿಸಿದರೂ ಸಾದ್ಯವಾಗದ ಕಟು ಸತ್ಯ, ಆದ್ದರಿಂದ ಆ ದುಸ್ಥಿತಿಗೆ ತಲುಪದ ಹಾಗೆ ಮಾಡಬೇಕೆಂದರೆ ಇದುವರೆಗೂ ನಮ್ಮ ಸರ್ಕಾರವು ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಂಕಲ್ಪದಿಂದ ಸಮರೋಪಾದಿಯಲ್ಲಿ ಕಾರ್ಯೊನ್ಮುಖರಾಗೋಣ ಮತ್ತು ದೇಶವನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಮ್ಮದೊಂದು ಅಳಿಲು ಸೇವೆಯನ್ನು ಮಾಡಿ ದೇಶದ ಋಣ ತೀರಿಸೋಣ.
ಅನುಸರಿಸಬೇಕಾದ ಮುಂಜಾಗ್ರತೆಗಳು
- ಮನೆಯಲ್ಲಿ ಯಾವುದೇ ಸೋಂಕಿಲ್ಲದವರು ಪಾಲಿಸಬೇಕಾದ ನಿಯಮಗಳು.
- A. Lock down ಪಾಲಿಸಿ
- ಪದೇ ಪದೇ ಹ್ಯಾಂಡ್‍ವಾಷ್ ಮಾಡುವುದು ಮತ್ತು ಸ್ಯಾನಿಟೈಜರ್ ಗಳನ್ನು ಬಳಸುವ ಅವಶ್ಯಕತೆ ಇಲ್ಲ.
- C. ಮನೆಯಲ್ಲಿ AC ಇದ್ದರೆ 270C ಗಿಂತ ಅಧಿಕ ತಾಪಮಾನದಲ್ಲಿ ಇಡುವುದು.
- D. ಪ್ರೋಟೀನ್‍ಗಳು ಮತ್ತು vit-c (ಹುಳಿ ಇರುವ ಹಣ್ಣುಗಳು) ಮತ್ತು vit-a (ಕೆಂಪು ಬಣ್ಣದ ತರಕಾರಿಗಳು) ಯಥೇಚ್ಛವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿರುತ್ತದೆ.
- ಶ್ವಾಸಕೋಶದ ಸಾಮಾಥ್ರ್ಯವನ್ನು ಬಲಗೊಳಿಸಲು ಯೋಗ ಮತ್ತು ಪ್ರಾಣಯಾಮ ಕ್ರಿಯೆಗಳನ್ನು ಮಾಡುವುದು.
- ಮನೆಯಲ್ಲಿ ಯಾರಾದರೂ ಸೋಂಕಿತರ ಸಂಪರ್ಕಕ್ಕೆ ಬಂದು ಸ್ವಯಂ ಪ್ರತ್ಯೇಕಿಸಲ್ಪಟ್ಟಾಗ (Home Quarantine)
- A. ಮೇಲೆ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು.
- Quarantine ನಲ್ಲಿರೋ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿಡುವುದು.
- C. ಅವರ ನಿಕಟ ಸಂಪರ್ಕದಲ್ಲಿ ಮನೆಯ ಯಾವ ಸದಸ್ಯರು ಬರದಂತೆ ನೋಡಿಕೊಳ್ಳುವುದು.
- D. Quarantine ನಲ್ಲಿರೋ ವ್ಯಕ್ತಿ ಮತ್ತು ಅವರ ಸೇವೆಯಲ್ಲಿರುವವರು ನಿಯಮಿತವಾಗಿ ಕೈ ಗಳನ್ನು ತೊಳೆಯುವುದು ಮತ್ತು ಆಗಾಗ ಸ್ಯಾನಿಟೈಜರ್ ಬಳಸುವುದು.
- Quarantine ನಲ್ಲಿರೋ ವ್ಯಕ್ತಿಯ ಬಟ್ಟೆಗಳು ಮತ್ತು ಹೊದಿಕೆಗಳನ್ನು ಅವರ ಕೊಠಡಿಯಲ್ಲೆ ಒಂದು ಬಕೇಟ್ ಕುದಿಯುವ ನೀರಿನಲ್ಲಿ 20 ನಿಮಿಷಗಳ ಕಾಲ ಇಡುವುದು.
ಜಿ. Quarantine e ನಲ್ಲಿರೋ ವ್ಯಕ್ತಿ ಬಳಸುವ ದಿನನಿತ್ಯದ ಎಲ್ಲಾ ಸಾಮಾನುಗಳನ್ನು (ತಟ್ಟೆ, ಲೋಟ, ಮೋಬೈಲ್ ಇತ್ಯಾದಿ) ಇತರರು ಮುಟ್ಟದಂತೆ ಕ್ರಮ ತೆಗೆದುಕೊಳ್ಳುವುದು.
- ಕೆಮ್ಮುವಾಗ ಅಥವಾ ಸೀನುವಾಗ ಭುಜ ಮತ್ತು ಮೊಣಕೈನಿಂದ ಬಾಯಿಯನ್ನು ಮುಚ್ಚಿಕೊಳ್ಳುವುದು.
- ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ನಿರ್ದಿಷ್ಟವಾದ ಆಸ್ಪತ್ರೆಯ ವೈದ್ಯರ ತಪಾಸಣೆಗೆ ಒಳಪಡುವುದು.
- ಸುಮಾರು 14 ದಿನಗಳ Quarantine ಅವಧಿಯ ನಂತರ ಯಾವುದೇ ಲಕ್ಷಣಗಳು ಕಂಡುಬರದೆ ಇದ್ದಲ್ಲಿ, ಸಾಮಾನ್ಯವಾಗಿ ಮನೆಯವರೊಂದಿಗೆ ಬೆರೆಯಬಹುದು.
III. ಈ ಸಾಂಕ್ರಮಿಕವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಯ ಪಡೆಯವರು.
- ಕಡ್ಡಾಯವಾಗಿ ಓ-95 ಮಾಸ್ಕ್‍ಗಳನ್ನು ಬಳಸುವುದು
- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ
- ಯಾವುದೇ ಸೋಂಕಿತ ವ್ಯಕ್ತಿಯನ್ನು ಮುಟ್ಟಬೇಕಾದ ಪರಿಸ್ಥಿತಿಯಲ್ಲಿ Hand Glove ಮತ್ತು Transperent Face Shield ಬಳಸುವುದು.
- ಮನೆಗೆ ಹಿಂದುರುಗಿದಾಗ ಧರಿಸಿದ ಬಟ್ಟೆಗಳನ್ನು ಹೊರಗಡೆಯೇ ಕುದಿಯುವ ನೀರಿನಲ್ಲಿ ಹಾಕುವುದು ಮತ್ತು ಸ್ನಾನ ಮಾಡುವುದು.
- ಮನೆಯಲ್ಲಿ ಯಾವುದೇ ವಸ್ತುವನ್ನು ಮುಟ್ಟುವ ಮುಂಚೆ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು.
STAY HOME | STAY SAFE |SAVE NATION|ಮನೆಯಲ್ಲೇ ಇರಿ | ಸುರಕ್ಷಿತವಾಗಿರಿ | ದೇಶವನ್ನು ರಕ್ಷಿಸಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

ದಿನದ ಸುದ್ದಿ
ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು
ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.
http://Visit : www.suddidina.com
ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ
ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.
ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.
24,352 ಮಕ್ಕಳಿಗೆ ಪ್ರಯೋಜನ
ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.
SATS ಮಾಹಿತಿ ಅಪ್ಡೇಟ್ ಸವಾಲು
ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.
ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.
ಶಿಕ್ಷಕರಿಗೆ ಹೆಚ್ಚುವರಿ ಹೊರೆ?
ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.
ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.
ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

ಕ್ರೀಡೆ
ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ
ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
http://Visit : www.suddidina.com
ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ
ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.
ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.
₹3 ಸಾವಿರಕ್ಕಾಗಿ ಆರಂಭವಾದ ಓಟ
ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.
ಯುವಕರು ಟ್ರ್ಯಾಕ್ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.
ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ
ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.
ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.
ತಾಯಿಯ ಹಾದಿಯಲ್ಲೇ ಮಗಳ ಗೆಲುವು
ಈ ಮ್ಯಾರಥಾನ್ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ2 days agoಬಿಜೆಪಿ ರೈತ ಮೋರ್ಚಾದಿಂದ ಬಂದ್ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು
-
ದಿನದ ಸುದ್ದಿ6 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ6 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
-
ದಿನದ ಸುದ್ದಿ3 days agoಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ


