Connect with us

ಸಿನಿ ಸುದ್ದಿ

ವಿಡಿಯೋ | ನೇತ್ರಾಣಿ ದ್ವೀಪದಲ್ಲಿ ಅಪ್ಪು ‘ಬ್ಯಾಕ್‌ಫ್ಲಿಪ್’; ಅಭಿಮಾನಿಗಳು ಫಿದಾ..! ನೀವೂ ಒಮ್ಮೆ ನೋಡಿ ಬಿಡಿ

Published

on

ಸುದ್ದಿದಿನ ಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಫಿಟ್ನೆಸ್ ಗಾಗಿ ಮಾಡದ ವರ್ಕೌಟ್ ಇಲ್ಲ. ಜಿಮ್, ಯೋಗ, ಸೈಕ್ಲಿಂಗ್, ಡಾನ್ಸ್‌ ಹೀಗೆ ಹಲವು ದೈಹಿಕ ಚಟುವಟಿಕೆಗಳನ್ನು ಉತ್ಸಾಹದಿಂದ ಮಾಡುತ್ತಾರೆ.

ಪುನೀತ್ ಬ್ಯಾಕ್ ಫ್ಲಿಪ್ ಮಾಡುವುದರಲ್ಲೂ ಸಿದ್ದಹಸ್ತರು. ಮುರುಡೇಶ್ವರದ ಹತ್ತಿರ ವಿರುವ ನೇತ್ರಾಣಿ ದ್ವೀಪದಲ್ಲಿ ಬ್ಯಾಕ್ ಫ್ಲಿಪ್ ಮಾಡಿದ್ದು, ಅದ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಲಿಂಕ್

https://www.facebook.com/watch/?v=1547766108948138

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಸಿನಿ ಸುದ್ದಿ

ಕನ್ನಡವನ್ನ ಕಿತ್ತುಕೊಳ್ಳೋ ಧೈರ್ಯ ಯಾರಿಗಿದೆ..? ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎನ್ನಿ : ಕನ್ನಡ ಪರ ಹೋರಾಟಗಾರರಿಗೆ ಕಿಚ್ಚನ ಸಲಹೆ

Published

on

ಸುದ್ದಿದಿನ, ಬೆಂಗಳೂರು : ಸಂಘಟನೆಯವರ ಹಿಂದೆ ನೂರಾರು ಜನ ಬರ್ತೀರಾ, ಆದರೆ ನಮ್ಮಂಥ ಕಲಾವಿದರಿಗೆ ಅಭಿಮಾನಿಗಳಷ್ಟೇ. ಅವರು ರಾಜ್ಯದ ಮೂಲೆಗಳಲ್ಲಿ ಇರ್ತಾರೆ. ನೀವು ನಮ್ಮನ್ನೆನ್ನಾದ್ರೂ ಹೊಡೆಯೋಕೆ ಬಂದ್ರೆ ನಾವೊಬ್ಬರೇ ಸಿಕ್ತೀವಿ. ಹಾಗಾಗಿ ಕೆಲವರು ಏನಾದರೂ ಸ್ಟೆಪ್ಸ್ ತೆಗೆದುಕೊಂಡಾಗ ಸ್ವಲ್ಪ ಯೋಚಿಸಿ ಎಂದು ಕನ್ನಡಪರ ಹೋರಾಟಗಾರರಿಗೆ ಕಿಚ್ಚ ಸುದೀಪ್ ಸಲಹೆ ನೀಡುವ ಮೂಲಕ ಗಮನಸೆಳೆದಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಾತನಾಡಿದರು. ಬುರ್ಜ್ ಕಲೀಫಾದಲ್ಲಿ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಜತೆಗೆ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆ ಕಿಚ್ಚ ಸುದೀಪ್ ಅವರಿಗೆ ಕನ್ನಡಪರ ಹೋರಾಟಗಾರರು ಸನ್ಮಾನವನ್ನು ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದರು.

ಇದನ್ನೂ ಓದಿ | ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ

ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿ ಇರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದ್ದು, ನೀವು ಮೊದಲು ನಿಮ್ಮ ಗೊಂದಲವನ್ನ ಸರಿಪಡಿಸಿಕೊಳ್ಳಿ. ಕನ್ನಡದ ಶಾಲು ಹಾಕಿ ನೀವು ಮನೆಗೆ ಬಂದರೆ ಖುಷಿ ಪಡೋದಾ, ಭಯ ಪಡೋದಾ ಗೊತ್ತಾಗಲ್ಲ ನನಗೆ. ಜೊತೆಗೆ ನನಗೆ ಉಗಿಯೋಕೆ ಬಂದಿದ್ದಾರೋ ಅಥವಾ ಹೊಗಳೋಕೆ ಬಂದಿದಿರೋ ಅಂತಾನೂ ಗೊತ್ತಾಗಲ್ಲ ಎಂದರು.

ಕನ್ನಡವನ್ನ ಉಳಿಸಿ ಎಂದು ಹೇಳ್ತೀರಾ ಅದು ತಪ್ಪು. ಯಾಕೆಂದರೆ ಕನ್ನಡವನ್ನ ಕಿತ್ತುಕೊಂಡವರು ಯಾರು..? ಯಾರಿಗಿದೆ ಆ ಧೈರ್ಯ..? ಎಂದು ಕಿಚ್ಚ ಗುಡುಗಿದರು. ಜೊತೆಗೆ ಕನ್ನಡಕ್ಕೆ ಇರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ. ಹಾಗಾಗಿ ಯಾವನಿಗಿದೆ ಕನ್ನಡವನ್ನ ಕಿತ್ತುಕೊಳ್ಳುವ ತಾಕತ್ತು, ಬರೋಕೆ ಹೇಳಿ.

ಆದರೆ ಇಲ್ಲಿ ಬೇರೆ ಭಾಷೆ ಜಾಸ್ತಿಯಾಗಿರೋದಕ್ಕೆ ಕಾರಣ ನೀವೇ ಯೋಚಿಸಿ, ಅರ್ಥ ಸಿಗಲಿದೆ. ಕನ್ನಡದ ಮೇಲೆ ಅಭಿಮಾನ ಇಲ್ಲಾಂದ್ರೆ ಬಿಟ್ಟಾಕಿ ಅವರನ್ನ. ಅಭಿಮಾನ ಇರೋರನ್ನ ಗುರುತಿಸಿ ಬೆಳೆಸಿ. ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ

Published

on

ಸುದ್ದಿದಿನ,ದಾವಣಗೆರೆ:ಇತ್ತೀಚಿನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೊಟ್ಟ ಮಾತಿನಂತೆ ನಡೆದ ಚಿತ್ರ ನಟ ದರ್ಶನ್ ಅವರು ಮಂಗಳವಾರ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಕುದುರೆಯ ತಡಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಹುಬ್ಬಳ್ಳಿಯಲ್ಲಿ ರಾಬರ್ಟ್‌​ ಸಿನಿಮಾದ ಪ್ರೀ ರಿಲೀಸಿಂಗ್‌​ ಇವೆಂಟ್‌​ ಮುಗಿಸಿದ ನಟ ದರ್ಶನ್‌​ ದಾವಣಗೆರೆಗೆ ಭೇಟಿ ನೀಡಿ ಮಲ್ಲಿಕಾರ್ಜುನ ಅವರನ್ನು ಸೌಹಾರ್ದ ಮಾತುಕತೆ ನಡೆಸಿದರು.

ಕಾಂಗ್ರೆಸ್ ನಾಯಕ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್​​ ಅವರ ಒಡೆತನದ ಬಾಪೂಜಿ ಅತಿಥಿ ಗೃಹಕ್ಕೆ ತೆರಳಿದ ವೇಳೆ ನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ರವಿಶಂಕರ್ ಕೂಡ ಜೊತೆಗಿದ್ದರು.

ಮೊದಲಿನಿಂದಲೂ ಎಸ್‌.ಎಸ್‌.ಮಲ್ಲಿಕಾರ್ಜುನ್​​​ಗೆ ನಟ ದರ್ಶನ್ ಆಪ್ತರಾಗಿದ್ದು, ಕಳೆದ ಬಾರಿ ದರ್ಶನ್‌ಗೆ ಮಲ್ಲಿಕಾರ್ಜುನ್‌​ ಕುದುರೆಯೊಂದನ್ನ ಉಡುಗೊರೆಯಾಗಿ ನೀಡಿದ್ದರು.

ಅಮೇರಿಕಾದಿಂದ ತಂದ್ದಿದ ಕುದುರೆಯ ತಡಿ (ಜೀನ್ )ನನ್ನು ಉಡುಗೊರೆಯಾಗಿ ನೀಡಿದರು.ನಂತರ ಮಲ್ಲಿಕಾರ್ಜುನ್ ರವರ ಒಡೆತನದ ಮುದೋಳದ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 20 ಲಕ್ಷ ಟನ್ ಕಬ್ಬ ಅರೆದಿದ್ದು, ಮಲ್ಲಿಕಾರ್ಜುನ ಅವರನ್ನು ದರ್ಶನ್ ಅವರು ರೈತರ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಬಿ.ಕೆ.ಪರಶುರಾಮ ಸೇರಿದಂತೆ ಮಲ್ಲಿಕಾರ್ಜುನ ಮತ್ತು ದರ್ಶನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಸಿನಿ ಸುದ್ದಿ

ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!

Published

on

ಸುದ್ದಿದಿನ ಡೆಸ್ಕ್ : ಕನ್ನಡದ ಬಹುನಿರೀಕ್ಷಿತ ಸಿನೆಮಾ ಡಿ ಬಾಸ್ ತೂಗುದೀಪ ದರ್ಶನ್ ಅಭಿನಯದ ರಾಬರ್ಟ್. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ತೆಲುಗು ಅವತರಣಿಕೆಯ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಂದ್ರಪ್ರದೇಶದದಲ್ಲೂ ರಾಬರ್ಟ್ ತೆರೆಗೆ ಸಿದ್ಧಾವಾಗಿದ್ದಾನೆ.

ತರುಣ್ ಸುಧೀರ್ ಈ ಸಿನೆಮಾದ ನಿರ್ದೇಶನ ಮಾಡಿದ್ದು, ಉಮಾಪತಿ ಅವರು ಹಣ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದ ಮೊದಲ ಹಾಡು ಇದೀಗ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಡಿ ಬಾಸ್ ಗೆ ನಾಯಕಿಯಾಗಿ ಆಶಾ ಭಟ್ ಜತೆಯಾಗಿದ್ದು, ಚಿಕ್ಕಣ್ಣ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ಧಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending