ಬಹಿರಂಗ
ಕತ್ತೆಗೆ ಇಲ್ಲದ ಹಿರಿಮೆ ಗೋವಿಗೇಕೆ..!
ಅದು ಆಗಸ್ಟ್ 15. ಸ್ವಾತಂತ್ರ್ಯ ದೊರೆತ ದಿನ.ಕೀಲರಾಘವೇಂದ್ರ ಅವರೊಡನೆ 7 ದಶಕಗಳಲ್ಲಿ ನಾವುಗಳುಸಾಗಿಬಂದ ಹಾದಿಯನ್ನು ಮೆಲುಕುಹಾಕುತ್ತಿದ್ದೆ.ನಮ್ಮಮಾತುಕತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತಿಬಂತು. ಮಾತಿನ ಮಧ್ಯೆದಲ್ಲಿ ಗೋವಿನ ಹೆಸರಲ್ಲಿ ನರಮೇಧನಡೆಯುತ್ತಿದೆ. ಜನ ಅಭದ್ರತೆ, ಭಯ, ಆತಂಕದಿಂದ ಬದುಕುದೂಡುವ ಸ್ಥಿತಿ ನಿರ್ಮಾಣವಾಯಿತಲ್ಲ ಎಂಬ ವಿಚಾರವೂಬಂದಿತು. ನಾನಾಗ ಗೋವು ಕಾಮಧೇನು.ಅದರ ಹಾಲು,ಗಂಜಲ,ಸೆಗಣಿ ಎಲ್ಲವೂ ಬಳಕೆಗೆ ಯೋಗ್ಯ. ಸಾಲದಕ್ಕೆಹಿಂದುಳಿದ ಗೊಲ್ಲ ಸಮುದಾಯದ ಜೀವನಾಧಾರ ಕೂಡಆಗಿದೆ. ಆದರೆ, ಗೋವಿಗಿಂತ ಕತ್ತೆ ಬಹುಪಯೋಗಿ. ಇದನ್ನೇಕೆಜನ ಪೂಜಿಸುವುದಿಲ್ಲ, ಗೌರವಿಸುವುದಿಲ್ಲ? ಇದರ ರಕ್ಷಣೆಗಾಗಿಬಡಿದಾಡುವುದಿಲ್ಲ. ಸಂರಕ್ಷಣೆಗಾಗಿ ಸಮಿತಿಯನ್ನು ಮಾಡಿಲ್ಲ. ಸರ್ಕಾರ ಕೂಡ ಒಂದು ಬಿಡಿಗಾಸನ್ನೂ ಕತ್ತೆ ಸಂರಕ್ಷಣೆಗೆನೀಡಿಲ್ಲ ಎಂದುಒಂದೇ ಸಮನೆ ಉಸುರಿದೆ.ಎದುರು ಕುಳಿತಿದ್ದವಕೀಲ ರಾಘವೇಂದ್ರ ಹೌದಲ್ವ! ಗೋವಿಗೆ ನೀಡಿದಷ್ಟು ಮಹತ್ವಕತ್ತೆಗೇಕೆ ನೀಡಿಲ್ಲ? ನಾವೇಕೆ ಕತ್ತೆ ಸಂರಕ್ಷಣೆಗಾಗಿ ಹೋರಾಟ ಮಾಡಬಾರದೆಂದು ಪ್ರಶ್ನಿಸಿದರು.
ಇದೇ ಹೊತ್ತಿನಲ್ಲಿ ನಾಲ್ಕು ಘಟನೆಗಳು ನನ್ನನ್ನು ಬಹುವಾಗಿಕಾಡಿದವು. ಒಂದು ಉತ್ತರಖಂಡ್ ವಿಧಾನಸಭೆಯಲ್ಲಿ ಅಲ್ಲಿನಪಶುಸಂಗೋಪನಾ ಇಲಾಖೆ ಸಚಿವೆ ರೇಖಾ ಆರ್ಯ ಗೋವಿಗೆ’ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕೆಂಬ ನಿರ್ಣಯಮಂಡಿಸಿದ್ದರು. ಎರಡು, ದೂರದ ಕೊಲಂಬಿಯಾದಲ್ಲಿಕತ್ತೆಗಳಿಗೆ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕಳೆದ15 ವರ್ಷಗಳಿಂದ ಮೋನಿಕ್ಯುಯಿರಾ ಪಟ್ಟಣದಲ್ಲಿ ಕತ್ತೆಉತ್ಸವ ಆಯೋಜಿಸಲಾಗುತ್ತಿದೆ. ಮೂರು, ಈಜಿಪ್ಟ್‌ನ ಮೃಗಾಲಯದಲ್ಲಿ ಕತ್ತೆಗೆ ಕಪ್ಪು-ಬಿಳಿ ಬಣ್ಣ ಬಳಿದು ’ಜೀಬ್ರಾ’ ಎಂದು ಜನರನ್ನು ನಂಬಿಸುತ್ತಿದ್ದರಂತೆ. ಇದನ್ಹೇಗೋಅರಿತವನೊಬ್ಬ ನಕಲಿ ಜೀಬ್ರಾದ ಫೋಟೋ ಸೆರೆ ಹಿಡಿದುಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ನಾಲ್ಕು, ಗಾಜಾದಲ್ಲಿರುವ ಎರಡು ಕತ್ತೆಗಳಿಗೆ ಬಣ್ಣ ಬಳಿದು ಜೀಬ್ರಾಎಂದು ನಂಬಿಸಲಾಗಿದೆ. ಇದೇ ರೀತಿ ಚೀನಾಮೃಗಾಲಯವೊಂದರಲ್ಲಿ ಟಿಬೇಟಿಯನ್‌ನ ಮುಸ್ಟೀಫ್ಜಾತಿಯ ನಾಯಿಯೊಂದನ್ನು ಸಿಂಹ ಎಂದುನಂಬಿಸಲಾಗಿತ್ತು. ಜನ ಬೋನಿನ ಬಳಿ ಹೋದಾಗ ಸಿಂಹಸ್ವರೂಪದ ನಾಯಿ ಬೊಗಳಿ ತನ್ನ ನಿಜ ಬಣ್ಣ ತಿಳಿಸಿದೆ! ಇದನ್ನೆಲ್ಲಾ ಕೇಳಿದಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದನ್ನುಕಾಣಬಹುದು. ಅತ್ಯಂತ ಸಾಧು ಪ್ರಾಣಿ ಎಂದೇಕರೆಸಿಕೊಂಡಿರುವ ಹಸು ಕೂಡ ಕೋಪ ಬಂದಾಗಒದೆಯುವುದು, ಹಾಯುವುದು ಮಾಡುತ್ತದೆ. ಸ್ವಾಮಿನಿಷ್ಟೆಗೆಹೆಸರಾದ ನಾಯಿ ಕೂಡ ತನ್ನ ಯಜಮಾನನನ್ನು ಕಚ್ಚಿರುವಉದಾಹರಣೆಗಳಿವೆ. ಆದರೆ, ಕತ್ತೆಯ ಮೇಲೆ ಎಷ್ಟೇ ಮಣಭಾರಹಾಕಿ, ಮೇವು, ನೀರು ನೀಡದಿದ್ದರೂ ಅದುವ್ಯಗ್ರಗೊಳ್ಳುವುದಿಲ್ಲ. ಹೊಟ್ಟೆ ತುಂಬಾ ಹಾಕಿದರೂ ಅದು ಸಂತಸಗೊಳ್ಳುವುದಿಲ್ಲ. ಸದಾ ಸಮಚಿತ್ತದಿಂದ ಕೂಡಿರುತ್ತದೆ. ಸುಖದುಃಖ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ತಾನು ಜನ್ಮತಳೆದಿರುವುದೇ ಸೇವೆಗಾಗಿ, ಇನ್ನೊಬ್ಬರ ಹಿತಕ್ಕಾಗಿ ಎಂದುಕಿವುಡನಂತೆ, ಮೂಕನಂತೆ ಬದುಕು ಸವೆಸುತ್ತದೆ.ಗಡಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂತಹುದ್ದೇಕುರುಕಲು ಸ್ಥಳ ಇದ್ದರೂ, ಸೈನಿಕರಿಗೆಊಟ – ನೀರು, ಮದ್ದುಗುಂಡುಸಾಗಿಸುವ ಏಕೈಕ ಜೀವಿ ಕತ್ತೆ. ಮನುಷ್ಯನಿಂದತಲುಪಲು, ಹೊರಲು ಆಗದ ಭಾರವನ್ನು ಹೊತ್ತು ನಿಸ್ವಾರ್ಥಸೇವೆ ನೀಡುವ ಜೀವಿ ಕತ್ತೆ. ತನ್ನ ಹೆಗಲ ಮೇಲೆ ಮೈಲಿಗೆ ಬಟ್ಟೆ, ಮಡಿಬಟ್ಟೆ; ಸ್ಪೃಷ್ಯರ ಬಟ್ಟೆ, ಅಸ್ಪೃಷ್ಯರ ಬಟ್ಟೆ; ಬಡವನ ಬಟ್ಟೆ – ಶ್ರೀಮಂತನ ಬಟ್ಟೆ ಎಂದೆಲ್ಲಾ ಎಣಿಸದೇ ಹೊತ್ತು ಸಾಗುವ ಕತ್ತೆನಿಜಾರ್ಥದಲ್ಲಿ ’ಜಾತ್ಯಾತೀತ’ವಾದಿ. ಗೋವಿನ ಹಾಲನ್ನುಜೀವನಪೂರ್ತಿಸೇವಿಸಬೇಕು.ಕತ್ತೆ ಹಾಲನ್ನು ಜೀವನದಲ್ಲೊಮ್ಮೆಸೇವಿಸಿದರೆ ಸಾಕು ಅದು One time booster. ಐದು ಹನಿಕತ್ತೆ ಹಾಲು 100 ವರ್ಷ ರೋಗ ನಿರೋಧಕ ಶಕ್ತಿಯಾಗಿಕಾರ್ಯನಿರ್ವಹಿಸುತ್ತೆ. ನನಗೆ ಈಗಲೂ ನೆನಪಿದೆ. ಸಣ್ಣವನಿದ್ದಾಗ ನನಗೂ ಕತ್ತೆ ಹಾಲು ಕುಡಿಸಲಾಗಿತ್ತು. ಮಾತ್ರವಲ್ಲ, ನಾನು ನನ್ನ ಮೂರು ಮಕ್ಕಳಿಗೂ ಕತ್ತೆ ಹಾಲಿನ booster ಹಾಕಿಸಿರುವೆ.
ಕತ್ತೆಗಳನ್ನಿಂದು ಅಭಿವೃದ್ಧಿ ಕಾಣದ ರಾಷ್ಟ್ರಗಳಲ್ಲಿಯೇ ಹೆಚ್ಚಾಗಿಬಳಸಲಾಗುತ್ತಿದೆ. ಇವನ್ನು ಸರಕು ಸಾಗಾಣಿಕೆಗೆ ಮಾತ್ರವಲ್ಲದೇ, ಕೃಷಿ ಬಳಕೆಗೆ, ಬರ ಪರಿಹಾರದಕಾರ್ಯಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಕೃಷಿಯಲ್ಲಿಅತ್ಯಂತ ಅಗ್ಗದ ಬೆಲೆಗೆ ಬಳಕೆಯಾಗುವ ಶ್ರಮಜೀವಿಗಳಲ್ಲಿಮನುಷ್ಯ ಮೊದಲಿಗನಾದರೆ, ಕತ್ತೆ ಎರಡನೇ ಸ್ಥಾನವನ್ನುಅಲಂಕರಿಸಿದೆ. ಕತ್ತೆಯನ್ನು ಕುರಿ ಕಾಯಲೂ ಬಳಸಲಾಗುತ್ತದೆ. ಕತ್ತೆ ಸವಾರಿ ಮಕ್ಕಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಅಚ್ಚುಮೆಚ್ಚು.ಕತ್ತೆ ಹಾಲು ಮತ್ತು ಮಾಂಸಕ್ಕೆ ಇಟಲಿಯಲ್ಲಿ ಹೆಚ್ಚು ಬೇಡಿಕೆಇದೆ. ಯೂರೋಪ್‌ನ ಹಲವು ಕಡೆ ಮಾಂಸದ ಖಾದ್ಯಗಳುಹೆಚ್ಚು ಜನಪ್ರಿಯಗೊಂಡಿವೆ. ಇದರ ಹಾಲಿನಿಂದ ಸೋಪು, ಕ್ರೀಂಗಳನ್ನು ಉತ್ಪಾದಿಸಲಾಗುತ್ತದೆ. ಕತ್ತೆಯ ಹಾಲು, ಕ್ರೀಂನಿಂದ ಚರ್ಮವ್ಯಾದಿಗಳು ಗುಣವಾಗುತ್ತವೆ. ಅಲ್ಲದೆಕತ್ತೆಯ ಚರ್ಮವನ್ನು ಕಾಗದ ತಯಾರಿಸಲು ಬಳಸಲಾಗುತ್ತದೆ. ಕತ್ತೆಯ ಮಾಂಸದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗಿರುವುದರಿಂದ ಚೀನಿಯರಂತು ಮುಗಿಬಿದ್ದುತಿನ್ನುತ್ತಾರೆ.ಇವನ್ನೆಲ್ಲಾ ಕಂಡಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಕತ್ತೆಯನ್ನು ಬಲಿಪಶು ಮಾಡಲಾಗಿದೆ ಎಂದುಮೇಲ್ನೋಟಕ್ಕೆ ಅನಿಸಬಹುದು. ಆದರೆ, ವಾಸ್ತವದಲ್ಲಿ ಬಲಿಪಶುಕತ್ತೆಯಲ್ಲ, ಬದಲಾಗಿ ಮನುಷ್ಯನೇ ಆಗಿದ್ದಾನೆ.ಕತ್ತೆಯನ್ನು ಜೀಬ್ರಾ ಎಂದು ಬಣ್ಣಿಸಲು, ತೋರಿಸಲು, ವೈಭವೀಕರಿಸಬೇಕಾಗುತ್ತದೆ. ಚತುರತೆ ಮತ್ತು ಬುದ್ಧಿವಂತಿಕೆಎರಡನ್ನೂ ಬೆರಸಿ ಜನರನ್ನು ನಂಬಿಸಬೇಕಾಗುತ್ತದೆ. ಪಾಪದಕತ್ತೆ ಹೊಸವೇಷ ಹೊತ್ತು, ತಾನು ಜೀಬ್ರಾ ಎಂದುತೋರಿಸಿಕೊಳ್ಳುವ ದುಸ್ಥಿತಿಯಲ್ಲಿದೆ. ’ಒಂದು ಭ್ರಷ್ಟ ಕತ್ತೆ ಹೆಚ್ಚಿನಮಟ್ಟದ ಪುರಸ್ಕಾರಕ್ಕೆ ಪಾತ್ರವಾಗುತ್ತದೆ’. ’ಹಗರಣದ ಕತ್ತೆಕಾನೂನಿನ ಅಡಿಯಲ್ಲಿ ಆಶ್ರಯ ಪಡೆಯುತ್ತದೆ’. ’ಎದುರಾಡದಕತ್ತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’. ’ವಂಚಕ ಕತ್ತೆಹುಲುಸಾಗಿ ಬೆಳೆಯುತ್ತದೆ’. ಕತ್ತೆಯ ಈ ಎಲ್ಲಾ ರೂಪಕಗಳುಜೀವಂತವಾಗಿ ಮನುಜರಲ್ಲಿಯೂ ಇವೆ. ಕೆಲವು ಕಡೆಕತ್ತೆಗಳನ್ನು ಮಳೆ ಬಾರದಿದ್ದಾಗ ಪೂಜೆ ಮಾಡಲು, ಮದುವೆಮಾಡಿಸಲು ಬಳಸಲಾಗುತ್ತದೆ. ವಿಚಿತ್ರವೆಂದರೆ, ಹೊಲಸುತಿನ್ನುವ ಹಂದಿಗಳನ್ನು ಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ!’ದಿನ ಬೆಳಗೆದ್ದು ನನ್ನನ್ನು ನೋಡಿ, ನಿಮಗೆ ಶುಭವಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರಾಟವಾಗುವ ಕತ್ತೆ, ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ನಿರ್ಲಕ್ಷಕ್ಕೆಈಡಾಗುವ ಕತ್ತೆ ಎರಡನೇ ದರ್ಜೆಯ ಪ್ರಾಣಿ. ಶೋಷಿತ ಪ್ರಾಣಿಆಗಿದೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಕತ್ತೆಯನ್ನುಜೀಬ್ರಾವನ್ನಾಗಿ, ಸಿಂಹವನ್ನಾಗಿ ಹೇಗೆ ಬೇಕಾದರೂಬದಲಾಯಿಸಿಬಿಡುತ್ತಾನೆ. ಹೀಗೆ ಬಣ್ಣ ಬಳಿಸಿಕೊಂಡ ಕತ್ತೆಗಳುಹಾಗೆಯೇ ಇರುವುದಿಲ್ಲ. ಮಳೆ ಬಿದ್ದರೆ ಅವು ಕತ್ತೆಯಾಗುತ್ತವೆ. ಅದು ಪ್ರಧಾನಿ ಬಟ್ಟೆ ಹೊತ್ತು ನಡೆದರೂ ಸರಿ, ಪರಿಚಾರಕನಬಟ್ಟೆ ಹೊತ್ತು ನಡೆದರೂ ಸರಿ, ಅದರ ಬೆನ್ನು ತೂಕಹೊರಲೇಬೇಕು. ನನಗನಿಸಿದಂತೆ ಇವು ಟನ್‌ಗಟ್ಟಲೆ ತೂಕಮಾತ್ರ ಹೊರುವುದಿಲ್ಲ, ಅವಮಾನವನ್ನು ಹೊರುತ್ತವೆ. ಯಾವುದೇ ಬಣ್ಣ ಬಳಿದುಕೊಂಡರೂ ಕತ್ತೆಯಾಗಿಯೇಉಳಿಯುತ್ತವೆ.
ಯಾರನ್ನಾದರೂ ಕೂಗಿದಾಗ ಸ್ಪಂದಿಸದಿದ್ದರೆ, ಏಯ್ ಕತ್ತೆಎಂದು ಕೂಗಿ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಎಲ್ಲರೂಕತ್ತೆಯನ್ನು ಕಿವುಡ, ಮೂಕ ಪ್ರಾಣಿ ಎಂದುಕೊಂಡುಬಿಟ್ಟಿದ್ದಾರೆ. ಇದು ಮೂಕವೂ ಅಲ್ಲ, ಬದಲಿಗೆ ಅತೀವ ತಾಳ್ಮೆಯನ್ನುಹೊಂದಿದೆ. ಹೀಗಾಗಿಯೆ ಕತ್ತೆಗೆ ಇಂತಹದ್ದೊಂದು ವಿಶೇಷಣಬಂದಿರಬಹುದು.ಕತ್ತೆಯ ಮುಂದೆ ನೀರು ಮತ್ತು ಆಹಾರ ಎರಡನ್ನೂ ಇಟ್ಟರೆ, ಯಾವುದನ್ನೂ ಸೇವಿಸದೆ ಪ್ರಾಣ ಬಿಡುತ್ತದೆ. ಕಾರಣ ಕತ್ತೆಗೆಹಸಿವು ಮತ್ತು ದಾಹ ಎರಡರಲ್ಲಿ ಯಾವುದನ್ನು ಮೊದಲಿಗೆಆಯ್ಕೆ ಮಾಡಿಕೊಳ್ಳಬೇಕೆಂಬ ಜ್ಞಾನ ಹೊಂದಿರುವುದಿಲ್ಲ. ಕತ್ತೆಯ ಮೇಲೆ ಹಣ ಹೂಡಿರಿ. ಅದು ನಿಮಗೆ ಸದಾವಿಧೇಯತೆಯಿಂದ ನಡೆದುಕೊಳ್ಳುತ್ತದೆ. ನಿಮ್ಮನ್ನು ಸ್ವಾಮಿಎಂಬಂತೆ ಭಾವಿಸುತ್ತದೆ. ಅದರಲ್ಲೂ ಕತ್ತೆಗಳು ಹೆಂಗಸರಂತೆಆಡು-ಕುರಿಗಳಂತೆ ತಲೆ ತಗ್ಗಿಸಿಕೊಂಡು ಹೇಳಿದ್ದನ್ನು ಪಾಲಿಸುತ್ತದೆ. ಕೆಲೆವೆಡೆ ಕುದುರೆಗಿಂತ ಕತ್ತೆ ವಾಸಿ ಎಂಬಮಾತಿದೆ. ಕತ್ತೆಯ ಮೇಲೆ ಕೂತರೆ ಹೊರುತ್ತದೆ. ಹೊರಿಸಿದರೆಸಾಗುತ್ತದೆ. ಆದರೆ ಕುದುರೆ ಮೇಲೆ ಕೂತರೆ, ಹೊರಿಸಿದರೆ ಎತ್ತಿಬೀಸಾಡುತ್ತದೆ. ಹೀಗಾಗಿ ಕತ್ತೆ ಪವಿತ್ರ ಸ್ಥಳ ಮೆಕ್ಕಾಗಿ ಹೋಗಿಬಂದರೂ,ಅದು ಕತ್ತೆಯಾಗಿಯೇ ಬದುಕು ದೂಡುತ್ತದೆ.Democratic Party of UnitedStates ನ ಚಿಹ್ನೆ ಕೂಡಕತ್ತೆಯೇ ಆಗಿದೆ.ಕುದುರೆಗಿಂತ ಕತ್ತೆ ಬಲಶಾಲಿ.ಗಾಬರಿಗೆಒಳಗಾಗುವುದಿಲ್ಲ.ನೆನಪಿನ ಶಕ್ತಿಯೂ ಹೆಚ್ಚಾಗಿದೆ. ಒಮ್ಮೆಒಂದು ದಾರಿಯಲ್ಲಿ ಸಾಗಿದರೆ 20 ವರ್ಷವಾದರೂ ಆದಾರಿಯನ್ನು ಗುರುತಿಟ್ಟುಕೊಂಡು ಸಾಗುವ ಪ್ರಾಣಿ. ಜೊತೆಗೆಇದು ಒಂಟಿಯಾಗಿ ಇರಲು ಬಯಸುವುದಿಲ್ಲ. ಜೋಡಿಇರಲೇಬೇಕು. ಇಲ್ಲ ಆಡು,ಕುರಿಯ ಸಂಗಡವಾದರೂಇರಬೇಕು. ಮಾನವನಿಗೆ ಕತ್ತೆಯು ಶತಮಾನಕ್ಕೂ ಹಿಂದಿನಿಂದಸಹಕಾರಿಯಾಗಿದೆ.ಗಂಡುಕತ್ತೆ, ಹೆಣ್ಣು ಕುದುರೆಯೊಂದಿಗೆ ಕೂಡಿದಾಗಜನಿಸುವುದೇ ಹೆಸರಗತ್ತೆ. ಗಂಡು ಕುದುರೆ, ಹೆಣ್ಣುಕತ್ತೆಯೊಂದಿಗೆ ಕೂಡಿದಾಗ ಜನಿಸುವುದು ಹಿನ್ನಿ. ಜೀಬ್ರಾ ಮತ್ತುಕತ್ತೆ ಕೂಡಿದಾಗ ಹುಟ್ಟುವುದು ಜೊಂಕಿ, ಜೀಬ್ರಾಯ್ಡ್ಎನ್ನುತ್ತಾರೆ.
ಹೆಸರಗತ್ತೆಯನ್ನು ಸರಕು ಸಾಗಾಣಿಕೆಗೆ ಬಳಸುವುದರಿಂದ, ಅವುಗಳನ್ನು ನಿರ್ವೀರ್ಯರನ್ನಾಗಿಸಲಾಗಿರುತ್ತದೆ. ಅಸಿನೋಡಿಮಾರ್ಟಿನಾ, ಫ್ರಾಂಕಾ, ಮೊಮತ್ತ್ ಜಾಕ್ ತಳಿಯಕತ್ತೆಗಳನ್ನು ಗೂಳಿಯಂತೆ ಬಳಸಲಾಗುತ್ತದೆ.
ಇಷ್ಟಕ್ಕೂ ಕತ್ತೆಯ ಮೂಲ ಸೊಮಾಲಿಯಾ. ಆಡುಕುರಿ, ಗೋವನ್ನು ಸಾಕುತ್ತಿದ್ದ ಕಾಲದಿಂದಲೂ ಕತ್ತೆ ಇದೆ. ಗಂಡುದನವನ್ನು ಕೃಷಿ ಮತ್ತು ಸಾಗಾಣಿಕೆಗೆ ಬಳಸುತ್ತಿದ್ದರೂ, ದುರ್ಗಮಹಾದಿ ಕ್ರಮಿಸಲು ಕತ್ತೆಯೇ ಬೇಕಿತ್ತು. ಇದಲ್ಲದೇ, ಕತ್ತೆ ತಿಂದಮೇವನ್ನು ಮೆಲುಕು ಹಾಕುತ್ತಾ, ನೀರಿನ ಅವಶ್ಯಕತೆಇಲ್ಲದೆಯೂ ಬದುಕುತ್ತದೆ. ಸಾಲದಕ್ಕೆ ಇದರ ಹಾಲನ್ನುಗೋವಿನ ಹಾಲಿನಂತೆ ಬಳಸಲಾಗಿದೆ. ಮಾಂಸವನ್ನುಸವಿಯಲಾಗಿದೆ.ಸಿರಿಯಾದಲ್ಲಿ ಕತ್ತೆಯನ್ನು ಅಲ್ಲಿನ ಡಿಯೋನಿಸಿಸ್ ದೇವತೆಗೆಹೋಲಿಸಲಾಗಿದೆ. ಈಜಿಪ್ಟ್‌ನಲ್ಲಿ ಮನುಷ್ಯರನ್ನು ಅಂತ್ಯಸಂಸ್ಕಾರ ಮಾಡಿದಂತೆ ಕತ್ತೆಗೂ ಅಂತಿಮ ಗೌರವಕೊಡಲಾಗಿದೆ. ೧೬೭೯ರಲ್ಲೇ ಆರಿಜೋನ ಎಂಬಲ್ಲಿ ಕತ್ತೆಯಬಳಕೆ ಕುರಿತಂತೆ ದಾಖಲೆಗಳಿವೆ. The Domestic Animal Diversity InformationSystem ನ 2006ರ ವರದಿಯಂತೆ ಜಗತ್ತಿನಲ್ಲಿ ೪೧ ಮಿಲಿಯನ್ ಕತ್ತೆಗಳಿವೆ. ಕತ್ತೆಯ ಬಳಕೆಯಲ್ಲಿ ಭಾರತಕ್ಕಿಂತ ಚೀನಾಮುಂದಿದೆ.
ಕತ್ತೆ ಸಂಸ್ಕೃತಿಯ ಒಂದು ಭಾಗ. ಈಜಿಪ್ಟಿನ ಸೂರ್ಯದೇವನಸಂಕೇತ ಕೂಡ ಕತ್ತೆ ಆಗಿದೆ. ಜೀಸಸ್ ಕೂಡ ಕತ್ತೆಯ ಮೇಲೆಸವಾರಿ ಮಾಡುತ್ತಾ ಜೆರುಸಲೇಂ ಪ್ರವೇಶಿಸಿದ್ದಾರೆ. ಬೈಬಲ್‌ನಹಲವು ಕಡೆ ಕತ್ತೆ ಕುರಿತಂತೆ ಉಲ್ಲೇಖಗಳಿವೆ. ಕತ್ತೆಯಹಿಂಭಾಗ ಮತ್ತು ತೋಳಿನ ಭಾಗದಲ್ಲಿ ಜೀಸಸ್ ಗುರುತುಹಾಕಿದ್ದಾರೆಂದು ಇಂದಿಗೂ ನಂಬಲಾಗಿದೆ. ಹಿಂದೂಧರ್ಮದಲ್ಲಿ ಕತ್ತೆ ಲಕ್ಷ್ಮಿಯ ವಾಹನ, ಕರಾಳ ರಾತ್ರಿ ದೇವರವಾಹನ ಎಂದೂ ನಂಬಲಾಗಿದೆ. ಪಂಚತಂತ್ರ ಕಥೆಗಳಲ್ಲಿ ಕೂಡಕತ್ತೆಯ ಉಲ್ಲೇಖ ಇದೆ.ಜೋಹರ್ ಧರ್ಮದಲ್ಲಿ ಮಾತ್ರ ಕತ್ತೆ ಅಶುದ್ಧ ಪ್ರಾಣಿ. ಹೋಮರ್‌ನ ಕಾವ್ಯಗಳಲ್ಲಿ, ಷೇಕ್ಸ್‌ಫಿಯರ್ ಸಾನೆಟ್ಟುಗಳಲ್ಲಿಕೂಡ ಕತ್ತೆಯ ಪಾತ್ರ ಇದೆ. ವಿಲಿಯಂ ವರ್ಡ್ಸ್‌ವರ್ಥ್ ತನ್ನ’ಬೆಲ್‌ಎಬೆಲ್’ನಲ್ಲಿ ಕತ್ತೆ ಕ್ರೈಸ್ತರ ಸಂಕೇತ. ಇದೊಂದು ವಿಧೇಯಮತ್ತು ತಾಳ್ಮೆಯ ಪ್ರಾಣಿ ಎಂದಿರುವನು.’ಕತ್ತೆಯೊಂದಿಗೆಪಯಣ’ ಕೃತಿಯಲ್ಲಿ ಕತ್ತೆ ಹಠಮಾರಿ ಮತ್ತು ಭಾರ ಹೊರುವಪ್ರಾಣಿ ಎಂದು ರಾಬರ್ಟ್ ಲೂಯಿಸ್ ಸ್ಟೀವನ್‌ಸನ್ಬಣ್ಣಿಸಿದ್ದಾನೆ. ೧೯೪೦ರಲ್ಲಿ ಬಂದ ಡಿಸ್ನಿ ಫಿಲಂ ಫಂಟಾಸಿಯಾಮತ್ತು ೧೯೬೭ರ ಬ್ರೈಟಿ ಆಫ್ ದಿ ಗ್ರ್ಯಾಂಡ್ ಕ್ಯಾಂಗನ್ಚಿತ್ರಗಳಲ್ಲಿಯೂ ಕತ್ತೆಯ ಪಾತ್ರವಿದೆ.
ಇತಿಹಾಸದ ಉದ್ದಕ್ಕೂ ಕತ್ತೆ ಎಂದರೆ ಭಾರ ಹೊರುವ ಪ್ರಾಣಿ. ಇದು ಸಾಮಾನ್ಯವಾಗಿ ೫೦೦ ಕೆ.ಜಿ. ವರೆಗೂ ತೂಗಬಲ್ಲವು. ೨೦ರಿಂದ ೩೦ ವರ್ಷಗಳ ಕಾಲ ಜೀವಿಸಬಲ್ಲವು. ಕತ್ತೆಮನುಷ್ಯರಂತೆ ಅವಳಿ ಮರಿಗಳಿಗೆ ಜನ್ಮ ನೀಡುವುದುಅಪರೂಪ. ಮನುಷ್ಯನಿಗಿಂತ ಅತ್ಯಂತ ಜತನವಾಗಿ ತನ್ನಮರಿಯನ್ನು ನೋಡಿಕೊಳ್ಳುತ್ತದೆ.ಇದೆಲ್ಲಕ್ಕಿಂತಲೂ ಮುಖ್ಯವಾಗಿ ರಾಜಕಾರಣಿ ಎಂಬ ಶಬ್ಧಕೂಡ ’ಗದಾ’ ಎಂಬ ಅರ್ಥವನ್ನು ನೀಡುತ್ತದೆ ಎಂಬುದನ್ನುಕೇಳಿ ಅಚ್ಚರಿಗೊಂಡೆ. ಗದಾ ಎಂಬ ಪದ ಸಂಸ್ಕೃತಮೂಲದ್ದಾಗಿದೆ. ಆಗಲೇ ನನಗೆ ಗಾರ್ದಭ ಗಾನ ಗುನುಗಿತು.ಮುತ್ತುಗದ ಹೂವಿಗಿಂತ ಕತ್ತೆಯ ಮರಿ ಚಂದ ಹೌದು ಕತ್ತೆಯಮರಿ ನೋಡಲು ಬಲು ಸುಂದರ. ಅದರ ದಪ್ಪಾದಾದಬಲ್ಬಿನಂತಹ ಕಣ್ಣುಗಳು, ಅಗಲವಾದ ಕಿವಿಗಳನ್ನುಹೊಂದಿರುವ ಪಾಪದ ಪ್ರಾಣಿಯನ್ನು ನೋಡಿದಾಗ ಕತ್ತೆಎನ್ನಲು ಮನಸ್ಸು ಬಾರದು. ಅರ್ಥಶಾಸ್ತ್ರದ ಚಾಣಕ್ಯ ಕೂಡಕತ್ತೆಯ ಗುಣಗಾನ ಮಾಡಿ ಅದರ ವಿಶೇಷತೆಯನ್ನುಉಲ್ಲೇಖಿಸಿದ್ದಾನೆ. ಕತ್ತೆ ಮಳೆ, ಗಾಳಿ, ಚಳಿ ಯಾವುದನ್ನೂಲೆಕ್ಕಿಸದೇ ದುಡಿಯುವ ಪ್ರಾಣಿ. ಇದು ನಾಯಿ, ಬೆಕ್ಕುಗಳಂತೆಸುಲಭವಾಗಿ ಪಳಗುವುದಿಲ್ಲ. ಪಳಗಿಸುವುದು ಕಷ್ಟಕರ. ಪಳಗಿದರೆ, ನಾಯಿಗಿಂತ ನಿಷ್ಠೆಯಿಂದ, ಓರ್ವ ಸ್ನೇಹಿತನಂತೆಜೊತೆಗಿರುತ್ತವೆ.
-ಡಾ.ಎಂ.ಎಸ್.ಮಣಿ
ಹಿರಿಯ ಪತ್ರಕರ್ತರು,ಬೆಂಗಳೂರು

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್‌ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್‌ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್‌ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್‌ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್‌ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್‌ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ1 day agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ1 day agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ13 hours agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ1 day agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ







