ದಿನದ ಸುದ್ದಿ
CAB ಯಿಂದ ಆಗುವುದೇನು..?
- ಶ್ರೀನಿವಾಸ್ ಕಕ್ಕಿಲಾಯ
ತಾವು ಮತೀಯ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಓಡಿ ಬಂದಿದ್ದೇವೆ, ನಮಗೆ ಪೌರತ್ವ ಕೊಡಿ ಎಂದು ಕೇಳಿರುವವರು ಕೇವಲ 4044 ಜನರು. ಅವರಿಗಷ್ಟೇ ಈ CAB ನೆರವಾಗಲಿದೆ.
ಇನ್ನು ಅಸ್ಸಾಂನಲ್ಲಿ ಭಾರತೀಯರಲ್ಲ ಎಂದು ಗುರುತಿಸಲಾಗಿರುವವರು 19.1 ಲಕ್ಷ, ಅವರಲ್ಲಿ 15 ಲಕ್ಷ ಹಿಂದೂಗಳು ಮತ್ತು ಆದಿವಾಸಿಗಳು. ಅವರು ಯಾರೂ ಮತೀಯ ಕಿರುಕುಳದ ಕಾರಣಕ್ಕೆ ಇಲ್ಲಿಗೆ ಬಂದವರಲ್ಲ, ಬದಲಿಗೆ ಆರ್ಥಿಕ ಕಾರಣಗಳಿಗಾಗಿ ನುಸುಳಿ ಬಂದವರು.
ಎಲ್ಲಾ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಆರ್ಭಟಿಸುತ್ತಿದ್ದ ಅಮಿತ್ ಶಾ ತಂದಿರುವ ಈ ಮಸೂದೆ ಈ ನುಸುಳಿ ಬಂದವರಿಗೆ ಪೌರತ್ವ ನೀಡಲಿದೆಯೇ? ನೀಡುವುದಿದ್ದರೆ ಅವರಿಂದ ಮತೀಯ ಕಿರುಕುಳಕ್ಕೊಳಗಾದವರು ಎಂದು ಹೊಸ ಸುಳ್ಳನ್ನು ಹೇಳಿಸುತ್ತದೆಯೇ?
ಈ CAB ಯಿಂದ ಯಾರಿಗೂ ಉಪಕಾರವಿಲ್ಲ, ಎಲ್ಲರಿಗೂ ತೊಂದರೆಯೇ. ಅದಕ್ಕಾಗಿಯೇ ಈಶಾನ್ಯ ರಾಜ್ಯಗಳು ಈಗ ಹೊತ್ತಿ ಉರಿಯುತ್ತಿರುವುದು.
ಭಾಜಪದ ನಾಯಕರಿಗಾಗಲೀ, ಅವರ ಬಾಲಂಗೋಚಿ ಭಕ್ತರಿಗಾಗಲೀ ತಲೆಯಲ್ಲಿರುವುದು ವಿಷ ಮಾತ್ರ, ಅದಕ್ಕಿಂತ ಆಚೆ ಅವರ ಯೋಚನೆಗಳು ಹೋಗುವುದಿಲ್ಲ.
ನೋಟು ರದ್ದತಿ, ಜಿಎಸ್ ಟಿ, 370 ರದ್ದತಿ ಯಂತಹ ವಿನಾಶಕಾರಿ, ದೇಶದ್ರೋಹಿ ನಿರ್ಧಾರಗಳನ್ನು ಇದೇ ಭಕ್ತ ಮಂಡಳಿ ಸಂಭ್ರಮಿಸಿರಲಿಲ್ಲವೇ? ಏನಾಯಿತು? ಅವೆಲ್ಲವೂ ಸಂಪೂರ್ಣ ವಿಫಲವಾಗಿ ದೇಶವನ್ನು ಹಾಳುಗೆಡವಿರುವುದು, ಕೇಂದ್ರದ ಖಜಾನೆಯನ್ನೇ ಖಾಲಿ ಮಾಡಿ ರಾಜ್ಯಗಳಿಗೆ ನೀಡಬೇಕಾದ ತೆರಿಗೆಯ ಹಣವನ್ನೂ ನೀಡಲಾಗದಂತೆ, ಶಾಲಾ ಮಕ್ಕಳ ಪರೀಕ್ಷೆಗಳನ್ನು ನಡೆಸುವುದಕ್ಕೂ ಹಣವಿಲ್ಲದಂತೆ ಪ್ರಪಾತಕ್ಕೆ ತಳ್ಳಿರುವುದು ಕಾಣುತ್ತಿಲ್ಲವೇ?
ಭಕ್ತರನ್ನು ಬಿಟ್ಟು ಬಿಡಿ, ಚರ್ಚೆಗೆ ನಿಲ್ಲಬೇಡಿ. ನಮ್ಮ ಅಮೂಲ್ಯ ಸಮಯ ಏನಿದ್ದರೂ ನಮ್ಮವರಿಗೆ ತಿಳಿಸಿ ಹೇಳುವುದಕ್ಕೆ, ಇನ್ನೂ ಭಕ್ತರ ಪಾಶಕ್ಕೆ ಸಿಲುಕಿಲ್ಲದವರಿಗೆ ತಿಳಿಸಿ ಹೇಳುವುದಕ್ಕೆ ವ್ಯಯಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


