Connect with us

ಬಹಿರಂಗ

ಪಾದಪೂಜೆ ಮತ್ತು ಪಾದೋದಕ ಸೇವನೆ ಎಂಬ ಅನಿಷ್ಟ ಪದ್ದತಿ

Published

on

ನಾನು ಅಪಾರವಾಗಿ ಗೌರವಿಸುವ ಯುವ ಸಮಾಜವಾದಿ ಚಿಂತಕ, ಸಾಮಾಜಿಕ ಕಾರ್ಯಕರ್ತ, ಗೆಳೆಯ ಜಿ.ಟಿ.ನರೇಂದ್ರಕುಮಾರ್ ಅವರು, ನಿನ್ನೆ ದಿನ ಸಂಜೆ ನನಗೆ ಫೋನಾಯಿಸಿ, ಜಾರ್ಖಂಡ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತರೋರ್ವರು ತಮ್ಮ ಪಕ್ಷದ ಗೊಡ್ಡ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಸೇವಿಸಿದ ಅಸಹ್ಯಕರ ಘಟನೆ ಕುರಿತು ಮಾತನಾಡಿದರು.

ನಮ್ಮ ಮಾತು ಬಸವಮೂರ್ತಿ ಮಾದಾರ ಚೆನ್ನಯ್ಯನು ಪಾದ ಪೂಜೆ ಮಾಡಿಸಿಕೊಂಡ ಅವೈಜ್ಞಾನಿಕ ನಡೆಯ ಕಡೆಗೆ ಹಾಗೂ ನಾನು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ ಕಡೆಗೆ ಹೊರಳಿಕೊಂಡಿತು. ಬುದ್ಧಗುರು – ಬಸವಣ್ಣ- ಗಾಂಧಿ- ಅಂಬೇಡ್ಕರ್- ಲೋಹಿಯಾ- ಕುವೆಂಪು ಮುಂತಾದವರ ವೈಚಾರಿಕ ಚಿಂತನೆಗಳನ್ನು ಅಪಾರವಾಗಿ ಓದಿಕೊಂಡಿರುವ ಜಿ.ಟಿ.ನರೇಂದ್ರಕುಮಾರ್, ಭಾರತದ ಮೊದಲನೇ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ಕಾಶಿಯಲ್ಲಿ ಪಂಕ್ತಿಯಲ್ಲಿ ಕುಳಿತಿದ್ದ ನೂರಾರು ಬ್ರಾಹ್ಮಣರ ಪಾದಪೂಜೆ ಮಾಡಿದ ಕಾರಣ, ರಾಮಮನೋಹರ ಲೋಹಿಯಾ ಅವರ ಕಟು ಟೀಕೆಗೆ ಗುರಿಯಾಗಿ, ತಮ್ಮ ಜೀವಮಾನದಲ್ಲಿ ಮತ್ತಿನ್ನೆಂದೂ ಪಾದಪೂಜೆ ಮಾಡದಂತೆ ಸುದ್ದಿಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಅಪಮಾನಕ್ಕೆ ಗುರಿಯಾದ ಚಾರಿತ್ರಿಕ ಸನ್ನಿವೇಷ ಕುರಿತು ನನ್ನ ಗಮನಕ್ಕೆ ತಂದರು.

ಬಸವಮೂರ್ತಿ ಮಾದಾರ ಚೆನ್ನಯ್ಯನು ಬ್ರಾಹ್ಮಣ ಮತ್ತು ಲಿಂಗಾಯತ ದಂಪತಿಗಳಿಂದ ಪಾದಪೂಜೆ ಮಾಡಿಸಿಕೊಂಡ ಘಟನೆಯನ್ನು ಕುರಿತು ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದನ್ನು ಓದಿದ್ದ ಕೆಲವು ಚೆನ್ನಯ್ಯಾಭಿಮಾನಿ ಗೆಳೆಯರು, ನಮ್ಮ ನರೇಂದ್ರಕುಮಾರ್ ಅವರಿಗೆ ಫೋನ್ ಮಾಡಿ, “ಮೊದಲೇ ನಾವು ಮಾದಿಗರು ಹಿಂದುಳಿದಿದ್ದೇವೆ… ವಡ್ಡಗೆರೆ ಅವರಿಗೆ ಹೀಗೆಲ್ಲಾ ಬರೆಯಬಾರದು ಅಂತಾ ತಾಕೀತುಮಾಡಿ ಹೇಳಿ ಸರ್…. ವಡ್ಡಗೆರೆ ನಿಮ್ಮ ಮಾತು ಕೇಳುತ್ತಾರೆ’” ಎಂದು ಕೇಳಿಕೊಂಡಿದ್ದಾರೆ.

ಅದೇ ಕೆಲವು ಗೆಳೆಯರು, “ಹೊಲೆಮಾದಿಗರ ಸ್ವಾಮೀಜಿಗಳ ವಿಷಯ ಬಂದಾಗ ಮಾತ್ರ ವೈಚಾರಿಕ ಪ್ರಜ್ಞೆ ಜಾಗೃತವಾಗಿ ಟೀಕಿಸುವ ಪ್ರಗತಿಪರ ಚಿಂತಕರು ಬ್ರಾಹ್ಮಣ, ಲಿಂಗಾಯತ, ವಕ್ಕಲಿಗ, ಕುರುಬ, ಕುಂಬಾರ, ತಿಗಳ, ಈಡಿಗ, ನಾಯಕ ಮುಂತಾದ ಜನಾಂಗಗಳ ಸ್ವಾಮೀಜಿಗಳ ಬಗ್ಗೆ ಟೀಕಿಸದೆ ಮೌನವಹಿಸುವಿರೇಕೆ?” ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ.

ಇವರ ಪ್ರಶ್ನೆ ಹೇಗಿದೆ ಎಂದರೆ – “ಜಾತೀಯತೆ ಎಲ್ಲಿದೆ? ನಾವು ಮೇಲ್ಜಾತಿಯವರು ನಿಜ. ಆದರೆ ಜಾತೀಯತೆ ನಮ್ಮಲ್ಲಿಲ್ಲ. ನೀವು ಜಾತಿಭೇದಕ್ಕೆ ಮೇಲ್ಜಾತಿಗಳನ್ನು ಮಾತ್ರ ಗುರಿಮಾಡಿ ಮಾತಾಡುತ್ತೀರಲ್ಲಾ ಯಾಕೆ…. ನಿಮ್ಮ ನಿಮ್ಮೊಳಗೇ ಎಡಗೈ ಬಲಗೈ ಹೀಗೆ ಎಷ್ಟೊಂದು ಭೇದವಿದೆ…. ಮೊದಲು ನೀವು ಸರಿಯಾಗಿರಿ…” ಹೀಗೆ ವಿವೇಕರಾಹಿತ್ಯವಾಗಿ ಕೇಳುವ ಮನೋಧೋರಣೆಗಿಂತ ನನ್ನನ್ನು ಕೇಳಿರುವ ಪ್ರಶ್ನೆ ಬೇರೆಯಲ್ಲ. ಜಾತಿ ಹೇರಿದವರೇ ಹೀಗೆ ಜಾತೀಯತೆ ನಿಮ್ಮೊಳಗೇ ಇದೆ ಎಂದು ದಲಿತರ ಕಡೆಗೇ ಬೊಟ್ಟು ಮಾಡಿದರೆ ದಲಿತರು ಯಾರನ್ನು ದೂರಬೇಕು? ಜಾತಿಭೇದ ದಲಿತರು ಮಾತ್ರ ಸೃಷ್ಟಿಸಿಕೊಂಡು ಪೋಷಿಸುತ್ತಿರುವ ಸಂಗತಿಯೇನು?

ನಾನು ವೈಯಕ್ತಿಕವಾಗಿ ನನ್ನ ಅನುಭವ ಪರಿಧಿಗೆ ಬಂದ ಯಾವುದೇ ಮೌಢ್ಯವನ್ನು ನನ್ನದೇ ಮಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವೈಚಾರಿಕವಾಗಿ ಮುಖಾಮುಖಿಯಾಗುತ್ತಾ ಬಂದಿದ್ದೇನೆ. ಸಹಜವಾಗಿ ಅನೇಕ ಜಾತಿಗಳ ಬಹುತೇಕ ಸ್ವಾಮೀಜಿಗಳು ನನ್ನ ವೈಚಾರಿಕ ವಿಮರ್ಶೆಗೆ ಒಳಗಾಗಿದ್ದಾರೆ. ನನ್ನಲ್ಲಿರುವ ಮೌಢ್ಯದ ಮುಖಕ್ಕೆ ಯಾರೇ ಕನ್ನಡಿ ಹಿಡಿದರೂ ನಾನು ತಿದ್ದಿಕೊಳ್ಳಲು ಸಿದ್ಧನಾಗಿದ್ದುಕೊಂಡೇ ವಿಮರ್ಶಿಸುವುದು ನನ್ನ ಜಾಯಮಾನ.

ಮಾದಾರ ಚೆನ್ನಯ್ಯ ಪಾದಪೂಜೆ ಮಾಡಿಸಿಕೊಂಡಿರುವ ಸಂಗತಿ ಖಂಡನೀಯವಾದುದು. ವ್ಯಕ್ತಿಯ ಕಾಲು ತೊಳೆದ ನೀರು ಪವಿತ್ರ ತೀರ್ಥವಲ್ಲ, ಅದು ಕಲುಷಿತ ನೀರು. ಅದು ಕುಡಿಯಲಾಗಲೀ, ಅಡುಗೆಗೆ ಬಳಸಲಾಗಲೀ ಯೋಗ್ಯವಲ್ಲ, ಅದರಿಂದ ರೋಗ- ರುಜಿನಗಳು ಬರುತ್ತವೆ. ಇಷ್ಟು ಪ್ರಾಥಮಿಕ ತಿಳಿವಳಿಕೆ ಇರುವ ಯಾವುದೇ ವ್ಯಕ್ತಿ ತನ್ನ ಪಾದ ತೊಳೆಸಿಕೊಂಡು ಆ ನೀರನ್ನು ಇತರರಿಗೆ ಕುಡಿಸಲಾರ. ಇತರರ ಪಾದ ತೊಳೆದು ತಾನೂ ಕುಡಿಯಲಾರ.

ಸರಿ.ಈಗ ಗೆಳೆಯರು ನನ್ನನ್ನು ಕೇಳಿದ ಪ್ರಶ್ನೆಗೆ ಬರೋಣ…

ಮಠಪೀಠಗಳ ಗುರುಪದವಿ ಅಲಂಕರಿಸಿ ಕುಳಿತಿರುವ ದಲಿತ ಹಿಂದುಳಿದ ಜನಾಂಗಗಳ ಸ್ವಾಮೀಜಿಗಳಿಗೇನಾಗಿದೆ? ಅವರಿಗೆ ರಾಜಕೀಯ ಮೋಹವಿದ್ದರೆ ಕಾವಿ ಕಳಚಿ ಬಿಸಾಕಿ ಖಾದಿ ತೊಟ್ಟುಕೊಳ್ಳಲಿ. ಕಾವಿ ಕಿತ್ತೆಸೆದು ರಾಜಕೀಯಕ್ಕೆ ಬರುವುದಷ್ಟೇ ಅಲ್ಲ, ಸಂಸಾರ ಕಟ್ಟಿಕೊಳ್ಳಲು ಬಯಸಿದರೆ ಮದುವೆಯನ್ನೂ ಆಗಲಿ. ಕಾವಿ ತೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಬದ್ದವಾಗಿ ನಡೆದುಕೊಳ್ಳಬೇಕಾದ ಹಂಗಿಗೆ ಬಿದ್ದ ಬಳಿಕವೂ, ತಾವು ಧರ್ಮಾಧಿಕಾರಿಗಳಾಗಿ ತಮ್ಮ ಸಮಾಜದ ಜನರಿಗೆ ಯಾವ ಧರ್ಮಬೋಧೆ ಮತ್ತು ದಾರ್ಶನಿಕತೆಯನ್ನು ತಿಳಿಸಿಕೊಡಲು ಸಾಧ್ಯ?

ಕಾವಿ ತೊಟ್ಟು ಬಸವಮೂರ್ತಿ ಮಾದಾರ ಚನ್ನಯ್ಯ ಎಂಬ ಹೆಸರಿಟ್ಟುಕೊಂಡಿರುವ ಕೃಷ್ಣಮೂರ್ತಿ, ಘನಶರಣರಾದ ಬಸವಣ್ಣ ಮತ್ತು ಮಾದಾರ ಚೆನ್ನಯ್ಯನವರ ಧ್ಯೇಯ – ತತ್ವಾದರ್ಶಗಳಿಗೆ ವಿರುದ್ಧವಾಗಿ ಯಾಕೆ ನಡೆದುಕೊಳ್ಳಬೇಕು? ಇವತ್ತು ರಾಜಕೀಯ ಪಕ್ಷಗಳ ಪರ ವಿರೋಧ ಚಿಂತನೆಗಳನ್ನು ಪ್ರಚಾರ ಮಾಡಿಕೊಂಡು ಗಬ್ಬೆದ್ದು ನಾರುತ್ತಿರುವ ರಾಜಕೀಯದ ಗಾಳಕ್ಕೆ ಸಿಲುಕಿದ ಮೀನಾಗಬೇಕೇನು ಈ ಸ್ವಾಮೀಜಿ? ಪುರೋಹಿತಶಾಹಿ ವ್ಯವಸ್ಥೆಗೆ ಕಾವಲು ನಾಯಿಯಾದ ಚೆನ್ನಯ್ಯನಂತಹ ಮತ್ತಾವ ಸ್ವಾಮೀಜಿಯನ್ನೂ ದಲಿತರಲ್ಲಿ ನಾಕಾಣೆನು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯು ವ್ಯಾವಹಾರಿಕವಾಗಿ ಮಾತ್ರ ಚೆನ್ನಯ್ಯನ ಹೆಸರು ಹೇಳಿಕೊಳ್ಳುತ್ತಾರೆಯೇ ವಿನಃ, ಆಂತರಿಕವಾಗಿ, ಧಾರ್ಮಿಕವಾಗಿ, ಬೌದ್ಧಿಕವಾಗಿ ಎಂದಿಗೂ ವಚನಕಾರ ಮಾದಾರ ಚೆನ್ನಯ್ಯನಂತೆ ಯೊಚಿಸಿದವರಲ್ಲ,.

ಯಾರೇ ಸ್ವಾಮೀಜಿಯಾದವರಿಗೆ ಬೇಕಿರುವುದು ರಾಜಕೀಯ ಪ್ರಜ್ಞೆಯೇ ಹೊರತು, ತಂತ್ರ ಪ್ರತಿತಂತ್ರ ವ್ಯೂಹದ ರಾಜಕೀಯವಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹಾಗೂ ಎಲ್ಲಾ ತತ್ವ ಸಿದ್ಧಾಂತಗಳಲ್ಲಿ ದಲಿತರು ಇರುತ್ತಾರೆ. ಹೀಗಿರುವಾಗ ತಮ್ಮ ಸ್ವಾಮಿಗಳ ಮಾತು ಕೇಳಿಕೊಂಡು ದಲಿತರೆಲ್ಲರೂ ಪಕ್ಷರಾಜಕಾರಣಕ್ಕಿಳಿದು ಪರಸ್ಪರ ಕಚ್ಚಾಡಲು ಸಾಧ್ಯವಿಲ್ಲ. ಸ್ವಾಮಿಯಾದವನಿಗೆ ಬೇಕಾಗಿರುವುದು ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರದ್ಧೆಯೇ ಹೊರತು ಜನರ ರಾಜಕೀಯವಲ್ಲ.

ಈಗ ನಾನು ಹೇಳಹೊರಟಿರುವುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ ಸಿದ್ಧಾಂತಗಳ ಬಗ್ಗೆ. ಕೋಮುವಾದದ ಬಗ್ಗೆ. ದಲಿತ ಸಮುದಾಯಗಳ ಸ್ವಾಭಿಮಾನವನ್ನು ಬ್ರಾಹ್ಮಣ್ಯದ ಅಮಲಿನಲ್ಲಿ ಹರಾಜು ಹಾಕುತ್ತಿರುವುದರ ಬಗ್ಗೆ. ದಲಿತ ಸಮುದಾಯವನ್ನು ಆರೆಸ್ಸೆಸ್ ಗೆ ಅಥವಾ ಸಂಘಪರಿವಾರಕ್ಕೆ ಮಾರ್ಟ್ಗೇಜ್ ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ.
ದಲಿತರ ಸ್ವಾಬಿಮಾನ ನಮ್ಮ ಪೂರ್ವಿಕ ವೈಚಾರಿಕ ನಡೆಗಳನ್ನು ಬ್ರಾಹ್ಮಣ್ಯ ವಿರೋಧಿ ಬಂಡುಕೋರ ದಂಗೆಗಳನ್ನು ಗೌರವಿಸುವುದು ಮತ್ತು ಊರ್ಜಿತಗೊಳಿಸುವುದರಲ್ಲಿದೆ.

ವೈಯಕ್ತಿಕ ಸ್ವಾರ್ಥಕ್ಕಾಗಿ ಸಂಘಿಯಾಗಿರುವ ಬಸವಮೂರ್ತಿ ಮಾದಾರ ಚನ್ನಯ್ಯ, ಆರೆಸ್ಸೆಸ್ ಬೈಟಕ್ ಗಳನ್ನು ಚಿತ್ರದುರ್ಗದ ತನ್ನ ಮಠದಲ್ಲಿಯೇ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿರಲು ಬಸವಣ್ಣನಿಂದ ವಂದ್ಯನಾದ ಶರಣ ಮಾದಾರ ಚನ್ನಯ್ಯನಾಗುವ ಯೋಗ್ಯತೆಯಂತೂ ಇಲ್ಲದ ಬಳಿಕ, ಮತ್ತೊಮ್ಮೆ ಕೃಷ್ಣಮೂರ್ತಿ ಆಲಿಯಾಸ್ ಕಿಟ್ಟಿಯಾಗಲು ನಮಗಾವ ಆಕ್ಷೇಪವೂ ಇಲ್ಲ. ಕಿಟ್ಟಿ ಯಾವತ್ತಿಗೂ ಶರಣ ಮಾದಾರ ಚೆನ್ನಯ್ಯನಾಗಲಾರ.. ನಮ್ಮ ಬೊಟ್ಟು ನಮ್ಮ ಕಣ್ಣನ್ನೇ ಚುಚ್ಚುತ್ತಿರುವಾಗ ನನಗೆ ಪ್ರಶ್ನೆ ಕೇಳಿದ ಗೆಳೆಯರು ಈ ಸಾಮಾಜಿಕ ವಾಸ್ತವವನ್ನೇಕೆ ಅರ್ಥಮಾಡಿಕೊಳ್ಳುತ್ತಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಬಿದ್ದ ಸ್ವಾಮಿಗಳು ಧರ್ಮ ಮತ್ತು ದಾರ್ಶನಿಕತೆಯನ್ನು ಕುರಿತು ಹೇಗೆ ಹೇಳಬಲ್ಲರು ಏನಂತ ಹೇಳಬಲ್ಲರು? ಬಸವಮೂರ್ತಿ ಮಾದಾರ ಚನ್ನಯ್ಯ ತಮ್ಮ ಪೀಠಕ್ಕೆ ರಾಜಿನಾಮೆ ಕೊಟ್ಟು ಫುಲ್ ಟೈಮ್ ಸಂಘಪರಿವಾರದ ಕಾರ್ಯಕರ್ತರಾಗಿರಲಿ ಯಾರು ಬೇಡ ಅಂತಾರೆ?

ಬಸವಮೂರ್ತಿ ಮಾದಾರ ಚೆನ್ನಯ್ಯ ಎಂಬ ಹೆಸರಿಟ್ಟುಕೊಂಡು ಕನಿಷ್ಟ ಆ ಹೆಸರಿಗಾದರೂ ಒಂದು ತೂಕ ಬರುವಂತಹ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ದಲಿತರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಗೋಹತ್ಯಾ ನಿಷೇಧ ಅಜೆಂಡವನ್ನು ಬೆಂಬಲಿಸುವುದು, ರಾಮ ಮಂದಿರದ ನಿರ್ಮಾಣ ಕಾರ್ಯದಲ್ಲಿ ದಲಿತರು ಕೈಜೋಡಿಸಬೇಕೆನ್ನುವುದು, ಹೋಮ ಹವನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಮತಾಂತರ ನಿಷೇಧ ಮಸೂದೆ ಜಾರಿಯಾಗಬೇಕೆಂದು ಒತ್ತಾಯಿಸುವುದು, ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸುವುದ ಇಂತಹವೇ ರೀತಿಯ ಸಂಘಪರಿವಾರದ ಅಜೆಂಡಾಗಳನ್ನು ಬೆಂಬಲಿಸುವ ಈ ಸ್ವಾಮೀಜಿಯ ಮನಸ್ಥಿತಿ ನೋಡಿದರೆ, ಈತ ನಿಜವಾಗಿಯೂ ದಲಿತ ಸಮುದಾಯದವನೇ, ಅಂಬೇಡ್ಕರ್ ಹೆಸರೆತ್ತಲು ಯೋಗ್ಯನೇ ಎಂಬ ಪ್ರಶ್ನೆ ಮೂಡುತ್ತದೆ. ಕೋಮುವಾದ ಮತ್ತು ಭ್ರಷ್ಟಾಚಾರದ ಮಹಾ ರೂಪಕದಂತಿರುವ ಯಡಿಯೂರಪ್ಪನನ್ನು ಶರಣ ಬಸವಣ್ಣನೊಂದಿಗೆ ಹೋಲಿಸುವುದು, ಲ್ಯಾಂಡ್ ಡೀಲಿಂಗ್ ಮುಂತಾದವೆಲ್ಲಾ ಸ್ವಾಮೀಜಿಯಾದವನಿಗೆ ಯಾಕೆ ಬೇಕು?

ಹೇಳಿಕೇಳಿ ಬಸವಮೂರ್ತಿ ಮಾದಾರ ಚೆನ್ನಯ್ಯ, ಚಿತ್ರದುರ್ಗದ ಮುರುಘರಾಜೇಂದ್ರ ಶರಣರ ಶಿಷ್ಯನಾಗಿ ಲಿಂಗದೀಕ್ಷೆ ಪಡೆದುಕೊಂಡವರು. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿದ ಶರಣರು, ದೇಹವನ್ನೇ ದೇವಾಲಯವೆಂದು ಭಾವಿಸಬೇಕಾಗಿಯೂ, ಚಿತ್ಕಳಾರೂಪ ಪ್ರಜ್ವಲನದ ಸಂಕೇತವಾದ ಕರಸ್ಥಲ ಲಿಂಗದ ಹೊರತು ಅನ್ಯ ಸ್ಥಾವರರೂಪಿ ದೇವಾಲಯಗಳಿಗೆ ಹೋಗಬಾರದಾಗಿಯೂ ಶರಣಧರ್ಮದ ವಚನ ಸಂವಿಧಾನ ತಿಳಿಸುತ್ತದೆ. ವಚನ ಸಂವಿಧಾನದ ಘನ ಉದ್ದೇಶವೇ ಜನರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಕಲ ಜೀವಮಂಡಲಕ್ಕೆ ಲೇಸು ಬಯಸುವ ಸಮದರ್ಶನ ಭಾವವನ್ನು ಜಾಗೃತಗೊಳಿಸುವುದಾಗಿದೆ. ಇಂತಹ ಶರಣಧರ್ಮದ ವೈಚಾರಿಕತೆಯ ದಾರಿಯಲ್ಲಿ ನಡೆಯಬೇಕಾದವರು ಪುರೋಹಿತಶಾಹಿಯು ಹೇರಿದ ಗೊಡ್ಡು ಆಚರಣೆಗಳು ಸಂಪ್ರದಾಯಗಳು ಮತ್ತು ವಿಚಾರಗಳನ್ನು ಪೋಷಿಸಲು ಮುಂದಾಗಿರುವುದು ವಿಷಾದನೀಯ ಸಂಗತಿ. ಗುಲಾಮಗಿರಿಯನ್ನು ಕಿತ್ತೊಗೆಯಬೇಕಾದ ಜನರೇ ಬ್ರಾಹ್ಮಣಶಾಹಿಯನ್ನು ಮುದ್ದುಮಾಡಲು ಹೋಗಿ ಪಾದಪೂಜೆ ರೂಪದಲ್ಲಿ ಮತ್ತೆ ಗುಲಾಮಿತನವನ್ನು ಹೇರಿಕೊಳ್ಳುವುದು ಸರಿಯೇನು?

ಆದಿಜಾಂಬವರ ಮಹಾ ದಾರ್ಶನಿಕನಾದ ಮಾತಂಗಮುನಿ ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದವನು. ಬುದ್ಧಗುರು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದವನು. ಬಸವಣ್ಣ ದಂಗೆ ಎದ್ದದ್ದೂ ಇದೇ ಬ್ರಾಹ್ಮಣ್ಯದ ವಿರುದ್ಧ. ಕುವೆಂಪು, ಪೆರಿಯಾರ್, ನಾರಾಯಣ ಗುರು ಮುಂತಾದವರು ಸೆಣೆಸಿದ್ಷು ಇದರ ವಿರುದ್ಧವೇ. ಹೀಗಿರಲು ಚೆನ್ನಯ್ಯ ಈ ಬ್ರಾಹ್ಮಣ್ಯದ ಕಾವಲು ನಾಯಿ ಆಗಬೇಕೇನು? ನಮಗೆ ನಮ್ಮ ತಳಸ್ತರರ ಬಹು ಸಂಸ್ಕೃತಿ ಮತ್ತು ಪರಂಪರೆ ಮುಖ್ಯವೋ ಅಥವಾ ಬಹುತ್ವಕ್ಕೆ ವಿರೋಧಿಯಾದ ಏಕಾಕಾರಿ ವೈದಿಕ ಸಂಸ್ಕೃತಿಯ ಭಜನೆ ಮಾಡುವುದು ಮುಖ್ಯವೋ..? ಇಡೀ ರಾಜ್ಯದ ಪ್ರಜ್ಞಾವಂತ ಪ್ರಜ್ಞಾವಂತರು ಸಮಾನತೆಯ ಆಸೆಯಿಂದ ಲಿಂಗಾಯತ ಧರ್ಮದ ನಿರೀಕ್ಷೆಯಲ್ಲಿದ್ದರೆ, ಮಾದಾರ ಚೆನ್ನಯ್ಯನು ಪುರೋಹಿತಶಾಹಿಯ ಗುಲಾಮಗಿರಿ ಮಾಡುತ್ತಾ ಬ್ರಾಹ್ಮಣ್ಯದ ಕೊಚ್ಚೆ ಮೋರಿಯಲ್ಲಿಯೇ ಸುಖ ಅನುಭವಿಸುತ್ತಾ ಇದ್ದಾರೆಂದರೆ ಏನು ಹೇಳೋಣ?

ಲೇಖಕರು – ಡಾ. ವಡ್ಡಗೆರೆ ನಾಗರಾಜಯ್ಯ
ಬೆಂಗಳೂರು
ಮೊ.ಸಂ : 8722724174

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading
Advertisement

Title

ಅಂತರಂಗ1 week ago

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು...

ದಿನದ ಸುದ್ದಿ1 week ago

ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್‌ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್‌ ಕುಣಿಗಲ್‌...

ದಿನದ ಸುದ್ದಿ3 weeks ago

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ...

ದಿನದ ಸುದ್ದಿ3 weeks ago

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್,...

ದಿನದ ಸುದ್ದಿ4 weeks ago

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ...

ದಿನದ ಸುದ್ದಿ1 month ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ1 month ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ1 month ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ1 month ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ1 month ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

Trending