ದಿನದ ಸುದ್ದಿ
ಸ್ವಾತಂತ್ರ್ಯದ ಕೂಗಿಗಿಂತ ಜೈಲಿನ ಗೋಡೆಗಳು ಎತ್ತರವಿಲ್ಲ..! : “ಪ್ರಧಾನ ಜೈಲರ್”ಗೆ ಹಿರಿಯ ಪತ್ರಕರ್ತನ ಎಚ್ಚರಿಕೆಯ ಪತ್ರ..!
- ರವೀಶ್ ಕುಮಾರ್, ಎನ್ ಡಿಟಿವಿ ಸಂಪಾದಕ, ಕನ್ನಡಕ್ಕೆ : ನವೀನ್ ಸೂರಿಂಜೆ, ಪತ್ರಕರ್ತ
ಮಂದೀಪ್ ಪುನಿಯಾ ಅವರ ಬಂಧನ ನನ್ನನ್ನು ಬಹಳ ಕಾಡುತ್ತಿದೆ. ಹತ್ರಾಸ್ ಪ್ರಕರಣದಲ್ಲಿ ಸಿದ್ದೀಕ್ ಕಪ್ಪನ್ ವಿಚಾರ ಏನಾಯ್ತು ಎಂಬುದೇ ಗೊತ್ತಾಗುತ್ತಿಲ್ಲ. ಕಾನ್ಪುರದ ಪತ್ರಕರ್ತ ಅಮಿತ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈಗ ರಾಜ್‌ದೀಪ್ ಸರ್ದೇಸಾಯಿ ಮತ್ತು ಸಿದ್ಧಾರ್ಥ್ ವರದರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪರಿಸ್ಥಿತಿ ನೋಡುವಾಗ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕೊನೆಗೊಳ್ಳುವುದೇ ಎಂಬ ಆತಂಕ ಎದುರಾಗಿದೆ.
ಸ್ವಾತಂತ್ರ್ಯದ ಕೂಗಿಗಿಂತ ಜೈಲಿನ ಗೋಡೆಗಳು ಎತ್ತರವಿರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಕಸಿಯಲು ಬಯಸುತ್ತಾರೋ ಅವರು ಇಡೀ ದೇಶವನ್ನು ಬಂಧನದಲ್ಲಿಡಲು ಬಯಸುತ್ತಾರೆ.
ಆತ್ಮೀಯ ಜೈಲರ್ ರವರೇ,
ಭಾರತದ ಇತಿಹಾಸವು ಈ ಕರಾಳ ದಿನಗಳ ಸುರಕ್ಷತೆಯನ್ನು ನಿಮಗೆ ವಹಿಸುತ್ತಿದೆ. ರಾತ್ರೋ ರಾತ್ರಿ “ಅವರ” ಪೊಲೀಸರು ಸ್ವಾತಂತ್ರ್ಯ ಬಯಸುವ ಪತ್ರಕರ್ತರನ್ನು ಬಂಧಿಸಿ ನಿಮ್ಮಲ್ಲಿಗೆ ಕರೆತರಬಹುದು. ಅದಕ್ಕಾಗಿಯೇ ದೂರದೂರುಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಒಂದು ನೆನಪಿರಲಿ, ಮುಂದೊಂದು ದಿನ ನಿಮ್ಮ ಮಕ್ಕಳು ಗೂಗಲ್ ಸರ್ಚ್ ಮಾಡಿ ನಿಮ್ಮನ್ನು ಪ್ರಶ್ನಿಸುತ್ತಾರೆ. ಆಗ ನಾನು ನೌಕರನಷ್ಟೇ ಆಗಿದ್ದೆ. ನಿಜವಾದ ಜೈಲರ್ ಬೇರೊಬ್ಬನಿದ್ದ ಎಂದು ನಿಮ್ಮ ಮಕ್ಕಳಿಗೆ ಹೇಳಿರಿ. ನೀವು ಐಎಎಸ್, ಐಪಿಎಸ್ ಅಧಿಕಾರಿಯಾಗಿದ್ದರೆ ನಿಮ್ಮ ಮಕ್ಕಳು ಪತ್ರಕರ್ತರಾಗದಂತೆ ನೋಡಿಕೊಳ್ಳಿ. ಪತ್ರಕರ್ತರಾಗಿ ಸತ್ಯ ಹೇಳಿದರೆ ಸಣ್ಣ ತಪ್ಪುಗಳನ್ನು ಹುಡುಕಿ ಜೈಲಿಗೆ ಹಾಕಲಾಗುತ್ತದೆ.
ಭಾರತ ಮಾತೆ ಎಲ್ಲವನ್ನೂ ವೀಕ್ಷಿಸುತ್ತಿದ್ದಾಳೆ. ಗೋದಿ ಮೀಡಿಯಾದ ಮುಖ್ಯಸ್ಥರಿಗೆ ಕಿರೀಟಧಾರಣೆ ಮಾಡಲಾಗುತ್ತಿದೆ ಮತ್ತು ಸ್ವತಂತ್ರ ಧ್ವನಿಗಳನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸ್ವತಂತ್ರ ಪತ್ರಕರ್ತರು ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರೈತ ಚಳವಳಿಯ ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಲೈವ್ ಮೂಲಕ ಗ್ರಾಮದಿಂದ ಗ್ರಾಮಕ್ಕೆ ತಲುಪಿರುವುದನ್ನು ರೈತರು ಗಮನಿಸಿದ್ದಾರೆ. ಅವುಗಳನ್ನು ತಡೆಯಲು, ಸಣ್ಣ ತಪ್ಪುಗಳನ್ನು ಹುಡುಕಿ ಅವರ ಮೇಲೆ ಎಫ್‌ಐಆರ್ ಮಾಡಲಾಗುತ್ತಿದೆ.
ಸ್ವತಂತ್ರ್ಯದ ಘೋಷಣೆ ಕೂಗುವ ಆ ಸ್ಥಳದ ಮೇಲೆ ಜೈಲರ್ ಕಣ್ಣು ಬಿದ್ದಿದೆ. ಜೈಲರ್ ರವರೇ, ನೀವು ಆ ಜೈಲರ್ ಅಲ್ಲ. ಜೈಲರ್ ಮತ್ತೊಬ್ಬರಿದ್ದಾರೆ. ಆ ಜೈಲರ್ ಈ ಬಾರಿಯ ಬಜೆಟ್ ನಲ್ಲಿ “ಪ್ರಧಾನಿ ಜೈಲು ಬಂಧನ ಯೋಜನೆ” ಪ್ರಾರಂಭಿಸಬಹುದು. ನರೇಗಾ ಯೋಜನೆಯಡಿ ಬರೋ ಗ್ರಾಮಗಳನ್ನು ಜೈಲನ್ನಾಗಿ ಮಾಡಬೇಕು.
ಗ್ರಾಮಗಳಲ್ಲಿ ಪ್ರಶ್ನೆ ಕೇಳುವವರನ್ನು ಮತ್ತು ಭಾಷಣ ಮಾಡುವವರನ್ನು ಜೈಲಿಗೆ ಹಾಕಬೇಕು. ಕೊನೆಗೆ ಜೈಲುಗಳನ್ನು ನಿರ್ಮಿಸಿದವನನ್ನು ಮತ್ತು ಜೈಲಿನತ್ತಾ ದಿಟ್ಟಿಸಿದವನನ್ನೂ ಜೈಲಿಗೆ ಹಾಕಬೇಕು. ಇಡೀ ದೇಶದ ಗ್ರಾಮ ಗ್ರಾಮವೇ ನಿಶ್ಯಬ್ದವಾಗಿರಬೇಕು. ಯಾಕೆಂದರೆ “ಪ್ರಧಾನಿ ಜೈಲು ಬಂಧನ ಯೋಜನೆ”ಯನ್ನು ಜೈಲರ್ ಪ್ರಾರಂಭಿಸಿದ್ದಾರೆ ಎಂದು ಘೋಷಿಸಬೇಕು.
ಪ್ರಶ್ನಿಸುವ ಪತ್ರಕರ್ತರನ್ನು ಜೈಲಿನಲ್ಲಿ ಇರಿಸಿದರೆ, ಎರಡು ಬೆಳವಣಿಗೆಗಳು ನಡೆಯಬಹುದು. ಮೊದಲನೆಯದಾಗಿ ಪತ್ರಿಕೆಗಳು ಜೈಲಿನಿಂದ ಹೊರಬರುತ್ತವೆ. ಎರಡನೆಯದಾಗಿ ಜೈಲಿನಿಂದ ಹೊರಗಿರುವ ಪತ್ರಿಕೆಗಳಲ್ಲಿ ಸಾಫ್ಟ್ ಸ್ಟೋರಿಗಳು ಬರಬಹುದು. ಇದು ವಿಶ್ವ ಗುರು ಭಾರತಕ್ಕೆ ಒಳ್ಳೆಯದೇ ? ಯೋಚಿಸಿ.
ಸಿದ್ಧಾರ್ಥ್ ವರದರಾಜನ್, ರಾಜ್‌ದೀಪ್ ಸರ್ದೇಸಾಯಿ, ಅಮಿತ್ ಸಿಂಗ್ ಸೇರಿದಂತೆ ಎಲ್ಲಾ ಪತ್ರಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕೆಂದು ನಾನು ವಿನಂತಿಸುತ್ತೇನೆ. ಮಂದೀಪ್ ಪುನಿಯಾ ಬಿಡುಗಡೆ ಮಾಡಲೇಬೇಕು. ಪ್ರಶ್ನಿಸುವ ಪತ್ರಕರ್ತರ ವಿರುದ್ದ ನಡೆಯುವ ಎಫ್‌ಐಆರ್ ಆಟ ನಿಲ್ಲಬೇಕು.
ಅತ್ಯಂತ ಗಂಭೀರವಾಗಿ ಒಂದು ತಿಳಿದುಕೊಳ್ಳಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ ಎಂದು ಜನ ಅರ್ಥ ಮಾಡಿಕೊಳ್ಳುವ ದಿನ ಬಂದೇ ಬರುತ್ತದೆ. ಆ ದಿನ ಈ ದೇಶದ ಹಳ್ಳಿಗಳ ಗೋಡೆಗಳು, ವಿಮಾನಗಳು ನಿಲ್ದಾಣಗಳು, ಬುಲೆಟ್ ರೈಲುಗಳು, ತರಕಾರಿ ಮಂಡಿಗಳು, ಜಾತ್ರೆಗಳು, ಮಾರುಕಟ್ಟೆಗಳು ಮತ್ತು ಶೌಚಾಲಯ ಗೋಡೆಗಳ ಮೇಲೆ, ಟ್ರಾಕ್ಟರುಗಳು, ಬಸ್ಸುಗಳು ಮತ್ತು ಟ್ರಕ್‌ಗಳ ಹಿಂದೆ ಜನ ಬರೆಯಲು ಪ್ರಾರಂಭಿಸುತ್ತಾರೆ.
“ಗುಲಾಮಿ ಮಾಧ್ಯಮಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಆ ದೇಶದಲ್ಲಿ ಸ್ವಾತಂತ್ರ್ಯ ಇರಲು ಸಾಧ್ಯವಿಲ್ಲ. ಗೋದಿ ಮಾಧ್ಯಮದಿಂದ ಮುಕ್ತವಾದರಷ್ಟೇ ಹೊಸ ಸ್ವಾತಂತ್ರ್ಯ ಬರಲು ಸಾಧ್ಯ”
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.
ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


