ದಿನದ ಸುದ್ದಿ
ಮೀಸಲಾತಿಯ ಜನಕ ‘ಛತ್ರಪತಿ ಶಾಹು ಮಹರಾಜ್’ ಬಗ್ಗೆ ನಿಮಗೆಷ್ಟು ಗೊತ್ತು ?
ಅದು ಒಂದು ಪುರೋಹಿತಶಾಹಿಗಳ ಕಾಲ, ಚಾತುರ್ವರ್ಣ ಪದ್ದತಿಗಳು ಶ್ರೇಣೆಕೃತ ಜಾತಿ ವ್ಯವಸ್ಥೆಗಳು ತಾಂಡವವಾಡುತ್ತಿದ್ದಂತಹ ಕಾಲ, ಪುರೋಹಿತಶಾಹಿಗಳು ಬಹುಜನರನ್ನು ಮೂಡನಂಬಿಕೆಗಳಿಗೆ ತಲ್ಲಲ್ಪಟ್ಟಂತಹ ಕಾಲ, ಬಹುಜನರನ್ನು ಬ್ರಾಹ್ಮಣರ ಸೇವಕರಾಗಿ, ಗುಲಾಮರನ್ನಾಗಿ ಮಾಡಿಕೊಂಡಿದ್ದಂತಹ ಕಾಲ, ಅಸ್ಪೃಶ್ಯರನ್ನು ಹಂದಿ ನಾಯಿಗಳನ್ನು ಹೊಡೆದೋಡಿಸುತ್ತಿದ್ದ ಆಗೆ ಹೊಡೆದೋಡಿಸುತ್ತಿದ್ದಂತಹ ಕಾಲ, ಇಂತಹ ಕಾಲದಲ್ಲಿ ಬಹುಜನರಿಗಾಗಿ ಅವರ ರಕ್ಷಣೆಗಾಗಿ, ಏಳಿಗೆಗಾಗಿ ಒಬ್ಬ ಮಹಾ ಮೇಧಾವಿ ಪುರುಷನೊಬ್ಬ ಹುಟ್ಟುತ್ತಾರೆ ಅವರೇ “ಛತ್ರಪತಿ ಶಾಹು ಮಹಾರಾಜ್”. ಶಾಹುರವರು ಹುಟ್ಟಿದ್ದು 26, ಜೂನ್ 1874 ರಂದು. ಶಾಹು ರವರ ಮೊದಲ ಹೆಸರು ಯಶ್ವಂತರಾವ್ ಘಟ್ಗೆ ಇವರ ತಂದೆಯ ಹೆಸರು ಜಯಸಿಂಹರಾವ್ ಘಟ್ಗೆ, ತಾಯಿ ರಾಧಬಾಯಿ ಇವರು ಮೂಲತಃ ಕೊಲ್ಲಾಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ.
ಶಾಹುರವರಿಗೆ ಏಪ್ರಿಲ್ 2, 1894ರಂದು ಮಹರಾಜರಾಗಿ ಪಟ್ಟಾಭಿಷೇಕವಾಗುತ್ತದೆ.
ಕ್ರಿ.ಶ.1900ರಲ್ಲಿ ಒಂದು ಘಟನೆ ನಡೆಯುತ್ತದೆ ಅದೇನೆಂದರೆ ರಾಜನಾದವನು ಗಂಗಾ ಘಾಟ್ ಎಂಬಲ್ಲಿ ಸ್ನಾನ ಮಾಡಬೇಕಾಗಿರುತ್ತದೆ ಆ ಸಂದರ್ಭದಲ್ಲಿ ರಾಜನಿಗೆ ಬ್ರಾಹ್ಮಣರು ಮಂತ್ರಗಳನ್ನು ಪಟಿಸಬೇಕಾಗಿರುತ್ತದೆ ಆದರೆ ಬ್ರಾಹ್ಮಣರು ರಾಜನಿಗೆ ಪಟಿಸಬೇಕಾಗಿರುವ ಮಂತ್ರಗಳನ್ನು ಹೇಳುತ್ತಿರುವುದಿಲ್ಲ ಬದಲಾಗಿ ಶೂದ್ರ ಮಂತ್ರಗಳನ್ನು ಹೇಳುತ್ತಿರುತ್ತಾರೆ ಇದನ್ನರಿತ ರಾಜರ ಆಪ್ತರೊಬ್ಬರು ಈ ವಿಚಾರವನ್ನು ಮಹಾರಾಜರಿಗೆ ತಿಳಿಸುತ್ತಾರೆ. ಕೂಡಲೇ ಶಾಹುರವರು ಪುರೋಹಿತರನ್ನು ಪ್ರಶ್ನಿಸುತ್ತಾರೆ. ಆದರೆ ಪುರೋಹಿತರು ನೀವು ಶೂದ್ರರಾಗಿರುವ ಕಾರಣದಿಂದ ನಾವು ಶೂದ್ರ ಮಂತ್ರಗಳನ್ನೆ ಹೇಳಬೇಕಾಗುತ್ತದೆ ಎಂದು ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಾರೆ. ಆಗ ಶಾಹುರವರು “ಒಬ್ಬ ಮಹಾರಾಜನಾಗಿ ನನಗೆ ಈ ಬ್ರಾಹ್ಮಣರಿಂದ ಅವಮಾನವಾಗುತ್ತಿದೆ ಜಾತಿ ಶೋಷಣೇಯಾಗುತ್ತಿದೆ ಎಂದರೆ ಇನ್ನು ಸಾಮನ್ಯ ಜನರಿಗೆ ಇವರಿಂದ ಇನ್ನೇಷ್ಟು ಶೋಷಣೆಯಾಗುತ್ತಿರಬಹುದು ಇವರಿಂದ ನಮ್ಮ ಬಹುಜನರು ಇನ್ನೇಷ್ಟು ಅವಮಾನ ಅಪಮಾನಗಳಿಗೆ ಗುರಿಯಾಗುತ್ತಿರಬಹುದು ಇದಕ್ಕೇನಾದರು ಪರಿಹಾರ ಹುಡುಕಬೇಕು” ಎಂದು ಮನಸ್ಸಿನಲ್ಲಿಯೇ ಮರುಕ ಪಡುತ್ತಾರೆ.
ರಾಜರ ಆಸ್ಥಾನದಲ್ಲಿ ರಾಜೋಪಾಧ್ಯೆ ಎಂಬ ಪ್ರಧಾನ ಪುರೋಹಿತನಿರುತ್ತಾನೆ. ಇವನಿಗೆ ಬಾಲಗಂಗಾದರ್ ತಿಲಕರ ನೆರವಿರುತ್ತದೆ. ಒಂದು ದಿನ ಮಹಾರಾಜರು ಅಡುಗೆ ಮನೆ ಪರಿಶೀಲನೆ ಮಾಡಲೆಂದು ಅರಮನೆಯ ಅಡುಗೆ ಮನೆಯೊಳಗೆ ಹೋಗಲು ಮುಂದಾಗುತ್ತರೆ ಆದರೆ ರಾಜೋಪಾಧ್ಯೆ ಎಂಬ ಪುರೋಹಿತನು ಶಾಹು ಮಹಾರಜರನ್ನು ನೀವು ಶೂದ್ರರು ಅಡುಗೆ ಮನೆಯೊಳಗೆ ಬರಕೂಡದು ಬಂದರೆ ಅಡುಗೆ ಮನೆಯೆಲ್ಲಾ ಮೈಲಿಗೆಯಾಗುತ್ತದೆ ದಯವಿಟ್ಟು ಒಳಗೆ ಬರಬೇಡಿ ಎಂದು ಮಹಾರಜರನ್ನು ತಡೆಯುತ್ತಾನೆ. ಆಗ ಮಹಾರಜರು ಕೆಂಡಾಮಂಡಲವಾಗುತ್ತಾರೆ ಮಹರಾಜನಾದ ನನಗೆ ಜಾತಿನಿಂದನೆ ಮಾಡುತ್ತೀರ? ನಿಮಗೆ ಕೆಲಸ ಕೊಟ್ಟು, ಹಣಕೊಟ್ಟು, ಇರೋದಕ್ಕೆ ಮನೆಕೊಟ್ಟು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿರುವ ನನಗೆ ಜಾತಿನಿಂದನೆಯೇ? ಈ ಕ್ಷಣದಿಂದ ನೀನು ನನ್ನ ಆಸ್ಥಾನದಲ್ಲಿರಕೂಡದೆಂದು 06 ಮೇ1902 ರಂದು ಅವನನ್ನು ಸ್ಥಾನದಿಂದ ವಜಾ ಮಾಡುತ್ತಾರೆ.
ಶಾಹುರವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಲಂಡನ್ನಿಗೆ ತೆರಲಿರುತ್ತಾರೆ ಅಲ್ಲಿ ಅವರಿಗೆ ತಾವು ಅನುಭವಿಸಿದ ಕೆಲವು ಘಟನೆಗಳು ನೆನಪಿಗೆ ಬರುತ್ತವೆ ಅದಕ್ಕೆ ಅವರು ಒಂದು ತೀರ್ಮಾನ ಮಾಡುತ್ತಾರೆ ಅಲ್ಲಿಂದ ಒಂದು ಸುದ್ಧಿಯನ್ನು ಕಳುಹಿಸುತ್ತಾರೆ ಅದೇನೆಂದರೆ “ಶೂದ್ರರಿಗೆ 50% ಮೀಸಲಾತಿ” ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯೆಂಬ ಯೋಜನೆಯನ್ನು ಕಂಡುಹಿಡಿದ ಕೀರ್ತಿ ಶಾಹು ಮಹಾರಾಜರಿಗೆ ಸಲ್ಲಬೇಕು.
ಶಾಹು ಮಹಾರಾಜರು ಕಳುಹಿಸಿಕೊಟ್ಟ ಮೀಸಲಾತಿಯ ಸುದ್ಧಿ ಕೇಳಿ ಬ್ರಾಹ್ಮಣರಿಗೆ ಹೃದಯ ಬಡಿತವೇ ನಿಂತಂತಾಯಿತು, ಬಾಲಗಂಗಾದರ್ ತಿಲಕರಿಗಂತೂ ಅಥೀವಾ ಆತಂಕ ಉಂಟಾಯಿತು ಆದ್ದರಿಂದ ಮೀಸಲಾತಿ ವಿಷಯಕ್ಕೆ ಸಂಬಂದಿಸಿದಂತೆ ತಿಲಕರು ವಿರೋದವನ್ನು ವ್ಯಕ್ತಪಡಿಸುತ್ತಾರೆ.
ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.
ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ. ಆಗ ಶಾಹು ಮಹಾರಾಜರು ಓ.. ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ(walk) ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ. ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೇ ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೇ ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಒರಟುಹೋಗುತ್ತಾನೆ.
• ಶಾಹು ಮಹಾರಜರು ಅಸ್ಪೃಶ್ಯರಿಗೋಸ್ಕರ 18 ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುತ್ತಾರೆ.
• 1908ರಲ್ಲಿ ವಿಧ್ಯಾಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.
• 1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ಸ್ಥಾಪಿಸುತ್ತಾರೆ.
• 1918 ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು “ಮೂಕ ನಾಯಕ್” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.
• 1918 ರಲ್ಲಿ ಮಹಾತ್ಮ ಜೋತಿಬಾಫುಲೆ ರವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು “ಶಾಹು ಸತ್ಯ ಶೋಧಕ ಸಮಾಜ”ವನ್ನು ಸ್ಥಾಪನೆ ಮಾಡುತ್ತಾರೆ.
1920 ಮಾರ್ಚ 27ರಂದು ಕೊಲ್ಲಾಪುರದ ಜನಗಳನ್ನು ಉದ್ದೇಶಿಸಿ ಮಾತನಾಡುತ್ತ ” ಮಹಾ ಜನಗಳೇ ನನ್ನ ಆಸ್ಥಾನ ಎಷ್ಟಿದೆಯೋ ಅಷ್ಟರಲ್ಲಿ ಶೂದ್ರರಿಗಾಗಿ ಅಸ್ಪೃಷ್ಯರಿಗಾಗಿ ಎಲ್ಲಾವನ್ನು ಮಾಡಿದ್ದೇನೆ ಒಂದು ವೇಳೆ ನಾನು ಇಡೀ ಭಾರತಕ್ಕೆ ಮಹಾರಾಜನಾಗಿದ್ದರೆ ದೇಶದಲ್ಲಿರುವ ಎಲ್ಲಾ ಶೋಷಿತರನ್ನು ಉದ್ದರಿಸುತ್ತಿದ್ದೆ ಆದರೆ ನನ್ನ ಆಸ್ಥಾನ ಕೇವಲ ಕೊಲ್ಲಾಪುರಕ್ಕೆ ಮಾತ್ರ ಸೀಮಿತವಾಗಿರುವ ಕಾರಣದಿಂದ ಅದು ಅಸಾಧ್ಯವಾಗಿದೆ”. ಆದರೆ, ಇನ್ನುಮುಂದೆ “ಅಖಿಲ ಭಾರತ ಮಟ್ಟದಲ್ಲಿ ಬಡವರನ್ನು, ಶೋಷಿತರನ್ನು, ಅಸ್ಪೃಷ್ಯರನ್ನು ಉದ್ದರಿಸಲು ಒಬ್ಬ ಮಹಾನ್ ನಾಯಕ, ದೇಶ-ವಿದೇಶಗಳಲ್ಲಿ ಶಿಕ್ಷಣವನ್ನು ಪಡೆದ ವಿಧ್ಯಾವಂತ, ಬುದ್ಧಿವಂತ, ಮುಂದಿನ ರಾಷ್ಟ್ರೀಯ ನಾಯಕನನ್ನು ಈ ದಿನ ನಿಮಗೆಲ್ಲಾ ಪರಿಚಯಿಸುತ್ತೇನೆ ನೀವೆಲ್ಲಾ ಅವರಿಗೆ ಬೆಂಬಲಕೊಟ್ಟರೆ ಇಡೀ ದೇಶವನ್ನೇ ಬದಲಾಯಿಸತ್ತಾರೆ, ಬಹುಜನರಿಗೋಸ್ಕರ ಹೊಸ ಚರಿತೆಯನ್ನೇ ಸೃಷ್ಟಿಸುತ್ತಾರೆ” ಎಂದು ಆ ವ್ಯಕ್ತಿಯನ್ನು ಪರಿಚಯಿಸುತ್ತಾರೆ ಆ ವ್ಯಕ್ತಿಯೇ ಮಹಾ ಮಾನವತವಾದಿ, ವಿಶ್ವ ಮಾನವ, ರಾಷ್ತ್ರೀಯತಾವಾದಿ, ಕಾನೂನು ತಜ್ನ, ರಾಜಕೀಯ ನೇತಾರ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತ, ಶ್ರೇಷ್ಟ ಇತಿಹಾಸಗಾರ, ಮಹಾದಾರ್ಶನಿಕ, ಅಪ್ರತಿಮ ಚಿಂತಕ, ಮಾನವಶಾಸ್ತ್ರಜ್ನ, ಖ್ಯಾತ ಅರ್ಥಶಾಸ್ತ್ರಜ್ನ, ಸಮೃದ್ದ ಬರಹಗಾರ, ಕ್ರಾಂತಿಕಾರಿ, ಅಸಾಮಾನ್ಯ ವಾಕ್ಪಟು, ಅಪ್ರತಿಮ ನಾಯಕ, ಬೌದ್ಧ ಧರ್ಮದ ಪುನರುಜ್ಜೀವಕ, ಭಾರತ ರತ್ನ, ಸಂವಿಧಾನ ಶಿಲ್ಪಿ, ಪರಮಪೂಜ್ಯ “ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ರವರು.
-ಅಜೀತ ಮಾದರ
ಸುದ್ದಿದಿನ.ಕಾಂ|ವಾಟ್ಸಾಪ್|998675401

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.
ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.



