ದಿನದ ಸುದ್ದಿ
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ಹಾವೇರಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯ 4 ವರ್ಷದ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2020-21 ನೇ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿವೆ. ಪಿ.ಯು.ಸಿ., ಐ.ಟಿ.ಐ, ಜೆ.ಓ.ಡಿ.ಸಿ. ಹಾಗೂ ತತ್ಸಮಾನ (10+2) ಪರೀಕ್ಷೆಗಳಲ್ಲಿ ಪಾಸಾದ ಆಸಕ್ತರು ಅರ್ಜಿ ಸಲ್ಲಿಸಬಹುದು.
ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ 4 ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಎಸ್.ಡಬ್ಲೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆ.ಎ.ಎಸ್., ಐ.ಎ.ಎಸ್., ರೈಲ್ವೆ ಇಲಾಖೆ, ಎಫ್.ಡಿ.ಎ. ಮುಂತಾದವುಗಳನ್ನು ಬರೆಯಲು ಅವಕಾಶವಿದೆ. ಅಲ್ಲದೆ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ., ಎಂ.ಎಫ್.ಎ., ಎಂ.ಫಿಲ್, ಪಿ.ಹೆಚ್.ಡಿ ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿ.ಪಿಎಡ್ ಮುಂತಾದವುಗಳನ್ನು ಕಲಿಯಲು ಅವಕಾಶಗಳಿವೆ.
ದೃಶ್ಯಕಲೆಯ ಈ ಪದವಿಗಳನ್ನು ಸ್ವ ಉದ್ಯೋಗ ಪ್ರಧಾನವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಪದವೀಧರರು ಸ್ವಂತ ಸ್ಟುಡಿಯೋ ಆರಂಭಿಸಿ ಮೂರ್ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಚಿತ್ರಕಲಾ ಪದವೀಧರರು ಚಲನಚಿತ್ರ, ಧಾರವಾಹಿ, ದೂರದರ್ಶನ (ಟಿ.ವಿ)ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಎನಿಮೇಶನ್, ಪೋಸ್ಟರ್ ಡಿಸೈನ್, ಸ್ಕೆಚಿಂಗ್‍ನಲ್ಲಿ ಪಳಗಿದವರು ಬೇರೆ ಬೇರೆ ವಾಣಿಜ್ಯ ಕಂಪೆನಿಗಳು, ಜಾಹೀರಾತು ಸಂಸ್ಥೆಗಳು, ಟೆಕ್ಸ್‍ಟೈಲ್ ಡಿಸೈನ್, ಪತ್ರಿಕೋದ್ಯಮ, ಫ್ಯಾಶನ್ ಡಿಸೈನ್ ಮುಂತಾದ ಅನೇಕ ಕಡೆಗಳಲ್ಲಿ ಕೆಲಸ ಮಾಡಬಹುದು.
ಬಾದಾಮಿ ಕ್ಷೇಂದ್ರದಲ್ಲಿ ನಿರಂತರವಾಗಿ ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲ ಯುವ ಕಲಾವಿದರಿಂದ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾ ಶಿಬಿರ, ಕಾರ್ಯಾಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಕೇಂದ್ರವು ನಾಡೋಜ ಡಾ. ಆರ್.ಎಂ. ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು (ಕಲಾ ಸಂಗ್ರಹಾಲಯ) ಹೊಂದಿದೆ. ಇಲ್ಲಿ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಬಾದಾಮಿ ಕೇಂದ್ರ, ದೂರವಾಣಿ ಸಂಖ್ಯೆ 9449256814, 9448580056, 9886664962 ಸಂರ್ಪಕಿಸಲು ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಾಹ್ಯಾಕಾಶ ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್ ನಿಧನ ; ಭಾನುವಾರ ಅಂತಿಮ ದರ್ಶನ ವ್ಯವಸ್ಥೆ

ಸುದ್ದಿದಿನಡೆಸ್ಕ್:ಭಾರತೀಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮುಖ್ಯಸ್ಥರಾಗಿದ್ದ ಡಾ. ಕೆ. ಕಸ್ತೂರಿ ರಂಗನ್ ಅವರು ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು.
ಕಸ್ತೂರಿ ರಂಗನ್ ಅವರು ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ರಾಜಸ್ತಾನದ ಸೆಂಟ್ರಲ್ ಯೂನಿವರ್ಸಿಟಿ ಹಾಗೂ ಎನ್‌ಐಐಟಿ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿದ್ದರು. ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ರಾಜ್ಯಸಭಾ ಸದಸ್ಯರೂ ಆಗಿದ್ದ ಅವರು, ಭಾರತೀಯ ಯೋಜನಾ ಆಯೋಗದ ಸದಸ್ಯರಾಗಿದ್ದರು. ಪಶ್ಚಿಮಘಟ್ಟದ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯಿಂದ ಅವರು ಜನಜನಿತರಾಗಿದ್ದರು. ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ 10 ರಿಂದ 12 ರ ವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಗಾಂಧಿ ಭಾರತ’ ಕಾರ್ಯಕ್ರಮ

ಸುದ್ದಿದಿನ,ಚನ್ನಗಿರಿ:ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಮತ್ತು ಐ ಕ್ಯು ಎ ಸಿ ವತಿಯಿಂದ ಗುರುವಾರ ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.’
ಗಾಂಧಿಭಾರತ’ ಕಾರ್ಯಕ್ರಮ ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರು 1924ರಲ್ಲಿ ಡಿಸೆಂಬರ್ 26,27ರಂದು ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಏಕೈಕ ಸಮ್ಮೇಳನವಾಗಿದ್ದು, ಭಾರತದ ಸ್ವಾತಂತ್ರ್ಯದ ಚಳುವಳಿಯಲ್ಲಿ ಅತೀ ಪ್ರಮುಖವಾದ ಪಾತ್ರವನ್ನು ವಹಿಸಿತ್ತು. ಆ ಕಾರ್ಯಕ್ರಮದವು ನೂರು ವರ್ಷತುಂಬಿದ ನೆನಪಿನ ಭಾಗವಾಗಿ ಮಹಾತ್ಮ ಗಾಂಧೀಜಿಯವರ ಧ್ಯಾನಸ್ಥ ಸ್ಥಿತಿಯ ಭಾವಚಿತ್ರವನ್ನು ಹಾಗೂ ಸಾಮಾಜಿಕ ಸಪ್ತ ಪಾತಕಗಳ ಭಾವಚಿತ್ರವನ್ನು ಅನಾವರಣ ಮಾಡುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಮೃತೇಶ್ವರ ಬಿ ಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ
ಷಣ್ಮುಖಪ್ಪ ಕೆ ಎಚ್ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಜಾಗತಿಕವಾಗಿ ಹಿಂಸೆಯು ವಿಜೃಂಬಿಸುತ್ತಿರುವ ದಿನಮಾನಗಳಲ್ಲಿ ಮಹಾತ್ಮ ಗಾಂಧಿಯವರು ಹೆಚ್ಚು ಹೆಚ್ಚು ನೆನಪಾಗುತ್ತಿದ್ದಾರೆ. ಅವರು ಭಾರತದ ರಾಷ್ಟçಪಿತ ಮತ್ತು ಮಹಾತ್ಮ ಎಂದು ಕರೆಸಿಕೊಳ್ಳುವಲ್ಲಿ ಅವರು ಮಾಡಿದ ತ್ಯಾಗ, ದೇಶ ಸೇವೆ ಮತ್ತು ದೇಶಭಕ್ತಿ ಅದು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಆಗಿತ್ತು ಎಂದರು.
ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಕೂಡ ಮಾದರಿಂಯೇ ಆಗಿದೆ ಪ್ರಸ್ತುತ ಈ ದಿನದ ಕಾರ್ಯಕ್ರಮ ಮಹಾತ್ಮಾ ಗಾಂಧೀಜಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನ ವಹಿಸಿಕೊಂಡ ಕಾರಣಕ್ಕೆ ಅದು ನೂರು ವರ್ಷ ತಲುಪಿದ ಸವಿ ನೆನಪನ್ನು ಸ್ಮರಣೀಯವಾಗಿಸುವಲ್ಲಿ ಈ ದಿನದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಜಯಕುಮಾರ್ ಐಕ್ಯುಎಸಿ ಸಂಚಾಲಕರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಬದುಕಿನ ಆದರ್ಶಗಳು ಇವತ್ತಿನ ಜಾಗತಿಕ ಮಟ್ಟದ ಯುವ ಸಮೂಹಕ್ಕೆ ಮಾದರಿಯಾಗುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಹ ಪ್ರಾಧ್ಯಾಪಕಿ ಡಾ. ಮಂಜುಳ ಅವರು ಗಾಂಧಿ ಭಾರತದ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಗಾಂಧಿಯವರು ಸ್ವಚ್ಚತೆಗೆ ಹೆಚ್ಚು ಮಹತ್ವಕೊಟ್ಟಿದ್ದು ವಿದ್ಯಾರ್ಥಿಗಳಾದವರು ನಾವು ಬದುಕುವ ಪ್ರದೇಶವನ್ನು ಹಾಗೂ ದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಕುರಿತು ಗಮನ ನೀಡಬೇಕು ಎಂದು ತಿಳಿಸಿದರು.
ಡಾ. ರವಿ ಸಹಾಯಕ ಪ್ರಾಧ್ಯಾಪಕರು ಗಾಂಧೀಜಿಯವರ ಪುಸ್ತಕಗಳನ್ನು ಓದುವುದರ ಜೊತೆಗೆ ಬದುಕಿನಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ ಅಮೃತೇಶ್ವರ ಬಿ ಜಿ ಅವರು ಅಧ್ಯಕ್ಷೀಯ ನುಡಿಯನ್ನು ನುಡಿಯುತ್ತಾ “ಮಹಾತ್ಮ ಗಾಂಧಿಯವರು ಭಾರತ ದೇಶಕ್ಕೆ ಸ್ವಾತಂತ್ರ ತರುವಲ್ಲಿ ಇಡೀ ದೇಶದ ನಾಯಕತ್ವವನ್ನು ವಹಿಸುತ್ತಾ ಇಡೀ ಪ್ರಪಂಚಕ್ಕೆ ಜನಪರ ಹೋರಾಟ, ಜನ ಚಳುವಳಿ ಮತ್ತು ಜನಸೇವೆ ಹೀಗಿರಬೇಕು ಎಂಬುದಕ್ಕೆ ಮಹಾತ್ಮ ಗಾಂಧಿ ಆದರ್ಶವಾಗಿದ್ದಾರೆ ಎಂದರು.
ಧೀಮಂತ ವ್ಯಕ್ತಿತ್ವದ ಗಾಂಧಿಯ ಸವಿನೆನಪು ಕರ್ನಾಟಕದ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಅದಕ್ಕೆ ತುಂಬಿದ ನೂರು ವರ್ಷವನ್ನು ಮತ್ತೊಮ್ಮೆ ನಾವು ಸಂಭ್ರಮಿಸುತ್ತ ಇರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಪ್ರತಿಪಾದಿಸಿದರು ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಗಾಂಧಿಯ ಬದುಕಿನ ಮೌಲ್ಯಗಳನ್ನು ಮೆಲುಕು ಹಾಕಿದರು.
ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಮಹಾತ್ಮ ಗಾಂಧೀಜಿ ಕುರಿತ ರಸಪ್ರಶ್ನೆ ಸ್ಪರ್ಧೆ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ದರ್ಶನ ಮತ್ತು ಸಹನ ದ್ವಿತೀಯ ಬಿ ಕಾಂ, ಅಣ್ಣಯ್ಯ ಮತ್ತು ರಮೇಶ್ ನಾಯ್ಕ ಎಂ ಎ ಮತ್ತು ಬಿ ಎ,ಆಕಾಶ್ ಮತ್ತು ಗಿರೀಶ್ ದ್ವಿತೀಯ ಬಿ ಕಾಂ ಇವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಭಾರತದ ಸುಸ್ಥಿರ ಅಭಿವೃದ್ಧಿಗೆ ಮಹಾತ್ಮ ಗಾಂಧೀಜಿ ವಿಚಾರಧಾರೆಯ ಅವಶ್ಯವೇ? ಎಂಬ ವಿಷಯ ಕುರಿತು ವಿದ್ಯಾರ್ಥಿಗಳಾದ ತೇಜಸ್ವಿನಿ ದ್ವಿತೀಯ ಬಿ ಎ, ದರ್ಶನ್ ದ್ವಿತೀಯ ಬಿ ಕಾಂ, ಕಾವ್ಯ ದ್ವಿತೀಯ ಬಿ ಎ ಮಾತನಾಡಿದರು.
ಸೇವಂತಿ ಸ್ವಾಗತಿಸಿದರು. ಕಾವ್ಯ ನಿರೂಪಿಸಿದರು. ಪುಷ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಸಪೇಟೆ | ಹಣ ದುರ್ಬಳಕೆ ; ನಿವೃತ್ತ ಪ್ರಾಂಶುಪಾಲ ಡಾ.ಬಿ.ಜಿ.ಕನಕೇಶಮೂರ್ತಿ ವಿರುದ್ಧ ದೂರು

ಸುದ್ದಿದಿನ,ಹೊಸಪೇಟೆ:ನಗರದ ಶ್ರೀ ಶಂಕರ್ ಆನಂದ್‌ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೇ ಸರ್ಕಾರಿ ಖಾತೆ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ವಂಚಿಸಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಹಾಗೂ ಸಂಬಂಧಿಸಿದ ಲೆಕ್ಕಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಡಾ.ಕೆ.ಎ.ಓಬಳೇಶ್ ಅವರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.
ಮಾಹಿತಿಹಕ್ಕು ಅಡಿಯಲ್ಲಿ ಕಾಲೇಜಿನಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದ ಸಂದರ್ಭದಲ್ಲಿ 2019-20 ರಿಂದ 30-04-2022 ರವರೆಗಿನ ಲೆಕ್ಕ ತಪಾಸಣಾ ವರದಿಯಲ್ಲಿ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಕಂಡಿಕೆ ಸಂಖ್ಯೆ II-ಅ-2 ಮತ್ತು 8 ರಂತೆ ರೂ.8,39,288/- (ಎಂಟು ಲಕ್ಷದ ಮೂವತ್ತೊಂಬತ್ತು ಸಾವಿರದ ಎರಡು ನೂರಾ ಎಂಬತ್ತೆಂಟು ರೂಪಾಯಿ)ಗಳ ಅರೇ ಸರ್ಕಾರಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆ ಮುಖ್ಯ ಲೆಕ್ಕಾಧಿಕಾರಿಗಳು (ಆಡಿಟ್), ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿರುವುದು ಕಂಡುಬಂದಿರುತ್ತದೆ.
ಈ ಅಂಶವನ್ನು ಆಧಾರವಾಗಿಟ್ಟುಕೊಂಡು ನಿವೃತ್ತ ಪ್ರಾಂಶುಪಾಲರಾದ ಡಾ.ಬಿ.ಜಿ.ಕನಕೇಶಮೂರ್ತಿ ಅವರು ಹಣ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಡಾ.ಕೆ.ಎ.ಓಬಳೇಶ್ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ದಿನದ ಸುದ್ದಿ7 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ
-
ಅಂಕಣ5 days ago
ಕವಿತೆ | ಅವಳೀಗ ಕಾಯುವುದಿಲ್ಲ
-
ದಿನದ ಸುದ್ದಿ6 days ago
ಬಳ್ಳಾರಿ ಪೊಲೀಸ್ ಅಧಿಕಾರಿಗಳ ಪಡಿತರ ಅಕ್ಕಿ ಕಳ್ಳಾಟ : ಠಾಣೆ ಮುಂದೆ ಇದ್ದ ಲಾರಿ ಮಾಯ ; ಈ ಸ್ಟೋರಿ ಓದಿ..!
-
ದಿನದ ಸುದ್ದಿ6 days ago
ಭಾರತದ ಮೊದಲ ಉಪಗ್ರಹ ಆರ್ಯಭಟ ಉಡಾವಣೆಯಾಗಿ 50 ವರ್ಷ; ನೆಹರು ತಾರಾಲಯದಲ್ಲಿ ವಿಶೇಷ ಕಾರ್ಯಕ್ರಮ
-
ದಿನದ ಸುದ್ದಿ4 days ago
ಆಸ್ತಿ ಕಲಹವೇ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆಗೆ ಕಾರಣವಾಯ್ತಾ..?
-
ದಿನದ ಸುದ್ದಿ4 days ago
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ6 days ago
ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ